Tag: Wife

  • ಕಿಚಡಿಯಲ್ಲಿ ಉಪ್ಪು ಜಾಸ್ತಿಯಾಗಿದ್ದಕ್ಕೆ ಪತ್ನಿ ಕತ್ತು ಹಿಸುಕಿ ಕೊಂದ

    ಕಿಚಡಿಯಲ್ಲಿ ಉಪ್ಪು ಜಾಸ್ತಿಯಾಗಿದ್ದಕ್ಕೆ ಪತ್ನಿ ಕತ್ತು ಹಿಸುಕಿ ಕೊಂದ

    ಮುಂಬೈ: ಬೆಳಗ್ಗೆ ನೀಡಿದ್ದ ಟಿಫನ್‍ನಲ್ಲಿ ಉಪ್ಪು, ಖಾರ ಅಧಿಕವಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ 40 ವರ್ಷದ ಪತ್ನಿಯ ಕತ್ತು ಹಿಸುಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ಬೆಳಗ್ಗೆ ಭಾಯಂದರ್ ಪೂರ್ವದ ಫಟಕ್ ರಸ್ತೆ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಮೃತ ದುರ್ದೈವಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. 46 ವರ್ಷದ ಆರೋಪಿ ನಿಲೇಶ್ ಘಾಘ್ ಪತ್ನಿ ಕಿಚಡಿ ಮಾಡಿ ಬೆಳಗಿನ ಉಪಹಾರವಾಗಿ ನೀಡಿದ್ದರು. ಕಿಚಡಿಯಲ್ಲಿ ಹೆಚ್ಚು ಉಪ್ಪು ಇದ್ದಿದ್ದರಿಂದ ಕೋಪಗೊಂಡ ನಿಲೇಶ್ ಘಾಘ್ ಉದ್ದನೆಯ ಬಟ್ಟೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಘಟನೆ ಸಂಬಂಧ ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಕಮಿಷನರೇಟ್‍ನ ಅಧಿಕಾರಿ ಮೀರಾ ಭಯಂದರ್-ವಸಾಯಿ ವಿರಾರ್ ತಿಳಿಸಿದ್ದಾರೆ. ಇದನ್ನೂ ಓದಿ: 4ರ ಬಾಲಕಿ ಮೇಲೆ 9 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ

    Kichadi

    ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಭಯಂದರ್‌ನ ನವಘರ್ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ

    POLICE JEEP

    ಗುರುವಾರ ಕೂಡ ಇದೇ ರೀತಿ ಮಹಿಳೆಯೊಬ್ಬಳು ಚಹಾದ ಜೊತೆಗೆ ಟಿಫನ್ ನೀಡಲಿಲ್ಲ ಎಂಬ ಕಾರಣಕ್ಕೆ ಆಕೆಯ ಮಾವ ಮಹಿಳೆ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದನು. ರಾಬೋಡಿ ಪ್ರದೇಶದ ನಿವಾಸಿಯಾಗಿದ್ದ 42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿ ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

  • ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿ- ವಿಚ್ಛೇದನಕ್ಕೆ ಮುಂದಾದ ಪತ್ನಿ

    ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿ- ವಿಚ್ಛೇದನಕ್ಕೆ ಮುಂದಾದ ಪತ್ನಿ

    ಲವು ವರ್ಷಗಳ ಹಿಂದೆ ವೀರ್ಯ ದಾನ ಮಾಡಿ ಹಣ ಸಂಪಾದಿಸುತ್ತಿದ್ದ ಪತಿಯ ಕುರಿತಾಗಿ ತಿಳಿದು ಬೇಸರಗೊಂಡ ಮಹಿಳೆ, ಆತನಿಂದ ದೂರವಾಗುವ ನಿರ್ಧಾರ ಮಾಡಿರುವ ಘಟನೆಯೊಂದು ಸುದ್ದಿಯಾಗಿದೆ.

    ಪತಿ ವೀರ್ಯ ದಾನಿಯಾಗಿದ್ದೇನೆ ಎಂಬ ಸತ್ಯವನ್ನು ಮರೆಮಾಚುವ ನಿರ್ಧಾರ ಆಕೆಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಮನನೊಂದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

    ಈ ಕುರಿತಾಗಿ ಮಾತನಾಡಿದ ಆತ, ನಾನು ಕಾಲೇಜಿನಲ್ಲಿದ್ದಾಗ ವೀರ್ಯ ದಾನಿಯಾಗಿದ್ದೆ. ನಾನು ಮುಖ್ಯವಾಗಿ ಹಣ ಗಳಿಸಲು ಇದನ್ನು ಮಾಡಿದ್ದೆ. ಮಕ್ಕಳಿಗಾಗಿ ಕಷ್ಟಪಡುತ್ತಿರುವ ಜನರಿಗೆ ಸಹಾಯ ಮಾಡಬೇಕೆಂದು ವೀರ್ಯ ದಾನ ಮಾಡಲು ಶುರು ಮಾಡಿದೆ. ಕಾಲೇಜು ಮುಗಿದ ಬಳಿಕ ವೀರ್ಯಾಣು ದಾನ ಮಾಡುವುದನ್ನು ಕೂಡ ನಿಲ್ಲಿಸಿದೆ. ಆದರೆ, ಕೆಲವು ವರ್ಷಗಳ ನಂತರ ಮತ್ತೆ ಹಣಕಾಸಿನ ಸಮಸ್ಯೆ ಎದುರಾದಾಗ ಮತ್ತೆ ವೀರ್ಯ ದಾನ ಮಾಡಲು ಆರಂಭಿಸಿದೆ. ಈ ವಿಷಯವನ್ನು ನನ್ನ ಹೆಂಡತಿಯಿಂದ ಮುಚ್ಚಿಟ್ಟಿದ್ದೆ. ನನ್ನ ಗೆಳೆಯರಿಂದ ಆಕೆಗೆ ಈ ವಿಷಯ ತಿಳಿದು ಆಕೆ ಆಘಾತಕ್ಕೊಳಗಾದಳು. ನಾನು ನನ್ನ ಹೆಂಡತಿಗೆ ನಮ್ಮ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾವುದೇ ಮಕ್ಕಳನ್ನು ಹೊಂದಿಲ್ಲ. ಆದರೆ ನನ್ನ ಪತ್ನಿ, ನಾನು ನಂಬಿಕೆ ದ್ರೋಹ ಮಾಡಿದ್ದೇನೆ ಎಂಬ ಕಾರಣಕ್ಕೆ ನನ್ನನ್ನು ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    ನಾನು ಕಾಲೇಜಿನ ಅಂತಿಮ ವರ್ಷದಲ್ಲಿದ್ದಾಗ ಸ್ವಲ್ಪ ಹೆಚ್ಚುವರಿ ಹಣವನ್ನು ಗಳಿಸುವ ಸಲುವಾಗಿ ನಾನು ವೀರ್ಯ ದಾನ ಮಾಡಿದ್ದೆ. ಈ ವಿಷಯವನ್ನು ಯಾರಿಗೂ ಹೇಳಿಲಿಲ್ಲ. ಆರು ವರ್ಷಗಳ ಹಿಂದೆ ಮದುವೆಯಾಗಿ, ಮಕ್ಕಳೊಂದಿಗೆ ಈಗ ಸುಖವಾಗಿದ್ದು, ನಾನು ಮದುವೆಯಾಗುವ ಮೊದಲು ಹಳೆಯ ಸಹಪಾಠಿಗೆ ವೀರ್ಯ ದಾನ ಮಾಡಿದ್ದೆ. ಆ ವಿಷಯ ಈ ಗೊತ್ತಾಗಿದ್ದರಿಂದ ನನ್ನ ಹೆಂಡತಿ ಡೈವೋರ್ಸ್ ನೀಡಿ ದೂರವಾಗಲೂ ಇಚ್ಚಿಸಿದ್ದಾಳೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

  • ಕೈಗಾಡಿಯಲ್ಲಿ ಮಲಗಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ

    ಕೈಗಾಡಿಯಲ್ಲಿ ಮಲಗಿಸಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ವೃದ್ಧ

    ಲಕ್ನೋ: ವಯಸ್ಸಾದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ.

    ವೀಡಿಯೊದಲ್ಲಿ ಏನಿದೆ?: ಚಿಲ್ಖರ್ ಬ್ಲಾಕ್‍ನ ಗ್ರಾಮದ ನಿವಾಸಿ ಸಕುಲ್ ಪ್ರಜಾಪತಿ ಅವರು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತ್ನಿ ಜೋಗ್ನಿ (55) ಅವರನ್ನು ಗಾಡಿಯಲ್ಲಿ ಮಲಗಿಸಿಕೊಂಡು ತನ್ನ ಕೈಗಳಿಂದ ಎಳೆಯುತ್ತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್

    ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಮತ್ತೆ ಕೋರ್ಟ್ ಸಂಕಷ್ಟ: ಫೋನ್ ಕಿತ್ತುಕೊಂಡ ಪ್ರಕರಣಕ್ಕೆ ಸಲ್ಲು ಕಟಕಟೆಯಲ್ಲಿ

    ಮಾರ್ಚ್ 28 ರಂದು, ಪ್ರಜಾಪತಿ ತನ್ನ ಹೆಂಡತಿಯನ್ನು ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿನ ವೈದ್ಯರು ಕೆಲವು ಔಷಧಿಗಳನ್ನು ನೀಡಿ ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಚಿಕಿತ್ಸೆ ಫಲಕಾರಿಯಾಗದೆ ಜೋಗ್ನಿ ಆಸ್ಪತ್ರೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಶವವನ್ನು ಮನೆಗೆ ಕೊಂಡೊಯ್ಯಲು ಅಂಬುಲೆನ್ಸ್ ನೀಡಲು ಆಸ್ಪತ್ರೆ ನಿರಾಕರಿಸಿತು, ರಾತ್ರಿ ಸೇವೆ ಲಭ್ಯವಿಲ್ಲ ಎಂದು ಹೇಳಿದರು. ನಂತರ 1,100 ರೂ.ಗೆ ಖಾಸಗಿ ಅಂಬುಲೆನ್ಸ್ ಬಾಡಿಗೆಗೆ ಪಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ವಯಸ್ಸಾದ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಫೋಟೋವನ್ನು ಟ್ಯಾಗ್ ಮಾಡಿ, ಟ್ವೀಟ್‍ನಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಖರ್ಚು ಮಾಡುತ್ತಿಲ್ಲ. ಯುಪಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗಳ ಸುಳ್ಳು ಜಾಹೀರಾತುಗಳಿಗೆ ಖರ್ಚು ಮಾಡಲಾಗುತ್ತಿರುವ ಸ್ವಲ್ಪ ಭಾಗವನ್ನು ವೈದ್ಯಕೀಯ ಸೇವೆಗಳಿಗೆ ವಿನಿಯೋಗಿಸಬೇಕು. ಸ್ಟ್ರೆಚರ್ ಮತ್ತು ಆಂಬ್ಯುಲೆನ್ಸ್‌ಗಳ ಕೊರತೆಯಿಂದ ಜನರು ಸಾಯುತ್ತಿದ್ದಾರೆ ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

  • ಪತ್ನಿ ಬಯಕೆ ತೀರಿಸಲು ಕಳ್ಳತನಕ್ಕಿಳಿದ ಪತಿ- ವಿಮಾನದಲ್ಲೇ ಬಂದು ಕೈಚಳಕ ತೋರಿಸ್ತಿದ್ದ ಕಿಲಾಡಿ ಅರೆಸ್ಟ್

    ಪತ್ನಿ ಬಯಕೆ ತೀರಿಸಲು ಕಳ್ಳತನಕ್ಕಿಳಿದ ಪತಿ- ವಿಮಾನದಲ್ಲೇ ಬಂದು ಕೈಚಳಕ ತೋರಿಸ್ತಿದ್ದ ಕಿಲಾಡಿ ಅರೆಸ್ಟ್

     ಬೆಂಗಳೂರು: ಪ್ರೀತಿಗಾಗಿ, ನಂಬಿದವಳಿಗಾಗಿ ಕೆಲವರು ಯಾವ ತ್ಯಾಗಕ್ಕೂ ಕೂಡ ಸಿದ್ಧರಿರ್ತಾರೆ. ಅಂತೆಯೇ ಇಲ್ಲೊಬ್ಬ ಪ್ರೀತಿಸಿ ಮದುವೆಯಾದವಳನ್ನ ಚೆನ್ನಾಗಿ ನೋಡ್ಕೊಬೇಕು ಅಂತಾ ರಾಜ್ಯ ಬಿಟ್ಟು ರಾಜ್ಯಕ್ಕೆ ಹೋಗಿ ಸರಗಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಆರೋಪಿಯನ್ನು ಉಮೇಶ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ರಾಜಸ್ಥಾನದವನು. ಈತನಿಗೆ ಪತ್ನಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಲವ್ ಮ್ಯಾರೇಜ್ ಆಗಿದ್ದ ಈತನಿಗೆ ಪತ್ನಿ ಏನೇ ಕೇಳಿದ್ರೂ ಅವ್ಳ ಆಸೆ ಈಡೇರಿಸೋ ಖಯಾಲಿ. ಹೆಂಡ್ತಿ ಮೇಲಿನ ಪ್ರೀತಿಗೆ ಹಿಡಿದಿದ್ದು ಕಳ್ಳತನದ ದಾರಿ.

    ಆರೋಪಿ ಉಮೇಶ್ ಅಂತರಾಜ್ಯ ಖದೀಮ. ರಾಜಸ್ಥಾನದಿಂದ ವಿಮಾನದಲ್ಲೇ ಬರುತ್ತಿದ್ದ ಇವನು ಒಮ್ಮೆ ಬೆಂಗಳೂರಲ್ಲಿ, ಮತ್ತೊಮ್ಮೆ ಹೈದ್ರಾಬಾದಲ್ಲಿ ತನ್ನ ಕೈಚಳಕ ತೋರಿಸ್ತಿದ್ದ. ಬೈಕ್ ಕಳ್ಳತನ ಮಾಡೋದು. ಅದೇ ಬೈಕಲ್ಲಿ ಬಂದು ಮಾಂಗಲ್ಯ ಸರ ಎಗರಿಸಿ ಎಸ್ಕೇಪ್ ಆಗ್ತಿದ್ದ. ಹೀಗೆ ಇವನ ವಿರುದ್ಧ ಬೆಂಗಳೂರಿನಲ್ಲಿ 7, ರಾಜಸ್ಥಾನದಲ್ಲಿ 18 ಹಾಗೂ ನೆರೆಯ ಹೈದರಾಬಾದ್‍ನಲ್ಲಿ 8 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಜಿಮ್‍ನಲ್ಲಿ ಮಹಿಳೆ ಸಾವಿನ ಕಾರಣ ಬಯಲು – ಮೆದುಳಿನ ರಕ್ತನಾಳ ಛಿದ್ರಗೊಂಡು ಸಾವು

    ಇತ್ತೀಚೆಗೆ ಸಿ.ಕೆ ಅಚ್ಚುಕಟ್ಟು, ಮಾರತಹಳ್ಳಿ, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಸರಣಿ ಸರಗಳ್ಳತನವಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು 700 ಕ್ಕೂ ಹೆಚ್ಚು ಸಿಸಿಟಿವಿಯನ್ನ ತಡಕಾಡಿದ್ರು. ಎಷ್ಟೇ ಕಷ್ಟ ಪಟ್ಟು ತನಿಖೆ ನಡೆಸಿದ್ರು ಸರಗಳ್ಳನ ಒಂದೇ ಒಂದು ಮಾಹಿತಿ ಸಿಕ್ಕಿರಲಿಲ್ಲ ಕೊನೆಗೆ ಮಲ್ಲೇಶ್ವರಂನಲ್ಲಿ ಕಳುವಾಗಿದ್ದ ಬೈಕ್‍ನ ಬೆನ್ನು ಬಿದ್ದ ಪೊಲೀಸರಿಗೆ ಖದೀಮನ ಸುಳಿವು ಸಿಕ್ಕಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಸದ್ಯ ಆರೋಪಿಯನ್ನ ಜೈಲಿಗಟ್ಟಿದ್ದಾರೆ.

    ಈ ಉಮೇಶ್ ಅಪ್ರಾಪ್ತೆಯನ್ನ ಮದುವೆಯಾದ ಕಾರಣಕ್ಕೆ ಜೈಲು ಸೇರಿ ಕಂಬಿ ಸಹ ಎಣಿಸಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು, ಆರೋಪಿ ಬಳಿಯಿಂದ 4 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪತ್ತೆ – ರಕ್ತಸಿಕ್ತವಾಗಿ ಪತ್ತೆಯಾದ ಕಾರು

  • ಮಲಯಾಳಂ ನಟ ಜಗದೀಶ್ ಪತ್ನಿ ವಿಧಿವಶ

    ಮಲಯಾಳಂ ನಟ ಜಗದೀಶ್ ಪತ್ನಿ ವಿಧಿವಶ

    ತಿರುವನಂತಪುರಂ: ಖ್ಯಾತ ನಟ ಜಗದೀಶ್ ಅವರ ಪತ್ನಿ ಪಿ.ರೆಮಾ (61) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ತಿರುವನಂತಪುರಂ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ಮೆಡಿಸಿನ್ ವಿಭಾಗದ ಮಾಜಿ ಮುಖ್ಯಸ್ಥೆ ರೆಮಾ ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಸ್ವಯಂ ನಿವೃತ್ತಿ ಪಡೆದಿದ್ದರು. ಫೋರೆನ್ಸಿಕ್ ತಜ್ಞರಾಗಿ, ಡಾ. ಪಿ ರೆಮಾ ಅವರು ಕೇರಳದ ಹಲವಾರು ಅಪರಾಧ ಪ್ರಕರಣಗಳ ತನಿಖೆಯಲ್ಲಿ ತೊಡಗಿದ್ದರು. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಪ್ರಮುಖ ನಟನ ಪತ್ನಿಯಾಗಿರುವ ರೆಮಾ ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತು ಸಾಮಾಜಿಕ ಜಾಲತಾಣದ ಚಾನೆಲ್‍ವೊಂದರಲ್ಲಿ ಜಗದೀಶ್ ಅವರೊಂದಿಗಿನ ಹಿಂದಿನ ಸಂದರ್ಶನದಲ್ಲಿ, ಅವರು ನಾನು ಗೌಪ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ತೆರೆದುಕೊಂಡಿದ್ದರು. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

    ರೆಮಾ ಅವರ ಪುತ್ರಿ ರಮ್ಯಾ ಜಗದೀಶ್ ನಾಗರಕೋಯಿಲ್ ಮೆಡಿಕಲ್ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದು, ಮತ್ತೋರ್ವ ಪುತ್ರಿ ಸೌಮ್ಯ ಜಗದೀಶ್ ಮನೋವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ನರೇಂದ್ರನ್ ನಯ್ಯರ್ ಐಪಿಎಸ್ ಮತ್ತು ಡಾ. ಪ್ರವೀಣ್ ಪಣಿಕ್ಕರ್ ಇಬ್ಬರೂ ರೆಮಾ ಅವರ ಅಳಿಯಂದಿರಾಗಿದ್ದಾರೆ.

    ಕಾಮಿಡಿಯಲ್ಲಿ ಅಪ್ರತಿಮ ಒಲವು ಹೊಂದಿದ್ದ ನಟ ಜಗದೀಶ್ ಅವರು ‘ಮುತಾರಂಕುನ್ನು ಪಿಒ, ‘ಮಜ ಪೆಯ್ಯುನ್ನು ಮದ್ದಳೆ ಕೊಡುನ್ನು, ‘ಇನ್ ಹರಿಹರನಗರ’, ‘ಗಾಡ್‍ಫಾದರ್’, ಹೀಗೆ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ಪಾದ ಮತ್ತು ದಿ ಪ್ರೀಸ್ಟ್ ಸೇರಿದಂತೆ ಇತ್ತೀಚಿನ ಕೆಲವು ಮಲಯಾಳಂ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

    ಅವರು ತಮ್ಮ ಪತಿ-ನಟ ಜಗದೀಶ್ ಮತ್ತು ಇಬ್ಬರು ಪುತ್ರಿಯರಾದ ರಮ್ಯಾ ಮತ್ತು ಸೌಮ್ಯ ಅವರನ್ನು ಅಗಲಿದ್ದಾರೆ. ಪಿ ರೆಮಾ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ತೈಕಾಡ್ ಶಾಂತಿ ಕವಚದಲ್ಲಿ ನಡೆಯಲಿದೆ.

     

  • ಮನೆಯನ್ನೇ ಸ್ಮಶಾನ ಮಾಡಿದ ಪಾಪಿ – ಪತ್ನಿ, ಅಜ್ಜಿ, ತನ್ನ ಎರಡು ಮಕ್ಕಳನ್ನೆ ಕ್ರೂರವಾಗಿ ಕೊಂದ

    ಮನೆಯನ್ನೇ ಸ್ಮಶಾನ ಮಾಡಿದ ಪಾಪಿ – ಪತ್ನಿ, ಅಜ್ಜಿ, ತನ್ನ ಎರಡು ಮಕ್ಕಳನ್ನೆ ಕ್ರೂರವಾಗಿ ಕೊಂದ

    ಗಾಂಧಿನಗರ: ಪತಿ ತನ್ನ ಹೆಂಡತಿ, ಇಬ್ಬರು ಹದಿಹರೆಯದ ಮಕ್ಕಳು ಮತ್ತು ಹೆಂಡತಿಯ ಅಜ್ಜಿಯನ್ನು ಕೊಂದಿರುವ ಅಮಾನುಷ ಘಟನೆಯೊಂದು ಅಹಮದಾಬಾದ್‍ನಲ್ಲಿ ಬೆಳಕಿಗೆ ಬಂದಿದೆ.

    ಸೋನಾಲ್‍ಬೆನ್ ಗಾಯಕ್ವಾಡ್(37), ಅವರ ಮಗ ಗಣೇಶ್ (17), ಮಗಳು ಪ್ರಗತಿ(15) ಮತ್ತು ಸೋನಾಲ್‍ಬೆನ್ ಅವರ ಅಜ್ಜಿ ಸುಭದ್ರಾಬೆನ್(70) ಅವರನ್ನು ವಿನೋದ್ ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಮೇಲೆ ವಿನೋದ್ ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದ.  ಇದನ್ನೂ ಓದಿ:  ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

    ಸೋನಾಲ್‍ಬೆನ್ ಅವರ ತಾಯಿ ಸಂಜುಬೆನ್ ಅವರು ಪೊಲೀಸರನ್ನು ಸಂಪರ್ಕಿಸಿದ್ದು, ತನ್ನ ಮಗಳಿಗೆ ಫೋನ್ ರೀಚ್ ಆಗುತ್ತಿಲ್ಲ. ಮನೆಗೆ ಹೋಗಿ ನೋಡಿದರೆ ಬೀಗ ಹಾಕಲಾಗಿದೆ ಎಂದು ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆ ಪೊಲೀಸರು ಅಹಮದಾಬಾದ್‍ನ ಓಧವ್ ಪ್ರದೇಶದ ಸೋನಾಲ್‍ಬೆನ್ ಅವರ ಮನೆ ಬೀಗ ಒಡೆದು ನೋಡಿದಾಗ ಅರೆ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದೆ.

    ಶವ ಪತ್ತೆಯಾದ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಆರೋಪಿಯನ್ನು ಹುಡುಕಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಆರೋಪಿ ವಿನೋದ್ ಮಧ್ಯಪ್ರದೇಶದ ಇಂದೋರ್‌ನಿಂದ ಗುಜರಾತ್‍ಗೆ ಮರಳುತ್ತಿದ್ದಾಗ ದಾಹೋದ್ ಜಿಲ್ಲೆಯ ಎಸ್‍ಟಿ(ರಾಜ್ಯ ಸಾರಿಗೆ ನಿಗಮ) ಬಸ್‍ನಲ್ಲಿ ಸಿಕ್ಕಿ ಬಿದ್ದಿದ್ದಾನೆ.

    ವಿನೋದ್‍ನನ್ನು ಬಂಧಿಸಿದ ಪೊಲೀಸರು ವಿಚಾರಣೆ ಮಾಡಿದಾಗ, ತನ್ನ ಹೆಂಡತಿ, ಮಕ್ಕಳು ಮತ್ತು ಹೆಂಡತಿ ಅಜ್ಜಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಹಮದಾಬಾದ್ ಅಪರಾಧ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಇಂದು ಶಿವಕುಮಾರ ಶ್ರೀಗಳ 115 ನೇ ಜನ್ಮ ದಿನೋತ್ಸವ – ಪೂಜಾ ಕೈಂಕರ್ಯಗಳು ಆರಂಭ

    ವಿನೋದ್, ತನ್ನ ಹೆಂಡತಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಆಕೆಯನ್ನು ಕೊಂದಿದ್ದಾನೆ. ನಂತರ ಅಪರಾಧವನ್ನು ಮರೆಮಾಚಲು ಇಬ್ಬರು ಮಕ್ಕಳು ಮತ್ತು ಪತ್ನಿಯ ಅಜ್ಜಿಯನ್ನು ಕೊಂದಿದ್ದಾನೆ. ಕೊಲೆ ಮಾಡಿದ ನಂತರ, ಅವನು ಸೂರತ್‍ಗೆ ಹೋಗಿದ್ದನು. ಅಲ್ಲಿಂದ ಅಹಮದಾಬಾದ್‍ಗೆ ಹಿಂತಿರುಗಿದ್ದು, ಇಂದೋರ್‌ಗೆ ತಪ್ಪಿಸಿಕೊಂಡು ಹೋಗಲು ಸಿದ್ಧತೆ ಮಾಡುತ್ತಿದ್ದ ಎಂದು ಗಾಯಕ್ವಾಡ್ ಪೊಲೀಸರಿಗೆ ತಿಳಿಸಿದ್ದಾರೆ.

  • ಪತ್ನಿ ಕಾಟದಿಂದ ಮನೆ ಬಿಟ್ಟು ಹೋಗಿದ್ದ ಟೆಕ್ಕಿ ಪತ್ತೆ

    ಪತ್ನಿ ಕಾಟದಿಂದ ಮನೆ ಬಿಟ್ಟು ಹೋಗಿದ್ದ ಟೆಕ್ಕಿ ಪತ್ತೆ

    – ಮನೆ ಬಿಟ್ಟ 7 ವರ್ಷದ ಬಳಿಕ ಲಾಕ್

    ಬೆಂಗಳೂರು: ಪತ್ನಿ ಕಾಟ ತಾಳಲಾರದೇ ಮನೆ ಬಿಟ್ಟು ಹೋಗಿದ್ದ ಟೆಕ್ಕಿಯೊಬ್ಬ ಬರೋಬ್ಬರಿ ಏಳು ವರ್ಷದ ಬಳಿಕ ಪತ್ತೆಯಾಗಿದ್ದಾನೆ.

    ಟೆಕ್ಕಿಯನ್ನು ಕೋಟೆಪ್ಪ ಎಂದು ಗುರುತಿಸಲಾಗಿದೆ. ಇವರು ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆ ಆಗಿದ್ದನ್ನು ಕಂಡು ಪತ್ನಿ ಸವಿತಾ 2015 ರಲ್ಲಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಟೆಕ್ಕಿಗಾಗಿ ರಾಜ್ಯ ಹೊರ ರಾಜ್ಯದೆಲ್ಲೆಡೆ ಹುಡುಕಾಟ ನಡೆಸಿದ್ದರೂ ಪೊಲೀಸರಿಗೆ ನಾಪತ್ತೆಯಾಗಿದ್ದ ಟೆಕ್ಕಿ ಸಿಕ್ಕಿರಲಿಲ್ಲ. ಟೆಕ್ಕಿ ಸಿಗದೆ ಸಿ ರಿಪೋರ್ಟ್ ಹಾಕಲು ಮುಂದಾಗಿದ್ದ ಪೊಲೀಸರಿಗೆ ಬ್ಯಾಂಕ್ ಮೆಸೇಜ್ ಟೆಕ್ಕಿ ಕೋಟೆಪ್ಪ ಬಗ್ಗೆ ಮಾಹಿತಿ ನೀಡಿತ್ತು.

    ಟೆಕ್ಕಿ ಕೋಟೆಪ್ಪ ಬಿಹಾರ, ರಾಜಸ್ಥಾ, ಯುಪಿ ಸುತ್ತಾಡಿ ಕೊನೆಗೆ ದಾವಣಗೆರೆಗೆ ಬಂದಿರುವುದು ತಿಳಿದುಬಂತು. ಪೊಲೀಸರು ಹುಡುಕುತ್ತಿಲ್ಲ ಅಂತ ಅರಿತು ಬ್ಯಾಂಕಿಗೆ ಎಫ್‍ಡಿ ಮಾಡಲು ಹೋಗಿದ್ದರು. ಫೆ.16ರಂದು 10ಸಾವಿರ ಹಣ ಎಫ್‍ಡಿ ಮಾಡಿದಾಗ ದಿಢೀರನೆ ಹಣ ವರ್ಗಾವಣೆ ಮೆಸೇಜ್ ಪತ್ನಿಗೆ ಬಂದಿತ್ತು. 10 ವರ್ಷದ ಹಿಂದೆ ಬ್ಯಾಂಕ್ ಅಕೌಂಟ್ ಮಾಡಿಸಿದಾಗ ಕೋಟೆಪ್ಪ ಅವರು ಪತ್ನಿ ಮೊಬೈಲ್ ನಂಬರ್ ನೀಡಿದ್ದರು. ಕಳೆದ ತಿಂಗಳು 16ರಂದು ಮೆಸೇಜ್ ಬರುತ್ತಿದ್ದಂತೆಯೇ ಪತ್ನಿ ಸವಿತಾ ಪೊಲೀಸರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಸರ್ಕಾರಿ ಶಾಲೆಗಳೀಗ ಕಲರ್‌ಫುಲ್‌ – ಗೋಡೆಗಳಲ್ಲಿ ರಾರಾಜಿಸಿದ ಏರ್ ಇಂಡಿಯಾ

    ಮೆಸೇಜ್ ಜಾಡು ಹಿಡಿದು ಹೋದಾಗ ಅದು ಹರಿಹರ ಹೆಚ್‍ಡಿಎಫ್‍ಸಿ ಬ್ಯಾಂಕ್ ತೋರಿಸಿತ್ತು.ಬ್ಯಾಂಕಲ್ಲಿ ವಿಚಾರಣೆ ಮಾಡಿದಾಗ ಕೋಟೆಪ್ಪ ಬಂದು ಹಣ ಎಫ್‍ಡಿ ಮಾಡಿರೋದು ಗೊತ್ತಾಗಿದೆ. ಮತ್ತೆ ಬ್ಯಾಂಕಿಗೆ ಬಂದರೆ ಮಾಹಿತಿ ನೀಡುವಂತೆ ಆಡುಗೋಡಿ ಪೊಲೀಸರು ಹೇಳಿದ್ದರು. ವಾರದ ಹಿಂದೆ ಕೋಟೆಪ್ಪ ಮತ್ತೆ ಬ್ಯಾಂಕ್‍ಗೆ ಬಂದಿದ್ದರು. ಈ ವೇಳೆ ಪೊಲೀಸರು ಕೋಟೆಪ್ಪನ ಹಿಡಿದಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ

    ಟೆಕ್ಕಿಗೆ ಸ್ಥಳೀಯ ಠಾಣೆಗೆ ಕರೆದೊಯ್ದ ವಿಚಾರಣೆ ಮಾಡಿದಾಗ, ಪತ್ನಿ ಕಾಟಕ್ಕೆ ಮನೆ ಬಿಟ್ಟು ಹೋಗಿದ್ದಾಗಿ ಹೇಳಿರುವುದಾಗಿ ತಿಳಿದುಬಂದಿದೆ. ಟೆಕ್ಕಿ ಕೋಟೆಪ್ಪ 2012ರಲ್ಲಿ ಸವಿತಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ದಾಂಪತ್ಯ ಮೂರು ವರ್ಷಕ್ಕೆ ಮುರಿದು ಬಿದ್ದಿತ್ತು. ಟೆಕ್ಕಿ ದಂಪತಿ ಬನ್ನೇರುಘಟ್ಟ ರಸ್ತೆಯ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

  • ಹೆಂಡತಿ ಮೇಲಿನ ವ್ಯಾಮೋಹಕ್ಕೆ ಹೆತ್ತವಳನ್ನೇ ಕೊಂದ ಕಿರಾತಕ

    ಹೆಂಡತಿ ಮೇಲಿನ ವ್ಯಾಮೋಹಕ್ಕೆ ಹೆತ್ತವಳನ್ನೇ ಕೊಂದ ಕಿರಾತಕ

    ಯಾದಗಿರಿ: ಹೆಂಡತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯನ್ನು ನದಿಯಲ್ಲಿ ಮುಳುಗಿಸಿ ಮಗನೇ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಶಿರವಾಳದ ಬಳಿಯ ಭೀಮಾ ನದಿಯಲ್ಲಿ ನಡೆದಿದೆ.

    ರಾಚಮ್ಮ ಮೃತ ದುರ್ದೈವಿ. ಆರೋಪಿಯನ್ನು ನಾಗಣ್ಣ ಎಂದು ಗುರುತಿಸಲಾಗಿದ್ದು, ಈತ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಬಿಳವಾರ ಗ್ರಾಮದವನಾಗಿದ್ದಾನೆ. ತನ್ನ ತಾಯಿ ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಾಳೆ ಎಂಬ ಕಾರಣಕ್ಕೆ ನಾಗಣ್ಣ ತನ್ನ ಸ್ನೇಹಿತನೊಂದಿಗೆ ಸೇರಿ ತಾಯಿಯನ್ನು ನದಿಗೆ ತಳ್ಳಿ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮರಾಯನ ಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನಾಗಣ್ಣ ಹಾಗೂ ಆತನ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ರಾಜ್ಯ ಕಾಂಗ್ರೆಸ್‍ನ ಪವರ್ ಪಾಯಿಂಟ್‍ಗಳಲ್ಲ: ಎಂ.ಬಿ.ಪಾಟೀಲ್

     

  • ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೊಲೆ ಮಾಡಿದ ಪತಿ – ಆರೋಪಿಗಳು ಅರೆಸ್ಟ್

    ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಕೊಲೆ ಮಾಡಿದ ಪತಿ – ಆರೋಪಿಗಳು ಅರೆಸ್ಟ್

    ವಿಜಯನಗರ: ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಪತಿ ಯುವಕನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪ್ರಸ್ತುತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಯರ‍್ರಿಸ್ವಾಮಿ(32) ಮಧುಸೂದನ್(22) ಬಂಧಿತ ಆರೋಪಿಗಳು. ಆರೋಪಿಗಳು ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದವರಾಗಿದ್ದು, ಹೊಸಪೇಟೆಯ ಬಾರ್‌ನಲ್ಲಿ ಗಂಗಾಧರ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪ್ರಸ್ತುತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ತೆಯನ್ನ ಕೊಲೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ

    ಅಸಲಿ ಕಾರಣ ಬಯಲು
    ಕೊಲೆಯಾದ ಗಂಗಾಧರ್, ಯರ‍್ರಿಸ್ವಾಮಿ ಮತ್ತು ಮಧುಸೂದನ್ ಸಂಬಂಧಿಕ. ಯರ‍್ರಿಸ್ವಾಮಿ ಪತ್ನಿಯ ಜೊತೆಗೆ ಮಧುಸೂದನ್‍ಗೆ ಸಂಬಂಧ ಇದೆ ಎಂದು ಗಂಗಾಧರ್ ಎಲ್ಲಕಡೆ ಸುದ್ದಿ ಹಬ್ಬಿಸುತ್ತಿದ್ದ. ಇದೇ ವಿಚಾರಕ್ಕೆ ಯರ‍್ರಿಸ್ವಾಮಿ ಮತ್ತು ಗಂಗಾಧರ್ ನಡುವೆ ಜಗಳ ಪ್ರಾರಂಭವಾಗಿದೆ. ಜಗಳ ಅತಿಯಾಗಿ ಗಂಗಾಧರ್‌ನನ್ನು ಯರ‍್ರಿಸ್ವಾಮಿ ಮತ್ತು ಮಧುಸೂದನ್ ಇಬ್ಬರು ಸೇರಿ ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.

    ಹೊಸಪೇಟೆಯ ಪೊಲೀಸರು ಘಟನೆ ನಡೆದ 24 ಘಂಟೆಯೊಳಗೆ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಎಸ್‍ಪಿ ಡಾ.ಅರುಣ್.ಕೆ, ಮಂಗಳವಾರ ಸಂಜೆ ಹೊಸಪೇಟೆಯ ಬಳ್ಳಾರಿ ರಸ್ತೆಯ ಯಶ್ ಬಾರ್‌ನಲ್ಲಿ ಯರ‍್ರಿಸ್ವಾಮಿ ಮತ್ತು ಮಧುಸೂದನ್ ಇಬ್ಬರು ಸೇರಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಯರ‍್ರಿಸ್ವಾಮಿ ಅವರ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಿಂದ ಜಗಳ ಪ್ರಾರಂಭವಾಗಿ ಈ ಅನಾಹುತ ಸಂಭವಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಶ್ರೀಗಳ 115ನೇ ಜನ್ಮದಿನ ಐತಿಹಾಸಿಕ ಕಾರ್ಯಕ್ರಮ ಅಂದ್ರೆ ತಪ್ಪಾಗಲಾರದು: ಬಿ.ವೈ.ವಿಜಯೇಂದ್ರ

  • ವಿಚ್ಛೇದನದ ವಿಚಾರಣೆ ಮುಗಿಸಿ ತವರಿಗೆ ಹೋಗುತ್ತಿದ್ದ ಪತ್ನಿ – ರಸ್ತೆಯಲ್ಲೇ ಕೊಚ್ಚಿ ಕೊಂದ ಪತಿ

    ವಿಚ್ಛೇದನದ ವಿಚಾರಣೆ ಮುಗಿಸಿ ತವರಿಗೆ ಹೋಗುತ್ತಿದ್ದ ಪತ್ನಿ – ರಸ್ತೆಯಲ್ಲೇ ಕೊಚ್ಚಿ ಕೊಂದ ಪತಿ

    ಬೆಳಗಾವಿ: ಹಾಡಹಗಲೇ ಪತ್ನಿಯನ್ನೇ ಪತಿ ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವ  ಘಟನೆ ಬೆಳಗಾವಿಯ ಕೋಟೆ ಕೆರೆ ಬಳಿ ನಡೆದಿದೆ.

    ಬೆಳಗಾವಿಯ ಗಾಂಧಿನಗರದ ನಿವಾಸಿ ಹೀನಾ ಕೌಸರ್ ಮಂಜೂರ್ ಇಲಾಹಿ ನದಾಫ್(27) ಕೊಲೆಯಾದ ದುರ್ದೈವಿ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿ ಮಂಜೂರ್ ಇಲಾಹಿ ನದಾಫ್(34)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗಾಂಧಿನಗರದ ಹೀನಾಕೌಸರ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದ ಮಂಜೂರ್‍ನನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಪುತ್ರನಿದ್ದಾನೆ. ತಾಯಿ ಮೃತಪಟ್ಟಿದ್ದು, ತಂದೆ ಜೈಲು ಪಾಲಾದ ಕಾರಣಕ್ಕೆ ನಾಲ್ಕು ವರ್ಷದ ಮಗು ಈಗ ಅನಾಥವಾಗಿದೆ. ಇದನ್ನೂ ಓದಿ: ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡ್ತೇವೆ ಎಂದ ಪೋಷಕರು – ಭಯಭೀತರಾಗಿರುವ ನವಜೋಡಿ

    ವಿಚ್ಛೇದನಕ್ಕೆ ಅರ್ಜಿ
    ಮಂಜೂರ್-ಹೀನಾಕೌಸರ್ ನಡುವೆ ಕೌಟುಂಬಿಕ ಕಲಹವಿತ್ತು. ಈ ಕಾರಣಕ್ಕೆ ಕಳೆದ ಎಂಟು ತಿಂಗಳ ಹಿಂದೆ ಹೀನಾಕೌಸರ್ ವಿಚ್ಛೇದನ ಕೋರಿ, ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಕೋರ್ಟ್‍ಗೆ ಹಾಜರಾಗಿ ಗಾಂಧಿನಗರದಲ್ಲಿರುವ ತವರು ಮನೆಗೆ ಹೀನಾಕೌಸರ್ ವಾಪಸ್ ಆಗುತ್ತಿದ್ದರು. ಈ ವೇಳೆ ಕೋಟೆ ಕೆರೆ ಬಳಿ ಆಗಮಿಸಿದ ಮಂಜೂರು ನಡೆದುಕೊಂಡು ಹೋಗುತ್ತಿದ್ದ ಹೀನಾಕೌಸರ್‌ನನ್ನು ಅಡ್ಡಗಟ್ಟಿದ್ದಾನೆ.

    ಕೆಲ ಹೊತ್ತು ಹೀನಾಕೌಸರ್ ಜೊತೆಗೆ ವಾಗ್ವಾದವನ್ನೂ ಮಾಡಿದ್ದಾನೆ. ಬಳಿಕ ಹೀನಾಕೌಸರ್ ಕುತ್ತಿಗೆ, ಕೈಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ವಿಲವಿಲನೇ ಒದ್ದಾಡುತ್ತಿದ್ದ ಆಕೆಯನ್ನು, ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಹೀನಾಕೌಸರ್ ಮೃತಪಟ್ಟಿದ್ದಾರೆ.

    ಮೃತದೇಹವನ್ನು ಜಿಲ್ಲಾಸ್ಪತ್ರೆಯಿಂದ ಶವಾಗಾರಕ್ಕೆ ಸಾಗಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು  ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದರು. ಇದನ್ನೂ ಓದಿ: ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

    ಮಂಜೂರ್ ಕೆಲ ವರ್ಷಗಳಿಂದ ಹೀನಾಮಂಜೂರ್ ಮೇಲೆ ದೈಹಿಕ ಹಲ್ಲೆ ಜೊತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ಹೀನಾಕೌಸರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.