Tag: Wig

  • 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

    30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ

    ನವದೆಹಲಿ: ಜಗತ್ತಿನಾದ್ಯಂತ ಕಳ್ಳಸಾಗಣೆದಾರರು ಆಗಾಗ ತಮ್ಮ ಕೈಚಳಕ ಪ್ರದರ್ಶಿಸುತ್ತಿದ್ದಾರೆ. ಆದರೆ, ಪೊಲೀಸರು ಇದಕ್ಕೆ ನಾವೇನು ಕಡಿಮೆಯಿಲ್ಲ ಎನ್ನುವಂತೆ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೂ, ಕೆಲ ಮಾದಕ ವಸ್ತು, ಚಿನ್ನಾಭರಣ ಕಳ್ಳಸಾಗಣೆ ಮಾಡುವವರು ಅಕ್ರಮ ವಸ್ತುಗಳನ್ನು ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ವಿನೂತನ ಮಾರ್ಗಗಳನ್ನು ಅನುಸರಿಸುತ್ತಾರೆ. ತಮ್ಮ ದೇಹದ ಭಾಗಗಳಲ್ಲೂ ಅವುಗಳನ್ನು ಬಚ್ಚಿಟ್ಟುಕೊಂಡು ಕೊಂಡೊಯ್ಯುತ್ತಾರೆ.

    CRIME 2

    ಅದೇ ರೀತಿಯ ಘಟನೆಯೊಂದನ್ನು ನವದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಶನಲ್ (ಎಲ್‌ಎಫ್‌ಟಿ) ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ವ್ಯಕ್ತಿಯೊಬ್ಬ ತನ್ನ ವಿಗ್ ಮತ್ತು ಗುದನಾಳದಲ್ಲಿಟ್ಟು ಸಾಗಿಸುತ್ತಿದ್ದ 30.55 ಲಕ್ಷ ರೂ. ಮೌಲ್ಯದ ಚಿನ್ನ (630.45 ಗ್ರಾಂ) ವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಅಬುಧಾಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು 3ನೇ ಟರ್ಮಿನಲ್‌ನಲ್ಲಿ ತಡೆದು, ಪರಿಶೀಲಿಸಿದ್ದಾರೆ. ಈ ವೇಳೆ ಆಸಾಮಿ ತನ್ನ ವಿಗ್‌ನಲ್ಲಿ ವಿಗ್‌ನಲ್ಲಿ ಹಾಗೂ ಗುದನಾಳದಲ್ಲಿ ಬಚ್ಚಿಟ್ಟಿದ್ದ ಚಿನ್ನ ಪತ್ತೆಯಾಗಿದೆ. ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿ ಹೇಳಿದೆ.

  • ವಿಗ್ ಧರಿಸಿದ್ದ ವರನನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದ ವಧು

    ವಿಗ್ ಧರಿಸಿದ್ದ ವರನನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದ ವಧು

    ಭೋಪಾಲ್‌: ಮದುವೆ ಹೀಗೆ ಇರಬೇಕು ಎನ್ನುವ ಕಸನು ಎಲ್ಲರಲ್ಲಿಯೂ ಇರುತ್ತದೆ. ಸಂಭ್ರಮದಲ್ಲಿದ್ದ ಮನೆಯಲ್ಲಿ ಕೊಂಚ ವ್ಯತ್ಯಾಸವಾದರೂ ಮದುವೆ ಕ್ಯಾನ್ಸಲ್ ಮಾಡುವ ಮಟ್ಟಿಗೆ ಜಗಳವಾಗಿದ್ದು, ಮಾತ್ರವಲ್ಲದೇ ಮಂಟಪದಲ್ಲಿಯೇ ಮದುವೆ ಮುರಿದು ಬಿದ್ದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಇಲ್ಲೊಬ್ಬ ವಧು ವಿಗ್ ಧರಿಸಿದ್ದ ವರನನ್ನು ಕಂಡು ಮದುವೆ ಬೇಡ ಎಂದು ಹೇಳಿರುವ ಘಟನೆ ನಡೆದಿದೆ.

    ಮದುವೆ ದಿನ ವರ ವಿಗ್ ಧರಿಸುವುದನ್ನು ನೋಡಿದ ವಧು, ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಘಟನೆ ಇಟಾವಾ ಜಿಲ್ಲೆಯ ಭರ್ತನ ಪ್ರದೇಶದಲ್ಲಿ ನಡೆದಿದೆ.

    ನಡೆದಿದ್ದೇನು?: ಮದುವೆ ಮಂಟಪದಲ್ಲಿ ವಧು, ವರರು ಹೂಮಾಲೆಯನ್ನು ಹಾಕಿಕೊಳ್ಳುತ್ತಿರುವಾಗ ವರನ ತಲೆಯನ್ನು ವಧು ಗಮನಿಸಿದ್ದಾಳೆ. ಆದರೆ ಆಕೆಗೆ ಗೊತ್ತಾಗಿಲ್ಲ. ಆದರೆ ಮದುವೆ ಮನೆಯಲ್ಲಿರುವವರು ವರನಿಗೆ ಬೋಳು ತಲೆ ಇದೆ, ಆತ ವಿಗ್ ಧರಿಸಿದ್ದಾನೆ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿದ ವಧು ಪ್ರಜ್ಞೆ ತಪ್ಪಿ ವೇದಿಕೆ ಮೇಲೆ ಬಿದ್ದಿದ್ದಾಳೆ.

    ಪ್ರಜ್ಞೆ ಬಂದ ಬಳಿಕ ಆಕೆ ಮದುವೆಯಾಗಲು ನಿರಾಕರಿಸಿದ್ದಾಳೆ. ಕುಟುಂಬಸ್ಥರು ಆಕೆಗೆ ಮನವೋಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆಕೆ ಮದುವೆ ಬೇಡ ಎಂದು ನೇರವಾಗಿ ಹೇಳಿದ್ದಾಳೆ. ಈ ಮದುವೆ ಮಂಟಪಕ್ಕೆ ಬಂದಿದ್ದ ಸಂಬಂಧಿಕರು, ಕುಟುಂಬಸ್ಥರು ಬೇಸರದಿಂದ ಹೋಗಿದ್ದಾರೆ.

  • ವಿಗ್ ಒಳಗಡೆ ಡಿವೈಸ್ – ಪೊಲೀಸ್ ಪರೀಕ್ಷೆಯ ವೇಳೇ ಸಿಕ್ಕಿ ಬಿದ್ದ ಭೂಪ

    ವಿಗ್ ಒಳಗಡೆ ಡಿವೈಸ್ – ಪೊಲೀಸ್ ಪರೀಕ್ಷೆಯ ವೇಳೇ ಸಿಕ್ಕಿ ಬಿದ್ದ ಭೂಪ

    ಲಕ್ನೋ: ವಿಗ್‍ನಲ್ಲಿ ವೈರ್ ಲೆಸ್ ಬ್ಲೂಟೂತ್ ಇಟ್ಟುಕೊಂಡು ಪೊಲೀಸ್ ಪರಿಕ್ಷೆಯಲ್ಲಿ ಕಾಪಿ ಹೊಡೆಯಲು ಹೋಗಿ ಸಿಕ್ಕಿ ಬಿದ್ದ ಅಭ್ಯರ್ಥಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಐಪಿಎಸ್ ಅಧಿಕಾರಿ ರೂಪಿನ ಶರ್ಮಾ ಅವರು ಟ್ವಿಟ್ಟರ್‍ನಲ್ಲಿ ಈ ವೀಡಿಯೋವನ್ನು ಹರಿಬಿಟ್ಟಿದ್ದಾರೆ. ಈ ವೀಡಿಯೋದಲ್ಲಿ ಅಭ್ಯರ್ಥಿ ವಿಗ್‍ನಲ್ಲಿ ಸೂಕ್ಷ್ಮವಾದ ಎರಡು ತಂತಿಗಳನ್ನು ಜೋಡಿಸಿಲಾದ ಇಯರ್ ಫೋನ್ಗಳಿದ್ದು, ಈ ಇಯರ್ ಫೋನ್ಸ್ ತಂತಿಗಳಿಗೆ ಬ್ಲೂ ಟೂತ್ ಸಾಧನವನ್ನು ಜೋಡಿಸಲಾಗಿದೆ. ಮೆಟಲ್ ಡಿಟೆಕ್ಟರ್‍ಗಳ ಮೂಲಕ ತಪಾಸಣೆ ನಡೆಸಿದ ಪೊಲೀಸರು ವಿದ್ಯಾರ್ಥಿಯನ್ನು ಹಿಡಿದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್‌ ಅಧಿಕಾರಿ, ನಾಗರಿಕ ಹತ್ಯೆ

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಹಿಂದೆ ಚೀನಾದಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ ಸಾಧನಗಳನ್ನು ಬಳಸಿ ಕಾಪಿ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಭಾರತದಲ್ಲೂ ಪರೀಕ್ಷೆ ವೇಳೆ ಅಭ್ಯರ್ಥಿಗಳು ಡಿವೈಸ್ ಬಳಸಿ ಕಾಪಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ

  • ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ತಲೆಕೂದಲನ್ನು ದಾನ ಮಾಡಿದ 80 ವಿದ್ಯಾರ್ಥಿನಿಯರು

    ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ತಲೆಕೂದಲನ್ನು ದಾನ ಮಾಡಿದ 80 ವಿದ್ಯಾರ್ಥಿನಿಯರು

    – 200 ಜನ ದಾನ ಮಾಡಲು ಸಿದ್ಧ

    ಚೆನ್ನೈ: ಕ್ಯಾನ್ಸರ್ ರೋಗಿಗಳಿಗಾಗಿ ಕೊಯಮತ್ತೂರಿನ ಖಾಸಗಿ ಕಾಲೇಜಿನ 80 ಜನ ವಿದ್ಯಾರ್ಥಿನಿಯರು ತಮ್ಮ ತಲೆ ಕೂದಲನ್ನು ದಾನ ಮಾಡಿದ್ದಾರೆ.

    ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವಾಗ ರೋಗಿಗಳು ತಲೆ ಕೂದಲನ್ನು ಕಳೆದುಕೊಂಡಿರುತ್ತಾರೆ. ಹಾಗಾಗಿ ಈ ರೀತಿಯ ರೋಗಿಗಳಿಗಾಗಿ ನಾವು ದಾನ ಮಾಡುವ ಕೂದಲನ್ನು ವಿಗ್ ಮಾಡಲು ಬಳಸಿಕೊಳ್ಳಿ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

    ಕ್ಯಾನ್ಸರ್ ರೋಗಿಗಳಿಗೆ ಹಣ ಸಹಾಯ ಮಾಡುವಷ್ಟು ಅರ್ಥಿಕವಾಗಿ ನಾವು ಸಬಲರಾಗಿಲ್ಲ. ಅದಕ್ಕಾಗಿ ನಮ್ಮ ಕೈಯಲ್ಲಿ ಆಗುವ ಸಹಾಯ ಮಾಡುತ್ತಿದ್ದೇವೆ. ಇದರಿಂದ ರೋಗಿಗಳ ಮುಖದಲ್ಲಿ ಸ್ವಲ್ಪ ಸಂತೋಷವಾದರು ನಮಗೆ ಖುಷಿಯಾಗುತ್ತದೆ. ನನಗೆ ಅವರಿಗೇ ಏನಾದರೂ ಸಹಾಯ ಮಾಡಬೇಕು ಎಂದು ಅನಿಸಿತ್ತು. ಆದರೆ ನನ್ನ ಬಳಿ ಹಣ ಇರಲಿಲ್ಲ. ಆಗ ನನ್ನ ಮನಸ್ಸಿಗೆ ಈ ಆಲೋಚನೆ ಬಂತು ಎಂದು ವಿದ್ಯಾರ್ಥಿನಿ ವಿನೋಥಿನಿ ಹೇಳಿದ್ದಾರೆ.

    ನಮ್ಮ ತಲೆ ಕೂದಲಿನ ಎಂಟು ಇಂಚು ಕೂದಲನ್ನು ಮಾತ್ರ ವಿಗ್‍ಗಾಗಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಾನು ಅದಕ್ಕಿಂತ ಜಾಸ್ತಿ ದಾನ ಮಾಡಲು ಸಿದ್ಧವಾಗಿದ್ದೇನೆ. ಈಗ ಕೇವಲ 80 ಜನ ವಿದ್ಯಾರ್ಥಿನಿಯರು ಮಾತ್ರ ತಲೆ ಕೂದಲು ದಾನ ಮಾಡಲು ಬಂದಿದ್ದಾರೆ. ಇನ್ನೂ 200 ಜನ ವಿದ್ಯಾರ್ಥಿನಿಯರು ಕೂದಲು ದಾನ ಮಾಡಲು ಬರುತ್ತಾರೆ ಎಂದು ವಿನೋಥಿನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ತಿರುವನಂತಪುರಂ: ಕಳ್ಳಸಾಗಾಣಿಕೆದಾರರು ವಿವಿಧ ರೀತಿಯಲ್ಲಿ ಚಿನ್ನ, ವಜ್ರ, ಡ್ರಗ್ ಸೇರಿದಂತೆ ಮುಂತಾದವುಗಳನ್ನು ಕಳವು ಮಾಡುತ್ತಾರೆ. ಆದರೆ ಕೇರಳದ ಮೂಲದ ವ್ಯಕ್ತಿಯೊಬ್ಬ ವಿಚಿತ್ರವಾಗಿ ತಲೆ ಕೂದನ್ನು ಕತ್ತರಿಸಿದಾಗೆ ಕಾಣುವಂತೆ ನೆತ್ತಿಯ ಮೇಲೆ ವಿಗ್ ಧರಿಸಿಕೊಂಡು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

    ಆರೋಪಿಯನ್ನು ಮಲಪ್ಪುರಂನ ನೌಶಾದ್ ಎಂದು ಗುರುತಿಸಲಾಗಿದೆ. ಆರೋಪಿ ನೌಶಾದ್ ಯುಎಇಯ ಶಾರ್ಜಾದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡ ರೀತಿ, ತಲೆಯ ಮಧ್ಯ ಭಾಗದಲ್ಲಿ ವಿಗ್ ಅಡಿಯಲ್ಲಿ 1.13 ಕೆಜಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿದ್ದನು.

    ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಸಿಐಎಎಲ್)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನ ವಿಗ್ ನೋಡಿ ಅನುಮಾನಗೊಂಡು ಪರಿಶೀಲಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಆತನ ತಲೆ ಮೇಲಿದ್ದ ವಿಗ್ ಕೆಳಗೆ 1.13 ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನವು ಪೇಸ್ಟ್ ರೀತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಈ ಹಿಂದೆ ಕಳ್ಳಸಾಗಾಣಿಕೆದಾರರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ರೀತಿ ವಿಗ್‍ನಲ್ಲಿ ಚಿನ್ನವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.