Tag: Wife

  • ಹಾಸನಾಂಬೆಯ ದರ್ಶನಕ್ಕೆ ಪತ್ನಿಯನ್ನು ಹೊತ್ತು ತಂದ ಪತಿ!

    ಹಾಸನಾಂಬೆಯ ದರ್ಶನಕ್ಕೆ ಪತ್ನಿಯನ್ನು ಹೊತ್ತು ತಂದ ಪತಿ!

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆ (Hasanamba) ದೇವಿ ದರ್ಶನಕ್ಕೆ ಇಂದು ಭಕ್ತಸಾಗರವೇ ಹರಿದು ಬಂದಿದೆ. ಬೆಳಗ್ಗೆ 6 ಗಂಟೆಯಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ.

    ಒಂದು ಸಾವಿರ ಹಾಗೂ ಮುನ್ನೂರು ರೂ.ನ ವಿಶೇಷ ದರ್ಶನದ ಪಾಸ್ ಪಡೆದವರು ದರ್ಶನಕ್ಕೆ ಹೋಗಲು ಗಂಟೆಗಟ್ಟಲೆ ಕಾಯಬೇಕಾಯಿತು. ವಿಶೇಷ ಚೇತನ ಪತ್ನಿಯ ಆಸೆ ಈಡೇರಿಸಲು ಪತಿಯೊಬ್ಬರು ತನ್ನ ಪತ್ನಿಯನ್ನು ಎತ್ತಿಕೊಂಡು ಬಂದು ದರ್ಶನ ಮಾಡಿಸಿದರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿಯ ನಾಗರಾಜ್ ತಮ್ಮ ಪತ್ನಿ ಗೌರಮ್ಮರನ್ನು ಎತ್ತಿಕೊಂಡು ಬಂದು ದರ್ಶನ ಮಾಡಿಸಿದರು.

    ಕಳೆದ ವರ್ಷ ಕೂಡ ನಾಗರಾಜ್ ಪತ್ನಿಗೆ ದೇವಿ ದರ್ಶನ ಮಾಡಿಸಿದರು. ಭಾರೀ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ನಡುವೆ ವಿಶೇಷ ಚೇತನೆಯನ್ನು ಹೊತ್ತು ದರ್ಶನಕ್ಕೆ ಬಂದ ನಾಗರಾಜ್‍ಗೆ ಪೊಲೀಸರು ಆದ್ಯತೆ ನೀಡಿ, ನೇರವಾಗಿ ಗರ್ಭಗುಡಿ ಸಮೀಪ ಕರೆದೊಯ್ದು ಮಾನವೀಯತೆ ಮೆರೆದರು.

    ಇಂದು ಸರ್ಕಾರಿ ನೌಕರರು ಹಾಗೂ ನ್ಯಾಯಾಂಗ ಇಲಾಖೆಯವರ ಕುಟುಂಬಕ್ಕೆ ದರ್ಶನದ ವ್ಯವಸ್ಥೆ ಮಾಡಿದ್ದರಿಂದ ನೂಕುನುಗ್ಗಲು ಉಂಟಾಗಿ ಪೊಲೀಸರು ಹರಸಾಹಸ ಪಡಬೇಕಾಯಿತು. ಇದನ್ನೂ ಓದಿ: ಹಾಸನಾಂಬ ಜಾತ್ರಾ ಮಹೋತ್ಸವ – ಭಕ್ತರಿಗೆ ದರ್ಶನ ಕೊಟ್ಟ ಹಾಸನಾಂಬೆ

    Live Tv
    [brid partner=56869869 player=32851 video=960834 autoplay=true]

  • ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

    ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ

    ರಾಯಚೂರು: ಕೌಟುಂಬಿಕ ಕಲಹದಿಂದಾಗಿ ಪತಿ (Husband) ಯೇ ಪತ್ನಿ (wife)ಯನ್ನು ಕೊಚ್ಚಿ ಕೊಲೆಗೈದಿರುವ ಘಟನೆ ರಾಯಚೂರು ತಾಲೂಕಿನ ಏಗನೂರು ಗ್ರಾಮದಲ್ಲಿ ನಡೆದಿದೆ. ಅಂಗನವಾಡಿ ಶಿಕ್ಷಕಿಯಾಗಿದ್ದ 27 ವರ್ಷದ ನಾಗರತ್ನ ಕೊಲೆಯಾದ ಮಹಿಳೆ.

    ಆರೋಪಿ ಪತಿ ಶಶಿಕುಮಾರ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಸೆರೆಯಾಗಿದ್ದಾನೆ. ಸದ್ಯ ತಾಯಿಯನ್ನ ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕಾಟಕ್ಕೆ ನಾಗರತ್ನ ಬೇಸತ್ತಿದ್ದಳು. ಗಂಡನ ಕಾಟದಿಂದ ಬೇಸತ್ತು ಕಳೆದ ಎರಡು ದಿನಗಳಿಂದ ಅತ್ತೆಯ ಜೊತೆ ಬೇರೆ ಮನೆಯಲ್ಲಿದ್ದಳು.

    ಗಂಡನ ಕಿರುಕುಳದ ಕುರಿತು ಪೊಲೀಸರಿಗೆ ಮೌಖಿಕ ದೂರು ಕೂಡ ನೀಡಿದ್ದಳು, ಗಂಡನನ್ನ ಠಾಣೆಗೆ ಕರೆಯಿಸಿ ಬುದ್ಧಿ ಹೇಳುವುದಾಗಿ ಪೊಲೀಸರು ಧೈರ್ಯ ನೀಡಿದ್ದರು. ಆದರೆ ಪಾಪಿ ಪತಿ ಶಶಿಕುಮಾರ್ ಮದ್ಯದ ಅಮಲಿನಲ್ಲಿ ಮತ್ತೆ ಜಗಳ ತೆಗೆದು ಕೊಡಲಿಯಿಂದ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

    POLICE JEEP

    ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯ ವಿಚಾರಣೆ ಮುಂದುವರಿದಿದೆ. ಇದನ್ನೂ ಓದಿ: ಜೈಲಿನಲ್ಲಿ ಬೆಂಕಿ ಅವಘಡ- ಮಹ್ಸಾ ಅಮಿನಿ ಬೆಂಬಲಿಗರು ಸಾವು, 61 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು ಪತ್ನಿ, ಮಗಳು ಸೇರಿ ಕೊಲೆ ಮಾಡಿದ್ರು

    ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು ಪತ್ನಿ, ಮಗಳು ಸೇರಿ ಕೊಲೆ ಮಾಡಿದ್ರು

    ಚೆನ್ನೈ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯನ್ನು ಆತನ ಪತ್ನಿ (Wife) ಹಾಗೂ ಹಿರಿಯ ಮಗಳು (Daughter) ಸೇರಿ ಕೊಲೆ ಮಾಡಿದ ಘಟನೆ ತಮಿಳುನಾಡಿನ (Tamil Nadu) ಟುಟಿಕೋರಿನ್ ಜಿಲ್ಲೆಯಲ್ಲಿ ನಡೆದಿದೆ.

    ಜ್ಞಾನಶೇಖರ್(42) ಕೊಲೆಯಾದ ವ್ಯಕ್ತಿ. ಈತ ಮೀನು ವ್ಯಾಪಾರಿಯಾಗಿದ್ದ. ಈತನ ಪತ್ನಿ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆಂದು ಶಂಕಿಸಿದ್ದ. ಜೊತೆಗೆ ಈತನ ಹಿರಿಯ ಮಗಳು (15) ಕಾರ್ತಿಕ್ (24) ಎಂಬಾತನ ಜೊತೆಗೆ ಸಂಬಂಧವನ್ನು ಹೊಂದಿದ್ದಳು. ಇದರಿಂದಾಗಿ ಜ್ಞಾನಶೇಖರ್ ಪತ್ನಿ ಹಾಗೂ ಮಗಳಿಗೆ ಅನೈತಿಕ ಸಂಬಂಧದ ಕುರಿತು ಛೀಮಾರಿ ಹಾಕಿದ್ದ. ಅಷ್ಟೇ ಅಲ್ಲದೇ ಈ ಕುರಿತಾಗಿ ಮನೆಯಲ್ಲಿ ದೊಡ್ಡ ಜಗಳ ನಡೆದಿತ್ತು. ಇದರಿಂದಾಗಿ ಸಿಟ್ಟಿಗೆದ್ದ ಆತನ ಪತ್ನಿ ಹಾಗೂ ಹಿರಿಯ ಮಗಳು ಸೇರಿ ಜ್ಞಾನಶೇಖರ್‌ನನ್ನು ಕೊಲೆ ಮಾಡಿದ್ದಾರೆ.

    POLICE JEEP

    ಕೊಲೆ ಮಾಡಿದ ಬಳಿಕ ಕಾರ್ತಿಕ್‍ನ ಸಹಾಯ ಪಡೆದ ಜ್ಞಾನಶೇಖರ್‌ನ ಪತ್ನಿ ಹಾಗೂ ಮಗಳು ಆತನನ್ನು ಗೋಣಿಚೀಲದಲ್ಲಿ ತುಂಬಿ ಕಾಡಿಗೆ ಕೊಂಡೊಯ್ದಿದ್ದಾರೆ. ಅಲ್ಲಿ ಜ್ಞಾನಶೇಖರ್‌ನ ಶವವನ್ನು ಸುಟ್ಟು ತಮಗೆ ಏನೂ ಸಂಬಂಧವಿಲ್ಲದಂತೆ ನಟಿಸಿದ್ದಾರೆ. ಇದನ್ನೂ ಓದಿ: ಗ್ರಾಮಗಳಿಗೆ ನುಗ್ಗಿತು ನೀರು – ಕೆರೆ ಕಟ್ಟೆ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿ

    ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅರ್ಧ ಸುಟ್ಟ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅದು ಜ್ಞಾನಶೇಖರ್‌ನ ಶವ ಎಂದು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಞಾನಶೇಖರ್ ಕುಟುಂಬಸ್ಥರಾದ ಆತನ ಪತ್ನಿ, ಹಿರಿಯ ಮಗಳು ಹಾಗೂ 14 ವರ್ಷದ ಕಿರಿಯ ಮಗಳನ್ನು ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಮೂವರು ಬೇರೆ ಬೇರೆ ಕಥೆ ಹೇಳಿದ್ದಾರೆ. ಇದರಿಂದಾಗಿ ಅನುಮಾನಗೊಂಡ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ನಡೆಸಿದಾಗ ಅವರಿಗೆ ಜ್ಞಾನಶೇಖರ್ ಪತ್ನಿ ಹಾಗೂ ಮಗಳು ಸೇರಿ ಕೊಲೆ ಮಾಡಿರುವ ವಿಷಯ ಬಯಲಾಗಿದೆ. ಘಟನೆಗೆ ಸಂಬಂಧಿಸಿ ಜ್ಞಾನಶೇಖರ್ ಪತ್ನಿ, ಹಿರಿಯ ಮಗಳು ಹಾಗೂ ಕಾರ್ತಿಕ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಪ್ರಕರಣ ದಾಖಲಿಸಿ, ನನ್ನನ್ನು ಬಂಧಿಸಲು ಮುಂದಾಗಿದ್ದಾರೆ: ಸಿಸೋಡಿಯಾ

    Live Tv
    [brid partner=56869869 player=32851 video=960834 autoplay=true]

  • ಮಗಳು ಬೆಡ್‍ಶೀಟ್ ತರಲು ನಿರಾಕರಿಸಿದ ಕೋಪಕ್ಕೆ ಪತ್ನಿಯನ್ನೇ ಕೊಂದ ಭೂಪ!

    ಮಗಳು ಬೆಡ್‍ಶೀಟ್ ತರಲು ನಿರಾಕರಿಸಿದ ಕೋಪಕ್ಕೆ ಪತ್ನಿಯನ್ನೇ ಕೊಂದ ಭೂಪ!

    ಲಕ್ನೋ: ವ್ಯಕ್ತಿಯೊಬ್ಬ ಮಗಳ ಮೇಲಿನ ಕೋಪಕ್ಕೆ ಪತ್ನಿಯನ್ನು ಕೊಲೆಗೈದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಆರೋಪಿಯನ್ನು ಶದಾಬ್ (35) ಎಂದು ಗುರುತಿಸಲಾಗಿದೆ. ಈತ ಮಗಳು (Daughter) ತನಗೆ ಬೆಡ್‍ಶೀಟ್ ತರಲಿಲ್ಲವೆಂದು ಸಿಟ್ಟುಗೊಂಡು ತನ್ನ ಪತ್ನಿಯನ್ನೇ ಕೊಲೆಗೈದಿದ್ದಾನೆ.

    ಮಗಳ ಮೇಲೆ ಸಿಟ್ಟುಗೊಂಡಿದ್ದ ಶದಾಬ್ ಪತ್ನಿ(Wife) ಗೆ ಚೂರಿಯಿಂದ ಇರಿದಿದ್ದಾನೆ. ಬುಧವಾರ ರಾತ್ರಿ ತನ್ನ 5 ವರ್ಷದ ಮಗಳ ಜೊತೆ ತನಗೆ ಬೆಡ್ ಶೀಟ್ (BedSheet) ತಂದುಕೊಡುವಂತೆ ಶದಾಬ್ ಕೇಳಿದ್ದಾನೆ. ಆದರೆ ತನ್ನ ಪಾಡಿಗೆ ಆಟವಾಡುತ್ತಿದ್ದ ಪುಟ್ಟ ಕಂದಮ್ಮ ತನ್ನ ತಂದೆಗೆ ಬೆಡ್ ಶೀಟ್ ತಂದುಕೊಡುವ ಗೋಜಿಗೆ ಹೋಗಿಲ್ಲ.

    How clean is your bed? Study reveals one in three wash sheets just once a year - Starts at 60

    ಈ ಹಿನ್ನೆಲೆಯಲ್ಲಿ ಮಗಳ ಮೇಲೆ ಸಿಟ್ಟುಗೊಂಡ ಶದಾಬ್, ಪತ್ನಿಯನ್ನು ಕರೆದು ಆಕೆಗೆ ಚೆನ್ನಾಗಿ ಥಳಿಸಿದ್ದಾನೆ. ಈ ವೇಳೆ ಪತಿಯ ಏಟಿನಿಂದ ತಪ್ಪಿಸಿಕೊಳ್ಳಲು ಪತ್ನಿ ಯತ್ನಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಆತ ಅಡುಗೆ ಮನೆಯಲ್ಲಿದ್ದ ಚಾಕು ತಂದು ಆಕೆಯ ದೇಹದ ಮೇಲೆಲ್ಲ ಇರಿದಿದ್ದಾನೆ. ಇದನ್ನೂ ಓದಿ: ಉದ್ಯಮಿಗಳು, ನಿರ್ಮಾಪಕರು, ರಾಜಕಾರಣಿಗಳಿಗೆ ಬೆದರಿಕೆ ಒಡ್ಡಿ ಸುಲಿಗೆ- ಮಹಿಳೆ ಅರೆಸ್ಟ್

    ಘಟನೆಯಿಂದ ಗಂಭೀರ ಗಾಯಗೊಂಡ ಮಹಿಳೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯಿಸಿರೆಳೆದರು. ಬಳಿಕ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ.

    ಪ್ರಕರಣ ಸಂಬಂಧ ಮೃತ ಮಹಿಳೆಯ ತಂದೆ ಆರೋಪಿ ಪತಿ ವಿರುದ್ಧ ದೂರು ದಾಖಲಿಸಿದ್ದು, ಶದಾಬ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ – ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಪತ್ನಿಯಿಂದ ಗೂಸಾ

    ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ – ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿಗೆ ಪತ್ನಿಯಿಂದ ಗೂಸಾ

    ಲಕ್ನೋ: ಗರ್ಲ್ ಫ್ರೆಂಡ್ ಜೊತೆಗೆ ಶಾಪಿಂಗ್ ಮಾಡುತ್ತಿದ್ದ ಪತಿಯನ್ನು ರೆಡ್ ಹ್ಯಾಂಡ್ ಆಗಿ ನೋಡಿದ ಪತ್ನಿ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗಾಜಿಯಾಬಾದ್ ಮಾರುಕಟ್ಟೆಯಲ್ಲಿ (Ghaziabad market) ನಡೆದಿದೆ.

    ಸದ್ಯ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆ ತನ್ನ ಕೆಲವು ಸ್ನೇಹಿತೆಯರ ಜೊತೆ ಸೇರಿ ಗಂಡನ ಕಾಲರ್ ಹಿಡಿದು ಸಾರ್ವಜನಿಕವಾಗಿ ಥಳಿಸಿದ್ದಾಳೆ. ಈ ವೇಳೆ ವ್ಯಕ್ತಿಯನ್ನು ರಕ್ಷಿಸಲು ಪ್ರಯತ್ನಿಸಿದ ಗರ್ಲ್ ಫ್ರೆಂಡ್ ಮೇಲೂ ಮಹಿಳೆ ಹಲ್ಲೆ ನಡೆಸಿದ್ದಾಳೆ. ಇದನ್ನೂ ಓದಿ: ಮಣಿಪಾಲ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ಬ್ಲಡ್ ಗ್ರೂಪ್‍ನ ಕಿಡ್ನಿ ಕಸಿ ಯಶಸ್ವಿ

    ಈ ವೇಳೆ ಅಂಗಡಿಯ ಮಾಲೀಕರೊಬ್ಬರು ಈ ವಿಚಾರವನ್ನು ಹೊರಗಡೆ ಇಟ್ಟುಕೊಳ್ಳಿ, ಹೊರಗೆ ಹೋಗಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಇದೀಗ ಈ ಸಂಬಂಧ ಮಹಿಳೆ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪತಿಯೊಂದಿಗೆ ಜಗಳವಾದ ನಂತರ ಮಹಿಳೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಕರ್ವಾ ಚೌತ್‍ಗಾಗಿ (Karwa Chauth) ಶಾಪಿಂಗ್ ಮಾಡಲು ತನ್ನ ತಾಯಿಯೊಂದಿಗೆ ಬಂದಿದ್ದಳು. ಈ ವೇಳೆ ತನ್ನ ಪತಿ ಮತ್ತೊಬ್ಬಳೊಂದಿಗೆ ಓಡಾಡುತ್ತಿರುವುದನ್ನು ನೋಡಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ಇದನ್ನೂ ಓದಿ: ಮುರುಘಾ ಶ್ರೀಗೆ ಮತ್ತೆ ಸಂಕಷ್ಟ – ಮೈಸೂರಿನಲ್ಲಿ ಮತ್ತೊಂದು FIR ದಾಖಲು

    ಕರ್ವಾ ಚೌತ್ ಹಿಂದೂ ಹಬ್ಬವಾಗಿದ್ದು, ಈ ಹಬ್ಬವನ್ನು ದೇಶದಲ್ಲಿ ಹೆಚ್ಚಾಗಿ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ದಿನ ವಿವಾಹಿತ ಮಹಿಳೆಯರು ಉಪವಾಸ ಮಾಡುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಕರ್ವಾ ಚೌತ್ ಅನ್ನು ಕೃಷ್ಣ ಪಕ್ಷದ ನಾಲ್ಕನೇ ದಿನ ಅಥವಾ ಕಾರ್ತಿಕ್ ತಿಂಗಳ ಹಿಂದೂ ಕ್ಯಾಲೆಂಡರ್ ತಿಂಗಳಿನ ಕರಾಳ ಹದಿನೈದು ದಿನದಂದು ಆಚರಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ- ಅಮ್ಮನ ಶವದ ಮುಂದೆ ಪುಟ್ಟ ಮಕ್ಕಳ ಗೋಳಾಟ

    ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ- ಅಮ್ಮನ ಶವದ ಮುಂದೆ ಪುಟ್ಟ ಮಕ್ಕಳ ಗೋಳಾಟ

    ಬೆಂಗಳೂರು: ಅದು ರಾಜಸ್ಥಾನ (Rajasthan) ಮೂಲದ ಪುಟ್ಟ ಕುಟುಂಬ. ಬೆಂಗಳೂರಿನಲ್ಲಿ ನೆಲೆಸಿದ್ದ ಆ ಕುಟುಂಬದಲ್ಲಿ ಪತಿ, ಪತ್ನಿ, ಇಬ್ಬರು ಮುದ್ದಾದ ಮಕ್ಕಳು. ಖುಷಿಗೇನು ಕಡಿಮೆಯಿಲ್ಲದ ಟೈಂನಲ್ಲಿ ಪತಿ ಮಾಡಿದ ಅದೊಂದು ನಂಬಿಕೆ ದ್ರೋಹದಿಂದ ಪತ್ನಿ ನೇಣಿಗೆ ಶರಣಾಗಿದ್ರೆ, ಇಬ್ಬರು ಮಕ್ಕಳು ಅನಾಥವಾಗಿವೆ.

    ರಾಜಸ್ಥಾನ ಮೂಲದ ನರೇಂದ್ರಸಿಂಗ್ ಮತ್ತು ಚಂದಾ ಪುರೋಹಿತ್ 10 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಸ್ಟೀಟ್ ಅಂಗಡಿ ತೆರೆದು ರಾಮಮೂರ್ತಿನಗರದಲ್ಲಿ ಜೀವನ ಕಟ್ಟಿಕೊಂಡಿದ್ರು. ದಂಪತಿಗೆ ಮುದ್ದಾದ ಇಬ್ಬರು ಗಂಡುಮಕ್ಕಳು ಕೂಡ ಇದ್ದಾರೆ. ಪ್ರೀತಿಯಿಂದ ನೋಡ್ಕೊಳ್ಳೋ ಗಂಡ, ಸದಾ ಖುಷಿ ಹಂಚುವ ಮಕ್ಕಳು. ಹೀಗೆ ಖುಷಿಯಾಗಿದ್ದ ವೇಳೆ ಪತಿ ನರೇಂದ್ರಸಿಂಗ್‍ಗೆ ಅವಳೊಬ್ಬಳ ಪರಿಚಯವಾಗಿ, ಆ ಪರಿಚಯ ಅನೈತಿಕ ಸಂಬಂಧವಾಗಿ ಬದಲಾಗಿತ್ತು. ಗಂಡನ ಅಕ್ರಮ ಸಂಬಂಧ ಹೆಂಡತಿ ಚಂದಾಗೆ ಗೊತ್ತಾಗೋಕೆ ಹೆಚ್ಚು ದಿನ ಹಿಡಿಯಲಿಲ್ಲ. ಇದೇ ವಿಚಾರಕ್ಕೆ ಆಗಾಗ ಮನೆಯಲ್ಲಿ ಗಲಾಟೆಯಾಗ್ತಿತ್ತು. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ಮೊದ ಮೊದಲು, ಆ ಯುವತಿಯ ಜೊತೆಗೆ ಓಡಾಡುತ್ತಿದ್ದ ಗಂಡ ನರೇಂದ್ರಸಿಂಗ್, ನಂತರದ ದಿನಗಳಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ದೂರದ ಊರುಗಳಿಗೆ ಟ್ರಿಪ್ (Trip) ಹೋಗೋ ಮಟ್ಟಕ್ಕೆ ಬಂದಿದ್ದ. ಈ ಸಂಬಂಧ ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಿದ್ರು. ಗಂಡ ಮಾತ್ರ ನಾನು ಇರೋದೇ ಹೀಗೆ ಅನ್ನೋ ರೀತಿ ವರ್ತಿಸಿದ್ದ. ಇದರಿಂದ ಬೇಸತ್ತ ಪತ್ನಿ ಚಂದಾಪುರೋಹಿತ್, ಕಳೆದ ಶನಿವಾರ ಮನೆಯಲ್ಲೇ ನೇಣಿಗೆ ಶರಣಾಗಿದ್ಳು. ಎಂದಿನಂತೆ ಬೆಳಗ್ಗೆ ಎದ್ದ ಮಕ್ಕಳು ಅಮ್ಮನ ಹುಡುಕಾಟ ನಡೆಸಿದರು. ಆದರೆ ಸತ್ತು ಮಲಗಿದ್ದ ಅಮ್ಮನನ್ನು ನೋಡಿದ ಮಕ್ಕಳು, ಸಾವನ್ನಪ್ಪಿದ್ದಾಳೆ ಅನ್ನೋ ಸಣ್ಣ ಅರಿವಿಲ್ಲದಂತೆ ಅಮ್ಮನ ಎದ್ದೇಳಿಸುವ ಪ್ರಯತ್ನದಲ್ಲಿ ಗೋಳಾಡುತ್ತಿದ್ದು, ಅಲ್ಲಿದ್ದವರ ಕಣ್ಣನ್ನು ಒದ್ದೆ ಮಾಡುವಂತೆ ಮಾಡಿದವು.

    ವಿಷಯ ತಿಳಿದು ಸ್ಥಳಕ್ಕೆ ಬಂದ ರಾಮಮೂರ್ತಿನಗರ ಪೊಲೀಸರು, ಪತಿ ನರೇಂದ್ರಸಿಂಗ್‍ನನ್ನು ಬಂಧಿಸಿದ್ದಾರೆ. ಮೃತ ಚಂದಾಪೋರೋಹಿತ್ ಪೋಷಕರು (Parents) ಇದು ಆತ್ಮಹತ್ಯೆ ಅಲ್ಲ, ಕೊಲೆ ಅಂತಾ ಆರೋಪಿಸಿದ್ದಾರೆ. ಅಪ್ಪ ಜೈಲು ಸೇರಿದ್ರೆ, ಅಮ್ಮ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾಳೆ. ಈ ಮಧ್ಯೆ ಪುಟ್ಟ ಮಕ್ಕಳು ಅನಾಥವಾಗಿದ್ದು ಮಾತ್ರ ದುರಂತ. ಇದನ್ನೂ ಓದಿ: ಪಾಕ್ ಪ್ರವಾಹ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ- 18 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಪ್ರೇಯಸಿ ಜೊತೆ ಗಂಡನ ಫೋಟೋ ನೋಡಿ ನವವಿವಾಹಿತೆ ಆತ್ಮಹತ್ಯೆ

    ಪ್ರೇಯಸಿ ಜೊತೆ ಗಂಡನ ಫೋಟೋ ನೋಡಿ ನವವಿವಾಹಿತೆ ಆತ್ಮಹತ್ಯೆ

    -ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟು ಪ್ರೇಯಸಿ ಜೊತೆ ಗಂಡನ ಪ್ರವಾಸ?
    -ಮೋನಿಕಾನೇ ಬೇರೊಬ್ಬನ್ನ ಪ್ರೀತಿಸ್ತಿದ್ಳು ಅಂತ ಗಂಡನ ಕಡೆಯವರ ಆರೋಪ

    ಚಿಕ್ಕಬಳ್ಳಾಪುರ: ತವರು ಮನೆಯಲ್ಲೇ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್ ನೋಟ್ ಬರೆದು ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕು ಹೆಣ್ಣೂರು ಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ದೇವಮ್ಮ-ಮುನಿರಾಜು ದಂಪತಿ ಹಿರಿಯ ಪುತ್ರಿ ಮೋನಿಕಾ (22) ಮೃತ ದುರ್ದೈವಿ. ಅಂದಹಾಗೆ ಮೃತ ಮೋನಿಕಾಳನ್ನು ಚಿಕ್ಕಬಳ್ಳಾಪುರ ನಗರದ ನಿವಾಸಿ ಭಾರ್ಗವ್ ಕಳೆದ ತಿಂಗಳ ಹಿಂದೆಯಷ್ಟೇ ಶಾಸ್ತ್ರೋಕ್ತವಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ. ಮದುವೆಯಾಗಿ 6 ತಿಂಗಳ ಕಾಲ ಹೆಂಡತಿ ಜೊತೆ ಸಂಸಾರ ಮಾಡಿದ್ದ ಭಾರ್ಗವ್ ಇತ್ತೀಚೆಗಷ್ಟೇ ಗೌರಿ ಹಬ್ಬಕ್ಕೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಹೋಗಿದ್ದ. ಹಬ್ಬ ಮುಗಿದ ಮೇಲೆ ಗಂಡ ಬಂದು ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಾನೆ ಎಂದು ಮೋನಿಕಾ ಕಾಯುತ್ತಿದ್ದಳು. ಆದರೆ ಗಂಡ ಬರಲೇ ಇಲ್ಲ ಮತ್ತು ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಇದೇ ವೇಳೆ ಗಂಡ ಪ್ರೇಯಸಿ ಜೊತೆ ಸುತ್ತಾಡುತ್ತಿರುವ ಫೋಟೋಗಳು ಮೋನಿಕಾಳ ಕಣ್ಣಿಗೆ ಬಿದ್ದಿವೆ. ಇದರಿಂದ ಕಟ್ಟಿಕೊಂಡ ಗಂಡ ತನ್ನನ್ನು ಬಿಟ್ಟು ಪ್ರೇಯಸಿ ಜೊತೆಗೆ ರೋಮ್ಯಾನ್ಸ್ ಮಾಡುತ್ತಿದ್ದಾನೆಂದು ಮನನೊಂದ ಮೋನಿಕಾ ತವರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಸಾಯುವ ಮುನ್ನ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್‍ನೋಟ್‍ನಲ್ಲಿ ಮೋನಿಕಾ ಬರೆದಿದ್ದಾಳೆ. ಇದೀಗ ಈ ಸಂಬಂಧ ಮೋನಿಕಾ ತಂದೆ ತಾಯಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಡ ಭಾರ್ಗವ್ ವಿರುದ್ಧ ದೂರು ದಾಖಲಿಸಿದ್ದು ಭಾರ್ಗವ್ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್‌ ನಿಷೇಧ ಮುಂದುವರಿಕೆ – ಸಚಿವ ಬಿ.ಸಿ.ನಾಗೇಶ್

    POLICE JEEP

    ದೇವಮ್ಮ-ಮುನಿರಾಜು ದಂಪತಿಗೆ ಮೂರು ಜನ ಮಕ್ಕಳಿದ್ದು, ಎರಡು ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಮನೆಗೆ ಬಾ ಅಂತ ಗಂಡ ಹಣಕ್ಕಾಗಿ ಒತ್ತಡ ಹಾಕಿದ್ದಾನೆ. ಜೊತೆಗೆ ಕಟ್ಟಿಕೊಂಡ ಹೆಂಡತಿ ಮುಂದೆಯೇ ಪ್ರೇಯಸಿ ಜೊತೆ ಮಾತನಾಡುವುದು ಮಾಡುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆಲ್ಲಾ ಗಂಡ ಭಾರ್ಗವ್ ಕಾರಣ ಅಂತ ಮೋನಿಕಾ ಪೋಷಕರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಬಿಜೆಪಿ ಶಾಸಕ, ನಿವೃತ್ತ ಐಪಿಎಸ್ ಅಧಿಕಾರಿ, ರೌಡಿ ಶೀಟರ್

    ಮತ್ತೊಂದೆಡೆ, ನವಿವಿವಾಹಿತೆ ಮೋನಿಕಾ ಮದುವೆಗೂ ಮುನ್ನ ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಮದುವೆ ನಂತರವೂ ಅವನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಲು. ನಿರಂತರವಾಗಿ ಆತನ ಜೊತೆ ಫೋನ್‍ನಲ್ಲಿ ಮಾತನಾಡುತ್ತಿದ್ದಳು. ಈ ವಿಚಾರ ತಿಳಿದು ಗಂಡ ವಾರ್ನ್ ಮಾಡಿ ಬುದ್ಧಿವಾದ ಹೇಳಿದರೂ ಅವನ ಜೊತೆ ಮಾತನಾಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ತವರು ಮನೆಯಲ್ಲಿ ಬಿಟ್ಟು ಬಂದಿದ್ದೇವೆ ಎಂದು ಭಾರ್ಗವ್ ಕಡೆಯವರು ಆರೋಪಿಸುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಲ್ಲಲು ಸ್ಕೆಚ್ ಹಾಕಿದ್ದು ಪತ್ನಿಯನ್ನ, ಆದ್ರೆ ಸತ್ತಿದ್ದು ಅತ್ತೆ

    ಕೊಲ್ಲಲು ಸ್ಕೆಚ್ ಹಾಕಿದ್ದು ಪತ್ನಿಯನ್ನ, ಆದ್ರೆ ಸತ್ತಿದ್ದು ಅತ್ತೆ

    ಭೋಪಾಲ್: ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲ್ಲುವ ಸಲುವಾಗಿ ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಅಳವಡಿಸಿದ್ದನು. ಆದರೆ ಪತ್ನಿ ಬದಲಿಗೆ ಆಕೆಯ ತಾಯಿ ಬಾಗಿಲನ್ನು ಸ್ಪರ್ಶಿಸಿ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಬೇತುಲ್ ( Betul) ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಕೊತ್ವಾಲಿ ಪೊಲೀಸ್ ಠಾಣೆ (Kotwali police station) ವ್ಯಾಪ್ತಿಯ ಸೈಖೇಡಾ (Saikheda) ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮದ್ಯ ವ್ಯಸನನಾಗಿದ್ದು, ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದನು. ಭಾನುವಾರ ರಾತ್ರಿ ಕೂಡ ಇದೇ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳವಾಗಿತ್ತು. ಇದರಿಂದ ಬೇಸತ್ತು ಹೆಂಡತಿ ತನ್ನ ತಾಯಿಯ ಮನೆಗೆ ಹೋಗಿದ್ದಳು. ಇದನ್ನೂ ಓದಿ: 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    ತನ್ನ ಪತ್ನಿ ಮನೆಯಿಂದ ಹೊರಟಿದ್ದಕ್ಕೆ ಕೋಪಗೊಂಡ ಆರೋಪಿ ತನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿ ಕಬ್ಬಿಣದಿಂದ ತಯಾರಿಸಲಾಗಿದ್ದ ಬಾಗಿಲಿಗೆ ವಿದ್ಯುತ್ ತಂತಿಯಿಂದ ಜೋಡಿಸಿ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಅಚಾನಕ್ ಆಗಿ ಆತನ ಅತ್ತೆ ಬಾಗಿಲನ್ನು ಸ್ಪರ್ಶಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮೊರಾರ್ಜಿ ದೇಸಾಯಿ ಶಾಲೆಯಲ್ಲಿ RSS ಶಿಬಿರಕ್ಕೆ ಅವಕಾಶ ಆರೋಪ- ಅನುಮತಿ ಕೊಟ್ಟಿಲ್ಲ ಎಂದ ಕೋಟಾ

    ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಪಲಾ ಸಿಂಗ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸ್ನೇಹಿತನನ್ನ ಕೊಂದು, ಶವವನ್ನು ಅರಣ್ಯದಲ್ಲಿ ಎಸೆದ

    ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಸ್ನೇಹಿತನನ್ನ ಕೊಂದು, ಶವವನ್ನು ಅರಣ್ಯದಲ್ಲಿ ಎಸೆದ

    ಚಿಕ್ಕೋಡಿ: ತನ್ನ ಹೆಂಡತಿಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದ ಸ್ನೇಹಿತನನ್ನು ಹತ್ಯೆ ಮಾಡಿ ಅರಣ್ಯದಲ್ಲಿ ಬೀಸಾಕಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ.

    ಕರೋಶಿ ಗ್ರಾಮದ ಸುನೀಲ್‌ ಮಹಾದೇವ ಸಾಳುಂಕೆ (25) ಮೃತ ಯುವಕ. ಈತನಿಗೆ ಅದೇ ಗ್ರಾಮದ ಮಹಾಂತೇಶ್‌ ತಳವಾರ್‌ ಎಂಬಾತ ಸ್ನೇಹಿತನಾಗಿದ್ದ (Friend). ಆದರೆ ಸುನೀಲ್‌ ತನ್ನ ಪತ್ನಿಯೊಂದಿಗೆ (Wife) ಅಸಭ್ಯವಾಗಿ ವತಿಸಿದ್ದಾನೆಂದು ತಿಳಿದ ಮಹಾಂತೇಶ್‌ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಆತನನ್ನು ಕೊಲೆ ಮಾಡಲು ಹೊಂಚು ಹಾಕಿದ್ದಾನೆ. ಆ ಪ್ರಕಾರವಾಗಿಯೇ ಸುನೀಲ್‌ನನ್ನು ಆತನ ಬೈಕ್‌ನಲ್ಲೇ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ನಂತರ ಮಹಂತೇಶ್‌ ಸಾಕ್ಷಿ ನಾಶ ಮಾಡಲು ಕರೋಶಿ ಗ್ರಾಮದ ಹತ್ತಿರವಿರುವ ಅರಣ್ಯದಲ್ಲಿ ಸುನೀಲ್‌ನ ಶವವನ್ನು ಎಸೆದು ಹೋಗಿದ್ದಾನೆ.

    ಇತ್ತ ಒಂದು ವಾರದಿಂದ ನಾಪತ್ತೆಯಾಗಿದ್ದ ಸುನೀಲ್‌ ಸಾಳುಂಕೆ ಶವವಾಗಿ ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಆರ್‌ ಆರ್‌ ಪಾಟೀಲ್, ಪಿಎಸ್ಐ ಯಮನಪ್ಪ ಮಾಂಗ್, ಎಎಸ್ಐ ಎಲ್.ಎಸ್. ಖೋತ್, ಡೆಪ್ಯೂಟಿ ಆರ್‌ಎಫ್ಒ ಶ್ರೀಶೈಲ್ ಬನ್ಸೆ, ಅರಣ್ಯ ಖಾತೆ ಗಾರ್ಡ್ ಮಲಪ್ಪ ಕದಂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ತನಿಖೆ ಕೈ ಗೊಂಡಿದ್ದಾರೆ. ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಾಂತೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಚ್ಚಾಟ ಬಿಡಿ, ಎಲೆಕ್ಷನ್ ಗೆಲ್ಲಿಸಿ – ಮುಂದಿನ ಸಿಎಂ ಚರ್ಚೆಗೆ ಬ್ರೇಕ್ ಹಾಕಿದ ರಾಗಾ

    Live Tv
    [brid partner=56869869 player=32851 video=960834 autoplay=true]

  • ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ

    ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ

    ರಾಯಚೂರು: ಜಿಲ್ಲೆಯಲ್ಲಿ ಇಂದು ಎರಡು ಪ್ರತ್ಯೇಕ ಕೊಲೆ ಪ್ರಕರಣಗಳು ನಡೆದಿವೆ. ಜಿಲ್ಲೆಯ ಲಿಂಗಸುಗೂರಿನ ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ಬೆಳ್ಳಂಬೆಳಿಗ್ಗೆ ಬನ್ನಿ ಕೊಡುವ ನೆಪದಲ್ಲಿ ಬಂದು ಪಿಡಿಓ ಗಜದಂಡಯ್ಯ ಸ್ವಾಮಿಯನ್ನು ಕೊಲೆ ಮಾಡಲಾಗಿದೆ.

    ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಹೆಲ್ಮೆಟ್ ಇಟ್ಟು ಚಪ್ಪಲಿ ಬಿಟ್ಟಿರುವ ಪಿಡಿಓ ಶವ ದೂರದಲ್ಲಿ ಪತ್ತೆಯಾಗಿದೆ. ಕೋಠಾ ಗ್ರಾಮ ಪಂಚಾಯತಿ ಪಿಡಿಓ ಗಜದಂಡಯ್ಯ ಸ್ವಾಮಿ ಕೊಲೆಯಾಗಿದ್ದು, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಲಿಂಗಸುಗೂರು ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ

    CRIME 2

    ಮತ್ತೊಂದೆಡೆ ಸಿರವಾರ (Sirwar) ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಬಸವರಾಜ್ (34) ಎಂದು ಗುರುತಿಸಲಾಗಿದೆ. ಬಸವರಾಜ್‍ನ ಕುತ್ತಿಗೆ ಭಾಗಕ್ಕೆ ಚಾಕು ಇರಿದು ಕೊಲೆ ಮಾಡಲಾಗಿದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿರವಾರ ಪೊಲೀಸರು ಕೊಲೆಯಾದ ಬಸವರಾಜ್‍ನ ಪತ್ನಿ ಲಕ್ಷ್ಮಿ ಹಾಗೂ ಸಂಬಂಧಿ ಶಿವರಾಜ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಣ್ಣನ ಜೊತೆಗೆ ಗಾಳಿಪಟ ಹಾರಿಸುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ತಮ್ಮ ಸಾವು

    Live Tv
    [brid partner=56869869 player=32851 video=960834 autoplay=true]