Tag: Wife

  • ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    ಮೀರತ್‌ ಮಾದರಿ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿಬಿಡ್ತೀನಿ – ಮಚ್ಚು ಹಿಡಿದು ಗಂಡನಿಗೆ ಎಚ್ಚರಿಕೆ ಕೊಟ್ಟ ʻಮಚ್ಚೇಶ್ವರಿʼ!

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ (Meerut) ನಡೆದ ಭೀಕರ ಹತ್ಯೆಯಂತೆಯೇ, ನಿನ್ನನ್ನು ಕತ್ತರಿಸಿ ಡ್ರಮ್‌ನಲ್ಲಿ ಹಾಕಿಬಿಡ್ತೀನಿ ಎಂದು ಮಹಿಳೆಯೊಬ್ಬಳು ಮಚ್ಚು ಹಿಡಿದು ತನ್ನ ಪತಿಗೆ (Husband) ಬೆದರಿಕೆ ಹಾಕಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಗೊಂಡಾದ ಜಲ ನಿಗಮದಲ್ಲಿ ಕೆಲಸ ಮಾಡುತ್ತಿರುವ ಝಾನ್ಸಿ ಮೂಲದ ಜೂನಿಯರ್ ಎಂಜಿನಿಯರ್ (ಜೆಇ) ಧರ್ಮೇಂದ್ರ ಕುಶ್ವಾಹ ಮೇಲೆ ಪತ್ನಿ (Wife) ಮಾಯಾ ಮೌರ್ಯ ಮತ್ತು ಆಕೆಯ ಪ್ರೇಮಿ ನೀರಜ್ ಮೌರ್ಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು 

    2016ರಲ್ಲಿ ಕುಶ್ವಾಹ ಅವರು ಬಸ್ತಿ ಜಿಲ್ಲೆಯ ನಿವಾಸಿ ಮಾಯಾ ಮೌರ್ಯ ಅವರನ್ನು ಪ್ರೇಮ ವಿವಾಹವಾಗಿದ್ದರು. ಬಳಿಕ ಕುಶ್ವಾಹ 2022 ರಲ್ಲಿ ಮಾಯಾಳ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿದ್ದರು. ನಂತರ ಮಾಯಾ ಸಂಬಂಧಿ ನೀರಜ್ ಮೌರ್ಯ ಅವರಿಗೆ ಆ ಜಾಗದಲ್ಲಿ ಮನೆ ನಿರ್ಮಾಣದ ಕೆಲಸವನ್ನು ವಹಿಸಿದ್ದರು. ಇದಾದ ಬಳಿಕ ಮಾಯಾ ಹಾಗೂ ನೀರಜ್‌ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಕೋವಿಡ್ -19 ಸಮಯದಲ್ಲಿ ನೀರಜ್ ಪತ್ನಿಯ ಮರಣದ ನಂತರ ಅವರ ಸಂಬಂಧ ಇನ್ನೂ ಹೆಚ್ಚಾಗಿತ್ತು. 2024 ರಂದು ಮಾಯಾ ಮತ್ತು ನೀರಜ್‌ ಖಾಸಗಿ ಕ್ಷಣಗಳನ್ನು ಕುಶ್ವಾಹ ಗಮನಿಸಿ ಗಲಾಟೆ ಮಾಡಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ಮಾಡಿ, ಮಾಯಾ ಮನೆ ತೊರೆದಿದ್ದಳು.

    2024ರ ಆಗಸ್ಟ್‌ನಲ್ಲಿ ನೀರಜ್ ಜೊತೆಗೆ ಬಂದಿದ್ದ ಮಾಯಾ ಮನೆಯ ಬೀಗ ಮುರಿದು 15 ಗ್ರಾಂ ಚಿನ್ನದ ಸರ ಮತ್ತು ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕುಶ್ವಾಹ ಸೆಪ್ಟೆಂಬರ್ 2024ರಲ್ಲಿ ದೂರು ದಾಖಲಿಸಿದ್ದರು. ಇನ್ನೂ, ಇದೇ ತಿಂಗಳ 29ರಂದು ಮಾಯಾ ಮತ್ತು ನೀರಜ್ ತನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಇತ್ತೀಚೆಗೆ ಮೀರತ್‌ನಲ್ಲಿ ನಡೆದ ವ್ಯಕ್ತಿಯ ಕೊಲೆ ಮಾದರಿಯಲ್ಲೇ ನನ್ನನ್ನು ಹತ್ಯೆಗೈದು ಡ್ರಮ್‌ನಲ್ಲಿ ಪ್ಯಾಕ್ ಮಾಡುತ್ತೇನೆ ಎಂದು ಮಾಯಾ ಬೆದರಿಕೆ ಹಾಕಿದ್ದಾಳೆ ಎಂದು ಕುಶ್ವಾಹ ಆರೋಪಿಸಿದ್ದಾರೆ.

    ಇದರ ಬೆನ್ನಲ್ಲೇ ಮಾಯಾ, ತನ್ನ ಪತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ ಮತ್ತು ನಾಲ್ಕು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ

  • Bengaluru | ಪತ್ನಿಯ ಶೀಲ ಶಂಕಿಸಿ ಕತ್ತು ಹಿಸುಕಿ ಕೊಲೆ – ಪೊಲೀಸರ ಮುಂದೆ ಶರಣಾದ ಪತಿ

    ಬೆಂಗಳೂರು: ಪತ್ನಿಯ (Wife) ಶೀಲ ಶಂಕಿಸಿ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹೆಗ್ಗಡೆ ನಗರದ (Hegde Nagar) 1ನೇ ಕ್ರಾಸ್‌ನಲ್ಲಿ ನಡೆದಿದೆ.

    ವೇಲಾರಮಣಿ (35) ಕೊಲೆಯಾದ ಪತ್ನಿ. ಗಂಡ ಚಂದ್ರಶೇಖರ್ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಮಂಗಳವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    11 ವರ್ಷದ ಹಿಂದೆ ವೇಲಾರಮಣಿ ಹಾಗೂ ಚಂದ್ರಶೇಖರ್‌ಗೆ ಮದುವೆಯಾಗಿತ್ತು. ಇವರ ಮದುವೆಗೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿದ್ದರು. ಚಂದ್ರಶೇಖರ್ ಕ್ಯಾಬ್ ಡ್ರೈವರ್ ಆಗಿದ್ದು, ಪತ್ನಿ ವೇಲಾರಮಣಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದಳು. ಹೆಂಡತಿ ಫೋನ್‌ನಲ್ಲಿ ಯಾವಾಗಲೂ ಮಾತನಾಡುತ್ತಿರುವುದನ್ನು ನೋಡಿ ಚಂದ್ರಶೇಖರ್ ಹಲವು ದಿನಗಳಿಂದ ಆಕೆಯ ಬಗ್ಗೆ ಅನುಮಾನಿಸಿದ್ದ. ಇದನ್ನೂ ಓದಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ SSLC ವಿದ್ಯಾರ್ಥಿ ನೀರುಪಾಲು

    ಮಂಗಳವಾರ ಇಬ್ಬರು ಮಕ್ಕಳು ಶಾಲೆಗೆ ಹೋದ ಮೇಲೆ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಚಂದ್ರಶೇಖರ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಗಂಡ ಸಂಪಿಗೆಹಳ್ಳಿ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ತೆರಳಿದ ಸಂಪಿಗೆಹಳ್ಳಿ ಪೊಲೀಸರು, ಕೊಲೆ ಮಾಡಿದ ಸ್ಥಳ ಪರಿಶೀಲನೆ ನಡೆಸಿ, ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಮಂಗಳವಾರವೇ ಮೃತ ದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಮುಸ್ಲಿಮರಿಗೆ ಮೀಸಲಾತಿ ಮೋದಿ ಕೊಟ್ರೆ ಸರಿ, ನಾವು ಕೊಟ್ರೆ ತಪ್ಪಾ? – ಯತೀಂದ್ರ

    ಸದ್ಯ ಆರೋಪಿ ಚಂದ್ರಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯಲ್ಲೇ ಹನಿಟ್ರ್ಯಾಪ್‌ಗಳು ನಡೆದಿವೆ – ಯತೀಂದ್ರ ಸಿದ್ದರಾಮಯ್ಯ ಬಾಂಬ್‌

  • ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

    ಸ್ಲೀಪ್‌ ಡಿವೋರ್ಸ್‌ನಲ್ಲಿ ಭಾರತಕ್ಕೆ ಅಗ್ರ ಸ್ಥಾನ – ಏನಿದು ನಿದ್ರಾ ವಿಚ್ಛೇದನ?

    ಇಂದಿನ ಬಿಡುವಿಲ್ಲದ ಜೀವನ ಶೈಲಿ, ಒತ್ತಡ, ಹೊಂದಾಣಿಕೆ ಕೊರತೆ, ಆರ್ಥಿಕ ಸ್ವಾತಂತ್ರ್ಯ ಹೀಗೆ ಹಲವು ಕಾರಣಗಳಿಂದ ದಿನಬೆಳಗಾದರೆ ವಿಚ್ಛೇದನ ಪ್ರಕರಣಗಳನ್ನು ನೋಡುತ್ತೇವೆ. ಈ ಮಧ್ಯೆಯೇ ʼಸ್ಲೀಪಿಂಗ್ ಡಿವೋರ್ಸ್ʼ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದರಲ್ಲಿ ದಂಪತಿಗಳು ತಮ್ಮ ಅಗತ್ಯಗಳು ಮತ್ತು ಆರಾಮಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಮಲಗಲು ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂಕಿಅಂಶಗಳ ಪ್ರಕಾರ ʼಸ್ಲೀಪಿಂಗ್ ಡಿವೋರ್ಸ್ʼ ಪಡೆಯುವವರಲ್ಲಿ ಭಾರತೀಯರು ಮುಂದಿದ್ದಾರೆ. ಹಾಗಾದ್ರೆ ಸ್ಲೀಪಿಂಗ್ ವಿಚ್ಛೇದನಕ್ಕೆ ಕಾರಣಗಳೇನು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    ಏನಿದು ಸ್ಲೀಪ್‌ ಡಿವೋರ್ಸ್?
    ನಿದ್ರಾ ವಿಚ್ಛೇದನವು, ದಂಪತಿಗಳು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಪ್ರತ್ಯೇಕವಾಗಿ ಮಲಗುವುದನ್ನು ಆಯ್ಕೆ ಮಾಡುವ ಪರ್ಯಾಯ ವಿಧಾನವಾಗಿದೆ. ಇದು ಬೇರೆ ಬೇರೆ ಹಾಸಿಗೆಗಳಲ್ಲಿ ಮಲಗುವುದು, ಬೇರೆ ಕೋಣೆಯಲ್ಲಿ ಮಲಗುವುದು ಅಥವಾ ವಿಭಿನ್ನ ವೇಳಾಪಟ್ಟಿಗಳಲ್ಲಿ ಮಲಗುವುದಾಗಿದೆ. ಇದರರ್ಥ ಗಂಡ ಹೆಂಡತಿ ಮಧ್ಯೆ ಸಮಸ್ಯೆ ಇದೆ ಎಂಬುದಲ್ಲ. ಗೊರಕೆ ಸಮಸ್ಯೆ, ವಿಭಿನ್ನ ನಿದ್ರೆಯ ಆದ್ಯತೆಗಳಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಅನೇಕ ದಂಪತಿಗಳು ಈ ವಿಧಾನವನ್ನು ಪಾಲಿಸುತ್ತಿದ್ದಾರೆ. ಪ್ರತ್ಯೇಕವಾಗಿ ಮಲಗುವುದು ಪತಿ ಪತ್ನಿಯರ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಎನ್ನುವುದನ್ನು ಅಧ್ಯಯನವು ಹೇಳುತ್ತದೆ.

    ಸ್ಲೀಪ್ ಡಿವೋರ್ಸ್ ನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
    ರೆಸ್‌ಮೆಡ್‌ನ 2025 ರ ಜಾಗತಿಕ ನಿದ್ರೆಯ ಸಮೀಕ್ಷೆಯ ಪ್ರಕಾರ, ನಿದ್ರೆ ವಿಚ್ಛೇದನದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ  78% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನು ಉಳಿದಂತೆ ಚೀನಾದಲ್ಲಿ  67% ಮತ್ತು ದಕ್ಷಿಣ ಕೊರಿಯಾ 65% ರಷ್ಟು ದಂಪತಿಗಳು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಈ ಸಮೀಕ್ಷೆಗೆ 13 ದೇಶಗಳಲ್ಲಿ 30,000 ಕ್ಕೂ ಹೆಚ್ಚು ಜನರನ್ನು ಒಳಪಡಿಸಲಾಗಿದ್ದು, ಈ ಸಮೀಕ್ಷೆಯು ಜಾಗತಿಕ ನಿದ್ರೆಯ ಬಿಕ್ಕಟ್ಟನ್ನು ಬಹಿರಂಗಪಡಿಸಿದೆ. ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 50% ರಷ್ಟು ದಂಪತಿಗಳು ಒಟ್ಟಿಗೆ ಮಲಗಲು ಇಷ್ಟ ಪಟ್ಟರೆ, ಇನ್ನು 50% ರಷ್ಟು ಪ್ರತ್ಯೇಕವಾಗಿ ಮಲಗಲು ಇಷ್ಟಪಡುತ್ತಾರೆ ಎನ್ನಲಾಗಿದೆ.

    2023ರಲ್ಲಿ ಎಎಎಸ್ಎಂ ಸಂಸ್ಥೆಯು ನಿದ್ರೆಯ ಆದ್ಯತೆ ಮೇಲೆ ನಡೆಸಿದ ಸಮೀಕ್ಷೆಯ ಪ್ರಕಾರ, 42% ಅಮೆರಿಕನ್ನರು ತಮ್ಮ ಸಂಗಾತಿಗಾಗಿ ತಮ್ಮ ನಿದ್ರೆಯ ದಿನಚರಿಯನ್ನು ಅಡ್ಜಸ್ಟ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಪುರುಷರು (25%) ಮಹಿಳೆಯರಿಗಿಂತ (8%) ಸೈಲೆಂಟ್ ಅಲಾರಂ ಬಳಸುವ ಸಾಧ್ಯತೆ ಮೂರು ಪಟ್ಟು ಹೆಚ್ಚು. 33% ವಯಸ್ಕರು ತಮ್ಮ ಸಂಗಾತಿಯ ವೇಳಾಪಟ್ಟಿಗೆ ಹೊಂದಿಕೆಯಾಗುವಂತೆ ತಮ್ಮ ನಿದ್ರೆಯ ಸಮಯವನ್ನು ಬದಲಾಯಿಸುತ್ತಾರೆ ಎನ್ನಲಾಗಿದೆ. 60% ವಯಸ್ಕರು (55-64) ತಮ್ಮ ಸಂಗಾತಿಗಾಗಿ ತಮ್ಮ ನಿದ್ರೆಯ ದಿನಚರಿಯನ್ನು ಬದಲಾಯಿಸುವುದಿಲ್ಲ. 40% ಯುವಕರು (27-42) ಬಯಸಿದ್ದಕ್ಕಿಂತ ಮುಂಚಿತವಾಗಿ ಅಥವಾ ನಂತರ ಮಲಗುತ್ತಾರೆ. 24% ಜನರು ಸಾಂದರ್ಭಿಕವಾಗಿ ಮತ್ತೊಂದು ಕೋಣೆಯಲ್ಲಿ ಮಲಗುತ್ತಾರೆ.

    ನಿದ್ರಾಭಂಗಕ್ಕೆ ಪ್ರಮುಖ ಕಾರಣಗಳೇನು?
    ನಿದ್ರಾಭಂಗಕ್ಕೆ ಸಾಮಾನ್ಯ ಕಾರಣಗಳಲ್ಲಿ ಸಂಗಾತಿಯ ಗೊರಕೆ, 32% ರಷ್ಟು ಜೋರಾಗಿ ಉಸಿರಾಡುವುದು, 12% ರಷ್ಟು ಚಡಪಡಿಕೆ, 12% ರಷ್ಟು ಹೊಂದಿಕೆಯಾಗದ ನಿದ್ರೆಯ ವೇಳಾಪಟ್ಟಿಗಳು ಹಾಗೂ 8% ರಷ್ಟು ರಾತ್ರಿ ಹಾಸಿಗೆಯ ಮೇಲೆ ತಮ್ಮ ಹೆಚ್ಚು ಸಮಯ ಪರದೆಯಲ್ಲೇ ಕಳೆಯುವುದು ಸೇರಿವೆ. ಈ ಕಾರಣಗಳಿಂದಲೇ ಹೆಚ್ಚಿನವರು ಸ್ಲೀಪ್ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ನಿದ್ರೆ ಸರಿಯಾಗಿ ಆಗದಿರಲು 69% ರಷ್ಟು ಭಾರತೀಯರಿಗೆ ಒತ್ತಡವು ಪ್ರಮುಖ ಕಾರಣವಾಗಿದೆ. ಇನ್ನು ಉಳಿದಂತೆ ದಕ್ಷಿಣ ಕೊರಿಯಾ, ಥೈಲ್ಯಾಂಡ್, ಸಿಂಗಾಪುರ ಮತ್ತು ಜರ್ಮನಿ ಪ್ರಮುಖ ದೇಶಗಳಲ್ಲಿ ಒತ್ತಡವು ನಿದ್ರಾಭಂಗಕ್ಕೆ ಪ್ರಮುಖ ಕಾರಣವೆಂದು ವರದಿಗಳು ತಿಳಿಸಿವೆ.

    ಸ್ಲೀಪ್‌ ಡಿವೋರ್ಸ್‌ನಿಂದಾಗುವ ಪ್ರಯೋಜನಗಳೇನು?
    ನಿದ್ರಾ ವಿಚ್ಛೇದನದಿಂದ ಹಲವಾರು ಪ್ರಯೋಜನಗಳಿವೆ. ಒಬ್ಬರಿಂದ ಇನ್ನೊಬ್ಬರ ನಿದ್ರೆಗೆ ಸಮಸ್ಯೆಯಾಗುವಲ್ಲಿ ಈ ನಿದ್ರಾ ವಿಚ್ಛೇದನವು ಅವರಿಗೆ ಒಳ್ಳೆಯ ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ ಎನ್ನುವುದು ಇದನ್ನು ಪ್ರಯತ್ನಿಸಿದವರ ಅಭಿಪ್ರಾಯ. ಹಾಗಾದರೆ ಇದರಿಂದಾಗುವ ಪ್ರಯೋಜನಗಳು ಯಾವುವು?

    ಉತ್ತಮ ನಿದ್ರೆಯ ಗುಣಮಟ್ಟ:
    ಗೊರಕೆ, ಉರುಳಾಡುವುದು, ತಿರುಗುವುದು ಅಥವಾ ವಿಭಿನ್ನ ನಿದ್ರೆಯ ವೇಳಾಪಟ್ಟಿಗಳಿದ್ದಾಗ ಈ ನಿದ್ರಾ ವಿಚ್ಛೇದನವು ಚೆನ್ನಾಗಿ ನಿದ್ರಿಸಲು ಮತ್ತು ಗುಣಮಟ್ಟದ ನಿದ್ರೆಯನ್ನು ಹೊಂದಲು ಪತಿ ಪತ್ನಿಯರಿಗೆ ಸಹಾಯ ಮಾಡುತ್ತದೆ.

    ಸುಧಾರಿತ ಆರೋಗ್ಯ:
    ಕಡಿಮೆ ನಿದ್ರೆಯು ಒತ್ತಡ, ತೂಕ ಹೆಚ್ಚಳ, ಹೃದ್ರೋಗ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸಾಕಷ್ಟು ವಿಶ್ರಾಂತಿ ಪಡೆಯುವುದು, ಗುಣಮಟ್ಟದ ನಿದ್ರೆಯನ್ನು ಮಾಡುವುದು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ.

    ಸಂಬಂಧ ಸುಧಾರಣೆ:
    ಚೆನ್ನಾಗಿ ವಿಶ್ರಾಂತಿ ಪಡೆದ ದಂಪತಿಗಳು ಕಡಿಮೆ ಕಿರಿಕಿರಿಗೆ ಒಳಗಾಗುತ್ತಾರೆ ಮತ್ತು ಪರಸ್ಪರ ಹೆಚ್ಚು ತಾಳ್ಮೆಯಿಂದಿರುತ್ತಾರೆ. ದೈಹಿಕವಾಗಿ ಹಾಸಿಗೆಯನ್ನು ಹಂಚಿಕೊಳ್ಳುವುದಕ್ಕಿಂತ, ಯಾವುದೇ ಕಿರಿಕಿರಿಯಿಲ್ಲದೆ ಗುಣಮಟ್ಟದ ಸಮಯವನ್ನು ಕಳೆಯುವುದು ಕೂಡ ಮುಖ್ಯ.

    ವೈಯಕ್ತೀಕರಿಸಿದ ನಿದ್ರೆಯ ವಾತಾವರಣ:
    ಕೋಣೆಯ ತಾಪಮಾನ, ಬೆಳಕಿನ ವಿಷಯದಲ್ಲಿ ಕಿತ್ತಾಟ ಇರುವುದಿಲ್ಲ. ಮಲಗುವ ಸಮಯದ ಅಭ್ಯಾಸಗಳಲ್ಲಿ (ಓದುವುದು, ಟಿವಿ ನೋಡುವುದು, ಮೊಬೈಲ್ ಬಳಸುವುದು ಇತ್ಯಾದಿ) ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ.

    ಶಿಫ್ಟ್ ಕೆಲಸಕ್ಕೆ ಸಹಾಯ:
    ಒಬ್ಬ ಸಂಗಾತಿಯು ತಡರಾತ್ರಿ ಅಥವಾ ಮುಂಜಾನೆ ಕೆಲಸ ಮಾಡಿದರೆ, ಪ್ರತ್ಯೇಕ ಮಲಗುವ ಆಯ್ಕೆಗಳು ಒಬ್ಬರಿಂದ ಇನ್ನೊಬ್ಬರ ನಿದ್ರೆಗಾಗುವ ತೊಂದರೆಯನ್ನು ತಡೆಯುತ್ತವೆ.

    ಯಾರೆಲ್ಲಾ ಸ್ಲೀಪ್ ಡಿವೋರ್ಸ್‌ ಪಡೆಯಬಹುದು?
    ಸಂಗಾತಿಗಳಲ್ಲಿ ಒಬ್ಬರು ಇಲ್ಲವೇ ಇಬ್ಬರೂ ಕೂಡ ಸರಿಯಾಗಿ ನಿದ್ರಿಸಲಾಗದಿದ್ದರೆ, ನಿರಂತರವಾಗಿ ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲವೇ ತೀವ್ರ ಆಯಾಸದ ಅನುಭವಕ್ಕೊಳಪಟ್ಟಿದ್ದರೆ ಸ್ಲೀಪ್ ಡಿವೋರ್ಸ್ ಬಗ್ಗೆ ಯೋಚಿಸಬಹುದು. ನಿದ್ರೆಯ ಸಮಸ್ಯೆಗಳು ಬಿಟ್ಟೂ ಬಿಡದೆ ಕಾಡುತ್ತಿದೆ ಎಂದಾದಲ್ಲಿ ಪ್ರತ್ಯೇಕವಾಗಿ ಮಲಗುವ ಬಗ್ಗೆ ಯೋಚಿಸಬಹುದು. ಒಟ್ಟಾರೆ ಈ ಟ್ರೆಂಡ್‌ನ ಮೂಲ ಉದ್ದೇಶ ಗುಣಮಟ್ಟದ ನಿದ್ರೆಯನ್ನು ಹೊಂದುವುದಾಗಿದೆ. ತಾವು ಸುಖವಾಗಿ, ಶಾಂತವಾಗಿ ಯಾವುದೇ ಅಡೆತಡೆಗಳಿಲ್ಲದೆ ನಿದ್ರಿಸಬೇಕು ಎಂಬುದೇ ಈ ಟ್ರೆಂಡ್‌ನ ಮೂಲ ಉದ್ದೇಶ.

  • ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    – ಮಾದಕ ವಸ್ತುವಿಗಾಗಿ ಜೈಲಲ್ಲಿ ಪರದಾಟ, ಮೌನಕ್ಕೆ ಶರಣಾದ ಹಂತಕರು

    ಲಕ್ನೋ: ಪತಿಯನ್ನು (Husband)  ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ ಮತ್ತು ಅವಳ ಪ್ರೇಮಿ ಸಾಹಿಲ್ ಶುಕ್ಲಾ ಜೈಲಿನಲ್ಲಿ ಒಟ್ಟಿಗೆ ಇರಲು ಬಯಸಿದ್ದರು. ಆದರೆ ಜೈಲು ಕೈಪಿಡಿಯ ಪ್ರಕಾರ ಅದು ಸಾಧ್ಯವಿಲ್ಲದ ಕಾರಣ ಇಬ್ಬರನ್ನೂ ಬೇರೆ ಬೇರೆ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಮೀರತ್‌ನ (Meerut) ಚೌಧರಿ ಚರಣ್ ಸಿಂಗ್ ಜೈಲಿನ ಹಿರಿಯ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

    ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಬ್ಬರು ಮಾದಕ ವ್ಯಸನಿಗಳೆಂದು ತಿಳಿದುಬಂದಿದೆ. ಇಬ್ಬರೂ ಮಾದಕ ವಸ್ತುವಿಗಾಗಿ ಜೈಲಲ್ಲಿ ಹಂಬಲಿಸುತ್ತಿದ್ದಾರೆ. ಇಬ್ಬರೂ ಸಹ ಕೈದಿಗಳ ಜೊತೆ ಮಾತನಾಡದೇ ಸೆಲ್‌ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಜೈಲಿನಲ್ಲಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ಇಬ್ಬರಿಗೂ ಕೌನ್ಸೆಲಿಂಗ್ ನೀಡಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೈಲು ಸಿಬ್ಬಂದಿಗೆ ಅವರ ಮೇಲೆ ನಿಗಾ ಇಡಲು ತಿಳಿಸಲಾಗಿದೆ. ಮುಸ್ಕಾನ್ ಜೈಲಿಗೆ ಬಂದ ಮೊದಲ ದಿನ ಏನನ್ನೂ ತಿನ್ನಲಿಲ್ಲ. ಈಗ ಊಟ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿಗಳ ಕುಟುಂಬದವರು ಯಾರೂ ಅವರನ್ನು ಭೇಟಿ ಮಾಡಲು ಇನ್ನೂ ಬಂದಿಲ್ಲ. ಮುಸ್ಕಾನ್ ಅವರ ಕುಟುಂಬ ಆಕೆಯ ಪರವಾಗಿ ವಕೀಲರನ್ನು ನೇಮಿಸುವುದಿಲ್ಲ ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದ್ದರು. ಪ್ರಕರಣವನ್ನು ವಾದಿಸಲು ಸರ್ಕಾರಿ ವಕೀಲರನ್ನು ನೇಮಿಸಬೇಕು ಎಂದು ವಿನಂತಿಸಿದ್ದರು ಎನ್ನಲಾಗಿದೆ.

    ಕಳೆದ ವಾರ ಬಂಧನಕ್ಕೊಳಗಾದ ನಂತರ ಇಬ್ಬರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನಿಖೆಯ ಭಾಗವಾಗಿ ವಿವರವಾದ ವಿಚಾರಣೆಗಾಗಿ ಅವರ ಕಸ್ಟಡಿಗೆ ಕೋರುವುದಾಗಿ ಮೀರತ್ ಪೊಲೀಸರು ತಿಳಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಕಳೆದ ವಾರ ಮುಸ್ಕಾನ್ ಮತ್ತು ಸಾಹಿಲ್‌ನನ್ನು ಬಂಧಿಸಲಾಗಿತ್ತು. ಸೌರಭ್ ಕಳೆದ ತಿಂಗಳು ಮನೆಗೆ ಬಂದಿದ್ದರು. ಮಾ.4 ರಂದು ಸೌರಭ್‌ಗೆ ಮಾದಕ ವಸ್ತು ನೀಡಿ ನಂತರ ಇರಿದು ಕೊಲ್ಲಲಾಗಿತ್ತು. ನಂತರ ಅವಳು ಮತ್ತು ಸಾಹಿಲ್ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಸೀಲ್‌ ಮಾಡಿದ್ದರು. ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ತೆರಳಿದ್ದರು.

    ಸೌರಭ್ ಮತ್ತು ಮುಸ್ಕಾನ್ 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಆರು ವರ್ಷದ ಮಗಳಿದ್ದಾಳು. ಸೌರಭ್ ಕುಟುಂಬದೊಂದಿಗೆ ಮುಸ್ಕಾನ್‌ನ ಸಂಬಂಧ ಹಾಳಾಗಿತ್ತು. ಇದರಿಂದ ದಂಪತಿಗಳು ಬಾಡಿಗೆ ಮನೆ ಮಾಡಿಕೊಂಡಿದ್ದರು. 2019ರಲ್ಲಿ ಸೌರಭ್ ತನ್ನ ಹೆಂಡತಿಗೆ ಸಾಹಿಲ್ ಜೊತೆಗಿನ ಸಂಬಂಧದ ಬಗ್ಗೆ ತಿಳಿದಿತ್ತು. ಬಳಿಕ ವಿಚ್ಛೇದನಕ್ಕೆ ಯೋಚಿಸಿದ್ದರು. ಆದರೆ ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಹಿಂದೆ ಸರಿದಿದ್ದರು. ಬಳಿಕ ಲಂಡನ್‌ಗೆ ತೆರಳಿ ಕೆಲಸ ಮಾಡುತ್ತಿದ್ದರು. ಸೌರಭ್‌ ಕುಟುಂಬಸ್ಥರು ಹಣಕ್ಕಾಗಿ ಮುಸ್ಕಾನ್‌ ಅವರನ್ನು ಮದುವೆಯಾಗಿದ್ದಳು ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಚಾಮರಾಜನಗರ | ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್ – ಮನನೊಂದು ಪತಿ ಆತ್ಮಹತ್ಯೆ

    ಚಾಮರಾಜನಗರ | ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್ – ಮನನೊಂದು ಪತಿ ಆತ್ಮಹತ್ಯೆ

    – ನೀನು ಚನ್ನಾಗಿಲ್ಲ, ನನಗೆ ಸರಿಯಾದ ಜೋಡಿಯಲ್ಲ ಎಂದು ಅವಮಾನ

    ಚಾಮರಾಜನಗರ: ನಿನ್ನ ತಲೆಯಲ್ಲಿ ಕೂದಲು (Hairs) ಇಲ್ಲ ಎಂದು ಪತ್ನಿ ನೀಡುತ್ತಿದ್ದ ಟಾರ್ಚರ್‌ಗೆ ಮನನೊಂದು ಪತಿ (Husband) ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಉಡಿಗಾಲ (Udigala) ಗ್ರಾಮದಲ್ಲಿ ನಡೆದಿದೆ.

    ಪರಶಿವ (32) ಆತ್ಮಹತ್ಯೆ ಮಾಡಿಕೊಂಡ ಪತಿ. ನೀನು ಚನ್ನಾಗಿಲ್ಲ, ನನಗೆ ಸರಿಯಾದ ಜೋಡಿಯಲ್ಲ ಎಂದು ಪತ್ನಿ ಎಲ್ಲರ ಎದುರೇ ಅವಮಾನ ಮಾಡುತ್ತಿದ್ದಳು. ಶೊಕಿವಾಲೆಯಾಗಿದ್ದ ಪತ್ನಿ ಹೈಫೈ ಜೀವನ ಮಾಡಲು ಬಯಸಿದ್ದಳು. ಅಲ್ಲದೇ ರೀಲ್ಸ್ ಗೀಳು ಕೂಡ ಇತ್ತು. ಇದನ್ನೂ ಓದಿ: ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ಒಳ್ಳೆ ಬಟ್ಟೆ ಕೊಡಿಸು, ಆಭರಣ ಕೊಡಿಸು, ಬೇರೆಮನೆ ಮಾಡು ಎಂದು ಪತ್ನಿ ಪತಿಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದಳು. ಇಷ್ಟು ಮಾತ್ರವಲ್ಲದೇ ಸುಳ್ಳು ವರದಕ್ಷಿಣೆ ಕೇಸ್ ಹಾಕಿ ಪತಿಯನ್ನು ಒಂದೂವರೆ ತಿಂಗಳು ಜೈಲಿಗೆ ಕೂಡ ಕಳಿಸಿದ್ದಳು. ಪತ್ನಿಯ ಕಿರುಕುಳದಿಂದ ಬೇಸತ್ತು ಪತಿ ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪುಲ್ವಾಮಾ ಸ್ಟೈಲ್‌ ದಾಳಿ – ಪಾಕ್‌ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ

  • ಪತ್ನಿಯನ್ನು ಕೊಂದು 9ವರ್ಷ ತಲೆಮರೆಸಿಕೊಂಡಿದ್ದ ಹಂತಕ – ಬಿಹಾರದಲ್ಲಿ ಬಂಧಿಸಿದ ದೆಹಲಿ ಪೊಲೀಸ್

    ಪತ್ನಿಯನ್ನು ಕೊಂದು 9ವರ್ಷ ತಲೆಮರೆಸಿಕೊಂಡಿದ್ದ ಹಂತಕ – ಬಿಹಾರದಲ್ಲಿ ಬಂಧಿಸಿದ ದೆಹಲಿ ಪೊಲೀಸ್

    ನವದೆಹಲಿ: ರಾಜಧಾನಿಯ (Delhi) ರಣಹೋಲಾ ಪ್ರದೇಶದಲ್ಲಿ ಪತ್ನಿಯ ಕತ್ತು ಸೀಳಿ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಿಹಾರದಲ್ಲಿ  (Bihar) ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಆತನ ತಲೆಗೆ 25,000 ರೂ. ಬಹುಮಾನ ಘೋಷಿಸಲಾಗಿತ್ತು. ಆರೋಪಿಯನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಕ್ಟೋಬರ್ 18, 2016 ರಂದು ರಣಹೋಲಾ ಪ್ರದೇಶದ ರೂಮ್‌ ಒಂದರ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬಳ ಕತ್ತು ಸೀಳಿದ ಶವ ಪತ್ತೆಯಾಗಿತ್ತು. ಬೀಗ ಹಾಕಿದ ಕೊಠಡಿಯಿಂದ ಬರುತ್ತಿದ್ದ ದುರ್ವಾಸನೆಯಿಂದ ಎಚ್ಚರಗೊಂಡ ಮನೆ ಮಾಲೀಕರು ಪೊಲೀಸರಿಗೆ ವಿಷಯ ತಿಳಿಸಿದ್ದರು. ತನಿಖೆಯ ನಂತರ, ಸುನಿಲ್ ಪ್ರಕರಣದ ಪ್ರಮುಖ ಶಂಕಿತ ಎಂದು ಗುರುತಿಸಲಾಗಿತ್ತು.

    ಹತ್ಯೆಯ ನಂತರ ಸುನಿಲ್ ನಾಲ್ಕು ವರ್ಷದ ಮಗಳನ್ನು ಕರೆದುಕೊಂಡು ಪರಾರಿಯಾಗಿದ್ದ. ದೆಹಲಿ ಪೊಲೀಸರ ಅಪರಾಧ ವಿಭಾಗವು ನಂತರ ಪ್ರಕರಣದ ಬಗ್ಗೆ ಹೊಸ ತನಿಖೆಯನ್ನು ಪ್ರಾರಂಭಿಸಿತ್ತು. ಪೊಲೀಸ್ ತಂಡವು ಅಪರಾಧ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡಿ, ಹಲವಾರು ಸಾಕ್ಷಿಗಳನ್ನು ಕಲೆಹಾಕಿ ಪರಿಶೀಲಿಸಿತ್ತು.

    ಆರೋಪಿ ಬಿಹಾರದಲ್ಲಿ ಅಡಗಿಕೊಂಡಿದ್ದಾನೆಂದು ಶಂಕಿಸಲಾಗಿತ್ತು. ನಿರಂತರ ಪ್ರಯತ್ನಗಳ ನಂತರ, ಪೊಲೀಸರು ಶೇಖುಪುರದಿಂದ ಸುನಿಲ್‌ನನ್ನು ಬಂಧಿಸಿ ಹೆಚ್ಚಿನ ಕಾನೂನು ಕ್ರಮಗಳಿಗಾಗಿ ದೆಹಲಿಗೆ ಕರೆತಂದಿದ್ದಾರೆ.

    ವಿಚಾರಣೆಯ ಸಮಯದಲ್ಲಿ, ಸುನಿಲ್ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಸುನಿಲ್ ಕೊಲೆಯಾದ ಮಹಿಳೆಯನ್ನು ಮದುವೆಯಾಗಿದ್ದ. ಆಗಾಗ ನಡೆಯುತ್ತಿದ್ದ ಜಗಳಗಳಿಂದ ಬೇಸತ್ತು ಒಂದು ದಿನ ಕೊಲೆಗೈದಿದ್ದ. ಬಂಧನವನ್ನು ತಪ್ಪಿಸಲು, ಸುನಿಲ್ ಮೊಬೈಲ್ ಫೋನ್ ಬಳಸುವುದನ್ನು ಬಿಟ್ಟಿದ್ದ. ಪ್ರತಿ ಕೆಲವು ತಿಂಗಳಿಗೊಮ್ಮೆ ತನ್ನ ಅಡಗುತಾಣಗಳನ್ನು ಬದಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಹಾಸನ| ಪ್ರಿಯಕರನ ಜೊತೆ ಪತ್ನಿ ಪರಾರಿ – ನದಿಗೆ ಹಾರಿ ಪತಿ ಆತ್ಮಹತ್ಯೆ

    ಹಾಸನ| ಪ್ರಿಯಕರನ ಜೊತೆ ಪತ್ನಿ ಪರಾರಿ – ನದಿಗೆ ಹಾರಿ ಪತಿ ಆತ್ಮಹತ್ಯೆ

    ಹಾಸನ: ಪ್ರಿಯಕರನ ಜೊತೆ ಪತ್ನಿ ಪರಾರಿಯಾದ ಹಿನ್ನೆಲೆ ಮನನೊಂದ ಪತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಹೊಳೆನರಸೀಪುರ (Holenarasipura) ತಾಲೂಕಿನ ಮಾಕವಳ್ಳಿ ಗ್ರಾಮದ ಬಳಿ ನಡೆದಿದೆ.

    ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ರವಿ (38) ಆತ್ಮಹತ್ಯೆಗೆ ಶರಣಾದ ಪತಿ. ರವಿಯ ಪತ್ನಿ ಕೆಲ ದಿನಗಳ ಹಿಂದೆ ಗಂಡನನ್ನು ಬಿಟ್ಟು ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಜೊತೆ ಪರಾರಿಯಾಗಿದ್ದಳು. ಇದರಿಂದ ಮನನೊಂದ ರವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಎಸ್ಪಿಗೂ ದೂರು ನೀಡಿದ್ದರು. ಇದನ್ನೂ ಓದಿ: ಹರ್ಲೀನ್ ಡಿಯೋಲ್‍ ಅಬ್ಬರದ ಬ್ಯಾಟಿಂಗ್‌ಗೆ ಡೆಲ್ಲಿ ಬರ್ನ್‌ – ಗುಜರಾತ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮನನೊಂದ ರವಿ ಶನಿವಾರ ಮಾಕವಳ್ಳಿ ಬಳಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ರವಿಯ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿಯುತ್ತಿದೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಗ್ಯಾರಂಟಿಗೆ ಅನುದಾನ ಕಳೆದ ಬಾರಿ ಎಷ್ಟಿತ್ತು? ಈ ಬಾರಿ ಎಷ್ಟು ಹಂಚಿಕೆಯಾಗಿದೆ? ಸಾಲ ಎಷ್ಟು?

  • ಅನೈತಿಕ ಸಂಬಂಧ ಶಂಕೆ – ಪತ್ನಿ, ಸ್ನೇಹಿತನನ್ನು ಕಡಿದು ಹಾಕಿದ ಪತಿ

    ಅನೈತಿಕ ಸಂಬಂಧ ಶಂಕೆ – ಪತ್ನಿ, ಸ್ನೇಹಿತನನ್ನು ಕಡಿದು ಹಾಕಿದ ಪತಿ

    ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಪತ್ನಿ (Wife) ಮತ್ತು ಆಕೆಯ ಸ್ನೇಹಿತನ ನಡುವೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಇಬ್ಬರನ್ನೂ ಹತ್ಯೆಗೈದ ಘಟನೆ ಕೇರಳದ (Kerala) ಪತ್ತನಂತಿಟ್ಟ ಜಿಲ್ಲೆಯ ಕಲಂಜೂರು ಗ್ರಾಮದಲ್ಲಿ ನಡೆದಿದೆ.

    ಹತ್ಯೆಗೀಡಾದವರನ್ನು ವೈಷ್ಣವಿ ಮತ್ತು ವಿಷ್ಣು ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಬೈಜು ಎಂದು ಗುರುತಿಸಲಾಗಿದೆ. ಪತ್ನಿ ಹಾಗೂ ಆಕೆಯ ಸ್ನೇಹಿತನ ನಡುವೆ ಮೊಬೈಲ್‌ನಲ್ಲಿ ನಡೆದ ಚಾಟಿಂಗ್‌ನ್ನು ನೋಡಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

    ಭಾನುವಾರ ರಾತ್ರಿ ಬೈಜು ಮತ್ತು ವೈಷ್ಣವಿ ನಡುವೆ ಜಗಳ ನಡೆದಿದ್ದು, ಆಕೆಯ ಮೇಲೆ ಹಲ್ಲೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ವಿಷ್ಣುವಿನ ಮನೆಗೆ ಓಡಿಹೋಗಿದ್ದಳು. ಬಳಿಕ ಅವಳನ್ನು ಬೆನ್ನಟ್ಟಿ ಮಚ್ಚಿನಿಂದ ಹಲ್ಲೆ ಮಾಡಿದ್ದ. ಈ ವೇಳೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ನಂತರ ಬೈಜು, ವಿಷ್ಣುವಿನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದ.

    ಸ್ಥಳೀಯ ಕೂಡಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಜುನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನನ್ನ ಮಾತು ಕೇಳ್ದಿದ್ರೆ ಕಂಪ್ಲೇಂಟ್ ಕೊಡ್ತೀನಿ – ಕಲಬುರಗಿಯಲ್ಲಿ ಪತ್ನಿ ಕಿರುಕುಳಕ್ಕೆ ನವವಿವಾಹಿತ ಬಲಿ

    ನನ್ನ ಮಾತು ಕೇಳ್ದಿದ್ರೆ ಕಂಪ್ಲೇಂಟ್ ಕೊಡ್ತೀನಿ – ಕಲಬುರಗಿಯಲ್ಲಿ ಪತ್ನಿ ಕಿರುಕುಳಕ್ಕೆ ನವವಿವಾಹಿತ ಬಲಿ

    ಕಲಬುರಗಿ: ಮದುವೆಯಾಗಿ ಕೇವಲ ಮೂರು ತಿಂಗಳಲ್ಲಿ ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಮಹಾದೇವ ನಗರದಲ್ಲಿ ನಡೆದಿದೆ.

    ಆಳಂದ ತಾಲೂಜಿನ ನವಜಾಪುರ ಗ್ರಾಮದ ರಾಕೇಶ್ ಬಿರಾದಾರ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಕೇಶ್ ಹಾಗೂ ಯಡ್ರಾಮಿ ತಾಲೂಕಿನ ಕೊಳಗೇರಿಯ ಮೇಘಾ ಮದುವೆ ಆರು ತಿಂಗಳ ಹಿಂದೆ ನಡೆದಿತ್ತು. ಈ ಮಧ್ಯೆ ಮನೆಯಲ್ಲಿ ಕೆಲಸ‌ ಮಾಡುವ ಸಂಬಂಧ ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಮಧ್ಯೆ ಮೇಘಾ ಹಿರಿಯ ಸಹೋದರಿ ಪ್ರಿಯಾಂಕಾ ಹಾಗೂ ತಾಯಿ ರೇಣುಕಾ ಸಹ ಇತ್ತೀಚೆಗೆ ರಾಕೇಶ್‌ಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ತಮ್ಮ ಮಗಳಿಗೆ ಏನಾದರೂ ತೊಂದರೆಯಾದ್ರೆ ಪೊಲೀಸ್ ಕಂಪ್ಲೇಂಟ್‌ ನೀಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

    ಈ ಎಲ್ಲ ಬೆಳವಣಿಗೆಗಳ ಮಧ್ಯೆ ಎರಡು ದಿನಗಳ ಹಿಂದೆ ಹಾಲು – ಮೊಸರು ತರುವ ಸಂಬಂಧ ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಆ ಬಳಿಕ ದಂಪತಿಯ ನಡುವೆ ಏರ್ಪಟ್ಟ ವಿರಸಕ್ಕೆ ತೆರೆ ಎಳೆಯಲು ಮನೆಯ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ ಒಂದುಗೂಡಿಸಿದ್ದರಾದರೂ, ದಂಪತಿ ಮಧ್ಯೆ ಬಿಗುಮಾನ ಮುಂದುವರೆದಿತ್ತು ಎಂದು ಹೇಳಲಾಗಿದೆ.

    ಈ ಮಧ್ಯೆ, ಇಂದು ಬೆಳಗ್ಗೆ ಗಂಡನ ವಿರುದ್ಧ ದೂರು ನೀಡುವುದಾಗಿ ಪತ್ನಿ ಮೇಘಾ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬೇಸತ್ತ ರಾಕೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆಯ ಹಿನ್ನೆಲೆಯಲ್ಲಿ ಪತ್ನಿ ಮೇಘಾ ಸೇರಿದಂತೆ ಮೂವರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪತಿಯ ಕುಟುಂಬಸ್ಥರ ಆರೋಪ ತಳ್ಳಿಹಾಕಿದ ಪತ್ನಿ, ಸಣ್ಣ ಪುಟ್ಟ ವಿಷಯಗಳಿಗೆ ನನ ಪತಿ ಜಗಳವಾಡುತ್ತಿದ್ದ. ಇನ್ನು ಅವರ‌ ಕುಟುಂಬಸ್ಥರು ಈ‌ ಸಮಸ್ಯೆಗೆ ಪರಿಹಾರ ಮಾಡಲಿಲ್ಲ, ನಿನ್ನೆ ಸಾಯಂಕಾಲ ಸಹ ಇಬ್ಬರ ನಡುವೆ ಜಗಳ ನಡೆದ್ದಾಗ ನನ‌ ಮೇಲೆ ರಾಕೇಶ್ ಹಲ್ಲೆ ಮಾಡಿದ್ದಾನೆ. ಆದರೆ ಅವರ ಕುಟುಂಬಸ್ಥರು ಈ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲಿಲ್ಲ ಅಂತಾ ಮೃತನ ಕುಟುಂಬಸ್ಥರ ವಿರುದ್ಧವೆ ಮೇಘಾ ಆರೋಪಿಸಿದ್ದಾಳೆ.

  • Bidar | ಮದ್ಯ ಸೇವಿಸಿ ಕಿರುಕುಳ – ಪೋಷಕರ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ

    Bidar | ಮದ್ಯ ಸೇವಿಸಿ ಕಿರುಕುಳ – ಪೋಷಕರ ಜೊತೆ ಸೇರಿ ಪತಿಯ ಹತ್ಯೆಗೈದ ಪತ್ನಿ

    ಬೀದರ್: ಪ್ರತಿದಿನ ಮದ್ಯ (Alcohol) ಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನು (Husband) ಪೋಷಕರ ಜೊತೆ ಸೇರಿ ಪತ್ನಿ ಕೊಲೆ ಮಾಡಿದ ದಾರುಣ ಘಟನೆ ಬೀದರ್ (Bidar) ಜಿಲ್ಲೆಯ ಔರಾದ್ (Aurad) ತಾಲೂಕಿನ ಬಾಚೆಪಳ್ಳಿ ಗ್ರಾಮದಲ್ಲಿ ನಡೆದಿದೆ.

    ಶ್ರೀಧರ್ ಶಿವರಾಜ್ (30) ಕೊಲೆಯಾದ ಪತಿ. ಕುಡಿದು ಬಂದು ಈತ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಪೋಷಕರ ಜೊತೆ ಸೇರಿ ಪತಿಯನ್ನು ಪತ್ನಿ ಸವಿತಾ ಕೊಲೆ ಮಾಡಿದ್ದಾಳೆ. ಇದನ್ನೂ ಓದಿ: ಖರ್ಜೂರದೊಳಗೆ ಇಟ್ಟು ಸಾಗಿಸುತ್ತಿದ್ದ 172 ಗ್ರಾಂ ಚಿನ್ನ ಏರ್‌ಪೋರ್ಟ್‌ನಲ್ಲಿ ವಶಕ್ಕೆ

    ಕಳೆದ ಐದಾರು ವರ್ಷಗಳ ಹಿಂದೆ ಪ್ರೀತಿಸಿ ಇಬ್ಬರೂ ಮದುವೆಯಾಗಿದ್ದರು. ಚಾಲಕನ ಕೆಲಸ ಮಾಡುತ್ತಿದ್ದ ಪತಿ ಶ್ರೀಧರ್ ಕುಡಿದು ಬಂದು ಪ್ರತಿ ದಿನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಪೋಷಕರನ್ನು ಕರೆಸಿಕೊಂಡು ಹಗ್ಗದಿಂದ ಪತಿಯ ಕೈಕಾಲು ಕಟ್ಟಿ ಹಾಕಿ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಇಗ್ಗುತಪ್ಪ, ನಾಲಾಡಿ ಬೆಟ್ಟದಲ್ಲಿ ಕಾಡ್ಗಿಚ್ಚು – 20 ಎಕ್ರೆಗೆ ಬೆಂಕಿ

    ಹಲ್ಲೆ ಮಾಡಿದ ಬಳಿಕ ಮೂವರೂ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಪತಿ ಶ್ರೀಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಆಹಾರ ಪ್ರಿಯರಿಗೆ ಶಾಕ್‌ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ