ಮೊನ್ನೆಯಷ್ಟೇ ಭಾರತಕ್ಕೆ ಬಂದಿಳಿದಿರುವ ಆಸ್ಕರ್ ಪ್ರಶಸ್ತಿ ವಿಜೇತ, ಬಾಲಿವುಡ್ ನಟ ವಿಲ್ ಸ್ಮಿತ್, ಭಾರತೀಯ ಸಿನಿಮಾ ರಂಗದ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿದ ವಿಷಯವನ್ನು ಬಹಿರಂಗ ಪಡಿಸದೇ ಇದ್ದರೂ, ಇಬ್ಬರ ಭೇಟಿಗೆ ಕುರುಹು ಎನ್ನುವಂತೆ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ರೆಹಮಾನ್ ಮತ್ತು ವಿಲ್ ಸ್ಮಿತ್ ಭೇಟಿಯಾಗಿದ್ದು ಇದು ಎರಡನೇ ಬಾರಿ. ರೆಹಮಾನ್ ಅವರಿಗೆ ಆಸ್ಕರ್ ಪ್ರಶಸ್ತಿ ದೊರೆತಾಗ ವಿಲ್ ಸ್ಮಿತ್ ಅವರನ್ನು ಹತ್ತಿರದಿಂದ ಭೇಟಿಯಾಗಿದ್ದರಂತೆ. ಈ ವಿಷಯವನ್ನು ಅವರು ಕಪಿಲ್ ಶರ್ಮಾ ಶೋನಲ್ಲಿ ಹೇಳಿಕೊಂಡಿದ್ದರು. ವಿಲ್ ಸ್ಮಿತ್ ಅವರನ್ನು ಹಾಡಿಹೊಗಳಿದ್ದರು. ಅವರೊಬ್ಬ ಅದ್ಭುತ ವ್ಯಕ್ತಿಯೆಂದು ಕೊಂಡಾಡಿದ್ದರು. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

ವಿಲ್ ಸ್ಮಿತ್ ಇದೀಗ ಸದ್ಗುರು ಆಶ್ರಮದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಮನಃಶಾಂತಿಗಾಗಿ ಅವರು ಭಾರತವನ್ನು ಹುಡುಕಿಕೊಂಡು ಬಂದಿದ್ದಾರೆ. ರೆಹಮಾನ್ ಅವರು ಆಗಾಗ್ಗೆ ಸದ್ಗುರು ಆಶ್ರಮಕ್ಕೆ ಹೋಗುತ್ತಲೇ ಇರುತ್ತಾರೆ. ಬಹುಶಃ ಅಲ್ಲಿಯೇ ಇಬ್ಬರೂ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಮಾಹಿತಿಯನ್ನು ರೆಹಮಾನ್ ಹಂಚಿಕೊಂಡಿಲ್ಲ. ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

ಕಳೆದ ತಿಂಗಳು ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿಗೆ ನಿರೂಪಕ ಅಪಹಾಸ್ಯ ಮಾಡಿದರು ಎನ್ನುವ ಕಾರಣಕ್ಕಾಗಿ ವೇದಿಕೆಯ ಮೇಲೆಯೇ ವಿಲ್ ಸ್ಮಿತ್, ನಿರೂಪಕನ ಕಪಾಳಮೋಕ್ಷ ಮಾಡಿದ್ದರು. ಅದು ಭಾರೀ ಸುದ್ದಿ ಆಗಿತ್ತು. ಆಸ್ಕರ್ ಪ್ರಶಸ್ತಿ ಸಮಾರಂಭದಿಂದ ವಿಲ್ ಸ್ಮಿತ್ ಅವರನ್ನು ಬ್ಯಾನ್ ಮಾಡಲಾಗಿತ್ತು. ಅಲ್ಲಿಂದ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿಯೇ ಅವರು ಶಾಂತಿಯನ್ನು ಬಯಸಿ ಭಾರತಕ್ಕೆ ಬಂದಿದ್ದಾರೆ ಎನ್ನುತ್ತವೆ ಮೂಲಗಳು.







ಆಸ್ಕರ್ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಶುಕ್ರವಾರ(ನಿನ್ನೆ) ಆಸ್ಕರ್‌ನಲ್ಲಿ ವಿಲ್ ಸ್ಮಿತ್ ಅವರ ರಾಜೀನಾಮೆ ಕುರಿತು ಚರ್ಚಿಸಲು ಆಡಳಿತ ಮಂಡಳಿಯು ಸಭೆಯನ್ನು ಕರೆದಿತ್ತು. 2022 ಏಪ್ರಿಲ್ 8 ರಿಂದ 10 ವರ್ಷಗಳ ಅವಧಿವರೆಗೂ ಸ್ಮಿತ್ ಅವರನ್ನು ಅಕಾಡೆಮಿ ಪ್ರಶಸ್ತಿಗಳನ್ನು ಒಳಗೊಂಡಂತೆ, ಯಾವುದೇ ಅಕಾಡೆಮಿ ಇವೆಂಟ್‍ಗಳು ಅಥವಾ ಕಾರ್ಯಕ್ರಮಗಳಿಗೆ ಹಾಜರಾಗಲು ಅನುಮತಿ ನೀಡಬಾರದು ಎಂದು ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.












