ಚಿಕ್ಕಬಳ್ಳಾಪುರ: ಪ್ರತಿನಿತ್ಯ ಕುಡಿದು ಬಂದು ವಿನಾಕಾರಣ ಗಲಾಟೆ ಮಾಡ್ತಿದ್ದ ಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿ ಕೊಲೆ ಮಾಡಿದ್ದಾಳೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ.
ಜಕ್ಕಸಂದ್ರ ಗ್ರಾಮದ ಹನುಮಯ್ಯ(35) ಕೊಲೆಯಾದ ವ್ಯಕ್ತಿ. ಹನುಮಯ್ಯ ಪತ್ನಿ ಭಾಗ್ಯಳನ್ನು ಕುಡಿದುಬಂದು ಯಾವಾಗಲೂ ಹಿಂಸೆ ಕೊಡುತ್ತಿದ್ದ. ಇದರಿಂದ ಬೇಸತ್ತ ಭಾಗ್ಯ, ಹನುಮಯ್ಯ ಮನೆಯಲ್ಲಿ ಮಲಗಿದ ಮೇಲೆ ದೊಡ್ಡ ಸೈಜುಗಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ. ನಂತರ ಕೊಲೆ ಮಾಡಿದ್ದು ಯಾರಿಗೂ ಗೊತ್ತಾಗಬಾರದು ಅಂತ ಸೈಜುಗಲ್ಲನ್ನು ಮನೆ ಪಕ್ಕದ ಬಾವಿಯಲ್ಲಿ ಬಿಸಾಡಿದ್ದಾಳೆ. ಇದನ್ನೂ ಓದಿ: ಡ್ಯಾನ್ಸ್ ಕಲಿಸುವುದಾಗಿ ಹೇಳಿ ಕ್ಲಾಸ್‍ಗೆ ಕರೆಸಿ ಪ್ರೀತಿಸುಂತೆ ಪಿಡಿಸಿದ ಯುವಕ

ಬೆಳಗ್ಗೆ ‘ಎದ್ದು ಅಯ್ಯೋ ನನ್ನ ಗಂಡನನ್ನ ಯಾರೋ ಕೊಲೆ ಮಾಡಿದ್ದಾರೆ’ ಅಂತ ಊರೆಲ್ಲಾ ಅರಚಾಡಿ ಕಿರುಚಾಟ ಮಾಡಿ ನಾಟಕ ಮಾಡಿದ್ದಾಳೆ. ವಿಷಯ ತಿಳಿದು ಗ್ರಾಮಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭಾಗ್ಯಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ವಿಷಯ ಬಾಯ್ಬಿಟ್ಟಿದ್ದಾಳೆ.

ಪ್ರಸ್ತುತ ಭಾಗ್ಯಳನ್ನ ವಶಕ್ಕೆ ಪಡೆದಿರುವ ಪೊಲೀಸರು, ಮೃತದೇಹವನ್ನ ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಭಿಕ್ಷುಕನ ಜೊತೆ ಪತ್ನಿ ರೊಮ್ಯಾನ್ಸ್ ನೋಡಿ ಬೆಚ್ಚಿಬಿದ್ದ ಪತಿ













![Personal trainer finds church-going wife 'cheating on him' with homeless man [Video] | Daily Mail Online](https://i.dailymail.co.uk/1s/2022/03/19/13/55549451-0-image-a-13_1647695616782.jpg)













