Tag: Wife

  • ವರದಕ್ಷಿಣೆ ಕಿರುಕುಳ – ಗಂಡನಿಂದಲೇ ಹೆಂಡತಿಯ ಕೊಲೆ

    ವರದಕ್ಷಿಣೆ ಕಿರುಕುಳ – ಗಂಡನಿಂದಲೇ ಹೆಂಡತಿಯ ಕೊಲೆ

    ಮೈಸೂರು: ಪತಿಯೊಬ್ಬ ವರದಕ್ಷಿಣೆಗಾಗಿ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ನಗರದ ಜೆ.ಪಿ ನಗರದಲ್ಲಿ ನಡೆದಿದೆ.

    ನಂದಿನಿ (25) ಮೃತ ಪತ್ನಿ. ಪತಿ ವಿಜಯ್ (30) ಕೊಲೆ ಆರೋಪಿ. ದಂಪತಿ 2 ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ವರದಕ್ಷಿಣೆಗಾಗಿ ವಿಜಯ್ ಹಾಗೂ ಕುಟುಂಬಸ್ಥರು ನಂದಿನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ

    ಆರೋಪಿಯು ನಿನ್ನೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಲ್ಲದ ಸಂಘ ಪರಿವಾರದವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್

    ಆರೋಪಿಯು 11 ತಿಂಗಳ ಮಗು ಕೊಲೆಗೂ ಯತ್ನಿಸಿದ್ದಾನೆ ಎಂದು ನಂದಿನಿ ಕುಟುಂಬಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪತಿ ವಿರುದ್ಧ ದೂರು ಕೊಟ್ಟ ಪತ್ನಿ..!

    ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪತಿ ವಿರುದ್ಧ ದೂರು ಕೊಟ್ಟ ಪತ್ನಿ..!

    ನವದೆಹಲಿ: 27 ವರ್ಷದ ಮಹಿಳೆಗೆ ಪತಿ ಹಲವು ಬಾರಿ ಇರಿದಿದ್ದಾನೆ. ಪರಿಣಾಮ ಆಕೆಯ ಭುಜದಲ್ಲಿ ಚಾಕು ಸಿಲುಕಿಕೊಂಡ್ರೂ ಲೆಕ್ಕಿಸದೆ ಪೊಲೀಸರಿಗೆ ಪತಿ ವಿರುದ್ಧ ದೂರು ಕೊಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ರೋಹಿಣಿಯ ಕಂಝವಾಲಾ ಪ್ರದೇಶದಲ್ಲಿ 27 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಹಲ್ಲೆ ನಡೆಸಿ ಹಲವು ಬಾರಿ ಇರಿದಿದ್ದಾನೆ. ಗಾಯಗೊಂಡ ಮಹಿಳೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಭುಜದಲ್ಲಿ ಇನ್ನೂ ಚಾಕು ಇದ್ರೂ ಅದನ್ನ ಲೆಕ್ಕಿಸದೆ ದೂರು ಕೊಡಲು ಪೊಲೀಸ್ ಠಾಣೆಗೆ ಪ್ರವೇಶಿಸಿದ್ದಾಳೆ. ದೂರು ದಾಖಲಿಸಿಕೊಂಡ ತಕ್ಷಣ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಮಹಿಳೆಯ ದೂರಿನ ಆಧಾರದ ಮೇಲೆ ಪತಿ ವಿರುದ್ಧ ಪೊಲೀಸರು, 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ), 342 (ಅಕ್ರಮ ಬಂಧನಕ್ಕೆ ಶಿಕ್ಷೆ), 324(ಅಪಾಯಕಾರಿ ಆಯುಧದಿಂದ ಹಲ್ಲೆ) ಮತ್ತು 34 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

    ಅಲ್ಲದೆ ಈ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು. ಪ್ರಸ್ತುತ ಮುಖ್ಯ ಆರೋಪಿ ಮತ್ತು ಅವನ ತಾಯಿ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆಗಾಗಿ ನಾವು ತಂಡವನ್ನು ರಚಿಸಿದ್ದೇವೆ. ಈಗ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

    ದೂರಿನಲ್ಲಿ ಏನಿದೆ?
    ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾವು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನಮಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತಿ ಕೆಲಸ ಕಳೆದುಕೊಂಡ ನಂತರ ನನ್ನನ್ನು ತುಂಬಾ ನಿಂದಿಸುತ್ತಿದ್ದನು. ಅಲ್ಲದೆ ಹಿಂಸೆ ಕೊಡುತ್ತಿದ್ದನು. ಪರಿಣಾಮ ನಾನು ನನ್ನ ಗಂಡನ ಮನೆ ಬಿಟ್ಟು ತವರುಮನೆಗೆ ಹೋಗಿ ವಾಸಿಸಲು ಪ್ರಾರಂಭಿಸಿದೆ. ನನ್ನ ಮಕ್ಕಳನ್ನು ನೋಡಲು ಪತಿ ಮನೆಗೆ ಹೋಗಿದ್ದೆ. ಆಗ ಮಕ್ಕಳು ಕಾಣಿಸಲಿಲ್ಲ. ಅದಕ್ಕೆ ನಾನು, ಮಕ್ಕಳು ಎಲ್ಲಿ ಎಂದು ಕೇಳಿದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

    How To Pick A Bedroom Door Lock | Home Security Store

    ನನ್ನ ಪತಿ, ನೀನು ರೂಮ್‍ನಲ್ಲಿರು ಮಕ್ಕಳನ್ನು ನಾನು ಕರೆತರುತ್ತೇನೆ ಎಂದು ಹೇಳಿದರು. ಅದಕ್ಕೆ ನಾನು ರೂಮ್ ನಲ್ಲಿ ಕುಳಿತುಕೊಂಡಿದ್ದೆ. ರೂಮ್ ಒಳಗೆ ಬಂದ ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದು, ಚಾಕುವನ್ನ ಹೊರತೆಗೆದು ನನ್ನ ಸೊಂಟ, ಬೆನ್ನು ಮತ್ತು ಭುಜಕ್ಕೆ ಇರಿದಿದ್ದಾನೆ. ಅವನು ಚುಚ್ಚಿದ ರಭಸಕ್ಕೆ ಚಾಕುವಿನ ಹಿಡಿಕೆಯೇ ಮುರಿದು ನನ್ನ ಭುಜದಲ್ಲಿ ಸಿಕ್ಕಿಕೊಂಡಿದೆ. ಆದರೂ ಬಿಡದ ಅವನು ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ವಿವರವಾಗಿ ತಿಳಿಸಿದ್ದಾಳೆ.

  • ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

    ಪಾಟ್ನಾ: ಮತ್ತೋರ್ವ ಮಹಿಳೆಯನ್ನು ಮದುವೆಯಾಗಲು ಹೊರಟಿದ್ದ ವ್ಯಕ್ತಿಯನ್ನು ಲೈಟ್ ಕಂಬಕ್ಕೆ ಕಟ್ಟಿ ಅತ್ತಿಗೆ ಥಳಿಸಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಕತಿಹಾರ್ ಜಿಲ್ಲೆಯ ಅಜಮ್‍ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಕ್‍ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದ್ ಅಬಿದ್ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದನು ಮತ್ತು ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿರುವುದನ್ನು ತಿಳಿದ ಪತ್ನಿ ಸನಾ ಖಾತೂನ್ ಆತನನ್ನು ತಡೆಯಲು ವಿಫಲವಾದಾಗ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.

    ಮುಂಬೈನಲ್ಲಿ ವಾಸಿಸುತ್ತಿದ್ದ ಅಬಿದ್ ಪಕ್ಕದ ಹಳ್ಳಿಯ ನಿವಾಸಿಯಾಗಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದರಿಂದ ತನಗೆ ಹಣ ಕಳುಹಿಸುವುದನ್ನು ನಿಲ್ಲಿಸಿದ್ದ ಎಂದು ಪತ್ನಿ ಸನಾ ಖಾತೂನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

    ಅಬಿದ್ ತನ್ನ ಗೆಳತಿಯನ್ನು ಮದುವೆಯಾಗುವಂತೆ ಮನವೊಲಿಸಿ, ಶನಿವಾರ ಆಕೆಯನ್ನು ಮದುವೆಯಾಗಲು ನ್ಯಾಯಾಲಯಕ್ಕೆ ಹೋಗುತ್ತಿದ್ದನು. ಅಬಿದ್ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಆತನ ಪತ್ನಿ ಸನಾ ಆತನನ್ನು ತಡೆಯಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗದ ಕಾರಣ ಕೊನೆಗೆ ಅಬಿದ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೂಡಲೇ ಕುಟುಂಬಸ್ಥರು ಅಬಿದ್ ಹಿಡಿದು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

    ಅಬಿದ್ ಒಪ್ಪಿಗೆ ಮೇರೆಗೆ ಆತನಿಗೆ ಮದುವೆ ಮಾಡಲಾಗಿತ್ತು. ಆದರೀಗ ಪತ್ನಿಯನ್ನು ಬಿಟ್ಟು ಬೇರೆ ಮದುವೆಯಾಗಲು ಮುಂದಾಗಿದ್ದಾನೆ. ಪತ್ನಿಗೆ ದ್ರೋಹ ಬಗೆದಿದ್ದಕ್ಕೆ ತಕ್ಕ ಪಾಠ ಕಲಿಸಬೇಕೆಂದು ಥಳಿಸಿಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

  • ತಾಯಿ, ಮಗ ಸೇರಿ ತಂದೆಯನ್ನೇ ಕೊಂದ್ರು!

    ತಾಯಿ, ಮಗ ಸೇರಿ ತಂದೆಯನ್ನೇ ಕೊಂದ್ರು!

    ಮುಂಬೈ: 54 ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಮಗ ಸೇರಿ ಕೊಂದು ಆತನ ಶವವನ್ನು ಕಟ್ಟಡದ ಏಳನೇ ಮಹಡಿಯಿಂದ ಎಸೆದ ಘಟನೆ ಮುಂಬೈನ ಅಂಬೋಲಿ ಪ್ರದೇಶದಲ್ಲಿ ನಡೆದಿದೆ.

    ಶಾಂತನುಕೃಷ್ಣ ಶೇಷಾದ್ರಿ ಮೃತ ವ್ಯಕ್ತಿ. ಕೌಂಟುಬಿಕ ಕಲಹದ ಹಿನ್ನೆಲೆಯಲ್ಲಿ ಶೇಷಾದ್ರಿಯನ್ನು ತಾಯಿ ಮತ್ತು ಮಗ ಸೇರಿ ಕೊಂದಿದ್ದಾರೆ. ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶೇಷಾದ್ರಿಯನ್ನು 7ನೇ ಮಹಡಿಯಿಂದ ಕೆಳಗೆ ಎಸೆದಿದ್ದಾರೆ. ನಂತರ ಪೊಲೀಸರ ಬಳಿಯೂ ಶೇಷಾದ್ರಿ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ತನಿಖೆ ಮಾಡಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಜೊತೆಗ ತನಿಖೆ ವೇಳೆ ತಾಯಿ ಮಗ ಸುಳ್ಳು ಹೇಳುತ್ತಿರುವುದು ಬಯಲಾಗಿದೆ. ಇವರಿಬ್ಬರು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಪೊಲೀಸರು ಮಹಿಳೆ ಮತ್ತು ಆಕೆಯ ಮಗನ ವಿರುದ್ಧ ದೂರು ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಹತ್ಯೆ

  • ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಬರ್ಬರ ಹತ್ಯೆ- ಕೊಲೆಗೆ ಸುಪಾರಿ ನೀಡಿದ್ದ ಹೆಂಡತಿ ಅಂದರ್

    ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿ ಬರ್ಬರ ಹತ್ಯೆ- ಕೊಲೆಗೆ ಸುಪಾರಿ ನೀಡಿದ್ದ ಹೆಂಡತಿ ಅಂದರ್

    ಹಾಸನ: ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜ.31 ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲುಹೊಸೂರು ಗ್ರಾಮದ ಬಳಿ ನಡೆದಿದೆ.

    ಕಾವಲುಹೊಸೂರು ಗ್ರಾಮದ ನಿವಾಸಿಯಾದ ಆನಂದ್ ಕುಮಾರ್ (42) ಕೊಲೆಯಾಗಿದ್ದ ವ್ಯಕ್ತಿ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಗೆ ಸುಪಾರಿ ನೀಡಿದ್ದ ಪತ್ನಿ, ಆಕೆಯ ಪ್ರಿಯಕರ ಹಾಗೂ ಇಬ್ಬರು ಹಂತಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲಾ, ಕಾಲೇಜುಗಳ ರಜೆ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ: ಬಿ.ಸಿ. ನಾಗೇಶ್

    ಪತ್ನಿ ಸುನಿತಾ ಹಾಗೂ ಪ್ರಿಯಕರ ನವೀನ್ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಬೆಂಗಳೂರಿನ ಇಬ್ಬರು ಹಂತಕರಿಗೆ ಸುಪಾರಿ ನೀಡಿದ್ದರು.

  • 17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!

    17ರ ಹರೆಯದ ಪತ್ನಿಯ ರುಂಡ ಕತ್ತರಿಸಿ ಬೀದಿಯಲ್ಲಿ ಪ್ರದರ್ಶಿಸಿದ ಪಾಪಿ ಪತಿ..!

    ಟೆಹರಾನ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಕತ್ತರಿಸಿ ಬಳಿಕ ಆ ತಲೆಯನ್ನು ಬೀದಿಯಲ್ಲಿ ಪ್ರದರ್ಶಿಸಿ ಬೆಚ್ಚಿಬೀಳಿಸುವಂತೆ ಮಾಡಿದ ಘಟನೆ ಇರಾನ್ ನಲ್ಲಿ ನಡೆದಿದೆ.

    ಇರಾನ್‍ನ ನೈರುತ್ಯ ಭಾಗದ ನಗರ ಅಹ್ವಾಜ್ ಎಂಬಲ್ಲಿ ಈ ಘಟನೆ ನಡೆದಿದೆ. ಮೃತಳನ್ನು ಮೋನಾ ಹೈದರಿ (17) ಎಂದು ಗುರುತಿಸಲಾಗಿದೆ. ಪತಿಯೇ ಮೋನಾಳನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕೃತಿ ಮೆರೆದಿದ್ದಾನೆ. ಈತನಿಗೆ ಸೋದರ ಮಾವನೂ ಸಾಥ್ ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಮಾಡಿದ್ದು ಯಾಕೆ..?
    ತನಗೆ ದ್ರೋಹ ಎಸಗಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶೀಲ ಶಂಕಿಸಿದ ವ್ಯಕ್ತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೆ ಆಕೆಯ ಶಿರವನ್ನು ಕತ್ತರಿಸಿ ಬೀದಿಯಲ್ಲಿ ಹಿಡಿದು ಪ್ರದರ್ಶಿಸಿದ್ದಾನೆ. ಈ ಘಟನೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. ಇದನ್ನೂ ಓದಿ: ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರದಲ್ಲಿ 6 ತಿಂಗಳು ಜೈಲು!

    ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಇರಾನ್‍ನಲ್ಲಿ ತೀವ್ರ ಸಂಚಲನವೇ ಸೃಷ್ಟಿಯಾಗಿದೆ. ಮಹಿಳಾ ವ್ಯವಹಾರಗಳ ಉಪಾಧ್ಯಕ್ಷೆ ಎನ್ಸೀಹ್ ಖಜಾಲಿ ಅವರು ಸಂಸತ್ತಿನಲ್ಲಿ ಪ್ರಕರಣ ಸಂಬಂಧ ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ಇಂತಹ ಪ್ರಕರಣಗಳನ್ನು ತಡೆಯಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರಿಗೆ ದೊಣ್ಣೆಯಿಂದ ಥಳಿಸಿದ ಗ್ರಾಮಸ್ಥರು!

    ಹೆಸರಾಂತ ಸ್ತ್ರೀವಾದಿ ಚಲನಚಿತ್ರ ನಿರ್ಮಾಪಕಿ ತಹ್ಮಿನೆ ಮಿಲಾನಿ ತಮ್ಮ ಇನ್‍ಸ್ಟಾ ಖಾತೆಯಲ್ಲಿ ಮೋನಾ ಅಜ್ಞಾನಕ್ಕೆ ಬಲಿಯಾಗಿದ್ದಾರೆ. ಈ ಅಪರಾಧಕ್ಕೆ ನಾವೆಲ್ಲರೂ ಜವಾಬ್ದಾರರು ಎಂದು ಬರೆದುಕೊಂಡಿದ್ದಾರೆ. ಇರಾನ್‍ನಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ತಡೆಯಲು ಮದುವೆಗೆ ಕಾನೂನಿನ ವಯಸ್ಸನ್ನು 13ಕ್ಕೆ ನಿಗದಿ ಮಾಡಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ ಮೋನಿ ಹೈದರಿ 12 ವರ್ಷವಿದ್ದಾಗಲೇ ವಿವಾಹವಾಗಿದ್ದು, ಮೂರು ವರ್ಷದ ಮಗ ಆಕೆಗಿದ್ದಾನೆ.

  • ಹೆಂಡ್ತಿ ಪವರ್, ಗಂಡನ ದರ್ಬಾರ್- ಪತ್ನಿಯ ಅಧಿಕಾರ ದುರ್ಬಳಕೆಗೆ ಗ್ರಾಮಸ್ಥರು ಗರಂ

    ಹೆಂಡ್ತಿ ಪವರ್, ಗಂಡನ ದರ್ಬಾರ್- ಪತ್ನಿಯ ಅಧಿಕಾರ ದುರ್ಬಳಕೆಗೆ ಗ್ರಾಮಸ್ಥರು ಗರಂ

    ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳು ಕೆಲಸ ಮಾಡದಿರೋ ಕ್ಷೇತ್ರವೇ ಇಲ್ಲ. ಪುರುಷರಿಗಿಂತ ನಾವೇನ್ ಕಮ್ಮಿ ಇಲ್ಲ ಅಂತಾ ಸಾಬೀತು ಮಾಡಿ ತೋರ್ಸಿತ್ತಿದ್ದಾರೆ. ಆದರೆ ಇಲ್ಲೊಬ್ಬ ಆಸಾಮಿ ಹೆಂಡ್ತಿ ಅಧಿಕಾರ ದುರುಪಯೋಗಿಸಿಕೊಂಡು ಅಂಧಾದರ್ಬಾರ್ ಮಾಡ್ತಿದ್ದಾನೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬಿದರೆಕೆರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪ ಮಹಿಳಾ ಮೀಸಲು ಕ್ಷೇತ್ರದಿಂದ ಗೆದ್ದು ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿ ಹೆಸರಿಗೆ ಮಾತ್ರ ಪುಷ್ಪಾ ಅಧ್ಯಕ್ಷೆ. ಆದರೆ ಅಧಿಕಾರ ಎಲ್ಲಾ ಆಕೆಯ ಪತಿ ಸಚಿನ್‍ರದ್ದೇ. ಗ್ರಾ.ಪಂಚಾಯ್ತಿಯ ಎಲ್ಲಾ ಸಭೆ ಸಮಾರಂಭಗಳಲ್ಲಿ ಈತ ಹೇಳಿದ್ದೇ ವೇದವಾಕ್ಯ. ಮನೆ ಮಂಜೂರು, ಕಾಮಗಾರಿ ವಿಚಾರದಲ್ಲೂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ತಾರಂತೆ. ಹೀಗಾಗಿ ಅಘೋಷಿತ ಅಧ್ಯಕ್ಷ ಸಚಿನ್ ವಿರುದ್ಧ ಗ್ರಾಮಸ್ಥರು ಕೆಂಡಾಮಂಡಲರಾಗಿದ್ದಾರೆ.

    ಸಚಿನ್ ಅಂಧಾದರ್ಬಾರ್ ಬಗ್ಗೆ ಜಿ.ಪಂ ಸಿಇಒ, ಡಿಸಿ ಗಮನಕ್ಕೂ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಶಾಸಕ ಚಂದ್ರಪ್ಪನ ಬೆಂಬಲಿಗ ಅಂತಾ ಅಹಂಕಾರದಲ್ಲಿ ಮೆರೆಯುತ್ತಿದ್ದಾರಂತೆ. ಹೀಗಾಗಿ ಸಚಿನ್ ವರ್ತನೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಚಿನ್ ದೌರ್ಜನ್ಯಕ್ಕೆ ಬ್ರೇಕ್ ಹಾಕ್ಬೇಕು, ಇಲ್ಲದಿದ್ರೆ ಪುಷ್ಪಾ ಸದಸ್ಯತ್ವ ರದ್ದು ಮಾಡ್ಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

    ಒಟ್ಟಿನಲ್ಲಿ ಪತ್ನಿಯ ಅಧಿಕಾರ ದುರ್ಬಳಕೆ ಮಾಡಿಕೊಳ್ತಿರೋ ಸಚಿನ್ ವರ್ತನೆ ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಆದಷ್ಟು ಬೇಗ ಅಂಧಾದರ್ಬಾರ್ ಗೆ ಕಡಿವಾಣ ಹಾಕಿ ನ್ಯಾಯ ಸಿಗ್ಲಿ ಅನ್ನೋದೇ ಎಲ್ಲರ ಬೇಡಿಕೆಯಾಗಿದೆ.

  • ವೈಫ್ ಸ್ವಾಪಿಂಗ್ ದಂಧೆ – ಗಂಡನ ವಿಲಕ್ಷಣ ಬಯಕೆಗೆ ಹೆಂಡತಿಯ ಸಾಥ್

    ವೈಫ್ ಸ್ವಾಪಿಂಗ್ ದಂಧೆ – ಗಂಡನ ವಿಲಕ್ಷಣ ಬಯಕೆಗೆ ಹೆಂಡತಿಯ ಸಾಥ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೈಫ್ ಸ್ವಾಪಿಂಗ್ ದಂಧೆ ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಪತಿ ವಿನಯ್ ಕುಮಾರ್ ಪತ್ನಿಯನ್ನು ಫ್ಯಾಂಟಸಿ ಸೆಕ್ಸ್‌ಗೆ ಬಳಸಲು ಪ್ಲಾನ್ ಮಾಡಿದ್ದ. ವಿನಯ್ ತನ್ನ ಪತ್ನಿ ಇನ್ನೊಬ್ಬನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನ ನೋಡಲು ಬಯಸುತ್ತಿದ್ದನಂತೆ. ಅವನ ಈ ವಿಲಕ್ಷಣ ಬಯಕೆಗೆ ಪತ್ನಿಯು ಕೂಡಾ ಸಾಥ್ ನೀಡಿದ್ದಳು. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    ದಂಪತಿಯು ವೈಫ್ ಸ್ವಾಪಿಂಗ್ ದಂಧೆಗೆ ಸಾಮಾಜಿಕ ಜಾಲತಾಣದ ಮೂಲಕ ಸಮಾನ ಮನಸ್ಕರ ಹುಡುಕಾಟ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಟೆಲಿಗ್ರಾಂ ಖಾತೆ ತೆರೆದು ದಂಧೆಗೆ ಆಹ್ವಾನಿಸುತ್ತಿದ್ದರು. ವಿನಯ್ ಎಲೆಕ್ಟ್ರಾನಿಕ್ ಶಾಪ್ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದನು. ತನ್ನ ಸಹದ್ಯೋಗಿ ಯುವತಿಯನ್ನೇ ಪ್ರೀತಿಸಿ ವಿವಾಹವಾಗಿದ್ದ ಅವನು ಪತ್ನಿಯನ್ನು ಫ್ಯಾಂಟಸಿ ಸೆಕ್ಸ್‌ಗೆ ಬಳಸಲು ಪ್ಲಾನ್ ಮಾಡಿದ್ದನು. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್‌ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ

    ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿನ ಈ ವಿಲಕ್ಷಣ ಆಫರ್ ಕಂಡು ಸಕ್ರಿಯರಾಗಿದ್ದರು. ಈಗಾಗಲೇ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿ ವಿನಯ್‍ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

  • ಮಗನ ಜೊತೆ ಸೇರಿ ಪತಿಯನ್ನೇ ಅಪಹರಿಸಿ 22 ಬಾರಿ ಇರಿದು ಕೊಂದ್ಳು..!

    ಮಗನ ಜೊತೆ ಸೇರಿ ಪತಿಯನ್ನೇ ಅಪಹರಿಸಿ 22 ಬಾರಿ ಇರಿದು ಕೊಂದ್ಳು..!

    ಬೆಂಗಳೂರು: ಪತ್ನಿಯೊಬ್ಬಳು 20 ಗುಂಟೆ ಜಮೀನಿಗಾಗಿ ಮಗನ ಜೊತೆಗೆ ಸೇರಿ ಪತಿಯನ್ನೇ ಕಿಡ್ನಾಪ್ ಮಾಡಿ ಚಾಕುವಿನಿಂದ ಇರಿದು ಕೊಂದ ಘಟನೆ ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.

    ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. ಮೃತನು ಎರಡು ಮದುವೆ ಆಗಿದ್ದು, ಇಬ್ಬರು ಪತ್ನಿಯರಿಗೆ ಆಸ್ತಿ ಹಂಚಿಕೆ ಮಾಡುವ ವೇಳೆ ಇಪ್ಪತ್ತು ಗುಂಟೆ ಜಮೀನು ವಿಚಾರವಾಗಿ ವಿವಾದವಾಗಿತ್ತು. ಇದೇ ವಿಚಾರಕ್ಕೆ ಆರೋಪಿಗಳು ಮತ್ತು ಚನ್ನಿಗರಾಯಪ್ಪನ ಮಧ್ಯೆ ಗಲಾಟೆ ನಡೆದು ಪತಿಯನ್ನು ಕಿಡ್ನಾಪ್ ಮಾಡಿದ್ದರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ – ಇಬ್ಬರು ಮಹಿಳೆಯರ ಜೊತೆ ಓರ್ವ ಅರೆಸ್ಟ್

    ಕಿಡ್ನಾಪ್ ಮಾಡಿ ಕಾರಿನಲ್ಲಿ 22 ಬಾರಿ ಚಾಕುವಿನಿಂದ ಕೊಲೆ ಮಾಡಿ ಬೆಂಕಿ ಹಾಕಿ ಸುಟ್ಟಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚನ್ನಿಗರಾಯಪ್ಪ ಪತ್ನಿ ಯಶೋಧ, ಮಗ ನಿಖಿಲ್, ಮಂಜುನಾಥ್ ಹಾಗೂ ವಿಶ್ವಾಸ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ- ನೀರು ಅಂತ ಎಣ್ಣೆ ಕಾಯಿಸಿ ಪತ್ನಿ ಮೇಲೆ ಎರಚಿದ್ದವ ಅರೆಸ್ಟ್

  • ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange  ಇಲ್ಲವೆಂದ ಪತ್ನಿ..!

    ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

    ವೆಲ್ಲಿಂಗ್ಟನ್: ಐರಿಶ್ ಮಹಿಳೆಯೊಬ್ಬರು ಗಂಡನನ್ನು ಮಾರಾಟಕ್ಕಿಟ್ಟು, ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಐರಿಶ್ ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ವೆಬ್‍ನಲ್ಲಿ ‘ಮಾರಾಟ’ ಮಾಡುತ್ತಿದ್ದು, ಇವರನ್ನು ಖರೀದಿಸಿದ ನಂತರ ಯಾವುದೇ ರೀತಿಯಲ್ಲಿ ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಪತಿಯ ಸಂಪೂರ್ಣ ವಿವರವಿದ್ದು, ನನ್ನ ಪತಿಯ ಹೆಸರು ಜಾನ್, ಎತ್ತರ 6.1, 37 ವರ್ಷ, ಕೃಷಿಕ, ಶೂಟಿಂಗ್ ಮತ್ತು ಮೀನುಗಾರಿಕೆ ಸಹವರ್ತಿ ಎಂದು ಬರೆದಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಏನಿದು ವಿಚಿತ್ರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಜಾನ್‍ನನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದಾರೆ. ಇದನ್ನೂ ಓದಿ: ಕರಡಿ ಬಾಯಿಗೆ 3 ವರ್ಷದ ಮಗಳನ್ನೇ ನೂಕಿದ ತಾಯಿ!

    ಕಾರಣವೇನು?
    ಐರಿಶ್ ಮಹಿಳೆ ಲಿಂಡಾ ಮ್ಯಾಕ್‍ಅಲಿಸ್ಟರ್ ಟ್ರೇಡ್ ಮಿ ಎಂಬ ವೆಬ್ ನಲ್ಲಿ ಪತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ಜಾನ್ ಮ್ಯಾಕ್‍ಅಲಿಸ್ಟರ್, ನನ್ನನ್ನು ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಮೀನುಗಾರಿಕೆ ಮಾಡಿ ಎಂದು ಹೇಳಿ ಹೊರಟು ಹೋಗಿದ್ದಾರೆ ಎಂದು ಬರೆದುಕೊಂಡು ಜಾಹೀರಾತು ಕೊಟ್ಟಿದ್ದಾರೆ.

    ಈ ಪಟ್ಟಿಯಲ್ಲಿ ಲಿಂಡಾ, ಜಾನ್ ಬಗ್ಗೆ ಪೂರ್ಣ ವಿವರವನ್ನು ಕೊಟ್ಟಿದ್ದಾರೆ. ಇವರಿಗೆ ಶೂಟಿಂಗ್ ಮತ್ತು ಮೀನುಗಾರಿಕೆಯ ಹಲವು ಮಾಲೀಕರ ಪರಿಚಯವಿದೆ. ಆದರೆ ನೀವು ಇವರನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೆ ನಿಷ್ಠರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜಾನ್ ಅವರನ್ನು ಖರೀದಿಸಿದ ಮೇಲೆ ಯಾವುದೇ ರಿಟನ್ರ್ಸ್ ಅಥವಾ ವಿನಿಮಯವಿಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

    ಜಾನ್ ಹೆಚ್ಚು ಕೆಲಸದ ಕಡೆಯೇ ಗಮನ ಕೊಡುವುದು ನನ್ನನ್ನು ಕಾಡುತ್ತಿದೆ. ಮಕ್ಕಳಿಗೆ ರಜೆ ಇದ್ದಾಗಲೂ, ಮನೆಯಲ್ಲಿ ಮಲಗಿದ್ದಾಗಲೂ ಅವರು ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಜಾಹೀರಾತಿನಲ್ಲಿ ವಿವರಿಸಿದ್ದಾರೆ. ದಂಪತಿ 2019 ರಲ್ಲಿ ಐರ್ಲೆಂಡ್‍ನಲ್ಲಿ ವಿವಾಹವಾದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಜಾನ್ ಅವರಿಗೆ ವಿಷಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆದರೆ ಜಾನ್ ಸ್ನೇಹಿತರು, ನಿನ್ನನ್ನು ಲಂಡಾ ಹರಾಜಿಗೆ ಇಟ್ಟಿದ್ದಾಳೆ ಎಂದು ಜಾನ್‍ಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಾನ್, ಏನಿಂದು ತಮಾಷೆ ಎಂದು ನಕ್ಕಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

    ಲಿಂಡಾ ಅವರ ಪಟ್ಟಿಯಲ್ಲಿ ಜಾನ್ ಬಗ್ಗೆ ಪೂರ್ಣ ವಿವರವಿದ್ದು, ಬಿಡ್ಡಿಂಗ್ ಕೆಲವೇ ಗಂಟೆಗಳಲ್ಲಿ 5,000 ರೂ. ಗೆ ಏರಿತು. ಖರೀದಿದಾರರು ತಮ್ಮ ಗಂಡನಾಗಬಹುದಾದ ಜಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದರು. ಜಾನ್ ಅವರಿಗೆ ಯಾವುದದರೂ ದುರ್ಗುಣಗಳಿದೆಯಾ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಲಿಂಡಾ ತಾಳ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ

    ಲಿಂಡಾ ಅವರು ಹರಾಜು ವೆಬ್‍ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರೇಡ್ ಮಿ ಪೋಸ್ಟ್ ತೆಗೆದುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರೇಡ್ ಮಿ ಸಿಬ್ಬಂದಿ, ಸಂಗಾತಿಯನ್ನೆ ಮಾರಾಟಕ್ಕೆ ಇಟ್ಟಿದ್ದು ಇದೇ ಮೊದಲಬಾರಿ. ನಮಗೂ ಇದು ವಿಚಿತ್ರ ಎನ್ನಿಸಿದೆ. ನಾವು ಜನರ ಮಸ್ತಿ-ಮೋಜನ್ನು ಇಷ್ಟಪಡುತ್ತೇವೆ. ಟ್ರೇಡ್ ಮಿ ಮೂಲಕ ಜನರು ಉತ್ತಮ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ