Tag: Wife

  • ತಾಜ್‌ಮಹಲ್‌ನಂತಯೇ ಮನೆ ಕಟ್ಟಿ ಪತ್ನಿಗೆ ಗಿಫ್ಟ್ ಕೊಟ್ಟ ಪತಿ

    ತಾಜ್‌ಮಹಲ್‌ನಂತಯೇ ಮನೆ ಕಟ್ಟಿ ಪತ್ನಿಗೆ ಗಿಫ್ಟ್ ಕೊಟ್ಟ ಪತಿ

    ಭೋಪಾಲ್: ವ್ಯಕ್ತಿಯೊಬ್ಬರು ತನ್ನ ಪತ್ನಿ ಮೇಲಿನ ಪ್ರೀತಿಗೆ ತಾಜ್‍ಮಹಲ್ ರೀತಿಯ ಮನೆಯನ್ನು ಕಟ್ಟಿಸಿ ಗಿಫ್ಟ್ ನೀಡಿದ್ದಾರೆ.

    ಷಹಜಹಾನ್ ಮುಮ್ತಾಜ್ ನಿಧನದ ನಂತರ ಪತ್ನಿ ಮೇಲಿನ ಪ್ರೀತಿಯ ಸಂಕೇತವಾಗಿ ಆಗ್ರಾದಲ್ಲಿ ತಾಜ್‍ಮಹಲ್ ಕಟ್ಟಿಸಿ ಉಡುಗೊರೆಯಾಗಿ ನೀಡಿದ್ದ. ಇದೇ ರೀತಿ ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಬೆಲೆಬಾಳುವ ಮನೆಯನ್ನು ನಿರ್ಮಿಸಿ ಆನಂದ್ ಚೋಕ್ಸೆ ಅವರು ತಮ್ಮ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ 

    ಆನಂದ್ ಚೋಕ್ಸೆ ಅವರು ತಾಜ್ ಮಹಲ್ ಪ್ರತಿರೂಪದಂತೆ 4 ಬೆಡ್ ರೂಮ್‍ಗಳಿರುವ ಮನೆ ನಿರ್ಮಿಸಲು ಮೂರು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಮನೆ ಕಟ್ಟುವ ವೇಳೆ ಇಂಜಿನಿಯರ್ ಬಹಳ ಶ್ರಮಪಟ್ಟಿದ್ದು, ಅವರು ತಾಜ್‍ಮಹಲ್ ಕುರಿತಂತೆ ಕೂಲಂಕುಷವಾಗಿ ಅಧ್ಯಯನ ನಡೆಸಿ, ಮನೆಯೊಳಗೆ ಕೆತ್ತನೆ ಮಾಡಲು ಬಂಗಾಳ ಮತ್ತು ಇಂದೋರ್‌ನಿಂದ ಕಲಾವಿದರನ್ನು ಕರೆಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ಈ ಮನೆಯ ಮೇಲಿರುವ ಗುಮ್ಮಟ 29 ಅಡಿ ಎತ್ತರವಿದ್ದು, ಇದು ತಾಜ್ ಮಹಲ್ ರೀತಿಯೇ ಗೋಪುರ ಹೊಂದಿದೆ ಮತ್ತು ಮನೆಯ ನೆಲವನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಲಾಗಿದ್ದು, ಪೀಠೋಪಕರಣಗಳನ್ನು ಮುಂಬೈನ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ.

    ಈ ಮನೆಯಲ್ಲಿ ಒಂದು ದೊಡ್ಡ ಹಾಲ್, ಕೆಳಗೆ 2 ಬೆಡ್ ರೂಮ್, ಮೇಲಿನ ಮಹಡಿಯಲ್ಲಿ 2 ಬೆಡ್ ರೂಮ್, ಗ್ರಂಥಾಲಯ ಮತ್ತು ಧ್ಯಾನ ಕೊಠಡಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೇ ಮನೆಯ ಒಳಗೂ, ಹೊರಗೂ ಲೈಟಿಂಗ್ಸ್ ಅಳವಡಿಸಲಾಗಿದ್ದು, ನಿಜವಾದ ತಾಜ್ ಮಹಲ್ ನಂತೆಯೇ ಈ ಮನೆಯೂ ಕತ್ತಲಲ್ಲಿ ಪಳ ಪಳ ಹೊಳೆಯುತ್ತದೆ.

  • ಪತ್ನಿ ಮೈಬಣ್ಣ ಕಪ್ಪು ಎಂದು ತಲಾಕ್ ನೀಡಿದ ಪತಿ

    ಪತ್ನಿ ಮೈಬಣ್ಣ ಕಪ್ಪು ಎಂದು ತಲಾಕ್ ನೀಡಿದ ಪತಿ

    ಲಕ್ನೋ: ಮೈಬಣ್ಣ ಕಪ್ಪು ಎಂದು ಪತಿ ತಲಾಖ್ ನೀಡಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ದೇಶಾದ್ಯಂತ ತ್ರಿವಳಿ ತಲಾಖ್ ನಿಷೇಧ ಮಾಡಲಾಗಿದ್ದು, ಇದರ ಮಧ್ಯೆ ಕೆಲವೊಂದು ಇಂತಹ ಪ್ರಕರಣ ಕೇಳಿ ಬರುತ್ತವೆ. ಅದೇ ರೀತಿಯ ಘಟನೆವೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಇದನ್ನೂ ಓದಿ: ಕೊಹ್ಲಿ ಅಲ್ಲ ಗುಪ್ಟಿಲ್ ಈಗ ಟಿ20 ಕ್ರಿಕೆಟ್‍ನ ಕಿಂಗ್

    ಮೈಬಣ್ಣ ಕಪ್ಪು ಇದೆ ಎಂದು ಆರೋಪಿಸಿರುವ ಪತಿ ತಲಾಖ್ ನೀಡಿದ್ದಾನೆ. ಇದೇ ಕಾರಣಕ್ಕಾಗಿ ಮಹಿಳೆಯ ಗಂಡ ಸೇರಿದಂತೆ 8 ಮಂದಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಹಾಗೂ ಮುಸ್ಲಿಂ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆ ಅಡಿ ದೂರು ದಾಖಲು ಮಾಡಿದ್ದಾಳೆ. ಕಳೆದ 9 ತಿಂಗಳ ಹಿಂದೆ ಆಲಂ ಎಂಬ ವ್ಯಕ್ತಿ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದಳು ಎಂದು ವರದಿಯಾಗಿದೆ. ಇದನ್ನೂ ಓದಿ: ಕಾರವಾರ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೇಬರ ಪತ್ತೆ

    ಮಹಿಳೆಯ ಮೈಬಣ್ಣ ಹಾಗೂ ವರದಕ್ಷಿಣೆ ವಿಚಾರವಾಗಿ ಪತಿ ಮನೆಯವರು ಕೀಳು ಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇದರ ಜೊತೆಗೆ ತವರು ಮನೆಯಿಂದ ಮತ್ತಷ್ಟು ವರದಕ್ಷಿಣೆ ತೆಗೆದುಕೊಂಡು ಬರುವಂತೆ ಚಿತ್ರಹಿಂಸೆ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಮದುವೆ ಸಂದರ್ಭದಲ್ಲಿ ಯುವತಿಯ ತಂದೆ ಗಂಡನ ಮನೆಯವರಿಗೆ 10 ಗುಂಟೆ ಜಮೀನು ನೀಡಿದ್ದರು. ಇದರ ಹೊರತಾಗಿ ಕೂಡ ಕಾರು ಖರೀದಿ ಮಾಡಲು 10 ಲಕ್ಷ ರೂ. ತೆಗೆದುಕೊಂಡು ಬರುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಣೆ ಮಾಡಿದಾಗ ಮಹಿಳೆ ಮೇಲೆ ಗಂಡನ ಮನೆಯವರು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಜೊತೆಗೆ ತಲಾಖ್ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

  • ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

    ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

    ತಿರುವನಂತಪುರಂ: ಟೀ ಸ್ಟಾಲ್ ನಿಂದ ಸಂಪಾದಿಸಿದ ಹಣದಿಂದ ಪತ್ನಿಯೊಂದಿಗೆ ವಿಶ್ವ ಪರ್ಯಟನೆ ಮಾಡುತ್ತಾ ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನವಾಗಿದ್ದಾರೆ.

    ಕೊಚ್ಚಿ ಮೂಲದ ಟೀ ಸ್ಟಾಲ್ ಮಾಲೀಕ ಕೆ ಆರ್ ವಿಜಯನ್(71) ನಿನ್ನೆ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಟೀ ಸ್ಟಾಲ್ ನಡೆಸಿ ಸಂಪಾದಿಸಿದ ಹಣದಲ್ಲಿ ಅವರು ಪತ್ನಿಯೊಂದಿಗೆ ಪ್ರಪಂಚದಾದ್ಯಂತದ ಪ್ರವಾಸಗಳನ್ನು ಮಾಡಿದ್ದು ಜಾಗತಿಕ ಖ್ಯಾತಿಯನ್ನು ಗಳಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಕೋಲಾರದಲ್ಲಿ ವರುಣಾರ್ಭಟ- ದಾವಣೆಗೆರೆಯಲ್ಲಿ ದೇಗುಲ ಜಲಾವೃತ

    ವಾರಕ್ಕೆ ಎರಡು ಬಾರಿಯಾದರೂ ನನ್ನ ಪರಿಪ್ಪು ವಡಾ, ಪಳಂ ಪೊರಿ ಮತ್ತು ಚಾಯ್ ಒದಗಿಸುವವರು, ಪ್ರಯಾಣದ ಕಥೆಗಳನ್ನು ಹೇಳುವವರು, ಯುವ-ಹೃದಯದ ಗೆಳೆಯ, ಎರ್ನಾಕುಲಂನ ಜಗತ್ತು ಸುತ್ತುವ ಟೀ-ಮಾರಾಟಗಾರ, ವಿಜಯನ್ ನಿಧನರಾದರು. ಅವರು ರಷ್ಯಾದಿಂದ ಹಿಂತಿರುಗಿದ್ದರು, ಅಲ್ಲಿ ಅವರು ಪುಟಿನ್ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರು ಎಂದು ಖ್ಯಾತ ಬರಹಗಾರ ಎನ್ ಎಸ್ ಮಾಧವನ್ ಟ್ವೀಟ್ ಮಾಡಿದ್ದಾರೆ. ವಿಜಯನ್ ಅವರು ಪತ್ನಿ, ಇಬ್ಬರು ಪುತ್ರಿಯರಾದ ಶಶಿಕಲಾ, ಉಷಾ ಮತ್ತು ಮೂವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಬಿಡಿಎ ಅಧಿಕಾರಿಗಳಿಗೆ ಎಸಿಬಿ ಶಾಕ್‌- ಕಂತೆ ಕಂತೆ ನೋಟು, ಬ್ಯಾಗ್‌ಗಟ್ಟಲೆ ದಾಖಲೆಗಳು ವಶ!

    ಹಿನ್ನೆಲೆ: ವಿಜಯನ್ ಚಿಕ್ಕವರಿದ್ದಾಗಲೇ ಪ್ರವಾಸ ಮಾಡುವ ಹುಚ್ಚಿತ್ತು. ಅವರು ತನ್ನ ತಂದೆಯೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗುತ್ತಿದ್ದರು. ಆಮೇಲೆ ದೂರದ ಸ್ಥಳಗಳಿಗೆ ಪ್ರವಾಸ ಮಾಡಲು ಶುರು ಮಾಡಿದರು. ಮೊದಲು ದೇಶದೊಳಗೆ ಮತ್ತು ನಂತರ ವಿದೇಶಗಳಿಗೆ. ನಾನು ಯಾವಾಗಲೂ ಪ್ರಯಾಣಿಸಲು ಇಷ್ಟಪಡುತ್ತೇನೆ. ನಾನು ಕೇವಲ 12 ವರ್ಷದವನಿದ್ದಾಗ ನನ್ನ ತಂದೆ ನನ್ನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಮತ್ತು ನಾನು ಬೆಳೆದ ನಂತರ, ನಾನು ಮುನ್ನಾರ್, ತೇಕ್ಕಡಿ ಅಥವಾ ಕನ್ಯಾಕುಮಾರಿಯಂತ ಸುತ್ತಮುತ್ತಲಿನ ಸ್ಥಳಗಳಿಗೆ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದೆ.

    ಹೊಸದನ್ನು ಕಲಿಯಲು ಅಥವಾ ನಾನು ಏನನ್ನಾದರೂ ಅನುಭವಿಸಿದ್ದೇನೆ ಎಂದು ಹೇಳಿಕೊಳ್ಳಲು ನಾನು ಪ್ರಯಾಣಿಸುವುದಿಲ್ಲ. ನಾನು ಇದನ್ನು ಮಾಡುತ್ತೇನೆ ಏಕೆಂದರೆ ನಾನು ಇದನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಬೇಕು. ಪ್ರಪಂಚದ ಇತರ ಭಾಗಗಳು ಎಷ್ಟು ಸುಂದರವಾಗಿವೆ ಎಂಬುದರ ಕುರಿತು ಇನ್ನೊಬ್ಬ ವ್ಯಕ್ತಿಯ ಹೇಳುವುದನ್ನು ಕೇಳಿಸಿಕೊಳ್ಳಲು ನನಗೆ ಆಸಕ್ತಿಯಿಲ್ಲ. ನಾನು ಅದನ್ನು ನೋಡಿ ಮತ್ತು ನಾನೇ ನಿರ್ಧರಿಸಲು ಬಯಸುತ್ತೇನೆ. ಮತ್ತು ನಾನು ಪ್ರೀತಿಸುವ ಮಹಿಳೆಯೊಂದಿಗೆ ಜಗತ್ತನ್ನು ನೋಡಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದ್ದೇನಿದೆ ಎಂದು ವಿಜಯನ್ ಹೇಳಿದ್ದರು.

    ಇತ್ತೀಚೆಗೆ ಒರು ಚಿರಿ ಇರು ಚಿರಿ ಬಂಪರ್ ಚಿರಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಂಪತಿ ಮುಂದಿನ ಪ್ರಯಾಣ ಜಪಾನ್ ದೇಶಕ್ಕೆ ಎಂದು ಹೇಳಿದ್ದರು.ತನ್ನ 69 ವರ್ಷದ ಪತ್ನಿ ಮೋಹನ ಅವರೊಂದಿಗೆ ವಿಯೆಟ್ನಾಂ ಮತ್ತು ಕಾಂಬೋಡಿಯಾದ ನಂತರ ಜಪಾನ್ ಪ್ರವಾಸ ಮಾಡಲು ಅವರು ಬಯಸಿದ್ದರು. ದಂಪತಿ ಕಳೆದ ವರ್ಷ(ಚಾಯ ವಿಟ್ಟು ವಿಜಯನ್ಡೇಯುಂ ಮೋಹನಯುಡೆಯುಂ ಲೋಕ ಸಂಚಾರ) ಚಹಾ ಮಾರಿ ವಿಜಯನ್ ಮತ್ತು ಮೋಹನ ಅವರ ಪ್ರಪಂಚ ಸುತ್ತಾಟ ಎಂಬ ಪುಸ್ತಕವನ್ನು ಹೊರತಂದಿದ್ದರು.

  • ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

    ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಮಡದಿಗೆ ಮನೆಯಲ್ಲಿ ಪ್ರೀತಿಯಿಂದ ಹಾಡುತ್ತಿದ್ದ ಹಾಡಿನ ಕುರಿತಾಗಿ ಹೇಳಿರುವ ವೀಡಿಯೋ ಇದೀಗ ವೈರಲ್ ಆಗಿದೆ.

    PUNEET RAJKUMAR

    ಖಾಸಗಿ ವಾಹಿನಿಯ ಸಂದರ್ಶನ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಭಾಗವಹಿಸಿದ್ದರು. ಈ ವೇಳೆ ಅವರಿಗೆ ಮಡದಿ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅಪ್ಪು ಮಡದಿ ಅಶ್ವಿನಿ ಕುರಿತಾಗಿ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    ಅಪ್ಪು ಸರ್ ಸಿನಿಮಾಗಳಿಗೆ ಹಾಡಿದ್ದನ್ನು ಕೇಳಿದ್ದೇವೆ ಆದರೆ ಮನೆಯಲ್ಲಿ ನಿಮ್ಮ ಪತ್ನಿಗಾಗಿ ಯಾವತ್ತಾದರೂ ಹಾಡಿದ್ದೀರ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಅಪ್ಪು ನಗುತ್ತಾ ನಾನು ಮನೆಯಲ್ಲಿ ಪತ್ನಿಗಾಗಿ ಆಗಾಗ ತಮಾಷೆಗಾಗಿ ಹಾಡುತ್ತಿರುತ್ತೇನೆ. ಎಂಥ ಸೌಂದರ್ಯ ಕಂಡೆ.. ಓಹೋ ಎಂಥ ಸೌಂದರ್ಯ ಕಂಡೆ… ಎಂದು ಹಾಡುತ್ತೇನೆ ಈ ಹಾಡು ನನಗೆ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಭಾರೀ ಖುಷಿ ಮರ್ರೆ ನನ್ನ ಹೆಂಡ್ತಿ ಕಂಡ್ರೆ ಒಂದು ಚೂರು ಬೈಯೋದಿಲ್ಲ ರಾತ್ರಿ ಕುಡ್ಕೊಂಡು ಹೋದ್ರೆ.. ಎಂದು 2 ಸಾಲು ಹಾಡನ್ನು ಹೇಳಿದ್ದಾರೆ. ಈ ಹಾಡನ್ನು ತಮ್ಮ ಹೆಂಡತಿಯನ್ನು ಪ್ರೀತಿಸುವವರಿಗಾಗಿ ಬರೆದಿದ್ದಾಗಿದೆ. ನಿಮ್ಮ ಮಧ್ಯೆ ಚಿಕ್ಕ, ಪುಟ್ಟ ಗಲಾಟೆ ಆದರೆ ಈ ಹಾಡನ್ನು ಹೇಳಿ ಸರಿ ಹೋಗುತ್ತದೆ ಎಂದು ಅಪ್ಪು ಸಲಹೆ ಕೂಡ ನೀಡಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿ ಬಳಿಕ ಬಿಕಿನಿಯಲ್ಲಿ ಜಾನ್ವಿ, ಖುಷಿ ಕಪೂರ್ ಮೋಜು, ಮಸ್ತಿ

    ನೀವು ಯಾವತ್ತು ಆದರೂ ಕುಡ್ಕೊಂಡು ಮನೆಗೆ ಹೋಗಿದ್ರಾ? ಎಂದು ಕೇಳಿದಾಗ ಇಲ್ಲ ನಾನು ಯಾವತ್ತೂ ಹಾಗೇ ಮಾಡಿಲ್ಲ ಎಂದು ನಗುತ್ತಾ ಹೇಳಿದ್ದಾರೆ. ಅಪ್ಪು ಅವರು ನಿರ್ದೇಶನ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೇನೆ. ಮುಂದೆ ಶಿವಣ್ಣನಿಗೆ ನಿರ್ದೇಶನ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಈ ವೀಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮನೆಯಲ್ಲಿದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ ಅನ್ನೋ ಭಯವಿದೆ: ಸೈಫ್ ಆಲಿ ಖಾನ್

  • ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

    ಭೂಪಾಲ್: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪುಷ್ಪಾ ಬಾಯಿ (45) ಮೃತಳು, ಈಕೆ ಪತಿ ರಾಜಕುಮಾರ್ ಬಹೆ (50) ಕೊಲೆ ಮಾಡಿದ್ದಾನೆ. ಈತ ಅರಣ್ಯ ಇಲಾಖೆಯ ದಿನಗೂಲಿ ನೌಕರನಾಗಿದ್ದನು. ಸ್ನಾನಕ್ಕೆ ಹೋದಾಗ ತನ್ನ ಹೆಂಡತಿಯನ್ನು ಕರೆದು ಟವೆಲ್ ಕೊಡಲು ಹೇಳಿದ್ದ. ಆದರೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಳು. ಆತನ ಸ್ನಾನ ಮುಗಿದರೂ ಆಕೆ ಟವೆಲ್ ಕೊಡದಿದ್ದರಿಂದ ಕೋಪಗೊಂಡ ಗಂಡ ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು?: ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯ ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೀರಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ಆರೋಗ್ಯಕರವಾದ ಸೌತೆಕಾಯಿ ತಂಬುಳಿ ಮಾಡುವ ವಿಧಾನ

    ರಾಜಕುಮಾರ್ ಬಹೆ ಸ್ನಾನದ ನಂತರ ಟವೆಲ್ ನೀಡುವಂತೆ ಕೇಳಿದ್ದ. ಪುಷ್ಪ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದುದರಿಂದ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಳು. ಇದರಿಂದ ಕೋಪಗೊಂಡ ವ್ಯಕ್ತಿ ಸ್ನಾನ ಮುಗಿಸಿ ಹೊರಗೆ ಬಂದ ನಂತರ ಕಬ್ಬಿಣದ ರಾಡಿನಿಂದ ಪತ್ನಿಯ ತಲೆಗೆ ಪದೇ ಪದೇ ಹೊಡೆದಿದ್ದಾನೆ. ಇದರಿಂದ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತನ್ನ ಅಪ್ಪನನ್ನು 23 ವರ್ಷದ ಮಗಳನ್ನು ತಡೆಯಲು ಪ್ರಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಭಾನುವಾರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

  • ಪತ್ನಿ ಇರುವಾಗ್ಲೇ ಮತ್ತೊಬ್ಬಳಿಗೆ ಕೋಟಿ ಮೌಲ್ಯದ ಮನೆ, ಕಾರು- ಕೊನೆಗೆ ಆಕೆಯಿಂದ್ಲೇ ಕೊಲೆಯಾದ!

    ಪತ್ನಿ ಇರುವಾಗ್ಲೇ ಮತ್ತೊಬ್ಬಳಿಗೆ ಕೋಟಿ ಮೌಲ್ಯದ ಮನೆ, ಕಾರು- ಕೊನೆಗೆ ಆಕೆಯಿಂದ್ಲೇ ಕೊಲೆಯಾದ!

    – ಪ್ರಿಯತಮೆಗಾಗಿ ಪತ್ನಿ, ಮನೆಯವ್ರಿಂದ್ಲೇ ದೂರವಾದ

    ನೆಲಮಂಗಲ: ಆತ ಕೋಟಿ ಕೋಟಿ ಹಣದ ಒಡೆಯ. ಆತನಿಗೆ ಮದುವೆ ಕೂಡ ಆಗಿತ್ತು. ನಂತರ ಮೊದಲನೇ ಹೆಂಡತಿಯನ್ನು ಹಾಗೂ ತನ್ನ ಮನೆಯವರನ್ನು ದೂರ ಮಾಡಿಕೊಂಡು ಮತ್ತೊಬ್ಬಳಿಗೆ ಫಿದಾ ಆಗಿದ್ದ. ಆದರೆ ಆಕೆಯೇ ಇಂದು ಆತನಿಗೆ ಪರಲೋಕದ ದಾರಿ ತೋರಿಸಿದ್ದಾಳೆ.

    ಹೌದು. ಬೆಂಗಳೂರು ಹೊರವಲಯ ಮಾದನಾಯಕನಹಳ್ಳಿ ಬಳಿಯ ಗೌಡಹಳ್ಳಿಯಲ್ಲಿ ಘಟನೆ ನಡೆದಿದೆ. ಕೊಲೆಯಾದವನನ್ನು ಸ್ವಾಮಿರಾಜ್ ಎಂದು ಗುರುತಿಸಲಾಗಿದ್ದು, ಈತನನ್ನು ಪತ್ನಿ ನೇತ್ರಾವತಿ ಹತ್ಯೆ ಮಾಡಿದ್ದಾಳೆ. ಇದನ್ನೂ ಓದಿ: ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್

    ಕೊಲೆಯಾಗಿರೋ ಸ್ವಾಮಿರಾಜ್‍ಗೆ ಈಗಾಗಲೇ ಒಂದು ಮದುವೆಯಾಗಿತ್ತು. ನಂತರ ಈತ ನೇತ್ರಾವತಿಯನ್ನ ಮದುವೆ ಆಗಿದ್ದ. ಕೋಟಿ ಕೋಟಿ ಒಡಯನಾಗಿದ್ದ ಸ್ವಾಮಿರಾಜ್, ಎರಡನೇ ಪತ್ನಿಗಾಗಿ ನಾಲ್ಕು ಕೋಟಿ ಮನೆ, ಓಡಾಡೋಕೆ ಕಾರು ಕೊಡಿಸಿದ್ದ ಎನ್ನಲಾಗಿದೆ. ಆದರೆ ಆಕೆ ಹೇಳುವಂತೆ ತನ್ನನ್ನು ಅಕ್ರಮ ಸಂಬಂಧಕ್ಕೆ ಒತ್ತಾಯಿಸಿದ್ದ. ಬೇರೆಯವರ ಜೊತೆಗೆ ಮಲಗಲು ಹೇಳುತ್ತಿದ್ದ. ಅದಕ್ಕೆ ಕೊಲೆ ಮಾಡಿದ್ದೇನೆ ಅಂತಿದ್ದಾಳೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಇತ್ತ ಪತಿಯನ್ನ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಈ ನೇತ್ರಾವತಿ ನಾಟಕ ಆಡಿದ್ಳಾ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಕೊಲೆಯಾದ ಸ್ವಾಮಿರಾಜ್, ನೇತ್ರಾವತಿಗಾಗಿ ತನ್ನ ಫ್ಯಾಮಿಲಿಯನ್ನೇ ದೂರ ಮಾಡಿಕೊಂಡಿದ್ದ. ಹಾಗಾಗಿ ಪ್ರೀತಿಸಿದ್ದ ಪತ್ನಿಯನ್ನು ಬೇರಯವರ ಜೊತೆ ಮಲಗು ಎಂದು ಹೇಳಿದ್ನಾ ಅನ್ನೋ ಅನುಮಾನ ವ್ಯಕ್ತಪಡಿಸಿರೋ ಪೊಲೀಸ್ರು ಆಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಒಟ್ಟಿನಲ್ಲಿ ಸಪ್ತಪದಿ ತುಳಿದು ಹೆಂಡತಿ ಹಾಗೂ ಮನೆಯವರಿಗೆ ಮೋಸ ಮಾಡಿ, ಮನೆಯವರ ವಿರೋಧದ ನಡುವೆಯೂ ಮತ್ತೊಬ್ಬಳ ಮೋಹಕ್ಕೆ ಒಳಗಾದವ ಈಗ ಆಕೆಯಿಂದಲೇ ಕೊಲೆಯಾಗಿದ್ದಾನೆ. ಇತ್ತ ಸ್ವಾಮಿ ರಾಜ್ ಮನೆಯವರು ಆಕೆಗೆ ಸೂಕ್ತ ಶಿಕ್ಷೆಗಾಗಿ ಆಗ್ರಹಿಸಿದ್ದಾರೆ.

  • ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಬಾಡಿಗೆ ಕಟ್ಟಲು ಎತ್ತಿಟ್ಟ ಹಣವನ್ನು ಒಡವೆ ಖರೀದಿಗೆ ಖರ್ಚು ಮಾಡಿದಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿ ಪತಿಯೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಈ ಘಟನೆ ನವೆಂಬರ್ 2ರಂದು ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಮನೆ ಬಾಡಿಗೆಗೆಂದು ಹಣ ಕೂಡಿಟ್ಟಿದ್ದರು. ಆದರೆ ಒಡವೆ ಮೇಲೆ ಆಸೆ ಹೊಂದಿದ್ದ ಪತ್ನಿ ಬಾಡಿಗೆಗೆಂದು ಕೂಡಿಟ್ಟ 6,500 ರೂ. ಹಣ ಖರ್ಚು ಮಾಡಿ ಡ್ಯೂಪ್ಲಿಕೇಟ್ ಜ್ಯುವೆಲ್ಲರಿಯನ್ನು ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

    BRIBE

    ಬಾಡಿಗೆ ಹಣ ನೀಡುವಂತೆ ಪತಿ ಕೇಳಿದಾಗ ಪತ್ನಿ ಹಣ ಖರ್ಚು ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಜಿಯಾ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಪತ್ನಿಯನ್ನು ಕೂಡಲೇ ಫಾರೂಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಜಿಯಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ವಸೂಲಿ ಮಾಡ್ತೀವಿ: ಈಶ್ವರಪ್ಪ

    ಈ ಸಂಬಂಧ ಮೃತಳ ಪೋಷಕರು ಫಾರೂಕ್ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಫಾರೂಕನ್ನು ಬಂಧಿಸಿದ್ದಾರೆ.

  • ಪತ್ನಿಗೆ ವೀಡಿಯೋ ಕರೆ ಮಾಡಿ ಮಾತಾಡುತ್ತಲೇ ನೇಣಿಗೆ ಶರಣಾದ!

    ಪತ್ನಿಗೆ ವೀಡಿಯೋ ಕರೆ ಮಾಡಿ ಮಾತಾಡುತ್ತಲೇ ನೇಣಿಗೆ ಶರಣಾದ!

    ಶಿವಮೊಗ್ಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ವೀಡಿಯೋ ಕರೆ ಮಾಡಿ, ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದ ವಸತಿ ಗೃಹದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕೇಂದ್ರ ಕಾರಾಗೃಹದ ವಾರ್ಡನ್ ಅಸ್ಪಾಕ್ ತಗಡಿ (24) ಎಂದು ಗುರುತಿಸಲಾಗಿದೆ. ಅಸ್ಪಾಕ್ ತಗಡಿ ಮೂಲತಃ ಬೆಳಗಾವಿ ಜಿಲ್ಲೆ ಹುಕ್ಕೇರಿ ಮೂಲದ ನಿವಾಸಿ. ಇವರು ಕಳೆದ ಎರಡೂವರೆ ವರ್ಷದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಸ್ಪಾಕ್ ತಗಡಿಗೆ ಒಂದೂವರೆ ತಿಂಗಳ ಮಗುವಿದ್ದು, ಪತ್ನಿ ಬಾಣಂತನಕ್ಕೆ ತವರು ಮನೆಗೆ ತೆರಳಿದ್ದರು. ಇದನ್ನೂ ಓದಿ: ಪೆಟ್ರೋಲ್,ಡೀಸೆಲ್ ದರ ಇಳಿಕೆ ದೀಪಾವಳಿ ಕೊಡುಗೆ ಅಲ್ಲ, ಉಪಚುನಾವಣೆಗಳ ಕೊಡುಗೆ: ಸಿದ್ದರಾಮಯ್ಯ

    ವಿವಾಹವಾದ ಎರಡು ಮೂರು ತಿಂಗಳ ನಂತರದಿಂದಲೇ ಸಣ್ಣ ಪುಟ್ಟ ವಿಷಯಕ್ಕೆ ಪತಿ ಪತ್ನಿ ಇಬ್ಬರು ಜಗಳ ಆಡುತ್ತಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಸಹ ಪತ್ನಿಗೆ ವೀಡಿಯೋ ಕರೆ ಮಾಡಿದ್ದ ಅಸ್ಪಾಕ್ ತಗಡಿ ಈ ವೇಳೆಯೂ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಅಲ್ಲದೇ ಅತ್ತೆ ಮಾವನೊಂದಿಗೂ ಸಹ ಜಗಳವಾಡಿದ್ದಾನೆ ಎನ್ನಲಾಗಿದೆ. ಜಗಳ ಆಡುತ್ತಿರುವಾಗಲೇ ನೇಣು ಹಾಕಿಕೊಳ್ಳುವ ದೃಶ್ಯವನ್ನು ಪತ್ನಿಗೆ ತೋರಿಸಿದ್ದಾನೆ. ಪತಿಯ ಆತ್ಮಹತ್ಯೆ ನಿರ್ಧಾರಕ್ಕೆ ಕಂಗಾಲಾದ ಪತ್ನಿ ನಂತರ ಕಾರಾಗೃಹದ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಇತರೆ ಸಿಬ್ಬಂದಿ ವಸತಿಗೃಹಕ್ಕೆ ತೆರಳಿ ನೋಡುವಷ್ಟರಲ್ಲಿ ಅಸ್ಪಾಕ್ ತಗಡಿ ಕೊನೆಯುಸಿರು ಎಳೆದಿದ್ದಾನೆ.

    ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತ ವ್ಯಕ್ತಿಯ ಮರಣೋತ್ತರ ಶವ ಪರೀಕ್ಷೆ ನಡೆಸಿದ ವೈದ್ಯರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

  • ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿ

    ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿ

     ಲಕ್ನೋ: ಐದು ತಿಂಗಳ ಹಿಂದೆ ಮದುವೆಯಾದ ವ್ಯಕ್ತಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಗುರುಗ್ರಾಮನಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಪಂಕಜ್ ಶರ್ಮಾ ಮೇ ತಿಂಗಳಲ್ಲಿ ಕೋಮಲ್‍ಳನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ನಂತರ ಆಕೆ ಬೇರೆಯವನನ್ನು ಪ್ರೀತಿಸುತ್ತಿದ್ದಳು ಎನ್ನುವ ವಿಚಾರ ಶರ್ಮಾನಿಗೆ ತಿಳಿದಿದೆ. ನಂತರ ಮದುವೆಯಾದ ದಿನದಿಂದಲೂ ಆಕೆ ಗಂಡ ಜೊತೆಗಾಗಲಿ, ಗಂಡನ ಮನೆಯವರೊಂದಿಗಾಗಲಿ ಮಾತನಾಡಿರಲಿಲ್ಲ. ಇದರಿಂದ ಆತನಿಗೆ ಬಹಳ ಗೊಂದಲವಾಗಿತ್ತು. ಇದನ್ನೂ ಓದಿ: ನೀಟ್ ಫಲಿತಾಂಶ ಪ್ರಕಟ- ಇ-ಮೇಲ್‍ಗೇ ರಿಸಲ್ಟ್

    ಮದುವೆಯಾದ ಮೇಲೂ ತನ್ನ ಪ್ರೇಮಿ ಪಿಂಟು ಜೊತೆ ಜೀವನ ನಡೆಸಬೇಕು ಅಂದುಕೊಂಡಿದ್ದಳು. ಇದನ್ನು ತಿಳಿದ ಆಕೆಯ ಗಂಡ ಪಂಕಜ್ ಶರ್ಮ ಈ ವಿಷಯವನ್ನು ಕೋಮಲ್‍ಳ ತಂದೆ, ತಾಯಿಗೆ ಹೇಳಿದರು. ಅವರು ತಮ್ಮ ಮಗಳಿಗೆ ಬುದ್ಧಿ ಹೇಳಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಆಕೆ ತನ್ನ ಪ್ರೇಮಿಯನ್ನು ಮರೆಯಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ. ಇದನ್ನೂ ಓದಿ:  ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ

    ಪಂಕಜ್, ಕೋಮಲ್ ಹಾಗೂ ಪಿಂಟುವನ್ನು ಕರೆಸಿ ಮಾತನಾಡಿದ್ದಾನೆ. ಆಗ ಕೋಮಲ್ ತಾನು ಪಂಕಜ್ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಕೋಮಲ್ ಸ್ಪಷ್ಟವಾಗಿ ಹೇಳಿದ್ದರಿಂದ ಪಂಕಜ್ ತಾನೇ ಮುಂದೆ ನಿಂತು ಕೋಮಲ್ ಹಾಗೂ ಪಿಂಟುವಿನ ಮದುವೆ ಮಾಡಿಸುವುದಾಗಿ ಹೇಳಿದರು. ಮರುದಿನವೇ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿದ್ದಾನೆ.

  • ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿ ಪತ್ನಿ ಎಸ್ಕೇಪ್

    ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಕೋಟ್ಯಧಿಪತಿ ಪತ್ನಿ ಎಸ್ಕೇಪ್

    ಭೋಪಾಲ್: ಕೋಟ್ಯಧಿಪತಿ ಉದ್ಯಮಿಯ ಪತ್ನಿ ಮನೆಯಲ್ಲಿದ್ದ ಹಣ ದೋಚಿ ಆಟೋ ಚಾಲಕನೊಂದಿಗೆ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

    ಇಂದೋರ್‍ನ ಖಜ್ರಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಕೋಬರ್ 13ರಂದು ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ತನಗಿಂತ 13 ವರ್ಷ ಚಿಕ್ಕ ವಯಸ್ಸಿನ ಆಟೋ ಚಾಲಕನೊಂದಿಗೆ ಮನೆಯಲ್ಲಿದ್ದ 47 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ತನ್ನ ಪತ್ನಿಗೆ ಆಟೋ ಚಾಲಕ ಆಗಾಗ ಮನೆಗೆ ಡ್ರಾಪ್ ಮಾಡುತ್ತಿದ್ದ ಎಂದು ಪತಿ ಆರೋಪಿಸಿದ್ದು, ಅಕ್ಟೋಬರ್ 13ರಂದು ರಾತ್ರಿಯಾದರೂ ಮನೆಗೆ ಪತ್ನಿ ಬಾರದೇ ಇದ್ದಾಗ, ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಯಿಂದ ಸಾಕಿದ್ದ ಜಾನುವಾರುಗಳು ಸಾವು – ಕಣ್ಣೀರಿಟ್ಟ ಮಾಲೀಕ

    ಆಟೋಚಾಲಕ 32 ವರ್ಷದ ಇಮ್ರಾನ್ ಎಂದು ಗುರುತಿಸಲಾಗಿದ್ದು, ಮಹಿಳೆಗೆ 45 ವರ್ಷವಾಗಿದೆ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೇ ಚಾಲಕ ಇಮ್ರಾನ್ ಸ್ನೇಹಿತರೊಬ್ಬರ ಮನೆಯಲ್ಲಿದ್ದ 33 ಲಕ್ಷ ರೂಪಾಯಿಯನ್ನು ಹಣವನ್ನು ವಶಪಡಿಸಿಕೊಂಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮಹಿಳೆ ಹಾಗೂ ಚಾಲಕ ಖಾಂಡ್ವಾ, ಜವ್ರಾ, ಉಜ್ಜಯಿನಿ ಮತ್ತು ರತ್ಲಂ ಎಂಬ ನಾಲ್ಕು ನಗರಗಳಿಗೆ ತೆರಳಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.