ಲಕ್ನೋ: ಮೂಗಿ ಎಂದು ಹೀಯಾಳಿಸುತ್ತಿದ್ದ ಪತಿಯ ನಾಲಿಗೆಯನ್ನೇ ಮಹಿಳೆಯೊಬ್ಬಳು ಹಲ್ಲಿನಿಂದ ಕಚ್ಚಿ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಶ್ರೀಪಾಲ್ ಮೌರ್ಯ ನಾಲಿಗೆ ಕಳೆದುಕೊಂಡ ವ್ಯಕ್ತಿ. ದಂಪತಿ ಒಂದು ವರ್ಷದ ಹಿಂದೆ ಬಿಹಾರದಲ್ಲಿ ಮದುವೆಯಾಗಿದ್ದರು. ಈತನ ಪತ್ನಿ ಮೂಗಿಯಾಗಿದ್ದಳು. ನಿನಗೆ ಮಾತನಾಡಲು ಬರುವುದಿಲ್ಲ ಎಂದು ಪತ್ನಿಯನ್ನು ಶ್ರೀಪಾಲ್ ಆಗಾಗ್ಗೆ ಹೀಯಾಳಿಸುತ್ತಿದ್ದ. ಇದನ್ನೂ ಓದಿ: 5 ವರ್ಷಗಳಿಂದ ತಾಯಿಯಾಗಲು ಪ್ರಯತ್ನಿಸಿ 4 ಬಾರಿ ಐವಿಎಫ್ ಚುಚ್ಚುಮದ್ದು ಪಡೆದ ನಟಿ
ಬುಧವಾರ ಸಂಜೆ ಶ್ರೀಪಾಲ್ ಕೂಲಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಸುಸ್ತಾಗಿ ಬೇಗ ಮಲಗಿದ್ದ. ಈ ವೇಳೆ ಪತ್ನಿ ಆತನ ನಾಲಿಗೆಯನ್ನು ಹಲ್ಲುಗಳಿಂದ ಕತ್ತರಿಸಿದ್ದಾಳೆ. ನಾಲಿಗೆ ಕಳೆದುಕೊಂಡು ನೋವಿನಿಂದ ಶ್ರೀಪಾಲ್ ಚೀರಾಡಿದ್ದಾನೆ. ನಂತರ ಮನೆಯವರು ಜಮಾಯಿಸಿ ಬರೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: 70 ವಯಸ್ಸಿನ ಬುದ್ಧಿಮಾಂದ್ಯ ವೃದ್ಧೆಯನ್ನು ಅಪಹರಿಸಿ ಅತ್ಯಾಚಾರ
ಈ ಪ್ರಕರಣ ಶೀಶ್‍ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಲಿ ಗ್ರಾಮದಲ್ಲಿ ನಡೆದಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ವಾರಣಾಸಿ ನಿವಾಸಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದಾರೆ.
ಯಾವುದೇ ಭಾರತೀಯ ಮಹಿಳೆ ತನ್ನ ಪತಿಯನ್ನು ಬೇರೊಬ್ಬರೊಂದಿಗೆ ಹಂಚಿಕೊಂಡು ಸಮಚಿತ್ತದಿಂದ ಇರಲು ಸಾಧ್ಯವಿಲ್ಲ. ತನ್ನ ಪತಿ ಬೇರೆ ಮಹಿಳೆಯನ್ನು ಮದುವೆಯಾಗಲಿದ್ದಾನೆ ಎಂಬುದು ದೊಡ್ಡ ಆಘಾತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಅವರಿಂದ ಯಾವುದೇ ವಿವೇಕವನ್ನು ನಿರೀಕ್ಷಿಸುವುದು ಅಸಾಧ್ಯ ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಅಮ್ಮನ ಜೊತೆ ಮಲಗಿದ್ದವನ ಮರ್ಮಾಂಗವನ್ನೇ ಬ್ಲೇಡ್‍ನಿಂದ ಕಟ್ ಮಾಡಿದ ಮಗಳು!
ಈ ಪ್ರಕರಣವು ವಾರಣಾಸಿ ನಿವಾಸಿ ಸುಶೀಲ್ ಕುಮಾರ್‌ಗೆ ಸಂಬಂಧಿಸಿದ್ದಾಗಿದೆ. 2018ರ ಸೆಪ್ಟೆಂಬರ್ 22 ರಂದು ಸುಶೀಲ್ ಕುಮಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ಒಂದು ದಿನದ ನಂತರ ಆತನ ಎರಡನೇ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶೀಲ್ ಈ ಆರೋಪ ಎದುರಿಸುತ್ತಿದ್ದಾನೆ.
ಸುಶೀಲ್ ಕುಮಾರ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆದರೆ ಸುಶೀಲ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡದೆಯೇ ಎರಡನೇ ಮದುವೆಯಾಗಿದ್ದ. ತನ್ನ ಮೊದಲ ಹೆಂಡತಿ ವಿಚಾರವನ್ನು ಎರಡನೇ ಹೆಂಡತಿಯಿಂದ ಗೌಪ್ಯವಾಗಿಟ್ಟಿದ್ದ. ಅಲ್ಲದೇ ಸುಶೀಲ್ ಮೂರನೇ ಮದುವೆಯಾಗಲು ಮುಂದಾಗಿದ್ದ. ಇದು ಎರಡನೇ ಹೆಂಡತಿಗೆ ತಿಳಿದು ಆಕೆ ತನ್ನ ಗಂಡನ ವಿರುದ್ಧ ದೂರು ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಉಷ್ಣಾಂಶ ಏರಿಕೆ – ಏಪ್ರಿಲ್‌ನಲ್ಲಿ ಎಸಿ ಸಾರ್ವಕಾಲಿಕ ಗರಿಷ್ಠ ಮಾರಾಟ
ರಹಸ್ಯವಾಗಿ ತನ್ನ ಗಂಡ ಬೇರೊಬ್ಬಳನ್ನು ಮದುವೆಯಾಗಿದ್ದಾನೆ ಎಂದು ಪತ್ನಿ ತಿಳಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಇಷ್ಟು ಕಾರಣ ಸಾಕು ಎಂದು ಕೋರ್ಟ್ ಹೇಳಿತ್ತು.
ಜೈಪುರ: ಒಂದೂವರೆ ಲಕ್ಷ ರೂಪಾಯಿ ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ಮೇಲೆ ಸಂಬಂಧಿಕರಿಂದಲೇ ಪತಿಯೊಬ್ಬ ಸಾಮೂಹಿಕ ಅತ್ಯಾಚಾರ ಎಸಗಿಸಿರುವ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ. ಅಲ್ಲದೇ ಗ್ಯಾಂಗ್ ರೇಪ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.
ಯೂಟ್ಯೂಬ್‍ನಲ್ಲಿ ಲೈಂಗಿಕ ದೌರ್ಜನ್ಯದ ವೀಡಿಯೋವನ್ನು ಅಪ್‍ಲೋಡ್ ಮಾಡುವ ಮೂಲಕ ಬರಬೇಕಾಗಿರುವ ವರದಕ್ಷಿಣೆ ಹಣವನ್ನು ಪಡೆಯುತ್ತೇನೆ ಎಂದು ಪತಿ ತನ್ನ ಹೆಂಡತಿಗೆ ಹೇಳಿದ್ದಾನೆ. ಇದೀಗ ಸಂತ್ರಸ್ತೆ ಪತಿ ಮತ್ತು ಆತನ ಸಂಬಂಧಿಕರಿಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾಳೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಗುಂಡಿನ ದಾಳಿ – ಮಹಿಳೆಗೆ ಗಾಯ
ಭರತ್‍ಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಅವರು, ಮಹಿಳೆಯೊಬ್ಬಳು ತನ್ನ ಪತಿ ಮತ್ತು ಇಬ್ಬರು ಸಂಬಂಧಿಕರು ಅತ್ಯಾಚಾರ ಎಸಗಿರುವುದಾಗಿ ದೂರು ದಾಖಲಿಸಿದ್ದಾಳೆ. ಅಲ್ಲದೇ ಯೂಟ್ಯೂಬ್‍ಗೆ ಅಶ್ಲೀಲ ವೀಡಿಯೋ ಅಪ್‍ಲೋಡ್ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ದೂರಿನಲ್ಲಿ ಸಂತ್ರಸ್ತೆ, ನನ್ನ ಅತ್ತೆಯಂದಿರು ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡುತ್ತಿದ್ದರು. ಅವರಿಗೆ ವರದಕ್ಷಿಣೆ ನೀಡದಿದ್ದಾಗ, ಅವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಪತಿಯ ಸಂಬಂಧಿಕರು ನನ್ನ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಮತ್ತು ಘಟನೆಯನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು, ಆ ವೀಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್
2019ರಲ್ಲಿ ದಂಪತಿ ಹರಿಯಾಣದಲ್ಲಿ ಮದುವೆಯಾಗಿದ್ದು, ಅಂದಿನಿಂದ ಮಹಿಳೆಗೆ ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಕಾರಣದಿಂದ ಆಕೆ ತನ್ನ ಪೋಷಕರ ಮನೆಗೆ ಮರಳಿದ್ದಳು. ಆದರೆ ಪತಿ ಮತ್ತೆ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದನು. ನಂತರ ಪತಿ ತನ್ನ ಇಬ್ಬರು ಸಂಬಂಧಿಕರನ್ನು ಮನೆಗೆ ಕರೆದುಕೊಂಡು ಬಂದು ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವಂತೆ ಸಂಬಂಧಿಕರಿಗೆ ಹೇಳಿ, ಘಟನೆಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಮತ್ತು ನಿಮ್ಮ ಕುಟುಂಬಸ್ಥರು ನನಗೆ ವರದಕ್ಷಿಣೆ ನೀಡಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಈ ವೀಡಿಯೋವನ್ನು ಯೂಟ್ಯೂಬ್‍ನಲ್ಲಿ ಹಾಕುವ ಮೂಲಕ ಅದೇ ಮೊತ್ತವನ್ನು ಗಳಿಸುತ್ತೇನೆ ಎಂದು ಹೇಳಿ ಅಶ್ಲೀಲ ವೀಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಬೆಂಗಳೂರು: ಗಾಂಜಾ ಮತ್ತಿನಲ್ಲಿ ಪತಿ ಮಹಾಶಯನೊಬ್ಬ ತಾನು ಪ್ರೀತಿಸಿ ಮದುವೆಯಾದ ಪತ್ನಿ ಮೇಲೆಯೇ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಈಕೆ ಜಗದೀಶ್‍ನನ್ನು ಪ್ರೀತಿಸಿ ಕೈಹಿಡಿದಿದ್ದಳು. ಆದರೆ ಇದೀಗ ಗಾಂಜಾ ಮತ್ತಿನಲ್ಲಿ ಪತ್ನಿ ಮೇಲೆ ಸಂಶಯಗೊಂಡು ಚಿತ್ರಹಿಂಸೆ ನೀಡಿದ್ದಾನೆ. ನೀನು ಚೆನ್ನಾಗಿದ್ರೆ ತಾನೇ ಬೇರೆಯವರು ನೋಡೋದು ಎಂದು ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಕಳೆದ ಒಂದೂವರೆ ವರ್ಷದ ಹಿಂದೆ ಇವರಿಬ್ಬರು ಮದುವೆಯಾಗಿದ್ದಾರೆ. ಜಯಲಕ್ಷ್ಮಿ ಖಾಸಗಿ ಆಸ್ಪತ್ರೆಯೊಂದ್ರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ಜಗದೀಶ್ ಗಾಂಜಾ ವ್ಯಸನಿಯಾಗಿದ್ದು, ಇದೀಗ ಆಕೆಯ ಶೀಲ ಶಂಕಿಸಿ ಪ್ರತಿನಿತ್ಯ ಹಲ್ಲೆ ಮಾಡುತ್ತಿದ್ದಾನೆ. ಬರಿಗೈಲಿ ಮಾತ್ರವಲ್ಲದೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಜಯಲಕ್ಷ್ಮಿ ಕಿವಿ, ಕುತ್ತಿಗೆ, ತಲೆಗೆ ಗಂಭೀರ ಗಾಯಗಳಾಗಿವೆ.
ಭುವನೇಶ್ವರ: ಕಳೆದ ನಾಲ್ಕು ವರ್ಷಗಳಿಂದ ಸಂಬಳ ನೀಡದೇ ಕೆಲಸ ಮಾಡಿಸುತ್ತಿದ್ದ ಶಿಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಶಾಲಾ ಶಿಕ್ಷಕಿಯ ಪತಿ ಹಲ್ಲೆ ನಡೆಸಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಇದೀಗ ದೂರಿನ ಆಧಾರದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಬೆಳ್ಳಗುಂಟಾದ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿಲತಾ ಸಾಹು ಅವರು ತಮ್ಮ ವೇತನ ನೀಡುವಂತೆ ಒತ್ತಾಯಿಸಿ ನಾಲ್ಕು ತಿಂಗಳಿಂದ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಊಟಕ್ಕೆ ಹೋಗುತ್ತಿದ್ದ ಡಿಇಒ ಅವರನ್ನು ದಂಪತಿ ಅಡ್ಡಗಟ್ಟಿ ಸಂಬಳ ಕೇಳಿದ್ದಾರೆ. ಇದನ್ನೂ ಓದಿ:ರಥೋತ್ಸವದಲ್ಲಿ ವಿದ್ಯುತ್ ತಗುಲಿ ಇಬ್ಬರು ಮಕ್ಕಳು ಸೇರಿ 11 ಮಂದಿ ದುರ್ಮರಣ
ಡಿಇಒ ಅವರೊಂದಿಗೆ ಶಾಂತಿಲತಾ ಸಾಹು ಅವರು ಮಾತನಾಡುತ್ತಿದ್ದಂತೆಯೇ, ಅವರ ಪತಿ ಅಧಿಕಾರಿಯ ಮುಖಕ್ಕೆ ಹೊಡೆದಿದ್ದಾರೆ. ನಂತರ ಈ ಕುರಿತಂತೆ ಡಿಇಒ ಅವರು ದೂರು ನೀಡಿದ್ದು, ಇಬ್ಬರನ್ನು ವ್ಯಾನ್‍ಗೆ ಕರೆದೊಯ್ಯುವಾಗ ಶಾಂತಿಲತಾ ಸಾಹು ತಮಗೆ ಸಂಬಳ ನೀಡುವುದನ್ನು ನಿಲ್ಲಿಸಿದ್ದಾರೆ. ಅಧಿಕಾರಿಗಳು ನನಗೆ ಯಾವುದೇ ನೋಟಿಸ್ ನೀಡಲ್ಲ ಮತ್ತು ಕೆಲಸದಿಂದಲೂ ಅಮಾನತುಗೊಳಿಸಿಲ್ಲ ಎಂದು ಆರೋಪಿಸಿ ಗಳಗಳ ಅತ್ತಿದ್ದಾರೆ. ಇದನ್ನೂ ಓದಿ:ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ
ಈ ವಿಚಾರವಾಗಿ ಡಿಇಒ ಕಚೇರಿಯ ಅಧಿಕಾರಿಯೊಬ್ಬರು ಸಂಬಳ ಕೇಳಿದಾಗಲಿಂದಲೂ ಶಾಂತಿಲತಾ ಸಾಹು ಕೆಲಸಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ಈ ಸಂಬಂದ ತನಿಖೆ ನಡೆಸಲಾಗುತ್ತಿದೆ ಎಂದು ಬೆರ್ಹಾಂಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಬಿಷ್ಣು ಪ್ರಸಾದ್ ಪತಿ ತಿಳಿಸಿದ್ದಾರೆ.
ತೆಲಂಗಾಣ: ‘ಪುಷ್ಪ’ ಸಿನಿಮಾದಲ್ಲಿ ಮಹಿಳೆ ತನ್ನ ಪತಿಯನ್ನು ಕುತ್ತಿಗೆ ಕೊಯ್ದಿರುವ ಪ್ರಸಂಗವಿತ್ತು. ಅದೇ ರೀತಿ ಇಲ್ಲೊಂದು ಮಹಿಳೆ ಪತಿಯ ಕುತ್ತಿಗೆಯನ್ನು ಬ್ಲೇಡ್‍ನಿಂದ ಕೊಯ್ದಿರುವ ಘಟನೆ ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ನಡೆದಿದೆ.
23 ವರ್ಷದ ಎಂ.ಅರ್ಚನಾ ಯಾವುದೇ ಕಾರಣವಿಲ್ಲದೆ ಬ್ಲೇಡ್‍ನಿಂದ ತನ್ನ ಪತಿಯ ಕತ್ತು ಸೀಳಿದ್ದಾಳೆ. ಕಲ್ಲು ಪುಡಿ ಮಾಡುವ ಘಟಕದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಜು(26) ಅವರನ್ನು ಅರ್ಚನಾ ವಿವಾಹವಾಗಿದ್ದರು. ಯಾವುದೇ ಕಾರಣವಿಲ್ಲದೇ ರಾಜು ರೂಮ್‍ನಲ್ಲಿ ಇರುವಾಗ ಬ್ಲೇಡ್‍ನಿಂದ ಕುತ್ತಿಗೆ ಕೊಯ್ದಿದ್ದಾಳೆ. ಆದರೆ ರಾಜುವಿಗೆ ಯಾವುದೇ ಪ್ರಾಣಪಾಯವಾಗಿಲ್ಲ. ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಮಾಡಿ ಮಹಿಳೆಯನ್ನು ಕೊಲೆಗೈದ ಪಾಪಿಗಳು
ನಡೆದಿದ್ದೇನು?
ದಂಪತಿ ದಾಮೆರ ಮಂಡಲದ ಪಸರಗೊಂಡ ಗ್ರಾಮದಲ್ಲಿ ವಾಸವಿದ್ದರು. ರಾಜು ಕೆಲಸ ಮುಗಿಸಿಕೊಂಡು ಮನೆಗೆ ಬಂದು ರೂಮ್‍ನಲ್ಲಿ ಮಲಗಿಕೊಂಡಿದ್ದಾನೆ. ಈ ವೇಳೆ ಅರ್ಜನಾ ಬ್ಲೇಡ್‍ನಿಂದ ರಾಜು ಕುತ್ತಿಗೆ ಕೊಯ್ದಿದ್ದಾಳೆ. ರೂಮ್‍ನಿಂದ ಕಿರುಚಾಟ ಕೇಳಿಬಂದಿದ್ದು, ಕುಟುಂಬಸ್ಥರು ಮತ್ತು ಸ್ಥಳೀಯರು ಧಾವಿಸಿದ್ದಾರೆ. ಪರಿಣಾಮ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ರಾಜುನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ರಾಜು ಪ್ರಾಣಪಾಯದಿಂದ ಪರಾಗಿದ್ದು, ಕುತ್ತಿಗೆಗೆ ಆರು ಹೊಲಿಗೆ ಹಾಕಲಾಗಿದೆ.
ತನಿಖೆಯಲ್ಲಿ ತಿಳಿದಿದ್ದೇನು?
ಅರ್ಚನಾಳನ್ನು ಪೊಲೀಸರು ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆಕೆ, ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡೆ ಮದುವೆ ಮಾಡಿಕೊಂಡಿದ್ದೇನೆ. ಆದರೆ ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿಲ್ಲ ಎಂಬ ಹೇಳಿಕೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಶ್ಯಾಂಪೇಟ್ ಸರ್ಕಲ್ ಪೊಲೀಸರಿಗೆ ಬಿ.ಶ್ರೀನಿವಾಸ್ ಅವರು ಮಹಿಳೆ ಹೇಳಿಕೆ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದು, ಅರ್ಚನಾಗೆ ರಾಜುವನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಅದಕ್ಕೆ ಆಕೆ ಪತಿ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಶಂಕಿಸಿದ್ದಾರೆ.
ಮದುವೆಯಾಗಿ 20 ದಿನದ ಬಳಿಕ ಅತ್ತೆ ಮನೆ ಸೇರಿದ್ಳು
ಅರ್ಚನಾ ಮದುವೆಯಾದ 20 ದಿನಗಳ ನಂತರ ತನ್ನ ಅತ್ತೆಯ ಮನೆಗೆ ಬಂದಿದ್ದಳು. ಆರಂಭದಲ್ಲಿ ಅರ್ಚನಾಗೆ ರಾಜು ಇಷ್ಟವಿರಲಿಲ್ಲ, ಆದರೂ ಆಕೆ ರಾಜುನನ್ನು ಮದುವೆಯಾಗಿದ್ದಳು. ಆದರೆ ವಿಚಾರಣೆ ವೇಳೆ ಅರ್ಚನಾ ಮನಸೋಇಚ್ಛೆ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಈ ಸತ್ಯಾಸತ್ಯತೆ ತಿಳಿಯಲು ನಾವು ಎರಡೂ ಕುಟುಂಬಗಳ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಮಾನಸಿಕ ಅಸ್ವಸ್ಥನಂತೆ ನಟಿನೆ
ರಾಜು ಅವರ ಸಹೋದರ ಎಂ.ಶ್ರೀಶೈಲಂ, ಅರ್ಚನಾ ಮಾನಸಿಕ ಅಸ್ವಸ್ಥ ವ್ಯಕ್ತಿಯಂತೆ ನಟಿಸುತ್ತ ಈ ಕೃತ್ಯ ಮಾಡಿದ್ದಾರೆ. ಆಕೆಗೆ ಮಾನಸಿಕವಾಗಿ ಯಾವುದೇ ತೊಂದರೆಯಿಲ್ಲ. ಕಳೆದ ಕೆಲವು ದಿನಗಳಿಂದ ಆಕೆ ನಮ್ಮೊಂದಿಗೆ ಚೆನ್ನಾಗಿಯೇ ಇದ್ದಳು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ
ವರದಕ್ಷಿಣೆ ಕಿರುಕುಳದ ಆರೋಪದ ಕುರಿತು ಅರ್ಚನಾ ಸಹೋದರ ಟಿ.ರಾಜು ಕುಮಾರ್ ಅವರನ್ನು ಪೊಲಿಸರು ಪ್ರಶ್ನಿಸಿದಾಗ, ಆ ರೀತಿಯ ಯಾವುದೇ ಸಮಸ್ಯೆ ಇರಲಿಲ್ಲ. ತನ್ನ ಗಂಡನ ಮೇಲೆ ಹಲ್ಲೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಅವಳು ನಮಗೂ ಹೇಳುತ್ತಿಲ್ಲ. ಅವಳು ರಾಕುನನ್ನು ಮದುವೆಯಾಗಲು ಒಪ್ಪಿದ ಬಳಿಕವೇ ಮದುವೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಹೆಂಡತಿಯ ಐಷಾರಾಮಿ ಬಯಕೆ ಪೂರೈಸಲು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಮೂಲದ ವಿನೋದ್ ಕುಮಾರ್ ಕೆಲಸ ಹರಿಸಿ ಕೋಲ್ಕತ್ತಾಕ್ಕೆ ಹೋಗಿ ಕ್ಯಾಬ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇದೇ ವೇಳೆ ಬಾಂಗ್ಲಾ ಮೂಲದ ಸೋನು ಅವರ ಪರಿಚಯವಾಗಿ, ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಮದುವೆಯಾದ ಆರಂಭದಲ್ಲಿ ಬಿಂದಾಸ್ ಆಗಿದ್ದ ಈ ಜೋಡಿ ಲೈಫ್ ನಂತರದ ದಿನಗಳಲ್ಲಿ ಕಷ್ಟಕರವಾಗಿತ್ತು. ಇದನ್ನೂ ಓದಿ: ಮಸೀದಿ, ಮಂದಿರಗಳು ನಿಯಮ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆ: ಪ್ರವೀಣ್ ಸೂದ್
ಪತಿ ವಿನೋದ್ ತರುತ್ತಿದ್ದ ಅಲ್ಪ, ಸ್ವಲ್ಪ ಹಣದಿಂದ ಜೀವನ ನಡೆಸಲು ಕಷ್ಟಕರವಾಗಿತ್ತು. ಇದರಿಂದ ಬೇಸರಗೊಂಡ ಸೋನು, ವಿನೋದ್‍ಗೆ ನೀನು ತರುವ ಬಿಡಿಗಾಸು ಯಾವುದಕ್ಕೂ ಸಾಲುತ್ತಿಲ್ಲ ಎಂದು ಚುಚ್ಚಿ, ಚುಚ್ಚಿ ಮಾತನಾಡಲು ಆರಂಭಿಸಿದಳು. ಇದರಿಂದ ಕೋಪಗೊಂಡ ವಿನೋದ್ ಡ್ರೈವಿಂಗ್ ಜೊತೆಗೆ ಮನೆಗಳ್ಳತನ ಮಾಡಲಿ ಶುರುಮಾಡಿದ. ಬೆಳಗಿನ ಸಮಯದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಾ ಮನೆಗಳನ್ನು ಗುರುತಿಸಿ ರಾತ್ರಿ ನಂಬರ್ ಪ್ಲೇಟ್ ಇಲ್ಲದ ಬೈಕ್‍ನಲ್ಲಿ ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದನು. ಇದನ್ನೂ ಓದಿ: ಕಾಂಗ್ರೆಸ್‌ಗೆ ಅಡ್ರೆಸ್ ಎಲ್ಲಿದೆ, ಅದರ ನಾಯಕರು ಯಾರು?: ಯಡಿಯೂರಪ್ಪ ವ್ಯಂಗ್ಯ
ಕಳ್ಳತನ ಮಾಡುವ ವೇಳೆ ವಿನೋದ್ ಮೊಬೈಲ್‍ವೊಂದನ್ನು ಕದ್ದಿದ್ದ. ಅಲ್ಲದೇ ಇದೇ ಮೊಬೈಲ್‍ನನ್ನೇ ಬಳಸುತ್ತಿದ್ದ ಮತ್ತು ಸಿಸಿಟಿವಿ ದೃಶ್ಯ ಆಧಾರಿಸಿ ಸಂಜಯನಗರ ಪೊಲೀಸರು ಇದೀಗ ವಿನೋದ್‍ನನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಸಂಜಯನಗರ ಒಂದೇ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ಏಳು ಮನೆಗಳಲ್ಲಿ ವಿನೋದ್ ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು ತನಿಖೆ ಮುಂದುವರೆಸಲಾಗಿದೆ.
ನವದೆಹಲಿ: ನೇಣು ಬಿಗಿದ ಸ್ಥಿತಿಯಲ್ಲಿ ಸ್ಥಳೀಯ ಶಿವಸೇನೆ ಶಾಸಕರೊಬ್ಬರ ಪತ್ನಿಯ ಶವ ಪತ್ತೆಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
#UPDATE | Rajani Kudalkar allegedly died by suicide yesterday (April 17) evening around 8:30 pm. Nehru Nagar Police has registered a case under the Accidental Death Report (ADR). Probe on: Mumbai Police pic.twitter.com/0vWPwy5woM
ಶಿವಸೇನಾ ಶಾಸಕ ಮಂಗೇಶ್ ಕುಡಾಲ್ಕರ್ ಅವರ ಪತ್ನಿ ರಜನಿ ಕುಡಾಲ್ಕರ್ ಅವರ ಮೃತದೇಹ, ಕುರ್ಲಾ ಪೂರ್ವದ ನೆಹರೂ ನಗರ ಪ್ರದೇಶದಲ್ಲಿರುವ ಡಿಗ್ನಿಟಿ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ರಾತ್ರಿ 8.30ರ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಂಗೇಶ್ ಕುಡಾಲ್ಕರ್ ಕುರ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: 8 ವರ್ಷದ ಮಗನನ್ನೇ ಕತ್ತು ಸೀಳಿ ಕೊಂದ ಕ್ರೂರಿ ತಾಯಿ
The body of Shiv Sena MLA Mangesh Kudalkar’s wife Rajani was found hanging at her residence. Senior police officials present at the spot: Mumbai Police
ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ವೇಳೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎಂಬುವುದರ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ ಎಂದು ನೆಹರು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದ್ದು, ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಿಫ್ಟ್ ನೀಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ – ಕೆಲವೇ ಗಂಟೆಗಳಲ್ಲಿ ಆರೋಪಿ ಅರೆಸ್ಟ್