Tag: wild animal

  • ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆ

    ವನ್ಯಜೀವಿಗಳ ವಸ್ತುಗಳನ್ನಿಟ್ಟುಕೊಂಡವರು 2-3 ತಿಂಗಳಲ್ಲಿ ವಾಪಸ್ ಮಾಡಬೇಕು: ಡೆಡ್‌ಲೈನ್ ನೀಡಿದ ಖಂಡ್ರೆ

    ಬೀದರ್: ವನ್ಯಜೀವಿಗಳ ಹಲ್ಲು, ಉಗುರು, ಅಂಗಾಂಗಗಳು, ಚರ್ಮ ಹಾಗೂ ಕೊಂಬುಗಳನ್ನು ಇಟ್ಟುಕೊಂಡವರು 2 ರಿಂದ 3 ತಿಂಗಲ್ಲಿ ವಾಪಸ್ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿಕೆ ನೀಡಿದ್ದಾರೆ.

    ಹಲವು ವರ್ಷಗಳಿಂದ ವನ್ಯಜೀವಿಗಳ (Wild Animal) ಉತ್ಪನ್ನಗಳನ್ನಿಟ್ಟುಕೊಂಡವರಿಗೆ ಬೀದರ್‌ನಲ್ಲಿ ಅರಣ್ಯ ಸಚಿವರು ಡೆಡ್‌ಲೈನ್ ನೀಡಿದ್ದಾರೆ. ಈಗಾಗಲೇ ಎಲ್ಲಾ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು ಡೆಡ್‌ಲೈನ್ ಬಗ್ಗೆ ಕರಡು ಪ್ರತಿ ರೆಡಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಜನರಿಗೆ ಈ ಬಗ್ಗೆ ಅರಿವು ಇಲ್ಲ. ಹೀಗಾಗಿ ಅವುಗಳನ್ನು ತಮ್ಮಲ್ಲಿಯೇ ಇರಿಸಿಕೊಂಡಿದ್ದು, ಅವುಗಳನ್ನು ಅರಣ್ಯ ಇಲಾಖೆಗೆ ವಾಪಸ್ ಕೊಡಲು ಒಂದು ಅವಕಾಶ ನೀಡುತ್ತಿದ್ದೇವೆ. ಸಿಎಂ ಜೊತೆ ಚರ್ಚೆ ಮಾಡಿ ತಿರ್ಮಾನ ಮಾಡಿದ್ದು, ನವೆಂಬರ್ 9ಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಮಂಡನೆ ಮಾಡಿ ಜಾರಿಗೆ ತರುತ್ತೇವೆ ಎಂದರು. ಇದನ್ನೂ ಓದಿ: ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಗೆ ಪೊಲೀಸರಿಂದ ನೋಟಿಸ್

    ಕಳ್ಳಬೇಟೆ ಮಾಡೋದು ಅಪರಾಧವಿದೆ. ಅದನ್ನು ನಮ್ಮ ಇಲಾಖೆ ತಡೆಯುತ್ತದೆ ಎಂದು ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ವನ್ಯಜೀವಿಗಳ ಉತ್ಪನ್ನ ಬಳಸುತ್ತಿರುವವರಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿ ನಿಷ್ಠಾವಂತರು, ಸಿಎಂ ಆಗಲು ಅರ್ಹರಿದ್ದಾರೆ – ಸಚಿವ ಕೆ.ಎನ್ ರಾಜಣ್ಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವನ್ಯಜೀವಿಯಿಂದ ಜೀವಹಾನಿ – ಸ್ಥಳ ಭೇಟಿಗೆ ಈಶ್ವರ್ ಖಂಡ್ರೆ ಸೂಚನೆ

    ವನ್ಯಜೀವಿಯಿಂದ ಜೀವಹಾನಿ – ಸ್ಥಳ ಭೇಟಿಗೆ ಈಶ್ವರ್ ಖಂಡ್ರೆ ಸೂಚನೆ

    – ಒತ್ತುವರಿ ತೆರವಿಗೆ ಆದೇಶ

    ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ವನ್ಯಜೀವಿಗಳ (Wild Animal) ದಾಳಿಯಿಂದ ಮಾನವ ಪ್ರಾಣಿ ಹಾನಿ ಆದರೆ, ಆಯಾ ವಲಯದ ಉನ್ನತ ಅರಣ್ಯಾಧಿಕಾರಿಗಳು ಆದ್ಯತೆಯ ಮೇಲೆ ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವನ ಹೇಳಿ, ಪರಿಹಾರ ನೀಡಬೇಕು ಮತ್ತು ಪ್ರಾಣಿಗಳ ಸೆರೆಗೆ ಅಥವಾ ಕಾಡಿಗೆ ಕಳುಹಿಸಲು ಕ್ರಮ ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwara Khandre) ಸೂಚನೆ ನೀಡಿದ್ದಾರೆ.

    ಶುಕ್ರವಾರ ಬೆಂಗಳೂರಿನ (Bengaluru) ತಮ್ಮ ಕಚೇರಿಯಲ್ಲಿ ಅರಣ್ಯ ವೃತ್ತಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕರಡಿಯ ದಾಳಿಯಿಂದ ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ವಿಭಾಗದ ಮರಗಡಿ ಗ್ರಾಮದಲ್ಲಿ ಜಮ್ಮು ಬಾಗು ಥೋರಟ್ (60) ಮೃತಪಟ್ಟಿರುವ ಬಗ್ಗೆ ಸಂತಾಪ ಸೂಚಿಸಿದ ಸಚಿವರು, ಕೂಡಲೇ ಪರಿಹಾರ ನೀಡುವಂತೆ ಆದೇಶ ನೀಡಿದರು.

    ಒತ್ತುವರಿ ತೆರವಿಗೆ ಸೂಚನೆ:
    ಧಾರವಾಡ ವಲಯದ ಕಲಘಟಗಿ ಬಳಿ 50 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡಿರುವ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಣ್ಣ ಮನೆ ಕಟ್ಟಿಕೊಂಡಿರುವ, 3 ಎಕರೆಗಿಂತ ಕಡಿಮೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ಬಡವರ ವಿಷಯದಲ್ಲಿ ಮಾನವೀಯತೆ ತೋರಿ. ಅರಣ್ಯವನ್ನು ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ಸೂಚಿಸಿದರು.

    ವನಮಹೋತ್ಸವ:
    ವನಮಹೋತ್ಸವದ ಅವಧಿಯಲ್ಲಿ ರಾಜ್ಯದಾದ್ಯಂತ ಯಾವ ಯಾವ ವೃತ್ತದಲ್ಲಿ ಎಷ್ಟು ಸಸಿ ನೆಡಲಾಗಿದೆ, ಎಷ್ಟು ಸಸಿಗಳನ್ನು ರೈತರಿಗೆ ನೀಡಲಾಗಿದೆ ಎಂಬ ವಿವರ ಪಡೆದ ಸಚಿವರು, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಗುರಿ ಮೀರಿ ಸಾಧನೆ ಮಾಡಿ. ಮಳೆ ಕಡಿಮೆ ಇರುವ ಪ್ರದೇಶದಲ್ಲಿ ಈಗಾಗಲೇ ಬೆಳೆಸಿರುವ ಸಸಿಗಳನ್ನು ಮಳೆ ಹೆಚ್ಚಾಗಿ ಆಗಿರುವ ಪ್ರದೇಶದಲ್ಲಿ ನೆಟ್ಟು ಪೋಷಿಸಿ ಎಂದು ಸೂಚಿಸಿದರು. ಇದನ್ನೂ ಓದಿ: Nandini Milk: ನಂದಿನಿ ಹಾಲಿನ ದರ 3 ರೂ. ಹೆಚ್ಚಳ

    ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ವ್ಯಾಪ್ತಿ ಮತ್ತು ಹಸಿರು ವಲಯ ವ್ಯಾಪ್ತಿ ಕಡಿಮೆ ಇರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಸಚಿವರು, ಈ ಭಾಗದಲ್ಲಿ ಸರ್ಕಾರಿ ಕಚೇರಿಗಳ ಆವರಣ, ರಸ್ತೆಯ ಬದಿಗಳಲ್ಲಿ ಮತ್ತು ಸರ್ಕಾರಿ ಜಮೀನಿನಲ್ಲಿ ಎಲ್ಲೆಲ್ಲಿ ಸಸಿ ನೆಡಲು ಅವಕಾಶ ಇದೆಯೋ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು, ಅದರ ಪೋಷಣೆಗೆ ಇತರ ಇಲಾಖೆಗಳ ನೆರವು ಪಡೆಯುವಂತೆ ತಿಳಿಸಿದರು.

    ಸಭೆಯಲ್ಲಿ ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಸಂಜಯ್ ಬಿಜ್ಜೂರ್, ರಾಜೀವ್ ರಂಜನ್ ಮತ್ತಿತರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಶಾಸಕತ್ವ ಅಸಿಂಧು ಕೋರಿ ಅರ್ಜಿ – ಜು.28 ಕ್ಕೆ ಹೈಕೋರ್ಟ್‌ನಿಂದ ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿತ್ರೀಕರಣಕ್ಕೆ ಬಂದ ನಾಯಿಯನ್ನು ಕಾಡುಪ್ರಾಣಿ ಎಂದು ತಪಾಸಣೆ ಮಾಡಿದ ಅರಣ್ಯ ಸಿಬ್ಬಂದಿ

    ಚಿತ್ರೀಕರಣಕ್ಕೆ ಬಂದ ನಾಯಿಯನ್ನು ಕಾಡುಪ್ರಾಣಿ ಎಂದು ತಪಾಸಣೆ ಮಾಡಿದ ಅರಣ್ಯ ಸಿಬ್ಬಂದಿ

    ತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ 20 ಕೋಟಿ ಬೆಲೆಬಾಳುವ ಕಕೇಶಿಯ್ ಶೆಫರ್ಡ್ (, Caucasian Shepherd) ಶ್ವಾನವನ್ನು ಖ್ಯಾತ ನಟ ರವಿಚಂದ್ರನ್ (Ravichandran) ನಾಯಕ ನಟನಾಗಿ ನಟಿಸುತ್ತಿರುವ ‘ಗೌರಿಶಂಕರ’ (Gauri Shankar) ಸಿನಿಮಾ ಚಿತ್ರೀಕರಣಕ್ಕೆ ತರಲಾಗಿದ್ದು ಈ ವೇಳೆ ದಾಂಡೇಲಿಯಲ್ಲಿ  ಶ್ವಾನವನ್ನು ನೋಡಿದ ಅರಣ್ಯ ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಲ್ಲದೇ ಇದೊಂದು ಕಾಡುಪ್ರಾಣಿ ಎಂದು ತಿಳಿದು ವಶಕ್ಕೆ ಪಡೆಯಲು ಮುಂದಾಗಿದ್ದರು. ಕೊನೆಗೆ ನಾಯಿ ಮಾಲೀಕ ಸತೀಶ್ ಕ್ಯಾಡಬಮ್ಸ್ ಇದು ಶ್ವಾನ, ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿಯಲ್ಲಾ ಎಂದು ಅರಣ್ಯ ಸಿಬ್ಬಂದಿಗಳಿಗೆ ಫೋಟೋವನ್ನು ತೋರಿಸುವ ಮೂಲಕ ಅರಣ್ಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು.

    ಇದೇ ಮೊದಲಬಾರಿಗೆ ಸತೀಶ್ ರವರು ಸಾಕಿರುವ 20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನವನ್ನು ಕನ್ನಡದ ಸಿನಿಮಾದಲ್ಲಿ ಬಳಸಲಾಗುತ್ತಿದ್ದು ದಾಂಡೇಲಿ, ಜೋಯಿಡಾ ,ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು ಶ್ವಾನಕ್ಕೆ ತಂಗಲು ಹವಾ ನಿಯಂತ್ರಿತ ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದ್ದು 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಈ ಸಿನಿಮಾದ ಶೂಟಿಂಗ್ ಗಾಗಿಯೇ ನಾಯಿಗೆ ಸಂಭಾವನೆಯನ್ನು ಕೂಡ ನೀಡಲಾಗುತ್ತಿದ್ದು, ಹತ್ತು ಲಕ್ಷ ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಈ ಪ್ರಮಾಣದ ಹಣವನ್ನು ಸಂಭಾವನೆಯಾಗಿ ಪಡೆದ ಮೊದಲ ಪ್ರಾಣಿ ಇದಾಗಿದೆ. ಈಗಾಗಲೇ ಮೂರು ದಿನಗಳ ಕಾಲ ಚಿತ್ರೀಕರಣದಲ್ಲೂ ಅದು ಭಾಗಿಯಾಗಿದೆ. ಕೇವಲ ಮೂರೇ ಮೂರು ಪಾತ್ರಗಳು ಸಿನಿಮಾದಲ್ಲಿದ್ದು, ನಾಯಿ ಮತ್ತು ಹುಲಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ (Stray Dog) ಕಾಟ ಮಿತಿಮೀರಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,533 ಜನ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತ ನಾಯಿಗಳ ಸಂತಾನ ಹರಣ (Treatment for infertility) ಚಿಕಿತ್ಸೆಗೆ ಮುಂದಾಗಿದೆ.

    ಇದರ ಭಾಗವಾಗಿ ಖಾಸಗಿಯವರೊಂದಿಗೆ ಸ್ಥಳೀಯ ಆಡಳಿತದ ಸಿಬ್ಬಂದಿ ಸೇರಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಪುರಸಭೆಯ ಸಿಬ್ಬಂದಿ ಮಾತ್ರ ಬೀದಿನಾಯಿಗಳನ್ನು ಹಿಡಿಯುವುದರಲ್ಲಿ ರಾಕ್ಷಸತನ ತೋರಿದ್ದಾರೆ. ಇದನ್ನೂ ಓದಿ: IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

    ಹೌದು ಹಳಿಯಾಳ ನಗರದಲ್ಲಿ ಬೀದಿ ಬೀದಿಗಳನ್ನು ಜಾಲಾಡಿದ ಪುರಸಭೆ ಸಿಬ್ಬಂದಿ ಬೇಕಾ ಬಿಟ್ಟಿ ಬೀದಿನಾಯಿಗಳನ್ನು ನಿಯಮ ಮೀರಿ ಹಿಂಸಾತ್ಮಕ ರೀತಿಯಲ್ಲಿ ಹಿಡಿದಿದ್ದಾರೆ. ಇನ್ನೂರಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿದ ಪುರಸಭೆ (Municipality) ಸಿಬ್ಬಂದಿ ಮಾಡಿದ್ದ ಕೆಲಸ ಮಾತ್ರ ಎಡವಟ್ಟಿನದ್ದು. ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳದಿಂದ ಯಲ್ಲಾಪುರ ಭಾಗದ ಕಾಡಿನಲ್ಲಿ 80ಕ್ಕೂ ಹೆಚ್ಚು ನಾಯಿಗಳನ್ನು ತಂದು ಬಿಟ್ಟಿದ್ದಾರೆ.

    ಈ ಭಾಗದಲ್ಲಿ ಹೆಚ್ಚು ಕಾಡು (Wild) ಇದ್ದು, ಚಿರತೆ, ಹುಲಿಗಳಿವೆ. ಹೀಗೆ ಬೇಕಾಬಿಟ್ಟಿ ಕಾಡಿನಲ್ಲಿ ಬಿಟ್ಟಿದ್ದರಿಂದ ಇದೀಗ ಬೀದಿ ನಾಯಿಗಳಿಗೆ ಆಹಾರ ವಿಲ್ಲದೇ ಸಾಯುವ ಆತಂಕವಿದ್ದರೆ, ಕಾಡುಪ್ರಾಣಿಗಳಿಗೆ (Wild Animal) ಸುಲಭವಾಗಿ ಆಹಾರವಾಗುತ್ತಿವೆ. ಪುರಸಭೆ ಸಿಬ್ಬಂದಿಗಳು ಮಾಡಿದ ಅಚಾತುರ್ಯದ ಕೆಲಸಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಇದನ್ನೂ ಓದಿ: ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್

    ಹಳಿಯಾಳದ ಮಾತೃಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಕೆ ಯೋಗರಾಜ್‍ರವರು ಪುರಸಭೆ ಸಿಬ್ಬಂದಿ ಅಮಾನುಷ ವರ್ತನೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಪಶುಸಂಗೋಪನ ಇಲಾಖೆಯಿಂದಲೂ ಪುರಸಭೆ ಸಿಬ್ಬಂದಿ ಕೃತ್ಯಕ್ಕೆ ನೋಟಿಸ್ ಜಾರಿಮಾಡಿದ್ದು, ಇದೀಗ ಹಳಿಯಾಳ ತಾಲೂಕಿನಲ್ಲಿ ಪುರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜಮೀನಿನಲ್ಲಿದ್ದ ರೈತನನ್ನು ಬಲಿ ತೆಗೆದುಕೊಂಡ ಕಾಡು ಪ್ರಾಣಿ

    ಜಮೀನಿನಲ್ಲಿದ್ದ ರೈತನನ್ನು ಬಲಿ ತೆಗೆದುಕೊಂಡ ಕಾಡು ಪ್ರಾಣಿ

    ಮಂಡ್ಯ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡು ಪ್ರಾಣಿಯೊಂದು ದಾಳಿ ನಡೆಸಿ, ದೇಹವನ್ನು ಬಗೆದು ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದಲ್ಲಿ ಜರುಗಿದೆ.

    ರಾಮೇಗೌಡ (65)ಮೃತ ನಾಗಿದ್ದಾನೆ. ನೆಲಮನೆ ಗ್ರಾಮದ ನಿವಾಸಿಯಾದ ರಾಮೇಗೌಡ ತನ್ನ ಜಮೀನಿನಲ್ಲಿ ಕೆಲಸ ಮಾಡಲು ಹೋದ ಸಂದರ್ಭದಲ್ಲಿ ಕಾಡು ಪ್ರಾಣಿಯೊಂದು ದಾಳಿ ನಡೆಸಿ ಹೊಟ್ಟೆಯನ್ನು ಬಗೆದು ಸಾಯಿಸಿದೆ. ರಾಮೇಗೌಡರು ತುಂಬಾ ಸಮಯ ಜಮೀನಿನಿಂದ ಮನೆಗೆ ಬಾರದ ಕಾರಣ ಮನೆಯವರು ಜಮೀನಿಗೆ ತೆರಳಿ ನೋಡಿದ ಸಂದರ್ಭದಲ್ಲಿ ರಾಮೇಗೌಡ ಸಾವನ್ನಪ್ಪಿರುವ ದೃಶ್ಯ ಕಂಡಿದೆ. ಇದನ್ನೂ ಓದಿ: ಬಿಎಸ್‍ವೈ ಮಾತನ್ನೇ ಬಿಜೆಪಿ ಹೈಕಮಾಂಡ್ ಕೇಳಲಿಲ್ಲ, ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ? – ಸಿದ್ದರಾಮಯ್ಯ ಟೀಕೆ

    ರಾಮೇಗೌಡನನ್ನು ಸಾಯಿಸಿರುವ ಪ್ರಾಣಿಯ ಗುರುತುಗಳು ಪತ್ತೆಯಾಗದ ಕಾರಣ ಯಾವ ಪ್ರಾಣಿಯಿಂದ ರಾಮೇಗೌಡರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿಲ್ಲ. ಹಲ್ಲೆ ಮಾಡಿರುವ ರೀತಿ ನೋಡಿದರೆ ಚಿರತೆ ಅಥವಾ ಕಾಡು ಹಂದಿ ಹಲ್ಲೆ ಮಾಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆ – ನಾಲ್ವರ ಬಂಧನ

    ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಅಕ್ರಮ ಬೇಟೆ – ನಾಲ್ವರ ಬಂಧನ

    ಮಡಿಕೇರಿ: ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಬೇಟೆಯಾಡಿದ ನುರಿತ ಬೇಟೆಗಾರರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ವಲಯ ಅರಣ್ಯಾಧಿಕಾರಿ ಹೆಚ್.ಜಿ. ದೇವರಾಜು ಮಾರ್ಗದರ್ಶನದಲ್ಲಿ ಖಚಿತ ಸುಳಿವಿನ ಮೇರೆಗೆ ದಾಳಿ ಮಾಡಿದ ಸಿಬ್ಬಂದಿ ಕೆ.ಬಿ. ಉಮೇಶ್, ಪಿ.ಬಿ ರಾಮಕೃಷ್ಣ, ಕೆ.ಬಿ. ರವೀಂದ್ರ, ಕೆ.ಬಿ. ಸುರೇಶ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಳಿವಿನಂಚಿನಲ್ಲಿರುವ ಕೆಂದಳಿಲು ಮತ್ತು ಕಬ್ಬೆಕ್ಕು ಪ್ರಾಣಿಗಳ ಮಾಂಸ ಹಾಗೂ ಸುಬ್ರಮಣ್ಯ ಎಂಬವರ ಪರವಾನಿಗೆ ರಹಿತ ಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 2(1), (16) (20), (35), (37), 9, 31, 39, 50, 51,59 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧಿತನಾಗಿರುವ ರಾಮಕೃಷ್ಣ ಈ ಹಿಂದೆ ಸಿಂಗಳಿಕ ಬೇಟೆಯಾಡಿದ ಪ್ರಕರಣದಡಿಯಲ್ಲಿ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದು ಹೊರಬಂದಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಮಾರಾಮಾರಿ – ಓರ್ವನಿಗೆ ಗಾಯ

  • ಕಾಡು ಪ್ರಾಣಿಯಿಂದ ಹಸು ಸತ್ತರೆ 10 ಸಾವಿರ ಪರಿಹಾರ – ಅರಣ್ಯ ಸಚಿವ ಆನಂದ್ ಸಿಂಗ್

    ಕಾಡು ಪ್ರಾಣಿಯಿಂದ ಹಸು ಸತ್ತರೆ 10 ಸಾವಿರ ಪರಿಹಾರ – ಅರಣ್ಯ ಸಚಿವ ಆನಂದ್ ಸಿಂಗ್

    – ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳ

    ಚಾಮರಾಜನಗರ: ಕೊರೊನಾದಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಬಂಡೀಪುರದ ಕುಂದಕೆರೆ ವಲಯದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಅವರು, ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೆ. ಅಷ್ಟರಲ್ಲೇ ಕೊರೊನಾ ಬಂತು. ಹಾಗಾಗಿ ಅದು ನೆನಗುದಿಗೆ ಬಿದ್ದಿದೆ ಎಂದರು.

    ಬಂಡೀಪುರದ 40 ಕಿಲೋ ಮೀಟರ್ ಸೇರಿದಂತೆ ರಾಜ್ಯದ ಅರಣ್ಯಗಳ ಅಂಚಿನಲ್ಲಿ 650 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ ಹೊಂದಲಾಗಿದೆ. ಇದಕ್ಕೆ 100 ಕೋಟಿ ರೂಪಾಯಿ ಅನುದಾನವು ಸಹ ಇದೆ. ಕುಂದಕೆರೆ ವಲಯದಲ್ಲಿ ಹಲವಾರು ಜಾನುವಾರುಗಳನ್ನು ಕೊಂದು ಹಾಕಿರುವ ಹುಲಿ ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಹುಲಿ ಸೆರೆಗೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

    ರಾಜ್ಯದಲ್ಲಿ ಸಾಕು ಪ್ರಾಣಿಗಳಲ್ಲಾಗಲಿ, ಕಾಡು ಪ್ರಾಣಿಗಳಲ್ಲಾಗಲಿ ಕೊರೊನಾ ಕಂಡು ಬಂದಿಲ್ಲ. ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಕೊರೊನಾ ತಗುಲದಂತೆ ಮುಂಜಾಗ್ರತೆ ವಹಿಸಲಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಹಸು ಸತ್ತರೆ 10 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದು ಸಾಲುವುದಿಲ್ಲ ಎಂಬ ಹಿನ್ನೆಲೆಯಲ್ಲಿ ತಳಿ ಆಧಾರದ ಮೇಲೆ ಪರಿಹಾರ ಹೆಚ್ಚಳಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

  • ಕಾಡು ಪ್ರಾಣಿ ಬೇಟೆ ವೇಳೆ ರಿವರ್ಸ್ ಫೈರಿಂಗ್- ವ್ಯಕ್ತಿ ಸಾವು

    ಕಾಡು ಪ್ರಾಣಿ ಬೇಟೆ ವೇಳೆ ರಿವರ್ಸ್ ಫೈರಿಂಗ್- ವ್ಯಕ್ತಿ ಸಾವು

    ರಾಮನಗರ: ಅರಣ್ಯದಲ್ಲಿ ಕಾಡು ಪ್ರಾಣಿ ಬೇಟೆಯಾಡುವ ವೇಳೆ ನಾಡಬಂದೂಕಿನಿಂದ ರಿವರ್ಸ್ ಫೈರಿಂಗ್ ಆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಕನಕಪುರ ತಾಲೂಕಿನ ಟಿ.ಬೇಕುಪ್ಪೆ ನಿವಾಸಿ ರವೀಶ್ ಮೃತ ದುರ್ದೈವಿ. ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ರವೀಶ್ ಹಾಗೂ ಕೆಲವು ಬೇಟೆಗಾರರು ರಾತ್ರಿ ಬೇಟೆಯಾಡಲು ತೆರಳಿದ್ದರು. ಬೇಟೆಯ ವೇಳೆ ನಾಡಬಂದೂಕಿನಲ್ಲಿ ರಿವರ್ಸ್ ಫೈರಿಂಗ್ ಆಗಿದ್ದು ರವೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ರವೀಶ್ ಮೃತದೇಹವನ್ನು ಚನ್ನಪಟ್ಟಣ ತಾಲೂಕಿನ ಬುಕ್ಕಸಾಗರ ಗ್ರಾಮದ ರಸ್ತೆ ಬಳಿ ಇಟ್ಟು ಅಪಘಾತ ಎಂದು ಬಿಂಬಿಸಲು ಸಂಗಡಿಗರು ಮುಂದಾಗಿದ್ದರು. ಆದರೆ ಸಮೀಪದಲ್ಲೇ ಶನೀಶ್ವರ ದೇವಾಲಯದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ರಸ್ತೆಯಲ್ಲಿ ಜನರು ಇರುವುದನ್ನು ಕಂಡ ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದಾರೆ. ಸಾರ್ವಜನಿಕರನ್ನು ಕಂಡು ಬೇಟೆಗಾರರು ಮೃತದೇಹ ಬಿಟ್ಟು ಓಡಿ ಹೋಗಿದ್ದಾರೆ.

    ಈ ಸಂಬಂಧ ಚನ್ನಪಟ್ಟಣದ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕನಕಪುರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಮೃತ ರವೀಶ್ ಜೊತೆಗಿದ್ದ ಬೇಟೆಗಾರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.