Tag: Window

  • ಕಿಟಕಿ, ಬಾಗಿಲು, ಶೂಗಳಲ್ಲಿ ಮನೆಯ ಕೀ ಇಡುವ ಮುನ್ನ ಎಚ್ಚರವಹಿಸಿ!

    ಕಿಟಕಿ, ಬಾಗಿಲು, ಶೂಗಳಲ್ಲಿ ಮನೆಯ ಕೀ ಇಡುವ ಮುನ್ನ ಎಚ್ಚರವಹಿಸಿ!

    ಬೆಂಗಳೂರು: ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಸಮಾನ್ಯವಾಗಿ ಪತಿ- ಪತ್ನಿ ಸೇರಿದಂತೆ ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ. ಹಾಗೆಯೇ ಮನೆಯಿಂದ ಹೋಗುವಾಗ ಮನೆಯ ಕೀ ಶೂನಲ್ಲೋ, ಕಿಟಕಿಯಲ್ಲೋ, ಬಾಗಿಲ ಸಂಧಿಯಲ್ಲೋ ಇಟ್ಟು ಹೋಗೋದು ಕಾಮನ್. ನೀವು ಏನಾದರೂ ಇದೇ ತರ ಮಾಡುತ್ತಿದ್ದರೆ ಈ ಸ್ಟೋರಿಯನ್ನು ಮಿಸ್ ಮಾಡದೇ ಓದಿ.

    ಹೌದು, ಬೆಂಗಳೂರಿನಲ್ಲಿ ಒಬ್ಬರು ದುಡಿದು ಇಡೀ ಕುಟುಂಬವನ್ನು ಸಾಕುವುದು ಕಷ್ಟ. ಹಾಗಾಗಿ ಬಹುತೇಕ ಮನೆಗಳಲ್ಲಿ ಪತಿ-ಪತ್ನಿ, ಮಕ್ಕಳು ಎಲ್ಲರು ಕೆಲಸಕ್ಕೆ ಹೋಗುತ್ತಾರೆ. ಅದರಲ್ಲೂ ಐಟಿ-ಬಿಟಿಗಳಲ್ಲಿ ಕೆಲಸ ಮಾಡುವ ಗಂಡ-ಹೆಂಡತಿಯಂತೂ ರಾತ್ರಿ ಹಗಲು ಅನ್ನದೇ ಶಿಫ್ಟ್ ಲೆಕ್ಕದಲ್ಲಿ ಕೆಲಸ ಮಾಡ್ತಾರೆ. ಕೆಲಸಕ್ಕೆ ಹೋಗುವಾಗ ಮನೆಯ ಕೀಯನ್ನು ಯಾರಿಗೆ ಕೊಡೋದು ಅಂತಾ ಮನೆಯ ಕಿಟಕಿ, ಶೂಗಳು, ಬಾಗಿಲ ಸಂಧಿಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ಕೀ (Home Key) ಇಟ್ಟು ಹೋಗ್ತಾರೆ. ಇದನ್ನೇ ಇದನ್ನೆ ಬಂಡವಾಳ ಮಾಡಿಕೊಂಡ ಖತರ್ನಾಕ್ ಮನೆಗಳ್ಳರು ಹಾಡಹಗಲೇ ರಾಜಾರೋಷವಾಗಿ ಮನೆಗೆ ಎಂಟ್ರಿ ಕೊಡುತ್ತಾರೆ. ಇದನ್ನೂ ಓದಿ: ಪಾಕ್‌ ಜಿಂದಾಬಾದ್‌ ಘೋಷಣೆ – ಸುಮೊಟೋ ಕೇಸ್‌ ದಾಖಲಿಸಿದ ಪೊಲೀಸರು

    ಇಂಥದ್ದೇ ಒಂದು ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ. ಮಾಸ್ಕ್ ಧರಿಸಿ ಒಳಗೆ ಮನೆಯೊಳಗೆ ಎಂಟ್ರಿ ಕೊಟ್ಟ ಕಳ್ಳ ಮುನಿಯಪ್ಪ ಮೊದ ಮೊದಲು ಅಪಾರ್ಟ್‍ಗಳಿಗೆ ವಿವಿಧ ಕೆಲಸದ ನೆಪದಲ್ಲಿ ಎಂಟ್ರಿಯಾಗ್ತಿದ್ದ. ಆಮೇಲೆ ಪ್ಲಾಟ್ ಮುಂದಿನ ಚಪ್ಪಲಿ ಸ್ಟ್ಯಾಂಡ್‍ನಲ್ಲಿದ್ದ ಶೂ ಮತ್ತು ಚಪ್ಪಲಿಗಳನ್ನು ಕದ್ದು ಎಸ್ಕೇಪ್ ಆಗ್ತಿದ್ದ. ಕದ್ದ ಶೂ ಗಳಲ್ಲಿ ಬಹುತೇಕ ಮನೆಯ ಕೀ ಸಿಗುತ್ತಿತ್ತಂತೆ. ಇದನ್ನೇ ಬಂಡವಾಳ ಮಾಡ್ಕೊಂಡ ಮನೆಗಳ್ಳ ಮುನಿಯಪ್ಪ, ಅಪಾರ್ಟ್‍ಮೆಂಟ್‍ಗಳು, ಬಾಗಿಲು ಹಾಕಿರೋ ಮನೆಗಳ ಮುಂದಿನ ಕಿಟಕಿ, ಬಾಗಿಲು, ಶೂಗಳನ್ನು ಚೆಕ್ ಮಾಡ್ತಾನೆ. ಅಲ್ಲಿ ಇಟ್ಟಿರುವ ಕೀ ತಗೊಂಡು ಯಾರಿಗೂ ಅನುಮಾನ ಬಾರದ ರೀತಿ ಒಳಗೆ ಎಂಟ್ರಿಯಾಗ್ತಾನೆ. ಮನೆಯಲ್ಲಿದ್ದ ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳು ಸೇರಿ ಎಲ್ಲವನ್ನು ದೋಚಿ ಎಸ್ಕೇಪ್ ಆಗ್ತಾನೆ. ಆದರೆ ಈಗ ಅವನ ನಸೀಬು ಕೆಟ್ಟಿತ್ತು ಅನ್ಸುತ್ತೆ. ಕಳ್ಳತನ ಪ್ರಕರಣದಲ್ಲಿ ಬೈಯಪ್ಪನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಸದ್ಯ ಆರೋಪಿ ಮುನಿಯಪ್ಪನ ವಿಚಾರಣೆ ನಡೆಸಿದ ವೇಳೆ ಇದೇ ರೀತಿಯ 10ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಯಿಂದ 7 ಲಕ್ಷ ಬೆಲೆಬಾಳುವ ಚಿನ್ನಾಭರಣವನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ನೀವು ಏನಾದರೂ ಈ ರೀತಿ ಕೀ ಇಟ್ಟು ಹೋಗ್ತಿದ್ರೆ ಎಚ್ಚರ ವಹಿಸಿ.

  • ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

    ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ – ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ವಿದ್ಯಾರ್ಥಿಗಳು

    ನವದೆಹಲಿ: ಕೋಚಿಂಗ್ ಸೆಂಟರ್ (Coaching Centre) ಒಂದರಲ್ಲಿ ಭಾರೀ ಬೆಂಕಿ (Fire) ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು (Students) ಕಿಟಕಿಯಿಂದ (Window) ಹಾರಿ ಜೀವ ಉಳಿಸಿಕೊಂಡಿರುವ ಘಟನೆ ದೆಹಲಿಯ (Delhi) ಮುಖರ್ಜಿ ನಗರ ಪ್ರದೇಶದಲ್ಲಿ ನಡೆದಿದೆ.

    ನಗರದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಗುರುವಾರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ 12:30ರ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ನಂದಿಸಲು ಹಾಗೂ ರಕ್ಷಣಾ ಕಾರ್ಯಗಳನ್ನು ಮುಂದುವರಿಸಲಾಗಿದೆ.

    ಘಟನೆಗೆ ಸಂಬಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿವೆ. ಜನರು, ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಕಿಟಕಿಗಳ ಮೂಲಕ ರಕ್ಷಣೆ ಮಾಡುತ್ತಿರುವುದು ಕಾಣಿಸಿಕೊಂಡಿದೆ. ಜನರು ಹಗ್ಗಗಳನ್ನು ಬಳಸಿ ಬೆಂಕಿಯಿಂದ ತಪ್ಪಿಸಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್‌ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು

    ಕಟ್ಟಡದ ವಿದ್ಯುತ್ ಮೀಟರ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಂಡ ಕಟ್ಟಡದಿಂದ ತಪ್ಪಿಸಿಕೊಳ್ಳುತ್ತಿದ್ದಾಗ 4 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಸದ್ಯ ಯಾವುದೇ ವ್ಯಕ್ತಿ ಬೆಂಕಿ ತಗುಲಿದ ಕಟ್ಟಡದಲ್ಲಿ ಸಿಲುಕಿಕೊಂಡಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: KRS ಡ್ಯಾಂ ನೀರಿನ ಮಟ್ಟ 5 ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ

  • ಟೇಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್‌ ಪ್ರಯಾಣಿಕ ಅರೆಸ್ಟ್‌

    ಟೇಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್‌ ಪ್ರಯಾಣಿಕ ಅರೆಸ್ಟ್‌

    ಇಸ್ಲಾಮಾಬಾದ್: ಪ್ರಯಾಣಿಕನೊಬ್ಬ ವಿಮಾನ ಟೇಕ್‍ಆಫ್‍ಗೊಳ್ಳುತ್ತಿದ್ದಂತೆ ವಿಮಾನದ ಕಿಟಕಿಗೆ (Window) ಒದ್ದು ಹಾನಿಗೊಳಿಸಿದ ಘಟನೆ ಪಾಕಿಸ್ತಾನ (Pakistan) ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನಲ್ಲಿ ನಡೆದಿದೆ.

    ಪಾಕಿಸ್ತಾನಿ ಪ್ರಯಾಣಿಕನೊಬ್ಬ (Passenger) ಪೇಶಾವರದಿಂದ ದುಬೈಗೆ ತೆರಳುತ್ತಿದ್ದ ವಿಮಾನವನ್ನು ಹತ್ತಿದ್ದ. ಅದು ಟೇಕ್ಆಫ್ ಆಗುತ್ತಿದ್ದಂತೆ ಕ್ಯಾಬಿನ್ ಸಿಬ್ಬಂದಿಯನ್ನು ವಿಮಾನದಿಂದ (Flight) ಕೆಳಗಿಳಿಸಲು ಹೇಳಿದ್ದಾನೆ. ಆಗ ಸಿಬ್ಬಂದಿಯು ಆತನ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೆ ಆತ ಈ ಮಾತಿಗೆ ಬೆಲೆ ಕೊಡದೆ ಸೀಟ್ ಮೇಲೆ ಹತ್ತಿ ವಿಮಾನದ ಕಿಟಕಿಯ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಾನೆ. ಈ ವೇಳೆ ವಿಮಾನದ ಕಿಟಕಿಗೆ ಸ್ವಲ್ಪ ಹಾನಿ ಆಗುತ್ತದೆ. ಇದರಿಂದಾಗಿ ಕೆಲಕಾಲ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.

    ಇನ್ನೊಂದು ವೀಡಿಯೋದಲ್ಲಿ ಆ ವ್ಯಕ್ತಿಯನ್ನು ವಿಮಾನ ಸಿಬ್ಬಂದಿ ಶಾಂತಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಆತ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಬದಲಿಗೆ ಆತ ವಿಮಾನದಲ್ಲೇ ಕೆಳಗೆ ಮಲಗುವುದು, ಮಲಗುವ ಮೊದಲು ಆಜಾನ್ ಕೂಗುತ್ತಾನೆ. ಇದನ್ನೂ ಓದಿ: IAS ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

    ಘಟನೆಗೆ ಸಂಬಂಧಿಸಿ ವಿಮಾನವು ದುಬೈಗೆ ಬರುತ್ತಿದ್ದಂತೆ ಆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಬುಗಿಲೆದ್ದ ಹಿಂದೂ, ಮುಸ್ಲಿಂ ಗಲಾಟೆ – ಹಿಂದೂ ದೇಗುಲಗಳ ಧ್ವಂಸಕ್ಕೆ ಭಾರತ ಖಂಡನೆ

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ

    ಪಾಟ್ನಾ: ರೈಲ್ವೆ(Train) ಪ್ರಯಾಣಿಕನ ಮೊಬೈಲ್ ಕಳವು ಮಾಡಲು ಹೋಗಿ ಸಿಕ್ಕಿಬಿದ್ದು ಕಳ್ಳನೋರ್ವ(Thief) 10 ಕಿ.ಮೀವರೆಗೂ ಜೋತಾಡುತ್ತಾ, ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಫಜೀತಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಸೆಪ್ಟೆಂಬರ್ 14ರಂದು ಬಿಹಾರದಲ್ಲಿ(Bihar) ಈ ಘಟನೆ ನಡೆದಿದ್ದು, ರೈಲಿನ ಕಿಟಕಿ(Window) ಬಳಿ ಕುಳಿತಿದ್ದ ಪ್ರಯಾಣಿಕನ(Passengers) ಮೊಬೈಲ್ ಕಳ್ಳತನ ಮಾಡಲು ಹೋಗಿ ಕಳ್ಳ ಸಿಕ್ಕಿಬಿದ್ದು ತಪ್ಪಿಕೊಳ್ಳಲಾಗದೇ ನರಳಾಡಿದ್ದಾನೆ. ಇದನ್ನೂ ಓದಿ: 8 ವರ್ಷದ ಬಳಿಕ ಗೊತ್ತಾಯ್ತು ತನ್ನ ಪತಿ ಅವನಲ್ಲ ಅವಳು – ಗಂಡನ ಲಿಂಗ ಬದಲಾವಣೆ ತಿಳಿದು ಮಹಿಳೆ ಶಾಕ್

    ರೈಲು ಬೇಗುಸರಾಯ್‍ನಿಂದ(Begusarai) ಖಗರಿಯಾಗೆ (Khagaria) ಹೊರಟಿತ್ತು. ಈ ಮಧ್ಯೆ ಸಾಹೇಬ್‍ಪುರ ಕಮಲ್ (Sahebpur Kamal) ನಿಲ್ದಾಣದ ಬಳಿ ವ್ಯಕ್ತಿ ತನ್ನ ಕೈಯನ್ನು ಕಿಟಕಿ ಒಳಗೆ ಹಾಕಿ ಪ್ರಯಾಣಿಕನ ಮೊಬೈಲ್(Mobile) ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಇದರಿಂದ ಎಚ್ಚೆತ್ತುಕೊಂಡ ಪ್ರಯಾಣಿಕ ಆತನ ಕೈ ಹಿಡಿದುಕೊಂಡಿದ್ದಾನೆ. ಈ ವೇಳೆ ರೈಲು ಚಲಿಸಲು ಆರಂಭಿಸಿದೆ. ಆಗ ಕಳ್ಳ ದಯವಿಟ್ಟು ನನ್ನ ಕೈ ಬಿಡಿ ಎಂದು ಅಳುತ್ತಾ ಬೇಡಿಕೊಂಡಿದ್ದಾನೆ. ಆದರೂ ಪ್ರಯಾಣಿಕ ಆತನ ಕೈ ಬಿಡದೇ ಸತಾಯಿಸಿದ್ದಾನೆ. ಹೀಗಾಗಿ 10 ಕಿ.ಮೀವರೆಗೂ(10 kilometers) ಕಿಟಕಿ ಬಳಿ ತೂಗಾಡುತ್ತಾ, ಜೋತಾಡುತ್ತಾ ಕಳ್ಳ ಬಿಡಿಸಿಕೊಳ್ಳಲು ಸಾಧ್ಯವಾಗದೇ ಒದ್ದಾಡಿದ್ದಾನೆ.

    ಕೊನೆಗೆ 10 ಕಿಲೋಮೀಟರ್‌ಗಳವರೆಗೂ ಹೀಗೆ ಸಾಗಿ ನಂತರ ರೈಲು ಖಗಾರಿಯಾಕ್ಕೆ ಹೋಗುತ್ತಿದ್ದ ವೇಳೆ ಆತನ ಕೈ ಬಿಟ್ಟಿದ್ದಾರೆ. ಕೈ ಬಿಟ್ಟ ಕೂಡಲೇ ಕಳ್ಳ ದಿಕ್ಕಾಪಾಲಾಗಿ ಓಡಿಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು(Police) ಯಾವುದಾದರೂ ಕ್ರಮ ಕೈಗೊಂಡಿದ್ದಾರೆಯೋ ಇಲ್ಲವೋ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಕಾರು – ಮಹಿಳಾ ಟೆಕ್ಕಿಗಳಿಬ್ಬರ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • 5ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ 2 ವರ್ಷದ ಕಂದಮ್ಮನನ್ನು ರಕ್ಷಿಸಿದ – ನಮ್ಮ ಹೀರೋ ಎಂದ ನೆಟ್ಟಿಗರು

    5ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ 2 ವರ್ಷದ ಕಂದಮ್ಮನನ್ನು ರಕ್ಷಿಸಿದ – ನಮ್ಮ ಹೀರೋ ಎಂದ ನೆಟ್ಟಿಗರು

    ಬೀಜಿಂಗ್: ಐದನೇ ಮಹಡಿಯ ಫ್ಲಾಟ್‍ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಎರಡು ವರ್ಷದ ಮಗುವನ್ನು ಹಿಡಿದಿದ್ದಕ್ಕೆ ಚೀನಾದ ವ್ಯಕ್ತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ‘ಹೀರೋ’ ಎಂದು ಪ್ರಶಂಸಿಸಲಾಗುತ್ತಿದೆ.

    ಝೆಜಿಯಾಂಗ್ ಪ್ರಾಂತ್ಯದ ಟೊಂಗ್ ಕ್ಸಿಯಾಂಗ್‍ನಲ್ಲಿ ಈ ಘಟನೆ ನಡೆದಿದೆ. ಈ ವೀರೋಚಿತ ದೃಶ್ಯಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಹೀರೋಗಳು’ ಎಂದು ಸರ್ಕಾರಿ ಅಧಿಕಾರಿ ಕಿರು ಕ್ಲಿಪ್ ಶೇರ್ ಮಾಡಿಕೊಳ್ಳುವಾಗ ಬರೆದುಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ವ್ಯಕ್ತಿಯೊಬ್ಬ ಫೋನ್‍ನಲ್ಲಿ ಮಾತನಾಡುತ್ತಾ ಮಹಿಳೆಯೊಂದಿಗೆ ಬರುತ್ತಿರುತ್ತಾನೆ. ಈ ವೇಳೆ ಕಟ್ಟಡದ ಕಡೆಗೆ ನೋಡಿದಾಗ ಮಗುವೊಂದು ಬೀಳುತ್ತಿರುವುದು ತಿಳಿದುಬರುತ್ತೆ. ಅದಕ್ಕೆ ಕಟ್ಟಡದ ಬಳಿ ಆತ ಮತ್ತು ಮಹಿಳೆ ಓಡಿ ಬರುತ್ತಾರೆ. ತನ್ನ ಫೋನ್ ಕೆಳಗೆ ಎಸೆದು ಮಗುವನ್ನು ಹಿಡಿಯಲು ತನ್ನ ಕೈಗಳನ್ನು ಮೇಲಕ್ಕೆ ಚಾಚುತ್ತಾನೆ. ಮಗುವನ್ನು ಹಿಡಿದುಕೊಳ್ಳಲು ಯಶಸ್ವಿಯಾಗುತ್ತಾನೆ. ಇದನ್ನೂ ಓದಿ:  ಮೂರಂತಸ್ತಿನ ಕಟ್ಟಡದಲ್ಲಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕು – ಯಶಸ್ವಿ ಕಾರ್ಯಾಚರಣೆ 

    ಪೋಸ್ಟ್ ಮಾಡಿದ ನಂತರ, ವೀಡಿಯೋ 1,39,000ಕ್ಕೂ ಹೆಚ್ಚು ಲೈಕ್ ಮತ್ತು ಕಾಮೆಂಟ್ ಬಂದಿದೆ. ವೀಡಿಯೋ ನೋಡಿದವರು, ನಿಜವಾದ ಹೀರೋಗಳು ಕೇವಲ ಸಿನಿಮಾಗಳಲ್ಲಿ ಅಲ್ಲ ಎಂದು ಬರೆದಿದ್ದಾರೆ. ಲೆಜೆಂಡರಿ ಕ್ಯಾಚ್! ಆ ಇಬ್ಬರಿಗೆ ಪದಕ ಕೊಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನ ಮನಸ್ಸು ಅದ್ಭುತ, ಅವರು ರಿಯಲ್ ಲೈಫ್ ಹೀರೋ, ರೀಲ್ ಲೈಫ್ ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಸುರಿಮಳೆಯನ್ನೆ ಸುರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕನೇ ಮಹಡಿಯಲ್ಲಿ ಕಿಟಕಿ ಸ್ವಚ್ಛಗೊಳಿಸ್ತಿದ್ದ ಮಹಿಳೆಯ ವೀಡಿಯೋ ಮಾಡಿದ ಪಕ್ಕದ್ಮನೆ ಆಂಟಿ!

    ನಾಲ್ಕನೇ ಮಹಡಿಯಲ್ಲಿ ಕಿಟಕಿ ಸ್ವಚ್ಛಗೊಳಿಸ್ತಿದ್ದ ಮಹಿಳೆಯ ವೀಡಿಯೋ ಮಾಡಿದ ಪಕ್ಕದ್ಮನೆ ಆಂಟಿ!

    ಲಕ್ನೋ: ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೆ ಇಂದು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಸಾಧನೆ ಹಾದಿಯಲ್ಲಿ ಸಾಗುವ ಮಹಿಳೆ ಹಲವು ಪ್ರಯತ್ನಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುತ್ತಾಳೆ. ಇದೀಗ ಇಲ್ಲೊಬ್ಬ ಮಹಿಳೆ ನಾಲ್ಕನೇ ಮಹಡಿಯಲ್ಲಿ ಕಿಟಕಿ ಸ್ವಚ್ಛಗೊಳಿಸಲು ಮಹಿಳೆಯ ದುಸ್ಸಾಹಸಕ್ಕೆ ಕೈ ಹಾಕಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಬಹುಮಹಡಿ ಕಟ್ಟಡಗಳಿಂದ ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಬೆನ್ನಲ್ಲೇ ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿ ಮಹಿಳೆಯೊಬ್ಬರು ನಾಲ್ಕನೇ ಮಹಡಿಯಲ್ಲಿರುವ ಮನೆಯ ಕಿಟಕಿಯಿಂದ ಹೊರಬಂದು, ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಸ್ವಲ್ಪ ಆಯ ತಪ್ಪಿದರೂ ಮಹಿಳೆ ಕಾಲು ಜಾರಿ ಬೀಳುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಅಪಘಾತ ಕೈತಪ್ಪಿದ್ದು, ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಮಹಿಳೆ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

  • ಎಸ್ಕೇಪ್ ಆಗಲೆಂದು ಸೀರೆ ಇಳಿಬಿಟ್ಟ ಹುಡುಗಿ 6ನೇ ಮಹಡಿಯಿಂದ ಬಿದ್ದು ಗಂಭೀರ!

    ಎಸ್ಕೇಪ್ ಆಗಲೆಂದು ಸೀರೆ ಇಳಿಬಿಟ್ಟ ಹುಡುಗಿ 6ನೇ ಮಹಡಿಯಿಂದ ಬಿದ್ದು ಗಂಭೀರ!

    ಮುಂಬೈ: ಕಟ್ಟಡದ 6ನೇ ಮಹಡಿಯಿಂದ ಕಿಟಕಿ ಮೂಲಕ ಪರಾರಿಯಾಗಲು ಯತ್ನಿಸಿದ ಹುಡುಗಿಯೊಬ್ಬಳು ಬಿದ್ದು ಗಂಭೀರ ಗಾಯಗೊಂಡ ಘಟನೆ ಮುಂಬೈ ನಡೆದಿದೆ.

    ಈ ಘಟನೆ ಮಂಗಳವಾರ ಬೆಳಗ್ಗೆ ಮುಂಬೈನ ವೆರ್ ಸೋವಾ ಎಂಬಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೋಷಕರಿಗೆ ಹೆದರಿಕೊಂಡು ಹುಡುಗಿ ಎಸ್ಕೇಪ್ ಆಗಲು ಯತ್ನಿಸಿ ಇದೀಗ ಗಂಭೀರ ಸ್ಥಿತಿಯಲ್ಲಿದ್ದಾಳೆ. ಇದನ್ನೂ ಓದಿ: ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ

    ತನ್ನ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪೋಷಕರಿಗೆ ಹುಡುಗಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಇದರಿಂದ ಭಯಗೊಂಡ ಆಕೆ, ಹೇಗಾದರೂ ಮಾಡಿ ಮನೆಯಿಂದ ಪರಾರಿಯಾಗುವ ಯೋಚನೆ ಮಾಡುತ್ತಾಳೆ. ಅಂತೆಯೇ ಮಹಡಿಯ ಕಿಟಕಿಯಿಂದ ಸೀರೆಗಳನ್ನು ಒಂದಕ್ಕೊಂದು ಕಟ್ಟಿ ಇಳಿಬಿಡುತ್ತಾಳೆ. ನಂತರ ಇಳಿಯಲು ಯತ್ನಿಸಿದಾಗ ಆಯತಪ್ಪಿ ಆಕೆ ಕೆಳಕ್ಕೆ ಬಿದ್ದಿದ್ದಾಳೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ – 10 ವರ್ಷದ ಬಾಲಕಿ ಪಾರು

    ಕೂಡಲೇ ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಡುಗಿಯ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಹುಡುಗಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ ಎಂಬುದಾಗಿ ವರದಿಯಾಗಿದೆ.

  • ಗೆಳೆಯನೊಂದಿಗೆ ಬೆಡ್‍ರೂಮಿನಲ್ಲಿದ್ದ ಅಪ್ರಾಪ್ತೆ – ತಾಯಿ ಬರ್ತಿದ್ದಂತೆ ಕಿಟಿಕಿಯಿಂದ ಜಂಪ್

    ಗೆಳೆಯನೊಂದಿಗೆ ಬೆಡ್‍ರೂಮಿನಲ್ಲಿದ್ದ ಅಪ್ರಾಪ್ತೆ – ತಾಯಿ ಬರ್ತಿದ್ದಂತೆ ಕಿಟಿಕಿಯಿಂದ ಜಂಪ್

    – ಕಾಲು ಮುರಿದುಕೊಂಡ 17ರ ಹುಡುಗಿ

    ಮುಂಬೈ: ಅಪ್ರಾಪ್ತೆ ಹುಡುಗಿಯೊಬ್ಬಳು ತನ್ನ ತಾಯಿ ಬರುತ್ತಿರುವುದನ್ನು ನೋಡಿ ಮೊದಲ ಮಹಡಿಯ ಫ್ಲಾಟ್‍ನಿಂದ ಹಾರಿರುವ ಘಟನೆ ನಗರದ ಕುರ್ಲಾದಲ್ಲಿ ನಡೆದಿದೆ.

    ಈ ಘಟನೆ ಉಪನಗರ ಬೈಲ್ ಬಜಾರ್ ಪ್ರದೇಶದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 17 ವರ್ಷದ ಹುಡುಗಿ ಗೆಳೆಯನೊಂದಿಗೆ ತನ್ನ ಬೆಡ್‍ರೂಮಿನಲ್ಲಿದ್ದಳು. ಆದರೆ ಸ್ವಲ್ಪ ಸಮಯದ ನಂತರ ಆಕೆಯ ತಾಯಿ ಮನೆಗೆ ಬಂದಿದ್ದಾರೆ. ಇದನ್ನು ಗಮನಿಸಿದ ಹುಡುಗಿ ಭಯಗೊಂಡು ತನ್ನ ಗೆಳೆಯನನ್ನು ಓಡಿಹೋಗುವಂತೆ ಕೇಳಿಕೊಂಡಿದ್ದಾಳೆ.

    ಕೊನೆಗೆ ತಾನೇ ಫ್ಲಾಟ್‍ನ ಕಿಟಕಿಯಿಂದ ಹೊರಗೆ ಹಾರಿದ್ದಾಳೆ. ಈ ವೇಳೆ ಹುಡುಗಿಯ ಎಡಗಾಲು ಮುರಿದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ತನ್ನ ಗೆಳೆಯ ಸುನಿಲ್ ಝೇಂಡೆ (20). ಈತ ನನ್ನ ಜೊತೆ ಬೆಡ್‍ರೂಮಿನಲ್ಲಿದ್ದನು. ತಾಯಿ ಬರುತ್ತಿದ್ದಾರೆ ಎಂದು ತಿಳಿದು ಭಯಗೊಂಡು ಕಿಟಕಿಯಿಂದ ಹಾರಿದೆ ಎಂದು ಹುಡುಗಿ ಒಪ್ಪಿಕೊಂಡಿದ್ದಾಳೆ.

    ಬಾಲಕಿಯ ಕುಟುಂಬವರು ಈ ಕುರಿತು ದೂರು ದಾಖಲಿಸಿದ್ದಾರೆ. ಹೀಗಾಗಿ ನಾವು ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಗೆಳೆಗ ಸುನಿಲ್‍ನನ್ನು ಬಂಧಿಸಿದ್ದೇವೆ ಎಂದು ವಿಬಿ ನಗರ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

  • ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಮತ್ತೆ ಕಲ್ಲು ತೂರಾಟ – ಡ್ರೈವರ್ ಸ್ಕ್ರೀನ್, 7 ಬೋಗಿಗಳ ಗ್ಲಾಸ್ ಜಖಂ!

    ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಮತ್ತೆ ಕಲ್ಲು ತೂರಾಟ – ಡ್ರೈವರ್ ಸ್ಕ್ರೀನ್, 7 ಬೋಗಿಗಳ ಗ್ಲಾಸ್ ಜಖಂ!

    ನವದೆಹಲಿ: ದೇಶದ ಮೊದಲ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಿಡಿಗೇಡಿಗಳು ಮತ್ತೊಮ್ಮೆ ಕಲ್ಲು ತೂರಾಟ ನಡೆಸಿದ್ದಾರೆ.

    2 ತಿಂಗಳಲ್ಲಿ 4ನೇ ಬಾರಿಗೆ ಈ ರೀತಿಯ ಘಟನೆ ನಡೆಯುತ್ತಿದ್ದು, ಉತ್ತರ ಪ್ರದೇಶದ ಅಚಲ್ದಾ ಬಳಿ ಡ್ರೈವರ್ ಸೀಟಿನ ಮುಂಭಾಗದಲ್ಲಿರುವ ಸ್ಕ್ರೀನ್ ಮೇಲೆ ಕಲ್ಲು ತೂರಿ ಒಡೆದು ಹಾಕಿದ್ದಾರೆ. ಇದರ ಜೊತೆಯಲ್ಲೇ 7 ಕೋಚ್ ಗಳ ಒಟ್ಟು 8 ಕಿಟಕಿಗಳ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ.

    ರೈಲು ಅಧಿಕೃತ ಓಡಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ತುಂಡ್ಲಾ ಜಂಕ್ಷನ್ ಬಳಿ ಕಲ್ಲು ತೂರಾಟ ನಡೆದಿತ್ತು. ರೈಲು ಪರೀಕ್ಷಾರ್ಥ ಓಡಾಟ ಆರಂಭ ನಡೆಸಿದ ಸಂದರ್ಭದಲ್ಲಿ 2 ಬಾರಿ ಕಲ್ಲೆಸೆದು ಹಾನಿ ಮಾಡಲಾಗಿತ್ತು.

    ಫೆಬ್ರವರಿ ಮೊದಲ ವಾರದಲ್ಲಿ ಅಲಹಾಬಾದ್ ಪರೀಕ್ಷಾರ್ಥ ಓಡಾಟಕ್ಕಾಗಿ ಶಾಕೂರ್ ಬಸ್ತಿಯಿಂದ ದೆಹಲಿಗೆ ರೈಲು ಆಗಮಿಸುತ್ತಿದ್ದಾಗ ದೆಹಲಿಯ ಲಹೋರಿ ಗೇಟ್ ಬಳಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು. ಎರಡನೇ ಬೋಗಿಗೆ ಕಲ್ಲು ಎಸೆದ ಪರಿಣಾಮ ಕಿಟಕಿಯ ಗ್ಲಾಸ್ ಒಡೆದು ಹೋಗಿತ್ತು. ಈ ಘಟನೆಯಲ್ಲಿ ಯಾರೂ ಗಾಯಗೊಳ್ಳದ ಕಾರಣ ದೂರು ದಾಖಲಿಸಿಕೊಂಡಿರಲಿಲ್ಲ. ಕಳೆದ ಡಿಸೆಂಬರ್ ನಲ್ಲಿ ದೆಹಲಿ ಮತ್ತು ಆಗ್ರಾ ನಡುವಿನ ಪರೀಕ್ಷಾರ್ಥ ಓಡಾಟದ ಸಮಯದಲ್ಲೂ ಕಲ್ಲು ತೂರಾಟ ನಡೆದಿತ್ತು.

    ಪುಲ್ವಾಮಾ ಭಯೋತ್ಪಾದಕರ ದಾಳಿ ನಡೆದ ಮರುದಿನ ಪ್ರಧಾನಿ ನರೇಂದ್ರ ಮೋದಿ ಅವರು ಫೆ.15 ರಂದು ರೈಲಿಗೆ ಹಸಿರು ನಿಶಾನೆ ತೋರಿದ್ದರು. ಫೆ. 17 ರಿಂದ ರೈಲಿನ ವಾಣಿಜ್ಯ ಓಡಾಟ ಆರಂಭವಾಗಿತ್ತು. ಸಂಚಾರ ಆರಂಭಿಸಿದ ಮೊದಲ ದಿನವೇ 2 ವಾರಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿತ್ತು. ಈ ಕುರಿತು ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

    ದೆಹಲಿ ಮತ್ತು ವಾರಣಾಸಿ ಮಧ್ಯೆ ಈ ರೈಲು ಸಂಚರಿಸುತ್ತಿದೆ. 850 ಕಿ.ಮೀ ದೂರದ ಪ್ರಯಾಣಕ್ಕೆ ಈ ಮೊದಲು 14 ಗಂಟೆ ಬೇಕಿದ್ದರೆ ಈ ರೈಲಿನಲ್ಲಿ ಕೇವಲ 8 ಗಂಟೆಯಲ್ಲಿ ಕ್ರಮಿಸಬಹುದು. ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ವಾರದ 5 ದಿನ ಈ ರೈಲು ಸಂಚರಿಸುತ್ತದೆ.

    ರೈಲಿನ ವಿಶೇಷತೆ ಏನು?
    ಭಾರತೀಯ ರೈಲ್ವೇ ವ್ಯವಸ್ಥೆ ಹಳೆ ಕಾಲದ್ದು ಎನ್ನುವ ಟೀಕೆಗೆ ಉತ್ತರ ಎನ್ನುವಂತೆ ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ.

    2018 ರಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಈ ರೈಲುಗಳಿಗೆ `ಟ್ರೈನ್ 18′ ಎಂದು ಆರಂಭದಲ್ಲಿ ಹೆಸರಿಡಲಾಗಿತ್ತು. ಈಗಿನ ರೈಲುಗಳಂತೆ ಈ ರೈಲು ಪ್ರತ್ಯೇಕ ಎಂಜಿನ್ ಹೊಂದಿರುವುದಿಲ್ಲ. ಬದಲಿಗೆ ಮೆಟ್ರೋ ರೈಲುಗಳಂತೆ ವಿದ್ಯುತ್ ಶಕ್ತಿ ಪ್ರತಿ ಚಕ್ರಕ್ಕೂ ಮೋಟಾರುಗಳ (ಟ್ರಾಕ್ಷನ್ ಮೋಟಾರ್) ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ವಿಮಾನದಲ್ಲಿರುವಂತೆ ಕಾಕ್‍ಪಿಟ್‍ನಲ್ಲಿ ನಿಯಂತ್ರಿಸಲಾಗುತ್ತದೆ. ಇದರಿಂದಾಗಿ ವೇಗವಾಗಿ ರೈಲು ಸಂಚರಿಸುತ್ತದೆ.

    ಅಲ್ಯುಮೀನಿಯಂ ಬಾಡಿ ಇರುವ ಕಾರಣ ಕಡಿಮೆ ಭಾರ ಹೊಂದಿದ್ದರಿಂದ ಹೆಚ್ಚಿನ ವೇಗದಲ್ಲಿ ಹೋಗುತ್ತದೆ. ಇದು ಸೆಮಿ ಹೈ ಸ್ಪೀಡ್ ರೈಲಾಗಿರುವ ಕಾರಣ ಗಂಟೆಗೆ 220 ಕಿ.ಮೀ. ವೇಗದವರೆಗೆ ಸಂಚರಿಸುವ ಸಾಮರ್ಥ್ಯವನ್ನು ಪಡೆದಿದೆ. ವಿದೇಶದ ರೈಲುಗಳಲ್ಲಿರುವಂತೆ ವೈಫೈ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ತಿರುಗಿಸಬಹುದಾದ ಸೀಟುಗಳು, ಚಾರ್ಜರ್ ವ್ಯವಸ್ಥೆ, ವೃದ್ಧರಿಗೆ, ಅಂಗವಿಕಲರಿಗೆ ಅನುಕೂಲವಾಗುವಂತೆ ಮಡಚುವ ಮೆಟ್ಟಿಲುಗಳು ಈ ರೈಲಿನಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಗಿಲು ಹಾಕಿ ಬೆತ್ತಲಾದ ಜೋಡಿ ಕಿಟಕಿ ಮುಚ್ಚೋದನ್ನೇ ಮರೆತ್ರು!

    ಬಾಗಿಲು ಹಾಕಿ ಬೆತ್ತಲಾದ ಜೋಡಿ ಕಿಟಕಿ ಮುಚ್ಚೋದನ್ನೇ ಮರೆತ್ರು!

    -ದಾರಿಹೋಕರ ಮೊಬೈಲಿನಲ್ಲಿ ಸೆರೆಯಾಯ್ತು ಜೋಡಿಯ ಸೆಕ್ಸ್

    ಲಂಡನ್: ಯುವ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಕಟ್ಟಡದ ಕಿಟಕಿಯನ್ನು ಮುಚ್ಚೋದನ್ನು ಮರೆತಿದ್ದು, ಅವರಿಬ್ಬರ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ಜನರು ಪಾಪ ಕಿಟಕಿ ಮುಚ್ಚೋದನ್ನ ಮರೆತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಘಟನೆ ಲಂಡನ್ ನಗರದ ಮಾರುಕಟ್ಟೆ ಕೇಂದ್ರ ಸ್ಥಾನದಲ್ಲಿ ನಡೆದಿದ್ದು, ಪಾದಚಾರಿಗಳು ತಮ್ಮ ಮೊಬೈಲ್‍ನಲ್ಲಿ ಜೋಡಿಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, 3 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಕಮೆಂಟ್ ಮಾಡುವ ಮೂಲಕ ಜನ ಜೋಡಿ ವಿರುದ್ಧ ಸಿಡಿದೆದ್ದಿದ್ದಾರೆ.

     

    ಈ ವಿಡಿಯೋಗಾಗಿ ನನ್ನ ಮೊಬೈಲಿನಲ್ಲಿ ಸ್ಪೆಶಲ್ ಸ್ಥಳವನ್ನು ಕಾಯ್ದಿರಿಸುತ್ತೇನೆ ಅಂತಾ ಒಬ್ಬರು ಕಮೆಂಟ್ ಮಾಡಿದ್ರೆ, ರಸ್ತೆಯಲ್ಲಿ ಹೋಗುವರು ಕಣ್ಮುಚ್ಚಿ ಹೋಗ್ತಾರೆ ಅಂತಾ ಜೋಡಿ ತಿಳಿದುಕೊಂಡಿರಬೇಕು ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್ ನಲ್ಲಿ ಕಾಲೆಳೆದಿದ್ದಾರೆ.

    ಇತ್ತೀಚೆಗೆ ಅಮೆರಿಕಾದಲ್ಲಿ ಸ್ಟೀಫನ್ ಎಂಬ 29 ವರ್ಷದ ವ್ಯಕ್ತಿ ರಾತ್ರಿ ಬೆತ್ತಲಾಗಿ ಗೆಳೆತಿ ಜೊತೆ ಟಿವಿ ನೋಡುತ್ತಿದ್ದನು. ಮನೆಯ ಹೊರಗಡೆ ನಿಲ್ಲಿಸಿದ್ದ ತನ್ನ ವಾಹನವನ್ನು ಕಳ್ಳನ್ನೊಬ್ಬ ಕದಿಯಲು ಪ್ರಯತ್ನಿಸಿದ್ದನು. ಗಾಡಿಯ ಸೈರನ್ ಕೂಗುತ್ತಿದ್ದಂತೆ ಸ್ಟೀಫನ್ ಬಟ್ಟೆಯೂ ಧರಿಸದೇ ಓಡಿ ಬಂದು ಕಳ್ಳನನ್ನು ಹಿಡಿದಿದ್ದನು. ಸ್ಟೀಫನ್ ಕಳ್ಳನನ್ನು ಹಿಡಿಯುವ ದೃಶ್ಯಗಳು ಮನೆ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋವನ್ನು ಸ್ಟೀಫನ್ ಗೆಳತಿ ತನ್ನ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv