Tag: Wine

  • ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಚಂಡೀಗಢ: ಕಚೇರಿ, ಸಾರ್ವಜನಿಕ ಸ್ಥಳ ಹೀಗೆ ಕೆಲವೆಡೆ ಮದ್ಯಪಾನ ಮಾಡೋದು ನಿಷೇಧ. ಆದರೆ ಹರ್ಯಾಣದ (Haryana) ಸರ್ಕಾರ ಎಣ್ಣೆ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಕಾರ್ಪೊರೇಟ್ ಕಚೇರಿಯಲ್ಲಿ (Corporate Office) ಕೆಲಸ ಮಾಡುತ್ತ ಸಹೋದ್ಯೋಗಿಗಳೊಂದಿಗೆ ಮದ್ಯಪಾನ ಮಾಡಬಹುದಾದಂತಹ ಹೊಸ ನಿಯಮವನ್ನು ಸರ್ಕಾರ ತಂದಿದೆ.

    ಹರಿಯಾಣ ಮದ್ಯ ನೀತಿಯ (Haryana Liquor Policy) ಪ್ರಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದಂತೆ ಜೂನ್ 12 ರಿಂದ ರಾಜ್ಯಾದ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿಗಳಲ್ಲಿ ಕಡಿಮೆ ಕಂಟೆಂಟ್ ಆಲ್ಕೋಹಾಲ್ (Alcohol) ಪಾನೀಯಗಳಾದ ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಸೇವಿಸಲು ಸರ್ಕಾರ ಅನುಮತಿ ನೀಡುತ್ತಿದೆ.

    ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ (Beer) ಹಾಗೂ ವೈನ್‌ನಂತಹ (Wine) ಪಾನೀಯಗಳನ್ನು ಸೇವಿಸಬಹುದು. ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ.

    ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು. ಇದನ್ನೂ ಓದಿ: ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಹರಿಯಾಣ ಮದ್ಯ ನೀತಿಯ ಪ್ರಕಾರ ಕಾರ್ಪೊರೇಟ್ ಕಚೇರಿಗಳು ಎಲ್-10ಎಫ್ ಮದ್ಯದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಬಿಯರ್ ಮತ್ತು ವೈನ್‌ನಂತಹ ಕಡಿಮೆ ಆಲ್ಕೋಹಾಲ್ ಅಂಶದ ಪಾನೀಯಗಳನ್ನು ಸೇವಿಸಲು ಅನುವು ಮಾಡಿಕೊಡುತ್ತದೆ. ಕ್ಯಾಂಟೀನ್ ಅಥವಾ ಉಪಾಹಾರ ಗೃಹದ ಕನಿಷ್ಠ ವಿಸ್ತೀರ್ಣವು 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಿದ್ದರೆ ಕಾರ್ಪೊರೇಟ್ ಕಚೇರಿ ಪರವಾನಗಿ ಪಡೆಯಬಹುದು. ಪರವಾನಿಗೆ ಪಡೆಯುವ ಕಚೇರಿ 3 ಲಕ್ಷ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ – ಇಬ್ಬರಿಗೆ ತೀವ್ರ ಗಾಯ

  • ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

    ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

    ಹಾಲಿವುಡ್‌ ಸಿನಿಮಾಗಳಲ್ಲಿ ನಟ/ನಟಿಯರು ವೈನ್‌ ಕುಡಿಯುವ ದೃಶ್ಯಗಳು ಇರೋದು ಕಾಮನ್.‌ ವೈನ್‌ ಅನ್ನೋದು ಪಾಶ್ಚಿಮಾತ್ಯ ಸಂಸ್ಕೃತಿಯ ಒಂದು ಭಾಗ. ಅದು ಅಲ್ಲಿನ ಟ್ರೆಂಡ್‌ ಕೂಡ ಹೌದು. ಎಷ್ಟೋ ಸಲ ವೈನ್‌ ಅನ್ನು ಇತರೆ ಮದ್ಯಗಳಿಗೆ ಹೋಲಿಕೆ ಮಾಡೋದು ಸಾಮಾನ್ಯ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ ಎಂದು ಭಾವಿಸಿರುವ ಅನೇಕ ಮಂದಿ, ಇತರೆ ಮದ್ಯಗಳ ಸಾಲಿಗೆ ವೈನ್‌ ಅನ್ನೂ ಸೇರಿಸಿ ಬಿಡ್ತಾರೆ.

    ವೈನ್‌ (Wine) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮಾತು ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ಇದು ಸತ್ಯ. ಅದರಲ್ಲೂ ರೆಡ್‌ ವೈನ್‌ (Red Wine) ಮಿತವಾದ ಸೇವನೆಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತೆ ಅಂತಾ ಸಂಶೋಧನೆಗಳು ತಿಳಿಸಿವೆ. ವೈನ್ ನಮ್ಮ ದೇಹಕ್ಕೆ ಅದ್ಭುತ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಹೃದಯದ ಆರೋಗ್ಯವನ್ನು (Heart Health) ಸುಧಾರಿಸುತ್ತೆ. ಜೊತೆಗೆ ದೀರ್ಘಾಯುಷ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇಂತಹ ಆರು ಅದ್ಭುತ ಪ್ರಯೋಜನಗಳು ವೈನ್‌ ಸೇವಿಸುವವರಿಗೆ ಸಿಗುತ್ತೆ. ಅದು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್‌ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?

    ಹೃದಯದ ಆರೋಗ್ಯ ಸುಧಾರಣೆ
    ವೈನ್ ಮಿತವಾದ ಸೇವನೆ ಹೃದಯದ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ವೈನ್‌ನಲ್ಲಿ ಆಂಟಿಆಕ್ಸಿಡೆಂಟ್‌ ಮತ್ತು ಪಾಲಿಫಿನಾಲ್‌ಗಳ ಹೆಚ್ಚಿನ ಸಾಂದ್ರತೆಯಿದೆ ಎಂದು ಸಂಶೋಧನೆ ತಿಳಿಸಿದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುತ್ತದೆ. ವೈನ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ವರದಿಗಳು ಹೇಳಿವೆ.

    ಮೂಳೆಗಳು ಬಲಗೊಳ್ಳುತ್ತವೆ
    ನಿಮಗೆ ಗೊತ್ತೆ! ವೈನ್ ಸೇವನೆಯು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಧ್ಯಮ ಪ್ರಮಾಣದಲ್ಲಿ ವೈನ್ ಸೇವಿಸುವವರಲ್ಲಿ ಮೂಳೆ ಖನಿಜ ಸಾಂದ್ರತೆಯು ಅಧಿಕವಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಬಿಳಿ ವೈನ್‌ಗಿಂತ ರೆಡ್ ವೈನ್ ಮೂಳೆಗಳಿಗೆ ಹೆಚ್ಚು ಪ್ರಯೋಜನಕಾರಿ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ಒತ್ತಡ ನಿವಾರಣೆ
    ವೈನ್‌ನಲ್ಲಿರುವ ಕೆಲವು ಸಂಯುಕ್ತಗಳು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡವನ್ನು ನಿವಾರಿಸುತ್ತದೆ. ವೈನ್‌ ಸೇವನೆ ಮಿತವಾಗಿರಬೇಕು. ಅತಿಯಾದ ಸೇವನೆಯು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಗಮನಿಸಬೇಕಾದ ಅಂಶ.

    ಕರುಳಿನ ಆರೋಗ್ಯ ಚೆನ್ನಾಗಿರುತ್ತೆ
    ವೈನ್ ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ವೈನ್‌ನಲ್ಲಿರುವ ಪಾಲಿಫಿನಾಲ್‌ಗಳು ಪ್ರಿಬಯಾಟಿಕ್ ಆಗಿ ಕೆಲಸ ಮಾಡುತ್ತದೆ. ಆ ಮೂಲಕ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂಬುದನ್ನು ಅಧ್ಯಯನಗಳು ಕಂಡುಕೊಂಡಿವೆ.

    ಬೇಗ ವಯಸ್ಸಾಗಲ್ಲ
    ವೈನ್‌ ಸೇವನೆಯು ದೀರ್ಘಾಯುಷ್ಯವನ್ನು ನೀಡುತ್ತದೆ. ಮೃದುವಾದ ಮತ್ತು ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ನಿಮ್ಮ ತಲೆಗೂದಲು ಆರೋಗ್ಯಕರ, ಹೊಳಪಿನಿಂದ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಮುಖದ ಮೇಲೆ ಸುಕ್ಕುಗಳಿಲ್ಲದಂತೆ ಮಾಡುತ್ತದೆ. ಇದನ್ನೂ ಓದಿ: ಪೋಷಕರ ನಡವಳಿಕೆಗಳು ಮಕ್ಕಳ ವ್ಯಕ್ತಿತ್ವದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಗೊತ್ತಾ?

    ಮೆದುಳು ಆರೋಗ್ಯ ಸುಧಾರಣೆ
    ರೆಡ್ ವೈನ್ ರೆಸ್ವೆರಾಟ್ರೊಲ್ ಅನ್ನು ಹೊಂದಿರುತ್ತದೆ. ಇದು ಮೆದುಳಿಗೆ ಆಗಬಹುದಾದ ಹಾನಿಯನ್ನು ನಿಯಂತ್ರಿಸುತ್ತದೆ. ವೈನ್ ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿನ ಆರೋಗ್ಯವನ್ನು ಇನ್ನಷ್ಟು ಸುಧಾರಿಸುತ್ತದೆ. ಜೊತೆಗೆ ದೃಷ್ಟಿ ದೋಷ ಸಮಸ್ಯೆ ನಿವಾರಿಸುತ್ತದೆ.

    ಮುಂದಿನ ಬಾರಿ ನೀವು ಕುಡಿಯಲು ಯೋಜಿಸುವಾಗ, ಒಂದು ಲೋಟ ವೈನ್ ಅನ್ನು ಆರಿಸಿಕೊಳ್ಳಿ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಶಿಫಾರಸು ಮಾಡಿದಂತೆ, ಪುರುಷರಿಗೆ ದಿನಕ್ಕೆ ಎರಡು ಗ್ಲಾಸ್ ಮತ್ತು ಮಹಿಳೆಯರು ದಿನಕ್ಕೆ ಒಂದು ಗ್ಲಾಸ್ ವೈನ್‌ ಸೇವಿಸುವುದು ಉತ್ತಮ. ಅತಿಯಾದ ಮದ್ಯಪಾನವು ಹಾನಿಕಾರಕ. ಯಕೃತ್ತಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈನ್ ಮದ್ಯವಲ್ಲ, ಮಾರಾಟ ಹೆಚ್ಚಾದ್ರೆ ರೈತರಿಗೆ ಲಾಭ ಸಿಗಲಿದೆ: ಸಂಜಯ್ ರಾವತ್

    ವೈನ್ ಮದ್ಯವಲ್ಲ, ಮಾರಾಟ ಹೆಚ್ಚಾದ್ರೆ ರೈತರಿಗೆ ಲಾಭ ಸಿಗಲಿದೆ: ಸಂಜಯ್ ರಾವತ್

    ಮುಂಬೈ: ವೈನ್ ಮದ್ಯವಲ್ಲ, ಸೂಪರ್ ಮಾರ್ಕೆಟ್‍ಗಳಲ್ಲಿ ಮಾರಾಟ ಮಾಡುವುದರಿಂದ ರೈತರ ಆದಾಯ ಹೆಚ್ಚಿಸಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

    ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಅದರಿಂದ ಲಾಭ ಸಿಗುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಕ್ಕಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕೇವಲ ಎಲ್ಲವನ್ನೂ ವಿರೋಧಿಸುತ್ತದೆ. ಅವರು ರೈತರಿಗಾಗಿ ಏನನ್ನೂ ಮಾಡುವುದಿಲ್ಲ ಎಂದು ಸಂಜಯ್ ರಾವತ್ ಟೀಕಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಶಿವಸೇನೆ ನೇತೃತ್ವದ ಸರ್ಕಾರ ಮಹಾರಾಷ್ಟ್ರವನ್ನು ಮದ್ಯ-ರಾಷ್ಟ್ರ ಮಾಡಲು ಹೊರಟಿದೆ ಎಂದು ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ವೈನ್ ಆಲ್ಕೋಹಾಲ್ ಅಲ್ಲ ಎಂದಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್- ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ: ಸುಮಾರು 1,000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್ ರ್ಮಾರ್ಕೆಟ್‍ಗಳು ಮತ್ತು ಮಳಿಗೆಗಳಲ್ಲಿ “ಶೆಲ್ಫ್-ಇನ್-ಶಾಪ್” ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ಸೂಪರ್ ಮಾರ್ಕೆಟ್ ಸಮೀಪದಲ್ಲಿ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿದ್ದರೆ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಮತ್ತು ಮದ್ಯ ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ. ಇನ್ನೂ ಸೂಪರ್ ಮಾರ್ಕೆಟ್‍ನಲ್ಲಿ ವೈನ್ ಮಾರಾಟ ಮಾಡಲು ಪರವಾನಗಾಗಿ 5,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • 578 ವೈನ್ ಬಾಕ್ಸ್ ನಾಪತ್ತೆ- ಮಹಿಳಾ ಕಾನ್‌ಸ್ಟೇಬಲ್‌ ವಿರುದ್ಧ ಕೇಸ್

    578 ವೈನ್ ಬಾಕ್ಸ್ ನಾಪತ್ತೆ- ಮಹಿಳಾ ಕಾನ್‌ಸ್ಟೇಬಲ್‌ ವಿರುದ್ಧ ಕೇಸ್

    ಲಕ್ನೋ: ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ವೈನ್ ಬಾಟಲ್‍ಗಳನ್ನು ತುಂಬಿದ್ದ ಬಾಕ್ಸ್ ಕಳುವಾಗಿದ್ದು, ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹೆಡ್ ಕಾನ್‌ಸ್ಟೇಬಲ್‌ ತಾರೇಶ್ ಶರ್ಮಾ ವಿರುದ್ಧ ಐಪಿಸಿ ಸೆಕ್ಷನ್ 409ರಡಿ ಎಸ್‍ಪಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ವಂಚನೆ- ಸಿಸಿಎಫ್ ಮೇಲೆ ದೂರು

    12 ವಿವಿಧ ಪ್ರಕರಣಗಳಲ್ಲಿ ಸುಮಾರು 578 ವೈನ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸರ್ಕಲ್ ಇನ್‍ಸ್ಪೆಕ್ಟರ್ ಪ್ರದೀಪ್ ಸಿಂಗ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ವಶಕ್ಕೆ ಪಡೆದ ವೈನ್ ಬಾಕ್ಸ್ ಜವಾಬ್ದಾರಿಯನ್ನು ತಾರೇಶ್ ಶರ್ಮಾ ಅವರಿಗೆ ವಹಿಸಲಾಗಿತ್ತು. ಇದನ್ನೂ ಓದಿ: ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ಮಹಿಳಾ ಹೆಡ್ ಕಾನ್‌ಸ್ಟೇಬಲ್‌ ವರ್ಗಾವಣೆಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ತೆರವಾಗಿದ್ದ ಸ್ಥಾನಕ್ಕೆ ಬರುವ ಅಧಿಕಾರಿಗೆ ವೈನ್‍ ಬಾಕ್ಸ್ ಹಸ್ತಾಂತರಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

  • ಮನೆಯಲ್ಲೇ ವೈನ್ ತಯಾರಿಸ್ಕೊಂಡ ಅಪ್ಪ-ಮಗನ ಬಂಧನ

    ಮನೆಯಲ್ಲೇ ವೈನ್ ತಯಾರಿಸ್ಕೊಂಡ ಅಪ್ಪ-ಮಗನ ಬಂಧನ

    -30 ಲೀಟರ್ ವೈನ್, 5 ಲೀಟರ್ ಮದ್ಯ ವಶಕ್ಕೆ

    ಚೆನ್ನೈ: ಮನೆಯಲ್ಲಿಯೇ ವೈನ್ ತಯಾರಿಸಿಕೊಳ್ಳುತ್ತಿದ್ದ ಅಪ್ಪ-ಮಗ ಸೇರಿದಂತೆ ಮೂವರನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮನೆಯಲ್ಲಿ ದ್ರಾಕ್ಷಿ ರಸ ಮತ್ತ ಮದ್ಯ ತಯಾರಿಸಲು ಬಳಸುತ್ತಿದ್ದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಉತ್ತರ ಚೆನ್ನೈನ ಕೊಡೊಂಗೈಯೂರ ಪ್ರದೇಶದಲ್ಲಿರುವ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 56 ವರ್ಷದ ತಂದೆ ತನ್ನ 26ರ ಪುತ್ರ ಮತ್ತೊಬ್ಬ ಯುವಕನ ಜೊತೆ ಸೇರಿ ಮದ್ಯ ತಯಾರಿಸುತ್ತಿದ್ದರು.

    ದಾಳಿ ವೇಳೆ ದ್ರಾಕ್ಷಿಯಿಂದ ಮಾಡಿದ 30 ಲೀಟರ್ ವೈನ್ ಮತ್ತು ಮಾದಕ ವಸ್ತುಗಳಿಂದ ತಯಾರಿಸಿದ 5 ಲೀಟರ್ ಮದ್ಯ (ಸುಂದಾ ಕಂಜಿ) ಹಾಗೂ ಅಪಾರ ಪ್ರಮಾಣದ ನಶೆ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರನ್ನು ಬಂಧಿಸಿರುವ ಪೊಲೀಸರು ಬಂಧಿತರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

    ಮಾರ್ಚ್ 24ರಿಂದ ತಮಿಳುನಾಡಿನಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಅಪ್ಪ-ಮಗ ಮನೆಯಲ್ಲಿ ಮದ್ಯ ತಯಾರಿಸತೊಡಗಿದ್ದರು. ಇಂದು ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ತಮಿಳುನಾಡಿನ ಗಡಿ ಭಾಗದ ಜನರು ರಾಜ್ಯಕ್ಕೆ ಬಂದು ಮದ್ಯ ಖರೀದಿ ಮಾಡುತ್ತಿದ್ದಾರೆ.

  • ವೈನ್ ಬೇಕು ವೈನ್ – ವಿಮಾನದಲ್ಲಿ ಮಹಿಳೆಯ ರಾದ್ಧಾಂತ: ವಿಡಿಯೋ

    ವೈನ್ ಬೇಕು ವೈನ್ – ವಿಮಾನದಲ್ಲಿ ಮಹಿಳೆಯ ರಾದ್ಧಾಂತ: ವಿಡಿಯೋ

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ನಡೆಸಿದ್ದ ಐರಿಷ್ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿ ವೈನ್ ನೀಡಿಲ್ಲ ಎಂದು ಆರೋಪಿಸಿ ರಾದ್ಧಾಂತ ಸೃಷ್ಟಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮುಂಬೈನಿಂದ ಲಂಡನ್‍ಗೆ ಶನಿವಾರ ಬಿಸಿನೆಸ್ ಕ್ಲಾಸಿನಲ್ಲಿ ಪ್ರಯಾಣ ಬೆಳೆಸಿದ್ದ ಐರಿಷ್ ಮಹಿಳೆ ವಿಮಾನ ಸಿಬ್ಬಂದಿಗೆ ನಿಂದನೆ ಮಾಡಿದ್ದಾಳೆ. ವಿಮಾನದ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ವೈನ್ ನೀಡಲು ನಿರಾಕರಿಸಿದ್ದ ವೇಳೆ ಈ ಘಟನೆ ನಡೆದಿದೆ.

    ಮೊದಲು ಮಹಿಳೆಗೆ ವೈನ್ ಪೂರೈಕೆ ಮಾಡಲಾಗಿದ್ದು, ಆ ಬಳಿಕವೂ ಹೆಚ್ಚಿನ ಪ್ರಮಾಣದಲ್ಲಿ ವೈನ್ ನೀಡುವಂತೆ ಮಹಿಳೆ ಪಟ್ಟು ಹಿಡಿದಿದ್ದಾಳೆ. ಈ ವೇಳೆ ವಿಮಾನ ಸಿಬ್ಬಂದಿ ನಿರಾಕರಿಸಿದ ಕಾರಣ ಆಕೆ ಬಾಯಿಗೆ ಬಂದಂತೆ ಬೈದು ರಾದ್ಧಾಂತ ಮಾಡಿದ್ದಾಳೆ.

    ಮಹಿಳೆಯ ಏರ್ ಇಂಡಿಯಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಎಷ್ಟೇ ಕುಗಾಡಿದರೂ ವಿಮಾನ ಸಿಬ್ಬಂದಿ ತಾಳ್ಮೆಯಿಂದಲೇ ಇದ್ದರು. ಇದನ್ನು ಕಂಡು ಮತ್ತಷ್ಟು ರೊಚ್ಚಿಗೆದ್ದ ಆಕೆ ಸಿಬ್ಬಂದಿ ಮೇಲೆ ಉಗುಳಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳೆಯ ಅಸಭ್ಯ ವರ್ತನೆಯನ್ನ ವಿಮಾನ ಸಿಬ್ಬಂದಿಯೇ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಅಸಭ್ಯ ವರ್ತನೆ ಕಾರಣ ಲಂಡನ್ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ತಾನು ಅಂತರಾಷ್ಟ್ರೀಯ ಮಟ್ಟದ ವಕೀಲೆಯಾಗಿದ್ದು, ಪ್ರಯಾಣಿಕರಿಗೆ ಸರಿಯಾದ ಸೇವೆ ನೀಡಲು ನಿಮಗೆ ಆಗುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಳೆ. ಘಟನೆ ವೇಳೆ ಸಹಪ್ರಯಾಣಿಕರು ಯಾರು ಮಾತನಾಡದೇ ಸುಮ್ಮನೆ ಕುಳಿತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವೈನ್ ತಯಾರಿಸಲು ಆನ್‍ಲೈನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವು!

    ವೈನ್ ತಯಾರಿಸಲು ಆನ್‍ಲೈನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವು!

    ಬೀಜಿಂಗ್: ವೈನ್ ತಯಾರಿಸಲು ಆನ್‍ಲೈನ್‍ನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ್ದ ಘಟನೆ ಚೀನಾದಲ್ಲಿ ನಡೆದಿದೆ.

    21 ವರ್ಷದ ಮಹಿಳೆ ಆ ಹಾವನ್ನು ಇ-ಕಾಮರ್ಸ್ ಕಂಪನಿಯ ಜುಹಾನ್ ಜುಹಾನ್‍ನಿಂದ ಖರೀದಿಸಿದ್ದಳು. ಹಾವಿನ ವಿಷದಿಂದ ಮಹಿಳೆ ವೈನ್ ಮಾಡಲು ನಿರ್ಧರಿಸಿದ್ದಳು. ಹಾಗಾಗಿ ಆನ್‍ಲೈನ್‍ನಲ್ಲಿ ಹಾವನ್ನು ಆರ್ಡರ್ ಮಾಡಿದ್ದಳು. ಬಳಿಕ ಕೊರಿಯರ್ ಮೂಲಕ ಮಹಿಳೆಯ ಮನೆ ಬಾಗಿಲಿಗೆ ಹಾವು ಬಂದಿದೆ. ಈ ಬಾಕ್ಸ್ ನಲ್ಲಿ ವಿಷಪೂರಿತ ಹಾವು ಇರುವ ಬಗ್ಗೆ ಕೊರಿಯರ್ ನವರಿಗೂ ಗೊತ್ತಿರಲಿಲ್ಲ.

    ಹಾವಿನ ವಿಷದಿಂದ ವೈನ್ ಮಾಡುವ ಆಸೆ ಹೊಂದಿದ್ದ ಮಹಿಳೆಗೆ ವಿಷಕಾರಿ ಹಾವು ಕಚ್ಚಿದೆ. ಬಳಿಕ ಆ ಹಾವು ಮಹಿಳೆಯ ಮನೆಯ ಹತ್ತಿರ ಪತ್ತೆಯಾಗಿದೆ. ಕಚ್ಚಿದ ಬಳಿಕ ಹಾವು ಅದು ಕಾಡಿನತ್ತ ಹೋಗಿದೆ ಎಂದು ವರದಿಯಾಗಿದೆ.

    ನನ್ನ ಮಗಳು ಪಾರಂಪರಿಕವಾಗಿ ಔಷಧಿಯ ವೈನ್ ತಯಾರಿಸಲು ನಿರ್ಧರಿಸಿದ್ದಳು. ಈ ಔಷಧಿಯನ್ನು ಸ್ನೇಕ್ ವೈನ್ ಎಂದು ಕರೆಯುತ್ತಾರೆ. ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮಥ್ರ್ಯ ಇರುವ ಕಾರಣ ಸ್ನೇಕ್ ವೈನ್ ತಯಾರಿಸಲು ಮುಂದಾಗಿದ್ದಳು ಎಂದು ಮೃತ ಮಹಿಳೆಯ ತಾಯಿ ಹೇಳಿದ್ದಾರೆ.

  • ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಚಿಕ್ಕೋಡಿ ಬಾರ್ ಗಳಲ್ಲಿ ಸರ್ವರ್ ಆಗಿ ಕೆಲಸ ಮಾಡ್ತಾರೆ ಬಾಲಕರು

    ಬೆಳಗಾವಿ: ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿರುವ ಘಟನೆ ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣಗಳಲ್ಲಿ ಕಂಡು ಬಂದಿದೆ.

    ಬಾಲ ಕಾರ್ಮಿಕರ ಬಳಕೆ ಅಕ್ಷಮ್ಯ ಅಪರಾಧ. ಬಾಲ ಕಾರ್ಮಿಕರ ಬಳಕೆ ಮಾಡಿದರೆ ಜೈಲು ಶಿಕ್ಷೆ ಕೂಡ ಇದೆ. ಆದರೆ ಇಲ್ಲಿ ಬಾಲ ಕಾರ್ಮಿಕರನ್ನು ಮದ್ಯದಂಗಡಿಗಳಲ್ಲಿ ಬಳಕೆ ಮಾಡುತ್ತಿದ್ದರೂ ಅಬಕಾರಿ, ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ.

    ಚಿಕ್ಕ ಮಕ್ಕಳ ಕೈಯಲಿ ದುಡಿಸಿಕೊಳ್ಳೋದು ಕಾನೂನಿನ ಪ್ರಕಾರ ಅಪರಾಧ. ಇದು ಗೊತ್ತಿದರೂ ಬಾಲಕರನ್ನು ತಮ್ಮ ಕೆಲಸ ಕಾರ್ಯದಲ್ಲಿ ಬಳಸಿಕೊಳುತ್ತಿದ್ದಾರೆ. ಬೆಳಗಾವಿಯ ರಾಯಭಾಗ ತಾಲೂಕಿನ ಹಾರೋಗೇರಿ ಹಾಗೂ ಮುಗಳಕೋಡ್ ಪಟ್ಟಣದ ಮದ್ಯದಂಗಡಿಗಳಿಗೆ ಬರೋ ಕುಡುಕರಿಗೆ ಈ ಬಾಲಕರು ಸರ್ವ್ ಮಾಡ್ತಾರೆ. ಅಷ್ಟೇ ಅಲ್ಲ ಕುಡುಕರು ಬಳಸಿದ ಗ್ಲಾಸ್‍ಗಳನ್ನು ಬಾಲಕರೇ ತೊಳೆಯುತ್ತಾರೆ.

    ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಾಲ ಕಾರ್ಮಿಕ ಪದ್ದತಿ ಬೆಳಕಿಗೆ ಬಂದಿದ್ದು, ಇನ್ನೂ ರಾಯಭಾಗ, ಚಿಕ್ಕೋಡಿಯ ಡಾಬಾಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ. ಮಕ್ಕಳಿಗೆ ಕಡಿಮೆ ಹಣ ನೀಡಿ ದುಡಿಸಿಕೊಳ್ಳಲಾಗುತ್ತಿದೆ.