Tag: Wife

  • ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ –  ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ

    ಒಂದಲ್ಲ, ಎರಡಲ್ಲ 6 ಮಂದಿಯ ಜೊತೆ ವಿವಾಹ – ಪತ್ನಿಯರಿಗೂ ಬಂದಿಲ್ಲ ಅನುಮಾನ, ಕೊನೆಗೆ ಸಿಕ್ಕಿ ಬಿದ್ದ

    ಹೈದರಾಬಾದ್: ಒಬ್ಬರಿಗೆ ತಿಳಿಯದೇ ಇನ್ನೊಬ್ಬಳನ್ನು ಮದುವೆಯಾಗುವುದು ಕೇವಲ ಸಿನಿಮಾದಲ್ಲಿ ಮಾತ್ರ ಸಾಧ್ಯ, ನಿಜ ಜೀವನದಲ್ಲಿ ಇದು ಸಾಧ್ಯವೇ ಇಲ್ಲ ಎಂದು ತಿಳಿದುಕೊಂಡಿರುವವರೂ ಈ ಸುದ್ದಿಯನ್ನು ಓದಲೇ ಬೇಕು. ಇಲ್ಲೊಬ್ಬ ಅಸಾಮಿ ಒಂದಲ್ಲ, ಎರಡಲ್ಲ ಆರು ಮದುವೆಯಾಗಿದ್ದು, ಯಾರೊಬ್ಬರಿಗೂ ತಿಳಿಯದಂತೆ ಜೀವನ ನಡೆಸುತ್ತಿದ್ದ ಎಂಬುದನ್ನು ಹೈದರಾಬಾದ್ ಪೊಲೀಸರು ಕಂಡುಹಿಡಿದಿದ್ದಾರೆ.

    ತನ್ನ ಹಣದೊಂದಿಗೆ ಪತಿ ಪರಾರಿಯಾಗಿದ್ದಾನೆ ಎಂದು ಹೈದರಾಬಾದ್‍ನ ಪೊಲೀಸರಿಗೆ ಮಹಿಳೆಯೊಬ್ಬಳು ದೂರು ಕೊಟ್ಟಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆತನ ಬಗ್ಗೆ ತನಿಖೆ ಮಾಡಲು ಪ್ರಾರಂಭ ಮಾಡಿದ್ದಾರೆ. ಈ ವೇಳೆ ಪೊಲೀಸರೇ ಆ ವ್ಯಕ್ತಿ ಬಗ್ಗೆ ತಿಳಿದುಕೊಂಡು ಆಶ್ಚರ್ಯಗೊಂಡಿದ್ದಾರೆ.

    ಆಂಧ್ರಪ್ರದೇಶದ ಮಂಗಳಗಿರಿ ಮೂಲದ ವ್ಯಕ್ತಿ ಕೇವಲ ದೂರುದಾರರನ್ನು ಮಾತ್ರವಲ್ಲದೆ ಐದು ಮಹಿಳೆಯರನ್ನು ಮದುವೆಯಾಗಿದ್ದಾನೆ. ಆದರೆ ಈ ಬಗ್ಗೆ ಯಾವ ಮಹಿಳೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    MARRIAGE

    ಹೈದರಾಬಾದ್‍ನ ಪೊಲೀಸರು ಗುರುವಾರ ಆರೋಪಿ ಅಡಪ ಶಿವ ಶಂಕರ ಬಾಬು(33)ನನ್ನು ವಿಶಾಖಪಟ್ಟಣಂನಿಂದ ಬಂಧಿಸಿ ನಂತರ ಹೈದರಾಬಾದ್‍ಗೆ ಕರೆತಂದಿದ್ದಾರೆ. ಪ್ರಸ್ತುತ ಬಾಬು ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆ ಆರೋಪಗಳನ್ನು ಆಧಾರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಬೇರೆ ವ್ಯಕ್ತಿಗಳು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ:  ಭಾರತೀಯರು, ಸಿಖ್ ದೇಶಬಾಂಧವರು ಆಫ್ಘಾನ್‍ಗೆ ಮರಳಿ: ತಾಲಿಬಾನ್

    MARRIAGE

    ದೂರಿನಲ್ಲಿ ಏನಿತ್ತು?
    ಪೊಲೀಸರನ್ನು ಸಂಪರ್ಕಿಸಿದ ಮಹಿಳೆ 2021ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‍ನಲ್ಲಿ ಅವನ ಪ್ರೊಫೈಲ್ ನೋಡಿದ ನಂತರ ಬಾಬುನನ್ನು ಮದುವೆಯಾಗಲು ನಿರ್ಧಾರಿಸಿದ್ದಾಳೆ. ನಂತರ ಒಪ್ಪಿಗೆ ಮೇರೆಗೆ ಅವರಿಬ್ಬರು ಮದುವೆಯಾಗಿದ್ದಾರೆ. ಮದುವೆಯಾದ ಸ್ವಲ್ಪ ದಿನಗಳ ನಂತರ ಆತ ಆಕೆಯ ಚಿನ್ನಾಭರಣಗಳು ಮತ್ತು 20 ಲಕ್ಷ ರೂಪಾಯಿ ಮೌಲ್ಯದ ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದಳು.

    Live Tv
    [brid partner=56869869 player=32851 video=960834 autoplay=true]

  • ಗೂಗಲ್ ಕೋ-ಫೌಂಡರ್ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಮಸ್ಕ್

    ಗೂಗಲ್ ಕೋ-ಫೌಂಡರ್ ಪತ್ನಿ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಗೂಗಲ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಸೆರ್ಗೆ ಬ್ರಿನ್ ಅವರ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು. ಆದರೆ ಮಸ್ಕ್ ಈ ಸುದ್ದಿಗೆ ತೆರೆ ಎಳೆದಿದ್ದಾರೆ.

    ಟ್ವಟ್ಟರ್‌ನಲ್ಲಿ ಮಸ್ಕ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತು ಸೆರ್ಗೆ ಒಳ್ಳೆಯ ಸ್ನೇಹಿತರು. ಕಳೆದ ರಾತ್ರಿ ನಾವಿಬ್ಬರು ಒಟ್ಟಿಗೆ ಪಾರ್ಟಿಯಲ್ಲಿದ್ದೆವು. ನಾನು ಮೂರು ವರ್ಷಗಳಲ್ಲಿ ಎರಡು ಬಾರಿ ಮಾತ್ರ ನಿಕೋಲ್ ಅವರನ್ನು ನೋಡಿದ್ದೇನೆ. ನಾವಿಬ್ಬರು ಎರಡು ಬಾರಿ ಭೇಟಿಯಾದಾಗ ಅನೇಕ ಜನರು ನಮ್ಮ ಸುತ್ತ ಇದ್ದರು. ಇದು ಬಿಟ್ಟು ಯಾವುದೇ ರೋಮ್ಯಾನ್ಸ್ ನಮ್ಮ ಮಧ್ಯೆ ನಡೆದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ 20 ದಿನಗಳಿಂದ ನಾಪತ್ತೆಯಾಗಿದ್ದ ಇಬ್ಬರು ಕಾರ್ಮಿಕರ ರಕ್ಷಣೆ – ಇನ್ನೂ ಸಿಕ್ಕಿಲ್ಲ 9 ಮಂದಿ 

    ಬ್ರಿನ್ ಅವರು ತಮ್ಮ ಪತ್ನಿ ನಿಕೋಲ್ ಶಾನಹಾನ್ ಅವರ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇವರಿಬ್ಬರು 2021 ಡಿಸೆಂಬರ್ 15ರಿಂದ ಬೇರೆಯಾಗಿಯೇ ಜೀವನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮಸ್ಕ್ ಮತ್ತು ನಿಕೋಲ್ ಶಾನಹಾನ್ ಅವರಿಗೆ ಸಂಬಂಧವಿದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಈ ಕುರಿತು ಇಬ್ಬರು ಏನನ್ನು ಹೇಳಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕೊನೆ ಕ್ಷಣದಲ್ಲಿ ಟ್ರಿಪ್‍ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ

    ಕೊನೆ ಕ್ಷಣದಲ್ಲಿ ಟ್ರಿಪ್‍ಗೆ ಕೈಕೊಟ್ಟ ಪತ್ನಿ- ಪಿಲ್ಲೊ ಜೊತೆ ಹೊರಟ ಪತಿ

    ಮನಿಲಾ: ಸಾಮಾನ್ಯವಾಗಿ ಸ್ನೇಹಿತರೋ, ಸಂಬಂಧಿಕರೋ ಅಥವಾ ಸೋಲೋ ಟ್ರೀಪ್‍ಗಳನ್ನು ಮಾಡಿರೋದನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ಪತ್ನಿ ಬದಲಿಗೆ ತನ್ನ ಹೆಂಡತಿಯ ಚಿತ್ರವಿರುವ ದಿಂಬಿನ ಜೊತೆ ರಜೆಯ ಮಜಾವನ್ನು ಕಳೆಯಲು ಪ್ರವಾಸ ಕೈಗೊಂಡಿದ್ದಾನೆ.

    ಹೌದು.. ಈ ವ್ಯಕ್ತಿ ಫಿಲಿಪೈನ್ಸ್ ನಿವಾಸಿಯಾಗಿದ್ದಾನೆ. ಈತನ ಹೆಸರು ರೇಮಂಡ್ ಟ್ಯಾನ್ ಫಾರ್ಟುನಾಡೋ. ಈತ ಹಾಗೂ ಈತನ ಪತ್ನಿ ಜೊವಾನ್ನಾಳ ಇಬ್ಬರು ರಜೆಯಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದರು. ಅದರಂತೆ ಎಲ್ಲಾ ರೀತಿಯ ತಯಾರಿಯನ್ನು ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಜೊವಾನ್ನಾಳಗೆ ಕೆಲಸ ಬಂದಿದ್ದರಿಂದ ಆಕೆ ಕೊನೆ ಕ್ಷಣದಲ್ಲಿ ಪ್ರವಾಸವನ್ನು ರದ್ದು ಪಡಿಸಿದ್ದಳು.

    ಇದರಿಂದಾಗಿ ಫಾರ್ಟುನಾಡೋಗೆ ಒಬ್ಬನೇ ಪ್ರವಾಸಕ್ಕೆ ಹೋಗುವ ಪರಿಸ್ಥಿತಿ ಬಂತು. ಆದರೆ ಆತ ತನ್ನ ಪತ್ನಿಯೊಂದಿಗೆ ಸಮಯ ಕಳೆಯಲು ಬಯಸಿದ್ದ. ಇದರಿಂದಾಗಿ ಆತ ಟ್ರಿಪ್‍ಗೆ ಹೋಗುವಾಗ ತನ್ನ ಜೊತೆ ಪತ್ನಿ ಬದಲಿಗೆ ಆಕೆಯ ಫೋಟೋವಿರುವ ಪಿಲ್ಲೊವನ್ನು ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    ತಾನು ಹೋದ ಸ್ಥಳದಲ್ಲೆಲ್ಲಾ ಆ ಪಲ್ಲೊ ಜೊತೆಗೆ ಫೋಟೋವನ್ನು ಹಾಕಿದ್ದಾನೆ. ಅಷ್ಟೇ ಅಲ್ಲದೇ ವಿಮಾನದಲ್ಲಿ ಆ ಪಿಲ್ಲೊಗೆಂದೇ ಪ್ರತ್ಯೇಕ ಸೀಟ್‍ನ್ನು ಕಾಯ್ದಿರಿಸಿದ್ದ. ಅಷ್ಟೇ ಅಲ್ಲದೇ ಆ ಪಿಲ್ಲೊವೊಂದಿಗೆ ಕೋವಿಡ್ ನಿಯಮವನ್ನು ಅನುಸರಿಸಿದ್ದಾನೆ. ಫಾರ್ಟುನಾಡೋ ಶಾಪಿಂಗ್ ಮಾಡುವಾಗ, ಡಾಯಿಂಗ್ ಮಾಡುವಾಗ ಅಷ್ಟೇ ಅಲ್ಲದೇ ತಿಂಡಿ ತಿನ್ನುವಾಗಲೂ ಆ ಪಿಲ್ಲೊವನ್ನು ತೆಗೆದುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    ವಿದ್ಯುತ್ ಕಂಬಕ್ಕೆ ಕಟ್ಟಿ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ – ರಸ್ತೆಯಲ್ಲೇ ಧರಧರನೇ ಎಳೆದಾಡಿದ

    ಲಕ್ನೋ: ತನ್ನ ಸ್ವಂತ ಪತ್ನಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ವ್ಯಕ್ತಿಯೊಬ್ಬ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಜುಲೈ 14 ರಂದು ಆಗ್ರಾದ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರ್ಸೇನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. 22 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಕುಸುಮಾ ದೇವಿ ಅವರನ್ನು ಪತಿ ಶಯಂಬಿಹಾರಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾನೆ. ನಂತರ ಆಕೆಯನ್ನು ಸಡಿಲಗೊಳಿಸಿ ತನ್ನ ಹಿಂದೆ ಧರಧರನೇ ಎಳೆದುಕೊಂಡು ಹೋಗಿರುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಆರೋಪಿ ಹಾಗೂ ಆತನ ತಾಯಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದು, ಇದೀಗ ನಾಪತ್ತೆಯಾಗಿದ್ದಾರೆ ಎಂದು ಸಿಕಂದರಾ ಪೊಲೀಸ್ ಠಾಣೆಯ ಉಸ್ತುವಾರಿ ಆನಂದ್ ಕುಮಾರ್ ಶಾಹಿ ತಿಳಿಸಿದ್ದಾರೆ.

    ಜುಲೈ 14 ರಂದು ಪತಿ ಮತ್ತು ಅತ್ತೆ ಸೇರಿಕೊಂಡು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಕುಸುಮಾ ದೇವಿ ಅವರು ದೂರು ನೀಡಿದ್ದರು. ಇದೀಗ ಶ್ಯಾಂಬಿಹಾರಿ ಮತ್ತು ಆತನ ತಾಯಿ ಬರ್ಫಾ ದೇವಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 504 (ಉದ್ದೇಶಪೂರ್ವಕವಾಗಿ ಅವಮಾನಿಸುವುದು), 342 (ತಪ್ಪಾದ ಬಂಧನ) ಮತ್ತು 354 ((ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲದಿಂದ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೀವನಾಂಶ ಕೇಳಿದ್ದಕ್ಕೆ ಅಕ್ರಮ ಸಂಬಂಧಕ್ಕೆ ಅಡ್ಡಿ – ಪತ್ನಿಯನ್ನೆ ಬರ್ಬರವಾಗಿ ಕೊಂದ ಪತಿ

    ಜೀವನಾಂಶ ಕೇಳಿದ್ದಕ್ಕೆ ಅಕ್ರಮ ಸಂಬಂಧಕ್ಕೆ ಅಡ್ಡಿ – ಪತ್ನಿಯನ್ನೆ ಬರ್ಬರವಾಗಿ ಕೊಂದ ಪತಿ

    ಹಾಸನ: ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ಪಟ್ಟಣದ ಪಂಪ್‍ಹೌಸ್ ರಸ್ತೆಯಲ್ಲಿ ಬುಧವಾರ ಸಂಜೆ ನಡೆದಿದೆ.

    ಅಶ್ವಿನಿ(36) ಕೊಲೆಯಾದ ಮಹಿಳೆಯಾಗಿದ್ದು, ಕೊಲೆ ಮಾಡಿದ ನಂತರ ಪತಿ ಜಗದೀಶ್ ಪರಾರಿಯಾಗಿದ್ದಾನೆ. ಶಾಲೆಯಿಂದ ಬಂದ ಮಕ್ಕಳು ಮನೆ ಬಾಗಿಲು ತೆರೆದು ಒಳಹೋದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

    ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ 

    ಏನಿದು ಘಟನೆ?
    ಅಶ್ವಿನಿ ಹಾಗೂ ಜಗದೀಶ್ 17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗುವಿತ್ತು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಜಗದೀಶ್ ಅದನ್ನು ಬಿಟ್ಟು ಮೆಡಿಕಲ್ ಶಾಫ್ ಇಟ್ಟುಕೊಂಡಿದ್ದ. ಲಾಸ್ ಆದ ಕಾರಣ ಅಂಗಡಿ ಕ್ಲೋಸ್ ಮಾಡಿದ್ದ.

    ಹಣಕಾಸು ವಿಚಾರಕ್ಕೆ ಆಗಾಗ್ಗೆ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಜಗದೀಶ್ ಒಮ್ಮೆ ಅಶ್ವಿನಿಗೆ ಹಲ್ಲೆ ಮಾಡಿದ್ದ ಪರಿಣಾಮ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದಾದ ನಂತರ ಬೇರೊಬ್ಬ ಮಹಿಳೆಯೊಂದಿಗೆ ಜಗದೀಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಅಶ್ವಿನಿ ವಿರೋಧಿಸಿದ್ದಕ್ಕೆ ಹಲವು ಬಾರಿ ಹಲ್ಲೆ ನಡೆಸಿದ್ದ. ಇದರಿಂದ ಬೇಸತ್ತ ಅಶ್ವಿನಿ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.

    ನಾಲ್ಕು ತಿಂಗಳ ಹಿಂದಷ್ಟೇ ಗಂಡನನ್ನು ಬಿಟ್ಟು ಮಗಳೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಶ್ವಿನಿ ಮೆಡ್‍ಪ್ಲಸ್‍ಗೆ ಕೆಲಸಕ್ಕೆ ಹೋಗುತ್ತಿದ್ದಳು. ಜೀವನಾಂಶ ನೀಡಬೇಕು ಎನ್ನುವ ಕಾರಣಕ್ಕೆ ಮಗನನ್ನು ಕರೆದುಕೊಂಡು ಬಂದ ಜಗದೀಶ್, ಅಶ್ವಿನಿ ಹಾಗೂ ಮಕ್ಕಳ ಜೊತೆಯಲ್ಲಿ ವಾಸವಿದ್ದ.

    ಬುಧವಾರ ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿ, ನಂತರ ಪತ್ನಿಯನ್ನು ಕೆಲಸಕ್ಕೆ ಬಿಟ್ಟು ಬಂದಿದ್ದ. ಮಧ್ಯಾಹ್ನ ಊಟಕ್ಕೆಂದು ಪತ್ನಿಯನ್ನು ಬೈಕ್‍ನಲ್ಲಿ ಮನೆಗೆ ಕರೆದುಕೊಂಡು ಬಂದು ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಮಕ್ಕಳು ಶಾಲೆಯಿಂದ ಬಂದು ಮನೆ ಬಾಗಿಲು ತೆರೆದು ನೋಡಿದಾಗ ಅವರ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ. ಇದನ್ನೂ ಓದಿ:  Sena Vs Sena: ಉದ್ಧವ್ ಶಿಬಿರಕ್ಕೆ ತಕ್ಷಣದ ಪರಿಹಾರವಿಲ್ಲ, ಆಗಸ್ಟ್ 1 ರಂದು ಮುಂದಿನ ವಿಚಾರಣೆ: ಕೋರ್ಟ್

    ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಶ್ವಿನಿ ಪೋಷಕರು ಬರುವಿಕೆಗಾಗಿ ಕಾಯುತ್ತಿದ್ದಾರೆ. ಇತ್ತ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥವಾಗಿದ್ದು, ಪುಟ್ಟ ತಮ್ಮನನ್ನು ಅಕ್ಕ ಸಂತೈಸುತ್ತಿದ್ದು ಕರುಳು ಹಿಂಡುವಂತಿತ್ತು.

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ

    ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ

    ಚಂಢೀಗಢ: ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವುದು, ಅದನ್ನು ನೋಡಿ ಜನರು ಕಾಮೆಂಟ್ ಮಾಡುವುದು ಸಾಮಾನ್ಯ. ಆದರೆ ಯುವಕನೊಬ್ಬ ಮಹಿಳೆಯೊಬ್ಬಳಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದ್ದಕ್ಕೆ ಪತಿ ಗರಂ ಆಗಿರುವ ಸುದ್ದಿಯೊಂದು ಪಂಜಾಬ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಮುಂಬೈ, ಪುಣೆ, ಪಂಜಾಬ್ ಮತ್ತು ದೆಹಲಿ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಹಾಸ್ಯದ ಚಟಾಕಿ ಹಾರಿಸುವುದರಲ್ಲಿ ಹೆಸರುವಾಸಿ. ಈ ಮೂಲಕ ಅವರು ನಾಗರಿಕರನ್ನು ರಕ್ಷಿಸುವ ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ. ಈ ಬಾರಿ, ಟ್ವಿಟ್ಟರ್ ಬಳಕೆದಾರರು ಸಮಸ್ಯೆಯೊಂದರ ಕುರಿತು ಪೊಲೀಸರನ್ನು ಸಂಪರ್ಕಿಸಿದಾಗ ಪಂಜಾಬ್ ಪೊಲೀಸರು ಆ ಪೋಸ್ಟ್ ಅನ್ನು ರೀ-ಟ್ವೀಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 26 ಸೀರೆ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್

    ಯುವಕ ಸುಶಾಂತ್ ದತ್ ಟ್ವಿಟ್ಟರ್ ಮಾಡಿದ್ದು, ನಾನು ಮಹಿಳೆಯೊಬ್ಬರಿಗೆ ‘ಐ ಲೈಕ್ ಯೂ’ ಎಂದು ಸಂದೇಶವನ್ನು ಕಳುಹಿಸಿದ ನಂತರ ಆಕೆಯ ಪತಿ ನನಗೆ ಥಳಿಸಿದ್ದಾರೆ. ಅವರು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ವೇಳೆ ಪ್ರತಿಬಾರಿಯೂ ನಾನು ಅವರ ಬಳಿ ಕ್ಷಮೆ ಕೇಳಿದ್ದೇನೆ. ಆದರೂ ಅವರು ನನ್ನನ್ನು ಬಿಟ್ಟಿಲ್ಲ. ಈಗ ನಾನು ನನ್ನ ಸುರಕ್ಷತೆಯ ಬಗ್ಗೆ ಚಿಂತಿತನಾಗಿದ್ದೇನೆ. ಅದಕ್ಕೆ ನಾನು ಪೊಲೀಸರ ಸಹಾಯವನ್ನು ಕೋರುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

    ಈ ಪೋಸ್ಟ್ ನೋಡಿದ ಪೊಲೀಸರು ತಮ್ಮ ಟ್ವಿಟ್ಟರ್‌ನಲ್ಲಿ ರೀ-ಟ್ವೀಟ್ ಮಾಡಿಕೊಂಡಿದ್ದಾರೆ. ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಪೊಲೀಸರು, ಮಹಿಳೆಗೆ ನೀವು ಕಳುಹಿಸಿರುವ ಅನಗತ್ಯ ಸಂದೇಶದ ಬಗ್ಗೆ ಯಾಕೆ ಯೋಚಿಸುತ್ತಿದ್ದೀರಿ. ಆದರೆ ಅವರು ನಿಮ್ಮನ್ನು ಹೊಡೆಯಬಾರದಿತ್ತು. ಅವರು ನಿಮ್ಮ ಬಗ್ಗೆ ನಮಗೆ ವರದಿ ಮಾಡಿರಬೇಕಿತ್ತು. ಆಗ ನಾವು ಕಾನೂನಿನ ಅಡಿಯಲ್ಲಿ ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತೀದ್ದೆವು. ಈ ಎರಡೂ ಅಪರಾಧಗಳಿಗೂ ಕಾನೂನಿನ ಪ್ರಕಾರ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬರೆದು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ 

    ಈ ಪೋಸ್ಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಪೊಲೀಸರು, ನೀವು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ ಎಂದು ಹೇಳಿದ್ದಾರೆ. ಈ ಟ್ವೀಟ್ ನೋಡಿದ ನೆಟ್ಟಿಗರು ಮನರಂಜನೆ ರೀತಿ ಎಂಜಾಯ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಚ್ಚೇದಿತ ಪತಿಯಿಂದಲೇ ಪತ್ನಿಯ ಕೊಲೆ

    ವಿಚ್ಚೇದಿತ ಪತಿಯಿಂದಲೇ ಪತ್ನಿಯ ಕೊಲೆ

    ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಯನ್ನು ಕೊಲೆ ಮಾಡಿ ಕಳ್ಳತನದ ಕಥೆ ಕಟ್ಟಿದ್ದ ಪತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಜುಲೈ 12ರಂದು ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಅಂಗನವಾಡಿ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ(51) ಕೊಲೆ ಪ್ರಕರಣಣದಲ್ಲಿ ಆಕೆಯ ವಿಚ್ಚೇದಿತ ಗಂಡ ಅಂಜಪ್ಪನನ್ನ ಬಂಧಿಸಲಾಗಿದೆ.

    ಜುಲೈ 12ರಂದು ಅಂಜಪ್ಪ ಅಳಿಯನ ಜೊತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಮನೆಯಲ್ಲಿ ಒಂಟಿಯಾಗಿದ್ದ ನನ್ನ ವಿಚ್ಚೇದಿತ ಪತ್ನಿ ವೆಂಕಟಲಕ್ಷ್ಮಮ್ಮಳನ್ನು ಕೊಲೆ ಮಾಡಿ, ಕತ್ತಲ್ಲಿದ್ದ ಸರ, ಮನೆಯ ಬಿರುವನಲ್ಲಿದ್ದ ಒಡವೆ, ಹಣವನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದ. ಇದನ್ನೂ ಓದಿ: ಲುಲು ಮಾಲ್ ವಿವಾದ – ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟುನ ಕ್ರಮ: ಆದಿತ್ಯನಾಥ್

    ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮೃತ ವೆಂಕಟಲಕ್ಷ್ಮಮ್ಮಳನ್ನು ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ, ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ತನಿಖೆಯಲ್ಲಿ ಅಸಲಿ ಕೊಲೆಗಾರ ಅಂಜಪ್ಪ ಎನ್ನುವುದು ಗೊತ್ತಾಗಿದೆ. ಈ ಅಂಜಪ್ಪ ಚಿಂತಾಮಣಿ ತಾಲೂಕು ಕತ್ರಿಗುಪ್ಪೆ ಗ್ರಾಮದವನಾಗಿದ್ದು, ಈತ ನಾಯನಹಳ್ಳಿ ಗ್ರಾಮದ ಕೊಲೆಯಾದ ವೆಂಕಟಲಕ್ಷ್ಮಮ್ಮಳನ್ನ ಮದುವೆಯಾಗಿದ್ದ, ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಈಕೆಗೆ ವಿಚ್ಚೇದನ ನೀಡಿದ್ದ ಅಂಜಪ್ಪ ಬೇರೊಂದು ಮದುವೆಯಾಗಿದ್ದ.

    POLICE JEEP

    ಇದರಿಂದ ತವರುಮನೆ ಸೇರಿದ್ದ ವೆಂಕಟಲಕ್ಷ್ಮಮ್ಮ ತನ್ನ ನಾಯನಹಳ್ಳಿ ಗ್ರಾಮದಲ್ಲಿ ತನ್ನ ಹೆಸರಿನಲ್ಲಿದ್ದ 26 ಗುಂಟೆಯ ಜಮೀನನ್ನು ಗಂಡ ಅಂಜಪ್ಪ ಮಧ್ಯಸ್ಥಿಕೆಯಲ್ಲೇ ಒಬ್ಬರಿಗೆ 40 ಲಕ್ಷಕ್ಕೆ ಆಗ್ರಿಮೆಂಟ್ ಕೊಟ್ಟಿದ್ದಳು. ಆದರೆ ಅಗ್ರಿಮೆಂಟ್ ಮಾಡಿಕೊಂಡು ಸುಮ್ಮನಾಗಿದ್ದ ಅವರು ವರ್ಷಗಳೇ ಕಳೆದರೂ ರಿಜಿಸ್ಟರ್ ಮಾಡಿಕೊಂಡಿರಲಿಲ್ಲ. ಹೀಗಾಗಿ ಇತ್ತೀಚೆಗೆ ಅದೇ ಜಮೀನನ್ನು ವೆಂಕಟಲಕ್ಷ್ಮಮ್ಮ ಬೇರೊಬ್ಬರಿಗೆ 60ಲಕ್ಷಕ್ಕೆ ಮಾರಾಟ ಮಾಡಲು ಮುಂದಾಗಿದ್ದಳು. ಇದೇ ವಿಚಾರದಲ್ಲಿ ವಿಚ್ಚೇದಿತ ಗಂಡ ಹೆಂಡತಿ ಮಧ್ಯೆ ಮನಸ್ತಾಪ ಉಂಟಾಗಿ ಅಂಜಪ್ಪ ವೆಂಕಟಲಕ್ಷ್ಮಮ್ಮಳನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ನಮ್ಮ ಮುದ್ದಿನ ಗಿಳಿ ಕಾಣೆಯಾಗಿದೆ – ಬ್ಯಾನರ್, ಕರಪತ್ರ ಹಂಚಿದ ದಂಪತಿ

    Live Tv
    [brid partner=56869869 player=32851 video=960834 autoplay=true]

  • ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಗಂಡ ಹೆಂಡತಿ ಜಗಳಕ್ಕೆ ಅತ್ತೆ ಬಲಿ – ಕುಡಿದ ಮತ್ತಿನಲ್ಲಿ ಹೆಂಡತಿ ಅಂತ ಅತ್ತೆಗೆ ಹೊಡೆದ

    ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಅತ್ತೆ ಬಲಿಯಾಗಿರುವ ಘಟನೆ ಮಾರತ್ ಹಳ್ಳಿ ಬಳಿಯ ಸಂಜಯನಗರದಲ್ಲಿ ನಡೆದಿದೆ.

    ಸೌಭಾಗ್ಯ ಮೃತ ಮಹಿಳೆಯಾಗಿದ್ದು, ಜುಲೈ 13 ರ ಬುಧವಾರ ಸಂಜೆ 7.30ಕ್ಕೆ ಈ ಘಟನೆ ನಡೆದಿದೆ. ಆರೋಪಿಯನ್ನು 35 ವರ್ಷದ ನಾಗರಾಜ ಎಂದು ಗುರುತಿಸಲಾಗಿದೆ. ಕಳೆದ 6 ವರ್ಷದ ಹಿಂದೆ ನಾಗರಾಜ ಮತ್ತು ಭವ್ಯಶ್ರೀ ವಿವಾಹವಾಗಿದ್ದರು. ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ನಾಗರಾಜ ಕುಡಿತ ಚಟಕ್ಕೆ ಬಿದ್ದಿದ್ದರಿಂದ ಆಗಾಗ ದಂಪತಿ ನಡುವೆ ಜಗಳವಾಗುತ್ತಿತ್ತು. ಇದರಿಂದ ಮನನೊಂದು ಗಂಡನ ಕಾಟ ತಾಳಲಾರದೇ ಭವ್ಯ ಶ್ರೀ ಸಂಜಯನಗರದಲ್ಲಿರುವ ತನ್ನ ತಾಯಿ ನಿವಾಸಕ್ಕೆ ಬಂದಿದ್ದರು.

    CRIME 2

    ಕಳೆದ ಊರು ವರ್ಷದಿಂದ ತಾಯಿ ಮನೆಯಲ್ಲಿಯೇ ವಾಸವಾಗಿದ್ದ ಭವ್ಯ ಶ್ರೀ ಈ ಮಧ್ಯೆ ವಿಚ್ಛೇದನಕ್ಕಾಗಿಯೂ ತಯಾರಿ ನಡೆಸುತ್ತಿದ್ದರು. ಈ ವಿಚಾರ ತಿಳಿದು ಮತ್ತೆ ಪತ್ನಿ ಬೇಕು ಎನಿಸಿ ಕುಡಿದ ಅಮಲಿನಲ್ಲಿ ನಾಗರಾಜ ಜುಲೈ 12ರಂದು ಮಂಗಳವಾರ ಅತ್ತೆ ಮನೆ ಬಳಿ ಬಂದು ಗಲಾಟೆ ಮಾಡಿದ್ದಾನೆ. ಹೆಂಡತಿಯನ್ನು ತನ್ನೊಟ್ಟಿಗೆ ಕಳಿಸಿಕೊಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    KILLING CRIME

    ಈ ವೇಳೆ ಸೌಭಾಗ್ಯ ಕುಟುಂಬಸ್ಥರು ಬುದ್ಧಿ ಹೇಳಿ ನಾಗರಾಜ ಅನ್ನು ವಾಪಸ್ ಕಳುಹಿಸಿದ್ದರು. ಆದರೆ ಬುದ್ಧಿ ಕಲಿಯದ ಆಸಾಮಿ ಅತ್ತೆ ಮನೆಯವರಿಗೆ ಬುದ್ಧಿ ಕಲಿಸಲು ಪಣತೊಟ್ಟು ಆರೋಪಿ ಅತ್ತೆಗೆ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಸಂಜಯನಗರದಲ್ಲಿ ಸೊಪ್ಪು ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಸೌಭಾಗ್ಯ ಅವರನ್ನು ಸೊಪ್ಪು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಬಂದು ನಾಗರಾಜ್ ಏಕಾಏಕಿ ಸುತ್ತಿಗೆಯಿಂದ ಐದಾರು ಬಾರಿ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಬೀರವಾಗಿ ಗಾಯಗೊಂಡ ಸೌಭಾಗ್ಯ ಸ್ಥಳದಲ್ಲೇ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ನಂತರ ಕೂಡಲೇ ಅವರನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೌಭಾಗ್ಯ ಸಾವನ್ನಪ್ಪಿದ್ದಾರೆ.

    ಇದೀಗ ಘಟನೆ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ನಾಗರಾಜ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ವೇಳೆ ಆರೋಪಿ ನನಗೆ ನನ್ನ ಅತ್ತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ನನ್ನ ಹೆಂಡತಿ ಕೊಲ್ಲುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕುಡಿದ ಮತ್ತಲ್ಲಿ ಯಾರು ಎನ್ನುವುದೇ ಗೊತ್ತಾಗಿಲ್ಲ. ಹೆಂಡತಿ ಅಂತಾ ಅತ್ತೆಗೆ ಹೊಡೆದುಬಿಟ್ಟೆ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಮದುವೆ ನಂತ್ರ ಜೀನ್ಸ್ ಧರಿಸಲು ಬಿಟ್ಟಿಲ್ಲ ಅಂತ ಗಂಡನನ್ನೇ ಸಾಯಿಸಿದ್ಲು

    ಮದುವೆ ನಂತ್ರ ಜೀನ್ಸ್ ಧರಿಸಲು ಬಿಟ್ಟಿಲ್ಲ ಅಂತ ಗಂಡನನ್ನೇ ಸಾಯಿಸಿದ್ಲು

    ರಾಂಚಿ: ಮದುವೆಯಾದ ಬಳಿಕ ಜೀನ್ಸ್ ಧರಿಸಲು ಬಿಡದೇ ಇರುವ ಕಾರಣಕ್ಕೆ ತಾಳಿ ಕಟ್ಟಿದ ಪತಿಯನ್ನೇ ಚಾಕುವಿಂದ ಇರಿದು ಪತ್ನಿ ಹತ್ಯೆಗೈದಿರುವ ಘಟನೆ ಜಾರ್ಖಂಡ್‍ನ ಜಮ್ತಾರಾದಲ್ಲಿ ನಡೆದಿದೆ.

    CRIME 2

    ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಪುಷ್ಪಾ ಹೆಂಬ್ರೋಮ್ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಳು. ನಂತರ ಮನೆಗೆ ಹಿಂದಿರುಗಿದ ಪುಷ್ಪಾಳನ್ನು ಜೀನ್ಸ್ ಧರಿಸಿದ್ದ ಬಗ್ಗೆ ಪತಿ ಪ್ರಶ್ನಿದ್ದಾರೆ ಹಾಗೂ ಇಬ್ಬರ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ.

    ನಂತರ ಜಗಳ ವಿಕೋಪಕ್ಕೆ ತಿರುಗಿ ಪುಷ್ಪಾ ತನ್ನ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕುಟುಂಬಸ್ಥರು ಧನ್‍ಬಾದ್‍ನಲ್ಲಿರು ಶಾಹಿದ್ ನಿರ್ಮಲ್ ಮಹತೋ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಪ್ರಾಂಶುಪಾಲರು, ಶಿಕ್ಷಕರು ಸೇರಿ ಐವರು ಅರೆಸ್ಟ್

    ಈ ಬಗ್ಗೆ ಮಾಧ್ಯಮದವರೊಂದೊಗೆ ಮಾತನಾಡಿದ ಮೃತರ ತಂದೆ ಕರ್ಣೇಶ್ವರ ತುಡು ಅವರು, ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದ ವಿಚಾರವಾಗಿ ಮಗ ಮತ್ತು ಸೊಸೆ ನಡುವೆ ಜಗಳ ನಡೆದಿತ್ತು. ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ದೂರು

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    ಮೈಸೂರು: ಇಲಿ ಪಾಷಾಣ ತಿಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ ನಡೆದಿದೆ.

    crime

    ಜ್ಯೋತಿ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ. ಮನೆಯವರ ವಿರೋಧ ನಡುವೆಯೂ 4 ವರ್ಷದ ಹಿಂದೆ ಮಚ್ಚೂರು ಗ್ರಾಮದ ಆನಂದ್ ಜೊತೆ ಜ್ಯೋತಿ ವಿವಾಹವಾಗಿದ್ದರು. ಮದುವೆ ವೇಳೆ ಮನೆಯಿಂದ ಚಿನ್ನ ಹಾಗೂ ನಗದನ್ನು ಜ್ಯೋತಿ ತೆಗೆದುಕೊಂಡು ಹೋಗಿದ್ದರು. ಮದುವೆ ಬಳಿಕ ಮತ್ತೆ ವರದಕ್ಷಿಣೆ ತರುವಂತೆ ಆನಂದ್ ಮನೆಯವರು ಜ್ಯೋತಿಗೆ ಕಿರುಕುಳ ನೀಡಿದ್ದು, ವರದಕ್ಷಿಣೆ ಕೊಡುವವರೆಗೂ ತವರು ಮನೆಯವರನ್ನು ಭೇಟಿಯಾಗಲು ಅವಕಾಶ ಕೊಡುವುದಿಲ್ಲವೆಂದು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ

    ಜ್ಯೋತಿ ಅವರನ್ನು ಭೇಟಿಯಾಗಲು ಬಂದಿದ್ದ ತವರು ಮನೆಯವರಿಗೂ ಆನಂದ್ ಮನೆಯವರು ಅವಮಾನ ಮಾಡಿದ್ದು, ಇದರಿಂದ ಮನನೊಂದು ಜ್ಯೋತಿ ಇಲಿ ಪಾಷಾಣ ಸೇವಿಸಿದ್ದಾರೆ. ನಂತರ ಜ್ಯೋತಿಯನ್ನು ಚಿಕಿತ್ಸೆಗಾಗಿ ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜ್ಯೋತಿ ಸಾವನ್ನಪ್ಪಿದ್ದಾರೆ. ಜ್ಯೋತಿ ಆತ್ಮಹತ್ಯೆಗೆ ಪತಿ ಆನಂದ್ ಮನೆಯವರೇ ಕಾರಣ ಎಂದು ಮೃತಳ ಪೋಷಕರು ಆರೋಪಿಸಿದ್ದು, ಈ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮೊದಲು ಯಡಿಯೂರಪ್ಪ ಸಾಹೇಬರಿಗೆ ಮರ್ಯಾದೆ ಕೊಡಲಿ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಹೆಬ್ಬಾಳ್ಕರ್

    Live Tv
    [brid partner=56869869 player=32851 video=960834 autoplay=true]