Tag: Wife

  • ಮನೆಯ ಹಂಚು ತೆಗೆದು ಚಿನ್ನ, ಟಿವಿ ಕದ್ದೊಯ್ದ ಖತರ್ನಾಕ್ ಕಳ್ಳರು

    ಮನೆಯ ಹಂಚು ತೆಗೆದು ಚಿನ್ನ, ಟಿವಿ ಕದ್ದೊಯ್ದ ಖತರ್ನಾಕ್ ಕಳ್ಳರು

    ಹಾಸನ: ಮನೆಯ ಹಂಚು ತೆಗೆದು ಕೆಳಗಿಳಿದ ಕಳ್ಳರು ಚಿನ್ನ ಮತ್ತು ಟಿವಿ ಕದ್ದೊಯ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.  ಇದನ್ನೂ ಓದಿ: 100 ರೂ.ಗೆ ಉಗಾಂಡ ಪ್ರಜೆಗಳ ಕಿರಿಕ್ – ಕ್ಯಾಬ್ ಚಾಲಕನಿಗೆ ಅಂಗಾಂಗ ತೋರಿಸಿ ಯುವತಿಯರ ವಿಕೃತಿ

    ಬೇಲೂರು ತಾಲೂಕಿನ ಬೊಮ್ಮಡಿಹಳ್ಳಿ ಗ್ರಾಮದ ಶಿವಣ್ಣಗೌಡ ಅಂಗಡಿಯಲ್ಲಿ ಮಲಗಿದ್ದರು. ಇನ್ನೂ ಅಂಗಡಿಗೆ ಹೊಂದಿಕೊಂಡಿದ್ದ ಮನೆಯಲ್ಲಿ ಅವರ ಪತ್ನಿ ಪ್ರೇಮ(58) ಮಲಗಿಕೊಳ್ಳುತ್ತಾರೆ. ಈ ವೇಳೆ ಭಾನುವಾರ ಮಧ್ಯರಾತ್ರಿ ಸುಮಾರು 2 ಅಥವಾ 3 ಗಂಟೆಯ ಸಮಯದಲ್ಲಿ ಪ್ರೇಮ ಒಬ್ಬರೆ ಮಲಗಿದ್ದಾಗ, ಮನೆಯ ಮೇಲ್ಛಾವಣಿಯ ಹಂಚುಗಳನ್ನು ಇಳಿಸಿ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ನಂದಿನಿ ಹಾಲಿನ ಲಾರಿ, ಅಂಬುಲೆನ್ಸ್ ನಡುವೆ ಭೀಕರ ಅಪಘಾತ- ಉರುಳಿ ಬಿದ್ದ ಈಚರ್

    ನಂತರ ಮಲಗಿದ್ದ ಪ್ರೇಮರವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತಾಳಿಯೊಂದಿಗಿದ್ದ ಚಿನ್ನದ ಸರ ಕಟ್ ಮಾಡಿಕೊಂಡು, ಮನೆಯಲ್ಲಿದ್ದ ಟಿವಿಯೊಂದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇದೀಗ ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.  ಇದನ್ನೂ ಓದಿ: ಬಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳೆನು ಗೊತ್ತಾ?

  • ವಾರಕ್ಕೊಮ್ಮೆ ಕುಡಿತಿದ್ದೋರು ಇನ್ಮೇಲೆ ದಿನಾ ಕುಡಿಯಲು ಆರಂಭಿಸ್ತಾರೆ – ಮಹಿಳೆಯರ ಪ್ರತಿಭಟನೆ

    ವಾರಕ್ಕೊಮ್ಮೆ ಕುಡಿತಿದ್ದೋರು ಇನ್ಮೇಲೆ ದಿನಾ ಕುಡಿಯಲು ಆರಂಭಿಸ್ತಾರೆ – ಮಹಿಳೆಯರ ಪ್ರತಿಭಟನೆ

    ಚಿಕ್ಕಮಗಳೂರು: ಗಂಡಂದಿರು ವಾರಕ್ಕೆ ಒಮ್ಮೆ ಕುಡಿಯುತ್ತಿದ್ದರು, ಈಗ ದಿನ ಕುಡಿಯಲು ಆರಂಭಿಸುತ್ತಾರೆ. ಹಾಗಾಗಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು ಬಾರ್ ಮುಂದೆ ಪ್ರತಿಭಟನೆ ನಡೆಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಈ ಬಾರ್ ಶುಕ್ರವಾರ ತಾನೇ ಓಪನ್ ಆಗಿತ್ತು. ಬಾರಿನಿಂದ ಮುಂದಾಗೋ ಅನಾಹುತ, ತೊಂದರೆಯನ್ನ ಮನಗಂಡ ಹಳ್ಳಿ ಮಹಿಳೆಯರು ಒಂದೇ ದಿನಕ್ಕೆ ಬಾರ್ ಮುಂದೆ ಧರಣಿ ನಡೆಸಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ.

    ಎಮ್ಮೆದೊಡ್ಡಿಯ ಮುಸ್ಲಾಪುರ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ಹಾಗಾಗಿ ನಿನ್ನೆ ತಾನೇ ನೂತನ ಬಾರ್ ಓಪನ್ ಆಗಿತ್ತು. ಸಾಲದ್ದಕ್ಕೆ ಅದೇ ಮಾರ್ಗದಲ್ಲಿ ಶಾಲೆ ಬೇರೆ ಇದೆ. ಕುಡಿದು ದಾರಿಯಲ್ಲಿ ಹೋಗೋ-ಬರೋ ಹೆಣ್ಮಕ್ಕಳು, ಹೆಂಗಸರಿಗೆ ಕಿಟಲೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತೆ. ಅಷ್ಟೆ ಅಲ್ಲದೆ ಈ ಭಾಗದಲ್ಲಿ ಇರುವವರೆಲ್ಲಾ ಕೂಲಿ ಕಾರ್ಮಿಕರು. ಅವರು ಇಷ್ಟು ದಿನ ದುಡಿದು ಜೀವನ ಮಾಡುತ್ತಿದ್ದರು ಎಂದಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ನೀಡಿದ ಲಸಿಕೆಗಳ ಪೈಕಿ ಶೇ.11 ರಷ್ಟು ಪಾಲು ರಾಜ್ಯದ್ದು: ಡಾ.ಕೆ.ಸುಧಾಕರ್

    ಸುತ್ತಮುತ್ತ ಬಾರ್ ಇಲ್ಲದ ಕಾರಣ ವಾರಕ್ಕೊಮ್ಮೆ ಸಂತೆಗೆ ಹೋದಾಗ ಕುಡಿದು ಬರುತ್ತಿದ್ದರು. ಈಗ ಇಲ್ಲೇ ಬಾರ್ ಮಾಡಿದ್ದಾರೆ. ಇನ್ನು ಮುಂದೆ ದಿನಾ ಕುಡಿಯಲು ಆರಂಭಿಸುತ್ತಾರೆ. ದುಡಿದದ್ದನ್ನೆಲ್ಲಾ ಬಾರಿಗೆ ಹಾಕುತ್ತಾರೆ. ಆಗ ಹೆಂಡತಿ-ಮಕ್ಕಳ ಕಥೆ ಏನೆಂದು ಪ್ರಶ್ನಿಸಿರೋ ಈ ಬಾರಿನಿಂದ ಸುತ್ತಮುತ್ತಲಿನ 28 ಹಳ್ಳಿಗೆ ತೊಂದರೆಯಾಗಲಿದೆ. ಹಾಗಾಗಿ ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು-ಪುರುಷರು ಬಾರ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

  • ಅತ್ತೆ ಮಗನ ಮೆಸೇಜ್‍ನಿಂದ ಆರಂಭವಾದ ಕಲಹ – ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ

    ಅತ್ತೆ ಮಗನ ಮೆಸೇಜ್‍ನಿಂದ ಆರಂಭವಾದ ಕಲಹ – ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ

    ಚಿತ್ರದುರ್ಗ: ಅತ್ತೆ ಮಗನೋರ್ವ ವಿವಾಹಿತ ಮಹಿಳೆಗೆ ಮೊಬೈಲ್ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಆರಂಭವಾದ ಕೌಟಂಬಿಕ ಕಲಹ, ದಂಪತಿಯ ಆತ್ಮಹತ್ಯೆಯಿಂದ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಯಾದಲಗಟ್ಟ ಗ್ರಾಮದಲ್ಲಿ ನಡೆದಿದೆ.

    ಯಾದಲಗಟ್ಟೆ ಗ್ರಾಮದಲ್ಲಿ ಪತ್ನಿ ಶೈಲ ಮತ್ತು ಪತಿ ಮಹಂತೇಶ್ ಇಬ್ಬರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ 4 ವರ್ಷದ ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ಆರೇಳು ತಿಂಗಳಿಂದ ಶೈಲ ಅವರ ಮೊಬೈಲ್ ಗೆ ಪತಿ ಕರೆ ಮಾಡಿದಾಗ ಅವರ ಮೊಬೈಲ್ ಸದಾ ಎಂಗೇಜ್ ಬರುತ್ತಿತ್ತು. ಅಲ್ಲದೇ ಪ್ರತಿದಿನ ಸಾಕಷ್ಟು ಮೆಸೇಜ್ ಗಳು ಸಹ ಶೈಲ ಅವರ ಮೊಬೈಲ್ ಗೆ ಬರುತ್ತಿದ್ದವಂತೆ. ಹೀಗಾಗಿ ಮೊಬೈಲ್ ಗಮನಿಸಿದ ಪತಿ ಮಹಂತೇಶ್, ಪತ್ನಿ ಶೈಲ ಜೊತೆ ಜಗಳವಾಡಿದ್ದಾನೆ. ಅಲ್ಲದೆ ಪತ್ನಿಗೆ ಎಚ್ಚರಿಕೆ ನೀಡಿದ್ದನು. ಬಳಿಕ ಎಲ್ಲಾ ವಿಚಾರದಲ್ಲೂ ಅನುಮಾನಿಸುತ್ತಿದ್ದನು. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು

    ಗಂಡನ ಅನುಮಾನ ಹಾಗೂ ಗಲಭೆಯಿಂದ ಮನನೊಂದ ಪತ್ನಿ ಶೈಲ ಭಾನುವಾರ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಆಗ ಪತ್ನಿಯ ಸಾವಿನಿಂದ ಮನನೊಂದ ಪತಿ ಮಹಂತೇಶ್ ಕೂಡ ಗಾಬರಿಯಾಗಿ ಸೋಮವಾರ ಬೆಳಗ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಇದಿರಿಂದಾಗಿ ಏನು ಅರಿಯದ ಕಂದಮ್ಮಗಳು ಅನಾಥರಾಗಿದ್ದಾರೆ.

    ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್

  • ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ಪೆಟ್ರೋಲ್ ಸುರಿದು ಪತಿಯನ್ನು ಹತ್ಯೆಗೈದು ಚರಂಡಿಗೆ ಶವ ಎಸೆದ್ಳು

    ತುಮಕೂರು: ಮಹಿಳೆಯೊಬ್ಬರು ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು ಶವವನ್ನು ಚರಂಡಿಗೆ ಎಸೆದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ನಡೆದಿದೆ.

    ನಾರಾಯಣ್(52) ಮೃತ ದುರ್ದೈವಿ. ನಾರಾಯಣ್ ಪತ್ನಿ ಅನ್ನಪೂರ್ಣ ಈ ಗಂಭೀರ ಕೊಲೆ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಲವ್ ಲೆಟರ್ ಬಂದಿದೆ – ಆಪ್ ನಾಯಕ

    ಅನ್ನಪೂರ್ಣ ಅವರಿಗೆ ಅಕ್ರಮ ಸಂಬಂಧ ಇತ್ತು. ಇದೇ ವಿಚಾರಕ್ಕೆ ನಾರಾಯಣ್ ಮತ್ತು ಅನ್ನಪೂರ್ಣ ಅವರ ನಡುವೆ ಪ್ರತಿನಿತ್ಯ ಜಗಳ ಆಗುತ್ತಲೇ ಇತ್ತು. ಅನ್ನಪೂರ್ಣ ಇದೇ ವಿಚಾರಕ್ಕೆ ಗಂಡನನ್ನು ಹತ್ಯೆ ಮಾಡಿದ್ದಾಳೆ ಎಂಬ ಆರೋಪ ಬಂದಿದೆ.  ಇದನ್ನೂ ಓದಿ: ವೈಟ್ ಬೋರ್ಡ್ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸೋದು ಅಕ್ಷಮ್ಯ ಅಪರಾಧ: ಸುಧಾಕರ್

    ಮೃತ ನಾರಾಯಣ್ ನೆಲಮಂಗಲ ಬಳಿಯ ಟೋಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ತುಮಕೂರು ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನ್ನಪೂರ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಗಂಡ ಹೆಂಡತಿ ಜಗಳ- ಬಾಮೈದನಿಂದ ಬಾವನ ಮೇಲೆ ಮಾರಣಾಂತಿಕ ಹಲ್ಲೆ

    ಗಂಡ ಹೆಂಡತಿ ಜಗಳ- ಬಾಮೈದನಿಂದ ಬಾವನ ಮೇಲೆ ಮಾರಣಾಂತಿಕ ಹಲ್ಲೆ

    ನೆಲಮಂಗಲ: ಗಂಡ, ಹೆಂಡತಿ ಜಗಳವಾಡಿದನ್ನು ಕಂಡು ರೊಚ್ಚಿಗೆದ್ದ ಬಾಮೈದನೊಬ್ಬ ಬಾವನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ವಾಲ್ಮೀಕನಗರದಲ್ಲಿ ನಡೆದಿದೆ.

    ನೆಲಮಂಗಲ ತಾಲೂಕಿನ ವಾಲ್ಮೀಕನಗರದಲ್ಲಿ ವಾಸವಾಗಿರುವ ಹಿದಾಯತ್ ಖಾನ್ ತನ್ನ ಪತ್ನಿ ಜೊತೆ ಜಗಳವಾಡಿಕೊಂಡು ಬಳಿಕ ಹಿರಿಯರ ನೇತೃತ್ವದಲ್ಲಿ ಮನಸ್ತಾಪ ಬಗೆಹರಿಸಿ ಸಂಸಾರ ಒಂದು ಮಾಡಿದ್ದರು. ಅದಾದ ಬಳಿಕ ಮತ್ತೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಪತಿ, ಪತ್ನಿಗೆ ಹೊಡೆದ ಎಂಬ ವಿಚಾರಕ್ಕೆ ಹಿದಾಯತ್ ಖಾನ್ ಪತ್ನಿಯ ಅಣ್ಣ ತಮ್ಮಂದಿರಾದ ಅಜ್ಘರ್ ಖಾನ್, ಸಲ್ಮಾನ್, ಮತ್ತು ಅನ್ಸರ್ ಖಾನ್ ಸೇರಿ ಬಾವನಿಗೆ ಲಾಂಗ್, ರಾಡ್, ಬಡಿಗೆಗಳಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

    ಹಲ್ಲೆಗೊಳಗಾಗಿದ್ದ ಹಿದಾಯತ್ ಖಾನ್ ತೀವ್ರ ರಕ್ತಸ್ರಾವದಿಂದ ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್

  • ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಬರುವಾಗ ಪತ್ನಿ ಕೊಂದ ಪತಿ

    ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಬರುವಾಗ ಪತ್ನಿ ಕೊಂದ ಪತಿ

    ಚಿತ್ರದುರ್ಗ: ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಗೇಟ್ ಬಳಿ ನಡೆದಿದೆ.

    ನಗರದ ಬಡಾಮಖಾನ್ ಬಡಾವಣೆಯ ನಿವಾಸಿ ಅಮೀನಾ(30) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ. ಆರೋಪಿ ಪತಿ ಮಹಿಬೂಬ್ ಪಾಶಾನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ದರ್ಗಾಕ್ಕೆ ಪತ್ನಿಯನ್ನು ಸ್ಕೂಟಿಯಲ್ಲಿ ಆರೋಪಿ ಕರೆದೊಯ್ದಿದ್ದನು. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಇಬ್ಬರೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಳ್ಳಕೆರೆ ನಗರದ ಸಂಬಂಧಿಗಳ ಮನೆಗೆ ತೆರಳಿ, ಅವರೊಂದಿಗೆ ಕೆಲ ಸಮಯ ಕಳೆದು ವಾಪಸ್ ಬರುವಾಗ ಸ್ಕೂಟಿ ಚಾಲನೆ ವೇಳೆಯೇ ಕತ್ತಲಲ್ಲಿ ಪತ್ನಿಯನ್ನು ಕೊಲೆಗೈದಿದ್ದಾನೆ.

    ಹಲವು ದಿನಗಳಿಂದ ಇಬ್ಬರ ನಡುವೆ ದಿನನಿತ್ಯ ವಾಗ್ವಾದ ಹಾಗೂ ಗಲಭೆ ನಡೆಯುತ್ತಿತ್ತು. ಕೌಟುಂಬಿಕ ವಿಚಾರವಾಗಿ ಶುರುವಾದ ಗಲಭೆ ಇಂದು ಪತ್ನಿಯ ಸಾವಿನೊಂದಿಗೆ ಅಂತ್ಯವಾಗಿದೆ. ಈಗಾಗಲೇ ಆರೋಪಿ ಪತಿ ಮಹಿಬೂಬ್ ಪಾಶಾನನ್ನು ಬಡಾವಣೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್‍ಪಿ ರಾಧಿಕಾ, ಎಎಸ್‍ಪಿ ನಂದಗಾವಿ, ಡಿವೈಎಸ್‍ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • ತಂದೆ, ತಾಯಿ ಕಿರುಕುಳಕ್ಕೆ ಮಗ ಆತ್ಮಹತ್ಯೆ

    ತಂದೆ, ತಾಯಿ ಕಿರುಕುಳಕ್ಕೆ ಮಗ ಆತ್ಮಹತ್ಯೆ

    ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಮಗ ಆತ್ಮಹತ್ಯೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ಜರುಗಿದೆ.

    mandya sucide

    ಮೃತ ದುರ್ದೈವಿ ಗಿರೀಶ್(32) ಆಗಿದ್ದು, ತನ್ನ ಆತ್ಮಹತ್ಯೆಗೆ ಅಪ್ಪ ರಾಜು, ಅಮ್ಮ ದೇವಮಣಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಗಿರೀಶ್ ತಂದೆ ರಾಜು ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ತಾಯಿ ದೇವಮಣಿ ಈಗಲೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. 11 ವರ್ಷದ ಹಿಂದೆ ತ್ರಿವೇಣಿ ಎಂಬಾಕೆಯನ್ನು ಗಿರೀಶ್ ಮದುವೆಯಾಗಿದ್ದ. ಇಷ್ಟು ವರ್ಷವಾದರೂ ಸಹ ಇವರಿಗೆ ಮಕ್ಕಳಾಗಿರಲಿಲ್ಲ. ಇದನ್ನೂ ಓದಿ: ಲಂಕೆಯಲ್ಲಿ ‘ಪಿಪಿಪಿ’ ಸಾಂಗ್ ಗುಂಗು – ಭರ್ಜರಿ ಸ್ಟೆಪ್ಸ್ ಹಾಕಿದ ಯೋಗಿ, ಕೃಷಿ ತಾಪಂಡ

    mandya sucide

    ಹೀಗಾಗಿ ಅಪ್ಪ-ಅಮ್ಮ ಮಗ ಗಿರೀಶ್‍ಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಆಸ್ತಿ ಕೊಟ್ಟಿರಲಿಲ್ಲ. ಜೊತೆಗೆ ವಾಸ ಮಾಡಲು ಮನೆ ಕೂಡ ನೀಡಿರಲಿಲ್ಲ ಎಂದು ಆರೋಪ ಮಾಡಿದ್ದಾರೆ. ತಾವು ಚೆಂದದ ಮನೆಯಲ್ಲಿ ವಾಸವಿದ್ದು, ಗಿರೀಶ್ ಮತ್ತು ಅವರ ಪತ್ನಿಗೆ ತಮ್ಮ ಮನೆಯ ಕೊಟ್ಟಿಯಲ್ಲಿ ವಾಸ ಮಾಡಲು ಬಿಟ್ಟಿದ್ದರು. ಮಕ್ಕಳಾಗಲಿಲ್ಲ ಎಂದು ದಿನೇ, ದಿನೇ ತಂದೆ-ತಾಯಿಗಳು ಗಿರೀಶ್ ಹಾಗೂ ಆತನ ಪತ್ನಿಯನ್ನು ಹಂಗಿಸುತ್ತಿದ್ದರು. ಇದರಿಂದ ಮನನೊಂದು ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

    ತನ್ನ ಸಾವಿಗೆ ಅಪ್ಪ, ಅಮ್ಮನ ಕಿರುಕುಳವೇ ಕಾರಣ ಎಂದು ಡೆತ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸಾವಿನ ನಂತರ ತಂದೆ-ತಾಯಿಗಳು ತಲೆ ಮರೆಸಿಕೊಂಡಿದ್ದು, ಸದ್ಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಬಾಗಿನ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ಪತ್ನಿ, ಪುತ್ರಿ ಕಣ್ಣೀರು

    ಮಂಡ್ಯ: ಜಿಲ್ಲೆಯಲ್ಲಿ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡರವರ ಪತ್ನಿ ಹಾಗೂ ಪುತ್ರಿ ಕಣ್ಣೀರು ಹಾಕಿದ್ದಾರೆ.

    Narayana Gowda

    ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ನನ್ನ ಸಾಧನೆಗೆ ಪತ್ನಿ, ಪುತ್ರಿಯರ ಶಕ್ತಿಯೇ ಕಾರಣ. ಅವರ ಆಸೆಯಂತೆ ಇಂದು ಸಹೋದರಿಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿದ್ದೇನೆ. ಪತ್ನಿ, ಪುತ್ರಿಯರ ತ್ಯಾಗ, ಶಕ್ತಿಯೇ ನನ್ನ ಈ ಸಾಧನೆಗೆ ಕಾರಣವಾಗಿದೆ. ನನ್ನ ಅಮ್ಮನ ಬಳಿಕ ಪತ್ನಿ, ಪುತ್ರಿಯರ ಕಾಳಜಿಯನ್ನು ನಾನು ಯಾವತ್ತು ಮರೆಯುವುದಿಲ್ಲ ಎಂದು ಭಾವುಕರಾಗಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿದ್ದ ನಾರಾಯಣಗೌಡ ಅವರ ಪತ್ನಿ ದೇವಕಿ, ಪುತ್ರಿ ಲೀನಾ ನಾರಾಯಣಗೌಡ ಅವರ ಮಾತುಗಳನ್ನು ಕೇಳಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:  ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    Narayana Gowda

    ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ನೆಲೆಯೂರುವ ಸಲುವಾಗಿ ನಾರಾಯಣಗೌಡ ಪ್ರತಿ ಬಾರಿಯೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ. ಪಕ್ಷ ಸಂಘಟನೆ ಜೊತೆಗೆ ಸಂಪ್ರದಾಯ ಪಾಲನೆಗಾಗಿ, ಇಂದು 500ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ. ಸೀರೆ ಜೊತೆಗೆ ಅರಿಶಿನ ಕುಂಕುಮ, ಹೂ ಮತ್ತು ಬಾಗಿನ ನೀಡಿ ಮಹಿಳೆಯರಿಗೆ ಗೌರಿ-ಗಣೇಶ ಹಬ್ಬದ ಶುಭಾಷಯಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

  • ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ

    ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ

    ಚಾಮರಾಜನಗರ: ಸಾಂಸಾರಿಕ ಜೀವನದಲ್ಲಿ ಕಲಹದಿಂದಾಗಿ ವಿಷ ಕುಡಿದು ವ್ಯಕ್ತಿಯೋರ್ವ ERSS-112 ಕರೆ ಮಾಡಿ ರಕ್ಷಣೆಗೊಳಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿದ್ದ ವೇಳೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಮಧ್ಯರಾತ್ರಿಯಲ್ಲಿ ತಾನು ಸಾಂಸಾರಿಕ ವಿಚಾರದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ವಾಹನದ ಪೊಲೀಸರು ವ್ಯಕ್ತಿಯನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಡಿಸಿ ವಿರುದ್ಧ ಡಿಕೆಶಿ ಕಿಡಿ

    ಈಗಾಗಲೇ ಆತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಕುರಿತು ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ವ್ಯಕ್ತಿಯನ್ನು ರಕ್ಷಣೆ ಮಾಡಿರುವ ಕುರಿತು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿ ಆರೋಪ- ದಂಪತಿಯ ವಿಚಾರಣೆ

  • ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

    ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

    ಮುಂಬೈ: ಪತಿ ತನ್ನನ್ನು ಕೇಳದೆ ಪಾನಿಪುರಿ ತಂದ ಎಂದು ಕೋಪಗೊಂಡ ಪತ್ನಿ ಆತನೊಂದಿಗೆ ಸಿಕ್ಕಾಪಟೆ ಜಗಳ ಆಡಿ, ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪ್ರತೀಕ್ಷಾ ಸರ್ವದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಆಕೆಯ ಪತಿ ಗಹಿನಿನಾಥ್ ಸರ್ವದೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಗಹಿನಿನಾಥ್ ಅವರ ಹುಟ್ಟೂರು ಸೋಲಾಪುರ. 2019ರಲ್ಲಿ ಇವರಿಬ್ಬರೂ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ. ಪಾನಿಪುರಿಗಾಗಿ ಜಗಳ ಮಾಡಿಕೊಂಡು ಪ್ರತೀಕ್ಷಾ ಪ್ರಾಣ ಬಿಟ್ಟಿದ್ದಾಳೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

    ಗಹಿನಿನಾಥ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಗಹಿನಿನಾಥ್ ಮತ್ತು ಪ್ರತೀಕ್ಷಾ ಇಬ್ಬರೂ ಮದುವೆಯಾದ ನಂತರ ಪದೇಪದೆ ಜಗಳವಾಡುತ್ತಿದ್ದರು. ಇತ್ತೀಚೆಗಷ್ಟೇ ಇವರಿಬ್ಬರೂ ಅಂಬೇಗಾಂವ್ ಏರಿಯಾದಲ್ಲಿ ವಾಸಿಸಲು ಶುರು ಮಾಡಿದ್ದರು. ಇದನ್ನೂ ಓದಿ: ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ

    ಗಹಿನಿನಾಥ್ ಆಫೀಸಿನಿಂದ ಮನೆಗೆ ಬರುವಾಗ ಪಾನಿಪುರಿ ಪಾರ್ಸೆಲ್ ತಂದಿದ್ದರು. ಅದನ್ನು ನೋಡಿ ಖುಷಿಯಿಂದ ತಿನ್ನುವುದನ್ನು ಬಿಟ್ಟು ಪ್ರತೀಕ್ಷಾ, ನನ್ನನ್ನು ಕೇಳದೆ ಪಾನಿಪುರಿ ಯಾಕೆ ತಂದಿರಿ ಎಂದು ಪ್ರಶ್ನಿಸಿದ್ದಳು. ಜಗಳವನ್ನೂ ಪ್ರಾರಂಭಿಸಿದ್ದಲ್ಲದೆ, ಆ ಪಾನಿಪುರಿಯನ್ನು ತಿನ್ನಲೂ ಇಲ್ಲ. ಮರುದಿನ ಬೆಳಗ್ಗೆ ಗಹಿನಿನಾಥ್ ಕೆಲಸಕ್ಕೆ ಹೋಗುವಾಗ ತಿಂಡಿಯನ್ನೂ ಮಾಡಿಕೊಡಲಿಲ್ಲ. ಆಕೆ ಅದಾಗಲೇ ವಿಷಯುಕ್ತ ಮಾತ್ರೆ ಸೇವಿಸಿದ್ದಳು. ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿಲಾಯಿತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಇಷ್ಟಾದ ಮೇಲೆ ಪ್ರತೀಕ್ಷಾಳ ತಂದೆ ಪ್ರಕಾಶ್ ಪಿಸೆ ಗಹಿನಿನಾಥ್ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರತಿ ಬುಧವಾರ 10 ಲಕ್ಷ ಲಸಿಕೆ ಗುರಿ: ಸುಧಾಕರ್

    ಪಾನಿಪುರಿ ಕಾರಣಕ್ಕೆ ಜಗಳ ಶುರು ಮಾಡಿದ್ದರು. ಇಬ್ಬರ ನಡುವಿನ ವಾಗ್ವಾದ ತೀವ್ರರೂಪಕ್ಕೆ ಏರಿ, ಕೊನೆಗೆ ಪತ್ನಿಯ ಸಾವಿನಲ್ಲಿ ಅಂತ್ಯವಾಗಿದೆ. ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.