Tag: windows

  • ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ನವದೆಹಲಿ: ಈ ವರ್ಷದ ಅಂತ್ಯದ ವೇಳೆಗೆ ತನ್ನ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ (Windows) ಅನ್ನು ದೇಶದಲ್ಲೇ ಅಭಿವೃದ್ಧಿಪಡಿಸಿದ ಮಾಯಾ ಒಎಸ್‌ಗೆ (Maya OS) ಬದಲಾಯಿಸಲು ಭಾರತೀಯ ರಕ್ಷಣಾ ಸಚಿವಾಲಯ (Indian Defence Ministry) ನಿರ್ಧರಿಸಿದೆ.

    ಕಳೆದ ಕೆಲ ವರ್ಷಗಳಿಂದ ಕಂಪ್ಯೂಟರ್‌ಗಳಲ್ಲಿ (Computer) ಮಾಲ್‌ವೇರ್‌ಗಳು ಹೆಚ್ಚುತ್ತಿದ್ದು, ಈ ದಾಳಿಗಳ ವಿರುದ್ಧ ತಮ್ಮ ಸಿಸ್ಟಂಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಮಾಯಾ ಒಎಸ್ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್ ಉಬುಂಟು ಆಧಾರಿತ ಸ್ವದೇಶಿ ಆಪರೇಟಿಂಗ್ ಸಿಸ್ಟಂ ಆಗಿದೆ. ಇದು ಮೈಕ್ರೋಸಾಫ್ಟ್‌ಗೆ ಹೋಲಿಸಿದರೆ ಕ್ರಿಯಾತ್ಮಕತೆ ಹಾಗೂ ಇಂಟರ್ಫೇಸ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಗುರಿ ಹೊಂದಿದೆ.

    ಏನಿದು ಮಾಯಾ ಒಎಸ್?
    ಮಾಯಾ ಒಎಸ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO), ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (C-DC) ಹಾಗೂ ನ್ಯಾಷನಲ್ ಇನ್‌ಫರ್ಮ್ಯಾಟಿಕ್ಸ್ ಸೆಂಟರ್‌ನ (NIC) ತಜ್ಞರ ತಂಡ ಅಭಿವೃದ್ಧಿಪಡಿಸಿದೆ. ಇದು ವಿಂಡೋಸ್‌ಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದ್ದು, ರಕ್ಷಣಾ ಸಚಿವಾಲಯ ಸಾಮಾನ್ಯವಾಗಿ ಬಳಸುವ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಸಹ ಬೆಂಬಲಿಸುತ್ತದೆ.

    ಮಾಯಾ ಒಎಸ್ ಬಳಸಲು ಮತ್ತು ನಿರ್ವಹಿಸಲು ಸುಲಭವಾಗಿದ್ದು, ವಿಂಡೋಸ್‌ಗೆ ಹೋಲುವ ಬಳಕೆದಾರ ಇಂಟರ್ಫೇಸ್ ಇದೆ. 2021ರಲ್ಲಿ ಸರ್ಕಾರ ಹಾಗೂ ರಕ್ಷಣಾ ವ್ಯವಸ್ಥೆಗಳ ಮೇಲೆ ಸೈಬರ್ ದಾಳಿ ಪ್ರಕರಣಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಮಾಯಾ ಒಎಸ್ ಅಭಿವೃದ್ಧಿ ಪಡಿಸಲು ಮುಂದಾಯಿತು. ವರದಿಗಳ ಪ್ರಕಾರ ಇದನ್ನು ಕೇವಲ 6 ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.

    ಫೀಚರ್‌ಗಳೇನಿದೆ?
    ಮಾಯಾ ಒಎಸ್ ಕ್ಲೌಡ್ ಸ್ಟೋರೇಜ್ ಏಕೀಕರಣ, ಪೂರ್ಣ ಡಿಸ್ಕ್ ಎನ್‌ಕ್ರಿಪ್ಶನ್, ಡಿಜಿಟಲ್ ಸಿಗ್ನೇಚರ್, ಬಯೋಮೆಟ್ರಿಕ್ ದೃಢೀಕರಣ ಮತ್ತು ಚಕ್ರವ್ಯೂಹ್ ಸೇರಿದಂತೆ ಹಲವಾರು ಫೀಚರ್‌ಗಳನ್ನು ನೀಡುತ್ತದೆ. ಚಕ್ರವ್ಯೂಹವು ಆ್ಯಂಟಿ-ಮಾಲ್‌ವೇರ್ ಮತ್ತು ಆಂಟಿವೈರಸ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    ಮಾಯಾ ಒಎಸ್ ಬಿಡುಗಡೆ ಯಾವಾಗ?
    ಮಾಯಾ ಒಎಸ್ ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ. ಆಗಸ್ಟ್ 15 ರೊಳಗೆ ಸೌತ್ ಬ್ಲಾಕ್‌ನಲ್ಲಿರುವ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಮಾಯಾವನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಈ ವರ್ಷದ ಅಂತ್ಯದ ವೇಳೆಗೆ ಎಲ್ಲಾ ಭಾರತೀಯ ರಕ್ಷಣಾ ಸಚಿವಾಲಯದ ಸಿಸ್ಟಂಗಳಲ್ಲಿ ವಿಂಡೋಸ್ ಬದಲು ಮಾಯಾ ಒಎಸ್ ಇನ್‌ಸ್ಟಾಲ್ ಮಾಡಲಾಗುತ್ತದೆ.

    ಮಾಯಾ ಒಎಸ್ ಕಂಪ್ಯೂಟರ್ ಸಿಸ್ಟಮ್‌ಗಳ ಸುರಕ್ಷತೆಯನ್ನು ಸುಧಾರಿಸುವುದಲ್ಲದೆ, ಸ್ಥಳೀಯ ಆವಿಷ್ಕಾರವನ್ನು ಉತ್ತೇಜಿಸುತ್ತದೆ ಮತ್ತು ವಿದೇಶಿ ಸಾಫ್ಟ್‌ವೇರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಾಯಾ ಒಎಸ್ ಅನ್ನು ಮುಂದಿನ ದಿನಗಳಲ್ಲಿ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿಯೂ ಅಳವಡಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: JioBook: 16,499 ರೂ.ಗೆ ಸಿಗಲಿದೆ ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್..!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ಈ ವರ್ಷದ ಜೂನ್ 30ರ ನಂತರ ಕೆಲ ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್  ಆಪರೇಟಿಂಗ್ ಸಿಸ್ಟಂ ಹೊಂದಿರುವ ಸಾಧನಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ.

     ಎಕ್ಸ್ ಪ್ರೆಸ್ ಯುಕೆ ವರದಿ ಪ್ರಕಾರ ಆಪಲ್ ಐಫೋನ್ 3ಜಿಎಸ್, ಗೂಗಲ್ ಆಂಡ್ರಾಯ್ಡ್ 2.1 ಅಥವಾ 2.2 ಫೋನ್, ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂ, ಐಓಎಸ್ 6ನಲ್ಲಿ ರನ್ ಆಗುತ್ತಿರುವ ಸಾಧನಗಳಿಗೆ ಸೇವೆ ನೀಡದೇ ಇರಲು ವಾಟ್ಸಪ್ ನಿರ್ಧರಿಸಿದೆ ಎಂದು ತಿಳಿಸಿದೆ.

    ಈ ಮೇಲೆ ತಿಳಿಸಿದ ಸಾಧನಗಳನ್ನು ಬಳಸುವ ಗ್ರಾಹಕರು ಬೇರೆ ಸಾಧನಗಳಿಗೆ ಬದಲಾಗಿ ಎಂದು ವಾಟ್ಸಪ್ ಸಲಹೆ ನೀಡಿದೆ.

    ಯಾವಾಗ ಬಿಡುಗಡೆಯಾಗಿತ್ತು?
    ಐಫೋನ್ 3ಜಿಎಸ್ ಫೋನನ್ನು ಆಪಲ್ 2009ರಲ್ಲಿ ಬಿಡುಗಡೆ ಮಾಡಿದ್ದರೆ, ಐಓಎಸ್ 6 2012ರಲ್ಲಿ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್ 2.1 2010ರಲ್ಲಿ ಬಿಡುಗಡೆಯಾಗಿದ್ದರೆ, ವಿಂಡೋಸ್ ಫೋನ್ 8 ಓಎಸ್ ಅನ್ನು ಮೈಕ್ರೋಸಾಫ್ಟ್ 2012ರಲ್ಲಿ ಬಿಡುಗಡೆ ಮಾಡಿತ್ತು.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು.