Tag: Wilson GardenNaga

  • ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    ಪರಪ್ಪನ ಅಗ್ರಹಾರಕ್ಕೆ ಏಕಾಏಕಿ ಸಿಸಿಬಿ ದಾಳಿ: 18 ಮೊಬೈಲ್, ಮಾದಕ ವಸ್ತು, ಹಣ ಸೀಜ್

    – ವಿಲ್ಸನ್‌ಗಾರ್ಡನ್ ನಾಗನದ್ದು ಸೇರಿದಂತೆ 18 ಮೊಬೈಲ್ ಸೀಜ್
    – ಡಿಸಿಪಿ ಸ.ರಾ ಫಾತಿಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ

    ಬೆಂಗಳೂರು: ದರ್ಶನ್ (Actor Darshan) ರಾಜಾತಿಥ್ಯ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಮೊಬೈಲ್ ಸೇರಿದಂತೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದ ದರ್ಶನ್ ಹಾಗೂ ವಿಲ್ಸನ್‌ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ಹದ್ದಿನ ಕಣ್ಣಿದ್ದರು. ಜೊತೆಗೆ ಜೈಲಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಏಕಾಏಕಿ ದಾಳಿ ನಡೆಸಿದ್ದಾರೆ.ಇದನ್ನೂ ಓದಿ: Breaking – ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌!

    ಪರಪ್ಪನ ಅಗ್ರಹಾರ ಜೈಲಿನ ಮೇಲೆ ಆಗ್ನೇಯ ಪೊಲೀಸರಿಂದ ದಾಳಿ ನಡೆದಿದ್ದು, ರಾತ್ರಿ ಏಕಾಏಕಿ ಡಿಸಿಪಿ ಸರಾ ಫಾತಿಮಾ (DCP Sarah Fathima) ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ ನಡೆಸಲಾಗಿದೆ. ಜೈಲಿನಲ್ಲಿ ಮೊಬೈಲ್ ಬಳಕೆಗೆ ಬಲವಾದ ಪುರಾವೆಗಳು ಲಭ್ಯವಾಗಿದ್ದು, ಜೈಲಾಧಿಕಾರಿಗಳ ಕಳ್ಳಾಟ ಮುಂದುವರೆದಿರುವುದು ದಾಳಿ ವೇಳೆ ಸಾಬೀತಾಗಿದೆ.

    ಕುಖ್ಯಾತ ರೌಡಿ ವಿಲ್ಸನ್‌ಗಾರ್ಡನ್ ನಾಗನ (Wilson Garden Naga) ಬ್ಯಾರಕ್ ಅಕ್ಕಪಕ್ಕದಲ್ಲಿ ಮೊಬೈಲ್‌ಗಳು ಪತ್ತೆಯಾಗಿದ್ದು, ಸುಮಾರು 17 ಆಂಡ್ರಾಯ್ಡ್ ಫೋನ್‌ಗಳು ಸಿಕ್ಕಿವೆ. ವಿಲ್ಸನ್ ಗಾರ್ಡನ್ ನಾಗನ ಮೊಬೈಲ್ ಸೇರಿದಂತೆ ಸಹಚರರ ಸುಮಾರು 18 ಮೊಬೈಲ್ ಸೀಜ್ ಮಾಡಿದ್ದಾರೆ. ಜೊತೆಗೆ ಮಾದಕ ವಸ್ತು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇದನ್ನು ಕಂಡು ಖುದ್ದು ಪೊಲೀಸರೇ ಶಾಕ್ ಆಗಿದ್ದಾರೆ. ಇಷ್ಟೆಲ್ಲಾ ಇದ್ದರೂ ವಿಲ್ಸನ್‌ಗಾರ್ಡನ್ ನಾಗನನ್ನು ಬೇರೆ ಕಡೆ ಏಕೆ ವರ್ಗಾವಣೆ ಮಾಡಲಿಲ್ಲ. ಅವನ ಹಿಂದೆ ಯಾರಿದ್ದಾರೆ? ಅವನಿಗೆ ಇಲಾಖೆಯಲ್ಲಿ ಇಷ್ಟೊಂದು ಪ್ರಭಾವವಿದೇಯಾ? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.ಇದನ್ನೂ ಓದಿ: ಶಾಸಕ ಮುನಿರತ್ನ ಬಂಧನ ಪ್ರಕರಣ – ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ: ಡಿಕೆ ಸುರೇಶ್‌

  • ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ: ಸತೀಶ್ ರೆಡ್ಡಿ

    ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ: ಸತೀಶ್ ರೆಡ್ಡಿ

    ಬೆಂಗಳೂರು: ನನ್ನನ್ನ ಕೊಲ್ಲಲು ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ಕಾರಣಗಳು ಇರಬಹುದು ಎಂದು ಸತೀಶ್ ರೆಡ್ಡಿ (Satish Reddy) ತಿಳಿಸಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಘಟನೆಯ ಬಗ್ಗೆ ಸಿಎಂಗೆ ತಿಳಿಸಿದ್ದೇನೆ. ಭದ್ರತೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ಆದರೆ ನನಗೆ ಭದ್ರತೆ ಬೇಡ ಎಂದು ಹೇಳಿದ್ದೇನೆ. ಚುನಾವಣೆ ಸಮೀಪವಿದರಿಂದಾಗಿ ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಆದರೆ ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದರು.

    ನಾನು ಭಯ ಪಡಲ್ಲ. ಇದಕ್ಕೆಲ್ಲ ಹೆದರಲ್ಲ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶವೂ ಇರಬಹುದು. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆರೋಪಿಗಳು ನನ್ನ ಚಲನವಲನ ಮೇಲೆ ಗಮನ ಇಟ್ಟಿದರಂತೆ. ಅವರು ಎಲ್ಲೆಲ್ಲಿ ಓಡಾಡಿದ್ದಾರೆ, ಏನೇನು ಮಾಡಿದಾರೆ ಅಂತ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ ಸುಪಾರಿ ಬಗ್ಗೆ ಮಾತಾಡಿರುವವ ಆಡಿಯೋ ಪೊಲೀಸರಿಗೆ ಸಿಕ್ಕಿದೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಪಾರದರ್ಶಕ ತನಿಖೆ ಆಗಲಿ ಎಂದು ಆಗ್ರಹಿಸಿದರು.

    ನಾನು ಪೂರ್ತಿ ರಾಜಕಾರಣದಲ್ಲೇ ಇದ್ದೇನೆ. ಈಗ ಯಾವುದೇ ಉದ್ಯಮದಲ್ಲಿ ನಾನು ಇಲ್ಲ. ಉದ್ಯಮ ಕಾರಣ ಸುಪಾರಿ ಹಿಂದೆ ಇಲ್ಲ. ರಾಜಕೀಯ ಕಾರಣವೇ ಸುಪಾರಿ ಹಿಂದೆ ಇದೆ. ಪೊಲೀಸರು ತನಿಖೆ ಮಾಡಿ ಅಪರಾಧಿಗಳನ್ನು ಜೈಲಿಗೆ ಕಳಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: 6 ತಿಂಗಳಾದ್ರೂ ಪತ್ನಿಗೆ ಸಂಬಳ ಬಂದಿಲ್ಲ ಎಂದ ವ್ಯಕ್ತಿಗೆ ಸೊಂಟ ಮುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಸಚಿವ

    ಘಟನೆಯೇನು?: ಬಿಜೆಪಿ (BJP) ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಕೊಲೆಗೆ 2 ಕೋಟಿ ರೂ. ಸುಪಾರಿ ನೀಡಿರುವ ಆರೋಪದಲ್ಲಿ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಹೊಳಲ್ಕೆರೆಯಲ್ಲಿ ಬಂಧಿಸಿದ್ದಾರೆ. ಆಕಾಶ್, ಗಗನ್ ಬಂಧಿತ ಆರೋಪಿಗಳು. ಬಂಧಿತರನ್ನು ಕಸ್ಟಡಿಗೆ ಪಡೆದುಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ (ಎ1) ವಿಲ್ಸನ್ ಗಾರ್ಡನ್ ನಾಗ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಾದಪ್ಪನ ದರ್ಶನಕ್ಕೆ ಭಕ್ತರ ದಂಡು- ಹಗ್ಗ ಹಿಡಿದು ನದಿ ದಾಟಿ ಬರುತ್ತಿರೋ ಜನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k