Tag: wild boar

  • ಕಾರವಾರ| ಜೆಸಿಬಿ ಆಪರೇಟರ್ ಮೇಲೆ ಕಾಡುಹಂದಿ ದಾಳಿ

    ಕಾರವಾರ| ಜೆಸಿಬಿ ಆಪರೇಟರ್ ಮೇಲೆ ಕಾಡುಹಂದಿ ದಾಳಿ

    ಕಾರವಾರ: ಜೆಸಿಬಿ ಆಪರೇಟರ್ ಮೇಲೆ ಕಾಡುಹಂದಿಯೊಂದು ದಾಳಿ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಕಡುವಳ್ಳಿಯಲ್ಲಿ ನಡೆದಿದೆ.

    ಜೆಜೆಎಂ ಕಾಮಗಾರಿ ಮಾಡುತ್ತಿದ್ದ ಜೆಸಿಬಿ ಆಫರೇಟರ್ ಮೇಲೆ ಹಂದಿ ದಾಳಿ ಮಾಡಿದೆ. ದಾಳಿಯಿಂದಾಗಿ ಒರಿಸ್ಸಾ ಮೂಲದ ಮನು ಎಂಬಾತ ಗಂಭೀರ ಗಾಯಗೊಂಡಿದ್ದಾನೆ.

    ಮುಖ ಹಾಗೂ ಎದೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಗಾಯಗೊಂಡ ಮನುಗೆ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ಗೆ ರವಾನಿಸಲಾಯಿತು.

  • ಮಾಜಿ‌ ಸಚಿವರ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು

    ಮಾಜಿ‌ ಸಚಿವರ ಫಾರ್ಮ್ ಹೌಸ್‌ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು

    ದಾವಣಗೆರೆ: ಇತ್ತೀಚೆಗಷ್ಟೇ ಮಾಜಿ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ (SS Mallikarjun) ಒಡೆತನದ ಕಲ್ಲೇಶ್ವರ ಮಿಲ್‌ ಹಿಂಭಾಗದ ಫಾರ್ಮಹೌಸ್‌ನಲ್ಲಿ ಪತ್ತೆ ಆಗಿದ್ದ ವನ್ಯ ಜೀವಿಗಳ ಪೈಕಿ ಕೃಷ್ಣಮೃಗ (Blackbuck) ಹಾಗೂ ಕಾಡುಹಂದಿ (Wild Boar) ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಖಾತ್ರಿ ಪಡಿಸಿದ್ದಾರೆ.

    ಡಿ.21ಕ್ಕೆ ಕಲ್ಲೇಶ್ವರ ಮಿಲ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಒಟ್ಟು 30 ಜೀವಿಗಳನ್ನು ವಶಕ್ಕೆ ಪಡೆದು, ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿತ್ತು. ಜೊತೆಗೆ ಘಟನೆಯ ಕುರಿತು ಸಂಪಣ್ಣ, ಕರಿಬಸವಯ್ಯ, ಸೆಂಥಿಲ್‌ ಹಾಗೂ ಮಿಲ್‌ನ ಮಾಲೀಕರಾದ ಮಾಜಿ ಸಚಿವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

    ಇದಾದ ಬಳಿಕ ಒಟ್ಟು 30 ವನ್ಯಜೀವಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶದಂತೆ ಅರಣ್ಯ ಇಲಾಖೆ ಕಲ್ಲೇಶರ ಮಿಲ್ ಹಿಂಭಾಗದ ಫಾರ್ಮ್‌ಹೌಸ್‌ನಿಂದ ವಶಕ್ಕೆ ಪಡೆದು, ಕಿರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮಿಲ್‌ನಲ್ಲಿ ಪತ್ತೆಯಾದ 6 ಕಾಡು ಹಂದಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಇನ್ನುಳಿದ 22 ಕಾಡು ಪ್ರಾಣಿಗಳನ್ನು ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ಬಿಡಲಾಗಿತ್ತು. ಆ ವನ್ಯ ಜೀವಿಗಳಲ್ಲಿ 11 ಕೃಷ್ಣಮೃಗ, 7 ಜಿಂಕೆ, 2 ನರಿ, 3 ಮುಂಗುಸಿ, 7 ಕಾಡು ಹಂದಿಗಳಿತ್ತು.

    ಈ ಪೈಕಿ ಈಗಾಗಲೇ ಮೃತಪಟ್ಟಿದ್ದ ಕಾಡು ಹಂದಿಯನ್ನು ಕೋರ್ಟ್ ಆದೇಶದಂತೆ ವಿಲೇವಾರಿ ಮಾಡಲಾಗಿದೆ. ಅಲ್ಲದೆ, ಸೋಮವಾರ ಒಂದು ಕೃಷ್ಣಮೃಗ ಸಾವನ್ನಪ್ಪಿದ್ದು, ಅದರ ದೇಹ ವಿಲೇವಾರಿಗಾಗಿ ನ್ಯಾಯಾಲಯಕ್ಕೆ ಅರಣ್ಯ ಇಲಾಖೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಇನ್ನುಳಿದಂತೆ ಇದೀಗ ಮೃತಪಟ್ಟಿರುವ ಒಂದು ಕೃಷ್ಣಮೃಗ ಹೊರತುಪಡಿಸಿ, 10 ಕೃಷ್ಣಮೃಗ ಹಾಗೂ 7 ಜಿಂಕೆಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಕೋರ್ಟ್ ಅನುಮತಿ ದೊರೆತರೆ, ಅವುಗಳನ್ನು ಸಹ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

    ನ್ಯಾಯಾಲಯದ ಆದೇಶದಂತೆ ಕಿರು ಮೃಗಾಲಯದಲ್ಲಿ ಇರಿಸಲಾಗಿದೆ. ಕೋರ್ಟ್ ಅನುಮತಿ ನೀಡಿದ ಪ್ರಾಣಿಗಳನ್ನು ಕಾಡಿಗೆ ಬಿಡಲಾಗಿದೆ. ಇನ್ನುಳಿದ ಪ್ರಾಣಿಗಳನ್ನು ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ದೇಶನ ನೀಡಿದರೆ, ಅವುಗಳನ್ನು ಅರಣ್ಯ ಪ್ರದೇಶಕ್ಕೆ ಬಿಡುತ್ತೇವೆ. ಡಿಎಫ್ಓ ಜಗನ್ನಾಥ್ ಅವರು ಪ್ರಾಣಿಗಳನ್ನು ಸಾವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಇದನ್ನೂ ಓದಿ: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಡು ಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಂಭ: ಗೋವಾ ಸಿಎಂ

    ಕಾಡು ಹಂದಿಯನ್ನು ಕ್ರಿಮಿ ಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಂಭ: ಗೋವಾ ಸಿಎಂ

    ಪಣಜಿ: ಕಾಡುಹಂದಿ ಕ್ರಿಮಿಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಭವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

    ಪಣಜಿಯಲ್ಲಿ ಕೃಷಿ ಮತ್ತು ಅರಣು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಾಡುಹಂದಿಯನ್ನು ಕ್ರಿಮಿಕೀಟವೆಂದು ಘೋಷಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಚಿದಾನಂದ ಸವದಿ ಕಾರು ಚಾಲನೆ ಮಾಡ್ತಿರಲಿಲ್ಲ: ಎಸ್‍ಪಿ ಲೋಕೇಶ್ ಜಗಲಾಸರ್

    ಕಾಡುಹಂದಿಗಳು ರಾಜ್ಯದಲ್ಲಿ ಕೃಷಿ ಕ್ಷೇತ್ರಗಳಿಗೆ ಹಾನಿಯುಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಸರ್ಕಾರ 2016ರಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (ಎನ್‍ಡಬ್ಲ್ಯೂಬಿ) ಶಿಫಾರಸ್ಸು ಮಾಡಿತ್ತು. ಆದ್ದರಿಂದ ಕಾಡುಹಂದಿಯನ್ನು ಕ್ರಿಮಿಕೀಟವೆಂದು ಘೋಷಿಸುವ ಪ್ರಸ್ತಾವ ಬಾಕಿ ಉಳಿದಿದೆ ಎಂದು ಸಿಎಂ ಸಾವಂತ್ ಮಾಹಿತಿ ನೀಡಿದ್ದಾರೆ.

    ಪ್ರಸ್ತುತ, ಕಾಡುಹಂದಿಯನ್ನು ವನ್ಯಜೀವಿ ಕಾಯ್ದೆಯಡಿ ರಕ್ಷಿಸಲಾಗಿದೆ, ಅದರ ಹತ್ಯೆಯನ್ನು ಕಾನೂನುಬಾಹಿರಗೊಳಿಸಿದೆ. ಕಳೆದ ಕೆಲವು ವರ್ಷಗಳಿಂದ ಮನುಷ್ಯ-ಪ್ರಾಣಿಗಳ ಸಂಘರ್ಷ ಮತ್ತು ಬೆಳೆಗಳ ನಾಶದಿಂದಾಗಿ, ರೈತರು ಕೆಲವು ಕಾಡು ಪ್ರಾಣಿಗಳ ಕ್ರಿಮಿಕೀಟಗಳನ್ನು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು, ಅವುಗಳಲ್ಲಿ ಒಂದು ಕಾಡುಹಂದಿಯಾಗಿದೆ.

  • ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು

    ಬುಡಕಟ್ಟು ಜನರ ಮೇಲೆ ದಾಳಿಗೆ ಸಂಚು ರೂಪಿಸಿದ್ದ 3 ಐಸಿಸ್ ಉಗ್ರರನ್ನ ಕೊಂದ ಕಾಡುಹಂದಿಗಳು

    ಬಾಗ್ದಾದ್: ಇರಾಕ್‍ನಲ್ಲಿ ಬುಡಕಟ್ಟು ಜನರ ಮೇಲೆ ದಾಳಿಗೆ ತಯಾರಿ ನಡೆಸಿದ್ದ ಐಸಿಸ್ ಉಗ್ರರ ಗುಂಪಿನ ಮೇಲೆ ಕಾಡುಹಂದಿಗಳು ದಾಳಿ ಮಾಡಿದ್ದು, ಮೂವರು ಉಗ್ರರು ಸಾವನ್ನಪ್ಪಪಿದ್ದಾರೆ.

    ಸ್ಥಳೀಯರ ಮಾಹಿತಿಯ ಪ್ರಕಾರ ಉಗ್ರರು ಇಲ್ಲಿನ ಕಿರ್ಕುಕ್ ಬಳಿಯಿರುವ ಹಮ್ರಿನ್ ಬೆಟ್ಟದ ಸಮೀಪದಲ್ಲಿ ಅಡಗಿದ್ದರು. ಕಾಡುಹಂದಿಗಳು ಮೂವರು ಐಸಿಸ್ ಉಗ್ರರನ್ನು ಕೊಂದಿದ್ದು, ಐವರನ್ನು ಗಂಭೀರವಾಗಿ ಗಾಯಗೊಳಿಸಿವೆ.

    ಇಲ್ಲಿನ ಉಬೇದ್ ಬುಡಕಟ್ಟು ಜನಾಂಗದ ಮುಖ್ಯಸ್ಥರು ಹಾಗೂ ಐಸಿಸ್ ನಿಗ್ರಹ ದಳದ ಮೇಲ್ವಿಚಾರಕರಾದ ಶೇಖ್ ಅನ್ವರ್-ಅಲ್ ಅಸ್ಸಿ ಅವರು ಹೇಳೋ ಪ್ರಕಾರ ಹವೀಜಾ ಪ್ರದೇಶವನ್ನ ಉಗ್ರರು ವಶಪಡಿಸಿಕೊಂಡ ನಂತರ ಇಲ್ಲಿನ ಬೆಟ್ಟಪ್ರದೇಶವನ್ನು ಬುಡಕಟ್ಟು ಜನರು ಬಿಟ್ಟು ಹೋಗಿದ್ದು ಅವರ ಮೇಲೆ ಉಗ್ರರು ದಾಳಿಗೆ ಉದ್ದೇಶಿಸಿದ್ದರು ಎನ್ನಲಾಗಿದೆ.

    ಹತ್ತಿರದ ಜೋಳದ ಹೊಲ ಹಾಗೂ ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕಾಡುಹಂದಿಗಳಿಗೆ ಇವರ ಓಡಾಟದಿಂದ ಕಿರಿಕಿರಿಯಾಗಿರಬಹುದು ಎಂದು ಅವರು ಹೇಳಿದ್ದಾರೆ.

    ಹವಿಜಾದಿಂದ ಓಡಿಹೋಗಲು ಯತ್ನಿಸಿದ 25 ಮಂದಿಯನ್ನ ಉಗ್ರರು ಕೊಂದಿದ್ದು, ಸ್ಥಳವನ್ನು ಬಿಟ್ಟುಹೋಗಲು ತಯಾರಿ ನಡೆಸಿದವರನ್ನೂ ಕೊಲ್ಲಬೇಕೆಂದಿದ್ದರು. ಆದ್ರೆ ಕಾಡುಹಂದಿಗಳಿಂದ ಅವರೇ ಸಾವನ್ನಪ್ಪದ್ದಾರೆ ಎಂದು ಶೇಖ್ ಹೇಳಿದ್ದಾರೆ.

    ಹವೀಜಾ ಇರಾಖ್‍ನ ಮೊಸುಲ್ ನಗರದಿಂದ 100 ಮೈಲಿ ದೂರದಲ್ಲಿದ್ದು, ವಿಮೋಚನೆಯಾಗುವ ಹಂತದಲ್ಲಿದೆ. ಆದ್ರೆ ಐಸಿಸ್ ವಿರುದ್ಧ ಹೋರಾಟದಲ್ಲಿದೆ ಎಂದು ವರದಿಯಾಗಿದೆ.