ಕಲಬುರಗಿ: ಹೆಂಡತಿಯನ್ನು (Wife) ಮನೆಗೆ ಬಾ ಎಂದು ಕರೆದಿದ್ದಕ್ಕೆ ಬಾಮೈದನಿಂದ ಚಾಕು ಇರಿತಕ್ಕೊಳಗಾಗಿದ್ದ ಪತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಆನಂದ್ ಎಂದು ಗುರುತಿಸಲಾಗಿದೆ. ಆತ ಕಳೆದ ಎರಡು ವರ್ಷದ ಹಿಂದೆ ಗಾಜಿಪುರದ ಸ್ನೇಹಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಡ ಹೆಂಡತಿಯ ಮಧ್ಯೆ ಜಗಳವಾಗಿ ಪತ್ನಿ ತವರು ಮನೆ ಸೇರಿದ್ದಳು. ಆನಂದ್ ತನ್ನ ಅಣ್ಣನ ಮದುವೆ ಹಿನ್ನಲೆಯಲ್ಲಿ ಮನೆಗೆ ಬರುವಂತೆ ಸ್ನೇಹಾಳನ್ನು ಕರೆದಿದ್ದ. ಇದನ್ನೂ ಓದಿ: ಸೀಜ್ ಆಗಿದ್ದ ಹಣಕ್ಕೆ ಕನ್ನ ಹಾಕಿದ ಸೈಬರ್ ವಂಚಕರು – ನಕಲಿ ಕೋರ್ಟ್ ಆರ್ಡರ್ ತಯಾರಿಸಿ 1.32 ಕೋಟಿ ಲೂಟಿ
ಇದೇ ವಿಚಾರಕ್ಕೆ ಸ್ನೇಹಾಳ ಸಹೋದರ ಟೋನಿ ಮತ್ತು ಆತನ ಸ್ನೇಹಿತರು ಸೇರಿ ಆನಂದ್‍ಗೆ ಚಾಕುವಿನಿಂದ ಇರಿದಿದ್ದರು. ಬಳಿಕ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಟ್ರಾಮ್ ಕೇರ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಸಾವಿಗೀಡಾಗಿದ್ದಾನೆ.
ಕಲಬುರಗಿ: ಹೆಂಡತಿಯನ್ನು (Wife) ಮನೆಗೆ ಬಾ ಎಂದು ಕರೆದ ವ್ಯಕ್ತಿಗೆ ಆಕೆಯ ಸಹೋದರ ಚಾಕು ಇರಿದ ಘಟನೆ ನಗರದ (Kalaburagi) ಗಾಜಿಪುರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಆನಂದ್ ಎಂದು ಗುರುತಿಸಲಾಗಿದೆ. ಆತ ಕಳೆದ ಎರಡು ವರ್ಷದ ಹಿಂದೆ ಸ್ನೇಹಾಳನ್ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಡ ಹೆಂಡತಿಯ ಮಧ್ಯೆ ಜಗಳವಾಗಿ ಪತ್ನಿ ತವರು ಮನೆ ಸೇರಿದ್ದಳು. ಆನಂದ್ ತನ್ನ ಅಣ್ಣನ ಮದುವೆ ಹಿನ್ನಲೆಯಲ್ಲಿ ಮನೆಗೆ ಬರುವಂತೆ ಸ್ನೇಹಾಳನ್ನು ಕರೆದಿದ್ದ. ಇದನ್ನೂ ಓದಿ: ಕುಡಿಯಲು ಹಣ ಕೊಡದ ತಾಯಿಯನ್ನು ರಾಡ್‍ನಲ್ಲಿ ಹೊಡೆದು ಕೊಂದ ಮಗ
ಇದೇ ವಿಚಾರಕ್ಕೆ ಸ್ನೇಹಾಳ ಸಹೋದರ ಟೋನಿ ಮತ್ತು ಆತನ ಸ್ನೇಹಿತರು ಸೇರಿ ಆನಂದ್‍ಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ನೆಲಮಂಗಲ: ಮದುವೆಯಾಗಿ 13 ವರ್ಷದ ನಂತರ ಇನ್‌ಸ್ಟಾದಲ್ಲಿ ಪರಿಚಯವಾದವನೊಂದಿಗೆ ಪತ್ನಿ ಎಸ್ಕೇಪ್ ಆಗಿ, ಎರಡನೇ ಮದುವೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ (Nelamangala) ನಡೆದಿದೆ.
ಕಳೆದ 1 ವಾರದ ಹಿಂದೆ ಇನ್‌ಸ್ಟಾದಲ್ಲಿ ನೇತ್ರಾವತಿಗೆ ಸಂತೋಷ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯವು ಪ್ರೀತಿಗೆ ತಿರುಗಿತ್ತು. ನೇತ್ರಾವತಿಯು ಕೆಲವೇ ದಿನಗಳ ಪ್ರೀತಿಗಾಗಿ ಮೊದಲ ಪತಿಗೆ ಕೈಕೊಟ್ಟು, ಸಂತೋಷ್ ಜೊತೆ ದೇವಾಲಯಲ್ಲಿ ಎರಡನೇ ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ವೀಡಿಯೋವನ್ನು ನೋಡಿ ಮೊದಲ ಪತಿ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಸೌದೆ ತಗೊಂಡ್ರೇ ಮಾತ್ರ ಹೆಣ ಸುಡಲು ಸ್ಲಾಟ್ – ಬೆಂಗಳೂರಿನ ಸ್ಮಶಾನದಲ್ಲೂ ಬ್ರೋಕರ್‌ಗಳ ಹಾವಳಿ!
ನೇತ್ರಾವತಿ ವಿರುದ್ಧ ನೆಲಮಂಗಲ ಟೌನ್ ಪೋಲೀಸ್ ಠಾಣೆಯಲ್ಲಿ (Nelamangala Town Police Station) ಪ್ರಕರಣ ದಾಖಲಾಗಿದ್ದು, ಪತಿ ಹಾಗೂ ಆತನ ಕುಟುಂಬ ದೂರು ನೀಡಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!
ಈ ಹಿಂದೆ ನೇತ್ರಾವತಿಯು ಪತಿ ಕುಡಿದು ಹೊಡೆಯುತ್ತಾನೆ ಎಂದು ದೂರು ನೀಡಿ, ಪತಿಯನ್ನು ಮನೆಯಿಂದ ಹೊರಗೆ ಹಾಕಿರುವ ವಿಷಯವೂ ಬೆಳಕಿಗೆ ಬಂದಿದೆ.
ಬೆಂಗಳೂರು: ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ಮೃತ ಮಹಿಳೆ ಬಾಹರ್ ಅಸ್ಮಾ ಪತಿ ಬಶೀರ್ ಉಲ್ಲಾನನ್ನ ಹೆಬ್ಬಾಳ ನಗರ ಪೊಲೀಸರು (Hebbal City Police) ಬಂಧಿಸಿದ್ದಾರೆ.
ಬಾಹರ್ ಅಸ್ಮಾ ಎಂಬ 29 ವರ್ಷದ ಮಹಿಳೆ, ಕಳೆದ 2 ವರ್ಷಗಳ ಹಿಂದೆ ಬಶೀರ್‌ನನ್ನ ಮದುವೆಯಾಗಿದ್ದರು (Marriage). ಆದ್ರೆ ಬಶೀರ್ ಇಲ್ಲಾಗೆ ಬೇರೆ ಯುವತಿ ಜೊತೆಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಮನೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಸ್ಮಾಳ ಶವ ಪತ್ತೆಯಾಗಿತ್ತು. ಇದನ್ನೂ ಓದಿ: 19ರ ಯುವತಿಯ ಕಿಡ್ನ್ಯಾಪ್ – 22 ಮಂದಿ ಕಾಮುಕರಿಂದ ದಿನವಿಡೀ ಗ್ಯಾಂಗ್ ರೇಪ್
ಈ ಸಂಬಂಧ ಅಸ್ಮಾ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಪತಿ ಬಶೀರ್‌ನನ್ನ ಬಂಧಿಸಿದ್ದಾರೆ. ಬಳಿಕ ಬಶೀರ್ ವಿಚಾರಣೆ ನಡೆಸಿದಾಗ ಈತನ ಕಿರುಕುಳಕ್ಕೆ ಅಸ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಿಚಾರಣೆ ಬಳಿಕ ಬಶೀರ್ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ದಾಳಿ – ಕಾವೇರಿ ನಿಗಮದ ಇಂಜಿನಿಯರ್ ಲಾಕ್
ಬೆಂಗಳೂರು: ಪತಿಯ ವಿರುದ್ಧ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ (Wife) ಆತ್ಮಹತ್ಯೆ ಶರಣಾದ ಘಟನೆ ಹೆಬ್ಬಾಳದ (Hebbal) ಕನಕನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಬಾಹರ್ ಅಸ್ಮಾ (29) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಬಶೀರ್ ವುಲ್ಲಾ ಎಂಬಾತನನ್ನು ಮದುವೆ ಆಗಿದ್ದರು. ಆತನಿಗೆ ಬೇರೆ ಯುವತಿ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿದೆ.
ಮಹಿಳೆ ಕುಟುಂಬಸ್ಥರು ಅಸ್ಮಾಳನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೋಪಿಸಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ರುದ್ರಪ್ಪ ಮತ್ತು ಶೈಲಾ ನಡುವಿನ ಈ ಸಂಬಂಧದ ಬಗ್ಗೆ ಪತಿ ಶಿವನಗೌಡನಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಆತನ ಸಹವಾಸ ಬಿಡು ಎಂದು ಶಿವನಗೌಡ ತನ್ನ ಪತ್ನಿಗೆ ಬುದ್ಧಿ ಹೇಳಿದ್ದರು.
ಶಿವನಗೌಡ ಅವರು ಪತ್ನಿಯನ್ನು ತವರು ಮನೆಗೆ ಬಿಟ್ಟು ವಾಪಾಸ್ ಆಗುತ್ತಿದ್ದಾಗ, ರುದ್ರಪ್ಪ ಎಣ್ಣೆ ಪಾರ್ಟಿ ಮಾಡಿಸಿ ಶಿವನಗೌಡರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದನ್ನು ಪತ್ನಿ ಶೈಲಾ ವಿಡಿಯೋ ಕಾಲ್ ಮೂಲಕ ವೀಕ್ಷಣೆ ಮಾಡಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್ ತಲೆ ಒಡೆದು ಹತ್ಯೆಗೈದ ಪತಿ
ಗಂಡ ತೀರಿ ಹೋದಾಗ ಆತನ ಪಾರ್ಥಿವ ಶರೀರದ ಮುಂದೆ ಕುಳಿತು ಹಾಡಾಡಿ ಅತ್ತ ಪತ್ನಿಯ ಕಾಲ್ ಹಿಸ್ಟರಿಯಲ್ಲಿ ಆಕೆಯ ಕರಾಳ ಸಂಬಂಧದ ಕುರುಹುಗಳು ಪತ್ತೆಯಾಗಿವೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಯ ಆರೋಪಿಗಳಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಲಕ್ನೋ: ಪತ್ನಿಗೆ (Wife) ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ಆಸ್ಮಾ ಖಾನ್ (42) ಎಂದು ಗುರುತಿಸಲಾಗಿದೆ, ಹತ್ಯೆಗೈದ ಆರೋಪಿಯನ್ನು ನೂರುಲ್ಲಾ ಹೈದರ್ ಎಂದು ಗುರುತಿಸಲಾಗಿದೆ. ಹತ್ಯೆಯಾದ ಮಹಿಳೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ನೋಯ್ಡಾದ ಸೆಕ್ಟರ್ 62ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಬಿಹಾರ ಮೂಲದವನಾಗಿದ್ದು, ಎಂಜಿನಿಯರಿಂಗ್ ಪದವೀಧರನಾಗಿದ್ದೂ ಸಹ ನಿರುದ್ಯೋಗಿಯಾಗಿದ್ದ ಎಂದು ತಿಳಿದುಬಂದಿದೆ. ಇಬ್ಬರು 2005 ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ
ಘಟನೆಯ ಬಳಿಕ ದಂಪತಿಯ ಮಗ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಹೈದರ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿ ಪದೇ ಪದೇ ಗಲಾಟೆ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಹಿಳೆಯ ಸೋದರ ಮಾವ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಮಗ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಮಗಳು 8 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವರು ಹಲವಾರು ದಿನಗಳಿಂದ ಜಗಳವಾಡುತ್ತಿದ್ದರು. ಆದರೆ ಅವನು ಕೊಲೆ ಮಾಡುವ ನಿರ್ಧಾರ ಮಾಡುತ್ತಾನೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸನ | ಜಗಳ ಬಿಡಿಸಲು ಹೋದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ
ಬೆಂಗಳೂರು: ನಡುರಸ್ತೆಯಲ್ಲೇ ಪತ್ನಿಯನ್ನು ಬರ್ಬರ ಹತ್ಯೆಗೈದು ಪತಿ ಪರಾರಿಯಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ (Electronic City) ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ ನಡೆದಿದೆ.
ಬಾಗೇಪಲ್ಲಿ (Bagepalli) ಮೂಲದ ಶಾರದ (35) ಮೃತ ಪತ್ನಿ. ಕೃಷ್ಣ ಪತ್ನಿಯನ್ನು ಕೊಂದ ಪಾಪಿ ಪತಿ. ಅಕ್ರಮ ಸಂಬಂಧ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ನಡು ರಸ್ತೆಯಲ್ಲಿ ಪತ್ನಿಗೆ ಚಾಕುವಿನಿಂದ ಕುತ್ತಿಗೆ ಕುಯ್ದು ಪತಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗ್ನೇಯ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಸೋಕೋ ಟೀಂ ಆಗಮಿಸಿದೆ. ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಯಾವುದೇ ಮಸೀದಿ, ಕಬ್ರಸ್ತಾನ್ ಮುಟ್ಟಲ್ಲ: ವಕ್ಫ್ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ
ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪತ್ನಿ ಕೆಲಸ ಮುಗಿಸಿ ನಿರ್ಜನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪತಿ ದಾಳಿ ನಡೆಸಿದ್ದಾನೆ. ಆರೋಪಿ ಪತ್ನಿಯನ್ನು ಕೊಲ್ಲಲು ಎರಡು ಚಾಕು ತಂದಿದ್ದ. ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಪತಿಯನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಕೇಸ್ – ಶಾಸಕ ಪೊನ್ನಣ್ಣ & ವಿನಯ್ ಸೋಮಯ್ಯ ವಾಟ್ಸಪ್ ಚಾಟ್‌ನಲ್ಲೇನಿದೆ?
ಘಟನೆ ಸಂಬಂಧ ಆಗ್ನೇಯ ವಿಭಾಗದ ಡಿಸಿಪಿ ಸಾರ ಫಾತಿಮಾ ಮಾಧ್ಯಮದವರೊಂದಿಗೆ ಮಾತನಾಡಿ, ಸುಮಾರು 8 ಗಂಟೆಯ ಸಮಯದಲ್ಲಿ ನಮ್ಮ ಕಂಟ್ರೋಲ್ ರೂಮಿಗೆ ಮಾಹಿತಿ ಬಂತು. ನಮ್ಮ ಎಲೆಕ್ಟ್ರಾನಿಕ್ ಸಿಟಿ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಶಾರದಾ ಎಂಬ ಮಹಿಳೆಯ ಕೊಲೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ನಮ್ಮ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂದು ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಸಂಪೂರ್ಣ ವಿಚಾರ ಗೊತ್ತಾಗಬೇಕಾಗಿದೆ. ಇದನ್ನೂ ಓದಿ: Bengaluru | ಅನಾರೋಗ್ಯಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ಮಡಿಕೇರಿ: ಪತ್ನಿ (Wife) ನಾಪತ್ತೆಯಾಗಿದ್ದಾಳೆ ಪತಿಯಿಂದ ದೂರು. ಮೃತ ಪತ್ನಿಯ ಶವಕ್ಕೆ ಪತಿಯಿಂದ ಅಂತ್ಯಸಂಸ್ಕಾರ. ಪತ್ನಿಯನ್ನು ಕೊಲೆಗೈದ ಆರೋಪದ ಅಡಿ ಪತಿ (Husband) ಜೈಲುಪಾಲು. ಜೈಲು ಶಿಕ್ಷೆಯಿಂದ ಹೇಗೋ ಪಾರಾಗಿ ಬಂದಿದ್ದ ಪತಿಗೆ 4 ವರ್ಷದ ನಂತರ ʼಮೃತ ಪತ್ನಿʼಯನ್ನು ನೋಡಿ ಶಾಕ್!
ಇದು ಯಾವುದೋ ಸಿನಿಮಾ ಕಥೆಯಲ್ಲ. ಕೊಡಗಿನ ಕುಶಾಲನಗರ (Kushalnagar) ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದ ನೈಜ ಘಟನೆ. ಪತಿಯಿಂದ ʼಕೊಲೆʼಯಾಗಿದ್ದ ಪತ್ನಿ 4 ವರ್ಷದ ಬಳಿಕ ದಿಢೀರ್ ಪ್ರತ್ಯಕ್ಷವಾಗುವ ಮೂಲಕ ನಾಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
ಪತಿಯಿಂದ ದೂರು:
ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಸುರೇಶ್ ಮತ್ತು ಮಲ್ಲಿಗೆಯ ಸಂಸಾರ ಚೆನ್ನಾಗಿ ಸಾಗುತ್ತಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಈ ಮಧ್ಯೆ ಒಂದು ದಿನ ಮಲ್ಲಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸುರೇಶ್ ಅವರು ಕುಟುಂಬದ ಸಂಬಂಧಿಕರಲ್ಲಿ ವಿಚಾರಿಸಿದಾಗ ಆಕೆಗೆ ಅಕ್ರಮ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ದೂರವಾಣಿ ಮೂಲಕ ಸುರೇಶ್ ಕರೆ ಮಾಡಿ ತನ್ನೊಂದಿಗೆ ಜೀವನ ಮಾಡದೇ ಇದ್ದರೂ ಪರವಾಗಿಲ್ಲ ತನ್ನ ಮಕ್ಕಳಿಗೆ ತಾಯಿಯಾಗಿ ಇರು ಎಂದು ಪರಿ ಪರಿಯಾಗಿ ಮನವಿ ಮಾಡಿದ್ದರೂ ಆಕೆ ಮಾತ್ರ ಬರಲೇ ಇಲ್ಲ.
ಮುಂದೆ ನನ್ನ ಮೇಲೆ ಯಾವುದೇ ಆರೋಪ ಬರಬಾರದು ಎಂದು ಸುರೇಶ್ ಅವರು 2021 ರಲ್ಲಿ ಕುಶಾಲನಗರ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿ ಪೊಲೀಸರ ಬಳಿ ನಡೆದ ಎಲ್ಲಾ ವಿಚಾರವನ್ನು ತಿಳಿಸುತ್ತಾರೆ. ಹೀಗಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಕಾಣೆಯಾಗಿದ್ದ ಸುರೇಶ್ ಪತ್ನಿ ಮಲ್ಲಿಗೆಯನ್ನು ಪತ್ತೆ ಮಾಡಲು ಹೋಗಲಿಲ್ಲ.
ಮೃತದೇಹಕ್ಕೆ ಅಂತ್ಯಸಂಸ್ಕಾರ
ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು 2022 ರಲ್ಲಿ ಸುರೇಶ್ ಗೆ ಕರೆ ಮಾಡಿ ನಿಮ್ಮ ಪತ್ನಿಯ ಶವ ಪತ್ತೆಯಾಗಿದೆ ಎಂದು ಹೇಳಿ ಠಾಣೆಗೆ ಬರಲು ಹೇಳಿದ್ದರು. ಈ ವೇಳೆ ಠಾಣೆಗೆ ಬಂದಿದ್ದ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಶಿಕ್ಷಕಿ ಬಲಿ
ಬೆಟ್ಟದಪುರದಲ್ಲಿ ಸುರೇಶ್ ಅವರಿಗೆ ಒಂದು ಅಸ್ಥಿಪಂಜರ ತೋರಿಸಿ,”ಇದು ನಿಮ್ಮ ಪತ್ನಿಯ ಅಸ್ಥಿಪಂಜರ. ಅಂತ್ಯ ಸಂಸ್ಕಾರ ಮಾಡಿ” ಎಂದು ಅಲ್ಲೇ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಸಿದ್ದರು. ನಂತರ ಸುರೇಶ್ ಅವರೇ ಪತ್ನಿ ಮಲ್ಲಿಗೆಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಜೈಲಿಗೆ ಅಟ್ಟಿದ್ದರು. ಈ ವೇಳೆ ಸುರೇಶ್ ಅವರು ನಾನು ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಪೊಲೀಸರು ನೀನೇ ಕೃತ್ಯ ಎಸಗಿದ್ಯಾ ಎಂದು ಹೇಳಿ ಬಲವಂತವಾಗಿ ಜೈಲಿಗೆ ಕಳುಹಿಸಿದ್ದರು.
ಪ್ರಿಯತಮನೊಂದಿಗೆ ಸಿಕ್ಕಿಬಿದ್ಳು:
4 ವರ್ಷದಿಂದ ನಾಪತ್ತೆಯಾಗಿದ್ದ ಮಲ್ಲಿಗೆ ಏ.1 ರಂದು ಮಡಿಕೇರಿಯ ಹೋಟೆಲಿಗೆ ಪ್ರಿಯಕರನೊಂದಿಗೆ ಬಂದಿದ್ದಾಳೆ. ಈ ವೇಳೆ ಅಲ್ಲಿ ಸುರೇಶ್ ಅವರ ಸ್ನೇಹಿತರು ಆಕೆಯ ಫೋಟೋವನ್ನು ತೆಗೆದು ಸುರೇಶ್ ಅವರಿಗೆ ಮತ್ತು ಪೊಲೀಸರಿಗೆ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಲರ್ಟ್ ಆಗಿ ಮಲ್ಲಿಗೆ ನೆಲೆಸಿರುವ ಜಾಗವವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಮೃತದೇಹ ಯಾರದ್ದು?
ಅಂದು ಸುರೇಶ್ ಅಂತ್ಯ ಸಂಸ್ಕಾರ ಮಾಡಿದ ಆ ಅಸ್ಥಿಪಂಜರ ಯಾರದ್ದು? ಯಾವುದೇ ಸಾಕ್ಷ್ಯಗಳು ಇಲ್ಲದೇ ಇದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಸುರೇಶ್ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದು ಹೇಗೆ ಎಂಬ ಗಂಭೀರ ಪ್ರಶ್ನೆ ಎದ್ದಿದೆ.
ಬೆಂಗಳೂರು: ನಗರದ ಆಡುಗೋಡಿಯ (Adugodi) ನಂಜಪ್ಪ ಲೇಔಟ್‍ನಲ್ಲಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಪತಿಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಮೃತ ಮಹಿಳೆಯನ್ನು ಹೇಮಾ (44) ಎಂದು ಗುರುತಿಸಲಾಗಿದೆ. ಪತಿಗೆ ಅಕ್ರಮ ಸಂಬಂಧ ಇದೆ, ಮನೆ ಸಮೀಪವೇ ಬೇರೆ ಮಹಿಳೆಗೂ ಮನೆ ಮಾಡಿಕೊಟ್ಟಿದ್ದ ಎಂದು ಮಹಿಳೆ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳಂತೆ. ಇನ್ನೂ ಜನವರಿಯಲ್ಲಿ ಹೇಮಾ ವಿಷ ಕುಡಿದು ಆತ್ಮಹತ್ಯೆಗೂ ಯತ್ನಿಸಿದ್ದಳಂತೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ| ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ – 108 ಪ್ರಕರಣ ದಾಖಲು, 575 ಜೂಜುಕೋರರು ವಶಕ್ಕೆ
ಕಳೆದ ಶನಿವಾರ ಹೇಮಾ ಸಾವನ್ನಪ್ಪಿದ್ದು, ಮಗಳ ವಿದ್ಯಾಭ್ಯಾಸದ ವಿಚಾರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಂಡ ಹೇಳಿದ್ದ. ಆದರೆ ಹೇಮಾ ನೇಣು ಬಿಗಿದ ಸ್ಥಿತಿಯಲ್ಲಿರೋದನ್ನು ಯಾರು ನೋಡಿಲ್ಲ. ಹೇಮಾ ಮೃತದೇಹವನ್ನು ಆಸ್ಪತ್ರೆಯಲ್ಲಿ ನೋಡಿರೋ ಕುಟುಂಬಸ್ಥರು ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮಹಿಳೆಯ ಮಗಳು ರಷ್ಯಾದಿಂದ ಸೋಮವಾರ ವಾಪಸ್ ಆದ ಹಿನ್ನೆಲೆ, ಆಡುಗೋಡಿ ಶವಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.