Tag: Wisden India

  • ಸಚಿನ್, ಕೊಹ್ಲಿ ಹಿಂದಿಕ್ಕಿದ ‘ದಿ ವಾಲ್’- ಭಾರತ ಗ್ರೇಟೆಸ್ಟ್ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆ

    ಸಚಿನ್, ಕೊಹ್ಲಿ ಹಿಂದಿಕ್ಕಿದ ‘ದಿ ವಾಲ್’- ಭಾರತ ಗ್ರೇಟೆಸ್ಟ್ ವಿಸ್ಡನ್ ಕ್ರಿಕೆಟಿಗನಾಗಿ ಆಯ್ಕೆ

    ಮುಂಬೈ: ಭಾರತ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ ಯಾರು? ಎಂಬ ಪ್ರಶ್ನೆ ಎದುರಾದ ಬೆನ್ನಲ್ಲೇ ತಕ್ಷಣ ನಮ್ಮ ಎದುರಿಗೆ ಸಚಿನ್, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಅವರ ಹೆಸರು ನೆನಪಿಗೆ ಬರುತ್ತದೆ. ಆದರೆ ಕಳೆದ 50 ವರ್ಷದಲ್ಲಿ ಟೀಂ ಇಂಡಿಯಾ ಬೆಸ್ಟ್ ಬ್ಯಾಟ್ಸ್‌ಮನ್‌ ಯಾರು ಎಂಬ ಪ್ರಶ್ನೆ ನೀಡಿ ವಿಸ್ಡನ್ ಇಂಡಿಯಾ ನಡೆಸಿದ ಪೋಲ್‍ನಲ್ಲಿ ಅಚ್ಚರಿಯ ಫಲಿತಾಂಶ ಲಭಿಸಿದೆ. ವಿಸ್ಡನ್ ಪೋಲ್‍ನಲ್ಲಿ ಯಾರು ಊಹೆ ಮಾಡದ ರೀತಿಯಲ್ಲಿ ರಾಹುಲ್ ದ್ರಾವಿಡ್ ಮೊದಲ ಸ್ಥಾನ ಪಡೆದಿದ್ದಾರೆ.

    ವಿಸ್ಡನ್ ಇಂಡಿಯಾ ಪೋಲ್‍ನಲ್ಲಿ 11,400 ಮಂದಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇದರಲ್ಲಿ ರಾಹುಲ್ ದ್ರಾವಿಡ್ ಅವರಿಗೆ ಶೇ.52 ಮಂದಿ ಮತ ಹಾಕಿರುವುದಾಗಿ ವಿಸ್ಡನ್ ಇಂಡಿಯಾ ಪ್ರಕಟಿಸಿದೆ. ಪೋಲ್‍ನಲ್ಲಿ ಅಂತಿಮ ಹಂತದವರೆಗೂ ಸಚಿನ್ ಪೈಪೋಟಿ ನೀಡಿದ್ದರೂ ಕೊನೆಗೆ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕೊಹ್ಲಿ, ಗವಾಸ್ಕರ್ ಅವರು ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

    ಭಾರತ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳನ್ನಾಡಿ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಸುನಿಲ್ ಗವಾಸ್ಕರ್ 125 ಟೆಸ್ಟ್ ಪಂದ್ಯಗಳಿಂದ 51.12 ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಡಿರುವ 86 ಟೆಸ್ಟ್ ಪಂದ್ಯಗಳಲ್ಲಿ 53.62 ಸರಾಸರಿಯಲ್ಲಿ 7,240 ರನ್ ಗಳಿಸಿದ್ದಾರೆ. ಉಳಿದಂತೆ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್ ಗಡಿದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

  • ವರ್ಷದ ವಿಸ್ಡೆನ್ ಇಂಡಿಯಾ ಕ್ರಿಕೆಟರ್ಸ್ ಆದ ಬುಮ್ರಾ, ಮಂಧಾನಾ

    ವರ್ಷದ ವಿಸ್ಡೆನ್ ಇಂಡಿಯಾ ಕ್ರಿಕೆಟರ್ಸ್ ಆದ ಬುಮ್ರಾ, ಮಂಧಾನಾ

    ನವದೆಹಲಿ: ಭಾರತದ ಯುವ ವೇಗಿ ಜಸ್ಪ್ರಿತ್ ಬುಮ್ರಾ ಮತ್ತು ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂಧಾನಾ ಅವರು ವರ್ಷದ ವಿಸ್ಡೆನ್ ಇಂಡಿಯಾ ಅಲ್ಮನಾಕ್ ಕ್ರಿಕೆಟರ್ಸ್ ಆಗಿ ಆಯ್ಕೆಯಾಗಿದ್ದಾರೆ.

    2019 ಮತ್ತು 2020 ನೇ ಸಾಲಿನ ವಿಸ್ಡೆನ್ ಇಂಡಿಯಾ ಅಲ್ಮನಾಕ್‍ನ ವರ್ಷದ ಕ್ರಿಕೆಟರ್ಸ್ ಆಯ್ಕೆಯಾಗಿದ್ದು, ಇದರಲ್ಲಿ ಭಾರತದಿಂದ ಇಬ್ಬರು ಸೇರಿ ಏಷ್ಯಾದಿಂದ ಒಟ್ಟು ಐದು ಜನರಿಗೆ ಈ ಪ್ರಶಸ್ತಿ ದೊರಕಿದೆ. ಬುಮ್ರಾ ಮತ್ತು ಮಂಧಾನಾ ಅವರನ್ನು ಬಿಟ್ಟರೆ ಪಾಕಿಸ್ತಾನದ ಫಖರ್ ಜಮಾನ್, ಶ್ರೀಲಂಕಾದ ದಿಮುತ್ ಕರುಣಾರತ್ನೆ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಅವರಿಗೆ ಏಷ್ಯಾದಿಂದ ಈ ಪ್ರಶಸ್ತಿಗೆ ಲಭಿಸಿದೆ.

    ಈ ಪ್ರಶಸ್ತಿ ಪಡೆದ ಸ್ಮೃತಿ ಮಂಧಾನಾ ಅವರು ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ಅವರನ್ನು ಬಿಟ್ಟರೆ ವಿಸ್ಡೆನ್ ಇಂಡಿಯಾ ಅಲ್ಮನಾಕ್ ಕ್ರಿಕೆಟರ್ಸ್ ಆಗಿ ಆಯ್ಕೆಯಾದ ಮೂರನೇ ಭಾರತದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಗುಂಡಪ್ಪ ವಿಶ್ವನಾಥ್ ಮತ್ತು ಲಾಲಾ ಅಮರನಾಥ್ ಅವರನ್ನು ವಿಸ್ಡೆನ್ ಇಂಡಿಯಾ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ.

    ಬರಹಗಾರ ಪ್ರಶಾಂತ್ ಕಿಡಾಂಬಿ ಬರೆದ ಮೊದಲ ಆಲ್ ಇಂಡಿಯಾ ಟೀಮ್ ಅನ್ ಟೋಲ್ಡ್ ಹಿಸ್ಟರಿ ಎಂಬ ಪುಸ್ತಕ ವರ್ಷದ ವಿಸ್ಡೆನ್ ಇಂಡಿಯಾ ಪುಸ್ತಕವಾಗಿ ಆಯ್ಕೆಯಾಗಿದೆ. ಈ ಪುಸ್ತಕವನ್ನು ಅಲ್ಮಾನಾಕ್‍ನ ವಿಮರ್ಶಕರು ಭಾರತದ ಕ್ರಿಕೆಟ್ ಪ್ರವಾಸವನ್ನು ತುಂಬಾ ಚೆನ್ನಾಗಿ ವಿವರಿಸಲಾಗಿದೆ ಎಂದು ಹೇಳಿದ್ದಾರೆ.