Tag: Winter Season

  • ಚುಮು ಚುಮು ಚಳಿಗೆ ಶಾಲನ್ನು ಸ್ಟೈಲಿಶ್ ಮಾಡುವುದು ಹೇಗೆ?

    ಚುಮು ಚುಮು ಚಳಿಗೆ ಶಾಲನ್ನು ಸ್ಟೈಲಿಶ್ ಮಾಡುವುದು ಹೇಗೆ?

    ಫ್ಯಾಷನ್ ದುನಿಯಾದಲ್ಲಿ ಬೆಚ್ಚಗಿಡುವ ಶಾಲನ್ನು (Shawls) ಸ್ಟೈಲಾಗಿ ಧರಿಸಿದ್ದಲ್ಲಿ ಈ ಸೀಸನ್‌ನಲ್ಲಿಯೂ ಫ್ಯಾಷೆನಬಲ್ (Fashion) ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲೀಶ್‌ಗಳು. ಪ್ರತಿಯೊಬ್ಬರ ಮನೆಯ ವಾರ್ಡ್ ರೊಬ್‌ನಲ್ಲಿ ಒಂದಲ್ಲ ಒಂದು ಶೈಲಿಯ ಶಾಲು ಸ್ಥಾನ ಪಡೆದಿರುತ್ತದೆ. ಮಹಿಳೆಯರು ಹಾಗೂ ಪುರುಷರು ಇಬ್ಬರೂ ಕೂಡ ಶಾಲು ಧರಿಸುವುದನ್ನು ನಾವು ನೋಡಿದ್ದೇವೆ. ಮೊದಲೆಲ್ಲಾ ಶಾಲು ಮಧ್ಯ ವಯಸ್ಕರ ಫ್ಯಾಷನ್ ಎನ್ನಲಾಗುತ್ತಿತ್ತು. ಆದರೆ ಇದೀಗ ಇದು ಚಳಿಗಾಲದ ಫ್ಯಾಷನ್‌ನಲ್ಲಿ ಸೇರಿದೆ. ಯುವಕ-ಯುವತಿಯರು ಕೂಡ ಹೇಗೆಲ್ಲಾ ಸ್ಟೈಲಾಗಿ ಧರಿಸಬಹುದು ಎಂಬುದನ್ನು ಸಾಕಷ್ಟು ಬ್ಯೂಟಿ ಬ್ಲಾಗ್‌ಗಳು ಹಾಗೂ ಯೂ ಟ್ಯೂಬ್‌ನಲ್ಲಿ ಕಾಣಬಹುದು.

    ಧರಿಸುವ ಔಟ್‌ಫಿಟ್‌ಗೆ ತಕ್ಕಂತೆ ಶಾಲನ್ನು ಆಯ್ಕೆ ಮಾಡಿದಾಗ ಅಥವಾ ಶಾಲಿನ ಫ್ಯಾಬ್ರಿಕ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವುದು. ಉದಾಹರಣೆಗೆ ಸೀರೆ, ಸಲ್ವಾರ್ ಅಥವಾ ವೆಸ್ಟರ್ನ್ ಔಟ್‌ಫಿಟ್‌ಗೆ ತಕ್ಕಂತೆ ಧರಿಸಬೇಕು.

    ಉಲ್ಲನ್ ಶಾಲ್ ಆದಲ್ಲಿ ಆದಷ್ಟೂ ಹೆಚ್ಚು ಚಳಿಯಿದ್ದಾಗ ಧರಿಸಬೇಕು. ಯಾಕೆಂದರೇ ದೇಹ ಅತಿ ಬೇಗ ಬೆಚ್ಚಗಾಗಿ ಸೆಕೆಯಾಗಬಹುದು. ಇದನ್ನು ಪೊಂಚೊ ಶೈಲಿಯಲ್ಲೂ ಧರಿಸಬಹುದು ಅಥವಾ ಸುತ್ತಿಕೊಳ್ಳಬಹುದು.

    ಪುರುಷರು ಶಾಲನ್ನು ಹೊದೆಯುವುದಾದಲ್ಲಿ ಆದಷ್ಟೂ ಉಲ್ಲನ್ ಆವಾಯ್ಡ್ ಮಾಡುವುದು ಉತ್ತಮ. ಇತರೇ ಮೆಟಿರಿಯಲ್‌ನದ್ದು ಯಾವುದಾದರೂ ಓಕೆ. ಮಫ್ಲರ್‌ನಂತೆಯೂ ಧರಿಸಬಹುದು, ಹೊದಿಯಬಹುದು. ಇದನ್ನೂ ಓದಿ:ಕಾರ್ತಿಕ್‌ಗೆ ಹುಡುಗಿ ಇದ್ದಾಳೆ, ಗೊತ್ತಿದ್ರು ಬೀಳಲು ನಾನು ಬಕ್ರನಾ- ಸ್ನೇಹಿತ್‌ಗೆ ನಮ್ರತಾ ಪ್ರಶ್ನೆ

    ಡಿಸೈನರ್ ಶಾಲು ಆದಲ್ಲಿ ಹುಡುಗಿಯರು ಉಡುಪಿನ ಒಂದು ಕಡೆಗೆ ಮಾತ್ರ ದುಪಟ್ಟಾದಂತೆ ಧರಿಸಬಹುದು. ಇದು ನೋಡಲು ಚೆನ್ನಾಗಿ ಕಾಣುತ್ತದೆ. ಚಳಿಯಾದಾಗ ಎರಡೂ ಕಡೆ ಹೊದಿಯಬಹುದು.

    ಶಾಲು ಅತಿ ದಪ್ಪಗಿದ್ದಲ್ಲಿ ಸ್ಟೋಲ್‌ನಂತೆ ಧರಿಸಲು ಕಷ್ಟವಾಗಬಹುದು. ಹಾಗಾಗಿ ಹುಡುಗಿಯರು ಕ್ಯಾಶುವಲ್ ಔಟ್‌ಫಿಟ್ ಮೇಲೆ ಅದನ್ನು ಟೈ ನಂತೆ ಕತ್ತಿಗೆ ಲೂಸಾಗಿ ಸುತ್ತಿಕೊಳ್ಳಬಹುದು.

    ಕೊನೆಯ ಅಂಚನ್ನು ಟೈ ಮಾಡಬೇಕು. ಮುಂಭಾಗಕ್ಕೆ ವಿ ನೆಕ್ ಬರುವ ಹಾಗೆ ಇಳೆ ಬಿಡಬೇಕು. ಇದು ನೋಡಲು ಪೋಂಚೋ ರೀತಿಯಲ್ಲಿ ಕಾಣಿಸುತ್ತದೆ.

  • ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಳಿಗಾಲ ಬಂತೆಂದರೆ ಸಾಕು ಮಾಂಸಾಹಾರ ಪ್ರಿಯರಿಗಂತೂ ತಮ್ಮ ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಮಟನ್ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಟೊಮೆಟೋ- 1
    * ಕರಿಬೇವಿನ ಎಲೆಗಳು- ಸ್ವಲ್ಪ
    * ಎಳ್ಳಿನ ಎಣ್ಣೆ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಆಲೂಗಡ್ಡೆ- 1
    * ಕಾಳುಮೆಣಸು- 1 ಟೀಸ್ಪೂನ್
    * ಜೀರಿಗೆ- 2 ಟೀಸ್ಪೂನ್
    * ಶುಂಠಿ ಸ್ವಲ್ಪ
    * ಬೆಳ್ಳುಳ್ಳಿ – 2
    * ಅರಿಶಿಣ ಪುಡಿ- 1 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಮಟನ್ ಸ್ವಚ್ಛ ಮಾಡಿಕೊಳ್ಳಬೇಕು.
    * ಟೊಮೆಟೋ, ಆಲೂಗಡ್ಡೆ, ಕಾಳುಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಅರಿಶಿಣವನ್ನು ಸೇರಿಸಿ ರುಬ್ಬಿ ಇಟ್ಟುಕೊಳ್ಳಿ.  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಕುಕ್ಕರಲ್ಲಿ ಅಡುಗೆ ಎಣ್ಣೆ, ಮಟನ್ ತುಂಡುಗಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಂತರ ನೀರು ಮತ್ತು ಎಣ್ಣೆಯನ್ನು ಅದಕ್ಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು.


    * ಮಟ್ಟನ್ ಬೇಯಿಸಿದ ನಂತರ ಎಳ್ಳಿನ ಎಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿಯಾದ ಮಟ್ಟನ್ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ. ಈ ಸಮಸ್ಯೆಗಾಗಿ ಕೆಲವು ಟಿಪ್ಸ್​ ಈ ಕೆಳಗಿನಂತೆ ನೀಡಲಾಗಿದೆ.

    ತುಟಿ ಒಡೆಯುವುದು, ಪಾದಗಳು ಬಿರುಕು ಬಿಡುವುದು, ಕೂದಲು ಉದುರುವುದು ಸರ್ವಸಾಮಾನ್ಯವಾಗಿದೆ. ಹಲವರಿಗೆ ಚಳಿಗಾಗಲದಲ್ಲಿ ಈ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಕೆ ಮಾಡಿರುತ್ತೀರ. ಆದರೆ ನೀವೆ ಮನೆಯಲ್ಲಿ ನಿಮ್ಮನ್ನು ನೀವು ಚಳಿಗಾಲದಲ್ಲಿ ಆರೈಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ:   ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್

    * ನೀರು, ಹೆಚ್ಚು ಹೆಚ್ಚು ಕುಡಿಯುವುದರಿಂದ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜ್ಯೂಸ್, ಬಿಸಿ ಸೂಪ್‍ಗಳನ್ನು ಆಗಾಗ ಕುಡಿಯುತ್ತಿರಬೇಕು.
    * ಪೌಷ್ಟಿಕಾಂಶಕ್ಕಾಗಿ ಪಾಲಕ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ಕ್ಯಾಲೋರಿಭರಿತ ತರಕಾರಿಗಳನ್ನು ಸೇವಿಸಿ. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ನೀರಿನಂಶ ಸಮೃದ್ಧವಾಗಿವೆ. ಆದ್ದರಿಂದ, ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುವುದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    * ಚಳಿಗಾದಲ್ಲಿ ಸ್ನಾನ ಮಾಡುವಾಗ ಸೋಪ್ ಬಳಸುವ ಬದಲಾಗಿ ಕಡಲೆ ಹಿಟ್ಟನ್ನು ಬಳಸಬಹುದಾಗಿದೆ.
    * ಅರಿಶಿಣ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಮತ್ತು ಕೈ, ಕಾಲಗಳಿಗೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮದ ಆರೈಕೆ ಮಾಡಬಹುದಾಗಿದೆ.

    * ಹೆಚ್ಚಿನವರಲ್ಲಿ ಪಾದಗಳಲ್ಲಿ ಬಿರುಕು ಕಾಣಿಕೊಳ್ಳುತ್ತದೆ. ಹೀಗಾಗಿ ಅಂತಹವರು ರಾತ್ರಿ ಮಲಗುವಾಗ ಮತ್ತು ಹೊರಗೆ ಹೊಗುವ ವೇಳೆ ಸಾಕ್ಸ್ ಧರಿಸುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮವಾಗಿದೆ.
    * ಎಣ್ಣೆ ಚರ್ಮವನ್ನು ಹೊಂದಿದವರು ರೋಸ್ ವಾಟರ್, ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

    * ತುಟಿ ಒಡೆಯುವುದು, ಒರಟಾಗುವಂತಿದ್ದರೆ ನೀವು ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ, ಹಾಲಿನಕೆನೆಯನ್ನು ಹಚ್ಚಿ ಮಲಗುವ ಅಭ್ಯಾಸವನ್ನು ಚಳಿಗಾಲದಲ್ಲಿ ಮಾಡಿಕೊಳ್ಳಬೇಕು.
    * ಕೂದಲು ಉದುರುವ ಸಮಸ್ಯೆ ಚಳಿಗಾಗಲದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ನೀವು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ತುಸು ಬಿಸಿಮಾಡಿಕೊಂಡು ಹಚ್ಚುವುದು ಒಳ್ಳೆಯದಾಗಿದೆ.

    * ಉಣ್ಣೆಯ ಬಟ್ಟೆಯನ್ನು ಧರಿಸುವುದು, ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಚಳಿಯಿಂದ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
    * ಸ್ವೆಟರ್, ಸ್ಕಾರ್ಪ್, ಸಾಕ್ಸ್ ಚಳಿಗಾಲದಲ್ಲಿ ಬಳಕೆ ಮಾಡುವುದು ಉತ್ತಮವಾಗಿದೆ.


    * ಚಳಿಗಾಲದಲ್ಲಿ ತೈಲ ಆಧಾರಿತ ಮಾಯಿಶ್ಚರೈಸ್‍ಗಳಾದ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಂತಹ ನೈಸರ್ಗಿಕ ತೈಲಗಳು ನಿಮ್ಮ ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ.