Tag: Wine Shop

  • ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ

    ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ

    ಅಮರಾವತಿ: ವ್ಯಕ್ತಿಯೊಬ್ಬ ಮದ್ಯ (Alcohol) ಕೊಡಲಿಲ್ಲ ಎಂದು ವೈನ್ ಶಾಪ್‌ಗೇ (Wine Shop) ಬೆಂಕಿ (Fire) ಹಚ್ಚಿದ ಘಟನೆ ವಿಶಾಖಪಟ್ಟಣಂನ (Visakhapatnam) ಮಧುರ್ವಾಡ (Madurwada) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ವೈನ್ ಶಾಪ್‌ಗೆ ಬೆಂಕಿ ಇಟ್ಟ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

    ಆರೋಪಿಯನ್ನು ಮಧು ಎಂದು ಗುರುತಿಸಲಾಗಿದೆ. ಆತ ಮಧುವಾಡ ಬಡಾವಣೆಯ ವೈನ್ ಶಾಪ್‌ಗೆ ತಡರಾತ್ರಿ ಬಂದಿದ್ದ. ವೈನ್ ಶಾಪ್ ಮುಚ್ಚುವ ಸಮಯವಾಗಿದ್ದರಿಂದ ಶಾಪ್ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿದ ಬಳಿಕ ಆತ ಅಲ್ಲಿಂದ ತೆರಳಿದ್ದಾನೆ.

    ಎಚ್ಚರಿಕೆ ನೀಡಿದ್ದಕ್ಕೆ ಸಿಟ್ಟಾಗಿದ್ದ ಮಧು ಭಾನುವಾರ ಸಂಜೆ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ವೈನ್ ಶಾಪ್‌ಗೆ ವಾಪಸ್ ಬಂದಿದ್ದಾನೆ. ವೈನ್ ಶಾಪ್ ಒಳಗಡೆ ಮಾತ್ರವಲ್ಲದೆ ಸಿಬ್ಬಂದಿ ಮೇಲೂ ಪೆಟ್ರೋಲ್ ಅನ್ನು ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸಿಬ್ಬಂದಿ ಅಂಗಡಿಯಿಂದ ಹೊರಕ್ಕೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಅಂಗಡಿ ಸುಟ್ಟು ಹೋಗಿದ್ದು, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ 1.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ

    ಇದೀಗ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆ ಕ್ಟರ್ ರಾಮಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ – 5.8 ಕೋಟಿ ರೂ. ಹಣ ಸಂಗ್ರಹ

  • ಆನ್‍ಲೈನ್‍ನಲ್ಲಿ ಬಿಯರ್ ಆರ್ಡರ್ ಮಾಡಲು ಹೋಗಿ 45,000 ರೂ. ಕಳ್ಕೊಂಡ

    ಆನ್‍ಲೈನ್‍ನಲ್ಲಿ ಬಿಯರ್ ಆರ್ಡರ್ ಮಾಡಲು ಹೋಗಿ 45,000 ರೂ. ಕಳ್ಕೊಂಡ

    ಮುಂಬೈ: ವೈನ್ ಶಾಪ್ (Wine Shop) ಮಾಲೀಕರಂತೆ ನಟಿಸಿ 2 ಬಿಯರ್ (Beer) ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬನಿಗೆ 44,782 ರೂ. ವಂಚಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

    24 ವರ್ಷದ ವ್ಯಕ್ತಿ ಗುರುಗ್ರಾಮದಿಂದ ಮುಂಬೈನ ಕೊಲಾಬಾಕ್ಕೆ ಬಂದಿದ್ದ. ಈ ವೇಳೆ ಮದ್ಯವನ್ನು ಆರ್ಡರ್ (Order) ಮಾಡಲು ಸ್ಥಳೀಯ ವೈನ್ ಶಾಪ್‍ಗಳಿಗಾಗಿ ಇಂಟರ್‌ನೆಟ್‍ನಲ್ಲಿ ಹುಡುಕಿದ್ದ. ಆಗ ಸಮೀಪದಲ್ಲೇ ಇರುವ ಅಂಗಡಿಯೊಂದರ ಮೊಬೈಲ್ ನಂಬರ್ ಸಿಕ್ಕಿತ್ತು. ಅದಾದ ಬಳಿಕ ವ್ಯಕ್ತಿ ಆ ಸಂಖ್ಯೆಗೆ ಕರೆ ಮಾಡಿದ್ದಾನೆ. ಆಗ ಓರ್ವ ಕರೆ ಸ್ವೀಕರಿಸಿ ಅದೇ ನಂಬರ್‌ನ ವಾಟ್ಸಪ್‍ಗೆ ಕರೆ ಮಾಡುವಂತೆ ತಿಳಿಸಿದ್ದಾನೆ.

    ಅದೇ ರೀತಿ ಆ ವ್ಯಕ್ತಿ ವಾಟ್ಸಪ್‍ಗೆ ಕರೆ ಮಾಡಿ ಒಂದು ಬಿಯರ್ ಬಾಟಲಿಯನ್ನು ನೀಡುವಂತೆ ತಿಳಿಸಿದ್ದಾನೆ. ಆದರೆ ಅಂಗಡಿಯಾತ 2 ಬಿಯರ್ ಬಾಟಲಿಯನ್ನು ಆರ್ಡರ್ ಮಾಡಿದರೆ ಮಾತ್ರ ಆದೇಶಗಳನ್ನು ಸ್ವೀಕರಿಸುವುದಾಗಿ ತಿಳಿಸಿದ್ದಾನೆ. ಇದಕ್ಕೆ ಒಪ್ಪಿದ ವ್ಯಕ್ತಿಗೆ ಅಂಡಿಯವನು ಹಣವನ್ನು (Money) ಪಾವತಿ ಮಾಡಲು ಕ್ಯೂಆರ್ ಕೋಡ್ ಕಳುಹಿಸಿದ್ದಾನೆ. ಅಷ್ಟೇ ಅಲ್ಲದೇ ಡೆಲಿವರಿ ಶುಲ್ಕಕ್ಕಾಗಿ 30ರೂ.ವನ್ನು ಹೆಚ್ಚುವರಿಯಾಗಿ ಪಡೆದಿದ್ದಾನೆ.

    ಅದಾದ ಬಳಿಕ ವ್ಯಕ್ತಿ ಅಂಗಡಿಯಾತ ಹೇಳಿದಂತೆ ಹಣ ಪಾವತಿ ಮಾಡಿದ್ದಾನೆ. ಆದರೆ ಅಂಗಡಿಯಾತ ಹಣ ಬಂದಿಲ್ಲ ಮರುಪಾವತಿ ಮಾಡುವಂತೆ ತಿಳಿಸಿದ್ದಾನೆ. ಇದೇ ರೀತಿ ಅಂಗಡಿಯಾತ 8 ಬಾರಿ ಹಣವನ್ನು ಪಡೆದುಕೊಂಡಿದ್ದಾನೆ. ಈ ವೇಳೆ ಆ ವ್ಯಕ್ತಿಗೆ 44,782 ರೂ. ಹಣ ಕಳೆದುಕೊಂಡಿದ್ದಾನೆ. ಇದನ್ನೂ ಓದಿ: ಸೇನೆಯನ್ನು ಬಲಪಡಿಸುವುದೇ ನಮ್ಮ ಉದ್ದೇಶ: ಇಮ್ರಾನ್ ಖಾನ್

    POLICE JEEP

    ದಾದ ಬಳಿಕ ಎಚ್ಚರಗೊಂಡ ವ್ಯಕ್ತಿ ಅಂಗಡಿಯವರಿಗೆ ಕರೆ ಮಾಡಲು ಪ್ರಯತ್ನಿಸಿದ. ಆದರೆ ವ್ಯರ್ಥವಾಗಿತ್ತು. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು, ಅವರು ಸೈಬರ್ ಪೊಲೀಸರ ಸಹಾಯವನ್ನು ಪಡೆದಿದ್ದಾರೆ. ಇದನ್ನೂ ಓದಿ: ಫಿಲಿಪೈನ್ಸ್‌ನಲ್ಲಿ ಭೀಕರ ಪ್ರವಾಹ – 98 ಸಾವು, 62 ಜನ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ಎಣ್ಣೆ ಬಾಟಲ್ ಜೊತೆಗೆ ಸಿಸಿ ಕ್ಯಾಮೆರಾದ ಹಾರ್ಡ್‍ಡಿಸ್ಕ್ ಕದ್ದೊಯ್ದ ಕಳ್ಳರು

    ಎಣ್ಣೆ ಬಾಟಲ್ ಜೊತೆಗೆ ಸಿಸಿ ಕ್ಯಾಮೆರಾದ ಹಾರ್ಡ್‍ಡಿಸ್ಕ್ ಕದ್ದೊಯ್ದ ಕಳ್ಳರು

    ಮಡಿಕೇರಿ: ಮದ್ಯದ ಅಂಗಡಿಯ ಬಾಗಿಲು ಒಡೆದು ಹಣ, ಮದ್ಯದ ಬಾಟಲ್ ಹಾಗೂ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಸಮೇತ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ತಡ ರಾತ್ರಿ ನಡೆದಿದೆ.

    ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ರಸ್ತೆಯಲ್ಲಿ ಇರುವ ನ್ಯಾಷನಲ್ ವೈನ್ ಶಾಪ್‍ನಲ್ಲಿ ಕಳೆದ ರಾತ್ರಿ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ವೈನ್ ಶಾಪ್‍ನಲ್ಲಿ ಇದ್ದ ಮದ್ಯದ ಬಾಟಲಿ ಹಾಗೂ ಒಂದು ಸಾವಿರ ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ ಫೋಟೋ ಇದೆಯಾ? : ಡಿಸ್ಕೌಂಟ್ ನಲ್ಲಿ ಚಿಕನ್ ಪಡೆಯಿರಿ

    ಇಂದು ಬೆಳಗ್ಗೆ ವೈನ್ ಶಾಪ್ ಮಾಲೀಕ ಅಂಗಡಿಯನ್ನು ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ವೈನ್ ಶಾಪ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿ ಕಳ್ಳತನ ಅಗಿರುವ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಕೊಂಡು ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ

     

  • ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

    ನಮ್ಮೂರಿಗೂ ‘ಎಣ್ಣೆ’ ಅಂಗಡಿ ಮಂಜೂರಿ ಮಾಡಿಕೊಡಿ- ಸಚಿವ ಶೆಟ್ಟರ್‌ಗೆ ವ್ಯಕ್ತಿಯ ಮನವಿ

    ಧಾರವಾಡ: ಲಾಕ್‍ಡೌನ್ ನಡುವೆಯೂ ಮದ್ಯದ ಮಾರಾಟ ಭರ್ಜರಿಯಾಗಿ ನಡೆಯುತ್ತಿರುವಾಗಲೇ ನಮ್ಮೂರಿಗೂ ಎಣ್ಣೆ ಅಂಗಡಿ ಮಂಜೂರಿ ಮಾಡಿಕೊಡಿ ಎಂದು ವ್ಯಕ್ತಿಯೊಬ್ಬ ಸಚಿವರಿಗೆ ಮನವಿ ಮಾಡಿಕೊಂಡಿರುವ ವಿಚಿತ್ರ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

    ಹೌದು ತಮಗೆ ಇಂತಹದೊಂದು ಮನವಿ ಬಂದಿತ್ತು ಎಂಬುದನ್ನು ಸ್ವಂತ ಸಚಿವ ಜಗದೀಶ ಶೆಟ್ಟರ್ ಅವರೇ ಹೇಳಿಕೊಂಡಿದ್ದಾರೆ. ಧಾರವಾಡದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ನಮ್ಮೂರಿಗೆ ಎಂಎಸ್‍ಐಎಲ್ ಮಳಿಗೆ ಕೊಡಿ ಎಂದು ವ್ಯಕ್ತಿಯೊಬ್ಬ ಇವತ್ತು ಬೆಳಗ್ಗೆ ನನ್ನ ಬಳಿ ಮನವಿ ಹಿಡಿದುಕೊಂಡು ಬಂದಿದ್ದ. ಏನ್ ಮಾಡೋದು ಇಂತವರು ನಮ್ಮಲ್ಲಿ ಇದಾರೆ. ನಾನು ಅವನಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಊರ ಹಿರಿಯರ ಒಪ್ಪಿಗೆ ತೆಗೆದುಕೊಂಡು ಬಾ ಎಂದು ಹೇಳಿ ಸಾಗ ಹಾಕಿದ್ದೇನೆ ಎಂದು ಹೇಳಿದ ಶೆಟ್ಟರ್ ತಿಳಿಸಿದರು.

    ಜನರ ವಿರೋಧ ಬಂದ ಕಡೆಯ ಮದ್ಯದ ಮಳಿಗೆಗಳನ್ನು ನಾವು ಬಂದ್ ಮಾಡಿಸುತ್ತಿದ್ದೇವೆ. ಇಂತಹ ಸಮಯದಲ್ಲಿ ಹೊಸ ವೈನ್ ಶಾಪ್‍ಗಳಿಗೆ ಅನುಮತಿ ಕೊಡುವುದಿಲ್ಲ ಎಂದರು.

    ಇದೇ ವೇಳೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕುರಿತಂತೆ ಮಾತನಾಡಿದ ಅವರು, ರೈತರು ಮೆಕ್ಕೆಜೋಳ ಖರೀದಿ ಕೇಂದ್ರದ ಆಸೆ ಕೈ ಬಿಡುವಂತೆ ಹೇಳಿದ್ದಾರೆ. ಕೆಎಂಎಫ್ ಮೂಲಕ ದೊಡ್ಡ ಪ್ರಮಾಣದಲ್ಲಿ ಮೆಕ್ಕೆಜೋಳ ಖರೀದಿ ಆರಂಭಿಸಲಾಗಿತ್ತು. ಆದರೆ ಅದು ಯಶಸ್ಸು ಆಗಲಿಲ್ಲ. ಹೀಗಾಗಿ ಖರೀದಿ ಕೇಂದ್ರದ ಮೂಲಕ ಪಡೆಯಲು ಆಗುವುದಿಲ್ಲ ಎಂದು ಸರ್ಕಾರ ಐದು ಸಾವಿರ ರೂಪಾಯಿ ಸಬ್ಸಿಡಿ ಘೋಷಿಸಿದೆ. ಇನ್ನು ಮುಂದೆ ರೈತರು ಖರೀದಿ ಕೇಂದ್ರದ ವಿಚಾರ ಬಿಟ್ಟು ಮಾರ್ಕೆಟ್‍ನಲ್ಲಿ ತಮಗೆ ಯಾರಿಗೆ ಬೇಕೋ ಅವರಿಗೆ ಕೊಡಬಹುದು ಎಂದು ಶೆಟ್ಟರ್ ಹೇಳಿದರು.

  • ವೈನ್ ಶಾಪ್ ತೆರೆಯಲು ಹಣದ ಬೇಡಿಕೆ- ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ!

    ವೈನ್ ಶಾಪ್ ತೆರೆಯಲು ಹಣದ ಬೇಡಿಕೆ- ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ!

    ಹುಬ್ಬಳ್ಳಿ: ವೈನ್ ಶಾಪ್ ತೆರೆಯಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿಯನ್ನ ಎಸಿಬಿ ಬಲೆಗೆ ಬಿದಿದ್ದಾರೆ. ಜಿಲ್ಲೆಯ ವರೂರು ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಬಡಿಗೇರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

    ಗ್ರಾಮದ ‘ಗಾಯತ್ರಿ ವೈನ್ಸ್’ ಮುಚ್ಚಿಸಲು ಮಹಿಳಾ ಸಂಘದವರು, ಗ್ರಾಮಸ್ಥರು ಅರ್ಜಿ ಕೊಟ್ಟಿದ್ದರು. ಇದನ್ನೇ ಹಣ ಪೀಕಲು ಬಳಸಿಕೊಂಡ ಪಿಡಿಒ ಬಸವರಾಜ್, ಗ್ರಾಮಸ್ಥರು ನೀಡಿರುವ ಅರ್ಜಿ ತಿರಸ್ಕಾರ ಮಾಡಿ ವೈನ್ ಶಾಪ್ ತೆರಯಲು ತೊಂದರೆ ಇಲ್ಲದಂತೆ ಮಾಡಲು 50 ಸಾವಿರ ರೂ. ನೀಡುವಂತೆ ಶಾಪ್ ಮ್ಯಾನೇಜರ್ ಬಳಿ ಬೇಡಿಕೆ ಇಟ್ಟಿದ್ದ.

    ಮೊದಲು ಈ ಬಗ್ಗೆ ಶಾಪ್ ಮ್ಯಾನೇಜರ್ ಗಮನ ನೀಡದ ಸಂದರ್ಭದಲ್ಲಿ ಪದೇ ಪದೇ ಫೋನ್ ಮಾಡಿ ಈ ಬಗ್ಗೆ ಪಿಡಿಒ ಎಚ್ಚರಿಕೆ ನೀಡಿದ್ದ. ಅಲ್ಲದೇ ನೇರ ಶಾಪ್ ಬಳಿ ತೆರಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂದರ್ಭದಲ್ಲಿ ಮ್ಯಾನೇಜರ್ ವಿಶಾಲ್ ಕಲಾಲ್ ಪಿಡಿಒ ಬಳಿ ಮನವಿ ಮಾಡಿ 40 ಸಾವಿರ ರೂ. ನೀಡುವುದಾಗಿ ಒಪ್ಪಿಸಿದ್ದರು.

    ಇತ್ತ ವಿಶಾಲ್ ಕಲಾಲ್ ತಮ್ಮ ಸಮಸ್ಯೆಯನ್ನು ತಿಳಿಸಿ ಎಸಿಬಿಯ ಮೊರೆ ಹೋಗಿದ್ದರು. ಇದರಂತೆ ಇಂದು ಹಣ ಲಂಚ ಪಡೆಯುವಾಗ ಹುಬ್ಬಳ್ಳಿಯ ಕಾರವಾರ ರಸ್ತೆ ಗಣೇಶ್ ವೇ ಬ್ರಿಜ್ ಹತ್ತಿರ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಪಿಡಿಒ ಸಿಕ್ಕಿದಿದ್ದಾನೆ. ಎಸಿಬಿ ಡಿವೈಎಸ್‍ಪಿ ವಿಜಯಕುಮಾರ ಬಿಸ್ನಳಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.

  • ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ: ಸಚಿವ ನಾಗೇಶ್

    ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ: ಸಚಿವ ನಾಗೇಶ್

    – ಮೊಬೈಲ್ ವೈನ್ ಶಾಪ್ ಗಳಿಗೆ ಸರ್ಕಾರ ಚಿಂತನೆ

    ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ ಮಾಡಲಾಗಿದೆ. ಕೆಲವು ಕಡೆ ಮದ್ಯದ ಅಂಗಡಿ ದೂರ ಇರುತ್ತೆ. ಕೆಲವು ಕಡೆ ಮದ್ಯದ ಅಂಗಡಿಗಳೇ ಇರಲ್ಲ. ಇಂಥಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಮಾಡಲಾಗಿದ್ದು, ಮನೆ ಬಾಗಿಲಿಗೆ ಮದ್ಯ ಪೂರೈಸೋ ಚಿಂತನೆ ಕೂಡ ಇಲಾಖೆ ಮುಂದಿದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.

    ಇಂದು ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಬೈಲ್ ವೈನ್ ಶಾಪ್‍ಗಳಿಗೆ ಸರ್ಕಾರ ಚಿಂತನೆ ಮಾಡಿದೆ. ಎಲ್ಲೆಲ್ಲಿ ವೈನ್ ಶಾಪ್‍ಗಳಿವೆ. ಅಲ್ಲಿ ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆದಾಯ ಬರುತ್ತೆ ಎಂಬುದು ಸರ್ಕಾರದ ಚಿಂತನೆ. ತಾಂಡಾಗಳಲ್ಲಿ ಸಂಚಾರಿ ವೈನ್ ಶಾಪ್‍ಗಳ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.

    ಗುಣಮಟ್ಟದ ಮದ್ಯ ಕೊಡಬೇಕು ಅನ್ನೋದು ನಮ್ಮ ಉದ್ದೇಶ. 2018-19 ರಲ್ಲಿ 19,750 ಸಾವಿರ ಕೋಟಿ ರೂ ಸಂಗ್ರಹ ಗುರಿ ನಿಗದಿ ಪಡಿಸಲಾಗಿತ್ತು. 19,943 ಕೋಟಿ ಗುರಿ ಸಾಧಿಸಿದ್ದೇವೆ. 2019-20 ನೇ ಸಾಲಿನಲ್ಲಿ 21 ಸಾವಿರ ಕೋಟಿ ಗುರಿ ನಿಗದಿ ಪಡಿಸಿದ್ದೇವೆ. ಪಾರ್ಟಿಗಳಲ್ಲಿ ಬೇರೆ ಕಡೆಯಿಂದ ಮದ್ಯ ತಂದು ಉಪಯೋಗಿಸುತ್ತಾರೆ. ಆಗಾಗಿ ಅಂತಹಾ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.

    ಮದ್ಯಪಾನ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ಚಿಂತನೆ ಇಲ್ಲ. ಈ ಹಿಂದೆ ಮಹಿಳೆಯರು ಪ್ರತಿಭಟನೆ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಬಹುಶಃ ಬಾಂಬೆಯಲ್ಲಿದ್ದೆ. ಆಗ ನನ್ನ ಫೋನ್ ಸ್ವಿಚ್ ಆಫ್ ಇತ್ತು ಎಂದು ಹೇಳಿದರು. ಇದೇ ವೇಲೆ ಡಿಕೆಶಿ ಬಗ್ಗೆ ಕೇಳಿದಾಗ, ಈ ಬಗ್ಗೆ ಸಿಎಂ ಆಗಲೇ ಮೂವರು ಸಚಿವರಿಗೆ ಹೇಳಿಕೆ ಕೊಡದಂತೆ ವಾರ್ನ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನು ಹೇಳಲ್ಲ ಎಂದು ತಿಳಿಸಿದರು.

  • ಕೂಡಲೇ ಬಾರ್ ಆರಂಭಿಸಿ – ಪಂಚಾಯತ್ ಮುಂದೆ ಎಣ್ಣೆ ಪ್ರಿಯರ ಪ್ರತಿಭಟನೆ

    ಕೂಡಲೇ ಬಾರ್ ಆರಂಭಿಸಿ – ಪಂಚಾಯತ್ ಮುಂದೆ ಎಣ್ಣೆ ಪ್ರಿಯರ ಪ್ರತಿಭಟನೆ

    ಬಳ್ಳಾರಿ: ಮದ್ಯದಂಗಡಿ ಮುಚ್ಚಬೇಕು ಎಂದು ಗ್ರಾಮಸ್ಥರು ಪ್ರತಿಭಟಿಸಿರುವ ಸುದ್ದಿ ನೀವು ಓದಿರಬಹುದು. ಆದರೆ ಬಾರ್ ಬೇಕೇ ಬೇಕು ಎಂದು ಎಣ್ಣೆ ಪ್ರಿಯರು ಪಂಚಾಯತ್ ಮುಂದೆ ಪ್ರತಿಭಟಿಸಿ ಆಗ್ರಹಿಸಿದ್ದಾರೆ.

    ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಗ್ರಾಮಸ್ಥರು ಬಾರ್ ಓಪನ್ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ.

    ಗ್ರಾಮದಲ್ಲಿ ಹಿಂದೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಗ್ರಾಮಕ್ಕೆ ಒಂದು ಎಂಎಸ್‍ಐಎಲ್ ವೈನ್ ಶಾಪ್ ಮಂಜೂರಾಗಿ, ಪ್ರಾರಂಭಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತಿತ್ತು. ಈ ಸಂದರ್ಭದಲ್ಲಿ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು.

    ವಿರೋಧ ಜೋರಾದ ಕಾರಣ ವೈನ್ ಶಾಪ್ ಆರಂಭವಾಗುವುದು ತಡವಾಗಿತ್ತು. ಹೀಗಾಗಿ ಇಂದು ಗ್ರಾಮದ ಎಣ್ಣೆ ಪ್ರೀಯರು ಬಾರ್ ಕೂಡಲೇ ಓಪನ್ ಮಾಡಲೇಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟಿಸಿದ್ದಾರೆ.

  • ವೈನ್ ಶಾಪ್ ಇರೋದ್ರಿಂದ ಗ್ರಾಮದಲ್ಲಿ ಮದ್ವೆನೇ ಆಗ್ತಿಲ್ಲ!

    ವೈನ್ ಶಾಪ್ ಇರೋದ್ರಿಂದ ಗ್ರಾಮದಲ್ಲಿ ಮದ್ವೆನೇ ಆಗ್ತಿಲ್ಲ!

    ಚಾಮರಾಜನಗರ: ವೈನ್‍ಶಾಪ್‍ನಿಂದ ಕುಡುಕರು ಮಾತ್ರವಲ್ಲದೇ ಸ್ಥಳೀಯರು ಕೂಡ ನೆಮ್ಮದಿ ಕಳೆದುಕೊಳ್ಳುತ್ತಾರೆ. ಆದರೆ ಈ ಗ್ರಾಮದಲ್ಲಿ ವೈನ್‍ಶಾಪ್ ಇರೋದ್ರಿಂದ ಮದುವೇನೇ ಆಗ್ತಿಲ್ಲವಂತೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಇರೋ ಲಕ್ಷ್ಮೀ ವೆಂಕಟೇಶ್ವರ ವೈನ್‍ಶಾಪ್ ಇದೆ. ಈ ವೈನ್‍ಶಾಪ್‍ನಿಂದಾಗಿ ಗ್ರಾಮಕ್ಕೆ ಕುಡುಕ ಬೊಮ್ಮಲಾಪುರ ಎಂಬ ನಾಮಧೇಯ ಕೂಡ ಬಂದಿದೆಯಂತೆ.

    ವೈನ್ ಶಾಪ್‍ನಿಂದಾಗಿ ಗ್ರಾಮದ ವಧುಗಳನ್ನ ಮದುವೆಯಾಗುವುದಕ್ಕೂ ಯಾರೂ ಮುಂದೆ ಬರುತ್ತಿಲ್ಲ. ಜೊತೆಗೆ ವರನಿಗೆ ವಧು ಕೊಡಲು ಅಕ್ಕ ಪಕ್ಕದ ಊರಿನ ಗ್ರಾಮಗಳಿಂದ ಯಾರು ಮುಂದೆ ಬರುತ್ತಿಲ್ಲ. ಹೀಗಾಗಿ ನೂರಾರು ವಯಸ್ಕ ಹೆಣ್ಣು ಮತ್ತು ಗಂಡು ಮಕ್ಕಳು ಮದುವೆಯಾಗದೇ ಹಾಗೆಯೇ ಮನೆಯಲ್ಲಿದ್ದಾರೆ ಎಂದು ಗ್ರಾಮಸ್ಥೆ ಶೋಭಾ ಹೇಳುತ್ತಾರೆ.

    ಬೊಮ್ಮಲಾಪುರ, ಕೊಡಸೋಗೆ, ಶೀಲವಂತಪುರ, ಸೋಮಪುರ ಸೇರಿದಂತೆ 10 ಹಳ್ಳಿಗಳಿಗೆ ಇದೊಂದೆ ವೈನ್ ಶಾಪ್. ಪ್ರತಿನಿತ್ಯ ಸಾವಿರಾರು ಮಂದಿ ವೈನ್ ಶಾಪ್‍ಗೆ ಬಂದು ಕುಡಿದು ಹೋಗುತ್ತಿದ್ದಾರೆ. ಅಲ್ಲದೇ ಕಳೆದ 6 ತಿಂಗಳಲ್ಲಿ 2 ಕೊಲೆಗಳಾಗಿವೆ. ವೈನ್‍ಶಾಪ್ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರ, ಗ್ರಾಮಪಂಚಾಯ್ತಿ ಕಾರ್ಯಾಲಯ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇತ್ತ ವೈನ್‍ಶಾಪ್ ಇರೋದ್ರಿಂದ 10, 12 ವರ್ಷದ ಮಕ್ಕಳು ಕುಡಿದು ಹಾಳಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

    ಕುಡಿದ ಮತ್ತಿನಲ್ಲಿ ಒಬ್ಬರ ಮೇಲೊಬ್ಬರು ಗ್ರಾಮದಲ್ಲಿ ಗಲಾಟೆ ಮಾಡುವುದು. ಕೆಲವು ವೇಳೆ ಅಮಾಯಕರು ಏಟು ತಿಂದಿರುವ ಪರಿಸ್ಥಿತಿ ಕೂಡ ಇದೆಯಂತೆ. ಒಟ್ಟಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ರೂ ವೈನ್‍ಶಾಪ್ ಮುಚ್ಚಬೇಕಾದ ತಹಶೀಲ್ದಾರ್, ಅಬಕಾರಿ ಇಲಾಖೆ ಅಧಿಕಾರಿಗಳಾಗಲಿ ಇತ್ತ ಸುಳಿಯದಿರೋದು ದುರಂತ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಲೂಕು ಕಚೇರಿ ಮುಂದೆಯೇ ವೈನ್ ಶಾಪ್ ಪರ-ವಿರೋಧದ ಪ್ರತಿಭಟನೆ!

    ತಾಲೂಕು ಕಚೇರಿ ಮುಂದೆಯೇ ವೈನ್ ಶಾಪ್ ಪರ-ವಿರೋಧದ ಪ್ರತಿಭಟನೆ!

    ಮೈಸೂರು: ನಗರದ ಎಚ್.ಡಿ ಕೋಟೆ ತಾಲೂಕು ಕಚೇರಿಯ ಮುಂಭಾಗದಲ್ಲಿ ವೈನ್ ಶಾಪ್ ತೆರೆಯುವ ಸಂಬಂಧ ಪರ ಹಾಗೂ ವಿರೋಧದ ಪ್ರತಿಭಟನೆ ಜೋರಾಗಿ ನಡೆದಿದೆ.

    ಎಚ್.ಡಿ ಕೋಟೆ ತಾಲೂಕಿನ ಹೀರಳ್ಳಿ ಗ್ರಾಮದ ಹೊರವಲಯದಲ್ಲಿ ವೈನ್ ಶಾಪ್ ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದರೆ ವೈನ್ ಶಾಪ್ ಬೇಡ ಎಂದು ಮಹಿಳೆಯರು ಪ್ರತಿಭಟಿಸಿದರೆ, ವೈನ್ ಶಾಪ್ ಬೇಕು ಎಂದು ಡಿಎಸ್‍ಎಸ್ ಸಂಘಟನೆ ಕಾರ್ಯಕರ್ತರು ತಾಲೂಕು ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

    ವೈನ್ ಶಾಪ್ ವಿರೋಧಿಸಿದ ಹೀರಳ್ಳಿ ಗ್ರಾಮದ ಮಹಿಳೆಯರು, ನಮ್ಮ ಹಳ್ಳಿಯಲ್ಲಿ ಬಾರ್ ಬೇಡವೆಂದು ತಾಲೂಕು ಕಚೇರಿಮುಂದೆ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈನ್ ಶಾಪ್ ಆರಂಭವಾದ್ರೆ ನಮ್ಮ ನೆಮ್ಮದಿ ಕೆಡುತ್ತೆ ಹೀಗಾಗಿ ಶಾಪ್ ಆರಂಭಿಸಬಾರದು ಎಂದು ಮಹಿಳೆಯರು ಕೇಳಿಕೊಂಡಿದ್ದಾರೆ. ಒಂದು ವೇಳೆ ನೀವೆನಾದರೂ ವೈನ್ ಶಾಪ್ ಆರಂಭಿಸಿದರೆ ಬೆಂಕಿ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಲ್ಲದೇ ಇದೇ ಸ್ಥಳದಲ್ಲಿ ಸ್ಥಳೀಯ ಡಿಎಸ್‍ಎಸ್ ಸಂಘಟನೆ ಕಾರ್ಯಕರ್ತರು ಬಾರ್ ಪರವಾಗಿ ಪ್ರತಿಭಟಿಸಿದ್ದು ವಿಶೇಷವಾಗಿತ್ತು. ವೈನ್ ಶಾಪ್ ಅನ್ನು ವೈಯಕ್ತಿಕ ಲಾಭದ ಕಾರಣದಿಂದ ಕೆಲವರು ವಿರೋಧಿಸುತ್ತಿದ್ದಾರೆ. ಹೀಗಾಗಿ ಕಾನೂನು ಪ್ರಕಾರ ವೈನ್ ಶಾಪ್ ಆರಂಭವಾಗಲೇ ಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.

  • ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಬೆಳಗಾವಿ: ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿರುವ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣಗಳಲ್ಲಿ ಕಂಡು ಬಂದಿದೆ.

    ಬಾಲ ಕಾರ್ಮಿಕರ ಬಳಕೆ ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರ ಬಳಕೆ ಮಾಡಿದರೆ ಜೈಲು ಶಿಕ್ಷೆ ಕೂಡ ಇದೆ. ಆದರೆ ಇಲ್ಲಿ ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿದ್ದರೂ ಅಬಕಾರಿ, ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

    ಚಿಕ್ಕ ಮಕ್ಕಳ ಕೈಯಲಿ ದುಡಿಸಿಕೊಳ್ಳೋದು ಕಾನೂನಿನ ಪ್ರಕಾರ ಅಪರಾಧ. ಇದು ಗೊತ್ತಿದರೂ ಬಾಲಕರನ್ನು ತಮ್ಮ ಕೆಲಸ ಕಾರ್ಯದಲ್ಲಿ ಬಳಸಿಕೊಳುತ್ತಿದ್ದಾರೆ. ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣದ ಮದ್ಯದಂಗಡಿಗಳಿಗೆ ಬರೋ ಕುಡುಕರಿಗೆ ಈ ಬಾಲಕರು ಸರ್ವ್ ಮಾಡ್ತಾರೆ. ಅಷ್ಟೇ ಅಲ್ಲ ಕುಡುಕರು ಬಳಸಿದ ಗ್ಲಾಸ್‍ಗಳನ್ನು ಬಾಲಕರೇ ತೊಳೆಯುತ್ತಾರೆ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದ್ದು, ಇನ್ನೂ ರಾಯಭಾಗ, ಚಿಕ್ಕೋಡಿಯ ಡಾಬಾಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಮಕ್ಕಳಿಗೆ ಕಡಿಮೆ ಹಣ ನೀಡಿ ದುಡಿಸಿಕೊಳ್ಳಲಾಗುತ್ತಿದೆ.