ತಿರುವನಂತಪುರಂ: ಇತ್ತೀಚೆಗೆ ಮದುವೆ (Marriage) ಯ ಬಳಿಕ ಅಥವಾ ಮುವೆಗೂ ಮುನ್ನ ಪತಿ ಹಾಗೂ ಪತ್ನಿ ಕೆಲವೊಂದು ಒಪ್ಪಂದಗಳನ್ನು ಮಾಡಿಕೊಂಡು ಬಳಿಕ ಪತ್ರಕ್ಕೆ ಸಹಿ ಹಾಕುತ್ತಿರುವುದು ಟ್ರೆಂಡ್ ಆಗಿದೆ. ಅಂತೆಯೇ ಕೇರಳ (Kerala) ದಲ್ಲಿ ಪತ್ನಿಯೊಬ್ಬಳು ತನ್ನ ಪತಿ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಪತ್ರವೊಂದು ಸಾಕಷ್ಟು ಸದ್ದು ಮಾಡುತ್ತಿದೆ.
ಎಸ್. ಅರ್ಚನಾ ಹಾಗೂ ರಘು ಎಸ್ ಕೆಡಿಆರ್ ದಂಪತಿಯ ಒಪ್ಪಂದದ ಪತ್ರ ವೈರಲ್ ಆಗಿದೆ. ಮದುವೆಗೂ ಮುನ್ನ ಈ ಜೋಡಿ ಒಪ್ಪಂದವನ್ನು ಮಾಡಿಕೊಂಡು ಸಹಿ ಹಾಕಿದೆ. ಅದರಲ್ಲಿ ಮದುವೆಯ ನಂತರ ರಾತ್ರಿ 9 ಗಂಟೆಯವರೆಗೆ ನಾನು ಪತಿಗೆ ಯಾವುದೇ ರೀತಿಯ ತೊಂದರೆ ಕೊಡಲ್ಲ. ಹೀಗಾಗಿ ಅಲ್ಲಿಯವರೆಗೆ ಪತಿ ತನ್ನ ಗೆಳೆಯರ ಜೊತೆ ಸಮಯ ಕಳೆಯಲು ಅವಕಾಶ ನೀಡುತ್ತೇನೆಂದು ಬರೆಯಲಾಗಿದೆ. ಅಲ್ಲದೆ ಇದಕ್ಕೆ ಅರ್ಚನಾ ಸಹಿ ಕೂಡ ಹಾಕಿದ್ದಾರೆ.
ರಘು ಅವರು ಬ್ಯಾಡ್ಮಿಂಟನ್ ಆಟಗಾರರಾಗಿದ್ದು, ವಾಟ್ಸಪ್ ಗ್ರೂಪ್‍ನಲ್ಲಿಯೂ ಇದ್ದಾರೆ. ಈ ಗ್ರೂಪ್ ನಲ್ಲಿ ತಮ್ಮ ಮದುವೆಗಳಲ್ಲಿ ನಡೆದಿರುವ ಅಚ್ಚರಿಯ ಘಟನೆಗಳು ನಡೆದಿರುವುದನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ರಘು ಅವರು ತಮ್ಮ ಮದುವೆಯ ಮುನ್ನ ನಡೆದಿರುವ ಒಪ್ಪಂದದ ಕುರಿತು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಧಾರವಾಡ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಧಾರವಾಡದ ನ್ಯಾಯಾಲಯದಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಕೇಸ್ ನೋಡಿದರೆನೇ ವಿಚಿತ್ರ ಎನಿಸುತ್ತದೆ. ಏಕೆಂದರೆ ಪತ್ನಿ ತನ್ನ ಪತಿಗೆ ಬಾರೋ ಎಂದಿದ್ದಕ್ಕೆ ಪತಿರಾಯ ನ್ಯಾಯಾಲಯದ ಮೇಟ್ಟಿಲು ಏರಿದರೆ, ಮತ್ತೊಂದು ಪ್ರಕರಣದಲ್ಲಿ ಪತ್ನಿ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಕ್ಕೆ ವಿಚ್ಛೇದನಕ್ಕೆ ಅರ್ಜಿ ಬಂದಿತ್ತು. ಇದೀಗ ಈ ಪ್ರಕರಣಗಳನ್ನು ನ್ಯಾಯಾಲಯ ಲೋಕ್ ಅದಾಲತ್‍ನಲ್ಲಿ (Lok Adalat) ತೆಗೆದುಕೊಂಡು ಇತ್ಯರ್ಥ ಮಾಡಿದೆ.
ಧಾರವಾಡ (Dharwad) ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಇಂದು ವಿಚ್ಛೇದನಕ್ಕೆ ಬಂದಿದ್ದ ಪ್ರಕರಣಗಳನ್ನು ತೆಗೆದುಕೊಂಡಿದ್ದರು. ಈ ವೇಳೆ ಕೆಲ ಗಂಡ ಹೆಂಡತಿಯರು ವಿಚ್ಛೇದನ ಬೇಡ ಎಂದು ಒಪ್ಪಿಕೊಂಡರೆ, ಕೆಲವರು ನ್ಯಾಯಾಲಯದ ಮುಂದೆ ತಮ್ಮ ಒಪ್ಪಿಗೆ ಸೂಚಿಸಲೇ ಇಲ್ಲ. ಅದರಲ್ಲೂ ಒಂದು ಜೋಡಿಯಂತೂ ಪೆನ್ ಡ್ರೈವ್ ವಿಚಾರಕ್ಕೆ ವಿಚ್ಛೇದನ ಹಾಕಿಕೊಂಡಿದ್ದರು. ಪತ್ನಿ ತನ್ನ ಪತಿಯ ಪೆನ್ ಡ್ರೈವ್ ತೆಗೆದುಕೊಂಡಿದ್ದಾಳಂತೆ. ಅದಕ್ಕೆ ಪತಿ ಅದನ್ನು ಕೊಟ್ಟರೆ ಮಾತ್ರ ನಾನು ರಾಜಿಯಾಗುತ್ತೇನೆ ಅಂತ ನಿಂತಿದ್ದ. ಇದನ್ನೂ ಓದಿ: ಮೃತ ತಂದೆಯನ್ನು ಬದುಕಿಸಲು ಮಗುವನ್ನು ಅಪಹರಿಸಿ ನರ ಬಲಿ ಕೊಡಲು ಸಿದ್ಧವಾದ್ಲು
ಮತ್ತೊಂದು ಜೋಡಿ ಪ್ರಕರಣದಲ್ಲಿ ಪತ್ನಿ ತನ್ನ ಪತಿಗೆ ಬಾರೋ ಎಂದು ಕರೆದ್ದಾಳಂತೆ. ಅದಕ್ಕೆ ಇಬ್ಬರೂ ವಿಚ್ಛೇದನಕ್ಕೆ ಬಂದಿದ್ದರು. ನ್ಯಾಯಾಧೀಶರು ಇವತ್ತು ಇಂತಹ 37 ಕೇಸ್‍ಗಳನ್ನು ಲೋಕ ಅದಾಲತ್‍ನಲ್ಲಿ ತೆಗೆದುಕೊಂಡು 17 ಕೇಸ್ ಇತ್ಯರ್ಥ ಮಾಡಿದೆ. ಇನ್ನು ಕೆಲ ಪತಿ ಹಾಗೂ ಪತ್ನಿ ನ್ಯಾಯಾಲಯದ ಮಾತು ಕೇಳದೇ ಇರುವುದರಿಂದ ಅವರಿಗೆ ಮತ್ತೆ ಮುಂದಿನ ದಿನಾಂಕಕ್ಕೆ ಹಾಜರಾಗಲು ಹೇಳಲಾಗಿದೆ. ಮತ್ತೆ ಕೆಲವರಿಗೆ ಸ್ವಲ್ಪ ದಿನ ಒಂದೇ ಕಡೆ ಇರುವಂತೆ ಸೂಚನೆ ಕೊಟ್ಟು ಕಳುಹಿಸಲಾಗಿದೆ. ಇದನ್ನೂ ಓದಿ: ಬೆಳಗಾವಿ ಲಾಕಪ್‌ಡೆತ್ ಕೇಸ್: ಪೊಲೀಸರಿಂದ್ಲೇ ಚಿತ್ರಹಿಂಸೆ – ಮೃತನ ಪುತ್ರಿ ಆರೋಪ
ಇಬ್ಬರು ಸ್ವಲ್ಪ ದಿನಗಳಲ್ಲಿ ಒಂದಾಗಿ ಬಾಳಿದರೆ ಮುಂದೆ ನ್ಯಾಯಾಲಯ ಇವರ ಮದ್ಯದಲ್ಲಿ ಪ್ರವೇಶ ಮಾಡಲ್ಲ. ಹೊಂದಾಣಿಕೆ ಆಗದೇ ಇದ್ದರೆ ಮಾತ್ರ ನ್ಯಾಯಾಲಯ ಮತ್ತೊಂದು ಚಾನ್ಸ್ ಕೊಡಲಿದೆ. ಸದ್ಯ ಒಂದಾದ ಗಂಡ ಹೆಂಡತಿ ಕೂಡ ನ್ಯಾಯಾಲಯದ ಈ ಅದಾಲತ್‍ದಿಂದ ಒಂದಾಗಿ ಸಂತಸ ವ್ಯಕ್ತಪಡಿಸಿದೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಪತ್ನಿಯನ್ನು ಹತ್ಯೆಗೈದು ಶವವನ್ನು ಗಾಜಿಯಾಬಾದ್‍ನ (Ghaziabad) ಟ್ರೋನಿಕಾ ನಗರದಲ್ಲಿ (Tronica city) ಎಸೆದು ಪತಿಯೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ನಾನು ನನ್ನ ಹೆಂಡತಿಯನ್ನು ಕೊಂದಿದ್ದೇನೆ. ಶವವನ್ನು ಟ್ರೋನಿಕಾ ನಗರ ಪ್ರದೇಶದಲ್ಲಿ ಎಸೆದಿದ್ದೇನೆ ಎಂದು ಆರೋಪಿ ಪೊಲೀಸ್ ಠಾಣೆಗೆ ತೆರಳಿ ಸತ್ಯ ಹೇಳಿದ್ದಾನೆ. ನಂತರ ಈ ಘಟನೆ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು, ನಂತರ ಘಟನಾ ಸ್ಥಳಕ್ಕೆ ತಲುಪಿ ಮಹಿಳೆಯ ಶವವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನಾವೇನಾದರೂ ಸಿಡಿದೆದ್ದರೆ ನೀವು ಉಳಿಯುವುದಿಲ್ಲ – ಕಾಂಗ್ರೆಸ್‍ಗೆ ಮುತಾಲಿಕ್ ವಾರ್ನಿಂಗ್
ಆರೋಪಿಯನ್ನು ಸದ್ದಾಂ ಎಂದು ಗುರುತಿಸಲಾಗಿದ್ದು, ತನ್ನ ಪತ್ನಿ ಮೇಲೆ ಅನುಮಾನ ಹೊಂದಿದ್ದರಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾನೆ. ಗುರುವಾರ ಸದ್ದಾಂ ತನ್ನ ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯನ್ನು ಕೊಲೆ ಮಾಡಿ, ನಂತರ ದೇಹವನ್ನು ಟ್ರೋನಿಕಾ ನಗರದಲ್ಲಿ ಪೊದೆಯೊಂದರಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ಕೊಂದ ಬಳಿಕ, ಪೊಲೀಸ್ ಠಾಣೆಗೆ ಬಂದು ಸದ್ದಾಂ ತಪ್ಪೊಪ್ಪಿಕೊಂಡಿದ್ದಾನೆ. ಮೃತ ಮಹಿಳೆಗೆ ಸುಮಾರು 28 ವರ್ಷ ವಯಸ್ಸಾಗಿದ್ದು, ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕಿನ್ನಾಳ ಕಲೆಯ ಕಾಮಧೇನು ಉಡುಗೊರೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
Live Tv
[brid partner=56869869 player=32851 video=960834 autoplay=true]
ಹಾಸನ: ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪತಿ ಪರಾರಿಯಾಗಿರುವ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakleshpura) ತಾಲೂಕಿನ ತಂಬ್ಲಿಗೇರಿ ಗ್ರಾಮದಲ್ಲಿ ನಡೆದಿದೆ.
ರತ್ನಮ್ಮ (58) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿ ಪತಿಯನ್ನು 65 ವರ್ಷದ ಪರಮೇಶ್ ಎಂದು ಗುರುತಿಸಲಾಗಿದೆ. ಸಂಬಂಧಿಕರು ಮನೆಗೆ ಆಮಂತ್ರಣ ಕೊಡಲು ಬಂದಾಗ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಪುತ್ರನಿಗೆ ಫೋನ್ ಮಾಡಿ ತಿಳಿಸಿದ್ದು ಮನೆಯ ಬೀಗ ಒಡೆದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ಯಾಂಟ್ ಜಿಪ್ ತೆಗೆದು ಬಸ್‍ನಲ್ಲಿ ವೈದ್ಯೆ ಜೊತೆ ಅಸಭ್ಯ ದುರ್ವತನೆ – ಕ್ಲೀನರ್ ಅರೆಸ್ಟ್
ಹೌದು, ಮೂವತ್ತು ವರ್ಷಗಳ ಹಿಂದೆ ರತ್ನಮ್ಮ ಹಾಗೂ ಪರಮೇಶ್ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಇಬ್ಬರಿಗೂ ಮದುವೆ ಮಾಡಿದ್ದರು. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು. ನಾಲ್ಕು ಎಕರೆ ಕಾಫಿ ತೋಟವಿದ್ದು, ದಂಪತಿ ಕಷ್ಟಪಟ್ಟು ದುಡಿಯುತ್ತಿದ್ದರು. ರತ್ನಮ ಹೊಸ ಮನೆ ಕಟ್ಟಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಕಾಫಿಯಲ್ಲಿ ಬಂದ ಹಣದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದರು. ಮದುವೆಯಾದಗಿನಿಂದಲೂ ಪರಮೇಶ್ ಸಣ್ಣಪುಟ್ಟ ವಿಚಾರಕ್ಕೆ ಜಗಳ ತೆಗೆದು ಪತ್ನಿಗೆ ಮನಸ್ಸೋ ಇಚ್ಛೆ ಹಲ್ಲೆ ಮಾಡುತ್ತಿದ್ದ. ಮಗ ಬೆಳಗಾವಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಮಕ್ಕಳಿಬ್ಬರು ಪ್ರತಿನಿತ್ಯ ಅಮ್ಮನಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.
ಪರಮೇಶ್ ತೋಟದ ಕೆಲಸ ಬಿಟ್ಟರೆ ಮನೆ, ಮನೆ ಬಿಟ್ಟರೆ ತೋಟದ ಕೆಲಸ ಮಾಡಿಕೊಂಡಿದ್ದ. ಆದರೆ ಪದೇ ಪದೇ ಹಣಕಾಸು ಸೇರಿ ಸಣ್ಣ ವಿಚಾರಗಳಿಗೆ ಪತ್ನಿ ಜೊತೆ ಜಗಳವಾಡಿ ಹಲ್ಲೆ ಮಾಡುತ್ತಿದ್ದ. ಪರಮೇಶ್ ಈ ಹಿಂದೆ ರತ್ನಮ್ಮ ತಲೆಗೆ ಬಲವಾಗಿ ಹೊಡೆದಿದ್ದ, ಇನ್ನೊಮ್ಮೆ ಬೆರಳು ತುಂಡು ಮಾಡಿದ್ದ. ಗಂಡ ಹೆಂಡತಿ ಜಗಳವಾಡಿದ ಸಂದರ್ಭದಲ್ಲಿ ಸಂಬಂಧಿಕರ ಮನೆಗೆ ಹೋಗಿ ಕೆಲ ದಿನಗಳು ಇದ್ದು ವಾಪಾಸ್ ಬರುತ್ತಿದ್ದ. ಅಳಿಯ, ಸಂಬಂಧಿಕರು ಪಂಚಾಯತಿ ಮಾಡಿ ಹೊಂದಿಕೊಂಡು ಹೋಗುವಂತೆ ತಿಳಿ ಹೇಳಿದ್ದರು. ಪರಮೇಶ್ ಜಗಳವಾಡುವುದನ್ನು ನಿಲ್ಲಿಸಿರಲಿಲ್ಲ. ಆದರೆ ಯಾವಾಗಲೂ ಪತ್ನಿಯನ್ನು ಕಡಿಯುತ್ತೇನೆ ಎನ್ನುತ್ತಿದ್ದ. ಇದನ್ನೂ ಓದಿ: ಗುಜರಾತಿನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು: ಲೆಹರ್ ಸಿಂಗ್
ಶುಕ್ರವಾರ ಕಾಫಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ಇದು ಅತಿರೇಕಕ್ಕೆ ಹೋಗಿ ಮಾರಕಾಸ್ತ್ರದಿಂದ ನಾಲ್ಕೈದು ಬಾರಿ ಪತ್ನಿ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಮನೆಯಲ್ಲಿಯೇ ಶವವನ್ನು ಬಿಟ್ಟು ಬೀಗ ಹಾಕಿಕೊಂಡು, ಪ್ರತಿದಿನ ಜಾನುವಾರುಗಳೊಂದಿಗೆ ತೋಟಕ್ಕೆ ಹೋಗಿ ಬರುತ್ತಿದ್ದ. ಶವ ದುರ್ವಾಸನೆ ಬರಲು ಆರಂಭವಾದಾಗ ಎಸ್ಕೇಪ್ ಆಗಿದ್ದಾನೆ. ಸಂಬಂಧಿಕರು ಮದುವೆ ಆಮಂತ್ರಣ ನೀಡಲು ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಿದೆ. ಆಮಂತ್ರಣ ಎಸೆಯಲು ಕಿಟಕಿ ತೆರೆದಾಗ ದುರ್ವಾಸನೆ ಬಂದಿದ್ದು ಮಗನಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಅಮ್ಮನ ಫೋನ್ ಸ್ವಿಚ್ ಆಫ್ ಬರುತ್ತಿದ್ದ ಕಾರಣ ಬೆಳಗಾವಿಯಿಂದ ಹೊರಟಿದ್ದ ಮಗ, ದೊಡ್ಡಪ್ಪನ ಮಗನಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ. ಕೂಡಲೇ ಮನೆ ಬಳಿ ಬಂದು ಬೀಗ ಒಡೆದು ನೋಡಿದಾಗ ರತ್ನಮ್ಮ ಶವ ಕೊಳೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಪದೇ ಪದೇ ದಂಪತಿ ನಡುವೆ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
Live Tv
[brid partner=56869869 player=32851 video=960834 autoplay=true]
ಪ್ರೀತಿ ಅಂದರೆ ಅದೊಂದು ಸುಂದರ ಅನುಭವ. ಪ್ರೀತಿ ಎಂಬ ಶಬ್ಧವೇ ಕೇಳಲು ಹಿತವಾಗಿರುತ್ತದೆ. ಯಾವುದೇ ಸ್ವಾರ್ಥವಿಲ್ಲದೇ ಪ್ರೀತಿಸುವ ಹೃದಯ ಸದಾ ಜೊತೆಯಿರಬೇಕು ಎಂಬುದೇ ಪ್ರೀತಿಯ ಅರ್ಥ. ಪ್ರೀತಿಯಲ್ಲಿ ಮೇಲು-ಕೀಳು ಎಂಬುವುದಿರುವುದಿಲ್ಲ. ಜಾತಿ, ಧರ್ಮ, ಅಂದ-ಚಂದ, ಮೇಲು-ಕೀಳು ದೊಡ್ಡಸ್ತಿಕೆ ಅದೆಲ್ಲವನ್ನು ಮೆಟ್ಟಿ ಏರಿರುವುದು ಪ್ರೀತಿ. ಪ್ರೇಮದಲ್ಲಿರುವುದು ಹೃದಯಗಳ ಪಿಸುಮಾತುಗಳು, ಭಾವನೆಗಳ ಸಮಾಗಮ, ಮೌನಕವಿತೆ. ಪ್ರೀತಿಗೆ ಬೇಕಾಗಿರುವುದು ಹಣ, ಅಂತಸ್ತು ಅಲ್ಲ. ಪ್ರೀತಿಸುವ ಹೃದಯ. ಪ್ರೀತಿಗೆ ವಯಸ್ಸಿನ ಅಂತರವಿರುವುದಿಲ್ಲ. ವಯಸ್ಸು ಎಷ್ಟೇ ಆದರೂ ಭಾವನೆಗಳು ಎಂದಿಗೂ ಮಾಸುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವೃದ್ಧನೋರ್ವ ತನ್ನ ಇಳಿವಯಸ್ಸಿನಲ್ಲಿ ನೃತ್ಯ ಮಾಡಿ ತನ್ನ ತುಂಟತನದಿಂದ ಪತ್ನಿ ನಾಚಿ ನೀರಾಗುವಂತೆ ಮಾಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವೀಡಿಯೋವನ್ನು ದಂಪತಿಯ ಪುತ್ರಿ ಶೃತಿ ವಾಸುದೇವನ್ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, 70 ವರ್ಷದ ವೃದ್ಧ ಲುಂಗಿ ಮತ್ತು ಬಿಳಿ ಬನಿಯನ್ ಧರಿಸಿ ಕಾಲಿವುಡ್ ನಟ ಥಳಪತಿ ವಿಜಯ್ ಅಭಿನಯದ ‘ದಿ ಬೀಸ್ಟ್’ ಸಿನಿಮಾದ ಅರೇಬಿಕ್ ಕುಥಿ ಹಾಡಿಗೆ ಫುಲ್ ಎನರ್ಜಿಟಿಕ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋ ಜೊತೆಗೆ ಶೃತಿ ವಾಸುದೇವನ್ ಅವರು, “ವಿನಂತಿಯ ಮೇರೆಗೆ ಅಪ್‍ಲೋಡ್ ಮಾಡಲಾಗುತ್ತಿದೆ. ನಿಮ್ಮ ಒಳಗಿರುವ ಮಗುತನವನ್ನು ಜೀವಂತವಾಗಿಟ್ಟುಕೊಂಡರೆ, ಅದು ನಿಮ್ಮ ಸುತ್ತಿರುವವರನ್ನು ಯಾವಾಗಲೂ ಖುಷಿಯಾಗಿರಿಸುತ್ತದೆ. 70ರಲ್ಲಿಯೂ 10ವರ್ಷದವರಂತೆ ನನ್ನ ತಂದೆ ಮತ್ತು ತಾಯಿ ಕ್ಯೂಟ್ ಆಗಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ವೀಡಿಯೋದಲ್ಲಿ ವೃದ್ಧ ಇಳಿವಯಸ್ಸಿನಲ್ಲಿಯೂ ತನ್ನ ಪತ್ನಿಯನ್ನು ಸುತ್ತುತ್ತಾ ನೃತ್ಯ ಮಾಡುತ್ತಾ ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋಗೆ ಮನಸೋತ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 11 ದಶಲಕ್ಷಕ್ಕೂ ಹೆಚ್ಚು ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಸಂತೋಷದಿಂದ ತುಂಬಿದ ಜೀವನ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ಪರಿಶುದ್ಧವಾದ ಬಂಧ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯನ್ನ ಮದ್ವೆಯಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಶಿಕ್ಷಕಿ
Live Tv
[brid partner=56869869 player=32851 video=960834 autoplay=true]
ನೆಲಮಂಗಲ: ಪತಿಯ (Husband) ಕುಡಿತದ ಚಟಕ್ಕೆ ಬೇಸತ್ತು ತುಂಬು ಗರ್ಭಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ (Bengaluru) ನೆಲಮಂಗಲದಲ್ಲಿ (Nelamangala) ನಡೆದಿದೆ.
ಸೌಂದರ್ಯ(20) ಮೃತ ಯುವತಿ. ಈಕೆ ಒಂದು ವರ್ಷದ ಹಿಂದೆ ಸಂತೋಷ್ ಎಂಬ ಯುವಕನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದಳು. ಅಷ್ಟೇ ಅಲ್ಲದೇ ಸಂತೋಷ್ ಮತ್ತು ಸೌಂದರ್ಯ ಒಂದೇ ಕಂಪನಿಯಲ್ಲಿ ಅನ್ಯೋನ್ಯದಿಂದ ಕೆಲಸ ಮಾಡುತ್ತಾ, ನೆಲಮಂಗಲ ಸಮೀಪದ ಶಿವನಪುರದಲ್ಲಿ ವಾಸವಾಗಿದ್ದರು. ಇವರ ಪ್ರೀತಿಯ ಫಲವಾಗಿ ಸೌಂದರ್ಯ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಸಂಪತ್ ಇತ್ತೀಚೆಗೆ ಆ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದ.
ಕೆಲಸ ಇಲ್ಲದ ಹಿನ್ನೆಲೆಯಲ್ಲಿ ಸಂತೋಷ್ ಕುಡಿತದ ಚಟಕ್ಕೆ ಒಳಗಾಗಿದ್ದ. ಅಷ್ಟೇ ಅಲ್ಲದೇ ಪ್ರತಿನಿತ್ಯ ಕುಡಿದು ಬಂದು ಸೌಂದರ್ಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದಾಗಿ ಸಂತೋಷ್‍ನ ಹಿಂಸೆ ತಾಳಲಾರದೇ ಮನನೊಂದು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ಅಭ್ಯರ್ಥಿ ಪರೀಕ್ಷೆಯಿಂದ ವಂಚಿತ
ಘಟನೆಗೆ ಸಂಬಂಧಿಸಿ ಮಾದನಾಯಕನಹಳ್ಳಿ ಪೊಲೀಸರು ಸೌಂದರ್ಯನ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸಂತೋಷ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 42 ಜನರನ್ನು ಹೊತ್ತಿದ್ದ ವಿಮಾನ ಸರೋವರದಲ್ಲಿ ಪತನ
Live Tv
[brid partner=56869869 player=32851 video=960834 autoplay=true]
ಅಂಕಾರಾ: ಖುಷಿಯಿಂದ ತನ್ನ ಗರ್ಭಿಣಿ (Pregnant) ಪತ್ನಿಯೊಂದಿಗೆ (Wife) ಸೆಲ್ಫಿ ತೆಗೆದುಕೊಂಡ ಸ್ವಲ್ಪ ಸಮಯದ ನಂತರ ಆಕೆಯನ್ನು ತಳ್ಳಿದ್ದ ವ್ಯಕ್ತಿಗೆ ಟರ್ಕಿ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
2018ರ ಜೂನ್‍ನಲ್ಲಿ ಟರ್ಕಿಯ ಪ್ರಾಂತ್ಯದ ಮುಗ್ಲಾದ ಬಟರ್ ಫ್ಲೈ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ. ಸೆಮ್ರಾ ಐಸಲ್‍ಳನ್ನು 1,000 ಅಡಿ ಎತ್ತರ ಬಂಡೆಯಿಂದ ಆಕೆಯ ಪತಿ ಹಕನ್ ಐಸಲ್ ತಳ್ಳಿದ್ದನು. ಈ ವೇಳೆ ಸೆಮ್ರಾ ಐಸಲ್ 7 ತಿಂಗಳ ಗರ್ಭಿಣಿಯಾಗಿದ್ದಳು.
ಹಕನ್ ಪತ್ನಿ ಸತ್ತರೆ ಜೀವ ವಿಮೆಯ ಹಣವನ್ನು (Money) ಪಡೆದುಕೊಳ್ಳಬಹುದು ಎಂದು ಯೋಜನೆ ಹಾಕಿದ್ದ. ಅದರಂತೆ ಹಕನ್ ತನ್ನ ಪತ್ನಿಯನ್ನು ಎತ್ತರದ ಸ್ಥಳಕ್ಕೆ ಕರೆದೊಯ್ದಿದ್ದನು. ಈ ವೇಳೆ ಸೆಮ್ರಾ ಎತ್ತರದ ಸ್ಥಳವನ್ನು ನೋಡಿ ಹೆದರುತ್ತಿದ್ದಳು. ಅಲ್ಲಿ ಖುಷಿಯಿಂದ ಆಕೆಯ ಜೊತೆ ಸೆಲ್ಫಿ ತೆಗೆದುಕೊಂಡು ಸಮಯ ಕಳೆದಿದ್ದಾನೆ. ನಂತರ ಸೆಮ್ರಾಳನ್ನು ಅಲ್ಲಿಂದ ತಳ್ಳಿ ಹತ್ಯೆ ಮಾಡಿದ್ದಾನೆ.
ಆ ನಂತರ ಹಕನ್ ತನ್ ಪತ್ನಿ ಬಂಡೆಯಿಂದ ಕಾಲು ಜಾರಿ ಬಿದ್ದಿದ್ದಾಳೆ ಎಂದು ಕಥೆ ಹೇಳಿ 25,000 ಡಾಲರ್ ಮೌಲ್ಯದ ಜೀವ ವಿಮೆಯನ್ನು ಪಡೆದುಕೊಂಡ. ಆದರೆ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈ ಭಯಾನಕ ವಿಷಯ ತಿಳಿದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು
ಬೀದರ್: ಕೌಟುಂಬಿಕ ಕಲಹ ಹಿನ್ನೆಲೆ ರಸ್ತೆಯಲ್ಲಿ ಹಾಕಿದ್ದ ಪತಿ ಹಾಗೂ ಬಿಜೆಪಿ (BJP) ಮುಖಂಡ ಮಲ್ಲೇಶ್ ಬ್ಯಾನರ್ (Banner) ಹರಿದು ಹಾಕಿ ಪತ್ನಿ ರಂಪಾಟ ಮಾಡಿದ ಘಟನೆ ಬೀದರ್ (Bidar) ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡಿದ್ರು. ಪೊಲೀಸರು ಎಫ್‍ಐಆರ್ (FIR) ದಾಖಲಿಸದ ಕಾರಣ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ಪತಿಯ ಬ್ಯಾನರ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿಯಾಗಿದ್ದು, ಮಹಿಳೆಯ ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟರು.
ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಮಹಿಳೆ ಕಣ್ಣೀರು ಹಾಕಿದ ಪ್ರಸಂಗವು ಈ ವೇಳೆ ನಡೆಯಿತು.
Live Tv
[brid partner=56869869 player=32851 video=960834 autoplay=true]
ತುಮಕೂರು: ನನ್ನ ಇಬ್ಬರು ಮಕ್ಕಳನ್ನು (Children) ದತ್ತು ತೆಗೆದುಕೊಳ್ಳಿ. ನನಗೂ, ನನ್ನ ಪತ್ನಿಗೆ (Wife) ದಯಾಮರಣ ಕೊಡಿ ಎಂದು ತುಮಕೂರು (Tumkur) ಜಿಲ್ಲಾಧಿಕಾರಿ (District Collector) ಕಚೇರಿ ಎಂದು ನೊಂದ ಬಾಡಿಗೆದಾರ ಅಳಲು ತೋಡಿಕೊಂಡರು.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳೊಂದಿಗೆ ಹಾಗೂ ಸಂಬಂಧಿಕರ ಜೊತೆ ಬಂದ ನೊಂದ ಬಾಡಿಗೆದಾರ ಅಂತರಾಜು ಹಾಗೂ ಪತ್ನಿ ತೇಜಸ್ವಿನಿ ದಯಾಮರಣದ ಅರ್ಜಿಯನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ನಂತರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್‍ಗೆ ಸಲ್ಲಿಸಿದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಾಡಿಗೆದಾರ ಅಂತರಾಜು, ದೇಶದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ. ನೊಂದವರಿಗೆ ನ್ಯಾಯ ಕೊಡಿಸುವುದಕ್ಕೆ ಆಗಲ್ಲ. ನನ್ನ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ಅಷ್ಟಾದರೂ ಮಾಡಿ. ನನಗೆ ಹಾಗೂ ನನ್ನ ಪತ್ನಿ ತೇಜಸ್ವಿಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ನಮಗೆ ಹೋಟೆಲ್ ಬಾಡಿಗೆ ಕೊಟ್ಟಂತಹ ಮಾಲೀಕರು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ಅಂದ್ರೆ, ಸ್ಥಳೀಯ ಶಾಸಕರು, ಸಚಿವರು ಬರಲಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಕೂಡ ಬರಲಿಲ್ಲ. ಕೊನೆಗೆ ಒಬ್ಬ ಕಾರ್ಪೋರೇಟರ್ ಕೂಡ ಪ್ರತಿಭಟನೆಯ ಸ್ಥಳಕ್ಕೆ ಸುಳಿಯದಂತೆ ನೋಡಿಕೊಂಡಿದ್ದಾರೆ.
ಬಸವರಾಜ್ ಎಂಬವರ ತ್ರಿಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸುತ್ತಿದ್ದರು. ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂ. ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ. ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದಿದ್ದಾರೆ. ನಂತರ ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಜ್ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನನ್ನ ಹೆಂಡತಿ (Wife) ಚಾಕುವಿನಿಂದ (Knife) ನನ್ನ ಮೇಲೆ ದಾಳಿ ನಡೆಸಿದ್ದಾಳೆ. ನನ್ನನ್ನು ಕಾಪಾಡಿ ಎಂದು ಬೆಂಗಳೂರಿನ (Bengaluru) ಯದುನಂದನ್ ಆಚಾರ್ಯ ಪ್ರಧಾನಿ ಕಾರ್ಯಾಲಯದ (PMO Office) ಮೊರೆ ಹೋಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಮೇಲೆ ದಾಳಿ ಆಗಿದೆ. ಆದ್ರೆ ಬಹುಷಃ ನನಗೆ ಯಾರು ಹೆಲ್ಪ್ ಮಾಡಲ್ಲ. ಯಾಕಂದ್ರೆ ನಾನೊಬ್ಬ ಪುರುಷ. ನನ್ನ ಹೆಂಡತಿ ನನ್ನನ್ನು ಚಾಕುವಿನಿಂದ ಇರಿದಿದ್ದಾಳೆ. ಇದೇನಾ ನಾರಿ ಶಕ್ತಿ? ನನ್ನ ಕೈಯಲ್ಲಿ ರಕ್ತ ಬರ್ತಿದೆ. ನನ್ನ ಪತ್ನಿ ವಿರುದ್ಧ ಗೃಹ ಹಿಂಸೆ ಕೇಸ್ ದಾಖಲಿಸ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್‌ಗೆ ಬೌಲಿಂಗ್ ಮಾಡಿದ ಹರ್ಭಜನ್ ಸಿಂಗ್ʼ
ಈ ಟ್ವೀಟ್ ಅನ್ನು ಪಿಎಂಒ, ಕೇಂದ್ರ ಮಂತ್ರಿ ಕಿರಣ್ ರಿಜಿಜು ಹಾಗೂ ಬೆಂಗಳೂರು ಪೊಲೀಸ್ ಕಮೀಷನರ್‌ಗೆ (Bangaluru Police Commissioner) ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕಮೀಷನರ್, ಏನಾಯ್ತು ಎಂದು ಠಾಣೆಗೆ ಬಂದು ದೂರು ನೀಡಿ ಎಂದು ಪ್ರತಿಕ್ರಿಯಿಸಿದ್ದಾರೆ. ನೊಂದ ಪತಿಯರು ಯದುನಂದನ್ ಬೆಂಬಲಿಸಿ ಸಾಕಷ್ಟು ಟ್ವೀಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]