Tag: Wife

  • ಇಂಟರ್ನೆಟ್‍ನಿಂದ ಟ್ರೈನಿಂಗ್ ಪಡೆದು ಹೆಂಡತಿಯನ್ನು ಮರ್ಡರ್ ಮಾಡ್ದ

    ಇಂಟರ್ನೆಟ್‍ನಿಂದ ಟ್ರೈನಿಂಗ್ ಪಡೆದು ಹೆಂಡತಿಯನ್ನು ಮರ್ಡರ್ ಮಾಡ್ದ

    ಭೋಪಾಲ್: ಪತ್ನಿ ಹೆಸರಿನಲ್ಲಿರುವ ವಿಮೆಯ ಹಣ ಕಬಳಿಸಲು ವ್ಯಕ್ತಿಯೋರ್ವ ಇಂಟರ್ನೆಟ್‍ನಲ್ಲಿರುವ ವೀಡಿಯೋಗಳನ್ನು ನೋಡಿ ಟ್ರೈನಿಂಗ್ ಪಡೆದು ಹೆಂಡತಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಪತಿಯನ್ನು ಬದ್ರಿಪ್ರಸಾದ್ ಮೀನಾ ಎಂದು ಗುರುತಿಸಲಾಗಿದ್ದು, ತಾನು ಮಾಡಿದ್ದ ಸಾಲವನ್ನು ತೀರಿಸಲು ಹೆಂಡತಿಯ ವಿಮೆಯ ಹಣವನ್ನು ಕ್ಲೈಮ್ ಮಾಡಲು ಆಕೆಯನ್ನೇ ಕೊಲೆ ಮಾಡಿದ್ದಾನೆ.  ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

    ಈ ಕೃತ್ಯವೆಸಗಲು ಆರೋಪಿ ಇಂಟರ್ನೆಟ್‍ನಿಂದ ಸಹಾಯ ಪಡೆದಿದ್ದಾನೆ. ತನ್ನ ಸಾಲವನ್ನು ತೀರಿಸುವುದು ಹೇಗೆಂದು ತಲೆಕೆಡಿಸಿಕೊಂಡಿದ್ದ ಆರೋಪಿ ಇಂಟರ್ನೆಟ್‍ನಲ್ಲಿ ಹಲವಾರು ವೀಡಿಯೋಗಳನ್ನು ವೀಕ್ಷಿಸಿದ್ದಾನೆ. ಕೆಲವು ವೀಡಿಯೋಗಳನ್ನು ನೋಡಿದ ಬಳಿಕ ತನ್ನ ಹೆಂಡತಿ ಹೆಸರಿಗೆ ವಿಮೆ ಮಾಡಿಸಿರುವುದು ನೆನಪಾಗಿ, ಹಣಕ್ಕಾಗಿ ಆಕೆಯನ್ನು ಕೊಲ್ಲುವ ನಿರ್ಧಾರ ಮಾಡಿದನು.

    CRIME 2

    ಮೃತ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದ್ದು, ಜುಲೈ 26 ರಂದು ರಾತ್ರಿ 9 ಗಂಟೆ ಸುಮಾರಿಗೆ ಭೋಪಾಲ್ ರಸ್ತೆಯ ಮನಾ ಜೋಡ್ ಬಳಿ ಪೂಜಾ ಗುಂಡಿನಿಂದ ಗಾಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ದೇವಭಾಗ್ ಕಡಲ ತೀರದಲ್ಲಿ ಸಣ್ಣ ಕರುಳಿನ ಅನಾರೋಗ್ಯದಿಂದ ಮೃತಪಟ್ಟ ಗ್ರೀನ್ ಸೀ ಕಡಲಾಮೆ

    crime

    ಆರಂಭದಲ್ಲಿ ಆರೋಪಿ ಪೊಲೀಸರ ದಾರಿತಪ್ಪಿಸಲು ಪ್ರಯತ್ನಿಸಿದನು. ಪತ್ನಿ ಮೃತಪಟ್ಟ ನಂತರ ಆಕೆಯನ್ನು ಕೊಲ್ಲಲಾಗಿದೆ ಎಂದು ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದನು. ಆದರೆ ತನಿಖೆ ತೀವ್ರಗೊಳಿಸಿದ ಪೊಲೀಸರಿಗೆ ಕೊಲೆಯಾದ ಸಮಯದಲ್ಲಿ ಆ ನಾಲ್ವರು ಘಟನಾ ಸ್ಥಳದಲ್ಲಿಯೇ ಇರಲಿಲ್ಲ ಎಂದು ತಿಳಿದುಬಂದಿದ್ದು, ನಿಜವಾದ ಆರೋಪಿ ಮೃತ ಮಹಿಳೆಯ ಪತಿಯೇ ಎಂಬ ಸತ್ಯ ಬಹಿರಂಗಗೊಂಡಿದೆ.

    ಇದೀಗ ಪೊಲೀಸರು ಆರೋಪಿ ಬದರಿಪ್ರಸಾದ್ ಮೀನಾ ಮತ್ತು ಆತನ ಸಹಚರನೊಬ್ಬನನ್ನು ಬಂಧಿಸಿದ್ದಾರೆ. ಅಲ್ಲದೇ ತಲೆಮರೆಸಿಕೊಂಡಿರುವ ಮತ್ತಿಬ್ಬರು ಸಹಚರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 12 ವರ್ಷದ ದಾಂಪತ್ಯದಲ್ಲಿ ಕಿರಾತಕನ ಎಂಟ್ರಿ – ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕತ್ತು ಹಿಸುಕಿ ಕೊಂದ್ಲು

    12 ವರ್ಷದ ದಾಂಪತ್ಯದಲ್ಲಿ ಕಿರಾತಕನ ಎಂಟ್ರಿ – ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕತ್ತು ಹಿಸುಕಿ ಕೊಂದ್ಲು

    ಕಲಬುರಗಿ: ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಹೆತ್ತ ಮಕ್ಕಳ ಕಣ್ಣೆದುರೆ ಕತ್ತು ಹಿಸುಕಿ ಪತ್ನಿಯೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ರಾಮಣ್ಣ ಎಂದು ಗುರುತಿಸಲಾಗಿದೆ. ಕುಡ್ಡಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಣ್ಣ ನಿನ್ನೆ ರಾತ್ರಿ ಮನೆಯಿಂದ ಹೊರಗಡೆ ಬಂದು ಮೂತ್ರವಿಸರ್ಜನೆ ಮಾಡಿ ಮನೆಯೊಳಗೆ ಬಂದಿದ್ದಾನೆ. ರಾಮಣ್ಣ ಮನೆಗೆ ಬರುತ್ತಿದ್ದಂತೆಯೇ ಆತನ ಹಿಂದೆಯೇ ಮಲ್ಲಪ್ಪ ಮತ್ತು ಆತನ ಇಬ್ಬರು ಸ್ನೇಹಿತರು ಕೂಡ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ತಕ್ಷಣ ರಾಮಣ್ಣನ ಜೊತೆ ಗಲಾಟೆ ತೆಗೆದು ಕತ್ತು ಹಿಸುಕಿ ಕೊಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಗ ಮನೆಯಲ್ಲಿಯೇ ಇದ್ದ ರಾಮಣ್ಣನ ಪತ್ನಿ ಸುನೀತಾ ಕೂಡ ಹಂತಕರ ಜೊತೆ ಕೈ ಜೋಡಿಸಿ  ಚಮಚವನ್ನು ಗಂಡನ ಬಾಯಿಗೆ ಚುಚ್ಚಿ ಕೊನೆಗೆ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

    ಇದೇ ವೇಳೆ ತಂದೆಯನ್ನು ಉಳಿಸಲು ಅಡ್ಡ ಬಂದ ಎರಡು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿ ರಾಮಪ್ಪನನ್ನು ಕೊಲೆ ಮಾಡಿದ್ದಾರೆ. ಕೊಲೆಯ ನಂತರ ಸುನೀತಾ, ಮಲ್ಲಪ್ಪ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ರಾಮಪ್ಪನ ಕೈ, ಕಾಲು ಕಟ್ಟಿ ಹಾಕಿ ಗೋಣಿ ಚೀಲದಲ್ಲಿ ಶವವನ್ನು ಸಾಗಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಮನೆಯಿಂದ ಹೊರ ಬಂದು ಶವ ಸಾಗಾಟ ಮಾಡುವಾಗ ಗ್ರಾಮಸ್ಥರು ಬೈಕ್‍ನಲ್ಲಿ ಬರುವುದನ್ನು ಕಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಸ್ಪಾ ಮ್ಯಾನೇಜರ್, ಗ್ರಾಹಕರು ಸೇರಿ ಯುವತಿ ಮೇಲೆ ಅತ್ಯಾಚಾರ – ಪೊಲೀಸರಿಗೆ ನೋಟಿಸ್

    CRIME 2

    ಅಷ್ಟಕ್ಕೂ ಕೊಲೆಗೆ ಅಸಲಿ ಕಾರಣ ಅಂದರೆ ಹೆಂಡತಿಯ ಅಕ್ರಮ ಸಂಬಂಧ. ರಾಮಪ್ಪನ ಪತ್ನಿ ಸುನೀತಾ ಅದೇ ಗ್ರಾಮದ ಮಲ್ಲಪ್ಪನ ಜೊತೆ ಕಳೆದ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು. ಅನೈತಿಕ ಸಂಬಂಧದ ವಿಚಾರ ತಿಳಿದ ಗಂಡ, ಮಲ್ಲಪ್ಪನಿಂದ ದೂರ ಇರುವಂತೆ ಸೂಚಿಸಿದ್ದಾನೆ. ಆದರೆ ಗಂಡನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದ ಸುನೀತಾ ತನ್ನ ಲವ್ವಿ-ಡವ್ವಿಯನ್ನು ಮುಂದುವರಿಸಿದ್ದರು.

    ರಾಮಪ್ಪ ಒಕ್ಕಲುತನ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಹಗಲು ಹೊತ್ತಲ್ಲಿ ಜಮೀನಿಗೆ ಕೆಲಸಕ್ಕೆ ಹೋದಾಗ, ಸುನೀತಾ ಮಲ್ಲಪ್ಪನಿಗೆ ಫೋನ್ ಮಾಡಿ ಕರೆಯಿಸಿಕೊಳ್ಳುತ್ತಿದ್ದಳು. ಬಳಿಕ ಮನೆಯಲ್ಲಿದ್ದ ಸುನೀತಾಳ ಮಕ್ಕಳಿಗೆ ಈ ಮಲ್ಲಪ್ಪ ಹಣ ಕೊಟ್ಟು ಹೊರಗಡೆ ಕಳುಹಿಸಿ ಮನೆಯಲ್ಲಿ ಸುನೀತಾ ಜೊತೆ ಚಕ್ಕಂದ ಆಡುವುದಕ್ಕೆ ಮುಂದಾಗುತ್ತಿದ್ದರು. ಇದೇ ರೀತಿಯಾಗಿ ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಚಕ್ಕಂದ ಮುಂದುವರಿಸಿಕೊಂಡು ಬಂದಿದ್ದರು. ಇದನ್ನೂ ಓದಿ: ಐವರ ಪ್ರಾಣ ಉಳಿಸಿದೆ ಅಂಗಾಂಗ ದಾನ – ಮಗನ ಸಾವಿನಲ್ಲಿ ಸಾರ್ಥಕತೆ ಕಂಡ ಕುಟುಂಬ

    ಅಕ್ರಮ ಸಂಬಂಧ ಗೊತ್ತಾದ ಹಿನ್ನೆಲೆಯಲ್ಲಿ ರಾಮಪ್ಪ ತನ್ನ ತಾಯಿ ಮತ್ತು ಅಣ್ಣನನ್ನು ಮನೆಯಿಂದ ಆಚೆ ಕಳುಹಿಸಿ ಗಂಡ, ಹೆಂಡತಿ ಇಬ್ಬರು ಮಕ್ಕಳು ಮನೆಯಲ್ಲಿ ವಾಸ ಮಾಡುವುದಕ್ಕೆ ಮುಂದಾಗಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಸುನೀತಾ ತನ್ನ ಅಕ್ರಮ ಸಂಬಂಧವನ್ನು ಗಂಡನ ಭಯವಿಲ್ಲದೇ ಮುಂದುವರಿಸಿದ್ದಳು. ಇದರಿಂದ ಕೆರಳಿದ ಗಂಡ ಆತನ ಜೊತೆ ಸೇರ ಬೇಡ ಅಂತಾ ಹೇಳಿದಕ್ಕೆ ಗಂಡ ಹೆಂಡತಿಯ ಮಧ್ಯೆ ಗಲಾಟೆ ಆಗುತ್ತಿತ್ತು. ನಿನ್ನೆಯು ಸಹ ಗಲಾಟೆ ಜೋರಾದ ಹಿನ್ನೆಲೆ ಪ್ರಿಯಕರನಿಗೆ ಹೇಳಿ ಕೊಲೆ ಮಾಡುವ ನಿರ್ಧಾರಕ್ಕೆ ಬಂದು ರಾತ್ರಿ ಕೊಲೆ ಮಾಡಿದ್ದಾರೆ.

    ಇದೀಗ ಈ ಸಂಬಂಧ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ನಿ ಸುನೀತಾ, ಮಲ್ಲಪ್ಪ ಮತ್ತು ಆತನ ಇಬ್ಬರು ಸ್ನೇಹಿತರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಆಗಲಿ ಕಳೆದ 12 ವರ್ಷಗಳ ಸುಖ ಸಂಸಾರದಲ್ಲಿ ಬಿರುಗಾಳಿ ಎದ್ದು ಗಂಡ ಕೊಲೆಯಾದರೆ, ಹೆಂಡತಿ ಸೆರೆಮನೆ ಸೇರಿದ್ದಾಳೆ. ಇದರ ಮಧ್ಯೆ ತಂದೆ, ತಾಯಿ ಕಳೆದುಕೊಂಡ ಎರಡು ಮಕ್ಕಳು ಅನಾಥರಾಗಿ ಬಿಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್,  ವಿಕೆಟ್‌ನಿಂದ ಹೊಡೆದು ಕೊಲೆಗೈದ್ರು

    ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೆಟ್‌ನಿಂದ ಹೊಡೆದು ಕೊಲೆಗೈದ್ರು

    ಚಿಕ್ಕಬಳ್ಳಾಪುರ: ‘ನನ್ನ ಪತ್ನಿ ಜೊತೆ ಮಾತನಾಡಬೇಡ’ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೆಟ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಬಾಗೇಪಲ್ಲಿ ತಾಲೂಕಿನ ಆದಿಗಾನಹಳ್ಳಿ ಬಳಿ ನಡೆದಿದೆ.

    ಶ್ರೀನಿವಾಸ್(38) ಕೊಲೆಯಾದ ವ್ಯಕ್ತಿ. ಈತನನ್ನು ಇಬ್ಬರು ಸಂಬಂಧಿಗಳೇ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನವೀನ್ ಹಾಗೂ ವೆಂಕಟರಾಮು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ 

    ಹಿನ್ನೆಲೆ ಏನು?
    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಆದಿಗಾನಹಳ್ಳಿ ಗ್ರಾಮ ಶ್ರೀನಿವಾಸ್, ಆಗಸ್ಟ್ 3 ರಂದು ಬೆಳಗ್ಗೆ ಗ್ರಾಮ ಹೊರಹೊಲಯದಲ್ಲಿ ಹತ್ಯೆಯಾಗಿದ್ದ. ಈ ಹಿನ್ನೆಲೆ ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ. ಈಗ ಕೊಲೆಯ ರಹಸ್ಯ ಬಯಲಾಗಿದೆ. ಸ್ವತಃ ಶ್ರೀನಿವಾಸ್‍ನ ಸಹೋದರ ಸಂಬಂಧಿ ನವೀನ್ ಹಾಗೂ ಶ್ರೀನಿವಾಸ್‍ನ ಅಕ್ಕನ ಮಗ ವೆಂಕಟರಾಮುನೇ ಕೊಲೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.

    ಅನೈತಿಕ ಸಂಬಂಧದ ಸಂಶಯ
    ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತನ ತಾಯಿ ಗಂಗಮ್ಮ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿ, ನನ್ನ ಸೊಸೆಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ನನ್ನ ಮಗ ಶ್ರೀನಿವಾಸ್ ತನ್ನ ಪತ್ನಿ ಅಶ್ವಿನಿಯ ಮೇಲೆ ಅನುಮಾನ ಪಟ್ಟು, ಆಕೆಯ ಜೊತೆ ಸಲುಗೆಯಿಂದ ಇದ್ದ ನವೀನ್‍ಗೆ ಬೈಯ್ದು ಬುದ್ಧಿವಾದ ಹೇಳಿದ್ದ. ಅದೇ ಈ ಕೊಲೆಗೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

    ಇದ್ರಿಂದ ಎಚ್ಚೆತ್ತ ಪೆÇಲೀಸರು, ಆದಿಗಾನಹಳ್ಳಿ ಗ್ರಾಮದ ನವೀನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಶ್ರೀನಿವಾಸ್‍ನ ಅಕ್ಕನ ಮಗ ವೆಂಕಟರಾಮ ಕೆಲಸ ಕಾರ್ಯಗಳಿಗೆ ಹೋಗದೆ ಮನೆಯಲ್ಲಿ ಇರುವ ಕಾರಣ ಆತನಿಗೂ ಶ್ರೀನಿವಾಸ್ ಬುದ್ಧಿ ಹೇಳಿದ್ದ. ಇದ್ರಿಂದ ಇಬ್ಬರು ಸೇರಿ ಕೆಲಸಕ್ಕೆ ಹೊಗ್ತಿದ್ದ ಶ್ರೀನಿವಾಸ್‍ನನ್ನು ಅಡ್ಡಗಟ್ಟಿ, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‍ಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ 

    ಪತ್ನಿ ಕೈವಾಡ
    ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಅಶ್ವಿನಿಯ ಕೈವಾಡದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಸದ್ಯ ಯಾವುದೇ ಸಾಕ್ಷ್ಯಾಧರಗಳು ಲಭ್ಯವಾಗಿಲ್ಲ. ಇದ್ರಿಂದ ಆರೋಪಿಗಳಾದ ನವೀನ್ ಹಾಗೂ ವೆಂಕಟರಾಮುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 4 ವರ್ಷದ ಮಗಳನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈದ ಪಾಪಿ ತಾಯಿ!

    4 ವರ್ಷದ ಮಗಳನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈದ ಪಾಪಿ ತಾಯಿ!

    ಬೆಂಗಳೂರು: ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಪುತ್ರಿಯನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಸಂಪಂಗಿ ರಾಮನಗರದ ಅದ್ವೈತ್‌ ಅಪಾರ್ಟ್‌ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಗುವನ್ನು ಜೀತಿ ಎಂದು ಗುರುತಿಸಲಾಗಿದೆ. ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ಭಯಾನಕ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಾಯಿಯ ಈ ಅಮಾನವೀಯ ಕೃತ್ಯಕ್ಕೆ ಜನ ಕೆಂಡಾಮಂಡಲರಾಗಿದ್ದಾರೆ.

    ಕೊಲೆ ಮಾಡಿದ್ದು ಯಾಕೆ..?:  ಮಗಳು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾಳೆ ಎಂದು ಸುಷ್ಮಾ ಈ ಕೃತ್ಯ ಎಸಗಿದ್ದಾಳೆ. ಮೇಲಿಂದ ಬಿದ್ದ ರಭಸಕ್ಕೆ ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.

    ಮಗುವನ್ನು ಮೇಲಿಂದ ಬಿಸಾಕಿದ ಬಳಿಕ ಸುಷ್ಮಾ ತಾನೂ ಆತ್ಮಹತ್ಯೆ ಮಡಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಅಕ್ಕಪಕ್ಕದ ಮನೆಯವರು ಬಂದು ಆಕೆಯನು ರಕ್ಷಣೆ ಮಾಡಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ತೆಲುಗಿನ ಹಾಸ್ಯನಟ ರಘು ಕರುಮಂಚಿ ತಂದೆ ವಿಧಿವಶ

    ಸುಷ್ಮಾ ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ಈ ವೇಳೆ ಪತಿ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. ಇದೀಗ ಮತ್ತೆ ಮಗುವನ್ನು ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಆಕೆ ಬಚಾವ್ ಆಗಿದ್ದಾಳೆ.

    ದಂತ ವೈದ್ಯೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ಸುಷ್ಮಾ ಪತಿ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.  ಸದ್ಯ ಪ್ರಕರಣ ಸಂಬಂಧ ತಾಯಿ ಸುಷ್ಮಾ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭೂ ಹಗರಣ ಪ್ರಕರಣ – ಸಂಜಯ್ ರಾವತ್ ಪತ್ನಿಗೆ ಇಡಿ ಸಮನ್ಸ್

    ಭೂ ಹಗರಣ ಪ್ರಕರಣ – ಸಂಜಯ್ ರಾವತ್ ಪತ್ನಿಗೆ ಇಡಿ ಸಮನ್ಸ್

    ಮುಂಬೈ: ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಪತ್ನಿ ವರ್ಷಾ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಸಮನ್ಸ್ ಜಾರಿ ಮಾಡಿದೆ.

    ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವತ್ ಅವರನ್ನು ಹಣಕಾಸು ತನಿಖಾ ಸಂಸ್ಥೆ ಭಾನುವಾರ ಬಂಧಿಸಿತ್ತು. ಇದರ ಬೆನ್ನಲ್ಲೇ ಇಡಿ ಸಂಜಯ್ ರಾವತ್ ಅವರ ಪತ್ನಿಗೆ ಸಮನ್ಸ್ ಜಾರಿಗೊಳಿಸಿದೆ. ಇದನ್ನೂ ಓದಿ: ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ಪಿಎಂಸಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವರ್ಷ ರಾವತ್ ಅವರನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಪ್ರಶ್ನಿಸಿತ್ತು. ಇದೀಗ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಕರೆದಿದೆ. ಇದನ್ನೂ ಓದಿ: 750 ಶಾಲಾ ವಿದ್ಯಾರ್ಥಿನಿಯರಿಂದ ತಯಾರಾಯ್ತು ಆಜಾದಿ ಸ್ಯಾಟಲೈಟ್

    ಸಂಜಯ್ ಕಸ್ಟಡಿ ವಿಸ್ತರಣೆ:
    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರ ಇಡಿ ಕಸ್ಟಡಿಯನ್ನು ಮುಂಬೈ ನ್ಯಾಯಾಲಯ ಆಗಸ್ಟ್ 8 ರವರೆಗೆ ವಿಸ್ತರಿಸಿದೆ. ಇಡಿ ತನಿಖೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಹಿನ್ನೆಲೆ ನ್ಯಾಯಾಲಯ ಕಸ್ಟಡಿ ವಿಸ್ತರಣೆ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ

    ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ

    ಲಕ್ನೋ: ಪತ್ನಿ ವರದಕ್ಷಿಣೆ ತಂದು ಕೊಡಲಿಲ್ಲವೆಂದು ಪತಿಯೊಬ್ಬ ಸ್ನೇಹಿತರ ಜೊತೆ ಸೇರಿ ಪತಿಯನ್ನು ಅತ್ಯಾಚಾರ ಮಾಡಿರುವ ಘಟನೆಯೊಂದು ಕಾನ್ಪುರದಲ್ಲಿ ನಡೆದಿದೆ.

    ವರದಕ್ಷಿಣೆಗಾಗಿ ಪತಿಯೊಬ್ಬ ಪತ್ನಿಯ ಕುಟುಂಬವನ್ನು ಪೀಡಿಸುತ್ತಿದ್ದ. ಇತ್ತ ಪತ್ನಿಗೂ ಕಿರುಕುಳ ನೀಡುತ್ತಿದ್ದ. ಪತ್ನಿಯ ಕುಟುಂಬ ವರದಕ್ಷಿಣೆಯನ್ನು ನೀಡಲಿಲ್ಲವೆಂದು ತನ್ನ ಸ್ನೇಹಿತರ ಜೊತೆ ಸೇರಿ ಪತ್ನಿಯನ್ನು ಪತಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾನೆ. ಈ ಹಿನ್ನೆಲೆ ಮಹಿಳೆಯ ಕುಟುಂಬ, ಆಕೆಯ ಪತಿ ಮತ್ತು ಆತನ ಸ್ನೇಹಿತರ ವಿರುದ್ಧ ಕಿರುಕುಳ ಮತ್ತು ಅತ್ಯಾಚಾರ ಆರೋಪದ ಮೇಲೆ ಚಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್ ಶೂಟ್ ವೇಳೆ ದಾಳಿ: 8 ಮಹಿಳಾ ರೂಪದರ್ಶಿಗಳ ಮೇಲೆ ಅತ್ಯಾಚಾರ

    ದೂರಿನಲ್ಲಿ ಏನಿದೆ?
    2020 ರ ಮಾರ್ಚ್ 6 ರಂದು ನಾವು ಮದುವೆಯಾಗಿದ್ದು, ಅಂದಿನಿಂದ ನನ್ನ ಪತಿ ವರದಕ್ಷಿಣೆಯಾಗಿ 2 ಲಕ್ಷ ರೂ. ಮತ್ತು ಕಾರಿಗೆ ಬೇಡಿಕೆಯಿಟ್ಟಿದ್ದ. ಅವರ ಬೇಡಿಕೆಗಳನ್ನು ನಾವು ಈಡೇರದಿದ್ದಾಗ ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. ಅಷ್ಟೇ ಅಲ್ಲದೇ ನನ್ನ ಪತಿ ತನ್ನ ಮೂವರು ಸ್ನೇಹಿತರನ್ನು ಕರೆದುಕೊಂಡು ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದಾಗ ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ) ಮೃಗಾಂಕ್ ಪಾಠಕ್ ಮಾತನಾಡಿ, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಫೈನಲ್ ತಲುಪಿದ ಕನ್ನಡಿಗ, ಈಜುಪಟು ಶ್ರೀಹರಿ ನಟರಾಜ್ 

    Live Tv
    [brid partner=56869869 player=32851 video=960834 autoplay=true]

  • ಲಿಫ್ಟ್‌ನಲ್ಲಿ ತ್ರಿವಳಿ ತಲಾಖ್ ಹೇಳಿ ಹೊರದಬ್ಬಿದ ಪತಿ ವಿರುದ್ಧ ಪತ್ನಿ ದೂರು

    ಲಿಫ್ಟ್‌ನಲ್ಲಿ ತ್ರಿವಳಿ ತಲಾಖ್ ಹೇಳಿ ಹೊರದಬ್ಬಿದ ಪತಿ ವಿರುದ್ಧ ಪತ್ನಿ ದೂರು

    ಬೆಂಗಳೂರು: ಲಿಫ್ಟ್ ನಲ್ಲಿ ತ್ರಿವಳಿ ತಲಾಖ್ ಹೇಳಿದ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಮೊಹಮ್ಮದ್ ಅಕ್ರಂ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ಮಹಿಳೆ ಮನೆಯವರು ಅಕ್ರಂಗೆ ಒಟ್ಟು 30 ಲಕ್ಷ ವಸ್ತುಗಳನ್ನ ವರದಕ್ಷಿಣೆಯಾಗಿ ನೀಡಿದ್ದರು. ಆದರೆ ಹಣದಾಹಿಯಾಗಿದ್ದ ಅಕ್ರಂ ಇನ್ನೂ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇರಸಗೊಂಡ ಪತ್ನಿ ತಸ್ಮಿಯಾ ಹುಸೇನಿ ಇದೀಗ ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಶಂಕಿತರು ವಶ

    ಪತಿ ಅಕ್ರಂ ರಂಜಾನ್ ಹಬ್ಬಕ್ಕೆ ತೆರಳಿದ ವೇಳೆ 10 ಲಕ್ಷ ಹಣ ತರಲು ಹೇಳಿದ್ದ. ಹಣ ತರದಿದ್ದಲ್ಲಿ ಮನೆಗೆ ಸೇರಿಸೋದಿಲ್ಲ ಎಂದು ಫೋನ್ ಮಾಡಿದ್ದ. ಇದಾದ ಬಳಿಕ ಕೆಲ ದಿನಗಳ ನಂತರ ಅಪಾರ್ಟ್‌ ಮೆಂಟ್ ಗೆ ತನ್ನನ್ನು ಕರೆಸಿಕೊಂಡಿದ್ದ. ಹಣ ನೀಡಿಲ್ಲ ಅಂದ್ರೆ ಮಂಗಳಸೂತ್ರ ಬಿಚ್ಚಿ ಕೊಡುವಂತೆ ಹೇಳಿದ್ದ. ಇದಕ್ಕೆ ಒಪ್ಪದಿದ್ದಾಗ ತಲಾಖ್ ಹೇಳಿದ್ದ. ಅಪಾರ್ಟ್‌ ಮೆಂಟ್ ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ ಮೂರು ಬಾರಿ ತಲಾಖ್ ಹೇಳಿ ಪತ್ನಿಯನ್ನ ಹೊರ ದಬ್ಬಿದ್ದ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

    ತ್ರಿಬಲ್ ತಲಾಖ್ ಕಾನೂನು ವಿರೋಧಿಯಾಗಿದ್ರೂ ಷರಿಯತ್ ಕಾನೂನಿನ ಈ ನಿಯಮವನ್ನು ಕೆಲವರು ಈಗಲೂ ಅನುಸರಿಸುತ್ತಿದ್ದಾರೆ. ಷರಿಯತ್ ಕಾನೂನಿನನ್ವಯ ಮೂರು ಬಾರಿ ತಲಾಖ್ ಹೇಳಿದರೆ ವಿಚ್ಛೇದನ ನೀಡಿದಂತೆ. ಈ ರೀತಿ ತ್ರಿವಳಿ ತಲಾಖ್ ನೀಡಿ ಪತಿ ಹೊರಟು ಹೋಗಿದ್ದ. ಸದ್ಯ ಪತಿ ಅಕ್ರಂ ವಿರುದ್ಧ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಚಾಕುವಿನಿಂದ ಇರಿದು ಗಂಡನೂ ಆತ್ಮಹತ್ಯೆಗೆ ಶರಣು

    ಪತ್ನಿಗೆ ಚಾಕುವಿನಿಂದ ಇರಿದು ಗಂಡನೂ ಆತ್ಮಹತ್ಯೆಗೆ ಶರಣು

    ಬೆಂಗಳೂರು/ಆನೇಕಲ್: ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು, ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    crime

    ಸುರೇಶ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಈತ ಮೈಲ ಸಂದ್ರ ಗ್ರಾಮದ ನಿವಾಸಿಯಾಗಿದ್ದನು. ಘಟನೆ ನಡೆದು ಎರಡು ದಿನಗಳಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿ ನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಸುರೇಶ್ ಮಂಗಳವಾರ ಮತ್ತೆ ಹೆಂಡತಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿಗೆ ಚಾಕುವಿನಿಂದ ಇರಿದಿದ್ದಾನೆ.  ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ

    ಬಳಿಕ ಸ್ಥಳೀಯರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಪತಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ಕೊಲೆ ಖಂಡನೀಯ – 1 ಕೋಟಿ ರೂ. ಪರಿಹಾರ, ಪತ್ನಿಗೆ ಉದ್ಯೋಗ ಕೊಡಿ: ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹ

    ಪ್ರವೀಣ್ ಕೊಲೆ ಖಂಡನೀಯ – 1 ಕೋಟಿ ರೂ. ಪರಿಹಾರ, ಪತ್ನಿಗೆ ಉದ್ಯೋಗ ಕೊಡಿ: ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹ

    ಕಲಬುರಗಿ: ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಅವರ ಕೊಲೆ ಕೃತ್ಯ ಖಂಡನೀಯವಾಗಿದ್ದು, ಪ್ರವೀಣ್ ಅವರ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಹಾಗೂ ಅವರ ಧರ್ಮಪತ್ನಿಗೆ ಸರ್ಕಾರಿ ನೌಕರಿಯನ್ನು ಘೋಷಿಸಬೇಕು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಲದ ಅಧ್ಯಕ್ಷ ಶ್ರೀ ಡಾ. ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

    ಬಿಲ್ಲವ ಸಮುದಾಯದ ಕುಲಬಾಂಧವರು, ಗೆಜ್ಜೆಗಿರಿ ಕೋಟಿ ಚೆನ್ನಯ್ಯ ಕ್ಷೇತ್ರದ ಸಕ್ರಿಯ ಸೇವಾ ಕಾರ್ಯಕರ್ತರು, ಯುವ ವಾಹಿನಿ ಮುಖಂಡರು ಹಾಗೂ ರಾಜಕೀಯ, ಸಾಮಾಜಿಕ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಪೂಜ್ಯ ಸ್ವಾಮೀಜಿಯವರು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕನ್ನಡ ಮತ್ತು ಉಡುಪಿಯ ಬಿಲ್ಲವ ಸಮುದಾಯವರು ಈ ಘಟನೆಯನ್ನು ಒಕ್ಕೊರಲಿನಿಂದ ತೀವ್ರವಾಗಿ ಖಂಡಿಸಬೇಕಾಗಿದೆ. ಈ ಘಟನೆಯಿಂದ ಎಚ್ಚೆತ್ತುಕೊಂಡು ಯಾವುದೇ ಪಕ್ಷದಲ್ಲಿದ್ದರೂ ಪ್ರಚೋದನೆಗೆ ಒಳಪಡದೇ ಪಕ್ಷದ ಸಿದ್ಧಾಂತದಂತೆ ಸಂಯಮದಿಂದ ಇರಬೇಕೆಂದು ಶ್ರೀಗಳು ಸೂಚಿಸಿದ್ದಾರೆ.  ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದ್ದ ಅಂಗಡಿಗೆ ಮುತ್ತಿಗೆ

    ಈ ಹಿಂದಿನ ದಿನಗಳಲ್ಲಿ ಸಾಕಷ್ಟು ಬಿಲ್ಲವ ಯುವಕರು ಹತ್ಯೆಗೀಡಾಗಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಯಾವ ಒಬ್ಬ ಬಿಲ್ಲವ ಯುವಕನು ಕೂಡ ಈ ರೀತಿ ಕೊಲೆಯಾಗುವಂತಹ ಸನ್ನಿವೇಶ ಸೃಷ್ಟಿಯಾಗದಂತೆ ಸಮುದಾಯದ ಜನ ಜಾಗೃತಿ ವಹಿಸಬೇಕಾಗಿದೆ. ನಾವು ಬ್ರಹ್ಮಶ್ರೀ ನಾರಾಯಣ ಗುರುಗಳ ಅಹಿಂಸಾ ಸಿದ್ಧಾಂತದ ಹಾದಿಯಲ್ಲಿ ಮುಂದುವರಿಯಬೇಕೆಂದು ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ಹಂತಕರನ್ನು ಕೇರಳ ಗಡಿಯವರೆಗೆ ಕಳುಹಿಸಿ ಕೊಟ್ಟಿದ್ದೇವೆ: ಬಂಧಿತ ಆರೋಪಿಗಳು

    ಶೀಘ್ರದಲ್ಲಿಯೇ ಮೃತ ಪ್ರವೀಣ್ ನೆಟ್ಟಾರು ಮನೆಗೆ ಸ್ವಾಮೀಜಿಯವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಇವರೊಂದಿಗೆ ಬಿಲ್ಲವ, ಈಡಿಗ ಸಮಾಜದ ಮುಂದಾಳುಗಳು ತೆರಳಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು

    ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು

    – ಪ್ರವೀಣ್ ಕನಸು ನನಸು ಮಾಡಲು ಸಾಧ್ಯವೋ ಗೊತ್ತಿಲ್ಲ

    ಮಂಗಳೂರು: ನನ್ನ ಮುಂದಿನ ಜೀವನ ಹೇಗೆ ಎಂಬುದು ನನಗೆ ಗೊತ್ತಿಲ್ಲ. ಪ್ರವೀಣ್ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ ಎಂದು ಹತ್ಯೆಯಾದ ಪ್ರವೀಣ್ ಕುಮಾರ್ ನೆಟ್ಟಾರ್ ಪತ್ನಿ ನೂತನ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಪತಿಯನ್ನು ಹತ್ಯೆಗೈದ ಆರೋಪಿಗಳನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ಕೊಡಬೇಕು. ಹಂತಕರಿಗೆ ಜಾಮೀನು ಕೊಡುವವರು ಮುಂದೆ ಬರಬಾರದು. ಕೋರ್ಟ್ ಕೂಡ ಅವರಿಗೆ ಜಾಮೀನು ನೀಡಬಾರದು. ಪ್ರವೀಣ್ ಇಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ನನಗೆ ಉದ್ಯೋಗ ಇದ್ದರೆ ನಾನು ಕುಟುಂಬ ನಿಭಾಯಿಸಿಕೊಂಡು ಹೋಗುತ್ತಿದ್ದೆ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುವ ಉದ್ಯೋಗಿ. ಚಿಕನ್ ಶಾಪ್ ಅನ್ನು ನಾನು ನೋಡಿಕೊಂಡಿದ್ದೆ ಇನ್ನು ನನಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಮನೆ ಕಟ್ಟಬೇಕು ಎಂಬುದು ಪ್ರವೀಣ್ ಕನಸಾಗಿತ್ತು. ಮನೆ ಕಟ್ಟಲು ತನ್ನಿಂದಾದ ಪ್ರಯತ್ನವನ್ನು ಮಾಡುತ್ತಿದ್ದರು. ಇನ್ನೂ ಹೊಸ ಮನೆ ಕಟ್ಟಲು ಸಾಧ್ಯವೇ ಇಲ್ಲವೇ ಗೊತ್ತಿಲ್ಲ. ಅಲ್ಲದೆ ಪ್ರವೀಣ್ ಕನಸನ್ನು ನನಗೆ ನನಸು ಮಾಡಲು ಸಾಧ್ಯವೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ- ಪ್ರವೀಣ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಆರಗ

    ನಾಯಕರನ್ನು ನಂಬಿ ನಿಂತರೆ ನಾವು ಕೆಟ್ಟ ಹಾಗೆ. ಪ್ರವೀಣ್ ಪಕ್ಷ ಸಂಘಟನೆಗಾಗಿ 24 ಗಂಟೆ ದುಡಿದವರು. ಪ್ರವೀಣ್ ಗೆ ವೈರಿ ಶತ್ರು ಅಂತ ಯಾರೂ ಇರಲಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದರು. ಆರೋಪಿಗಳನ್ನು ಬಂಧನ ಮಾಡಿದರೆ ನನಗೆ, ನನ್ನ ಮನೆಯವರಿಗೆ ಸಮಾಧಾನವಾಗುತ್ತದೆ ಎಂದು ನೂತನ ಹೇಳಿದರು.

    Live Tv
    [brid partner=56869869 player=32851 video=960834 autoplay=true]