Tag: Wife

  • ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಗಂಡನನ್ನೇ ಹತ್ಯೆಗೈದು ನವರಂಗಿ ಆಟವಾಡಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಬೆಂಗಳೂರು: ತಾಳಿ ಕಟ್ಟಿದ ಪತಿಯನ್ನೇ ಹತ್ಯೆಗೈದು ಮೂರ್ಛೆರೋಗದ ಕಥೆ ಕಟ್ಟಿದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದ್ದು, ಹೆಂಡತಿ ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಆರೋಪಿಗಳಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಮಹೇಶ್ ಅನ್ನು ಆರೋಪಿಗಳು ಕೊಲೆ ಮಾಡಿದ್ದರು. ನಂತರ ಮಂಡ್ಯಕ್ಕೆ ಮಹೇಶ್ ಶವವನ್ನು ತೆಗೆದುಕೊಂಡು ಹೋಗಿ ಮೂರ್ಛೆರೋಗ ಬಂದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶಿಲ್ಪಾ ಕಥೆ ಕಟ್ಟಿದ್ದಳು. ಈ ಬಗ್ಗೆ ಅನುಮಾನಗೊಂಡು ಪೋಷಕರು ಮಹೇಶ್ ಮೃತ ದೇಹವನ್ನು ಪರಿಶೀಲನೆ ನಡೆಸಿದಾಗ ದೇಹದಲ್ಲಿ ಗಾಯಗಳು ಗುರುತು ಪತ್ತೆಯಾಗಿದೆ. ಈ ಕುರಿತಂತೆ ಕೂಡಲೇ ಮಂಡ್ಯ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಅನ್ಯಧರ್ಮದ ಹುಡುಗಿಯೊಂದಿಗೆ ಪ್ರೇಮ – ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

    ನಂತರ ಮಂಡ್ಯ ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಹೇಶ್ ಕೊಲೆಯಾಗಿರುವುದು ದೃಢಪಟ್ಟಿದೆ. ನಂತರ ಈ ಸಂಬಂಧ ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣಗುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಸದ್ಯ ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ನಿಂದ ಸಿಇಟಿ ರ‍್ಯಾಂಕ್‌ ರದ್ದು- ಮೇಲ್ಮನವಿ ಸಲ್ಲಿಸುತ್ತಾ ಸರ್ಕಾರ?

    ಬೆಂಗಳೂರಿನ ಶಿಲ್ಪಾಳನ್ನು ಮಹೇಶ್ ಅವರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಮಹೇಶ್ ದಂಪತಿ ವಾಸವಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • 50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    50 ಲಕ್ಷ ರೂ, 1 ಕೆಜಿ ಚಿನ್ನ ಕೊಟ್ಟರೂ ಹಣ ಬೇಕೆಂದ – ಹೈದರಾಬಾದ್ ವೈದ್ಯೆಗೆ ವಂಚನೆ

    ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೊಂದು ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹೈದ್ರಾಬಾದ್ ಮೂಲದ ವೈದ್ಯೆಯನ್ನು ಮದುವೆಯಾಗಿ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೋಡುತ್ತಿದ್ದ ವ್ಯಕ್ತಿ ಇದೀಗ ಮತ್ತೊಂದು ವಿವಾಹವಾಗಿ ಮಹಿಳೆಗೆ ವಂಚಿಸಿದ್ದಾನೆ.

    ಬಳ್ಳಾರಿ ಮೂಲದ ರಘುರಾಮ ರೆಡ್ಡಿ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಹೈದರಾಬಾದ್ ಮೂಲದ ಡಾಕ್ಟರ್ ಮೌನಿಕಾರಿಗೆ ಅವರನ್ನು 2019ರಲ್ಲಿ ಮದುವೆಯಾಗಿದ್ದನು. ಮದುವೆ ವೇಳೆ ಐವತ್ತು ಲಕ್ಷ ರೂಪಾಯಿ ವರದಕ್ಷಿಣೆ, ಒಂದು ಕೆ.ಜಿ. ಬಂಗಾರವನ್ನು ನೀಡಲಾಗಿತ್ತು. ಆದರೆ ಎರಡು ತಿಂಗಳು ಕೂಡ ಸಂಸಾರ ಮಾಡದ ರಘುರಾಮ ರೆಡ್ಡಿ ಹಣಕ್ಕಾಗಿ ಹೆಂಡತಿಗೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದನು. ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಕಾಹು ಇನ್ನಿಲ್ಲ

    ಆಸ್ಟ್ರೆಲಿಯಾದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ರಘುರಾಮ ರೆಡ್ಡಿಗೆ ನಿಜವಾಗಿಯೂ ಯಾವುದೇ ಕೆಲಸವಿಲ್ಲರಲಿಲ್ಲ. ಹೀಗಾಗಿ ನಿತ್ಯ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದನು. ಈ ಹಿನ್ನಲೆ ಮನೆಯಿಂದ ವೈದ್ಯೆ ಹೊರ ಬಂದಿದ್ದರು. ಆದರೆ ಇದೀಗ ಪತ್ನಿಯಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾಗಿದ್ದಾನೆ. ಈ ಬಗ್ಗೆ ಪ್ರಶ್ನಿಸಲು ಬಂದ ಮೊದಲ ಹೆಂಡತಿ, ಮತ್ತವರ ಮನೆಯವರ ಮೇಲೆ ಮಾರಾಕಾಸ್ತ್ರಗಳಿಂದ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾನೆ.

    ಈ ಬಗ್ಗೆ ವೈದ್ಯೆ ನೀಡಿದ್ದ ದೂರಿನ ಮೇರೆಗೆ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ, ಸಹೋದರ ಹರೀಶ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸೇರಿದಂತೆ ಕುಟುಂಬ ಏಳು ಜನರ ಮೇಲೆ ದೂರು ದಾಖಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪಘಾತ – ಇನ್ಸ್‌ಪೆಕ್ಟರ್ ದಂಪತಿಯಿಂದ ಕಿರಿಕ್

    Live Tv
    [brid partner=56869869 player=32851 video=960834 autoplay=true]

  • ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

    ಮದುವೆ ನಂತ್ರ ದಪ್ಪ ಆಗಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

    ಲಕ್ನೋ: ಮದುವೆಯ ನಂತರ ಪತ್ನಿ ತೂಕ ಹೆಚ್ಚಾಗಿದ್ದಕ್ಕೆ ಮೀರತ್ ಮೂಲದ ವ್ಯಕ್ತಿಯೋರ್ವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಇದೀಗ ಪತಿ ವಿರುದ್ಧ ಪತ್ನಿ ನ್ಯಾಯಾಕ್ಕಾಗಿ ಮೀರತ್‍ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    MARRIAGE

    ತನ್ನ ಪತಿ ಸಲ್ಮಾನ್ ತನ್ನನ್ನು ಒಂದು ತಿಂಗಳ ಹಿಂದೆ ಮನೆಯಿಂದ ಹೊರಹಾಕಿದ್ದಾರೆ ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸರ ಮುಂದೆ ಮಹಿಳೆ ತನ್ನ ಅಳಲನ್ನು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್‌ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    7 ವರ್ಷದ ಮಗನನ್ನು ಹೊಂದಿರುವ ಈ ದಂಪತಿ ಆಗಾಗ ಜಗಳವಾಡುತ್ತಿದ್ದರು. ಅಲ್ಲದೇ ನಜ್ಮಾಳ ದೇಹದ ಬಗ್ಗೆ ಆಕೆಯ ಪತಿ ಅಸಹ್ಯಕರವಾಗಿ ಕಾಮೆಂಟ್ ಮಾಡುತ್ತಿದ್ದರು. ಅಲ್ಲದೇ ನನ್ನನ್ನು ಡುಮ್ಮಿ ಎಂದು ಕರೆಯುತ್ತಿದ್ದರು. ನಿನ್ನಂತೆ ಯಾರೂ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.

    ತಾನು ಸಲ್ಮಾನ್ ಜೊತೆ ಬಾಳಲು ಇಚ್ಛಿಸುತ್ತೇನೆ. ಆದರೆ ನನ್ನ ಪತಿ ವಿಚ್ಛೇದನ ಬೇಕು ಎಂದು ಕೇಳಿದ್ದಾರೆ. ಇದರಿಂದ ಈ ವಿಚಾರದಲ್ಲಿ ನಾನು ಅಸಹಾಯಕಳಾಗಿದ್ದೇನೆ. ನನಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗುವಂತೆ ಕೋರಿ ಮಾರುಕಟ್ಟೆಯಲ್ಲಿ ಯುವಕನ ಹಿಂದೆ ಓಡಿದ ವಧು!

    Live Tv
    [brid partner=56869869 player=32851 video=960834 autoplay=true]

  • ಬಲವಂತವಾಗಿ ದನದ ಮಾಂಸ ತಿನ್ನಿಸಿದ ಮುಸ್ಲಿಂ ಪತ್ನಿ, ಆಕೆಯ ಸಹೋದರ- ವ್ಯಕ್ತಿ ಆತ್ಮಹತ್ಯೆ

    ಬಲವಂತವಾಗಿ ದನದ ಮಾಂಸ ತಿನ್ನಿಸಿದ ಮುಸ್ಲಿಂ ಪತ್ನಿ, ಆಕೆಯ ಸಹೋದರ- ವ್ಯಕ್ತಿ ಆತ್ಮಹತ್ಯೆ

    ಗಾಂಧೀನಗರ: ಪತ್ನಿ ಹಾಗೂ ಬಾವ ಸೇರಿ ಬಲವಂತದಿಂದ ದನದ ಮಾಂಸ ತಿನ್ನಿಸಿದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿ ಸೂರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಜೂನ್‍ನಲ್ಲಿ ಎರಡು ತಿಂಗಳ ಹಿಂದೆ ರೋಹಿತ್ ಪ್ರತಾಪ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಫೇಸ್‍ಬುಕ್‍ನಲ್ಲಿ ಡೆತ್ ನೋಟ್‍ನ್ನು ಬರೆದಿಟ್ಟು, ನೇಣು ಹಾಕಿಕೊಂಡಿದ್ದರು. ಈ ಡೆತ್ ನೊಟ್‍ನ ಬಗ್ಗೆ  ಎರಡು ತಿಂಗಳ ನಂತರ ಅರಿತ ಆತನ ಕುಟುಂಬಸ್ಥರು ಸೂರತ್ ಪೊಲೀಸ್ ಠಾಣೆಯಲ್ಲಿ ರೋಹಿತ್ ಪತ್ನಿ ಸೋನಮ್ ಅಲಿ ಹಾಗೂ ಆಕೆಯ ಸಹೊದರ ಅಖ್ತರ್ ಅಲಿ ವಿರುದ್ಧ ದೂರು ನೀಡಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿ ಸೂರತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ರೋಹಿತ್ ಬರೆದ ಡೆತ್ ನೋಟ್‍ನಲ್ಲಿ ಏನಿತ್ತು?: ದನದ ಮಾಂಸ ತಿನ್ನಲು ನಿರಾಕರಿಸಿದ್ದೆ. ಆದರೆ ನನ್ನ ಪತ್ನಿ ಸೋನಮ್ ಅಲಿ ಹಾಗೂ ಆಕೆಯ ಸಹೋದರ ಅಖ್ತರ್ ಅಲಿ ಕೊಲೆ ಬೆದರಿಕೆ ಹಾಕಿದ್ದಾರೆ. ಇದರಿಂದ ನನಗೆ ಬಲವಂತವಾಗಿ ಗೋಮಾಂಸವನ್ನು ತಿನ್ನಿಸಿದ್ದಾರೆ. ಹೀಗಾಗಿ ನಾನು ಬದುಕಲು ಅರ್ಹನಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ನನ್ನ ಸಾವಿಗೆ ನ್ಯಾಯ ಕೊಡಿಸುವಂತೆ ಎಲ್ಲ ಸ್ನೇಹಿತರಲ್ಲೂ ವಿನಂತಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.

    crime

    ರೋಹಿತ್, ಸೋನಮ್ ಭೇಟಿ: ರೋಹಿತ್ ಪ್ರತಾಪ್ ಸಿಂಗ್ ಮತ್ತು ಸೋನಮ್ ಸೂರತ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಲ್ಲೇ ಇಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದರು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆ ಆಗಲು ಬಯಸಿದ್ದರು. ಆದರೆ ಸೋನಮ್ ಬೇರೆ ಧರ್ಮಕ್ಕೆ ಸೇರಿದ್ದ ಕಾರಣ ಅವರ ಸಂಬಂಧವನ್ನು ರೋಹಿತ್ ಕುಟುಂಬಸ್ಥರು ನಿರಾಕರಿಸಿದ್ದರು. ಆದರೆ ರೋಹಿತ್ ಮನೆಯವರ ವಿರೋಧದ ನಡುವೆ ಸೋನಮ್‍ನನ್ನು ಮದುವೆಯಾಗಿದ್ದರು. ವರದಿಗಳ ಪ್ರಕಾರ ಕಳೆದೊಂದು ವರ್ಷದಿಂದ ರೋಹಿತ್ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಇದನ್ನೂ ಓದಿ: ನಮಗೂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿ: ಕ್ರೈಸ್ತ ಸಮುದಾಯ

    POLICE JEEP

    ಇದರಿಂದಾಗಿ ಕುಟುಂಬಸ್ಥರಿಗೆ ರೋಹಿತ್ ಫೇಸ್‍ಬುಕ್‍ನಲ್ಲಿ ಡೆತ್ ನೋಟ್ ಬರೆದ ವಿಷಯ ತಿಳಿದಿರಲಿಲ್ಲ. ಈ ಬಗ್ಗೆ ಸ್ನೇಹಿತರು ರೋಹಿತ್ ಕುಟುಂಬಸ್ಥರಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರೋಹಿತ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮನೆಯಲ್ಲಿ ಸಾಮೂಹಿಕ ನಮಾಜ್ – 26 ಮಂದಿಯ ವಿರುದ್ಧ ಪ್ರಕರಣ ದಾಖಲು

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ಲಕ್ನೋ: ಪತ್ನಿಯೊಂದಿಗೆ ಜಗಳವಾಡಿ ಬೇಸತ್ತ ವ್ಯಕ್ತಿ ಕಳೆದ 1 ತಿಂಗಳಿನಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆ ವಾಸವಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮವ್ ಜಿಲ್ಲೆಯ ಕೋಪಗಂಜ್‌ನಲ್ಲಿ ನಡೆದಿದೆ.

    ನಗರದ ನಿವಾಸಿ ರಾಮ್ ಪ್ರವೇಶ್ ಕಳೆದ 6 ತಿಂಗಳುಗಳಿಂದ ಪತ್ನಿಯೊಂದಿಗೆ ಜಗಳವಾಡುತ್ತಿದ್ದು, ಆಕೆ ತನಗೆ ಥಳಿಸಿರುವುದಾಗಿ ಆರೋಪಿಸಿದ್ದಾನೆ. ಪತ್ನಿಯ ವರ್ತನೆಗೆ ಮನನೊಂದ ಆತ ಮರ ಹತ್ತಿ, 1 ತಿಂಗಳಿನಿಂದ ಅಲ್ಲಿಯೇ ವಾಸವಾಗಿದ್ದಾನೆ. ಆತನಿಗೆ ಆಹಾರವನ್ನು ಕುಟುಂಬದವರು ಹಗ್ಗದಲ್ಲಿ ಕಟ್ಟಿ, ಮೇಲಕ್ಕೆ ಕಳುಹಿಸುತ್ತಾರೆ. ಆತ ರಾತ್ರಿ ಹೊತ್ತು ಮರದಿಂದ ಕೆಳಗಿಳಿದು ಮಲ ವಿಸರ್ಜನೆ ಮಾಡಿ ಮತ್ತೆ ಮರಕ್ಕೆ ಏರುತ್ತಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಬೆಂಬಲಕ್ಕೆ ಸೌದಿ ಅರೇಬಿಯಾ – 8 ಸಾವಿರ ಕೋಟಿ ಹೂಡಿಕೆ ಮಾಡೋದಾಗಿ ಘೋಷಣೆ

     

    POLICE JEEP

    ತಾಳೆ ಮರದ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿವೆ. ಜನರು ತಮ್ಮ ಮನೆಯಲ್ಲಿ ಏನು ಮಾಡುತ್ತಾರೆ ಎಂಬುದನ್ನು ಆತ ಗಮನಿಸುತ್ತಿರುತ್ತಾನೆ. ಇದು ಅವರ ಗೌಪ್ಯತೆಗೆ ಧಕ್ಕೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗ್ರಾಮದ ಅನೇಕ ಮಹಿಳೆಯರೂ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಅವರು ಅಲ್ಲಿನ ವೀಡಿಯೋ ಮಾಡಿ ತೆರಳಿದ್ದಾರೆ ಎಂದು ಗ್ರಾಮದ ಮುಖಂಡ ದೀಪಕ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಪತ್ತೆ ಮಾಡಲು ಚಿರತೆಗೂ ಬಂತು ಆಧಾರ್ ಕಾರ್ಡ್

    ರಾಮ್ ಪ್ರವೇಶ್‌ಗೆ ನೆರೆಹೊರೆಯವರು ಎಷ್ಟು ಕೇಳಿಕೊಂಡರೂ ಮರದಿಂದ ಕೆಳಗೆ ಇಳಿಯಲು ನಿರಾಕರಿಸಿದ್ದಾನೆ. ಪೊಲೀಸರಿಗೂ ಕರೆ ಮಾಡಿ ಕೆರೆಸಿದಾಗ ಅದಕ್ಕೂ ಆತ ಕಿವಿಗೊಡದೇ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ

    ಜಾಮೀನಿನ ಮೇಲೆ ಹೊರಬಂದವನು ಪತ್ನಿಯನ್ನು ಇರಿದು ಕೊಂದ

    ಚೆನ್ನೈ: ಜಾಮೀನಿನ ಆಧಾರದ ಮೇಲೆ ಹೊರಗೆ ಬಂದಿದ್ದ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದು, ಇದೀಗ ಪರಾರಿಯಾಗಿದ್ದಾನೆ.

    ಆರೋಪಿಯನ್ನು ಸೆಲ್ವರಾಜ ಎಂದು ಗುರುತಿಸಲಾಗಿದ್ದು, ಈತ ಟಿಎನ್‍ನ ಕರೂರಿನಲ್ಲಿ ದಿನಗೂಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಈತ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದನು. ಆದರೆ ಗುರುವಾರ ತಮ್ಮ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

    ಮೃತ ಮಹಿಳೆಯನ್ನು ಸತ್ಯ ಎಂದು ಗುರುತಿಸಲಾಗಿದ್ದು, ಆರೋಪಿ ಸೆಲ್ವರಾಜ್ ಮತ್ತು ಸತ್ಯ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಪತ್ನಿಯ ನಡತೆಯ ಬಗ್ಗೆ ಆರೋಪಿ ಸದಾ ಸಂಶಯಪಡುತ್ತಿದ್ದನು. ಈ ವಿಚಾರವಾಗಿ ಅನೇಕ ಬಾರಿ ದಂಪತಿ ನಡುವೆ ಜಗಳವಾಗುತ್ತಿತ್ತು. ಇದನ್ನೂ ಓದಿ: ರೈಲ್ವೆ ಉದ್ಯೋಗದ ಆಸೆಗೆ ತನ್ನ ಹೆಬ್ಬೆರಳಿನ ಚರ್ಮ ತೆಗೆದು ಸ್ನೇಹಿತನಿಗೆ ಅಂಟಿಸಿ ಸಿಕ್ಕಿಬಿದ್ದ

    ಗುರುವಾರ ಕೆಲಸ ಮುಗಿಸಿ ಮನೆಗೆ ಬಂದ ಸತ್ಯ ಹಾಗೂ ಸೆಲ್ವರಾಜ್ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ಸೆಲ್ವರಾಜ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಸತ್ಯ ಅವರ ಹೊಟ್ಟೆಗೆ ಇರಿದಿದ್ದಾನೆ. ನಂತರ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತ್ಯರನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸೆಲ್ವರಾಜ್ ತನ್ನ ಹಿರಿಯ ಮಗನಿಗೆ ತಿಳಿಸಿದ್ದಾನೆ. ನಂತರ ಕೂಡಲೇ ಆಕೆಯನ್ನು ಕರೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾಳೆ.

    ಬಳಿಕ ಘಟನೆ ಸಂಬಂಧ ಮಾಹಿತಿ ಪಡೆದ ಕರೂರು ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಸೆಲ್ವರಾಜ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿ ಮೇಲೆ ಇನ್ನೂ ಅನೇಕ ಪ್ರಕರಣಗಳು ಬಾಕಿ ಇವೆ. ಇದನ್ನೂ ಓದಿ: ಕುಮಾರಣ್ಣನ ಜೊತೆ ನನ್ನನ್ನು ಜನ ಒಂದುಗೂಡಿಸಿದ್ದಾರೆ: ಜೆಡಿಎಸ್‌ನಲ್ಲೇ ಉಳಿಯುತ್ತಾರಾ ಜಿಟಿಡಿ?

    Live Tv
    [brid partner=56869869 player=32851 video=960834 autoplay=true]

  • ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    ಚಿಕ್ಕೋಡಿ: ಅನಾರೋಗ್ಯದಿಂದಾಗಿ ಪತ್ನಿ ಸಾವನ್ನಪ್ಪಿದ ಹಿನ್ನೆಲೆ ಮನನೊಂದು ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

    ಮೃತ ವ್ಯಕ್ತಿಯನ್ನು ಸದಾಶಿವ ರಾಮಪ್ಪ ಕಾಂಬಳೆ (26) ಎಂದು ಗುರುತಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ಎರಡು ವರ್ಷದ ಹಿಂದೆಯಷ್ಟೇ ಸದಾಶಿವ ರಾಮಪ್ಪ ಕಾಂಬಳೆ, ರೂಪಾ ಅವರನ್ನು ವಿವಾಹವಾಗಿದ್ದರು. ಆದರೆ ಅನಾರೋಗ್ಯ ಕಾರಣ ರೂಪ ಅವರು ಕಳೆದ ಎರಡು ದಿನದ ಹಿಂದೆಯಷ್ಟೇ ನಿಧನರಾಗಿದ್ದರು. ಇದನ್ನೂ ಓದಿ: ದೆಹಲಿಗೆ ಹೊರಟ ಬಿಎಸ್‌ವೈ – ಇಂದು ಸಂಜೆ ಮೋದಿ ಭೇಟಿ

    crime

    ಇದರಿಂದ ಮನನೊಂದು ಸದಾಶಿವ ರಾಮಪ್ಪ ಕಾಂಬಳೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೂಡಲೇ ಅವರನ್ನು ವಿಜಯಪುರ ಜಿಲ್ಲೆ ಖಾಸಗಿ ಆಸ್ಪತ್ರೆಗೆ ಸದಾಶಿವ ದಾಖಲು ಮಾಡಲಾಗಿತ್ತು. ಆದರೆ ಅವರ ದೇಹ 80 ರಷ್ಟು ಪ್ರತಿಶತದಷ್ಟು ಬೆಂಕಿಯಿಂದ ಸುಟ್ಟುಹೋಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಆಸ್ಪತ್ರೆಯಲ್ಲಿಯೇ ಸದಾಶಿವ ರಾಮಪ್ಪ ಕಾಂಬಳೆ ಅವರು ಕೊನೆಯುಸಿರೆಳೆದಿದ್ದಾರೆ.

    ಒಟ್ಟಾರೆ ಎರಡು ವರ್ಷದ ಹಿಂದೆ ಸಪ್ತಪದಿ ತುಳಿದಿದ್ದ ಈ ಜೋಡಿ ಇದೀಗ ಸಾವಿನಲ್ಲೂ ಒಂದಾಗಿದ್ದಾರೆ. ಇನ್ನೂ ಐಗಳಿ ಪೊಲೀಸ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪುರುಷರೊಂದಿಗೆ ಸೆಕ್ಸ್ – ವ್ಯಕ್ತಿಗೆ ಒಂದೇ ಬಾರಿಗೆ ಕೊರೊನಾ, ಮಂಕಿಪಾಕ್ಸ್, HIV ಪಾಸಿಟಿವ್‌

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಹಣ ವರ್ಗಾವಣೆ ಪ್ರಕರಣ – ಸತ್ಯೇಂದ್ರ ಜೈನ್ ಪತ್ನಿಗೆ ಜಾಮೀನು ಮಂಜೂರು

    ಅಕ್ರಮ ಹಣ ವರ್ಗಾವಣೆ ಪ್ರಕರಣ – ಸತ್ಯೇಂದ್ರ ಜೈನ್ ಪತ್ನಿಗೆ ಜಾಮೀನು ಮಂಜೂರು

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಅವರಿಗೆ ರೋಸ್ ಅವೆನ್ಯೂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

    ಈ ನಡುವೆ ಸತ್ಯೇಂದರ್ ಜೈನ್ ಅವರು ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಇದರಲ್ಲಿ ಶನಿವಾರ ನ್ಯಾಯಾಲಯವು ಭಾಗಶಃ ವಾದಗಳನ್ನು ಆಲಿಸಿದೆ. ಅವರ ಜಾಮೀನು ಅರ್ಜಿಯನ್ನು ಆಗಸ್ಟ್ 27 ರಂದು ನ್ಯಾಯಾಲಯ ಪರಿಶೀಲಿಸಲಿದೆ. ಸಹ ಆರೋಪಿಗಳಾದ ಅಂಕುಶ್ ಮತ್ತು ವೈಭವ್ ಜೈನ್ ಅವರ ಜಾಮೀನು ಅರ್ಜಿಗಳ ವಿಚಾರಣೆಯೂ ಆಗಸ್ಟ್ 27 ರಂದು ನಡೆಯಲಿದೆ. ಇದನ್ನೂ ಓದಿ: ಪಾಕ್ ಮೇಲೆ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ – ವಾಯುಪಡೆಯ ಮೂವರು ಅಧಿಕಾರಿಗಳು ವಜಾ

    ಪೂನಂ ಜೈನ್, ಸುನೀಲ್ ಕುಮಾರ್ ಜೈನ್ ಮತ್ತು ಅಜಿತ್ ಕುಮಾರ್ ಜೈನ್ ಅವರನ್ನು ತನಿಖೆಯ ಸಮಯದಲ್ಲಿ ಬಂಧಿಸಲಾಗಿಲ್ಲ ಹಾಗೂ ಈಗಾಗಲೇ ಜಾರಿ ನಿರ್ದೇಶನಾಲಯ(ಇಡಿ) ಆರೋಪಪಟ್ಟಿ ಸಲ್ಲಿಸಿದೆ ಎಂದು ಆಗಸ್ಟ್ 6 ರಂದು ನ್ಯಾಯಾಲಯ ಪೂನಂ ಜೈನ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಇದನ್ನೂ ಓದಿ: ರಾಹುಲ್‌ ಗಾಂಧಿಯನ್ನು ಬಲವಂತವಾಗಿ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ: ದಿಗ್ವಿಜಯ ಸಿಂಗ್‌

    4 ಖಾಸಗಿ ಸಂಸ್ಥೆಗಳು ಹಾಗೂ ದೆಹಲಿ ಕ್ಯಾಬಿನೆಟ್ ಸಚಿವ ಸತ್ಯೇಂದ್ರ ಜೈನ್ ಸೇರಿದಂತೆ ಒಟ್ಟು 10 ಜನರು ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಆರೋಪಿಗಳಾಗಿದ್ದಾರೆ. ಸತ್ಯೇಂದ್ರ ಜೈನ್, ಅಂಕುಶ್ ಜೈನ್ ಹಾಗೂ ವೈಭವ್ ಜೈನ್ ಅವರನ್ನು ಇಡಿ ಬಂಧಿಸಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಮುಂಬೈ: ಸಾರ್ವಜನಿಕವಾಗಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ ನೀಡಿದ್ದ ಪತಿ ವಿರುದ್ಧ ಪುಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪತ್ನಿ ಗರ್ಭಧರಿಸಬೇಕಾದರೆ ಸಾರ್ವಜನಿಕವಾಗಿ ಸ್ನಾನ ಮಾಡಬೇಕೆಂದು ಮಾಂತ್ರಿಕನೋರ್ವ ಸಲಹೆ ನೀಡಿದ್ದರಿಂದ ವ್ಯಕ್ತಿಯೊರ್ವ ತನ್ನ ಪತ್ನಿಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಕಿರುಕುಳ ನೀಡಿದ ಹಿನ್ನೆಲೆ ಆತ ಮತ್ತು ಆತನ ಪೋಷಕರ ವಿರುದ್ಧ  ಪ್ರಕರಣ ದಾಖಲಾಗಿದೆ.

    ಮಾಂತ್ರಿಕ ನೀಡಿದ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ವ್ಯಕ್ತಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಮಡಿಕೇರಿಯಲ್ಲಿ ನಡೆದ ಮೊಟ್ಟೆ ಎಸೆತ ಪ್ರಕರಣ ನನಗೆ ಗೊತ್ತಿಲ್ಲ: ಅಪ್ಪಚ್ಚು ರಂಜನ್

    ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ವಿವಾಹಿತ ಸ್ತ್ರೀಯನ್ನು ಆಪರಾಧಿಕ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡುಹೋಗುವುದು) ಮತ್ತು ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತಿ ವಿದ್ಯಾಪೀಠದ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ತನಿಖೆ ನಡೆಸುವ ವೇಳೆ ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ನಂತರ ಎಲ್ಲರ ಮುಂದೆ ಸ್ನಾನ ಮಾಡುವಂತೆ ಹಿಂಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ನಿಷೇಧಾಜ್ಞೆ- ಮದ್ಯ ಮಾರಾಟ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ಬೇರೆ ಮಹಿಳೆಯ ಜೊತೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನಿಗೆ ಚಪ್ಪಲಿಯಿಂದ ಹೊಡೆದ ಪತ್ನಿ

    ಬೇರೆ ಮಹಿಳೆಯ ಜೊತೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನಿಗೆ ಚಪ್ಪಲಿಯಿಂದ ಹೊಡೆದ ಪತ್ನಿ

    ಲಕ್ನೋ: ಬಿಜೆಪಿ ಮುಖಂಡರೊಬ್ಬರು ಮಹಿಳಾ ಸ್ನೇಹಿತೆಯೊಂದಿಗೆ ತೆರಳುತ್ತಿದ್ದಾಗ ಪತ್ನಿಯ ಬಳಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಬುಂದೇಲ್‍ಖಂಡ್ ಪ್ರದೇಶದ ಬಿಜೆಪಿ ಕಾರ್ಯದರ್ಶಿಯಾಗಿರುವ ಮೋಹಿತ್ ಸೋಂಕರ್ ಬೇರೊಂದು ಮಹಿಳೆಯ ಜೊತೆಗೆ ಕಾರಿನಲ್ಲಿ ಹೋಗುತ್ತಿದ್ದರು. ಇದನ್ನು ನೋಡಿದ ಆತನ ಪತ್ನಿ ಹಾಗೂ ಪತ್ನಿಯ ಕಡೆಯವರು ಮೋಹಿತ್‍ಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಥಳಿಸಿದ್ದರು. ಇದರೊಂದಿಗೆ ಆತನ ಜೊತೆ ಇದ್ದ ಮಹಿಳೆಗೂ ಆಕೆಯ ಪತಿ ಸೇರಿದಂತೆ ಇನ್ನಿತರರು ಥಳಿಸಿದ್ದಾರೆ.

    CRIME 2

    ಮೋಹಿತ್ ಸೋಂಕರ್ ಅವರ ಪತ್ನಿ ಮೋಹಿತ್‍ಗೆ ಥಳಿಸುತ್ತಿರುವ ಘಟನೆಯನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಜೂಹಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ದಲಿತನಿಗೆ ಚಪ್ಪಲಿಯಿಂದ ಥಳಿಸಿದ ಗ್ರಾಮದ ಮುಖ್ಯಸ್ಥ – ಬಂಧನ

    ಬಿಜೆಪಿ ನಾಯಕನ ಪತ್ನಿ ಹಾಗೂ ಮಹಿಳೆಯ ಪತಿ ಜೂಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಗಮನ ಸೆಳೆಯಲು ಕೆಜಿಎಫ್ ಬಾಬು ಹೊಸ ಪ್ಲ್ಯಾನ್!

    Live Tv
    [brid partner=56869869 player=32851 video=960834 autoplay=true]