Tag: Wife

  • ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

    ಬೆಂಗಳೂರು: ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿ ಪತ್ನಿಯ ಮೇಲೆ ಎರಚಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಥಾಮಸ್ ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಜನವರಿ 30 ರಂದು ಆಡುಗೋಡಿಯ ಎಲ್ ಆರ್ ನಗರದಲ್ಲಿ ಹೆಂಡತಿ ಅಂಥೋಣಿಯಮ್ಮ ಮೇಲೆ ಥಾಮಸ್ ಬಿಸಿ ಎಣ್ಣೆ ಸುರಿದಿದ್ದನು.

    ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಮೇಲೆ ಥಾಮಸ್ ಸಂಶಯ ಪಟ್ಟಿದ್ದನು. ಇದೇ ವಿಚಾರವಾಗಿ ಪತ್ನಿಯೊಂದಿಗೆ ಗಲಾಟೆ ಕೂಡ ಮಾಡಿದ್ದನು. ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ಮೂರ್ಛೆ ತಪ್ಪಿಸಿದ್ದನು. ನಂತರ ಅಡುಗೆ ಮನೆಗೆ ಹೋಗಿ ಸ್ನಾನಕ್ಕೆ ನೀರು ಕಾಯಿಸುತ್ತೇನೆ ಎಂದು ಎಣ್ಣೆ ಕಾಯಿಸಿದ್ದ. ಎಣ್ಣೆ ಕುದಿಯುತ್ತಿದ್ದಂತೆಯೇ ಅದನ್ನು ಪತ್ನಿ ಮೇಲೆ ಎರಚಿದ್ದ.

    ಹೆಂಡತಿ ಮುಖ, ಎದೆ, ಹೊಟ್ಟೆ, ಕಾಲು ಹಾಗೂ ಕೈಗಳ ಮೇಲೆ ಎಣ್ಣೆ ಸುರಿದಿದ್ದ. ಇತ್ತ ಅಮ್ಮನ ಮೇಲೆ ಎಣ್ಣೆ ಎರಚಿದಾಗ ಅಡ್ಡ ಬಂದ ಮಗಳ ಮೇಲೂ ಎಣ್ಣೆ ಚೆಲ್ಲಿದೆ. ಸದ್ಯ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಗಾಯಾಳು ಅಂಥೋಣಿಯಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ

  • ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ

    ಅಕ್ರಮ ಸಂಬಂಧ ಶಂಕೆ – ಪತ್ನಿಗೆ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದ ಪತಿ

    ನವದೆಹಲಿ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ 26 ವರ್ಷದ ವ್ಯಕ್ತಿಯೋರ್ವ ಕುಕ್ಕರ್ ಹಾಗೂ ಸಿಲಿಂಡರ್‍ನಿಂದ ಹೊಡೆದು ಹತ್ಯೆಗೈದಿರುವ ಘಟನೆ ಆಗ್ನೇಯ ದೆಹಲಿಯ ತುಘಲಕಾಬಾದ್ ಎಕ್ಸ್‌ಟೆನ್ಶನ್ ಏರಿಯಾದಲ್ಲಿ ನಡೆದಿದೆ.

    ಆರೋಪಿಯನ್ನು ತುಘಲಕಾಬಾದ್ ಎಕ್ಸ್‌ಟೆನ್ಶನ್ ನಿವಾಸಿ ಹಾಸಿಂ ಖಾನ್ ಎಂದು ಗುರುತಿಸಲಾಗಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋಗಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣ: ಅಲ್ಲು ಅರ್ಜುನ್

    ಹಾಸಿಂ ಖಾನ್ ಮುಂಜಾನೆ ಗೋವಿಂದಪುರಿ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ನಂತರ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದಾಗ ಪತ್ನಿ ಶಾಹೀನ್ ಖಾನ್ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿರುವುದು ಕಂಡು ಬಂದಿದೆ.

    ಸಲ್ಮಾನ್ ಎಂಬಾತನೊಂದಿಗೆ ಶಾಹೀನ್ ಖಾನ್ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆರೋಪಿ ಆಕೆಯ ತಲೆಗೆ ಕುಕ್ಕರ್ ಹಾಗೂ ಸಿಲಿಂಡರ್‌ನಿಂದ ಹೊಡೆದಿದ್ದಾನೆ. ಇದೀಗ ಪೊಲೀಸರು ಕುಕ್ಕರ್ ಹಾಗೂ ಸಿಲಿಂಡರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    POLICE JEEP

    2018ರ ಜೂನ್‍ನಲ್ಲಿ ಹಾಸಿಮ್ ಮತ್ತು ಶಾಹೀನ್ ವಿವಾಹವಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ ಮತ್ತು ಆರೋಪಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ ಮೂಲಕ ಮಂತ್ರಿಗಿರಿಗೆ ರಮೇಶ್ ಜಾರಕಿಹೊಳಿ ಲಾಬಿ

  • 3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದ ಮಗುವನ್ನು ಸುಟ್ಟು ಹಾಕಿದ್ಳು!

    3ನೇ ಪತಿಗೆ ನಿಷ್ಠೆ ತೋರಿಸಲು 2ನೇ ಪತಿಯಿಂದ ಪಡೆದ ಮಗುವನ್ನು ಸುಟ್ಟು ಹಾಕಿದ್ಳು!

    ಚೆನ್ನೈ: 3ನೇ ಪತಿಗೆ ನಿಷ್ಠೆ ತೋರಿಸಲು ಪತ್ನಿಯೊಬ್ಬಳು 2ನೇ ಪತಿಯಿಂದ ಪಡೆದುಕೊಂಡಿದ್ದ ಮಗುವನ್ನು ಸುಟ್ಟು ಹಾಕಿದ ಅಮಾನುಷ ಘಟನೆ ಚೆನ್ನೈನಲ್ಲಿ ನಡೆದಿದೆ.

    3ನೇ ಪತಿ, ನೀನು ನನಗೆ ನಿಷ್ಠೆ ತೋರಿಸುವುದಾದ್ರೆ ನಿನ್ನ ಮಗಳನ್ನು ಸುಟ್ಟು ಹಾಕು ಎಂದು ಹೇಳಿದ್ದಾನೆ. ಅದಕ್ಕೆ ಪತ್ನಿ ತನ್ನ 10 ವರ್ಷದ ಹೆಣ್ಣು ಮಗುವನ್ನು ಬೆಂಕಿಯಲ್ಲಿ ಸುಟ್ಟು ಹಾಕಿದ್ದಾಳೆ. ನೆರೆಮನೆಯವರು ಬಾಲಕಿಯ ಕಿರುಚಾಟ ಕೇಳಿಸಿಕೊಂಡು ಸ್ಥಳಕ್ಕೆ ಓಡಿ ಬಂದಿದ್ದಾರೆ. ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ 75% ಸುಟ್ಟು ಹೋಗಿದ್ದ ಕಾರಣ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದಂತೆ ತಾಯಿ ಮತ್ತು ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಬ್ಬರನ್ನು ಕಟ್ಟಿ ಹಾಕಿ ನಗದು, ಚಿನ್ನ ದೋಚಿದ ಖದೀಮರು

    ಏನಿದು ಘಟನೆ?: 5ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ ತನ್ನ ತಾಯಿ ಜಯಲಕ್ಷ್ಮಿ (38) ಮತ್ತು ಮಲತಂದೆ ಪದ್ಮನಾಭನ್ ಅವರೊಂದಿಗೆ ವಾಸಿಸುತ್ತಿದ್ದಳು. ಜಯಲಕ್ಷ್ಮಿ 19 ವರ್ಷದವಳಿದ್ದಾಗ ಮೊದಲು ಪಾಲ್ವಣ್ಣನ್ ಅವರನ್ನು ವಿವಾಹವಾಗಿದ್ದಳು. ಆದರೆ ಆತನನ್ನು ಬಿಟ್ಟು ಅವನ ಕಿರಿಯ ಸಹೋದರ ದುರೈರಾಜ್ ಜೊತೆ ಓಡಿ ಹೋಗಿ ವಿವಾಹವಾದಳು. ಇಬ್ಬರೂ ಮುಂಬೈನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಜಯಲಕ್ಷ್ಮಿ ಪವಿತ್ರಾಗೆ ಜನ್ಮ ನೀಡಿದಳು.

    ಜಯಲಕ್ಷ್ಮಿ, ದುರೈರಾಜ್ ಅವರನ್ನು ಬಿಟ್ಟು ಮಗು ಜೊತೆಗೆ ಚೆನ್ನೈಗೆ ಮರಳಿದ್ದು, ತಿರುವೊಟ್ಟಿಯೂರಿನಲ್ಲಿ ನೆಲೆಸಿದಳು. ನಂತರ ಟ್ಯಾಂಕರ್ ಡ್ರೈವರ್ ಪದ್ಮನಾಭನ್ ಜೊತೆ ಸ್ನೇಹ ಬೆಳೆಸಿದಳು. ಈತನಿಗೆ 9 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದನು. ಆತನಿಗೂ ಇಬ್ಬರು ಮಕ್ಕಳಿದ್ದರು. ಆದರೂ ಜಯಲಕ್ಷ್ಮಿ ಆತನೊಂದಿಗೆ ಜೀವನ ನಡೆಸುತ್ತಿದ್ದಳು. ಆದರೆ ಪದ್ಮನಾಭನ್ ಆಗಾಗ್ಗೆ ಕುಡಿದು ಬಂದು ಜಯಲಕ್ಷ್ಮಿಯೊಂದಿಗೆ ಜಗಳವಾಡುತ್ತಿದ್ದ. ಅದು ಅಲ್ಲದೇ ಆಕೆಯ ನಿಷ್ಠೆಯನ್ನು ಶಂಕಿಸುತ್ತಿದ್ದನು. ಇದನ್ನೂ ಓದಿ: ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲು

    ಈ ಪರಿಣಾಮ ಭಾನುವಾರ ರಾತ್ರಿ, ಪದ್ಮನಾಭನ್ ಆಕೆಯ ನಿಷ್ಠೆಯನ್ನು ಪ್ರಶ್ನಿಸಿದ್ದು, ಪವಿತ್ರಾಳನ್ನು ಸುಟ್ಟು ಹಾಕು ಎಂದು ಹೇಳುತ್ತಾನೆ. ಅದಕ್ಕೆ ಜಯಲಕ್ಷ್ಮಿ ತನ್ನ ಮಗಳನ್ನು ಸೀಮೆಎಣ್ಣೆ ಸುರಿದು ಬೆಂಕಿ ಇಡುತ್ತಾಳೆ. ಬಾಲಕಿಯ ಕಿರುಚಾಟ ಕೇಳಿ ನೆರೆಹೊರೆಯವರು ಮನೆಗೆ ಧಾವಿಸಿದ್ದು, ಬೆಂಕಿ ನಂದಿಸಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಪವಿತ್ರಾ 75% ಸುಟ್ಟ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

  • ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

    ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

    ವಿಜಯಪುರ: ಪಾಪಿ ಗಂಡನೊಬ್ಬ ಹೆಂಡತಿಯನ್ನು ಕೊಲೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ.

    ಶೀಲವಂತಿ ಕನ್ನಾಳ ಕೊಲೆಯಾದ ಪತ್ನಿ. ಪತಿ ಗುರುಬಾಳ ಕನ್ನಾಳನು ಹರಿತವಾದ ಆಯುಧದಿಂದ ಪತ್ನಿಗೆ ತಿವಿದು ಹತ್ಯೆಗೈದಿದ್ದಾನೆ. ಗಂಡನ ಕುಡಿತದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ಹೀಗಾಗಿ ಪತ್ನಿಯು ತನ್ನ ತವರು ಮನೆಯಲ್ಲಿದ್ದಳು. ಈ ಸಂದರ್ಭದಲ್ಲಿ ಅವನು ಹೆಂಡತಿಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದನು. ಆಗ ಪತ್ನಿಯು ಕುಡಿತ ಬಿಟ್ಟರೆ ಮನೆಗೆ ಬರುವೆ ಅಂತ ಕರಾರು ಹಾಕಿದ್ದರು. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಪತ್ನಿಯ ಕರಾರಿಗೆ ಒಪ್ಪದ ಅವನು, ಶೀಲವಂತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಯು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಸಾಲ ಬಾಧೆ -ಹೆಂಡತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡ

    ಸಾಲ ಬಾಧೆ -ಹೆಂಡತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡ

    ಕಾರವಾರ: ಸಾಲ ಮಾಡಿಕೊಂಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ವಿವಾಹಿತನೋರ್ವ ಪತ್ನಿಗೆ ಕರೆ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ನಗರದಲ್ಲಿ ನಡೆದಿದೆ.

    MONEY

    ಮಹದ್ ಶಫೀಕ್ (34) ಮೃತನಾಗಿದ್ದಾನೆ. ಕಾರವಾರ ಚಿತ್ತಾಕುಲಾ ನಾಕುದಾಮೊಹಲ್ಲಾದ ನಿವಾಸಿಯಾಗಿದ್ದನು. ಈತ ತನ್ನ ಪತ್ನಿ ಸಮೀರಾಳಿಗೆ ಕರೆ ಮಾಡಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಅವಮಾನಿಸಿದ್ದ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಶುಭಕೋರಿದ ಮಹೀಂದ್ರಾ

    BRIBE

    ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಮದ್ಯ ವ್ಯಸನಿಯಾಗಿದ್ದ. ಹಲವು ಕಡೆ ಸಾಲ ಮಾಡಿಕೊಂಡಿದ್ದ ಈತ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 165 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ ಭಾರತ

  • ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಲೆಗೈದ ಪತಿ

    ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಲೆಗೈದ ಪತಿ

    ಮಂಡ್ಯ: ಗಂಡನೇ ಪತ್ನಿಯ ಕತ್ತು ಕೊಯ್ದು ನಂತರ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ರಾಗಿಮುದ್ದನಹಳ್ಳಿಯ ಶಾಲಿನಿ (32) ಕೊಲೆಯಾಗಿರುವ ಪತ್ನಿಯಾಗಿದ್ದು, ಸುರೇಶ್ (40) ಕೊಲೆ ಮಾಡಿದ ಪತಿಯಾಗಿದ್ದಾನೆ. ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲಿನಿ ಹಾಗೂ ಸುರೇಶ್ ಒಂದೇ ಗ್ರಾಮದವರಾಗಿದ್ದು, ಶಾಲಿನಿ ಕಾಲೇಜಿಗೆ ಹೋಗುವ ವೇಳೆ ಆಕೆಯನ್ನು ಪ್ರೀತಿಸಿ ಸುರೇಶ್ ಮದುವೆಯಾಗಿದ್ದ. ಕೆಲವು ವರ್ಷ ಅನ್ಯೋನ್ಯವಾಗಿದ್ದ ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಆದರೆ ಕೆಲ ವರ್ಷಗಳ ನಂತರ ಸುರೇಶ್ ತನ್ನ ಕ್ರೌರ್ಯ ಬುದ್ಧಿಯನ್ನು ಪ್ರದರ್ಶಿಸಿ ಶಾಲಿನಿಗೆ ಹಿಂಸೆ ಮಾಡುತ್ತಿದ್ದ. ಸುರೇಶ್ ಕುಡಿದು ಬಂದು ಶಾಲಿನಿಗೆ ಹೊಡೆಯುವುದು ಮನೆಯಲ್ಲಿ ಪ್ರತಿ ದಿನ ಗಲಾಟೆ ಮಾಡುತ್ತಿದ್ದ. ಇವರಿಗೆ ಎರಡನೇ ಮಗು ಹುಟ್ಟಿದ್ದಾಗ, ಹೆಣ್ಣು ಮಗು ಎಂಬ ಕಾರಣಕ್ಕೆ ಶಾಲಿನಿಗೆ ಸುರೇಶ್ ಮತ್ತಷ್ಟು ಹಿಂಸೆ ಕೊಡುತ್ತಿದ್ದನು. ಜೊತೆಗೆ ಸೀಮೆಎಣ್ಣೆ ಸುರಿದು ಕೊಲೆ ಮಾಡಲು ಮೂರು ಬಾರಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದನು. ಇದನ್ನೂ ಓದಿ: ಕೋವಿಡ್ ಸಮಯದಲ್ಲಿ PPE ಕಿಟ್ ಧರಿಸಿ ಕೆಲಸ ಮಾಡಿದ್ದ ಸೌಂದರ್ಯ..!

    ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿ ಸುರೇಶ್‍ನನ್ನು ಶಾಲಿನಿ ಜೈಲಿಗೆ ಕಳಿಸಿದ್ದಳು. ಜೈಲಿನಿಂದ ಬಂದ ಬಳಿಕ ಮತ್ತೆ ಶಾಲಿನಿಗೆ ಸುರೇಶ್ ಹಿಂಸೆ ಕೊಡಲು ಪ್ರಾರಂಭಿಸಿದ್ದ. ಈ ಹಿನ್ನೆಲೆಯಲ್ಲಿ 4 ವರ್ಷದ ಹಿಂದೆ ಈ ದಂಪತಿ ವಿಚ್ಛೇದನ ಪಡೆದಿದ್ದರು. ನಂತರ ಶಾಲಿನಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಂದೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಳು. ಈ ಹಿನ್ನೆಲೆಯಲ್ಲಿ ತನ್ನನ್ನು ಬಿಟ್ಟು ಜೀವನ ಸಾಗಿಸುತ್ತಿದ್ದಾಳೆ ಎಂದು ಸುರೇಶ್ ಖಿನ್ನತೆ ಒಳಗಾಗಿದ್ದಾನೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಿಳಾ ಪೊಲೀಸ್ ಕರ್ತವ್ಯದ ಸಮಯ ಕಡಿತ

    POLICE JEEP

    ನಿನ್ನೆ ಶಾಲಿನಿ ಗಾಮೆರ್ಂಟ್‍ನಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಆಕೆಯನ್ನು ಎಳೆದುಕೊಂಡು ಹೋಗಿ ಮೊದಲಿಗೆ ಕತ್ತು ಕೊಯ್ದು ನಂತರ ತಲೆ ಮೇಲೆ ಕತ್ತು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಸುರೇಶ್ ಇದೀಗ ಪರಾರಿಯಾಗಿದ್ದು, ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳು ಕಣ್ಣೀರಿಡುತ್ತಿದ್ದಾರೆ.

  • ಇನ್‍ಸ್ಟಾದಲ್ಲಿ ತಲಾಖ್ ಘೋಷಿಸಿದ ಪತಿ ವಿರುದ್ಧ ಪತ್ನಿ ದೂರು

    ಇನ್‍ಸ್ಟಾದಲ್ಲಿ ತಲಾಖ್ ಘೋಷಿಸಿದ ಪತಿ ವಿರುದ್ಧ ಪತ್ನಿ ದೂರು

    ಗಾಂಧೀನಗರ: ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದಡಿ 28 ವರ್ಷದ ವ್ಯಕ್ತಿ ಮೇಲೆ ಗುಜರಾತ್ ಪೊಲೀಸರು ದೂರು ದಾಖಲಿಸಿದ್ದಾರೆ.

    ಗುಜರಾತ್‍ನ ಆನಂದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಮಹಿಳೆ ಪೊಲೀಸರಿಗೆ ದೂರು ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಮಹಿಸಾಗರ್ ಜಿಲ್ಲೆಯ ದೇಬಾರ್ ಗ್ರಾಮದ ವ್ಯಕ್ತಿ 2019ರ ನವೆಂಬರ್‌ನಲ್ಲಿ ಆನಂದ್ ಜಿಲ್ಲೆಯ ಉಮ್ರೆತ್ ತಾಲೂಕಿನ 27 ವರ್ಷದ ಮಹಿಳೆಯನ್ನು ವಿವಾಹವಾಗಿದ್ದನು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ಗಂಡ, ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಜುಲೈನಲ್ಲಿ ಮಹಿಳೆಗೆ ತಲಾಖ್ ನೀಡುವಂತೆ ಹೇಳಿ ಆಕೆಯನ್ನು ಗಂಡನ ಮನೆಯಿಂದ ಹೊರಗೆ ಹಾಕಲಾಗಿದೆ. ಬಳಿಕ ಮಹಿಳೆ ತನ್ನ ಪೋಷಕರ ಮನೆಗೆ ಹಿಂದಿರುಗಿ ವಾಸಿಸುತ್ತಿದ್ದಳು. ಆದರೆ ಈ ವೇಳೆ ಮಹಿಳೆಗೆ ತ್ರಿವಳಿ ತಲಾಖ್ ವಿರುದ್ಧ ಜಾರಿಯಾಗಿರುವ ಕಾನೂನಿನ ಬಗ್ಗೆ ತಿಳಿದಿರಲಿಲ್ಲ. ಹಾಗಾಗಿ ಆಗ ದೂರು ನೀಡಿರಲಿಲ್ಲ.

    ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪತಿಯ ಚಟುವಟಿಕೆಯನ್ನು ಪರಿಶೀಲಿಸಲು ಇನ್‍ಸ್ಟಾಗ್ರಾಮ್‍ನಲ್ಲಿ ಫೇಕ್ ಪ್ರೊಫೈಲ್ ಕ್ರಿಯೆಟ್ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಈ ಪ್ರೊಫೈಲ್ ಹಿಂದೆ ತನ್ನ ಪತ್ನಿ ಇದ್ದಾಳೆ ಎಂಬುವುದನ್ನು ತಿಳಿದು ವ್ಯಕ್ತಿ ಮತ್ತೊಮ್ಮೆ ತ್ರಿವಳಿ ತಲಾಖ್ ಉಚ್ಚರಿಸಿದ್ದಾನೆ. ಇದನ್ನೂ ಓದಿ: ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!

    ನಂತರ ಈ ಕುರಿತಂತೆ ಮಹಿಳೆ ಕುಟುಂಬಕ್ಕೆ ಮಾಹಿತಿ ನೀಡಿ, ದೂರು ದಾಖಲಿಸಲು ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದಾಗಿ ಚೇತನ್ ಸಿಂಗ್ ರಾಥೋಡ್ ಹೇಳಿದ್ದಾರೆ. ಇದೀಗ ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಪತಿಯಿಂದ ನಿತ್ಯವೂ ಟಾರ್ಚರ್ – ಮಗನೊಂದಿಗೆ ಕರೆಗೆ ಹಾರಿ ಪತ್ನಿ ಆತ್ಮಹತ್ಯೆ

    ಪತಿಯಿಂದ ನಿತ್ಯವೂ ಟಾರ್ಚರ್ – ಮಗನೊಂದಿಗೆ ಕರೆಗೆ ಹಾರಿ ಪತ್ನಿ ಆತ್ಮಹತ್ಯೆ

    ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ ಕಿರುಕುಳ ಅನುಭವಿಸುತ್ತಿದ್ದ ಹೆಂಡತಿ, ಮಗನೊಂದಿಗೆ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನಗರದ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೇವಂತಿ ಪ್ಯಾಟಿ (32), ಮಹಾಂತೇಶ್ ಪ್ಯಾಟಿ (12) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವವರು. ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಬೆಳ್ಳಪ್ಪ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ಕೇಂದ್ರ ಸರ್ಕಾರ ಮಾಡುತ್ತಿದೆ: ಎಚ್‍ಡಿಕೆ ವಾಗ್ದಾಳಿ

    ನಿನ್ನೆ ಸಂಜೆ ಅವನು ಹೆಂಡತಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದನು. ತನ್ನ ಕಿರಿಯ ಮಗನನ್ನು ತಂಗಿಯ ಮನೆಯಲ್ಲಿಯೇ ಬಿಟ್ಟಿದ್ದನು. ಆದರೆ ಸೇವಂತಿ ಇನ್ನೊಂದು ಮಗುವನ್ನ ತನ್ನ ಬಳಿಯೇ ಇಟ್ಟುಕೊಂಡು ಗಂಡನ ಕಿರುಕುಳ ಸಹಿಸಿಕೊಂಡಿದ್ದರು. ಆಗಾಗ ಹೆಂಡತಿಗೆ ಮನೆ ಬಿಟ್ಟು ಹೋಗಿ, ನಿನ್ನ ಬಿಟ್ಟು ಬೇರೊಂದು ಮದುವೆ ಆಗುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂಬ ಆರೋಪಿಸಲಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ಇದರಿಂದ ಮನನೊಂದ ಸೇವಂತಿ ಇಂದು ಬೆಳಗ್ಗೆ ಗ್ರಾಮದ ಹೊರ ವಲಯದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಭೇಟಿ ನೀಡಿದ್ದು, ಸಿಬ್ಬಂದಿ ಕೆರೆಯಿಂದ ಇಬ್ಬರ ಶವಗಳನ್ನ ಹೊರ ತೆಗೆಯಲಾಗಿದೆ.

    ಘಟನೆ ಕುರಿತು ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಮುಂಬೈ: ಪತಿಯ ಕುಡಿತದಿಂದ ಬೇಸತ್ತು ಪತ್ನಿ ಸೋದರಮಾವನ ಸಹಾಯದಿಂದ ಕೊಲೆ ಮಾಡಿದ ಘಟನೆಯೊಂದು ಪುಣೆಯಲ್ಲಿ ಬೆಳಕಿಗೆ ಬಂದಿದೆ.

    ಮೃತ ವ್ಯಕ್ತಿಯನ್ನು ಕಪ್ತಾನ್‍ಸಿಂಗ್ ನಾಯಕ್(37) ಎಂದು ಗುರುತಿಸಲಾಗಿದೆ. ಅಂಜಲಿ ಚವ್ಹಾಣ್ ನಾಯಕ್(32) ಮತ್ತು ಸೋದರಮಾವ ಗಜೇಂದ್ರ ಚಿತ್ತಾರಸಿಂಗ್ ನಾಯಕ್(36) ಸೇರಿ ಕಪ್ತಾನ್‍ಸಿಂಗ್ ನಾಯಕ್‍ನನ್ನು ಕೊಂದಿದ್ದಾರೆ. ಪ್ರಸ್ತುತ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    POLICE JEEP

    ಕಾರಣವೇನು?
    ಕಪ್ತಾನ್‍ಸಿಂಗ್ ಮತ್ತು ಅವರ ಪತ್ನಿ ಅಂಜಲಿ ಚವ್ಹಾಣ್-ನಾಯಕ್ ಮುಂಡ್ವಾದ ಕೇಶವನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತ ವ್ಯಕ್ತಿ ದೆಹಲಿ ಮೂಲದವರಾಗಿದ್ದು, ಪುಣೆಯಲ್ಲಿ ವಾಸವಾಗಿದ್ದರು. ಕಪ್ತಾನ್‍ಸಿಂಗ್ ದಿನಗೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟ ಇತ್ತು.

    ಅಲ್ಲದೆ ಕುಡಿದು ಬಂದು ದಿನನಿತ್ಯ ಅಂಜಲಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಅಂಜಲಿ ಭಾನುವಾರ ಮಧ್ಯಾಹ್ನ, ತನ್ನ ಸಹೋದರಿಯ ಪತಿಯಿಂದ ಸಹಾಯ ಕೇಳಿದ್ದಾಳೆ. ಈ ಸಂಬಂಧ ಇಬ್ಬರು ಸೇರಿ ತಮ್ಮ ಮನೆಯಲ್ಲೇ ಕಪ್ತಾನ್ ಸಿಂಗ್‍ನನ್ನು ಹೊಡೆದು ಕೊಂದಿದ್ದಾರೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಮುಂಡ್ವಾ ಪೊಲೀಸ್ ಠಾಣೆಯ ಪೊಲೀಸರಿಗೆ ಈ ಮಾಹಿತಿ ತಿಳಿದ ತಕ್ಷಣ ಇಬ್ಬರನ್ನು ಬಂಧಿಸಿದ್ದಾರೆ. ಪ್ರಸ್ತುತ ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಮತ್ತು 34 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

  • ಪತ್ನಿಯನ್ನ ಸರ್ಜಿಕಲ್ ಬ್ಲೇಡ್‍ನಿಂದ ಕೊಯ್ದು ಪತಿ ಆತ್ಮಹತ್ಯೆಗೆ ಶರಣು!

    ಪತ್ನಿಯನ್ನ ಸರ್ಜಿಕಲ್ ಬ್ಲೇಡ್‍ನಿಂದ ಕೊಯ್ದು ಪತಿ ಆತ್ಮಹತ್ಯೆಗೆ ಶರಣು!

    ನವದೆಹಲಿ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಸರ್ಜಿಕಲ್ ಬ್ಲೇಡ್‍ನಿಂದ ಕೊಯ್ದ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಖ್ಯಾಲಾದ ನಿವಾಸಿ 32 ವರ್ಷದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಸರ್ಜಿಕಲ್ ಬ್ಲೇಡ್‍ನಿಂದ ಹಲ್ಲೆ ಮಾಡಿದ್ದು, ಕುತ್ತಿಗೆ ಮತ್ತು ಮುಖಕ್ಕೆ ತೀವ್ರವಾಗಿ ಗಾಯ ಮಾಡಿದ್ದಾನೆ. ನಂತರ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಸ್ತುತ ಗಾಯಾಳು ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇನ್ನೂ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದನ್ನೂ ಓದಿ: ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

    ಏನಿದು ಘಟನೆ?
    ದಂಪತಿ ಇತ್ತೀಚೆಗೆ ಮದುವೆಯಾಗಿದ್ದು, ಮಹಿಳೆಯು ಪತಿ ರಾಮ್‍ಕುಮಾರ್ ಕಿರುಕುಳ ತಡೆಯಲಾಗದೆ ರಘುಬೀರ್ ನಗರ ಪ್ರದೇಶದಲ್ಲಿದ್ದ ತನ್ನ ತಾಯಿಯ ಮನೆಗೆ ತೆರಳಿದ್ದಾಳೆ. ಮಾದಕ ವ್ಯಸನಿಯಾಗಿದ್ದ ರಾಮ್‍ಕುಮಾರ್ ಅಲ್ಲಿಗೂ ಹೋಗಿ ಪತ್ನಿಗೆ ತನ್ನೊಂದಿಗೆ ಮನೆಗೆ ಬರುವಂತೆ ವಿನಂತಿಸಿಕೊಂಡಿದ್ದಾನೆ. ಆದರೆ ಅವಳು ನಿರಾಕರಿಸಿದ್ದು, ಈ ವೇಳೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

    ಹಲ್ಲೆಯ ನಂತರ ರಾಮ್‍ಕುಮಾರ್, ತನ್ನ ಹೆಂಡತಿ ಸತ್ತಿದ್ದಾಳೆ ಎಂದು ಭಾವಿಸಿ ಆಕೆಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಓಡಿಹೋಗಿದ್ದಾನೆ. ಆದರೆ ನಂತರ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಅವಧಿ ಮೀರಿ ವಾಸಗೃಹದಿಂದ ಕುಟುಂಬ ಹೊರಹಾಕಿದ್ದ ಪ್ರಕರಣ ಸುಖಾಂತ್ಯ – ಮೃತ ನೌಕರನ ಪುತ್ರನಿಗೆ ಗುತ್ತಿಗೆ ನೌಕರಿ

    ಗುರುವಾರ ಪಶ್ಚಿಮ ವಿಹಾರ್‌ನ ಆಸ್ಪತ್ರೆಯಿಂದ ಖ್ಯಾಲಾ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ಮಹಿಳೆಯೊಬ್ಬರು ಪತಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದನ್ನು ತಿಳಿಸಲಾಗಿದೆ. ಪೊಲೀಸರು ತನಿಖೆ ಮಾಡಿದ ಮಾಡಿದ ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.