ವಿಜಯಪುರ: ತಂದೆಯೊಬ್ಬ ತನ್ನ ಪತ್ನಿ ಜಮೀನು ಮಾರಲು ಒಪ್ಪದಕ್ಕೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ತಿನ್ನಿಸಿದ್ದು, ಪುತ್ರ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
ಶಿವರಾಜ್ ಅರಸನಾಳ (2) ಹತ್ಯೆಗೀಡಾದ ಮಗು. ಆರೋಪಿ ತಂದೆ ಚಂದ್ರಶೇಖರ್ ಅರಸನಾಳ ಮೈತುಂಬ ಸಾಲಮಾಡಿಕೊಂಡಿದ್ದನು. ಹಾಗಾಗಿ ತನ್ನ ಪತ್ನಿಗೆ ಜಮೀನು ಮಾರಾಟ ಮಾಡುವಂತೆ ಒತ್ತಾಯಸುತ್ತಿದ್ದನು. ಮಾರಾಟ ಮಾಡಲು ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್‍ರೈಸ್‍ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಇದರ ಪರಿಣಾಮವಾಗಿ ಗಂಡು ಮಗುವೊಂದು ಸಾವನ್ನಪ್ಪಿದ್ದು, ಮಗಳು ರೇಣುಕಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ.
ಈಗಾಗಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಸಂಸಾರದಲ್ಲಿ ಎಲ್ಲವು ಸರಿ ಇದ್ದರೆ ಸುಖವಾಗಿ ಇರುತ್ತದೆ. ಏನಾದರೂ ಅನುಮಾನ ಮನಸ್ತಾಪಗಳು ಬಂದರೆ ನಿಜಕ್ಕೂ ನರಕವಾಗುತ್ತದೆ. ಸಂಸಾರದಲ್ಲಿ ಮನಸ್ತಾಪಗಳು ಬಂದು ಜೀವವನ್ನು ಕಳೆದುಕೊಳ್ಳುವಂತಾಗುತ್ತದೆ. ಅದೇ ರೀತಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿ ಕೋಡು ಗ್ರಾಮದಲ್ಲಿ ಗಂಡ ಹೆಂಡತಿಯ ನಡುವೆ ಚಿಕನ್ ಊಟದ ವಿಚಾರವಾಗಿ ಜಗಳವಾಗಿ ತಾರಕಕ್ಕೇ ಏರಿ ತನ್ನ ಹೆಂಡತಿಯನ್ನು ಪತಿಯೇ ಚಾಕುವಿನಿಂದ ಹಿರಿದುಕೊಲೆ ಮಾಡಿದ್ದಾನೆ.
ಕೊಲೆಯಾದ ದುರ್ದೈಯನ್ನು ಶೀಲಾ ಎಂದು ಗುರುತಿಸಲಾಗಿದ್ದು, ಈಕೆಗೆ ಬನ್ನಿಕೋಡು ಗ್ರಾಮದ ರೋಡ್ ರೋಲರ್ ಆಪರೇಟರ್ ಆಗಿದ್ದ ಕೆಂಚಪ್ಪ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು. ಹರಿಹರ ತಾಲೂಕಿನ ವಾಸನ ಗ್ರಾಮದ ಶೀಲಾಳನ್ನು ಕೆಂಚಪ್ಪ ಪ್ರೀತಿಸಿದ್ದು, ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನೆಯಿಂದ ಓಡಿ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೇಗೋ ಸುಖವಾಗಿ ಸಂಸಾರ ಮಾಡಿ ಒಂದು ಮುದ್ದಾದ ಮಗುವನ್ನು ಪಡೆದಿದ್ದರು. ಆಗ ಕೆಂಚಪ್ಪನ ಅಸಲಿ ಸತ್ಯ ಗೊತ್ತಾಗಿದೆ. ಕೆಂಚಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ಮದುವೆಯಾಗಿರುವ ವಿಚಾರ ಶೀಲಾಗೆ ತಿಳಿದು ಬಂದಿದೆ. ಇದರಿಂದ ಪ್ರತಿನಿತ್ಯ ಜಗಳ ಶುರುವಾಗಿದೆ. ಕೆಂಚಪ್ಪ ಕೂಡ ಮದ್ಯ ಸೇವನೆ ಮಾಡಿ ರಾದ್ಧಾಂತ ಮಾಡುತ್ತಿದ್ದ, ಇದು ಎರಡು ಮನೆಯವರಿಗೆ ಗೊತ್ತಾಗಿ ರಾಜೀ ಪಂಚಾಯಿತಿ ಮಾಡಿ ಹೋಗಿದ್ದರು. ಆದರೆ ಕಳೆದ ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಹೆಂಡತಿಗೆ ಚಿಕನ್ ಅಡುಗೆ ಮಾಡಿಲ್ಲ ಎಂದು ಜಗಳವಾಡಿ ಕೊನೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – ಎರಡುವರೆ ವರ್ಷದ ಮಗು ಸೇರಿ ನಾಲ್ವರು ಸಾವು
ಒಂದು ಮಗು ಆಗುವವರೆಗೂ ಚೆನ್ನಾಗಿದ್ದ ಕೆಂಚಪ್ಪ ನಂತರ ನಿತ್ಯ ಕುಡಿದು ಬಂದು ಜಗಳವಾಡುತ್ತಿದ್ದ ಶೀಲಾಳ ಬಗ್ಗೆ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದರಿಂದ ಶೀಲಾ ತನ್ನ 4 ವರ್ಷದ ಮಗಳನ್ನು ವಾಸನದಲ್ಲಿರುವ ತಾಯಿ ಮನೆಯಲ್ಲಿಯೇ ಬಿಟ್ಟಿದ್ದಳು, ಅಲ್ಲದೇ ಕಳೆದ ಜೂನ್ 7ರಂದು ಮಗಳ ಹುಟ್ಟುಹಬ್ಬವನ್ನು ತವರು ಮನೆಯಲ್ಲಿಯೇ ಮಾಡಿ ಬನ್ನಿಕೋಡ್ ಗೆ ಬಂದಿದ್ದರು. ಹುಟ್ಟು ಹಬ್ಬಕ್ಕೂ ಕೂಡ ಕೆಂಚಪ್ಪ ಹೋಗಿರಲಿಲ್ಲ. ತವರಿನಿಂದ ವಾಪಸ್ಸು ಬಂದ ನಂತರ ಮತ್ತೆ ಜಗಳವಾಡಿದ್ದ, ಅಲ್ಲದೇ ಸಂಜೆ ಬರುವುದರೊಳಗೆ ಚಿಕನ್ ಮಾಡು ಎಂದು ಹೇಳಿ ಹೋಗಿದ್ದಾನೆ. ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಶೀಲಾಳ ಜೊತೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇದೀಗ ಈ ಸಂಬಂಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಮತ್ತೆ ಮದ್ಯದಿಂದ ಒಂದು ಸಂಸಾರವೇ ಹಾಳಾಗಿದ್ದು, ತಂದೆ, ತಾಯಿಯನ್ನು ಕಳೆದುಕೊಂಡು ಪುಟ್ಟ ಮಗು ಮಾತ್ರ ಅನಾಥವಾಗಿದೆ. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್
ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಮೇಶ್ ಅವರ ಪತ್ನಿ, ನಕಲಿ ಪೋಷಕರನ್ನು ಸೃಷ್ಟಿಸಿ ರಮೇಶ್ ಯುವತಿಯೊಬ್ಬಳನ್ನು ಮದುವೆಯಾಗಿದ್ದರು. ಈ ವಿಚಾರ ತಿಳಿದು ಯುವತಿ ದೂರವಾಗಲು ತೀರ್ಮಾನಿಸಿ, ಬೇರೊಬ್ಬರ ಜೊತೆಗೆ ಮದುವೆ ನಿಶ್ಚಯ ಮಾಡಿಸಿಕೊಂಡು, ಎಂಗೇಜ್ ಮೆಂಟ್ ಮಾಡಿಕೊಳ್ಳುವ ದಿನ ಚೌಟ್ರಿಗೆ ಬಂದು ಮದುವೆ ಮುರಿದಿದ್ದರು. ನಂತರ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ ಮೇಲೆ ಯುವತಿಯನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಜೊತೆಗಿನ ಶಿಕ್ಷಕನ ಲವ್ವಿಡವ್ವಿ – ಅಶ್ಲೀಲ ಫೋಟೋ ವೈರಲ್
ರಮೇಶ್‍ಗೆ ಬೇರೆ, ಬೇರೆ ಅಕ್ರಮ ಸಂಬಂಧಗಳಿವೆ. ಈ ಬಗ್ಗೆ ಆತನ ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋ, ಅರೆಬೆತ್ತಲೆ ಫೋಟೊಗಳು, ಮಾಟ ಮಂತ್ರದಂತ ಫೋಟೊಗಳಿದ್ದು ಕೆಲ ವೀಡಿಯೋಗಳು ವೈರಲ್ ಆಗಿವೆ. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬೇರೆ, ಬೇರೆ ಯುವತಿಯರನ್ನು ಮದುವೆಯಾಗಿದ್ದಾರೆ ಎಂದು ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪತಿಯಿಂದಲೇ ಮಾನಸಿಕ ಕಿರುಕುಳವಾಗುತ್ತಿದ್ದು, ರಮೇಶ್ ಜೊತೆ ಚನ್ನರಾಯಪಟ್ಟಣ ಸಬ್ ಇನ್ಸ್‍ಪೆಕ್ಟರ್ ಶರಣಪ್ಪ ಸಹ ಕೈ ಜೋಡಿಸಿದ್ದು ನ್ಯಾಯ ಕೊಡಿಸಬೇಕು ಅಂತಾ ದೂರು ನೀಡಿದ್ದಾರೆ.
ಚಾಮರಾಜಪೇಟೆ: ಬೆಂಗಳೂರಿನಲ್ಲಿ ವೃದ್ಧ ಜುಗರಾಜ್ ಜೈನ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ವೃದ್ಧನ ಮನೆಯಲ್ಲಿ ಕೆಲಸ ಮಾಡ್ತಿದ್ದ ಬಿಜೊರಾಮ್, ಹೆಂಡತಿಯ ಕಾಟಕ್ಕೆ ಬೇಸತ್ತು ಜುಗರಾಜ್ ಜೈನ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 15 ಸಾವಿರ ರೂ.ಗೆ ಕೆಲಸ ಮಾಡ್ತಿದ್ದ ಬಿಜೊರಾಮ್‍ಗೆ ಪತ್ನಿ ಹಣ ತರುವಂತೆ ಪ್ರತಿದಿನ ಪೀಡಿಸ್ತಿದ್ಲು. ಇದರಿಂದ ಬೇಸತ್ತಿದ್ದ ಬಿಜೊರಾಮ್ ಪ್ಲಾನ್ ಮಾಡಿ ಓಂಪ್ರಕಾಶ್ ಮಹೇಂದ್ರ ಜೊತೆ ಸೇರಿ ವೃದ್ಧನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಅರ್ಚಕರ ಶವ ಪತ್ತೆ, ವಿಗ್ರಹ ನಾಪತ್ತೆ
ಜುಗರಾಜ್ ಜೈನ್ ಅವರನ್ನು ಕೊಲೆ ಮಾಡಿದ ಬಳಿಕ ಚೀಲದಲ್ಲಿ ಚಿನ್ನ, ಹಣ ತುಂಬಿಕೊಂಡು ಚಿತ್ರದುರ್ಗ, ಹುಬ್ಬಳ್ಳಿ ಮೂಲಕ ಗೋವಾಗೆ ಎಸ್ಕೇಪ್ ಆಗಿ, ಅಲ್ಲಿಂದ ರಾಜಸ್ಥಾನಕ್ಕೆ ಹೋಗಿದ್ರು. ಆದರೆ, ಪೊಲೀಸರು ಬೇಟೆಯಾಡಿ 8.75 ಕೆಜಿ ಚಿನ್ನ, 4 ಕೆಜಿ ಬೆಳ್ಳಿ, 53 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಳ್ಳಾಪುರ: ಗಂಡನ ಹತ್ಯೆಗೆ 40 ಲಕ್ಷ ರೂ.ಗೆ ಸುಪಾರಿ ಕೊಟ್ಟ ಐನಾತಿ ಹೆಂಡತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಟಿ ದಾಸರಹಳ್ಳಿಯ ನಿವಾಸಿ ಮಮತಾ ತನ್ನ ಗಂಡ ಮುಕುಂದನ ಕೊಲೆಗೆ 40 ಲಕ್ಷ ರೂ.ಗೆ ಸುಪಾರಿ ನೀಡಿದ್ದಳು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಮಮತಾ, ಮಮತಾಳ ಸ್ನೇಹಿತೆ ತಸ್ಲೀಮಾ, ಹಾಗೂ ಸುಪಾರಿ ಹಂತಕರಾದ ಮೌಲಾ, ಸಯ್ಯದ್ ನಯೀಮ್‍ರನ್ನು ಬಂಧಿಸಿದ್ದಾರೆ.
ಘಟನೆಯೇನು?: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಬೆಂಗಳೂರಿನ ಟಿ. ದಾಸರಹಳ್ಳಿಯ ಮುಕುಂದ ಎಫ್‍ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಂಗಳೂರಿನಿಂದ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ತಮ್ಮ ನಾಲ್ವರು ಸಹ ಉದ್ಯೋಗಿಗಳೊಂದಿಗೆ ಬೆಂಗಳೂರಿನಿಂದ ಕಚೇರಿಗೆ ಬಂದು ಹೋಗುತ್ತಿದ್ದರು.
ಅದೇ ರೀತಿ ಮೇ 26ರಂದು ಕೆಲಸ ಮುಗಿಸಿ ಸ್ಯಾಂಟ್ರೋ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದಾಗ ದೊಡ್ಡಬಳ್ಳಾಪುರ ನಗರದ ಕೈಗಾರಿಕೆ ಪ್ರದೇಶದಲ್ಲಿ ಸ್ಯಾಂಟ್ರೋ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರು ಗಾಜು ಒಡೆದು ಮುಕುಂದ ಕೊಲೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಕಾರು ಡೋರ್ ಲಾಕ್ ಆಗಿದ್ದು, ಸಾರ್ವಜನಿಕರು ಬಂದ ಕಾರಣ ಹಂತಕರ ಪ್ಲ್ಯಾನ್ ಫ್ಲಾಪ್ ಆಗಿ ವಾಪಸ್ಸಾಗಿದ್ದರು. ಬಿಳಿ ಬಣ್ಣದ ಕಾರಿನಲ್ಲಿ ಬಂದವರು ಕೊಲೆಗೆ ಯತ್ನಿಸಿದ್ದಾರೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರಿಂದ ಸುಪಾರಿ ಹತ್ಯೆ ಬಯಲು:
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಘಟನೆ ನಡೆದ ಸುತ್ತ ಮುತ್ತಲೂ ಏರಿಯಾಗಳಲ್ಲಿನ ಸಿಸಿಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಬಿಳಿ ಬಣ್ಣದ ಕಾರಿನ ಮೇಲೆ ಅನುಮಾನ ಬಂದಿತ್ತು. ಅನುಮಾನದ ಮೇರೆಗೆ ಕಾರು ನಂಬರ್ ಆಧರಿಸಿ ಕಾರು ಪತ್ತೆ ಹಂಚಲು ಮುಂದಾದಾಗ ಆ ಕಾರು ಒಬ್ಬರಲ್ಲ, 7 ಮಂದಿ ಮಾಲೀಕರ ಬದಲಾವಣೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಕಾರನ್ನ ಕೊನೆಗೆ ಗ್ಯಾರೇಜ್ ಒಂದರಲ್ಲಿ ಪತ್ತೆ ಹಚ್ಚಿದ್ದರು. ಪತ್ತೆ ಹಚ್ಚಿ ಆರೋಪಿ ಮೌಲ ಹಾಗೂ ನಯೀಮ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಮತಾಳ ಸುಪಾರಿ ಕಥೆ ಬಯಲಾಗಿದೆ. ಮುಕುಂದನ ಹತ್ಯೆಗೆ ಹೆಂಡತಿ ಮಮತಾ ಸ್ನೇಹಿತೆ ತಸ್ಲೀಮಾ ಮೂಲಕ ಸುಪಾರಿ ಕೊಟ್ಟಿದ್ದಳು ಎನ್ನುವ ವಿಚಾರ ಬಹಿರಂಗವಾಗಿದೆ.
ಗಂಡನ ಮೇಲೆ ಹೆಂಡತಿ ಸುಪಾರಿ ಕೊಟ್ಟಿದ್ದು ಯಾಕೆ?:
ಮಮತಾ ತನ್ನ ಮನೆಯ ಪಕ್ಕದ ಮಹಿಳೆಯೊಬ್ಬರ ಬಳಿ ಸಂಬಂಧಿಕರಿಂದ ಚೀಟಿ ಹಾಕಿಸಿದ್ದಳು. ಆದರೆ ಚೀಟಿ ಹಣ ಪಡೆದ ಮಹಿಳೆ ಪಂಗನಾಮ ಹಾಕಿ ಮೋಸ ಮಾಡಿ ಪರಾರಿಯಾಗಿದ್ದಾಳೆ. ಇದರಿಂದ ಸಂಬಂಧಿಕರೆಲ್ಲಾ ಹಣ ಕೊಡುವಂತೆ ಮಮತಾಳ ದುಂಬಾಲು ಬಿದ್ದಿದ್ದರು.
ಇದ್ರಿಂದ ಗಂಡ 20 ಲಕ್ಷದಷ್ಟು ಸ್ವಂತ ಹಣ ಕೊಟ್ಟಿದ್ದು, ಆದರೂ ಮತ್ತಷ್ಟು ಮಂದಿ ಹಣ ಕೊಡಿ ಅಂತ ಮನೆಗೆ ಬರುತ್ತಿದ್ದರು. ಇದರಿಂದ ದಿನೇ ದಿನೇ ಇದೇ ಆಗೋಯ್ತು ಎಂದು ಹೆಂಡತಿ ಮಮತಾಳ ಮೇಲೆ ಗಂಡ ಕೋಪಗೊಂಡು ಬೈಯ್ಯುತ್ತಿದ್ದ. ಅಷ್ಟೇ ಅಲ್ಲದೇ ಮಮತಾಳ ತಂದೆ, ತಾಯಿಯನ್ನು ಕರೆಸಿ ಹೇಳಿ ಅವಮಾನ ಮಾಡಿದ್ದ.
ಆಗ ತಸ್ಲೀಮಾ ತನಗೆ ಪರಿಚಯ ಇದ್ದ ಮೌಲಾ ಹಾಗೂ ನಯೀಮ್‍ನನ್ನು ಕರೆಸಿ 40 ಲಕ್ಷ ರೂ.ಗೆ ಸುಪಾರಿ ಡೀಲ್ ಒಪ್ಪಿಸಿದ್ದಾಳೆ. ಆಗ ಮಮತಾ ತನ್ನ ಒಡವೆ ಮಾರಿ 10 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದು ಅದೇ ಅಡ್ವಾನ್ಸ್ ಹಣದಲ್ಲಿ 1 ಲಕ್ಷ ಕೊಟ್ಟು ಗೆಟ್ಜ್ ಕಾರು ಖರೀದಿಸಿ ಹತ್ಯೆಗೆ ಮುಂದಾಗಿದ್ದರು.
ಸದ್ಯ ಪೊಲೀಸರು ಪತ್ನಿ ಮಮತಾಳನ್ನು ಬಂಧಿಸಿದ್ದಾರೆ. ವಿಪರ್ಯಾಸ ಅಂದರೆ ಗಂಡನ ಹತ್ಯೆಗೆ ಸುಪಾರಿ ನೀಡಿದ್ದ ಮಮತಾ, ಘಟನೆ ನಡೆದ ದಿನ ಹಾಗೂ ಕಾರು ಬಿಡಿಸಿಕೊಳ್ಳುವಾಗ ಗಂಡನ ಜೊತೆಯಲ್ಲೇ ಪೊಲೀಸ್ ಠಾಣೆಗೆ ಬಂದು ಗೊತ್ತಿಲ್ಲದವಳಂತೆ ನಾಟಕ ಮಾಡಿದ್ದಳು.
ಆದರೆ ಪೊಲೀಸರು ತನಿಖೆ ನಡೆಸಿದಾಗ ನಿಜವಾದ ವಿಚಾರ ತಿಳಿದುಬಂದಿದ್ದು, ಪತ್ನಿ ಮಮತಾ, ಸ್ನೇಹಿತೆ ತಸ್ಲೀಮಾ, ಸುಪಾರಿ ಹಂತಕರಾದ ಶಿಡ್ಲಘಟ್ಟ ಮೂಲದ ಮೌಲಾ, ಕೆ ಜಿ ಹಳ್ಳಿಯ ನಯೀಮ್‍ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ:ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್
ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ 4 ಮಂದಿ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದೇವೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಕೋನ ವಂಶಿಕೃಷ್ಣ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ನಾಗರಾಜ್, ಸಿಪಿಐ ಗಳಾದ ಸತೀಶ್ ಹಾಗೂ ಹರೀಶ್ ಭಾಗಿಯಾಗಿದ್ದು, ಪೊಲೀಸರಿಗೆ ಎಸ್ಪಿ ಕೋನವಂಶಿಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮರಾವತಿ: ಪತ್ನಿ ತನಗೆ ಇಷ್ಟ ಬಂದಂತೆ ಅಡುಗೆ ಮಾಡುತ್ತಿದ್ದಾಳೆ. ಅಡುಗೆ ಒಂದು ಸ್ವಲ್ಪವೂ ರುಚಿಯಾಗಿರುವುದಿಲ್ಲ ಎಂದು ಮನನೊಂದ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಗುಡೂರು ಮಂಡಲದ ಪಿಂಡಿವಾನಿಪಾಲೆಂ ಗ್ರಾಮದಲ್ಲಿ ನಡೆದಿದೆ.
ತಿರುಮಲ ರಾವ್ ಮೃತ ವ್ಯಕ್ತಿ. ಈತ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ನಿರ್ಮಲಾ ಜ್ಯೋತಿ ಹಾಗೂ ತಿರುಮಲ ರಾವ್ ಮದುವೆ ಆಗಿ ಒಂದು ವರ್ಷ ಕಳೆದಿತ್ತು. ಈ ದಂಪತಿಗೆ ಒಬ್ಬಳು ಮಗಳು ಇದೆ. ಆದರೆ ತಿರುಮಲ ರಾವ್ ಮದ್ಯವ್ಯಸನಿಯಾಗಿದ್ದ. ಇದರ ಜೊತೆಗೆ ಪತ್ನಿ ನಿರ್ಮಲಾ ಜ್ಯೋತಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ.
ತಿರುಮಲ ರಾವ್ ಕುಡಿದು ಮನೆಗೆ ಬಂದ್ದಿದ್ದಾನೆ. ಆದರೆ ಪತ್ನಿ ನಿರ್ಮಲಾ ಮಾಡಿದ ಅಡುಗೆ ರುಚಿಯಾಗಿಲ್ಲ ಎಂದು ಜಗಳವಾಡಿದ್ದಾನೆ. ಇದರಿಂದ ಮನನೊಂದು ತಿರುಮಲ ರಾವ್ ಮನಿ ಬಿಟ್ಟು ಅದೇ ಗ್ರಾಮದಲ್ಲಿರುವ ತನ್ನ ಸ್ನೇಹಿತ ಗೋಪಿಯ ಮನೆಗೆ ಹೋಗಿದ್ದ. ಆದರೆ ಮುಂಜಾನೆ ಗೋಪಿ ಕೆಲಸಕ್ಕೆ ಹೋದಾಗ ತಿರುಮಲ ರಾವ್ ಕ್ರಿಮಿನಾಶಕ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ವಿಷಯ ತಿಳಿದ ನೆರೆಹೊರೆಯವರು ನಿರ್ಮಲಾ ಅವರಿಗೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಫಲಾಕರಿಯಾಗದೇ ತಿರುಮಲ ರಾವ್ ಮಚಲಿಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ನಿರ್ಮಲಾ ಪೇಡಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅನುಮಾನಾಸ್ಪದ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಅಪ್ರಾಪ್ತ ಪುತ್ರಿಯ ಅಂಡಾಣು ದಾನ ಮಾಡಲು ಒತ್ತಾಯಿಸಿದ ಪಾಪಿ ತಾಯಿ!
ಬೆಳಗಾವಿ: ಹೆಂಡತಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರ ಹತ್ಯೆಗೈದಿರುವ ಘಟನೆ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ನಿವಾಸಿ ದುಂಡಯ್ಯಾ ನಂದಿಕೊಳ್ಳಮಠ (42) ಕೊಲೆಯಾದ ವ್ಯಕ್ತಿ. ದುಂಡಯ್ಯಾ ನಂದಿಕೊಳ್ಳಮಠ ಅವರು ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿದ ಹೆಂಡತಿ ಮನೆಗೆ ಬಂದಿದ್ದರಂತೆ, ಈ ವೇಳೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ತಲೆಯ ಭಾಗಕ್ಕೆ ಹಲ್ಲೆಗೈದು ಕೊಂದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಬ್ಯಾಂಕ್ ಮ್ಯಾನೇಜರ್ ಗುಂಡಿಕ್ಕಿ ಹತ್ಯೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಲದಕುಪ್ಪೆ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹತ್ಯೆಗೈದ ಘಟನೆ ನಡೆದಿದೆ.
ಮಹದೇವಪ್ಪ (55) ಬಂಧಿತ ಆರೋಪಿ ಹಾಗೂ ಮಹದೇವಮ್ಮ (45) ಮೃತ ಮಹಿಳೆ. ದಂಪತಿ ಕಿಲಗೆರೆ ಹಾಗೂ ಮಾದಲವಾಡಿ ಗ್ರಾಮದ ನಡುವೆ ಇರುವ ಬೇಲದಕುಪ್ಪೆಯ ಜಮೀನೊಂದರಲ್ಲಿ ವಾಸವಾಗಿದ್ದರು. ಇವರ ನಡುವೆ ಇಂದು ಮುಂಜಾನೆ ಏಕಾಏಕಿ ಜಗಳ ನಡೆದಿದೆ. ಇದನ್ನೂ ಓದಿ: ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಸಮಸ್ಯೆ!
ಜಗಳ ವಿಕೋಪಕ್ಕೆ ತಿರುಗಿ ಸ್ನಾನದ ಮನೆಯಲ್ಲಿದ್ದ ಪತ್ನಿ ಮಹದೇವಮ್ಮರನ್ನು ಪತಿ ಮಹದೇವಪ್ಪ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಪತಿ ಮಹದೇವಪ್ಪ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ. ಘಟನೆ ಸಂಬಂಧಿಸಿ ತೆರಕಣಾಂಬಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ
ಪರಸಪ್ಪ ಅವರಿಗೆ ಒಂದೂವರೆ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಇದೀಗ ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕ್ವಾಟ್ರಸ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಮೂಲದ ಪರಸಪ್ಪ ಅವರು ಮೈಸೂರಿನ ದೇವರಾಜ ಠಾಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು 2016 ನೇ ಬ್ಯಾಚ್ ನಲ್ಲಿ ಆಯ್ಕೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಲಬುರಗಿ: ಶಹಬಾದ ತಾಲೂಕಿನ ಮರತೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ಮಂಜುನಾಥ್ ಅಲಿಯಾಸ್ ಮನೋಜ್ ಸಿಂದೆ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೋಜ್ ಅವರ ಪತ್ನಿಯ ಅಣ್ಣ ಮತ್ತು ಆತನ ಪತ್ನಿಯ ನಡುವೆ ಕೌಟುಂಬಿಕ ಕಲಹ ಇದೆ ಎನ್ನಲಾಗಿದೆ. ಈ ನಡುವೆ ಅಣ್ಣನ ಮಗು ಕಾಣೆಯಾಗಿದೆ. ಮಗು ಕಾಣೆಯಾಗಲು ನೀವೇ ಕಾರಣ ಅಂತ ಮನೋಜ್ ಹಾಗೂ ಅವರ ಪತ್ನಿ ಹೆಸರಿನಲ್ಲಿ ಠಾಣೆಗೆ ದೂರು ನೀಡಲಾಗಿತ್ತು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ
ದೂರಿನ ಹಿನ್ನೆಲೆ ಆತನನ್ನು ಠಾಣೆಗೆ ಎಳೆದೊಯ್ದ ಪೊಲೀಸರು, ಎರಡು ದಿನ ಠಾಣೆಯಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ವೇಳೆ ವ್ಯಕ್ತಿಯು ಮಗುವಿನ ನಾಪತ್ತೆಯಲ್ಲಿ ನಮ್ಮ ಕೈವಾಡ ಇಲ್ಲ ಅಂತ ಹೇಳಿದರೂ ಕೇಳದ ಪೊಲೀಸರು ಇವತ್ತು ನಿನ್ನನ್ನು ಮಾತ್ರ ಎಳೆದು ತಂದಿದ್ದೇವೆ. ನಾಳೆ ನಿನ್ನ ಹೆಂಡತಿಯನ್ನೂ ಕೂಡ ಎಳೆದು ತರುತ್ತೇವೆ ಅಂತ ಅವಾಜ್ ಹಾಕಿದ್ದಾರೆ. ಪೊಲೀಸರ ದೌರ್ಜನ್ಯ, ಹೊಡೆತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ಮನೋಜ್ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ತಲೆಗೆ 25 ಲಕ್ಷ ಬಹುಮಾನ ಘೋಷಣೆಗೆಯಾಗಿದ್ದ ನಕ್ಸಲ್ ನಾಯಕ ಶವವಾಗಿ ಪತ್ತೆ
ವಿನಾಕಾರಣ ನನ್ನ ಹಾಗೂ ನನ್ನ ಹೆಂಡತಿ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ಮರ್ಯಾದೆ ಹರಾಜು ಮಾಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಸಾಯಬಣ್ಣಾ ಜೋಗುರ, ಶರಣಮ್ಮ ನಾಟೀಕರ್, ಪ್ರತಿಭಾ ನಾಗೇಶ್ ಹಾಗೂ ಪ್ರತಿಭಾಳ ತಾಯಿ ನಾಲ್ವರ ಹೆಸರು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.
ಘಟನೆಯ ಕುರಿತು ಮನೋಜ್ ಶವವನ್ನು ಶಹಬಾದ್ ಪೊಲೀಸ್ ಠಾಣೆ ಎದುರಿಗಿಟ್ಟು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.