Tag: wildlife

  • Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    – ಕರ್ನಾಟಕವೂ ಡೇಂಜರ್ ಝೋನ್‌, ಅರಣ್ಯ ಸಂಪತ್ತನ್ನು ಉಳಿಸೋದು ಮಾತ್ರ ಪರಿಹಾರ
    – ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂಬರ್ 1, ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನ

    ಬೆಂಗಳೂರು: ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರಿಗೆ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಹುತಾತ್ಮರ ದಿನಾಚರಣೆ (National Forest Martyrs Day) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 62 ಜನ ಹುತಾತ್ಮರಾಗಿದ್ದಾರೆ. ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರು ಇವರು. ಹುತಾತ್ಮರಾದವರಿಗೆ 50 ಲಕ್ಷ ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಹೋಗುವಂತಿದೆ ಈ ದೃಶ್ಯ

    ಈಗ ಹವಾಮಾನ ಬದಲಾವಣೆ ದೊಡ್ಡ ಮಟ್ಟದ ಸಮಸ್ಯೆಯಾಗುತ್ತಿದೆ. ಏಕಾಏಕಿ ಮೇಘಸ್ಫೋಟ, ಅತಿಯಾದ ಮಳೆ ಬರುತ್ತಿದೆ. ಮನುಕುಲವೇ ನಾಶವಾಗುವ ಪರಿಸ್ಥಿತಿ ಉಂಟಾಗುತ್ತಿದೆ. ಕರ್ನಾಟಕವೂ (Karnataka) ಕೂಡ ಡೇಂಜರ್ ಝೋನ್‌ನಲ್ಲಿದೆ. ಭೂ ಕುಸಿತ ಸಂಭವಿಸುತ್ತಿದೆ. ಅರಣ್ಯ ಸಂಪತ್ತನ್ನು ಉಳಿಸೋದು ಮಾತ್ರ ಇದಕ್ಕೆ ಪರಿಹಾರ. ರಾಜ್ಯದಲ್ಲಿ ಸಂಪತ್ತು ಭರಿತವಾದ ಅರಣ್ಯವಿದೆ. ಪಶ್ಚಿಮ ಘಟ್ಟದಲ್ಲಿ ವಿವಿಧ ಪ್ರಭೇದ ಜೀವ ವೈವಿಧ್ಯ ತಾಣಗಳು ಇದೆ. ಮಳೆ ಮಾರುತವನ್ನು ಬದಲಾವಣೆ ಮಾಡಿ, ಮಳೆಯನ್ನು ತರಿಸುವ ಶಕ್ತಿ ಪಶ್ಚಿಮ ಘಟ್ಟಗಳಿಗೆ ಇದೆ. 2 ಲಕ್ಷ ಎಕ್ರೆ ಭೂಮಿಯ ಒತ್ತುವರಿಯಾಗಿದೆ. ಮೂವತ್ತು- ನಲವತ್ತು ಸಾವಿರ ಎಕ್ರೆ ಭೂಮಿಯನ್ನು ಮರುವಶಪಡಿಸಿಕೊಂಡು ಸಂರಕ್ಷಿತ ತಾಣ ಅಂತಾ ಘೋಷಿಸಿದ್ದೇವೆ ಎಂದರು. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ-ಪಾಕ್‌ ಪಂದ್ಯ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

    ಐದು ಹುಲಿಗಳು ಮೃತಪಟ್ಟಿದ್ದು ಬಹಳ ನೋವಾಗಿತ್ತು. ಸಿಎಂ ಕೂಡ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಅರಣ್ಯ ಭೂಮಿ ಕಡಿಮೆ ಇದೆ. ಹೀಗಾಗಿ ಇದರೆ ಬಗ್ಗೆಯೂ ವ್ಯವಸ್ಥೆಗೆ ಅಧ್ಯಯನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

  • ಘರ್ಜಿಸುವ ಹುಲಿ ಸಂರಕ್ಷಣೆಗೆ ಬೇಕಿದೆ ಬಲ; ಸಹ್ಯಾದ್ರಿ-ಕೊಂಕಣ ಕಾರಿಡಾರ್‌ ಪ್ಲ್ಯಾನ್‌ ಹೇಗಿದೆ ನೋಡಿ..

    ಘರ್ಜಿಸುವ ಹುಲಿ ಸಂರಕ್ಷಣೆಗೆ ಬೇಕಿದೆ ಬಲ; ಸಹ್ಯಾದ್ರಿ-ಕೊಂಕಣ ಕಾರಿಡಾರ್‌ ಪ್ಲ್ಯಾನ್‌ ಹೇಗಿದೆ ನೋಡಿ..

    ʻʻಮೃತ ಹೆಂಗಸಿನ ಕಾಲುಗಳು ಮೆಲ್ಲನೆ ನನ್ನ ಕೆನ್ನೆ ತಟ್ಟಿದವು ಒಂದೇ ಒಂದು ಶಬ್ಧವೂ ಇಲ್ಲ. ಮತ್ತೆ ಕಾಲುಗಳು ಅಲ್ಲಾಡಿದವು ಶವ ಸಜೀವವಾಗುತ್ತಿದೆಯೇ? ಅಂತ ನನಗೆ ಗಾಬರಿಯಾಯ್ತು. ಕೋವಿ, ಟಾರ್ಚನ್ನು ತೆಗೆದುಕೊಂಡು ಅಲ್ಲಾಡುವ ಹೆಣದ ಪಕ್ಕದಿಂದೆದ್ದು ಓಡಬೇಕು. ಅಷ್ಟರಲ್ಲಿ ನನ್ನ ವಾಸ್ತವ ಪ್ರಜ್ಞೆ ಮರಳಿತು. ಆ ಕಾಲು ಮತ್ತು ವಾರಸುದಾರರು ಸಜೀವಗೊಂಡಿಲ್ಲ. ನರಭಕ್ಷಕ ಅನ್ನು ಸಜೀವಗೊಂಡಂತೆ ಅಲ್ಲಾಡಿಸುತ್ತಿದೆ. ಶವದ ಅಲುಗಾಟಕ್ಕೆ ಕಾರಣ ನನ್ನ ತಲೆಗೆ ಹೊಳೆಯುವ ಹೊತ್ತಿಗಾಗಲೇ ಬೆವರಿನಿಂದ ನನ್ನ ಮೈಯೆಲ್ಲಾ ತೊಯ್ದುಹೋಗಿತ್ತುʼʼ.

    ಅಬ್ಬಬ್ಬಾ ಪೂರ್ಣಚಂದ್ರ ತೇಜಸ್ವಿ ಅವರ ʻಬೆಳ್ಳಂದೂರಿನ ನರಭಕ್ಷಕʼ ಅನುವಾದ ಕೃತಿಯಲ್ಲಿ ಬರುವ ಈ ದೃಶ್ಯವನ್ನು ಓದಿದರೆ ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ನೂರಾರು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಮೈ ರೋಮಾಂಚನಗೊಳ್ಳುತ್ತದೆ. ಆದ್ರೆ ಮನುಷ್ಯನಲ್ಲಿ ನಾಗರಿಕತೆ ಬೆಳೆದಂತೆ ವನ್ಯ ಜೀವಿಗಳ ಆವಾಸಸ್ಥಾನಕ್ಕೆ ಕುತ್ತು ಬರುತ್ತಿವೆ. ಅದರಲ್ಲೂ ರಾಷ್ಟ್ರೀಯ ಪ್ರಾಣಿ (National Animal) ಎಂದೇ ಗುರುತಿಸಿಕೊಂಡಿರುವ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ಕೆಲವು ಕಾಡುಗಳಲ್ಲಿ ವಂಶಾಭಿವೃದ್ಧಿಯೇ ಅಳಿಸಿಹೋಗುತ್ತಿದೆ ಎಂದು ವನ್ಯಜೀವಿ (Wildlife) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದ ಪಶ್ಚಿಮ ಪ್ರದೇಶದ ಏಕೈಕ ಹುಲಿ ಸಂರಕ್ಷಿತ ಪ್ರದೇಶವಾದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Sahyadri Tiger Reserve) ಹುಲಿಗಳ ಸಂತತಿಯನ್ನು ಪುನರುಜ್ಜೀವನಗೊಳಿಸಲು ರಾಜ್ಯದ ಅರಣ್ಯ ಇಲಾಖೆಯು ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ರಾಜ್ಯದ ಅರಣ್ಯ ಇಲಾಖೆಯು ಚಂದ್ರಾಪುರ ಜಿಲ್ಲೆಯ ತಡೋಬಾ-ಅಂಧಾರಿ ಹುಲಿ ಸಂರಕ್ಷತ ಪ್ರದೇಶದಿಂದ ಹುಲಿಗಳನ್ನು ಸ್ಥಳಾಂತರಿಸುವ ಕಾರಿಡಾರ್‌ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಆದರೆ ʻಸಹ್ಯಾದ್ರಿ ಕೊಂಕಣ ವೈಲ್ಡ್‌ಲೈಫ್‌ ಕಾರಿಡಾರ್‌ʼ (Sahyadri-Konkan wildlife corridor) ಯೋಜನೆಗೆ ಮಹಾರಾಷ್ಟ್ರವೊಂದೇ ಅಲ್ಲ. ಕರ್ನಾಟಕ, ಗೋವಾ ಅರಣ್ಯ ಇಲಾಖೆಗಳೂ ಒಟ್ಟಾಗಿ ಕಾರ್ಯನಿರ್ವಹಿಸಿದ್ರೆ ಈ ಯೋಜನೆ ಯಶಸ್ವಿಯಾಗುತ್ತದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಅಷ್ಟಕ್ಕೂ ವನ್ಯಜೀವಿ ಕಾರಿಡಾರ್‌ ಯೋಜನೆಯ ಪ್ರಯೋಜನಗಳೇನು? ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹುಲಿಗಳನ್ನು ಸ್ಥಳಾಂತರಿಸುವ ಯೋಜನೆ ಹಾಕಿಕೊಂಡಿದ್ದೇಕೆ? ಈ ಯೋಜನೆ ಹುಲಿ ಸಂರಕ್ಷಣೆಗೆ ಹೇಗೆ ಪಾತ್ರವಹಿಸುತ್ತದೆ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಸಹ್ಯಾದ್ರಿ ಹುಲಿಸಂರಕ್ಷಿತ ಪ್ರದೇಶ ಹೇಗಿದೆ?

    ಉತ್ತರ ಭಾರತದ ಪಶ್ಚಿಮ ಘಟ್ಟಗಳಲ್ಲಿ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ ನೆಲೆಗೊಂಡಿದೆ. 2010ರಲ್ಲಿ ಈ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಮಾಡಲಾಯಿತು. ಇದು ಮಹಾರಾಷ್ಟ್ರದ ಕೊಲ್ಲಾಪುರ, ಸತಾರಾ, ಸಾಂಗ್ಲಿ ಮತ್ತು ರತ್ನಗಿರಿ ಜಿಲ್ಲೆಗಳನ್ನು ವ್ಯಾಪಿಸಿದೆ. ಅಲ್ಲದೇ ಚಂದೋಲಿ ರಾಷ್ಟ್ರೀಯ ಉದ್ಯಾನವನ ಮತ್ತು ಕೊಯ್ನಾ ವನ್ಯಜೀವಿ ಅಭಯಾರಣ್ಯಗಳೊಂದಿಗೆ ತನ್ನ ವ್ಯಾಪ್ತಿಯನ್ನು ಹಂಚಿಕೊಂಡಿದೆ. ಕಳ್ಳಬೇಟೆ, ಬದಲಾಗುತ್ತಿರುವ ಆವಾಸಸ್ಥಾನ, ಸಂತಾನೋತ್ಪತ್ತಿ ಕುಂಠಿತಗೊಂಡಿದ್ದರಿಂದಾಗಿ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯಕ್ಕೆ ಸಿಕ್ಕಿರುವ ಫೋಟೋ ಸಾಕ್ಷ್ಯಗಳ ಪ್ರಕಾರ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ 7-8 ಹುಲಿಗಳು ಮಾತ್ರ ಇವೆ ಎಂದು ಅಂದಾಜಿಸಲಾಗಿದೆ. ಅದಕ್ಕಾಗಿಯೇ ಮಹಾರಾಷ್ಟ್ರ ಅರಣ್ಯ ಇಲಾಖೆಯು ಹುಲಿಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇಲ್ಲಿನ ಹುಲಿಗಳ ಸಂಖ್ಯೆ ಹೆಚ್ಚಿಸಲು ಕರ್ನಾಟಕ ಮತ್ತು ಗೋವಾ ಅರಣ್ಯ ಪ್ರದೇಶಗಳಿಂದ ಹುಲಿಗಳನ್ನು ಸ್ಥಳಾಂತರಿಸುವ ಕೆಲಸ ಆಗಬೇಕು. ಇದರೊಂದಿಗೆ ಹುಲಿಗಳ ಸಂತಾನೋತ್ಪತ್ತಿಗೆ ಸೂಕ್ತ ವಾತಾವರಣವನ್ನೂ ಕಲ್ಪಿಸಿಕೊಟ್ಟಲ್ಲಿ, ಈ ಯೋಜನೆ ಯಶಸ್ವಿಯಾಲಿದೆ ಎಂದು ತಜ್ಞರು ಹೇಳುತ್ತಾರೆ.

    ದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ?

    2006 ರಿಂದಲೂ ದೇಶದಲ್ಲಿ ಹುಲಿಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಹೌದು. 2006ರಲ್ಲಿ ಹುಲಿಗಳ ಸಂಖ್ಯೆ 1,411 ಆಗಿತ್ತು. ಆ ನಂತರ 2010 ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಇದ್ದ ಹುಲಿಗಳ ಸಂಖ್ಯೆ 2022ರ ಅಂಕಿ ಅಂಶದ ಪ್ರಕಾರ 3,682ಕ್ಕೆ ಹುಲಿಗಳ ಸಂಖ್ಯೆ ಏರಿಕೆಯಾಗಿದೆ.

    ಹುಲಿಗಳ ಸ್ಥಳಾಂತರ ಉತ್ತಮ ವಿಧಾನವೇ?

    ಭಾರತದಲ್ಲಿ 2008 ರಿಂದ ಹುಲಿಗಳ ಸ್ಥಳಾಂತರ (translocate tigers) ಯೋಜನೆಯನ್ನು ಪ್ರಾರಂಭಿಸಲಾಯಿತು. 2008ರಲ್ಲಿ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶ, 2009ರಲ್ಲಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಯೋಜನೆ ಯಶಸ್ವಿಯಾಗಿರುವ ಉದಾಹರಣೆಯೂ ಇದೆ. ಅಲ್ಲದೇ ದೇಶದಲ್ಲೇ ಮೊದಲ ಅಂತರರಾಜ್ಯ ಸ್ಥಳಾಂತರ ಯೋಜನೆಗೆ ಕೈಹಾಕಿ ಒಡಿಶಾದ ಸತ್ಕೋಸಿಯಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯೋಜನೆ ವೈಫಲ್ಯ ಅನುಭವಿಸಿದ ಉದಾಹರಣೆಯೂ ಇದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಜಿ ಸದಸ್ಯ ಕಾರ್ಯದರ್ಶಿ ಅನುಪ್ ನಾಯಕ್, ಹುಲಿಗಳ ಸ್ಥಳಾಂತರ ಉಪಕ್ರಮವು ದೀರ್ಘಾವಧಿ ಯೋಜನೆಯಾಗಿದ್ದು, ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಮೊದಲಿಗೆ ಹುಲಿಗಳ ಆವಾಸಸ್ಥಾ ಸುಧಾರಣೆ, ಕಳ್ಳಬೇಟೆಯಿಂದ ರಕ್ಷಣೆ, ಹುಲಿ ಸಂರಕ್ಷಿತಾರಣ್ಯಗಳ ಅಭಿವೃದ್ಧಿಪಡಿಸುವಂತಹ ಆಯ್ಕೆಗಳನ್ನು ನಿರ್ಣಿಸಬೇಕು. ಹುಲಿಗಳನ್ನು ಸ್ಥಳಾಂತರಿಸುವುದರಿಂದ ಒಳ್ಳೆಯದ್ದು ಆಗಬಹುದು, ವಿಫಲವೂ ಆಗಬಹುದು. ಹಾಗಾಗಿ ಅದನ್ನು ಕೊನೇ ಆಯ್ಕೆಯಾಗಿ ಇಟ್ಟುಕೊಳ್ಳಬೇಕು. ಸ್ಥಳಾಂತರಿಸಿದ ನಂತರವು ಅವು ಜನವಸತಿ ಪ್ರದೇಶಗಳಿಂದ ಮುಕ್ತವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಕೈಹಾಕಬೇಕು ಎಂದು ಸಲಹೆ ನೀಡಿದ್ದಾರೆ.

    ಜನರನ್ನೂ ಕೊಂದಿತ್ತು.. ಹುಲಿಯೂ ಸತ್ತಿತ್ತು..

    ಈ ಹಿಂದೆ ಸತ್ಕೋಸಿಯಾ ಮೀಸಲು ಅರಣ್ಯದಲ್ಲಿ ಹುಲಿಗಳನ್ನು ಸ್ಥಳಾಂತರಿಸುವ ಯೋಜನೆ ವಿಫಲವಾಗಿತ್ತು. 2018ರಲ್ಲಿ ಕನ್ಹಾ ಸಂರಕ್ಷಿತ ಪ್ರದೇಶದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿಯನ್ನು ಸತ್ಕೋಸಿಯಾ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದ್ರೆ ಕಳಪೆ ನಿರ್ವಹಣೆಯಿಂದಾಗಿ ಹುಲಿಗಳು ಸ್ಥಳೀಯರ ಮೇಲೆ ದಾಳಿ ಮಾಡತೊಡಗಿದ್ದವು, ಕೆಲವರನ್ನು ಕೊಂದುಹಾಕಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಅಲ್ಲಿದ್ದ ʻಮಹಾವೀರ್‌ʼ ಎಂಬ ಗಂಡು ಹುಲಿ ಉರುಳಿಗೆ ಸಿಕ್ಕಿ ಸಾವನ್ನಪ್ಪಿತ್ತು. ಬಳಿಕ ಈ ಯೋಜನೆಯ ಪ್ರಸ್ತಾಪವನ್ನೇ ನಿಲ್ಲಿಸಲಾಗಿತ್ತು.

    ಸಹ್ಯಾದ್ರಿ-ಕೊಂಕಣ ಕಾರಿಡಾರ್‌ನ ಪ್ರಾಮುಖ್ಯತೆ ಏನು?

    ಈ ಯೊಜನೆಯು ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಜೊತೆಗೆ ಸಹ್ಯಾದ್ರಿ, ರಾಧನಗರಿ, ಗೋವಾ, ಕರ್ನಾಟಕ, ಕಾರಿಡಾರ್‌ ಮತ್ತು ಪಶ್ಚಿಮ ಘಟ್ಟಗಳಲ್ಲಿ ದೀರ್ಘಾವಧಿವರೆಗೆ ಸಂರಕ್ಷಣೆ ಮಾಡುವ ಉದ್ದೇಶವಾಗಿದೆ. ಈ ಕಾರಿಡಾರ್‌ ಕರ್ನಾಟಕದ ʻಕಾಳಿʼ ಸಂರಕ್ಷಿತ ಪ್ರದೇಶ ಹಾಗೂ ಗೋವಾ ಒಳನಾಡಿನ ಕಾಡುಗಳನ್ನೂ ಸಂಪರ್ಕಿಸುತ್ತದೆ. ಜೊತೆಗೆ ರಾಧಾನಗರಿ ವನ್ಯಜೀವಿ ಅಭಯಾರಣ್ಯ, ಸಿಂಧುದುರ್ಗ ಜಿಲ್ಲೆಯ ಸಂರಕ್ಷಣಾ ಮೀಸಲು ಪ್ರದೇಶವನ್ನು ಸಂಪರ್ಕಿಸುತ್ತದೆ. ಈ ಕಾರಿಡಾರ್‌ಗಳು ವನ್ಯಜೀವಿಗಳಿಗೆ ಮಾತ್ರವಲ್ಲದೇ ಗೋವಾ ಮತ್ತು ಕರ್ನಾಟಕದ ಈ ಕಾಡುಗಳ ಸುತ್ತ ವಾಸಿಸುವ ಸಮುದಾಯಗಳ ನೀರಿನ ಸಂರಕ್ಷಣೆಗೂ ಸಹಾಯಕವಾಗಲಿದೆ. ಆದ್ದರಿಂದ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ನಡುವೆ ಉತ್ತಮ ಸಮನ್ವಯತೆಯ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

    ಹುಲಿಗಳ ಯೋಜನೆಗೆ ಆಯ್ಕೆ ಹೇಗೆ?

    ಹುಲಿಯೋಜನೆ ಸಂರಕ್ಷಿತ ಪ್ರದೇಶ ಆಯ್ಕೆಗೆ ಮಾನಂದಡವಾಗಿದ್ದು ಹುಲಿಗಳ ಸಂಖ್ಯೆಯ ಜತೆಗೆ ವಾಸಕ್ಕೆ ಪೂರಕವಾದ ಅಲ್ಲಿನ ದಟ್ಟಾರಣ್ಯದ ಪ್ರಮಾಣ. ಇದನ್ನು ಗಮನಿಸಿಯೇ ಮೊದಲ ಹಂತದಲ್ಲಿ 9 ಪ್ರದೇಶ ಗುರುತಿಸಲಾಯಿತು. ಇನ್ನಷ್ಟು ಅರಣ್ಯಗಳಲ್ಲಿ ಹುಲಿ ಸಂರಕ್ಷಣೆ ಸಾಧ್ಯವಿದೆ ಎನ್ನುವ ಮಾಹಿತಿ ಆಧರಿಸಿ ವಿಸ್ತರಿಸಲಾಗಿದೆ. ಜನಸಮುದಾಯದಿಂದ ಮುಕ್ತವಾದ ವನ್ಯಜೀವಿಗಳಿಗೆ ಮಾತ್ರ ಮೀಸಲಾದ ಸ್ಥಳ ನಿಗದಿಪಡಿಸುವ (ಕೋರ್ ಬಫರ್) ಲೆಕ್ಕಾಚಾರದ ಮೇಲೆಯೇ ಹುಲಿ ಸಂರಕ್ಷಿತ ಪ್ರದೇಶ ಗುರುತಿಸಲಾಗಿದೆ.

    ಹುಲಿ ಯೋಜನೆಯಿಂದ ಪ್ರಯೋಜನವೇನು?

    ಹುಲಿ ಯೋಜನೆ ಅನುಷ್ಠಾನಗೊಂಡ ನಂತರ ಸಂಪೂರ್ಣ ಅಳಿವಿನ ಅಂಚಿಗೆ ತಲುಪಿದ್ದ ಹುಲಿಯನ್ನು ಸಂರಕ್ಷಿಸಲು ಸಾಧ್ಯವಾಗಿದೆ. ಈಗ ಹುಲಿಗೂ ತನ್ನದೇ ಪ್ರದೇಶದಲ್ಲಿ ನೆಮ್ಮದಿಯಿಂದ ಬದುಕುವ ಅವಕಾಶ. ಬಂಡೀಪುರ, ನಾಗರಹೊಳೆ, ರಣ ತಂಭೋರ್‌, ಕನ್ಹಾ ಸೇರಿದಂತೆ ಹಲವು ಪ್ರದೇಶಗಳು ಹುಲಿ ಸಂರಕ್ಷಣೆ ಮತ್ತು ವಂಶಾಭಿವೃದ್ಧಿಗೆ ಯೋಗ್ಯವಾದ ಸ್ಥಳಗಳಾಗಿವೆ. ಹುಲಿ ಯೋಜನೆ ಜಾರಿಗೊಳಿಸಿದ ಕೆಲವೇ ವರ್ಷದಲ್ಲಿ ಸುರಕ್ಷಿತ ವಲಯ ರೂಪುಗೊಂಡು ಹುಲಿಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ.

    – ಮೋಹನ ಬನ್ನಿಕುಪ್ಪೆ, ಮೈಸೂರು

  • ವನ್ಯಜೀವಿ ಅಂಗಾಂಗ ವಾಪಸ್ ಮಾಡಲು 3 ತಿಂಗಳು ಅವಕಾಶ: ಈಶ್ವರ್ ಖಂಡ್ರೆ

    ವನ್ಯಜೀವಿ ಅಂಗಾಂಗ ವಾಪಸ್ ಮಾಡಲು 3 ತಿಂಗಳು ಅವಕಾಶ: ಈಶ್ವರ್ ಖಂಡ್ರೆ

    ಬೆಂಗಳೂರು: ಸಾರ್ವಜನಿಕರ ಬಳಿ ಇರುವ ವನ್ಯಜೀವಿ (Wildlife) ಅಂಗಾಂಗಗಳನ್ನು ಅರಣ್ಯ ಇಲಾಖೆಗೆ (Forest Department) ವಾಪಸ್ ಮಾಡಲು 3 ತಿಂಗಳ ಅವಧಿ ನೀಡಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshawr Khandre) ನೇತೃತ್ವದಲ್ಲಿ ಇಂದು ವಿಕಾಸ ಸೌಧದಲ್ಲಿ ಸಭೆ ನಡೆಸಿ 3 ತಿಂಗಳ ಕಾಲಾವಕಾಶ ಕೊಡುವ ನಿರ್ಧಾರ ಮಾಡಲಾಗಿದೆ.

    ಅರಣ್ಯ ಇಲಾಖೆ, ಕಾನೂನು ಇಲಾಖೆ ಸಭೆ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಅಂಗಾಗ ವಾಪಸ್ ಕೊಡಲು ಕೊನೇ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ. ಒನ್ ಟೈಂ ಪ್ರಾಣಿ ಅಂಗಾಂಗ ಹಿಂತಿರುಗಿಸಲು 3 ತಿಂಗಳು ಸಮಯ ಕೊಡಲು ತೀರ್ಮಾನ ಆಗಿದೆ. ಕಾನೂನು ಇಲಾಖೆ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರ ನೆತ್ತಿಗೇರಿದೆ, ಅದಕ್ಕೆ ಸಂಸದರನ್ನ ಅಮಾನತು ಮಾಡಿದೆ: ಈಶ್ವರ್ ಖಂಡ್ರೆ

    ಯಾವುದೇ ಅಂಗಾಂಗ ಇದ್ದರೂ ಜನರು ವಾಪಸ್ ಕೊಡಬೇಕು. 1978 ಹಿಂದಿನಿಂದ ಪ್ರಾಣಿ ಅಂಗಾಂಗ ಇರೋರಿಗೆ ಈ ಅವಕಾಶ ಕೊಡಲಾಗಿದೆ. ಅಂಗಾಗ ವಾಪಸ್ ಮಾಡಿದರೆ ಕೇಸ್ ಹಾಕಲ್ಲ, ದಂಡವೂ ಹಾಕಲ್ಲ ಎಂದು ಸ್ಪಷ್ಟಪಡಿಸಿದರು. ವನ್ಯಜೀವಿ ಅಂಗಾಂಗಗಳು ವಾಪಸ್ ಪಡೆದ ಬಳಿಕ ಅದನ್ನು ಸಂಪೂರ್ಣವಾಗಿ ನಾಶ ಮಾಡುತ್ತೇವೆ. ಅದನ್ನು ಸರ್ಕಾರದ ಬಳಿ ಇಟ್ಟುಕೊಳ್ಳುವ ಹಾಗೆ ಇಲ್ಲ. ವನ್ಯಜೀವಿ ಅಂಗಾಂಗ ಸಂಗ್ರಹ ಆದ ಬಳಿಕ ಸಿಎಂ ಸಮ್ಮುಖದಲ್ಲಿ ಅದನ್ನು ನಾಶ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರಜೋಳರ ಮೇಲೆ ಹಲ್ಲೆ ಯತ್ನದ ಹಿಂದೆ ಡಾ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಕೈವಾಡ- ಪಿ.ರಾಜೀವ್ ಆರೋಪ

  • ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ

    ನಕಲಿ ಹುಲಿ ಉಗುರು ಧರಿಸದಂತೆ ಈಶ್ವರ್ ಖಂಡ್ರೆ ಮನವಿ – ಸರ್ಕಾರಕ್ಕೆ ಮರಳಿಸಲು ಅವಕಾಶಕ್ಕೆ ಚಿಂತನೆ

    ಬೆಂಗಳೂರು: ಹುಲಿ ಉಗುರಿನ (Tiger Claw) ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಇದು ಅಪರಾಧ ಎಂಬ ಅರಿವೇ ಇಲ್ಲ ಎಂಬುದು ಗೋಚರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwara Khandre) ತಿಳಿಸಿದ್ದಾರೆ.

    ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಟ್ರೋಫಿ, ಫಲಕ, ಪೆಂಡೆಂಟ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲೀಕತ್ವದ ಹಕ್ಕು ಪಡೆದುಕೊಳ್ಳಲು 2003 ರವರೆಗೆ ಹಲವು ಅವಕಾಶ ನೀಡಲಾಗಿತ್ತು. ಹಲವರು ತಮ್ಮ ಬಳಿ ಇದ್ದ ವನ್ಯಜೀವಿ ಉತ್ಪನ್ನಗಳಿಗೆ ಮಾಲೀಕತ್ವದ ಹಕ್ಕು ಪಡೆದಿದ್ದಾರೆ. ಇನ್ನೂ ಅನೇಕರು ದೃಢೀಕರಣ ಮತ್ತು ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೇಳಿದರು.

    ಗ್ರಾಮೀಣ ಪ್ರದೇಶದ ಕೆಲವರ ಮನೆಗಳಲ್ಲಿ ಜಿಂಕೆ ಚರ್ಮ, ಆನೆ ದಂತದಿಂದ ಮಾಡಿದ ಕಲಾಕೃತಿಗಳು, ಜಿಂಕೆ ಮತ್ತು ಸಾರಂಗದ ಕೊಂಬು ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಅಪರಾಧ ಎಂಬುದೂ ಅವರಿಗೆ ತಿಳಿದಿಲ್ಲ. ವರ್ತೂರು ಸಂತೋಷ್ ಪ್ರಕರಣ ವರದಿಯಾದ ಬಳಿಕ, ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತಿವೆ. ಕಾನೂನಿನ ಅರಿವಿಲ್ಲದ ಶ್ರೀಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ಒಂದು ಬಾರಿ ಕೊನೆಯದಾಗಿ ಇಂತಹ ಅಕ್ರಮ ಸಂಗ್ರಹಣೆ/ದಾಸ್ತಾನಿನ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮತ್ತು ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡುವ ಬಗ್ಗೆ ಪರಾಮರ್ಶಿಸಿ, ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

    ಅಳಿವಿನಂಚಿನಲ್ಲಿರುವ, ಅಮೂಲ್ಯ ಮತ್ತು ಅಪರೂಪದ ವನ್ಯ ಜೀವಿಗಳಾದ ಹುಲಿ, ಚಿರತೆ, ಚಿಂಕಾರ, ಕೃಷ್ಣಮೃಗ, ಸಾಂಬಾರ್, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನು ಪರಿಶಿಷ್ಟ 1 ರಲ್ಲಿ ಪಟ್ಟಿ ಮಾಡಲಾಗಿದ್ದು, ಇಂತಹ ಪ್ರಾಣಿಗಳನ್ನು ಕೊಲ್ಲುವುದು, ಬೇಟೆ ಆಡುವುದು, ಅಂತಹ ಪ್ರಾಣಿಗಳ ದೇಹದ ಯಾವುದೇ ಭಾಗದಿಂದ ತಯಾರಿಸಿದ ವಸ್ತುವನ್ನು ಅಲಂಕಾರಿಕವಾಗಿ ಮನೆಯಲ್ಲಿಡುವುದು, ಧರಿಸುವುದು ಕೂಡ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.

    ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರಿಗೂ ಕಾನೂನು ಸಮಾನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗಣ್ಯರೂ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನು ರೀತಿಯ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ವಿವೇಚನಾಧಿಕಾರ ಬಳಸಿ ಕ್ರಮ ಜರುಗಿಸಲಿದ್ದಾರೆ ಎಂದರು.

    ನಕಲಿ ಲಾಕೆಟ್ ಧರಿಸದಂತೆ ಮನವಿ:
    ಚಿತ್ರನಟರು, ಗಣ್ಯರು ನಕಲಿ ಹುಲಿ ಉಗುರಿನ ಲಾಕೆಟ್ ಧರಿಸಿದರೂ ಇತರರಿಗೆ ಪ್ರೇರಣೆ ಸಿಗುತ್ತದೆ. ಅವರಿಗೆ ಸಾವಿರಾರು ಅಭಿಮಾನಿಗಳು ಇರುತ್ತಾರೆ. ಅವರು ಕೂಡ ತಮ್ಮ ನಾಯಕನಂತೆ ಹುಲಿ ಉಗುರಿನ ಲಾಕೆಟ್ ಸರ ಧರಿಸಲು ಬಯಸುತ್ತಾರೆ. ಆಗ ಬೇಡಿಕೆ ಹೆಚ್ಚುತ್ತದೆ. ವನ್ಯಜೀವಿಗಳ ಹತ್ಯೆ ಆಗುತ್ತದೆ. ಇದಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದಂತೆ ಆಗುತ್ತದೆ. ಹೀಗಾಗಿ ಸಾಮಾಜಿಕ ಬದ್ಧತೆಯ ದೃಷ್ಟಿಯಿಂದ ಗಣ್ಯರು, ನಟರು ನಕಲಿ ಪೆಂಡೆಂಟ್ ಕೂಡ ಧರಿಸಬಾರದು ಎಂದು ಮನವಿ ಮಾಡಿದರು.

    1926 ಹೆಲ್ಪ್ ಲೈನ್ ನಂಬರ್:
    ಅರಣ್ಯ ಇಲಾಖೆಗೆ 1926 ಎಂಬ ಸಹಾಯವಾಣಿ ಇದ್ದು ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಲು, ಅರಣ್ಯ ಇಲಾಖೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಅವಕಾಶವಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು. ಇದನ್ನೂ ಓದಿ: ಹುಲಿ ಉಗುರು: ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗೂ ನೋಟಿಸ್

    4000 ಹುದ್ದೆ ಖಾಲಿ:
    ಅರಣ್ಯ ಇಲಾಖೆಯಲ್ಲಿ ಸುಮಾರು 4 ಸಾವಿರ ಹುದ್ದೆ ಖಾಲಿ ಇದ್ದು, ಈಗಾಗಲೇ ಹಣಕಾಸು ಇಲಾಖೆ 800 ಹುದ್ದೆ ಭರ್ತಿಗೆ ಅನುಮತಿ ನೀಡಿದೆ. ಶೀಘ್ರವೇ ಇದರ ಭರ್ತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

    ಚಿನ್ನಾಭರಣ ತಯಾರಕರಿಗೆ ಮನವಿ:
    ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ತಮ್ಮಲ್ಲಿ ವನ್ಯಜೀವಿಯ ಯಾವುದೇ ಆಭರಣ ತಯಾರಿಸುವುದಿಲ್ಲ, ಮಾರಾಟ ಮಾಡುವುದಿಲ್ಲ. ಇದು ಶಿಕ್ಷಾರ್ಹ ಅಪರಾಧ ಎಂಬ ಫಲಕ ಹಾಕುವಂತೆ ಸೂಚಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

    ಹುಲಿ ಬೇಟೆಗಾರನ ಸೆರೆ:
    ಇತ್ತೀಚೆಗೆ ಬೆಳಗಾವಿ ವಿಭಾಗದಲ್ಲಿ ಖಾನಾಪುರ ಬಳಿಯ ಜಳಗಾ ಅರಣ್ಯದ ವ್ಯಾಪ್ತಿಯಲ್ಲಿ ಮಧ್ಯಪ್ರದೇಶದ ಚಿಕ್ಕಾ ಅಲಿಯಾಸ್ ಕೃಷ್ಣಾ ಪಾಟ್ಲೆ ಪವಾರ್ ಎಂಬುವನನ್ನು ಬಂಧಿಸಲಾಗಿದೆ. ಆತ ಹುಲಿ ಕಳ್ಳಬೇಟೆಗಾರನಾಗಿದ್ದು, ಆತನ ವಿರುದ್ಧ ಹಲವು ರಾಜ್ಯಗಳಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆ ಕಳ್ಳಬೇಟೆ ನಿಗ್ರಹಕ್ಕೂ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೆಶ್ ಕುಮಾರ್ ದೀಕ್ಷಿತ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಶ್ ಮಾಲ್ಕಡೆ ಮತ್ತಿತರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಪಕ್ಷಿಗಳ (Birds) ಸಮೂಹ ಕಾಣುತ್ತಿದ್ದರೆ, ಅವುಗಳ ಚಿಲಿಪಿಲಿ ಸದ್ದನು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ತಾನೂ ರೆಕ್ಕೆಬಿಚ್ಚಿ ನೀಲಮೇಘಗಳಲ್ಲಿ ಹಾರಬೇಕು ಎಂದೆನಿಸುತ್ತದೆ. ನೆನಪಿದೆಯಾ ಅಂದು ನಾವು ಪುಟ್ಟ ಮಕ್ಕಳಿದ್ದಾಗ ಪಕ್ಷಿಯ ಚಿತ್ರ ಬರೆಯಲು ಹೇಳಿದ್ರೆ ಚೂಪಾದ ಕೊಕ್ಕು, ದುಂಡಗಿನ ಕಣ್ಣು, ಕೆಂಪನೆಯ ಮುಂಗುರುಳು… ಹೀಗೆ ನಮಗೆ ಇಷ್ಟ ಬಂದ ಆಕಾರ ನೀಡುತ್ತಾ ಅವುಗಳನ್ನ ನಮ್ಮ ಪುಟಗಳಲ್ಲಿ ಹಾರಿಸುತ್ತಿದ್ದ ನೆನಪು ನಿನ್ನೆ ಮೊನ್ನೆಯದೋ ಎಂದೇ ಭಾಸವಾಗುತ್ತಿದೆ. ಆದ್ರೆ ನಗರಗಳು ಬೆಳೆದಂತೆ ಪಕ್ಷಿಗಳು ಮಾಯವಾಗುತ್ತಿವೆ. ಮೃಗಾಲಯ, ಕಾಡುಗಳಲ್ಲಿ ಪ್ರವಾಸಕ್ಕೆ ಹೋಗಿ ಹಕ್ಕಿಗಳನ್ನು ಕಣ್ತುಂಬಿಕೊಳ್ಳಬೇಕಿದೆ.

    ಸಾಮಾನ್ಯವಾಗಿ ಪಕ್ಷಿ ವೀಕ್ಷಣೆಗೆ ಮುಂಜಾನೆ 6 ರಿಂದ 10 ಅಥವಾ ಸಂಜೆ 4 ರಿಂದ 6 ಗಂಟೆಯ ಸಮಯ ಸೂಕ್ತವೆಂದು ಪಕ್ಷಿ ತಜ್ಞರು ಹೇಳುತ್ತಾರೆ. ಬನ್ನಿ ಹಾಗಿದ್ರೆ ಪಕ್ಷಿ ತಜ್ಞರು ಏನು ಹೇಳಿದ್ದಾರೆ.. ಅವುಗಳ ಸುತ್ತ ಒಂದು ಸುತ್ತು ಹಾಕೋಣ…

    ಸುಂದರ ಸುವ್ವಿ ಹಕ್ಕಿ:
    ಸುವ್ವಿ ಹಕ್ಕಿ ಗುಬ್ಬಚ್ಚಿಗಿಂತಲೂ ಸಣ್ಣದಾದ ಪಕ್ಷಿ, ಪ್ರಿನಿಯಾ ಸೊಸಿಯಾಲಿಸ್ ಎಂಬುದು ವೈಜ್ಞಾನಿಕ ಹೆಸೆರು. ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿ. ನೆತ್ತಿ, ಕತ್ತಿನ ಹಿಂಭಾಗ, ರೆಕ್ಕೆ, ಬಾಲದ ಮೇಲ್ಬಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಉದ್ದ ಬಾಲ ಅದರ ಅಂಚು ಕಪ್ಪು-ಬಿಳಿ; ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕು ಇರುತ್ತದೆ.

    ನೀಳವಾದ ಕಾಲುಗಳು ಗುಲಾಬಿ ಬಣ್ಣದಿಂದ ಕಂಡುಬರುತ್ತದೆ. ಇದರ ಚಿಕ್ಕದಾದ ಕೊಕ್ಕು ಕಪ್ಪಾಗಿರುತ್ತದೆ. ಕುರುಚಲು ಕಾಡು, ಹೂದೋಟ ಮುಂತಾದ ಕಡೆ ಪೊದೆ, ಜೊಂಡು, ವಾಟೆಗಳಲ್ಲಿ ವಾಸಿಸುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ದೊಡ್ದ ಎಲೆಗಳನ್ನ ಹೆಣೆದು ಮಧ್ಯದಲ್ಲಿ ಹತ್ತಿ, ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಮಾರ್ಚ್ ತಿಂಗಳಿಂದ ಸೆಪ್ಟೆಂಬರ್ ತಿಂಗಳೊಳಗೆ 3 ರಿಂದ 4 ಕೆಂಪು ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಡುತ್ತದೆ.

    ಕಾಡಿನ ರೈತ ಮಂಗಟ್ಟೆ (Hornbill):
    ಒಮ್ಮೆ ನೋಡಿದ್ರೆ ಮೆರಯುವುದೇ ಇಲ್ಲ ಅಂತಹ ಹಕ್ಕಿ ಇದು. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಆದ್ದರಿಂದಲೇ ಅನೇಕರು ಇದನ್ನೂ ಕಾಡಿನ ರೈತ ಎಂದೂ ಕರೆಯುತ್ತಾರೆ.

    ಇನ್ನೂ ಇದರ ಸಂತಾನೋತ್ಪತ್ತಿಯ ವಿಶಿಷ್ಟ ಕ್ರಮ ಆಶ್ಚರ್ಯವನ್ನು ತರುತ್ತದೆ. ಹಳೆಯ, ದೊಡ್ಡ ಮರಗಳ ಪೊಟರೆ ಇದರ ಗೂಡು. ಹೆಣ್ಣು ಹಕ್ಕಿ ಇದರ ಒಳಗೆ ಹೋಗಿ ಕೂತ ನಂತರ ಗಂಡು ಹೊರಗಿನಿಂದ ಗೂಡಿನ ಬಾಯನ್ನು ಸಣ್ಣ ಕಿಂಡಿಯೊಂದನ್ನ ಬಿಟ್ಟು ಪೂರ್ತಿ ಮುಚ್ಚಿಬಿಡುತ್ತದೆ. ಒಳಗೆ ಮೊಟ್ಟೆಗಳು ಮರಿಯಾಗಿ ಅವು ತುಸು ಬೆಳೆಯುವವರೆಗೂ ಗಂಡು, ಹೆಣ್ಣು ಹಾಗೂ ಮರಿಗಳಿಗೆ ಆಹಾರವನ್ನ ತಂದು ಒದಗಿಸುತ್ತದೆ. ಮರಿಗಳು ತುಸು ದೊಡ್ಡವಾದನಂತರ ಹೆಣ್ಣು ಗೂಡಿನ ʻಬಾಗಿಲನ್ನುʼ ಒಡೆದುಕೊಂಡು, ಹೊರಬರುತ್ತದೆ. ಮರಿಗಳು ತಮ್ಮ ಮಲದಿಂದ ಮತ್ತೆ ಗೂಡಿನ ಬಾಯಿಯನ್ನು ಒಂದು ಸಣ್ಣ ರಂದ್ರದಷ್ಟು ಬಿಟ್ಟು ಉಳಿದಂತೆ ಮುಚ್ಚಿಬಿಡುತ್ತವೆ. ಆನಂತರ ಗಂಡು ಹೆಣ್ಣು ಎರಡೂ ಸೇರಿ ಮರಿಗಳಿಗೆ ಆಹಾರ ಒದಗಿಸುತ್ತದೆ.

    ದಾಸಮಂಗಟ್ಟೆ: ಇದು ಹದ್ದಿಗಿಂತ ದೊಡ್ಡದಾಗಿದ್ದು, ರಣಹದ್ದಿಗಿಂತ ಚಿಕ್ಕದಾದ ಬೃಹತ್‌ ಪಕ್ಷಿ. ಇದರ ತಲೆ, ಕತ್ತು, ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರ ಕಣ್ಣಿನ ಭಾಗದಲ್ಲಿ ಅಗಲವಾದ ಅಡ್ಡ ಕಪ್ಪು ಪಟ್ಟಿಯನ್ನ ಕಾಣಬಹುದು. ನೆತ್ತಿಯಿಂದ ಕೊಕ್ಕಿನ ಮಧ್ಯದವರೆಗೆ ಹಳದಿ ಟೋಪಿ ಕಂಡುಬರುತ್ತದೆ. ಕತ್ತಿನ ತಳಭಾಗ ಮತ್ತು ದೇಹ ಹಾಗೂ ರೆಕ್ಕೆ ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಹೊಟ್ಟೆ ಮತ್ತು ಬಾಲ ಬಿಳಿಯಾಗಿರುತ್ತದೆ. ಬಾಲದ ಮೇಲೆ ಅಗಲವಾದ ಕಪ್ಪು ಪಟ್ಟಿಯನ್ನ ಕಾಣಬಹುದು. ಅಲ್ಲದೆ ಕಪ್ಪು ರೆಕ್ಕೆಯ ಮೇಲೆ ಅಗಲವಾದ ಬಿಳಿ ಪಟ್ಟಿ ಹಾಗೂ ಬಾಲದ ಮೇಲಿನ ಪಟ್ಟಿಗಳು ಹಾರುವಾಗ ಸ್ಪಷ್ಟವಾಗಿ ಗೋಚರಿಸುತ್ತವೆ. ಇವುಗಳು ಹೆಚ್ಚಾಗಿ ನಿತ್ಯಹರಿದ್ವರ್ಣ, ತೇವ ಪರ್ಣಪಾತಿ ಕಾಡುಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ದಾಂಡೇಲಿ, ಅಣಶಿ, ಕುದುರೆಮುಖ, ಮೂಕಾಂಬಿಕಾ ಅರಣ್ಯಗಳಲ್ಲಿ ಕಾಣಬಹುದು. ಸಂತಾನೋತ್ಪತ್ತಿ ಸಮಯದಲ್ಲಿ ಮರದ ಪೊಟ್ಟರೆಗಳಲ್ಲಿ ಗೂಡು ನಿರ್ಮಿಸಿ ಫೆಬ್ರುವರಿ ತಿಂಗಳಿಂದ ಏಪ್ರಿಲ್ ತಿಂಗಳೊಳಗೆ 2 ಮೊಟ್ಟೆಗಳಿಗೆ ಜನ್ಮ ನೀಡುತ್ತವೆ.

    ಕರ್ನಾಟಕದಲ್ಲಿ ದಾಸ ಮಂಗಟ್ಟೆಹಕ್ಕಿ, ಮಲಬಾರ್ ಮಂಗಟ್ಟೆ ಹಾಗೂ ಸಾಮಾನ್ಯ ಮಂಗಟ್ಟೆ ಹಕ್ಕಿಗಳನ್ನು ನೋಡಬಹುದು. ದುರದೃಷ್ಟವಶಾತ್‌ ಈ ಮಂಗಟ್ಟೆ ಪಕ್ಷಿಗಳಿಂದು ಅಳಿವಿನ ಅಂಚಿನಲ್ಲಿದೆ.

    ಕೆನ್ನೀಲಿ ಬಕ:
    ಸುಮಾರು 90 ಸೆಂ.ಮೀ. ಎತ್ತರದ, ಬೂದು ಬಕ ಪಕ್ಷಿಯಷ್ಟಿರುವ ಈ ಹಕ್ಕಿಯ ಮೇಲ್ಭಾಗದ ಮೈ ನೀಲಿ ಬೂದು ಬಣ್ಣವಾಗಿದ್ದು, ಉದ್ದನೆಯ ಕೊಕ್ಕು, ಕೆನ್ನೆಯಿಂದ ಹೊರಚಾಚುವ ಕರೀಬಣ್ಣದ ಉದ್ದನೆಯ ಪುಕ್ಕ, ಕತ್ತು ಹಾಗೂ ತಲೆಯು ಇಟ್ಟಿಗೆಯ ಬಣ್ಣ ಹೊಂದಿದ್ದು, ಕತ್ತಿನ ಕೆಳಗೆ ಕಪ್ಪು ಹಾಗೂ ತಿಳಿ ಕಂದು ಬಣ್ಣವಿರುತ್ತದೆ. ಸೂರ್ಯನ ಪ್ರಕಾಶದಲ್ಲಿ ನೇರಳೆ ಬಣ್ಣ ಕಾಣುತ್ತದೆ. ಪಕ್ಷಿ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

    ಭಾರತದ ಎಲ್ಲಾ ಭಾಗಗಳಲ್ಲಿ, ಶ್ರೀಲಂಕಾದಲ್ಲಿ ಸ್ಥಳೀಕವಾಗಿಯೂ ಪ್ರಾದೇಶಿಕ ವಲಸೆ ಹಕ್ಕಿಗಳಾಗಿಯೂ ಇವು ಕಂಡುಬರುತ್ತವೆ. ಏಕಾಂಗಿಗಳಾಗಿ ನೀರಿನ ಝರಿಗಳ ಬಳಿ, ನೀರಿನ ಮಡುವುಗಳ ಹತ್ತಿರ ಇವು ಕಾಣಿಸಿಕೊಳ್ಳುತ್ತವೆ. ಮೀನು, ಕಪ್ಪೆ, ಹಾವು ಇದರ ಆಹಾರ. ಜೂನ್-ಮಾರ್ಚ್ ತಿಂಗಳ ಮಧ್ಯೆ ಮರಿ ಮಾಡುತ್ತವೆ. ಈ ಹಕ್ಕಿಗಳು ತಮ್ಮ ಜಾತಿಗೆ ಸೇರಿದ ಹಕ್ಕಿಗಳಿರುವ ಕಾಲೋನಿಗಳಲ್ಲಿಯೇ ಸಾಮಾನ್ಯವಾಗಿ ಮರಿ ಮಾಡುತ್ತವೆ. ಗಿಡಗಳಲ್ಲಿ, ಜೊಂಡು ಹುಲ್ಲಿನ ಹಾಸಿನ ಮೇಲೆ ಕಡ್ಡಿಗಳಿಂದ ಗೂಡನ್ನು ಕಟ್ಟಿ, ನೀಲಿ-ಹಸಿರು ಮಿಶ್ರ ಬಣ್ಣದ 3-5 ಮೊಟ್ಟೆಗಳನ್ನು ಇಡುತ್ತವೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರು ಬಾಲದಂಡೆಯ ಹಕ್ಕಿ (Asian Paradise):
    ಕಣ್ಣಿಗೆ ಸುಂದರ ನೋಟ ಬೀರುವ ಹಕ್ಕಿಗಳನ್ನು ಪಟ್ಟಿ ಮಾಡುತ್ತಾ ಹೋದ್ರೆ ಅವುಗಳಲ್ಲಿ ಪ್ರಮುಖವಾದುದು ಬಾಲದಂಡೆಯ ಹಕ್ಕಿ. ಅದರ ಬಾಲವೇ ಅದಕ್ಕೇ ಸೌಂದರ್ಯ. ಛಾಯಾಗ್ರಾಹಕನೂ ಇದರ ಫೋಟೋ ಕ್ಲಿಕ್ಕಿಸಬೇಕೆಂದರೆ ಹರಸಾಹಸ ಮಾಡಲೇಬೇಕು. ಏಕೆಂದರೆ ಇದರ ಬಾಲ ಪೂರ್ಣ ನೋಡಿಕೊಂಡು ಫೋಟೋ ಕ್ಲಿಕ್ಕಿಸುವಷ್ಟರಲ್ಲೇ ಸರ್ರನೆ ಹಾರಿಬಿಡುತ್ತೆ.

    ಗಂಡು ರಾಜಹಕ್ಕಿಗೆ ಕಡು ನೀಲಿಗಪ್ಪು ತಲೆ, ಜುಟ್ಟು, ಗಲ್ಲ, ಹೊಳೆಯುವ ಬಿಳಿದೇಹ, ರೆಕ್ಕೆಯಲ್ಲಿ ಅಲ್ಲಲ್ಲಿ ಕಪ್ಪು ಗರಿಗಳು. ಮೊದಲೇ ತಿಳಿಸಿದಂತೆ ಒಂದೂವರೆ ಅಡಿ ಉದ್ದದ ಬಿಳಿ ರಿಬ್ಬನ್ ತರಹದ ಬಾಲ. ಇದರಲ್ಲಿ ಮತ್ತೊಂದು ಒಳಪ್ರಭೇದವಿದೆ. ಈ ಪ್ರಭೇದದಲ್ಲಿ ಬಿಳಿದೇಹದ ಬದಲು ಕೆಂಗಂದು ದೇಹ ಮತ್ತು ಕೆಂಗಂದು ರಿಬ್ಬನ್ ಬಾಲ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಬಾಲ ಬೆಳೆಯುತ್ತಾ ಹೋಗುತ್ತದೆ, 3 ವರ್ಷಗಳ ನಂತರ ಒಂದು ಅಡಿ ಮೀರುತ್ತದೆ. ಜೊತೆಗೆ ಬಾಲ್ಯದ ಕೆಂಪು ಬಿಳಿಯತ್ತ ಹೊರಳುತ್ತದೆ. ಕೆಂಗಂದು ಮತ್ತು ಬಿಳಿ ಮಿಶ್ರಿತ ರಾಜಹಕ್ಕಿಯನ್ನು ನಾವು ಕೆಲವೊಮ್ಮೆ ಕಂಡರೆ ಅದನ್ನು ಟ್ರಾನಿಯೆಂಟ್‌ ಫೇಸ್‌ ಎಂದು ತಿಳಿಯಬೇಕು. ಹೀಗೆ ಅಚ್ಚ ಬಿಳಿದೇಹ ಹೊಂದಿದ ರಾಜಹಕ್ಕಿಯನ್ನು ಹಿಂದಿಯಲ್ಲಿ ದೂದ್‍ರಾಜ ಎಂದು ಹೇಳುತ್ತಾರೆ.

    ಈ ಪಕ್ಷಿ ಬೇಸಿಗೆಯಲ್ಲಿ ಮೇಲುಕೋಟೆ, ಬಂಡೀಪುರ, ನಂದಿಬೆಟ್ಟ, ಸಾವನ ದುರ್ಗ, ದೇವರಾಯನ ದುರ್ಗ, ಬನ್ನೇರುಘಟ್ಟ, ಮುತ್ತತ್ತಿಯಂಥಾ ಕಾಡುಗಳಲ್ಲಿ ಕಾಣಸಿಗುತ್ತವೆ. ಚಳಿಗಾಲದಲ್ಲಿ ದಕ್ಷಿಣಭಾರತದ ಅನೇಕ ಜಾಗಗಳಲ್ಲಿ ಚದುರಿ ಹೋಗುತ್ತವೆ. ಮರಗಳು ದಟ್ಟವಿರುವ, ವಿವಿಧ ಬೆಳೆಗಳಿಂದ ಕೂಡಿದ ತೋಟ, ಬಿದುರು ಕಾಡುಗಳೆಂದರೆ ಇವಕ್ಕೆ ಬಲು ಪ್ರಿಯ.

    ಮಧುರ ಕಂಠ:
    ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ.

    ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ 4 ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ ಪ್ರಸಿದ್ಧವಾದದ್ದು. ಎಲೆಗಳ ನಡುವೆ ನುಸುಳಿ ಕೀಟಗಳನ್ನು ಹೆಕ್ಕಿಕೊಳ್ಳುವುದು ಇದರ ಆಹಾರ ಸಂಪಾದನೆಯ ಕ್ರಮ. ಕಂಬಳಿ ಹುಳುಗಳೂ ಇದರ ಆಹಾರ ಕ್ರಮವಾಗಿದೆ.

    ದಕ್ಷಿಣ ಭಾರತದಲ್ಲಿ ಕಂಡುರುವುದು ಸಾಮಾನ್ಯ ಮಧುರಕಂಠ. ಉತ್ತರ-ಪಶ್ಚಿಮ ಭಾರತದಲ್ಲಿ ಮಾರ್ಷಲ್ ಮಧುರಕಂಠ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಮಾರ್ಷಲ್ಸ್ ಕಂಡುಬರುತ್ತದೆ. ಇದರ ಬಾಲದಿಂದಲೇ ಇದನ್ನು ಗುರುತಿಸಬಹುದು ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ

    ಹೃದಯ-ಶ್ವಾಸಕೋಶ ವೈಫಲ್ಯವೇ ಚೀತಾ ಸಾವಿಗೆ ಕಾರಣ: ವೈದ್ಯರ ಸ್ಪಷ್ಟನೆ

    ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಹೃದಯ-ಶ್ವಾಸಕೋಶ ವೈಫಲ್ಯದಿಂದ (Cardio Pulmonary Failure) 2ನೇ ಚೀತಾ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 12 ಚೀತಾಗಳ ಪೈಕಿ ಉದಯ್ ಹೆಸರಿನ ಗಂಡು ಚೀತಾ (Cheetah) ಭಾನುವಾರ ಸಾವನ್ನಪ್ಪಿತ್ತು. ಇದರಿಂದ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯ ಕೇಳಿಬಂದಿತ್ತು. ಈ ಬೆನ್ನಲ್ಲೇ ವೈದ್ಯರು (Doctors) ಚೀತಾ ಸಾವಿಗೆ ಕಾರಣವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12ರಲ್ಲಿ ಒಂದು ಚೀತಾ ಸಾವು!

    ಉದಯ್ ಹೆಸರಿನ ಚೀತಾದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಅದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ.

    ಜಬಲ್‌ಪುರ ಮತ್ತು ಭೋಪಾಲ್‌ನ ತಲಾ ಒಬ್ಬ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಐವರು ತಜ್ಞರ ಸಮಿತಿ ಶವ ಪರೀಕ್ಷೆ ನಡೆಸಿತು. ಇದನ್ನೂ ಓದಿ: ಕೊಚ್ಚಿಯಲ್ಲಿ ಭಾರತದ ಮೊದಲ ವಾಟರ್ ಮೆಟ್ರೋ ಸೇವೆ – ಇಂದು ಪ್ರಧಾನಿ ಮೋದಿ ಚಾಲನೆ

    ಚೀತಾದ ರಕ್ತ ಮತ್ತು ಇತರ ಪ್ರಮುಖ ಅಂಗಾಂಗಗಳ ಮಾದರಿಯನ್ನ ಜಬಲ್‌ಪುರದ ನಾನಾಜಿ ದೇಶ್‌ಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ವನ್ಯಜೀವಿ ಫೊರೆನ್ಸಿಕ್ ವಿಭಾಗಕ್ಕೆ ಕಳುಹಿಸಲಾಗಿದೆ. ಸುಧಾರಿತ ಪರೀಕ್ಷೆಗಳ ಫಲಿತಾಂಶಗಳು ತಿಳಿದ ನಂತರವಷ್ಟೇ ಚೀತಾ ಸಾವಿನ ನಿಖರ ಕಾರಣ ಕಂಡುಹಿಡಿಯಬಹುದು ಎಂದು ವೈದ್ಯರು ಹೇಳಿದ್ದಾರೆ.

    ಶನಿವಾರ ಸಂಜೆಯವರೆಗೂ ಉದಯ್ ಚೀತಾ ಆರೋಗ್ಯವಾಗಿತ್ತು. ಮರುದಿನ ಬೆಳಗ್ಗೆ ಅಸ್ವಸ್ಥಗೊಂಡಿರುವುದನ್ನು ವೈದ್ಯರ ತಂಡ ಗಮನಿಸಿ, ಬೆಳಿಗ್ಗೆ 11 ಗಂಟೆಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿತ್ತು. ಆದರೆ ಸಂಜೆ 4 ಗಂಟೆಗೆ ಚೀತಾ ಸಾವನ್ನಪ್ಪಿತ್ತು. ಇದಕ್ಕೂ ಮುನ್ನ ನಮೀಬಿಯಾದಿಂದ ತಂದಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು.

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದಾದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಭಾರತಕ್ಕೆ ತರಿಸಲಾಯಿತು.

  • ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12ರಲ್ಲಿ ಒಂದು ಚೀತಾ ಸಾವು!

    ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12ರಲ್ಲಿ ಒಂದು ಚೀತಾ ಸಾವು!

    ಭೋಪಾಲ್:‌ ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12 ಚೀತಾಗಳ (Cheetah) ಪೈಕಿ ಒಂದು ಚೀತಾ ಭಾನುವಾರ ಸಾವನ್ನಪ್ಪಿದೆ.

    ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಪರಿಚಯಿಸಲಾಗಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಹೆಣ್ಣು ಚೀತಾ ಮಾರ್ಚ್‌ ತಿಂಗಳಲ್ಲಿ ಮೃತಪಟ್ಟಿತ್ತು. ಇದೀಗ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ ಉದಯ್‌ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್‌ ಚೌಹಾಣ್‌ ತಿಳಿಸಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಉದಯ್‌ ಹೆಸರಿನ ಚೀತಾ ಭಾನುವಾರ ಬೆಳಗ್ಗೆ ಅಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಅರಣ್ಯಾಧಿಕಾರಿಗಳ ತಂಡ ಅದನ್ನು ವೈದ್ಯಕೀಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲು ಪ್ರಾರಂಭಿಸಿತ್ತು. ಆದರೆ ಸಂಜೆ 4 ಗಂಟೆ ವೇಳೆಗೆ ಚಿಕಿತ್ಸೆ ವೇಳೆ ಸಾವನ್ನಪ್ಪಿದೆ. ಸೋಮವಾರ ಪಶುವೈದ್ಯಾಧಿಕಾರಿಗಳ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ.

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದಾದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಭಾರತಕ್ಕೆ ತರಿಸಲಾಯಿತು.

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.

  • ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು

    ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು

    ಭೋಪಾಲ್‌: ಕಳೆದ ವರ್ಷ ನಮೀಬಿಯಾದಿಂದ (Namibia) ತಂದಿದ್ದ 8 ಚೀತಾಗಳ (Cheetahs) ಪೈಕಿ, ಕಿಡ್ನಿ ಸೋಂಕಿನಿಂದ (Kidney Ailment) ಬಳಲುತ್ತಿದ್ದ ಒಂದು ಚೀತಾ ಸಾವನ್ನಪ್ಪಿದೆ.

    ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಪರಿಚಯಿಸಲಾಗಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಚೀತಾ ಸೋಮವಾರ ಮೃತಪಟ್ಟಿದೆ. ಸಾಶಾ ಭಾರತಕ್ಕೆ ಕರೆತರುವ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶಕ್ಕೆ ಮಹಾಶಿವರಾತ್ರಿಯಂದು ಉಡುಗೊರೆ ಸಿಕ್ಕಿದೆ – ಚೀತಾಗಳ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ

    ಈ ವರ್ಷದ ಜನವರಿ 23ರಂದು ಸಾಶಾ ಚೀತಾದಲ್ಲಿ ಅನಾರೋಗ್ಯ ಲಕ್ಷಣಗಳು ಕಂಡುಬಂದಿತ್ತು. ನಂತರ ಆ ಚೀತಾವನ್ನು ಚಿಕಿತ್ಸೆಗಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಇದನ್ನೂ ಓದಿ: ಭಾರತಕ್ಕೆ ಮತ್ತೆ 12 ಚೀತಾಗಳ ಆಗಮನ

    ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು.

    ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.

  • ಫಾರ್ಮ್ ಹೌಸ್‌ನಲ್ಲಿ ವನ್ಯ ಜೀವಿಗಳ ಪತ್ತೆ ಪ್ರಕರಣ- ನಿರೀಕ್ಷಣಾ ಜಾಮೀನು ಕೋರಿದ ಎಸ್‌ಎಸ್ ಮಲ್ಲಿಕಾರ್ಜುನ್

    ಫಾರ್ಮ್ ಹೌಸ್‌ನಲ್ಲಿ ವನ್ಯ ಜೀವಿಗಳ ಪತ್ತೆ ಪ್ರಕರಣ- ನಿರೀಕ್ಷಣಾ ಜಾಮೀನು ಕೋರಿದ ಎಸ್‌ಎಸ್ ಮಲ್ಲಿಕಾರ್ಜುನ್

    ದಾವಣಗೆರೆ: ಡಿಸೆಂಬರ್ 21 ರಂದು ನಗರದ ಕಾಂಗ್ರೆಸ್‌ನ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್ ಹಿಂಭಾಗವಿರುವ ಫಾರ್ಮ್ ಹೌಸ್ (Farm House) ಮೇಲೆ ಸಿಸಿಬಿ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ಈ ವೇಳೆ ಅನೇಕ ವನ್ಯಜೀವಿಗಳು (Wildlife) ಪತ್ತೆಯಾಗಿವೆ. ಅವುಗಳನ್ನು ಪರವಾನಿಗೆ ಪಡೆಯದೇ ಸಾಕಣೆ ಮಾಡುತ್ತಿರುವುದು ಕಂಡು ಬಂದಿದ್ದು, ಫಾರ್ಮ್ ಹೌಸ್‌ನಲ್ಲಿರುವ ವನ್ಯಜೀವಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಪರ್ದಿಗೆ ಪಡೆದುಕೊಂಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಫಾರ್ಮ್‌ ಹೌಸ್‌ನ ಮ್ಯಾನೇಜರ್, ಜಾಗದ ಮಾಲೀಕರು ಸೇರಿದಂತೆ 4 ಜನರ ಮೇಲೆ ಈಗಾಗಲೇ ಅರಣ್ಯ ಇಲಾಖೆ ಕೇಸ್ ದಾಖಲಿಸಿಕೊಂಡಿದೆ. ಆರೋಪಿಗಳೆಲ್ಲರೂ ಈಗ ತಲೆಮರೆಸಿಕೊಂಡಿದ್ದಾರೆ.

    ಜಾಗದ ಮಾಲೀಕರು ಎನ್ನಲಾದ ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಕೂಡಾ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವರ ಪರ ಹಿರಿಯ ವಕೀಲ ಪ್ರಕಾಶ್ ಪಾಟೀಲ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಅರ್ಜಿದಾರರಿಗೆ ನೋಟಿಸ್ ಜಾರಿ ಮಾಡುವಂತೆ ಸರ್ಕಾರಿ ವಕೀಲರಿಗೆ ನ್ಯಾಯಾಲಯ ಅದೇಶ ಮಾಡಿದೆ. ಈ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 2 ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಇದನ್ನೂ ಓದಿ: ಇಂದು ಸಂಜೆಯಿಂದ ನಂದಿಬೆಟ್ಟಕ್ಕೆ ನಿರ್ಬಂಧ- ನ್ಯೂ ಇಯರ್ ಮೋಜು-ಮಸ್ತಿಗೆ ಬ್ರೇಕ್

    ಆದರೆ ಇಲ್ಲಿ ಸಾಕಷ್ಟು ಪ್ರಶ್ನೆಗಳು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ದಾಖಲಿಸಿಕೊಂಡ ದೂರಿನಲ್ಲಿ ಫಾರ್ಮ್ ಹೌಸ್ ಸಿಬ್ಬಂದಿ ಮ್ಯಾನೇಜರ್ ಹೆಸರುಗಳನ್ನು ತೋರಿಸಿದೆ. ಆದರೆ ಇದರಲ್ಲಿ ಕೇವಲ ಜಾಗದ ಮಾಲೀಕರು ಎಂದು ಮಾಜಿ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರ ಹೆಸರು ತೋರಿಸದೇ ಪ್ರಕರಣ ದಾಖಲಾಗಿದೆ. ಅದರೂ ಕೂಡಾ ಮಲ್ಲಿಕಾರ್ಜುನ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಮಾಜಿ ಸಚಿವರಿಗೆ ಬಂಧನದ ಭೀತಿ ಎದುರಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಕ್ಕೆ ಕೌಂಟ್‍ಡೌನ್- ರೂಪಾಂತರಿ ಆತಂಕ ಹಿನ್ನೆಲೆ ಸ್ಟ್ರಿಕ್ಟ್ ರೂಲ್ಸ್

    Live Tv
    [brid partner=56869869 player=32851 video=960834 autoplay=true]

  • ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?

    ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?

    ನವದೆಹಲಿ: ಹೆಚ್ಚು ಕಡಿಮೆ 7 ದಶಕಗಳ ವಿರಾಮದ ಬಳಿಕ ಚೀತಾಗಳ(Cheetah) ಮಿಂಚಿನ ವೇಗ ನಮ್ಮ ದೇಶದಲ್ಲಿ ನೋಡುವ ಸೌಭಾಗ್ಯ ನಾಳೆಯಿಂದ ಲಭ್ಯ ಆಗಲಿದೆ. ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು(wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ(Namibia) ಭಾರತಕ್ಕೆ(India) 8 ಚೀತಾಗಳನ್ನು ತರಲಾಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ(Narendra Modi) ಜನ್ಮದಿನವಾದ ನಾಳೆ ಮಧ್ಯಪ್ರದೇಶದ ಕುನ್ಹೋ-ಪಾಲ್‌ಪುರ್ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಈ ಚೀತಾಗಳನ್ನು ಬಿಡಲಾಗುತ್ತದೆ. 2 ರಿಂದ 6 ವರ್ಷ ವಯಸ್ಸಿನ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ನಮೀಬಿಯಾದಿಂದ ವಿಶೇಷ ವಿಮಾನದಲ್ಲಿ ತರಲಾಗುತ್ತಿದೆ.

    ಈಗಾಗಲೇ ಚೀತಾಗಳನ್ನು ಹೊತ್ತ 717 ಜಂಬೋಜೆಟ್ ವಿಮಾನ ಟೇಕ್ ಆಫ್ ಆಗಿದ್ದು, ನಾಳೆ ಬೆಳಗ್ಗೆ ಮಧ್ಯಪ್ರದೇಶದ ಗ್ವಾಲಿಯಾರ್ ನಗರವನ್ನು ತಲುಪಲಿದೆ. ಈ ವಿಮಾನ ಪ್ರಯಾಣ ವೇಳೆ ಚೀತಾಗಳಿಗೆ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಜಂಬೋ ಜೆಟ್ ವಿಮಾನ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಗ್ವಾಲಿಯಾರ್‌ನಿಂದ ಹೆಲಿಕಾಪ್ಟರ್ ಮೂಲಕ ಚೀತಾಗಳನ್ನು ಮಧ್ಯಪ್ರದೇಶದ ಕುನ್ಹೋ ನ್ಯಾಷನಲ್ ಪಾರ್ಕ್ಗೆ ತರಲಾಗುತ್ತದೆ. ಬೆಳಗ್ಗೆ 10:45ಕ್ಕೆ ಪ್ರಧಾನಿ ಮೋದಿ ಖುದ್ದಾಗಿ ಇವುಗಳನ್ನು ರಿಲೀಸ್ ಮಾಡಲಿದ್ದಾರೆ.

    ಈ ಚೀತಾಗಳನ್ನು ವಿಮಾನಕ್ಕೆ ಹತ್ತಿಸುವ ಮುನ್ನ ತಿಂಗಳು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಯಾವುದೇ ಸೋಂಕಿಗೆ ತುತ್ತಾಗದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿದೆ. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ಸಮಯ ಹಿಡಿಯುವ ಕಾರಣ, ಅವುಗಳಿಗೆ ಮುಕ್ತವಾಗಿ ವಿಹರಿಸಲು ಅವಕಾಶ ನೀಡಲಾಗುತ್ತದೆ. ಇನ್ನು, ಮೋದಿ ಜನ್ಮದಿನ ಪ್ರಯುಕ್ತ ಬಿಜೆಪಿ ನಾಳೆಯಿಂದ ಅಕ್ಟೋಬರ್ 2ರವರೆಗೂ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

    `ಚೀತಾ’ ವಿಮಾನದಲ್ಲಿ ಏನೆಲ್ಲಾ ತಯಾರಿ?
    ಚೀತಾಗಳನ್ನು ತರಲಾಗುತ್ತಿರುವ ಬೋಯಿಂಗ್ ವಿಮಾನಕ್ಕೆ ಚೀತಾ ಚಿತ್ರದ ಪೇಂಟಿಂಗ್ ಮಾಡಲಾಗಿದೆ. ಈ ಕಾರ್ಗೋ ವಿಮಾನ ನಮೀಬಿಯಾದಲ್ಲಿ ಹಾರಾಟ ಪ್ರಾರಂಭಿಸಿದರೆ, ನೇರವಾಗಿ ಭಾರತದಲ್ಲಿಯೇ ಲ್ಯಾಂಡಿಂಗ್ ಮಾಡಲಿದೆ. ಮಾರ್ಗದ ಮಧ್ಯೆ ಎಲ್ಲಿಯೂ ಇಂಧನ ತುಂಬಿಸಿಕೊಳ್ಳಲು ಇಳಿಯುವುದಿಲ್ಲ. ವಿಮಾನದಲ್ಲಿ ಚೀತಾಗಳನ್ನು ಇರಿಸಲು ವಿಶೇಷ ಬೋನನ್ನು ಇರಿಸಲಾಗಿದ್ದು, ಪ್ರಯಾಣದ ವೇಳೆ ಅವುಗಳಿಗೆ ಯಾವುದೇ ಆಹಾರ ನೀಡಲಾಗುವುದಿಲ್ಲ. ಚೀತಾಗಳ ನಿಗಾ ವಹಿಸಲು ಮೂವರು ಸಿಬ್ಬಂದಿಯನ್ನು ಇರಿಸಲಾಗಿದ್ದು, ಅದರೊಂದಿಗೆ ಅರಣ್ಯಾಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸಾಥ್ ನೀಡಿದ್ದಾರೆ.

    ಮಚ್ಚೆ ಚೀತಾ ವಿಶೇಷತೆಯೇನು?
    ಮಚ್ಚೆ ಗುರುತಿನ ಚೀತಾಗಳ ಸಂತತಿ ಈಗಾಗಲೇ ಭಾರತದಲ್ಲಿ ನಾಶವಾಗಿದೆ. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 1952ರಲ್ಲಿ ಈ ಪ್ರಭೇದ ಭಾರತದಲ್ಲಿ ಇಲ್ಲ ಎಂದು ಘೋಷಣೆ ಮಾಡಲಾಗಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿದ್ದು, ಅದು ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಇದೀಗ 75 ವರ್ಷಗಳ ಬಳಿಕ ಭಾರತಕ್ಕೆ ಚೀತಾಗಳು ಬರುತ್ತಿವೆ. ಈ ಚೀತಾಗಳಿಗೆ ಕುನ್ಹೋ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ

    ಭಾರತದ ಚಿರತೆ, ನಮೀಬಿಯಾ ಚೀತಾ ವ್ಯತ್ಯಾಸ:
    ಚೀತಾ ಗಳಿಗೆ ತೆಳು ಕಪ್ಪು ಬಣ್ಣದ ಮಚ್ಚೆ ಇದ್ದರೆ, ಚಿರತೆಗಳಿಗೆ ಕಡುಕಪ್ಪು ಬಣ್ಣದ ಗುಲಾಬಿ ಪಕಳೆ ಆಕಾರ ಇರುತ್ತದೆ. ಚಿರತೆ ಗಂಟೆಗೆ 58 ಕಿ.ಮೀ ಓಡಿದರೆ, ಚೀತಾ ಗಂಟೆಗೆ 120 ಕಿ.ಮೀ ಓಡಬಲ್ಲುದು. ಚಿರತೆ ಮರ ಹತ್ತುವುದಲ್ಲಿ ಎಕ್ಸ್‌ಪರ್ಟ್ ಆಗಿದ್ದರೆ, ಚೀತಾ ಬೇಟೆ ವೇಳೆ ಚುರುಕಾಗಿ ದಿಕ್ಕು ಬದಲು ಮಾಡಬಲ್ಲುದಾಗಿರುತ್ತವೆ. ಮಾತ್ರವಲ್ಲದೇ ಚೀತಾಗಳ ದೇಹದ ಭಾರ ಕಡಿಮೆಯಿದ್ದು, ಚಿರತೆಯ ದೇಹದ ಭಾರ ಸ್ವಲ್ಪ ಹೆಚ್ಚಾಗಿ ಇರುತ್ತದೆ.

    Live Tv
    [brid partner=56869869 player=32851 video=960834 autoplay=true]