Tag: Wife

  • ಅಕ್ರಮ ಸಂಬಂಧ ಶಂಕೆ –  5 ಮಕ್ಕಳ ತಾಯಿಯನ್ನೇ ಹತ್ಯೆಗೈದ ತಂದೆ

    ಅಕ್ರಮ ಸಂಬಂಧ ಶಂಕೆ – 5 ಮಕ್ಕಳ ತಾಯಿಯನ್ನೇ ಹತ್ಯೆಗೈದ ತಂದೆ

    ನವದೆಹಲಿ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

    CRIME 2

    ಆರೋಪಿಯನ್ನು ಛೋಟೆ ಎಂದು ಗುರುತಿಸಲಾಗಿದ್ದು, ಈತನಿಗೆ 5 ಜನ ಮಕ್ಕಳಿದ್ದಾರೆ. ಆದರೆ ತನ್ನ ಪತ್ನಿ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಹರಿತವಾದ ಮಾರಕಾಸ್ತ್ರದಿಂದ ಪತ್ನಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿ ಇದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾರ್ಯವೈಖರಿ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಮುಂದಾದ ಗ್ರಾ.ಪ ಅಧ್ಯಕ್ಷೆ

    ಘಟನೆ ವೇಳೆ ಗಾಯಗೊಂಡ ಮಹಿಳೆಯನ್ನು ತಕ್ಷಣ ನೆಹರು ವಿಹಾರ್‍ನ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಇದೀಗ ದಂಪತಿ ಮಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    Live Tv

  • ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ಅಯೋಧ್ಯೆ ನದಿಯಲ್ಲಿ ಪತ್ನಿಗೆ ಕಿಸ್‌ ಮಾಡಿದ ಪತಿಯನ್ನೇ ಥಳಿಸಿದ ಸಾರ್ವಜನಿಕರು… Video Viral

    ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ತನ್ನ ಪತ್ನಿಗೆ ಮುತ್ತು ಕೊಟ್ಟ ಪತಿಯನ್ನೇ ಸಾರ್ವಜನಿಕರು ನಿಂದಿಸಿ ಥಳಿಸಿದ್ದಾರೆ. ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪುರುಷನನ್ನು ಆತನ ಹೆಂಡತಿಯಿಂದ ಪಕ್ಕಕ್ಕೆ ಎಳೆದೊಯ್ದು ಸುತ್ತಮುತ್ತಲಿನ ಹಲವರು ಪುರುಷರು ಥಳಿಸಿರುವ ದೃಶ್ಯ ವೀಡಿಯೋದಲ್ಲಿದೆ. ಅಯೋಧ್ಯೆಯಲ್ಲಿ ಇಂತಹ ಅಸಹ್ಯವನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ವೀಡಿಯೋದಲ್ಲಿದೆ. ಇದನ್ನೂ ಓದಿ: ಜೆಪಿ ನಡ್ಡಾ ನಿವಾಸಕ್ಕೆ ಬೆಂಕಿ ಹಚ್ಚಲು ಯತ್ನಿಸಿದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

    ಥಳಿತದ ಸಂದರ್ಭದಲ್ಲಿ ತನ್ನ ಪತಿಯನ್ನು ರಕ್ಷಿಸಲು ಪತ್ನಿ ಮುಂದಾಗಿ, ವಿಫಲಳಾಗಿದ್ದಾಳೆ. ನಂತರ ಅಲ್ಲಿದ್ದ ಜನರು ಆ ದಂಪತಿಯನ್ನು ನದಿಯಿಂದ ಹೊರಗೆ ಕಳುಹಿಸಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.

    ʻಸರಯೂʼ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ. ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ.

    Live Tv

  • ಪತ್ನಿಯನ್ನು ಕೊಂದು ಮಗಳ ಹತ್ಯೆಗೂ ಯತ್ನಿಸಿ ಪೊಲೀಸರಿಗೆ ಕಾಲ್ ಮಾಡಿದ!

    ಪತ್ನಿಯನ್ನು ಕೊಂದು ಮಗಳ ಹತ್ಯೆಗೂ ಯತ್ನಿಸಿ ಪೊಲೀಸರಿಗೆ ಕಾಲ್ ಮಾಡಿದ!

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತನ್ನ 13 ವರ್ಷದ ಮಗಳನ್ನು ಕೂಡ ಕೊಲ್ಲಲು ಯತ್ನಿಸಿ ಯಶವಂತಪುರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಿತ್ರ ಘಟನೆಯೊಂದು ನಡೆದಿದೆ.

    ಹೌದು. ಇಂಥದ್ದೊಂದು ಘಟನೆಗೆ ಕಾರಣವಾಗಿರೋದು ಬೆಂಗಳೂರಿನ ಯಶವಂತಪುರದ ಮತ್ತಿಕೆರೆ. ತಾನೇಂದ್ರ ಎಂಬಾತ ತನ್ನ ಪತ್ನಿ ಅನುಸೂಯಳನ್ನು ಕೊಲೆ ಮಾಡಿ ನಂತರ ತನ್ನ 13 ವರ್ಷದ ಮಗಳನ್ನು ಕೊಲೆಗೆ ಯತ್ನಿಸಿ ಪೊಲೀಸರಿಗೆ ಎರಡು ಕೊಲೆ ಮಾಡಿರುವುದಾಗಿ ಕಾಲ್ ಮಾಡಿದ್ದ.

    ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ತಾನೇಂದ್ರ ಮತ್ತು ಅನುಸೂಯ ಕುಟುಂಬ ನಿರ್ವವಹಣೆಗೆ ಒಂದೂವರೇ ಲಕ್ಷದಷ್ಟು ಹಣ ಸಾಲ ಮಾಡಿಕೊಂಡಿದ್ರಂತೆ. ಹಣ ನೀಡಿದ್ದ ಸಾಲಗಾರರು ಪ್ರತಿದಿನ ಮನೆಯ ಬಳಿ ಬಂದು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದರಂತೆ. ಸಾಲ ತಿರಿಸೋ ವಿಚಾರಕ್ಕೆ ನಿನ್ನೆ ರಾತ್ರಿ ಗಂಡ-ಹೆಂಡತಿಯ ನಡುವೆ ಗಲಾಟೆ ನಡೆದಿದೆ. ಇದರಿಂದ ತೀವ್ರವಾಗಿ ನೊಂದ ಗಂಡ ತಾನೇಂದ್ರ ಹೆಂಡತಿ ಮತ್ತು ಮಗಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳೋದು ಅಂತಾ ನಿರ್ಧಾರ ಮಾಡಿ ಪತ್ನಿಗೆ ತಡರಾತ್ರಿ 2 ಗಂಟೆ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಇದನ್ನೂ ಓದಿ: ಆಫ್ಘನ್‌ನಲ್ಲಿ ಭೂಕಂಪ – ಮೃತರ ಸಂಖ್ಯೆ 1,000ಕ್ಕೆ ಏರಿಕೆ; ಸಂತ್ರಸ್ತರಿಗೆ ನೆರವು ನೀಡ್ತೀವಿ ಎಂದ ತಾಲಿಬಾನ್‌

    ಪತ್ನಿ ಕೊಲೆಯ ಬಳಿಕ ತನ್ನ 13 ವರ್ಷದ ಮಗಳನ್ನು ಕೊಲೆ ಮಾಡೋಕೆ ಯತ್ನಿಸಿದ್ದ. ಈ ವೇಳೆ ಚಾಕು ಇರಿತದಿಂದ ಮಗಳು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾಳೆ. ಮಗಳು ಕೂಡ ಸಾವನ್ನಪ್ಪಿದ್ದಾಳೆ ಅಂತಾ ತಿಳಿದ ತಾನೇಂದ್ರ ಕೆಲ ಕಾಲ ಅವರ ಜೊತೆಗೆ ಕಾಲ ಕಳೆದಿದ್ದ. ಯಾವಾಗ ಮಗಳಿಗೆ ಮತ್ತೆ ಎಚ್ಚರವಾಯ್ತು ಮತ್ತೆ ಕೊಲೆ ಮಾಡೋಕೆ ಮುಂದಾಗಿ ಕೊನೆ ಸಮಯದಲ್ಲಿ ಏನಾಯ್ತೋ ಏನೋ, ಯಶವಂತಪುರ ಪೊಲೀಸರಿಗೆ ಕಾಲ್ ಮಾಡಿ ಕೊಲೆ ಮಾಡಿರೋದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ.

    ಸ್ಥಳಕ್ಕೆ ಹೋದ ಪೊಲೀಸರು, ಮಗಳನ್ನು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮೃತದೇಹದ ಜೊತೆಯೇ ಕೂತಿದ್ದ ಗಂಡ ತಾನೇಂದ್ರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಂತರವಷ್ಟೇ ಕೊಲೆ ಸಾಲಬಾಧೆ ಮಾತ್ರ ಕಾರಣನಾ ಅಥವಾ ಬೇರೆ ಏನಾದ್ರು ಕಾರಣ ಇದ್ಯಾ ಅನ್ನೋದನ್ನು ತಿಳಿಯಬೇಕಿದೆ..

    Live Tv

  • ಹುಡುಗೀರ ಮುಟ್ಟದೇ ಸಿನಿಮಾ ಮಾಡೋಕೆ ಆಗಲ್ಲವಾ? ಅಂದರಂತೆ ರವಿಚಂದ್ರನ್ ಪತ್ನಿ

    ಹುಡುಗೀರ ಮುಟ್ಟದೇ ಸಿನಿಮಾ ಮಾಡೋಕೆ ಆಗಲ್ಲವಾ? ಅಂದರಂತೆ ರವಿಚಂದ್ರನ್ ಪತ್ನಿ

    ಕ್ರೇಜಿಸ್ಟಾರ್ ರವಿಚಂದ್ರನ್ ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ. ಇದ್ದದ್ದನ್ನು ಇದ್ದಂತೆಯೇ ಹೇಳಿ ಬಿಡುತ್ತಾರೆ. ಹಾಗಾಗಿಯೇ ಅವರು ಹಲವರಿಗೆ ಇಷ್ಟವಾಗುತ್ತಾರೆ. ರವಿಚಂದ್ರನ್ ಅಂದರೆ, ಅಲ್ಲಿ ನಾಯಕಿಯರಿಗೆ ಕೊರತೆ ಇರುವುದಿಲ್ಲ. ಕನ್ನಡ ಸಿನಿಮಾ ರಂಗಕ್ಕೆ ಬಾಲಿವುಡ್ ನ ಅನೇಕ ನಟಿಯರನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರವಿಚಂದ್ರನ್ ಅವರು ತಮ್ಮ ಸಿನಿಮಾದಲ್ಲಿ ನಾಯಕಿಯರನ್ನು ಅದ್ಭುತವಾಗಿ ತೋರಿಸುತ್ತಾರೆ ಎನ್ನುವ ಕಾರಣಕ್ಕಾಗಿ ಬಾಲಿವುಡ್ ನಟಿಯರು ಕನ್ನಡ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿದ್ದರಂತೆ.

    ರವಿಚಂದ್ರನ್ ತಮ್ಮ ಸಿನಿಮಾಗಳಲ್ಲಿ ನಾಯಕಿಯರನ್ನು ಎಷ್ಟು ಸುಂದರವಾಗಿ ತೋರಿಸುತ್ತಿದ್ದರೋ, ನಾಯಕಿಯ ಜೊತೆಗೆ ಹಣ್ಣುಗಳಿಗೂ ಅಷ್ಟೇ ಮಹತ್ವ ಕೊಡುತ್ತಿದ್ದರು ಎಂದು ಜೋಕ್ ಇದೆ. ರವಿಚಂದ್ರನ್ ಸಿನಿಮಾಗಳಲ್ಲಿ ದ್ರಾಕ್ಷಿ, ನಿಂಬೆಹಣ್ಣು, ಸೇಬು ಹಣ್ಣುಗಳಿಗೂ ನಟಿಸಲು ಅವಕಾಶ ಸಿಗುತ್ತಿತ್ತು. ಅಷ್ಟರ ಮಟ್ಟಿಗೆ ಹಣ್ಣು ಮತ್ತು ಹೆಣ್ಣಿನೊಂದಿಗೆ ರವಿಮಾಮ ಬೆರೆತು ಹೋಗಿದ್ದರು. ಹಾಗಾಗಿಯೇ ರವಿಚಂದ್ರನ್ ಪತ್ನಿ ಒಂದು ಬಾರಿ “ನಿಮಗೆ ಹುಡುಗಿಯರನ್ನು ಮುಟ್ಟದೇ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲವಾ?’ ಎಂದು ಪ್ರಶ್ನೆ ಕೇಳಿದ್ದರಂತೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್, ಯಾವ ಭಾಷೆಯಲ್ಲಿ ಯಾರು ರಿಲೀಸ್?

    ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ನಟನೆಯ ತ್ರಿವಿಕ್ರಮ್ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರವಿಚಂದ್ರನ್, ‘ಒಂದು ಸಲ ನನ್ನ ಹೆಂಡತಿ, ನನ್ನ ಮುಂದೆ ನಿಂತು ನಿಮಗೆ ಹುಡುಗಿಯರನ್ನು ಮುಟ್ಟದೇ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲವಾ?’ ಎಂದು ಪ್ರಶ್ನೆ ಕೇಳಿ ಬೆಚ್ಚಿಬೀಳಿಸಿದ್ದರು ಎಂದು ಹಾಸ್ಯ ಚಟಾಕಿ ಹಾರಿಸುತ್ತಲೇ ಈ ಗುಟ್ಟನ್ನು ರಟ್ಟು ಮಾಡಿದರು. ವೇದಿಕೆಯ ಮುಂದೆಯೇ ಕುಳಿತಿದ್ದ ರವಿಚಂದ್ರನ್ ಪತ್ನಿ ಈ ಮಾತು ಕೇಳಿಸಿಕೊಂಡು ನಕ್ಕರು.

    Live Tv

  • ಇಳಿಗೆಮಣೆಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪತಿ ಅರೆಸ್ಟ್

    ಇಳಿಗೆಮಣೆಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪತಿ ಅರೆಸ್ಟ್

    ನವದೆಹಲಿ: ತರಕಾರಿ ಕತ್ತರಿಸುವ ಇಳಿಗೆಮಣೆಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ದೆಹಲಿಯ ನೆಹರು ವಿಹಾರ್‌ನಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಮುಂಜಾನೆ 3.40ರ ಸುಮಾರಿಗೆ ದಯಾಲ್‍ಪುರ ಪೊಲೀಸ್ ಠಾಣೆಗೆ ಈ ಘಟನೆ ಕುರಿತಂತೆ ಮಾಹಿತಿ ದೊರೆತಿದೆ. ಪತಿಯಿಂದ ಹಲ್ಲೆಗೊಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್

    ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡ ಮಹಿಳೆಯನ್ನು ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ವೇಳೆ ಮಹಿಳೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ – ರ‍್ಯಾಪಿಡ್ ಆಕ್ಷನ್ ಫೋರ್ಸ್‌ನಿಂದ ಪಂಥ ಸಂಚಲನ

    ದಂಪತಿಯ ಪುತ್ರಿ ಹೇಳಿಕೆ ಆಧಾರದ ಮೇಲೆ ಇದೀಗ ಆರೋಪಿ ವಿರುದ್ಧ ದಯಾಲ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಇಳಿಗೆ ಮಣೆಯಿಂದ ಹೊಡೆದಿರುವುದು ಬೆಳಕಿಗೆ ಬಂದಿದೆ.

    ವಿಚಾರಣೆ ವೇಳೆ ಆರೋಪಿ ತನ್ನ ಪತ್ನಿಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಮತ್ತು ಆಕೆ ಬೇರೆಯವರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಅಂತ ಶಂಕಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿ ಈ ಕೃತ್ಯಕ್ಕೆ ಬಳಸಿದ್ದ ಇಳಿಗೆ ಮಣೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

    Live Tv

  • ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

    ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ

    ನವದೆಹಲಿ: ಪತಿಯೋರ್ವ ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಲೆ ಮಾಡಿ ಶವವನ್ನು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

    ದೆಹಲಿಯ ಕಪಿಲ್ ವಿಹಾರ್ ನಿವಾಸಿ ವಿಜಯ್(38) ಜೂನ್ 18 ರಂದು ಭಾಲ್ಸ್ವಾ ಡೈರಿ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ಕುರಿತು ತನಿಖೆ ಮಾಡಿದ್ದಾರೆ.

    ಪರಿಶೀಲನೆ ವೇಳೆ ಬಾತ್‍ರೂಮ್ ಒಳಗೆ ಬಟ್ಟೆಯಲ್ಲಿ ಸುತ್ತಿದ್ದ ಮೃತ ಸಂತೋಷಿದೇವಿ ದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ್‍ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್

    ತನಿಖೆಯಲ್ಲಿ ತಿಳಿದಿದ್ದೇನು?
    ವಿಜಯ್‍ಗೆ ಈ ಹಿಂದೆ ಬೇರೊಂದು ಮಹಿಳೆ ಜೊತೆ ವಿವಾಹವಾಗಿದ್ದು, ಆತನಿಗೆ 4 ಮಕ್ಕಳಿದ್ದರು. ಆದರೆ ಮೊದಲ ಹೆಂಡತಿ ಅವನಿಂದ ಬೇರೆಯಾಗಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಂತೋಷಿದೇವಿಯನ್ನು ವಿಜಯ್ ಭೇಟಿಯಾಗಿದ್ದು, ನಂತರ ಅದು ಪ್ರೇಮಕ್ಕೆ ತಿರುಗಿಕೊಂಡಿದೆ.

    ಸಂತೋಷಿಗೂ 4 ಮಕ್ಕಳಿದ್ದು 14, 13 ಮತ್ತು 12 ವರ್ಷದ ಮೂವರು ಹುಡುಗಿಯರು ಮತ್ತು 8 ವರ್ಷದ ಒಬ್ಬ ಗಂಡು ಮಗುವಿದೆ. ಆಕೆಯೂ ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ಜೀವನ ನಡೆಸುತ್ತಿದ್ದಳು.

    CNG CRIME

    ಈ ಮಧ್ಯೆ ವಿಜಯ್ ಮತ್ತು ಸಂತೋಷಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಇವರಿಬ್ಬರು ಒಂದು ಮಗುವನ್ನು ಸಹ ಹೊಂದಿದ್ದರು. ನಂತರ ಎಲ್ಲ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ವಿಜಯ್ ಮತ್ತು ಸಂತೋಷಿ ನಡುವೆ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತು. ಇದನ್ನೂ ಓದಿ: ಪತ್ನಿ, ಐವರು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ- ನಾಲ್ವರು ಸಾವು, ಇಬ್ಬರು ಗಂಭೀರ

    CRIME 2

    ಜೂನ್ 17ರ ಸಂಜೆ ಸಂತೋಷಿ ಕೆಲಸ ಮುಗಿಸಿ ವಾಪಸ್ಸಾಗಿದ್ದು, ಎಲ್ಲಾ ಮಕ್ಕಳು ಕೆಳಗೆ ಮಲಗಿಕೊಂಡಿದ್ದರು. ರಾತ್ರಿ 11:30ರ ಸುಮಾರಿಗೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಇದು ಅತಿರೇಕಕ್ಕೆ ಹೋಗಿ ವಿಜಯ್, ಸಂತೋಷಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬೇರೆಕಡೆ ಸಾಗಿಸಲು ಬಟ್ಟೆಯಲ್ಲಿ ಸುತ್ತಿದ್ದಾನೆ. ಆದರೆ ಇದನ್ನು ನಿಭಾಯಿಸಲು ಸಾಧ್ಯವಾಗದೆ ಜೂನ್ 18ರಂದು ರಾತ್ರಿ 8.45ರ ಸುಮಾರಿಗೆ ಪೊಲೀಸರ ಮೊರೆ ಹೋಗಿದ್ದು, ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

    Live Tv

  • ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಪತ್ನಿ ಕತ್ತು ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪತಿ

    ಬಾಗಲಕೋಟೆ: ಪತಿಯೊಬ್ಬ ಪತ್ನಿಯ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮದಲ್ಲಿ ನಡೆದಿದೆ.

    ಸಾವಿತ್ರಿ ವಡ್ಡರ್(32) ಕೊಲೆಯಾದ ದುರ್ದೈವಿ. ಹೂವಿನಹಳ್ಳಿ ಗ್ರಾಮದ ನಿವಾಸಿ ಮುತ್ತಪ್ಪ ವಡ್ಡರ್ ತನ್ನ ಪತ್ನಿ ಸಾವಿತ್ರಿ ವಡ್ಡರ್‌ಗೆ  ಅನೈತಿಕ ಸಂಬಂಧ ಇದೆ ಎಂದು ಶಂಕಿಸಿ ಜಗಳ ಪ್ರಾರಂಭಿಸಿದ್ದಾನೆ. ಇದು ಅತಿರೇಕಕ್ಕೆ ಹೋಗಿ ಮುತ್ತಪ್ಪ, ಸಾವಿತ್ರಿ ಕತ್ತನ್ನು ಹಗ್ಗದಿಂದ ಬಿಗಿದು, ಮಾರಕಾಸ್ತ್ರದಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ:  ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು 

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಮೀನಗಢ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆ ನಿನ್ನೆ(ಬುಧವಾರ) ರಾತ್ರಿ ನಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv

  • ಪತ್ನಿಯಿಂದಲೇ ಪತಿಯ ಕೊಲೆ – ಅಪಘಾತವಾಗಿದೆ ಎಂದು ಬಿಂಬಿಸಲು ಹೋದವಳು ಅರೆಸ್ಟ್‌

    ಪತ್ನಿಯಿಂದಲೇ ಪತಿಯ ಕೊಲೆ – ಅಪಘಾತವಾಗಿದೆ ಎಂದು ಬಿಂಬಿಸಲು ಹೋದವಳು ಅರೆಸ್ಟ್‌

    ಹಾಸನ: ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಪತಿಯನ್ನೇ ಹತ್ಯೆಗೈದು, ಕೃತ್ಯವನ್ನು ಅಪಘಾತ ಎಂದು ಬಿಂಬಿಸಲು ಹೋಗಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿರುವ ಘಟನೆ ಹಾಸದಲ್ಲಿ ನಡೆದಿದೆ.

    ಜೂನ್ 5ರ ರಾತ್ರಿ ಬೈಕ್‍ನಿಂದ ಬಿದ್ದ ಸ್ಥಿತಿಯಲ್ಲಿ ಕೃಷ್ಣೇಗೌಡ(52) ಸಾವನ್ನಪ್ಪಿದ್ದರು. ಮೂಲತಃ ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ, ಮೊಸಳೆಹೊಸಳ್ಳಿ ಸಮೀಪ ಹೆಂಡತಿ ಮನೆಯಲ್ಲಿಯೇ ವಾಸವಿದ್ದರು. ಮನೆಯ ಸಮೀಪ ರಸ್ತೆಯಲ್ಲಿ ಕೃಷ್ಣೇಗೌಡ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಅನುಮಾನಗೊಂಡ ಪೊಲೀಸರಿಗೆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅಸಲಿ ಸತ್ಯ ತಿಳಿದು ಬಂದಿದೆ.

    ಶಾಂತಿಗ್ರಾಮ ಹೋಬಳಿ ಬಸ್ತಿಹಳ್ಳಿ ಗ್ರಾಮದ ಕೃಷ್ಣೇಗೌಡ ಮತ್ತು ಗುಡುಗನಹಳ್ಳಿ ಗ್ರಾಮದ ಜ್ಯೋತಿ ಅವರನ್ನು 23 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪ್ರತಿದಿನ ಕೃಷ್ಣೇಗೌಡರೊಂದಿಗೆ ಜ್ಯೋತಿ ಜಗಳ ತೆಗೆದು, ಕೆಲವು ವೇಳೆ ಹಲ್ಲೆ ಸಹ ಮಾಡುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ:  ದೇವಾಲಯದ ರಥ ಉರುಳಿ ಬಿದ್ದು ಇಬ್ಬರು ಸಾವು – ನಾಲ್ವರಿಗೆ ಗಾಯ

    ಇದೇ ಜಗಳ ವಿಕೋಪಕ್ಕೆ ತಿರುಗಿ ಹರಿತವಾದ ಆಯುಧದಿಂದ ಹೊಡೆದು, ಕತ್ತುಹಿಸುಕಿ ಕೊಲೆ ಮಾಡಿದ್ದಾಳೆ. ಈ ಕೊಲೆಯನ್ನು ಮರೆಮಾಚಲು ಅಪಘಾತವಾಗಿದೆ ಎಂದು ಬಿಂಬಿಸಲು ಬೈಕ್ ಸಮೇತ ಮೃತದೇಹವನ್ನು ರೈಸ್ ಮಿಲ್ ಹತ್ತಿರ ರಸ್ತೆಗೆ ರಾತ್ರೋರಾತ್ರಿ ತಂದು ಹಾಕಿದ್ದಾರೆ. ಕೃಷ್ಣೇಗೌಡನನ್ನು ಕೊಲೆ ಮಾಡಲು ಆತನ ಪತ್ನಿ ಜ್ಯೋತಿಗೆ, ಜ್ಯೋತಿಯ ತಾಯಿ ಪುಟ್ಟಮ್ಮ ಕೂಡ ಸಾಥ್ ನೀಡಿದ ಆರೋಪ ಕೇಳಿ ಬಂದಿದೆ.

    ಈ ಪ್ರಕರಣ ಸಂಬಂಧ ಇದೀಗ ಸ್ವಾಮಿಗೌಡ ಅವರು ಗೊರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರಿಗೆ ವ್ಯಕ್ತಿಯ  ಪತ್ನಿ ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

  • ಬೇರೊಬ್ಬರ ಪತ್ನಿ ಜೊತೆಗೆ ಲವ್ವಿ-ಡವ್ವಿ – ಕೊಲೆಯಾದ ಆಟೋ ಚಾಲಕ

    ಬೇರೊಬ್ಬರ ಪತ್ನಿ ಜೊತೆಗೆ ಲವ್ವಿ-ಡವ್ವಿ – ಕೊಲೆಯಾದ ಆಟೋ ಚಾಲಕ

    ಚಾಮರಾಜನಗರ: ಮನೆಯಲ್ಲಿ ಚಿನ್ನದಂತಹ ಹೆಂಡ್ತಿಯಿದ್ರೂ ಕೆಲ ಗಂಡಸರು ಬೇರೆ ಮನೆಯ ಹೆಂಗಸರ ಸಹವಾಸ ಮಾಡಿ ಜೀವನ ಹಾಳು ಮಾಡಿಕೊಂಡ ಅನೇಕ ನಿದರ್ಶನ ನಮ್ಮ ಕಣ್ಣ ಮುಂದಿವೆ. ಇಂತಹ ಘಟನೆಯ ಸಾಲಿಗೆ ಕೊಳ್ಳೆಗಾಲದಲ್ಲಿ ನಡೆದ ಕೊಲೆ ಪ್ರಕರಣ ಸಹ ಸೇರ್ಪಡೆಯಾಗಿದೆ.

    ಕಳೆದ ಮಾರ್ಚ್ 31 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿಯ ದರ್ಗಾದ ಬಳಿ ಅಪರಿಚಿತ ವ್ಯಕ್ತಿಯ ಕೊಲೆಯಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರ ತಂಡ ನಿಂತಿದ್ದು ರಾಮನಗರದಲ್ಲಿ. ಹೌದು, ಅಲ್ಲಿ ಕೊಲೆಯಾದ ವ್ಯಕ್ತಿ ಸೈಯದ್ ಅರೀಫ್ ಪಾಷಾ ಮೂಲತಃ ರಾಮನಗರದ ನಿವಾಸಿ. ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಇದ್ದಿದ್ರೆ ಇವತ್ತು ಕೊಲೆಯಾಗುವ ಪರಿಸ್ಥಿತಿ ಬರುತ್ತ ಇರಲಿಲ್ಲ. ಇದನ್ನೂ ಓದಿ: ವೀಸಾ ಇಲ್ಲದೇ ಇಂಡೋ-ನೇಪಾಳ ಗಡಿಗೆ ಬಂದಿದ್ದ ಇಬ್ಬರು ಚೀನಿ ಪ್ರಜೆಗಳು ಅರೆಸ್ಟ್ 

    ಈತ ಆಟೋ ಚಾಲನೆ ಮಾಡಪ್ಪ ಅಂದ್ರೆ ಬೇರೆಯವರ ಪತ್ನಿ ಜೊತೆ ಆಟ ಆಡ್ತಿದ್ದ. ಅದೇ ರಾಮನಗರದ ರೇಷ್ಮೆಗೂಡು ವ್ಯಾಪಾರಿ ಸೈಯದ್ ಸಿಕಂದರ್ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ವಿಚಾರ ತಿಳಿದ ಸಿಕಂದರ್ ಇಬ್ಬರಿಗೂ ಬುದ್ಧಿವಾದ ಹೇಳಿದ್ದ. ಆದ್ರೆ ಸಿಕಂದರ್ ಮಾತು ಕೇಳದ ಇಬ್ಬರೂ ತಮ್ಮ ಆಟ ಮುಂದುವರೆಸಿದ್ರು. ಇದರಿಂದ ರೊಚ್ಚಿಗೆದ್ದ ಸಿಕಂದರ್ ತನ್ನ ಸ್ನೇಹಿತರ ಜೊತೆ ಸೇರಿ ಸೈಯದ್ ಅರೀಫ್ ಪಾಷಾಗೆ ಮಸಣದ ಹಾದಿ ತೋರಿದ್ದಾನೆ.

    ಕೊಲೆಗೆ ಪ್ಲಾನ್‌
    ಸಿಕಂದರ್ ಮಾತು ಕೇಳದ ಅರೀಪ್ ಪಾಷಾನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ತನ್ನ ಸ್ನೇಹಿತರ ಜೊತೆ ಅವನನ್ನು ಶಿವನಸಮುದ್ರದ ದರ್ಗಾ ದರ್ಶನ ಮಾಡಿಕೊಂಡು ಬರೋಣಾ ಎಂದು ಕರೆದುಕೊಂಡು ಬಂದಿದ್ದಾನೆ. ಸಿಕಂದರ್ ಮಾತು ಕೇಳಿ ಬಂದ ಸೈಯದ್ ಅರೀಪ್ ಪಾಷಾನನ್ನು ಸಿಕಂದರ್ ಮತ್ತು ಆತನ ಸ್ನೇಹಿತರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ನಂತರ ಏನು ಗೊತ್ತಿಲ್ಲದಂತೆ ಅಲ್ಲಿಂದ ಜಾಗ ಖಾಲಿ ಮಾಡಿದ್ರು. ಇದನ್ನೂ ಓದಿ:  ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ 

    ಇತ್ತ ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೈಯದ್ ಸಿಕಂದರ್ ಈತನ ಸ್ನೇಹಿತರಾದ ಮುಸಾವೀರ್, ಶೌಕತ್ ಅಲಿ, ಹಬೀಬ್ ವುಲ್ಲಾ, ಸೈಯದ್ ಸಲೀಂ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

  • ಪತ್ನಿ ಜೊತೆಗೆ ಜಗಳವಾಡಿ ಪೊಲೀಸ್ ಠಾಣೆಯಲ್ಲಿ ಇಲಿ ಪಾಷಾಣ ಸೇವಿಸಿದ

    ಪತ್ನಿ ಜೊತೆಗೆ ಜಗಳವಾಡಿ ಪೊಲೀಸ್ ಠಾಣೆಯಲ್ಲಿ ಇಲಿ ಪಾಷಾಣ ಸೇವಿಸಿದ

    ಜೈಪುರ: ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ತೆರಳಿ ಇಲಿ ಪಾಷಾಣ ಸೇವಿಸಿರುವ ಘಟನೆ ಭರತ್‍ಪುರದಲ್ಲಿ ನಡೆದಿದೆ.

    ಯೋಗೇಶ್ ಮತ್ತು ಅವರ ಹಿರಿಯ ಸಹೋದರ ಲೋಕೇಶ್ ಆಗ್ರಾ ಮೂಲದ ಇಬ್ಬರು ಸಹೋದರಿಯರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಹೆಂಡತಿಯರು ಜಗಳವಾಡಲು ಪ್ರಾರಂಭಿಸಿದರು.

    ಗುರುವಾರ ರಾತ್ರಿ ಲೋಕೇಶ್ ಪತ್ನಿಯೊಂದಿಗೆ ಜಗಳವಾಡಿದ್ದರಿಂದ ಪೊಲೀಸರಿಗೆ ಕರೆ ಮಾಡಿ ಆತನನ್ನು ಪತ್ನಿ ಅರೆಸ್ಟ್ ಮಾಡಿಸಿದ್ದರು. ತನಗೂ ಇದೇ ಪರಿಸ್ಥಿತಿ ಬರಬಹುದೆಂಬ ಭಯದಿಂದ ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿದ ಯೋಗೇಶ್ ತನ್ನ ಸಹೋದರನ ಪತ್ನಿಯಂತೆ ತನ್ನ ಪತ್ನಿ ಕೂಡ ಯಾವಾಗಲೂ ಜಗಳವಾಡುತ್ತಿರುತ್ತಾಳೆ ಎಂದು ಆರೋಪಿಸಿ ಇಲಿ ಪಾಷಾಣ ಸೇವಿಸಿದ್ದಾನೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ಈ ಕುರಿತಂತೆ ಮಾತನಾಡಿದ ರೈಲ್ವೆ ಹೊರಠಾಣೆ ಪ್ರಭಾರಿ ರಾಕೇಶ್ ಮಾನ್ ಅವರು, ಪೊಲೀಸ್ ಠಾಣೆಗೆ ಬಂದ ಯೋಗೇಶ್, ತನ್ನ ಪತ್ನಿ ಮತ್ತು ಆಕೆಯ ಸಹೋದರಿ ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳುತ್ತಾ ಇಲಿ ಪಾಷಾಣ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದರು. ಈ ವೇಳೆ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರೂ ಸಹೋದರಿಯರು ತವರಿನಿಂದ ಬಂದಾಗಿನಿಂದಲೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಇಬ್ಬರು ಸಹೋದರರು ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    POLICE JEEP

     

    ಕ್ಷುಲ್ಲಕ ವಿಷಯಗಳಿಗೆ ಸಹೋದರಿಯರಿಬ್ಬರು ಪ್ರತಿನಿತ್ಯ ಜಗಳವಾಡುತ್ತಿದ್ದರು ಮತ್ತು ಪೊಲೀಸರಿಗೆ ಕರೆ ಮಾಡಿ ಬಂಧಿಸಿಸುವಂತೆ ಬೆದರಿಕೆಯೊಡ್ಡುತ್ತಿದ್ದರು. ಅಲ್ಲದೇ ಇಬ್ಬರು ಸೊಸೆಯಂದಿರು ಪರಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಪತಿಯ ಆಸ್ತಿಯನ್ನು ಕಬಳಿಸಲು ಕುಟುಂಬಸ್ಥರೊಂದಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಅತ್ತೆ ಆರೋಪಿಸಿದ್ದಾರೆ.