Tag: wildfire

  • ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    ದಕ್ಷಿಣ ಕೊರಿಯಾದಲ್ಲಿ ಕಾಡ್ಗಿಚ್ಚು – 24 ಸಾವು, 27 ಸಾವಿರ ಜನರ ಸ್ಥಳಾಂತರ

    – 200 ಕಟ್ಟಡಗಳಿಗೆ ಹಾನಿ

    ಸಿಯೋಲ್: ದಕ್ಷಿಣ ಕೊರಿಯಾದ (South Korea) ಆಗ್ನೇಯ ಭಾಗಗಳಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿಗೆ 24 ಮಂದಿ ಸಾವನ್ನಪ್ಪಿದ್ದು, 200 ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲದೇ ಆ ಪ್ರದೇಶದಲ್ಲಿದ್ದ 27,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಉತ್ತರ ಜಿಯೋಂಗ್ ಸಾಂಗ್ ಪ್ರಾಂತ್ಯದ ಸ್ಯಾಚಿಯಾಂಗ್ (Sancheong) ಕೌಂಟಿಯಲ್ಲಿ ಮಾ. 21ರಂದು ಸಂಜೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ರಾಜಧಾನಿ ಸಿಯೋಲ್‌ನಿಂದ ಸುಮಾರು 180 ಕಿ.ಮೀ ಆಗ್ನೇಯಕ್ಕಿರುವ ಉಯಿಸಿಯಾಂಗ್ ಕೌಂಟಿ ಭಾಗಕ್ಕೆ ಈ ಬೆಂಕಿಯು ವ್ಯಾಪಿಸಿತ್ತು. ಇದನ್ನೂ ಓದಿ: ಸತ್ಯವಂತರಿಗಿದು ಕಾಲವಲ್ಲ.. ದುಷ್ಟಜನರಿಗೆ ಸುಭಿಕ್ಷಕಾಲ: ಉಚ್ಚಾಟನೆಗೆ ದಾಸರ ಹಾಡಿನ ಮೂಲಕ ಯತ್ನಾಳ್ ಕೌಂಟರ್

    ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಐತಿಹಾಸಿಕ ಗೌನ್ಸಾ ದೇವಾಲಯ ಸೇರಿದಂತೆ ನೂರಾರು ಕಟ್ಟಡಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಜೊತೆಗೆ ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿರುವ ಪ್ರವಾಸಿ ತಾಣ ಹಾಹೋ ಫೋಕ್ ಗ್ರಾಮದ 8 ಕಿ.ಮೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಂಡಿದೆ. ಇದನ್ನೂ ಓದಿ: Aashiqui 3: ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ನಟನೆಯ ಸಿನಿಮಾ ಶೂಟಿಂಗ್‌ ಶುರು

    ಉಯಿಸಿಯಾಂಗ್‌ನಲ್ಲಿ (Uiseong) ಕಾಡ್ಗಿಚ್ಚು ನಿಯಂತ್ರಣ ಕಾರ್ಯದಲ್ಲಿದ್ದ ಹೆಲಿಕಾಪ್ಟರೊಂದು ಪತನಗೊಂಡಿದೆ. ಪರಿಣಾಮ ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾರೆ. ಕಾಡ್ಗಿಚ್ಚಿನಲ್ಲಿ 26ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜೈಕಾರ ಹಾಕೋನೇ ಬೇರೆ, ಜಿಲೇಬಿ ತಿನ್ನೋರೆ ಬೇರೆ: ಶಿವರಾಮ್ ಹೆಬ್ಬಾರ್

    ಉಯಿಸಿಯಾಂಗ್ ಕೌಂಟಿ ಪ್ರದೇಶದಲ್ಲಿ ಹೆಚ್ಚು ಗಾಳಿ ಬೀಸುತ್ತಿದ್ದು, ಬೆಂಕಿಯ ಕೆನ್ನಾಲಿಗೆಯೂ ಅನೇಕ ಪ್ರದೇಶಗಳಿಗೆ ಆವರಿಸಿಕೊಳ್ಳುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲೇ ಪರಮೇಶ್ವರ್‌ಗೆ ಮುಖ್ಯಮಂತ್ರಿ ಭಾಗ್ಯ: ಹಾಲುಮತ ಗೊರವಯ್ಯರಿಂದ ಕಾರ್ಣಿಕ ಭವಿಷ್ಯ

    130 ಹೆಲಿಕಾಪ್ಟರ್, 4,650 ಅಗ್ನಿಶಾಮಕ ದಳ ಹಾಗೂ ಸೈನಿಕರ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

  • ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು

    ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಕಾಡ್ಗಿಚ್ಚು

    ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ (Chamundi Hills) ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು (Wildfire) ಸದ್ಯ ನಿಯಂತ್ರಣಕ್ಕೆ ಬಂದಿದೆ.

    ಚಾಮುಂಡಿ ಬೆಟ್ಟದ ಬಂಡೀಪಾಳ್ಯ (Bandipalya) ಉತ್ತನಹಳ್ಳಿ ಭಾಗದ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಇದೀಗ ಹರಸಾಹಸಪಟ್ಟು ಬೆಂಕಿ ಸಂಪೂರ್ಣ ನಿಯಂತ್ರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯ| ಸರ್ಕಾರಿ ನೌಕರಿ ಕೊಡಿಸುತ್ತೇನೆಂದು ಕೋಟಿ ಕೋಟಿ ವಂಚನೆ

    ಘಟನೆ ಸಂಬಂಧ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯು ವ್ಯಾಪಕವಾಗಿ ಹರಡಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ. ತಡರಾತ್ರಿಯವರೆಗೂ ಬೆಟ್ಟದ ಸುತ್ತ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಜಸ್ಟ್ ಮಿಸ್, ಮರ ಹತ್ತಿ ಆನೆ ದಾಳಿಯಿಂದ ತಪ್ಪಿಸಿಕೊಂಡ ಇಟಿಎಫ್ ಸಿಬ್ಬಂದಿ!

    ಬೆಂಕಿ ಅವಘಡವನ್ನು ಮಾನವ ಕೃತ್ಯ ಎಂದು ಶಂಕಿಸಲಾಗಿದ್ದು, ಬೀಡಿ, ಸಿಗರೇಟು ಸೇದುವವರು ಬೆಂಕಿಕಡ್ಡಿ ಹಚ್ಚಿ ಸರಿಯಾಗಿ ಆರಿಸದೆ ಬಿಸಾಡಿದ್ದರಿಂದ ಬೆಂಕಿ ಹತ್ತಿಕೊಂಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 2,000 ಕೋಟಿ ರೂ. ಭ್ರಷ್ಟಾಚಾರ ಆರೋಪ; ಡಿಸಿಎಂ ವಿರುದ್ಧ ಮುನಿರತ್ನ ದೂರು

  • ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

    ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

    ಚಿಕ್ಕಮಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ದತ್ತಪೀಠದ (Dattapeeta) ಬಳಿಯ ಅಪರೂಪದ ಶೋಲಾ ಅರಣ್ಯದಲ್ಲಿ (Shola Forest) ಕಾಡ್ಗಿಚ್ಚು (Wildfire) ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಕವಿಕಲ್‍ಗಂಡಿ ತಪ್ಪಲಿನಲ್ಲಿರುವ ಹಲವಾರು ಸಸ್ಯಗಳು ಸುಟ್ಟು ಕರಕಲಾಗಿವೆ.

    ಸೋಮವಾರ (ಫೆ.17) ಸಂಜೆ ಕಾಣಿಸಿಕೊಂಡ ಬೆಂಕಿ ಸುಮಾರು ರಾತ್ರಿವರೆಗೂ ಹೊತ್ತಿ ಉರಿದಿದೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆಗ್ನಿಶಾಮಕ ವಾಹನ ಹೋಗದ ಕಡೆಗಳಲ್ಲಿ ಅಧಿಕಾರಿಗಳು ಸೊಪ್ಪಿನ ರೆಂಬೆ ಹಾಗೂ ಕೆಲ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಬಳಸಿ ರಾತ್ರಿ ವರೆಗೂ ಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.

    ಈ ಅರಣ್ಯ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಾತ್ರ ಹೆಚ್ಚಾಗಿ ನೋಡಬಹುದು. ಈ ಕಾಡುಗಳು ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸುತ್ತವೆ. ಶೋಲಾ ಅರಣ್ಯ ಇರುವ ಕಡೆ ಕಾಡು-ಕಾಡುಪ್ರಾಣಿಗಳು ಕೂಡ ಸಮೃದ್ಧವಾಗಿರುತ್ತವೆ. ಆದರೆ, ಕಾಡ್ಗಿಚ್ಚಿಗೆ ಶೋಲಾ ಕಾಡಿನ ಹಲವಾರು ಮರಗಳು ನಾಶವಾಗಿದೆ.

    ಅರಣ್ಯಕ್ಕೆ ಬೆಂಕಿ ಹೇಗೆ ಬಿದ್ದಿದೆ ಎಂಬ ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರವಾಸಿಗರು ಬೆಂಕಿ ಹಾಕಿರಬಹುದು ಅಥವಾ ಸಿಗರೇಟ್‌ನಿಂದ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

  • ಕಳಸ | ಜನರೇ ತೆರಳದ ಗುಡ್ಡದ ತುತ್ತತುದಿಯಲ್ಲಿ ಕಾಡ್ಗಿಚ್ಚು!

    ಕಳಸ | ಜನರೇ ತೆರಳದ ಗುಡ್ಡದ ತುತ್ತತುದಿಯಲ್ಲಿ ಕಾಡ್ಗಿಚ್ಚು!

    – ಡ್ರೋನ್‍ನಲ್ಲಿ ವಿಡಿಯೋ ಸೆರೆ – ಬೆಂಕಿ ನಂದಿಸಲು ಹರ ಸಾಹಸ

    ಚಿಕ್ಕಮಗಳೂರು: ಕಳಸದ (Kalasa) ಆನೆಗುಡ್ಡ ಮೀಸಲು ಅರಣ್ಯ ಭಾಗದ (Anegudda Reserve Forest) ಜನ ಸಂಚಾರವೇ ಇಲ್ಲದ ಗುಡ್ಡದ ತುದಿಯಲ್ಲಿ ಬೆಂಕಿ (Wildfire) ಕಾಣಿಸಿಕೊಂಡಿದೆ.

    ಕಾಡ್ಗಿಚ್ಚಿಗೆ ಸುತ್ತಮುತ್ತಲಿನ ಸುಮಾರು ಹತ್ತಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಗುಡ್ಡದ ಕಾಡ್ಗಿಚ್ಚಿನ ದೃಶ್ಯ ಡ್ರೋನ್‍ನಲ್ಲಿ ಸೆರೆಯಾಗಿದೆ. ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದ ಪರಿಣಾಮ ಬೆಂಕಿ ನಂದಿಸಲು ಅಧಿಕಾರಿಗಳ ಹರಸಾಹಸಪಡುತ್ತಿದ್ದಾರೆ.

    ಗುಡ್ಡದ ಒಂದು ಭಾಗ ಹಸಿರಿನಿಂದ ಕೂಡಿದ್ದು, ಮತ್ತೊಂದು ಭಾಗ ಸಂಪೂರ್ಣ ಒಣಗಿ ನಿಂತಿದೆ. ಪ್ರವಾಸಿಗರು, ಜನರೇ ಹೋಗದ ಜಾಗದಲ್ಲಿ ಹೇಗೆ ಬೆಂಕಿ ಬಿದ್ದಿದೆ ಎಂಬ ಬಗ್ಗೆ ಚರ್ಚೆ ಶುರುವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಸಿಲ ಧಗೆಗೆ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

    ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

  • ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು – 15,000 ಎಕ್ರೆ ಪ್ರದೇಶಕ್ಕೆ ಬೆಂಕಿ, ಐವರು ಸಜೀವ ದಹನ

    – 50 ಶತಕೋಟಿ ಡಾಲರ್‌ ಸಂಪತ್ತು ಬೆಂಕಿಗಾಹುತಿ, 1 ಲಕ್ಷ ಮಂದಿ ಸ್ಥಳಾಂತರ

    ವಾಷಿಂಗ್ಟನ್‌: ದಕ್ಷಿಣ ಕ್ಯಾಲಿಫೋರ್ನಿಯಾದ (South California) ಆಕರ್ಷಕ ನಗರವಾದ ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚು (Los Angeles Wildfires) ಹೊತ್ತಿಕೊಂಡಿದೆ. ಬೆಂಕಿ ನಿಯಂತ್ರಣಕ್ಕೆ ಬಾರದೇ ಕನಿಷ್ಠ 5 ಮಂದಿ ಸಜೀವ ದಹನವಾಗಿದ್ದಾರೆ.

    ಸುಮಾರು 15,832 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, 1,000 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಸುಮಾರು 1 ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಕೆಲವೆಡೆ ಅಸಂಖ್ಯಾತ ಐಷಾರಾಮಿ ಮನೆಗಳು ಬೆಂಕಿ ಹೊತ್ತಿಕೊಳ್ಳುವ ಭೀತಿಯಲ್ಲಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: `ನಾಪತ್ತೆ’ಯಾಗಿದ್ದ ಅತುಲ್ ಸುಭಾಷ್ ಪುತ್ರ ಹರ್ಯಾಣ ಬೋರ್ಡಿಂಗ್ ಸ್ಕೂಲ್‌ನಲ್ಲಿ – ಖಚಿತಪಡಿಸಿದ ಫರಿದಾಬಾದ್ ಶಾಲೆ

    ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಡ್ಡಿಂದ್ದ ಕಾಡ್ಗಿಚ್ಚು ಮಂಗಳವಾರದ ವೇಳೆಗೆ ಜನನಿಬಿಡ ಪ್ರದೇಶಗಳಿಗೆ ವ್ಯಾಪಿಸಿದೆ. ನಿಯಂತ್ರಣಕ್ಕೆ ಬಾರದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸಮರೋಪಾದಿ ಕಾರ್ಯಾಚರಣೆ ನಡೆಸುತ್ತಿದೆ. ಬುಧವಾರ ಅಗ್ನಿಶಾಮಕ ದಳದ ಬೆಂಕಿ ನಂದಿಸುವ ಕಾರ್ಯ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳಿತ್ತು. ಈ ವೇಳೆ ಚಂಡಮಾರುತ ಗಾಳಿ ಬೀಸಿದ್ದರಿಂದ ಬೆಂಕಿ ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: ತಿರುಪತಿಯಲ್ಲಿ ದುರಂತ – ಕಾಲ್ತುಳಿತಕ್ಕೆ ಮೂಲ ಕಾರಣ ಏನು? ದಿಢೀರ್‌ ಗೇಟ್‌ ಓಪನ್‌ ಮಾಡಿದ್ದು ಯಾಕೆ?

    50 ಶತಕೋಟಿ ಡಾಲರ್‌ ಸಂಪತ್ತು ನಷ್ಟ:
    ಇನ್ನೂ ಲಾಸ್‌ ಏಂಜಲೀಸ್‌ನಲ್ಲಿ ಹಬ್ಬಿದ ಕಾಡ್ಗಿಚ್ಚಿನಿಂದ ಸುಮಾರು 50 ಶತಕೋಟಿ ಡಾಲರ್‌ (42,000 ಕೋಟಿ ರೂ.) ಸಂಪತ್ತು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್‌ನಲ್ಲಿತ್ತು ಮಾನವನ ತಲೆಬುರುಡೆ, ಅಸ್ಥಿಪಂಜರ!

  • ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು – ಮನೆಗಳೂ ಬೆಂಕಿಗಾಹುತಿ, 10,000 ಮಂದಿ ಸ್ಥಳಾಂತರ

    ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು – ಮನೆಗಳೂ ಬೆಂಕಿಗಾಹುತಿ, 10,000 ಮಂದಿ ಸ್ಥಳಾಂತರ

    ವಾಷಿಂಗ್ಟನ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು (California Wildfire) ಸಂಭವಿಸಿದೆ. ಭಾರಿ ಗಾಳಿ ಕಾರಣ ಬೆಂಕಿ ವೇಗವಾಗಿ ಹಬ್ಬುತ್ತಿದೆ ಎಂದು ವರದಿಗಳು ತಿಳಿಸಿವೆ.

    5 ಗಂಟೆಯಲ್ಲಿ 62 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಹಲವು ಮನೆಗಳನ್ನು ಆಪೋಷನ ಮಾಡಿದೆ. ಇದನ್ನೂ ಓದಿ: ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ಮೂರು ಸಾವಿರಕ್ಕೂ ಹೆಚ್ಚು ಕಟ್ಟಡಗಳನ್ನು ಬೆಂಕಿ ಆವರಿಸುವ ಸಂಭವ ಇದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಲಾಸ್ ಏಂಜಲೀಸ್ ಸಮೀಪದ 10,000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್‌ – ಸ್ವಿಂಗ್‌ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ

    ಬೆಂಕಿ ವ್ಯಾಪಿಸುತ್ತಿದ್ದಂತೆ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕೆಲಸಕ್ಕೆ ಮುಂದಾಗಿವೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

  • ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ

    ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ

    ನ್ಯೂಯಾರ್ಕ್:‌ ಹವಾಯಿ (Hawaii Wildfire) ಐತಿಹಾಸಿಕ ಮಾಯಿ ಪಟ್ಟಣದಲ್ಲಿ ಕಾಡ್ಗಿಚ್ಚಿನಿಂದ ಸತ್ತವರ ಸಂಖ್ಯೆ 93 ಕ್ಕೆ ಏರಿಕೆ ಆಗಿದೆ. ಇದು ಅಮೆರಿಕದ (US) ಒಂದು ಶತಮಾನದ ಇತಿಹಾಸದಲ್ಲೇ ಸಂಭವಿಸಿದ ಭೀಕರ ಕಾಡ್ಗಿಚ್ಚು ಎಂದು ವಿಶ್ಲೇಷಿಸಲಾಗಿದೆ.

    ಹೊಸದಾಗಿ ಬಿಡುಗಡೆಯಾದ ಅಂಕಿಅಂಶದ ಪ್ರಕಾರ, ಉತ್ತರ ಕ್ಯಾಲಿಫೋರ್ನಿಯಾದಲ್ಲಿ 2018 ರಲ್ಲಿ ಸಂಭವಿಸಿದ ಕ್ಯಾಂಪ್ ಫೈರ್‌ನ ಸಂಖ್ಯೆಯನ್ನೂ ಇದು ಮೀರಿಸಿದೆ. ಕ್ಯಾಂಪ್‌ ಫೈರ್‌ 85 ಜನರು ಬಲಿ ತೆಗೆದುಕೊಂಡಿತ್ತು. ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಮುನ್ನಾ ದಿನವೇ ಪಾಕ್‍ನಲ್ಲಿ ಚೀನಾ ಇಂಜಿನಿಯರ್‌ಗಳ ಮೇಲೆ ಉಗ್ರರ ದಾಳಿ – ಸೈನಿಕರು ಸೇರಿ 13 ಸಾವು

    ಶವಗಳ ಶೋಧಕ್ಕಾಗಿ ಶ್ವಾನ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಮಾಯಿಯ ಕೆಲವು ಭಾಗಗಳನ್ನು ಧ್ವಂಸಗೊಳಿಸಿದ ಕಾಡ್ಗಿಚ್ಚು ಇನ್ನೂ ಉರಿಯುತ್ತಿದೆ. ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಮಂಗಳವಾರ ಹೊತ್ತಿಕೊಂಡ ಮೂರು ಪ್ರಮುಖ ಕಾಡ್ಗಿಚ್ಚು ಇನ್ನೂ ನಂದಿಸಲ್ಪಟ್ಟಿಲ್ಲ. ಲಹೈನಾದಲ್ಲಿ 85%, ಪುಲೆಹು/ಕಿಹೆಯಿನಲ್ಲಿ 80%, ಅಪ್‌ಕಂಟ್ರಿ ಮಾಯಿ ಬಳಿ 50% ನಷ್ಟು ಕಾಡ್ಗಿಚ್ಚು ಹಬ್ಬಿಕೊಂಡಿದೆ.

    ಲಾಹೈನಾಕ್ಕೆ ಹೋಗುವ ಹೆದ್ದಾರಿಯಲ್ಲಿ ಬೆಂಕಿಯಿಂದ ನಾಶವಾದ ಐತಿಹಾಸಿಕ ಪಟ್ಟಣ, ಕಾರುಗಳು, ಟ್ರಕ್‌ಗಳು ಮತ್ತು ಸರಬರಾಜುಗಳನ್ನು ಹೊತ್ತ ಬಸ್‌ಗಳು ಕಂಡುಬಂದಿವೆ. ಲಹೈನಾಗೆ ಮರಳಲು ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಪಶ್ಚಿಮ ಮಾಯಿಯಲ್ಲಿ ಇನ್ನೂ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: ಸೌದಿ ಕ್ಲಬ್‌ ಸೇರಿದ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ರೊನಾಲ್ಡೊ – ಅಲ್-ನಾಸ್ರ್‌ಗೆ ಐತಿಹಾಸಿಕ ಜಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡ್ರೋನ್ ಕಣ್ಗಾವಲಿನಲ್ಲಿ ಅರಣ್ಯ ರಕ್ಷಣೆಗೆ ಮುಂದಾದ ಕಾಫಿನಾಡ ಅರಣ್ಯ ಇಲಾಖೆ

    ಡ್ರೋನ್ ಕಣ್ಗಾವಲಿನಲ್ಲಿ ಅರಣ್ಯ ರಕ್ಷಣೆಗೆ ಮುಂದಾದ ಕಾಫಿನಾಡ ಅರಣ್ಯ ಇಲಾಖೆ

    ಚಿಕ್ಕಮಗಳೂರು: ಬೇಸಿಗೆಗೂ ಮುನ್ನವೇ ಸುಡು ಬಿಸಿಲ ಧಗೆಗೆ ಅರಣ್ಯವನ್ನು ಉಳಿಸುವುದೇ ಅರಣ್ಯ ಇಲಾಖೆ ದೊಡ್ಡ ಸವಾಲಾಗಿದೆ. ಹಾಗಾಗಿ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ನೂರಾರು ಕಿ.ಮೀ. ಫೈಲ್ ಲೈನ್ ನಿರ್ಮಿಸುವುದರ ಜೊತೆ ಡ್ರೋನ್ ಕಣ್ಗಾವಲಿನಲ್ಲಿ ಅರಣ್ಯವನ್ನು ರಕ್ಷಿಸಲು ಮುಂದಾಗಿದ್ದಾರೆ.

    ಈಗಾಗಲೇ ಜಿಲ್ಲೆಯಾದ್ಯಂತ ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಿಸಿರೋ ಅರಣ್ಯ ಇಲಾಖೆ ಮುತ್ತೋಡಿ, ಹೆಬ್ಬೆ, ಲಕ್ಕವಳ್ಳಿ, ತಣಿಗೇಬೈಲು ಸೇರಿದಂತೆ ಜಿಲ್ಲೆಯ ನಾಲ್ಕು ಅರಣ್ಯ ವಲಯದಲ್ಲೂ ಆಂಟಿಫೆಚಿಂಗ್ ಹಾಗೂ 13 ಫೈರ್ ಡಿಟೆಕ್ಷನ್ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸರ್ಕಾರ ಜಿಲ್ಲೆಯ 4 ವಲಯಗಳಿಗೂ 9 ಲಕ್ಷದಂತೆ 36 ಲಕ್ಷ ಹಣ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆ ಬೆಂಕಿ ನಂದಿಸಲು ಬೇಕಾದ ಅಗತ್ಯ ವಸ್ತುಗಳನ್ನು ಕೂಡ ಶೇಖರಿಸಿದೆ. ಸಿಬ್ಬಂದಿಗಳು ಕೂಡ ಗಸ್ತು ತಿರುಗುತ್ತಿದ್ದಾರೆ. ಇದನ್ನೂ ಓದಿ: ಭವಿಷ್ಯದಲ್ಲಿ ಗಾಳಿ ಗಂಡಾಂತರ ಬಂದು ತಿನ್ನಲು ಅನ್ನವಿಲ್ಲದ ಸ್ಥಿತಿ ಬರಲಿದೆ: ಕೋಡಿ ಶ್ರೀಗಳ ಭವಿಷ್ಯ

    ಬೆಂಕಿ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಂತೆ ಕಟ್ಟುನಿಟ್ಟಿನ ಆದೇಶವಿದೆ. ಅರಣ್ಯ ವಾಸಿಗಳಿಗೂ ಕೂಡ ಕಾಡಿನ ರಕ್ಷಣೆ ಬಗ್ಗೆ ತರಬೇತಿ ನೀಡಿ, ಜಾಗೃತಿ ಮೂಡಿಸಿದ್ದಾರೆ. ಬಿತ್ತಿಪತ್ರ, ಕರಪತ್ರ, ಬೀದಿ ನಾಟಕಗಳ ಮೂಲಕವೂ ಅರಣ್ಯ ರಕ್ಷಣೆಯ ಬಗ್ಗೆ ಕಾಡಿನ ಮಕ್ಕಳಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಫೈರ್ ಲೈನ್ ಯೋಜನೆ ಕಾಡು ಪ್ರಾಣಿಗಳ ರಕ್ಷಣೆಗೂ ಸಹಕಾರಿಯಾಗಿದೆ.

    ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಫೈರ್ ಕ್ಯಾಂಪ್ ನಿರ್ಮಿಸಿ 24 ಗಂಟೆಗಳ ಕಾಲವೂ ಸಿಬ್ಬಂದಿಗಳನ್ನು ಅರಣ್ಯ ರಕ್ಷಣೆಗೆ ನೇಮಿಸಿದ್ದು ಈ ಬಾರಿ ಇಲಾಖೆ ಕಿಡಿಗೇಡಿಗಳಿಂದ ಬೀಳುವ ಬೆಂಕಿಯನ್ನು ಸೆರೆಹಿಡಿಯುಲು ಡ್ರೋನ್ ಕ್ಯಾಮೆರಾ ಬಳಸುತ್ತಿದೆ. ಸೂಕ್ಷ್ಮ, ಅತೀ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಬಳಸಿ, ಯಾರೇ ಅರಣ್ಯಕ್ಕೆ ಬೆಂಕಿ ಇಟ್ಟರೂ ಆ ದೃಶ್ಯವನ್ನು ಸೆರೆ ಹಿಡಿದು ಆರೋಪಿಗಳ ಹೆಡೆಮುರಿ ಕಟ್ಟಲು ಇಲಾಖೆ ಸನ್ನದ್ಧವಾಗಿದೆ. ಇದನ್ನೂ ಓದಿ: ಹಿಜಬ್ ವಿವಾದ: ಕಾಲೇಜುಗಳಿಗೆ ಫೆ.16ರವರೆಗೂ ರಜೆ ಘೋಷಿಸಿದ ಸರ್ಕಾರ

    ವಿಶ್ವದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮಘಟ್ಟಗಳ ಸೌಂದರ್ಯದ ಶಕ್ತಿಯೇ ಶೋಲಾ ಕಾಡುಗಳು. ನೀರನ್ನು ಹಿಡಿದಿಟ್ಟುಕೊಂಡು ವರ್ಷ ಪೂರ್ತಿ ಹರಿಸುವ ಸಾಮರ್ಥ್ಯವಿರೋ ಶೋಲಾ ಕಾಡುಗಳು ಕೂಡ ಈ ಬಾರಿ ಬಿಸಿಲ ಧಗೆಯಿಂದ ಸುಡುತ್ತಿವೆ. ಸುಡು ಬಿಸಿಲ ಧಗೆಗೆ ಶೋಲಾ ಕಾಡುಗಳು ಕೂಡ ವರ್ಷದಿಂದ ವರ್ಷಕ್ಕೆ ಕ್ರಮೇಣ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಬಿಸಿಲಿನ ತಾಪದ ತೀವ್ರತೆಯಿಂದ ಶೋಲಾ ಕಾಡುಗಳು ಸೇರಿದಂತೆ ಅಲ್ಲಲ್ಲೇ ಅರಣ್ಯ ಬೆಂಕಿಗಾಹುತಿಯಾಗುತ್ತಿದೆ. 2004ರಲ್ಲಿ ಮುತ್ತೋಡಿಯಲ್ಲಿನ ಕಾಡ್ಗಿಚ್ಚಿನ ದುರಂತದಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಬೆಂಕಿಯಿಂದ ಕಾಡನ್ನು ರಕ್ಷಿಸಲು ಸೂಕ್ತ ಕ್ರಮಕೈಗೊಳ್ಳುತ್ತಿದೆ.

  • ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು – 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ

    ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು – 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿ

    ವಾಷಿಂಗ್ಟನ್‌: ಅಮೆರಿಕದ ಕೊಲೊರಾಡೋನಲ್ಲಿ ಕಾಳ್ಗಿಚ್ಚು ಉಂಟಾಗಿದ್ದು, ಸುಮಾರು 500ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.

    ಕಾಳ್ಗಿಚ್ಚಿನಿಂದಾಗಿ 580 ಮನೆಗಳು ಸುಟ್ಟು ಬೂದಿಯಾಗಿವೆ. ಸ್ಥಳೀಯ ಸಾವಿರಾರು ನಿವಾಸಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೊಲೊರಾಡೋ ಸುತ್ತಮುತ್ತ ಬೆಂಕಿ ಕೆನ್ನಾಲಿಗೆ ಚಾಚಿದೆ. ಘಟನೆಯಿಂದ ಕೆಲವರು ಗಾಯಗೊಂಡಿದ್ದಾರೆ. ಆದರೆ ಈವರೆಗೂ ಯಾವುದೇ ಸಾವು ಪ್ರಕರಣ ವರದಿಯಾಗಿಲ್ಲ. 2.5 ಚದರ ಮೈಲುಗಷ್ಟು ಕಾಳ್ಗಿಚ್ಚು ಆವರಿಸಿದ್ದು, ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಎಕ್ಸಾಂನಲ್ಲಿ ಫೇಲ್ – ಆತ್ಮಹತ್ಯೆಗೆ ಶರಣಾದ ಮೆಡಿಕಲ್ ವಿದ್ಯಾರ್ಥಿನಿ

    ಲೂಯಿಸ್‌ವೆಲ್‌ ಪ್ರದೇಶದಲ್ಲಿ ಸುಮಾರು 21,000 ಜನಸಂಖ್ಯೆ ಇದೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ.

    ಕಾಳ್ಗಿಚ್ಚಿಗೆ ಸಿಲುಕಿ ಗಾಯಗೊಂಡಿದ್ದ 6 ಮಂದಿಯನ್ನು ಯುಸಿ ಹೆಲ್ತ್‌ ಬ್ರೂಮ್‌ಫೀಲ್ಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೇ ಯುಎಸ್‌ ಹೆದ್ದಾರಿ-36 ಬಂದ್‌ ಮಾಡಲಾಗಿದೆ. ಈ ರಸ್ತೆ ಮಾರ್ಗವಾಗಿ ಯಾವುದೇ ವಾಹನಗಳು ಸಂಚರಿಸದಂತೆ ಕ್ರಮವಹಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಸೋಂಕಿತ ಹೃದಯಾಘಾತದಿಂದ ಸಾವು

  • ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

    ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

    -ನೀರು ಉಳಿಸಲು ಸರ್ಕಾರ ಚಿಂತನೆ

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಕಾರಣದಿಂದ ಅಪಾರ ಪರಿಸರ ನಾಶವಾಗಿದ್ದು, ಸದ್ಯ ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

    ಐದು ದಿನಗಳ ಅವಧಿಯಲ್ಲಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಬುಧವಾರದಿಂದಲೇ ಈ ಕಾರ್ಯಾಚರಣೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಡ್ಗಿಚ್ಚಿನ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಟೆಗಳು ಬೆಂಕಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದೇ ಅವುಗಳನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ. ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.

    ಈ ಕುರಿತು ಮಾತನಾಡಿರುವ ಮಾರಿಟಾ ಬೇಕರ್ ಎಂಬ ಅಧಿಕಾರಿ, ಕಾಡ್ಗಿಚ್ಚಿನ ಪರಿಣಾಮದಿಂದ ಇಡೀ ದೇಶವೇ ಸುಟ್ಟು ಹೋಗಿದೆ. ಅಲ್ಲದೇ ಬೆಂಕಿಯಿಂದ ಬಿಸಿಯ ಪ್ರಮಾಣ ಹೆಚ್ಚಾಗಿದ್ದು, ಕನಿಷ್ಠ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಪರದಾಡುತ್ತಿದ್ದೇವೆ. ಇದೇ ವೇಳೆ ಒಂಟೆಗಳು ವಸತಿ ಪ್ರದೇಶಗಳಿಗೆ ನುಗ್ಗಿ ಸಂಗ್ರಹಿಸಿದ್ದ ನೀರನ್ನು ಕುಡಿಯುತ್ತಿವೆ. ಅಲ್ಲದೇ ಈ ವೇಳೆ ಒಂಟೆಗಳ ವ್ಯರ್ಥದಿಂದಲೂ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

    ಕಳೆದ ನವೆಂಬರ್ ನಲ್ಲಿ ಆರಂಭವಾದ ಕಾಡ್ಗಿಚ್ಚು ಆಸ್ಟ್ರೇಲಿಯಾ ಜನರ ಪರಿಸ್ಥಿತಿಯನ್ನೇ ಬದಲಿಸಿದೆ. ಇದರಿಂದ ದೇಶದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಆದ್ದರಿಂದಲೇ ಕಾನೂನಿನ ನಿಯಮಗಳ ಅನ್ವಯವೇ ಒಂಟೆಗಳ ಹತ್ಯೆಗೆ ಅನುಮತಿ ಪಡೆಯಲಾಗಿದೆ. ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಡ್ಗಿಚ್ಚಿನಲ್ಲಿ ಇದುವರೆಗೂ 480 ಮಿಲಿಯನ್ ಪ್ರಾನಿಗಳು ಸಾವನ್ನಪ್ಪಿರುವುದಾಗಿ ಸರ್ಕಾರ ಅಂದಾಜು ಮಾಹಿತಿ ನೀಡಿದೆ.

    ಆಸ್ಟ್ರೇಲಿಯಾದ ಕಾಡ್ಗಿಚ್ಚು ವಿಶ್ವವನ್ನೇ ಆತಂಕಗೊಳಿಸಿದೆ. ಕಾಡ್ಗಿಚ್ಚಿನ ಪರಿಣಾಮ ಹಲವು ಪ್ರಾಣಿಗಳು ಬೆಂಕಿಗೆ ಸುಲಿಕಿ ಸಾವನ್ನಪ್ಪಿದ್ದರೆ ಒಂಟೆಗಳಿಗೆ ಉಸಿರುಗಟ್ಟಿದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಒಂಟೆಗಳು ನೀರು ಕುಡಿಯುತ್ತದೆ, ಸದ್ಯದ ಪರಿಸ್ಥಿತಿಯಲ್ಲಿ ಒಂಟೆಗಳು ಮತ್ತಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿದೆ. ಇದು ಕಾಡಂಚಿನ ಭಾಗದಲ್ಲಿ ಇರುವ ಜನರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ವಿಶ್ವದ ಪ್ರಾಣಿ ಪ್ರಿಯ ಸಂಘಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಸಮಸ್ಯೆಗೆ ಬೇರೊಂದು ಉಪಾಯ ಕಂಡು ಹಿಡಿಯುವಂತೆ ಸಲಹೆ ನೀಡಿದ್ದಾರೆ.