Tag: Wife

  • ಪತ್ನಿಯ ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕಸದ ರಾಶಿಯಲ್ಲಿ ಎಸೆದ

    ಪತ್ನಿಯ ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕಸದ ರಾಶಿಯಲ್ಲಿ ಎಸೆದ

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು (Lover) ಕೊಂದು ಆತನ ದೇಹವನ್ನು 12ಕ್ಕಿಂತಲೂ ಹೆಚ್ಚು ಪೀಸ್‍ಗಳನ್ನಾಗಿ ಮಾಡಿದ ಘಟನೆ ಉತ್ತರ ಪ್ರದೇಶದ (Uttara Pradesh) ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಮೀಲಾಲ್ ಪ್ರಜಾಪತಿ ಬಂಧಿತ ಆರೋಪಿ. ಮೀಲಾಲ್ ಪ್ರಜಾಪತಿಯ ಪತ್ನಿಯು (Wife) ಗಾಜಿಯಾಬಾದ್ ನಿವಾಸಿ ಅಕ್ಷಯ್‍ನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಇದರಿಂದ ಕೋಪಗೊಂಡ ಮೀಲಾಲ್ ಪ್ರಜಾಪತಿಯು ಅಕ್ಷಯನನ್ನು ಹತ್ಯೆ ಮಾಡಿದ್ದಾನೆ.

    ಘಟನೆಯೇನು?: ಮೀಲಾಲ್ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಅಕ್ಷಯ ಆತನ ಮನೆಗೆ ಭೇಟಿ ನೀಡಿದ್ದ. ಅಷ್ಟೇ ಅಲ್ಲದೇ ಮೀಲಾಲ್ ಪತ್ನಿ ನೀಡಿದ್ದ ಚಹಾವನ್ನು ಕುಡಿಯುತ್ತಿರುವಾಗ, ಮಿಲಾಲ್‍ನ ಮಗಳ ಕಾಲಿಗೆ ಕುದಿಯುತ್ತಿರುವ ಚಹಾ ಬಿದ್ದಿದೆ. ಇದರಿಂದಾಗಿ ಆಕೆಗೆ ಸುಟ್ಟಗಾಯಗಳಾಗಿದ್ದವು.

    ಮಿಲಾಲ್ ಮನೆಗೆ ಹಿಂದಿರುಗಿದಾಗ ಮಗಳಿಗೆ ಸುಟ್ಟ ಗಾಯಗಳಾಗಿರುವುದನ್ನು ಗಮನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಸುಟ್ಟಗಾಯಗಳು ಗಂಭೀರವಾಗಿದ್ದರಿಂದ ಆಸ್ಪತ್ರೆಯಲ್ಲೇ ಇರಲು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    crime

    ಪತ್ನಿಯ ಅಕ್ರಮ ಸಂಬಂಧ ಜೊತೆಗೆ ಮಗಳಿಗೆ ತೊಂದರೆ ಆಗಿರುವುದನ್ನು ಗಮನಿಸಿದ ಮಿಲಾಲ್ ಕೋಪಗೊಂಡು ಅಕ್ಷಯ್‍ನನ್ನು ಹತ್ಯೆ ಮಾಡಲು ಯೋಜಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನ ಯೋಜನೆಯಂತೆ ತನ್ನ ಪತ್ನಿ ಬಳಿ ಅಕ್ಷಯನನ್ನು ಮನೆಗೆಲಸದಲ್ಲಿ ಸಹಾಯ ಮಾಡಲು ಕರೆ ಮಾಡುವಂತೆ ತಿಳಿಸಿದ್ದಾನೆ.

    ಅದಾದ ಬಳಿಕ ಅಕ್ಷಯ್ ಮನೆಗೆ ಬಂದಾಗ ಮೀಲಾಲ್ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ಕತ್ತರಿಸಿ, ಆ ಭಾಗಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಗಾಜಿಯಾಬಾದ್‍ನ ಕಸದ ರಾಶಿಗೆ ಎಸೆದಿದ್ದಾನೆ. ಇದನ್ನೂ ಓದಿ: ಡ್ಯಾಂ ಆವರಣಕ್ಕೆ ತೆರಳಲು ಅವಕಾಶ ನೀಡಲಿಲ್ಲವೆಂದು ಸೆಕ್ಯೂರಿಟಿಗಾರ್ಡ್‌ಗೆ ಮನಬಂದಂತೆ ಥಳಿಸಿದ ಯುವಕರು

    ಕೆಲವರು ಕಸದ ರಾಶಿಯಲ್ಲಿ ದೇಹದ ಭಾಗಗಳನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮೀಲಾಲ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದ್ವೇಷಕ್ಕೆ 84 ತೆಂಗಿನ ಸಸಿಗಳ ಮಾರಣಹೋಮ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಟ್ರೋ ರವಿಗೆ ಜೀವಾವಧಿ ಶಿಕ್ಷೆ ಆಗಬೇಕು: ಪತ್ನಿ ಮನವಿ

    ಸ್ಯಾಂಟ್ರೋ ರವಿಗೆ ಜೀವಾವಧಿ ಶಿಕ್ಷೆ ಆಗಬೇಕು: ಪತ್ನಿ ಮನವಿ

    ಮೈಸೂರು: ಜೈಲಿಂದ ಹೊರ ಬಂದ ಬಳಿಕ ಮತ್ತೆ ಸ್ಯಾಂಟ್ರೋ ರವಿ (Santro Ravi) ಇದೇ ಚಾಳಿ ಮುಂದುವರಿಸುತ್ತಾನೆ. ಹೀಗಾಗಿ ಆತನಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದು ಪತ್ನಿ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

    11 ದಿನಗಳಿಂದ ತಲೆ ಮೆರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಬಂಧಿಸಿದ ರಾಜ್ಯ ಪೊಲೀಸರಿಗೆ ಸ್ಯಾಂಟ್ರೋ ರವಿ 2ನೇ ಪತ್ನಿ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಅರೆಸ್ಟ್‌ – ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು ಹೀಗೆ..

    ರವಿಯ ಮತ್ತೆ ಹೊರಗೆ ಬಂದು ಅದೇ ಚಾಳಿ ಮುಂದುವರಿಸುತ್ತಾನೆ. ಹೀಗಾಗಿ ಅತನಿಗೆ ಜೀವಾವಧಿ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. 95 ರಿಂದಲೇ ಸ್ಯಾಂಟ್ರೋ ರವಿ ಕ್ರಿಮಿನಲ್ ಕೇಸ್‍ (Criminal Case) ಗಳಲ್ಲಿ ಭಾಗಿಯಾಗಿದ್ದಾರೆ. ಹೆಣ್ಣು ಮಕ್ಕಳನ್ನ ಬಳಸಿಕೊಂಡು ವೇಶ್ಯಾವಾಟಿಕೆ ಮಾಡುತ್ತಿದ್ದರು. ಈ ಬಗ್ಗೆ ನಾನು ತಿರುಗಿಬಿದ್ದ ಕಾರಣ ನನ್ನ ಮೇಲೆ ಚೆಕ್ ಬೌನ್ಸ್, ದರೋಡೆ ಕೇಸ್‍ಗಳಲ್ಲಿ ನನ್ನು ಸಿಲುಕಿಸಿ ಜೈಲು ಪಾಲು ಮಾಡಿದ್ದರು. ಹೀಗಾಗಿ ಇವರು ಮತ್ತೆ ಹೊರಗೆ ಬಂದರೆ ತಮ್ಮ ಕೆಲಸ ಮುಂದುವರಿಸುತ್ತಾರೆ. ಹೀಗಾಗಿ ಇವರಿಗೆ ಕಠಿಣ ಶಿಕ್ಷೆ ನೀಡಿದರೆ ಮತ್ತೆ ಮುಂದುವರಿಸಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 15 ಸಿಮ್‌ ಕಾರ್ಡ್‌ ಬದಲಾಯಿಸಿ, ವಿಗ್‌ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಂಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    ಸ್ಯಾಂಟ್ರೋ ರವಿ ವಿರುದ್ಧ 2ನೇ ಪತ್ನಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಸಂಬಂಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆ (Vijayanagar Police Station) ಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದ. 11 ದಿನಗಳ ಬಳಿಕ ಕೊನೆಗೂ ಗುಜರಾತ್‍ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತಾಂತರಕ್ಕೆ ಒಪ್ಪದ ಪತ್ನಿಗೆ ಸಿಗರೇಟ್‍ನಿಂದ ಸುಟ್ಟು, ಒತ್ತಾಯದಿಂದ ಮಾಂಸ ತಿನ್ನಿಸಿದ!

    ಮತಾಂತರಕ್ಕೆ ಒಪ್ಪದ ಪತ್ನಿಗೆ ಸಿಗರೇಟ್‍ನಿಂದ ಸುಟ್ಟು, ಒತ್ತಾಯದಿಂದ ಮಾಂಸ ತಿನ್ನಿಸಿದ!

    ಲಕ್ನೋ: ಮತಾಂತರ (Conversion) ಕ್ಕೆ ಒಪ್ಪದ ಪತ್ನಿಯನ್ನು ಪ್ರತಿನಿತ್ಯ ಥಳಿಸಿ, ಸಿಗರೇಟ್‍ (Cigrette) ನಿಂದ ಸುಟ್ಟು ಬಲವಂತವಾಗಿ ಮಾಂಸ ತಿನ್ನಿಸಿದ ಘಟನೆಯೊಂದು ಉತ್ತರಪ್ರದೆಶ (Uttarapradesh) ಲಕ್ನೋದಲ್ಲಿ ನಡೆದಿದೆ.

    ಆರೋಪಿ ಪತಿಯನ್ನು ಚಂದ್ ಮೊಹಮ್ಮದ್ (Chand Mohammad) ಎಂದು ಗುರುತಿಸಲಾಗಿದೆ. ಈತ ತಾನು ಹಿಂದೂ ಅಂತ ಹೇಳಿಕೊಂಡು ಸಂತ್ರಸ್ತೆಯನ್ನು ಮದುವೆಯಾಗಿದ್ದಾನೆ. ಆ ಬಳಿಕ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಇದನ್ನೂ ಓದಿ: ಹರಿಯಾಣದ ಮಾಜಿ ಸಚಿವರ ಪುತ್ರ ವಿಷ ಸೇವಿಸಿ ಆತ್ಮಹತ್ಯೆ

    ಪತಿ ನನಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೇಹದ ಮೇಲೆಲ್ಲ ಸಿಗರೇಟ್‍ನಿಂದ ಸುಟ್ಟಿದ್ದಾನೆ. ಅಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದಿದ್ದಕ್ಕೆ ನನ್ನ ಮೇಲೆ ಬಿಸಿ ಎಣ್ಣೆ ಎರಚಿದ್ದಾನೆ. ಇಷ್ಟು ಸಾಲದೆಂಬಂತೆ ಒಂದು ವೇಳೆ ನೀನು ಮತಾಂತರಕ್ಕೆ ಒಪ್ಪದಿದ್ದರೆ ನನ್ನ ಸಂಬಂಧಿಕರಿಂದಲೇ ನಿನ್ನ ಮೇಲೆ ಅತ್ಯಾಚಾರ ಮಾಡಿಸುತ್ತೇನೆ. ಅಲ್ಲದೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಪೊಲೀಸರ ಬಳಿ ದೂರಿದ್ದಾಳೆ.

    ಪ್ರತಿ ದಿನ ಪತಿಯ ಹಿಂಸೆ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ದೂರು ನೀಡಲೆಂದು ಹೋದರೆ ಪತಿ ನನ್ನನ್ನು ಕೂಡಿ ಹಾಕಿ ಥಳಿಸುತ್ತಾನೆ. 5 ತಿಂಗಳ ಗರ್ಭಿಣಿ ಇದ್ದಾಗಲೂ ಆತ ನನ್ನ ಹೊಟ್ಟೆಗೆ ಹೊಡೆದಿದ್ದರಿಂದ ಗರ್ಭಪಾತವಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

    ಸದ್ಯ ಮಹಿಳೆಯ ದೂರನ್ನು ಪೊಲೀಸರು ಸ್ವೀಕರಿಸಿದ್ದು, ಪತಿಯಿಂದ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೇಸ್‍ಬುಕ್ ಸುಂದರಿಗಾಗಿ ಪತ್ನಿಗೆ ವಿಷವಿಟ್ಟ ಪತಿರಾಯ!

    ಫೇಸ್‍ಬುಕ್ ಸುಂದರಿಗಾಗಿ ಪತ್ನಿಗೆ ವಿಷವಿಟ್ಟ ಪತಿರಾಯ!

    ಕೋಲಾರ: ತನ್ನ ಫೇಸ್‍ಬುಕ್ ಸುಂದರಿಗಾಗಿ ಪತಿ (Husband) ಮಹಾಶಯನೊಬ್ಬ ತನ್ನ ಪತ್ನಿಗೆ ವಿಷವಿಟ್ಟ ವಿಲಕ್ಷಣ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

    ಈ ಘಟನೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕಾನಗಮಾಕಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಸದ್ಯ ಪತ್ನಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್

    9 ವರ್ಷಗಳ ಹಿಂದೆ ಹಿರಿಯರ ಮುಂದೆ ಸಪ್ತಪದಿ ತುಳಿದ ಪತಿಗೆ ಫೇಸ್‍ಬುಕ್‍ನಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಈ ಪರಿಚಯವು ಇದೀಗ ತನ್ನ ಪತ್ನಿಯನ್ನೇ ಮರೆಯುವಂತೆ ಮಾಡಿದೆ.

    ಇತ್ತ ತವರು ಮನೆಗೆ ಪತ್ನಿ ಕಳುಹಿಸಿದ ಭೂಪ ತವರು ಮನೆಯಲ್ಲಿಯೇ ಪತ್ನಿಗೆ ವಿಷವಿಟ್ಟಿದ್ದಾನೆ. ಪರಿಣಾಮ ತೀವ್ರ ಅಸ್ವಸ್ಥತೆಯ ಪತ್ನಿ ಆಶಾರಾಣಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದು, ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಹುಡುಕಿಕೊಡುವಂತೆ ಯುವಕ ಕರೆ- ಡಿಟೇಲ್ಸ್ ಕಳುಹಿಸು ಅಂದ್ರು ಶಾಸಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡ್ಬೇಕು ರಜೆ ಕೊಡಿ- ಅರ್ಜಿ ಬರೆದ ಕಾನ್ಸ್‌ಟೇಬಲ್

    ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡ್ಬೇಕು ರಜೆ ಕೊಡಿ- ಅರ್ಜಿ ಬರೆದ ಕಾನ್ಸ್‌ಟೇಬಲ್

    ಲಕ್ನೋ: ಪತ್ನಿ (Wife) ಕೋಪಿಸಿಕೊಂಡಿದ್ದಾಳೆ ಸಮಾಧಾನ ಪಡಿಸಬೇಕು ಎಂದು ಉತ್ತರಪ್ರದೇಶದ (Uttar Pradesh) ಕಾನ್ಸ್‌ಟೇಬಲ್‍ನೊಬ್ಬ (Constable) ಬರೆದಿರುವ ರಜಾ (Leave) ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಾನ್ಸ್‌ಟೇಬಲ್‍ ಕಳೆದ ತಿಂಗಳು ವಿವಾಹವಾಗಿದ್ದರು. ಅಂದಿನಿಂದ ಅವರು ಉತ್ತರ ಪ್ರದೇಶದ ಮಹಾರಾಜ್‍ಗಂಜ್ ಜಿಲ್ಲೆಯ ನೌತಾನ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಇಂಡೋ-ನೇಪಾಳ ಗಡಿಯಲ್ಲಿರುವುದರಿಂದ ಅವರಿಗೆ ರಜೆ ಸಿಗುತ್ತಿರಲಿಲ್ಲ. ಇದರಿಂದಾಗಿ ತನ್ನ ಊರಿಗೂ ಹೋಗಲು ಆಗುತ್ತಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಗೆ ರಜಾ ಅರ್ಜಿಯನ್ನು ಬರೆದಿದ್ದಾರೆ. ಆ ರಜಾ ಅರ್ಜಿಯಲ್ಲಿ ಕಾನ್ಸ್‌ಟೇಬಲ್‍, ತನಗೆ ರಜೆ ಸಿಗದ ಕಾರಣ ಪತ್ನಿ ಕೋಪಗೊಂಡಿದ್ದಾಳೆ. ಇದರಿಂದಾಗಿ ಪತ್ನಿಗೆ ಎಷ್ಟೇ ಕರೆ ಮಾಡಿದರೂ ಮಾತನಾಡುತ್ತಿಲ್ಲ. ಅಷ್ಟೇ ಅಲ್ಲದೇ ರಿಸಿವ್ ಮಾಡಿದರೂ ತನ್ನ ತಾಯಿಯ ಬಳಿ ಮೊಬೈಲ್ ಅನ್ನು ಹಸ್ತಾಂತರಿಸುತ್ತಿದ್ದಾಳೆ. ಇದರಿಂದಾಗಿ ಅವಳನ್ನು ಸಮಾಧಾನ ಪಡಿಸಬೇಕು. ತನಗೆ ರಜೆ ಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚಾಗ್ತಿದೆ ಹೃದಯ ಸಮಸ್ಯೆ- ಇರಲಿ ಎಚ್ಚರ

    ಈ ವೇಳೆ ತನ್ನ ಸಹೋದರ ಅಳಿಯನ ಹುಟ್ಟು ಹಬ್ಬಕ್ಕೆ ಬರುವಂತೆ ಪತ್ನಿಗೆ ತಿಳಿಸಿದ್ದೆ. ಆದರೆ ನನಗೆ ರಜೆ ಸಿಗದ ಕಾರಣ ಮನೆಗೆ ಹೋಗಲು ಆಗಿರಲಿಲ್ಲ ಎಂಬುದನ್ನು ರಜಾ ಅರ್ಜಿಯಲ್ಲಿ ತಿಳಿಸಿದ್ದಾನೆ. ಅರ್ಜಿ ಓದಿದ ನಂತರ ಸಹಾಯಕ ಸೂಪರಿಂಟೆಂಡೆಂಟ್ ಕಾನ್ಸ್‌ಟೇಬಲ್‍ಗೆ 5 ದಿನಗಳ ಕಾಲ ರಜೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಸ್ಯಾಂಟ್ರೋ ರವಿಯನ್ನ ಶೀಘ್ರವೇ ಬಂಧನ ಮಾಡ್ತೀವಿ – ಆರಗ ಜ್ಞಾನೇಂದ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗಳ ಎದುರೇ ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಂದ ಪಾಪಿ

    ಮಗಳ ಎದುರೇ ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಂದ ಪಾಪಿ

    ಪಾಟ್ನಾ: ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗಳ ಎದುರೇ ಪತ್ನಿಯ ತಲೆ ಮತ್ತು ಮುಖಕ್ಕೆ ಇಟ್ಟಿಗೆಯಿಂದ ಪದೇ ಪದೇ ಹೊಡೆದು ಕೊಂದಿರುವ ಘಟನೆ ಬಿಹಾರದ (Bihar) ರಾಘೋಪುರ ಟಿಕಾರ್‌ನಲ್ಲಿ ನಡೆದಿದೆ.

    ಮೃತಳನ್ನು ಇಶಾ ದೇವಿ (26) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ತನ್ನ ಪತಿ ಪಂಕಜ್ ಯಾದವ್ ಜೊತೆ ಇಶಾ ದೇವಿಗೆ ಜಗಳವಾಗಿದೆ. ವಾಗ್ವಾದದ ವೇಳೆ ಪಂಕಜ್ ಕೋಪದಿಂದ ಇಟ್ಟಿಗೆಯನ್ನು ಎತ್ತಿಕೊಂಡು ಆಕೆಯ ತಲೆ ಮತ್ತು ಮುಖಕ್ಕೆ ಪದೇ ಪದೇ ಹೊಡೆದು ಸ್ಥಳದಲ್ಲೇ ಆಕೆಯನ್ನು ಕೊಂದಿದ್ದಾನೆ. ಕೊಲೆಯ ನಂತರ ತನ್ನ ಹೆಂಡತಿಯ ಶವವನ್ನು ಹತ್ತಿರದ ತೋಟದಲ್ಲಿ ಎಸೆದಿದ್ದಾನೆ. ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಬಿರಿಯಾನಿ ತಿಂದು ಕಾಸರಗೋಡು ಯುವತಿ ಸಾವು

    ಆಕೆಯ ನಾಲ್ಕು ವರ್ಷದ ಮಗಳ ಎದುರೇ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿಯನ್ನು ಕೊಂದು ಆರೋಪಿ ಪರಾರಿಯಾಗಿದ್ದಾನೆ. ಕೊಲೆ ಬಗ್ಗೆ ಆತನ ಮಗಳು ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯಾದ ಮರುದಿನ ಬೆಳಗ್ಗೆ ತೋಟಕ್ಕೆ ತೆರಳಿದ ಸ್ಥಳೀಯರು ಶವವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹಿಳೆ ಮುಖವು ಸಂಪೂರ್ಣವಾಗಿ ವಿರೂಪಗೊಂಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇದನ್ನೂ ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾ ಬೆಂಗಳೂರಲ್ಲಿ ಬಂಧನ

    ಡಿಎಸ್‌ಪಿ ಅಜಯ್ ಕುಮಾರ್ ಚೌಧರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!

    ಪತ್ನಿ ಕಿರುಕುಳಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ!

    ಬೆಂಗಳೂರು: ಪತ್ನಿ ಟಾರ್ಚರ್‍ನಿಂದ ಬೇಸತ್ತು ಇದೀಗ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಮನಗರ (Ramanagar) ಮೂಲದ ರಾಮಚಂದ್ರ (Ramachandra) ಬೆಂಗಳೂರಿನಲ್ಲಿ ಪೊಲೀಸ್ ಮಹಾನಿರ್ದೇಶಕರ ಕಚೇರಿ, ಮಾನವ ಹಕ್ಕುಗಳ ಆಯೋಗದ ಕದ ತಟ್ಟಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ರಾಮಚಂದ್ರ ಅವರು ಕಣ್ಣಲ್ಲಿ ನೀರು ತುಂಬಿಕೊಂಡು ಹೆಂಡ್ತಿ ಹೊಡೆಯುತ್ತಾಳೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

    ಐದು ಲಕ್ಷಕ್ಕಾಗಿ ಪತ್ನಿ ರಾಮಚಂದ್ರ ಅವರನ್ನು ಪೀಡಿಸುತ್ತಿದ್ದಾರಂತೆ. ದುಡ್ಡು ಕೊಡಲ್ಲ ಅಂತಾ ಹೇಳಿದ್ದಕ್ಕೆ ಸರಿಯಾಗಿ ಹೊಡೆಯುತ್ತಿದ್ದಾಳೆ, ಹೆಂಡ್ತಿ ಜೊತೆ ಮಗ ಹಾಗೂ ಹೆಂಡ್ತಿ ತಾಯಿ ಕೂಡ ಸಾಥ್ ಕೊಟ್ಟು ನನಗೆ ಹಲ್ಲೆ ಮಾಡುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ. ಇದನ್ನೂ ಓದಿ: ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಮೂರು ಡೆತ್‍ನೋಟ್ ಪತ್ತೆ

    ಡಿಜಿಗೆ ದೂರು ಕೊಟ್ಟಿರುವ ರಾಮಚಂದ್ರ, ಮಾನವ ಹಕ್ಕುಗಳ ಆಯೋಗಕ್ಕೂ ದೂರು ಕೊಟ್ಟಿದ್ದಾರೆ. ನ್ಯಾಯ ಸಿಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾ ರಾಮಚಂದ್ರ ನೋವು ತೋಡಿಕೊಂಡಿದ್ದಾರೆ. ಊಟ ಕೊಡ್ತಿಲ್ಲ, ನಾನೇ ಕಟ್ಟಿದ ಮನೆಯಲ್ಲಿ ಜಾಗ ಕೊಡ್ತಿಲ್ಲ ಅಂತಾ ರಾಮಚಂದ್ರಪ್ಪ ಅಳಲು ತೋಡಿಕೊಂಡಿದ್ದಾರೆ. ಇದೀಗ ರಾಮಚಂದ್ರ ಅವರಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿಯೊಂದಿಗೆ ಜಗಳ – ಕೋಪದ ಭರದಲ್ಲಿ ತನ್ನ ನವಜಾತ ಶಿಶುವನ್ನು ನೆಲಕ್ಕೆ ಎಸೆದ

    ಪತ್ನಿಯೊಂದಿಗೆ ಜಗಳ – ಕೋಪದ ಭರದಲ್ಲಿ ತನ್ನ ನವಜಾತ ಶಿಶುವನ್ನು ನೆಲಕ್ಕೆ ಎಸೆದ

    ಮುಂಬೈ: ತನ್ನ ಪತ್ನಿಯೊಂದಿಗೆ (Wife) ಜಗಳವಾಡಿ, ಕೋಪದ ಭರದಲ್ಲಿ ಪತಿಯೊಬ್ಬ ತನ್ನ ನವಜಾತ ಶಿಶುವನ್ನು (Newborn Baby) ಆಸ್ಪತ್ರೆಯ (Hospital) ನೆಲಕ್ಕೆ ಕೆಳಗೆ ಎಸೆದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

    ಮಹಾರಾಷ್ಟ್ರದ ನಾಗ್ಪುರ ನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಅಮರಾವತಿ ಮೂಲದ ವ್ಯಕ್ತಿಯು 2020ರಲ್ಲಿ ಮದುವೆಯಾಗಿದ್ದ. ಅಂದಿನಿಂದ ಆತ ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದ. ಆದರೆ ಡಿ. 30ರಂದು ಆಕೆ ಮಗುವಿಗೆ ಜನ್ಮ ನೀಡಿದ್ದಳು.

    ಈ ಹಿನ್ನೆಲೆಯಲ್ಲಿ ಆಕೆಯನ್ನು ಭೇಟಿ ಮಾಡಲು ಆಸ್ಪತ್ರೆಗ ಬಂದಿದ್ದ ವ್ಯಕ್ತಿಯು ಅಲ್ಲಿಯೂ ಜಗಳವಾಡಿದ್ದಾನೆ. ನಂತರ ಕೋಪದ ಭರದಲ್ಲಿ ನವಜಾತ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ. ಇದನ್ನೂ ಓದಿ: ಹಳಿ ತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 8 ಬೋಗಿಗಳು!

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಕೊಲೆ ಮಾಡುವುದು ಹೇಗೆ? ಎಂದು ಗೂಗಲ್‌ನಲ್ಲಿ ಹುಡುಕಿ ಪತ್ನಿಯನ್ನು ಕೊಲೆ ಮಾಡಿದ ಪಾಪಿ ಪತಿ

    ಕೊಲೆ ಮಾಡುವುದು ಹೇಗೆ? ಎಂದು ಗೂಗಲ್‌ನಲ್ಲಿ ಹುಡುಕಿ ಪತ್ನಿಯನ್ನು ಕೊಲೆ ಮಾಡಿದ ಪಾಪಿ ಪತಿ

    ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಕೊಲೆ ಮಾಡಲು ಗೂಗಲ್‌ನಲ್ಲಿ ಕೊಲೆ ಮಾಡುವುದು ಹೇಗೆ ಎಂದು ಹುಡುಕಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

    ಗಾಜಿಯಾಬಾದ್‌ನ ಮೋದಿನಗರದ ನಿವಾಸಿ ವಿಕಾಸ್‌ ಬಂಧಿತ ಆರೋಪಿ. ಹಾಪುರ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಪತ್ನಿ ಸೋನಿಯಾಳನ್ನು ದರೋಡೆಕೋರರು ಕೊಲೆ ಮಾಡಿದ್ದ ಎಂದು ಪೊಲೀಸರಿಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸೋನಿಯಾ ಅವರ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೊಲೀಸರು ವಿಕಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

    ಸೋನಿಯಾಳನ್ನು ವಿವಾಹವಾಗಿ ಕೆಲವು ವರ್ಷಗಳ ನಂತರ ವಿಕಾಸ್‌ ಅಕ್ರಮ ಸಂಬಂಧಗಳನ್ನು ಹೊಂದಿದ್ದ. ಇದರಿಂದಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಇದರಿಂದಾಗಿ ಸೋನಿಯಾಳನ್ನು ಕೊಲೆ ಮಾಡಲು ವಿಕಾಸ್‌ ಸಂಚು ರೂಪಿಸಿ ಹತ್ಯೆಗೈದಿದ್ದಾನೆ ಎನ್ನುವುದು ವಿಚಾರಣೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

    ಅಷ್ಟೇ ಅಲ್ಲದೇ ಈ ವೇಳೆ ವಿಕಾಸ್‌ನ ಫೋನ್‌ (Phone) ಅನ್ನು ಪರಿಶೀಲಿಸಿದಾಗ ಅದರಲ್ಲಿ ಕೊಲೆ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಗೂಗಲ್‌ನಲ್ಲಿ ಹುಡುಕಿರುವುದಾಗಿ ಮಾಹಿತಿ ದೊರೆತಿದೆ. ಅಷ್ಟೇ ಅಲ್ಲದೇ ಇದರಿಂದಾಗಿಯೇ ಆನ್‌ಲೈನ್‌ನಲ್ಲಿ ವಿಷವನ್ನು ಖರೀದಿಸಲು ಪ್ರಯತ್ನಿಸಿದ್ದನು. ಅಷ್ಟೇ ಅಲ್ಲದೇ ಗನ್‌ ಅನ್ನು ಎಲ್ಲಿಂದ ಖರೀದಿಸಬಹುದು ಎನ್ನುವುದರ ಕುರಿತು ಗೂಗಲ್‌ನಲ್ಲಿ ಹುಡುಕಿದ್ದಾನೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ವಿಕಾಸ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಮೃತಪಟ್ಟಿದ್ದಾಳೆಂದು ಭಾವಿಸಿದ್ದ ಪತ್ನಿಯನ್ನು 9 ವರ್ಷಗಳ ಬಳಿಕ ಕಂಡು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತಿ

    ಮೃತಪಟ್ಟಿದ್ದಾಳೆಂದು ಭಾವಿಸಿದ್ದ ಪತ್ನಿಯನ್ನು 9 ವರ್ಷಗಳ ಬಳಿಕ ಕಂಡು ಬಿಗಿದಪ್ಪಿ ಬಿಕ್ಕಿ ಬಿಕ್ಕಿ ಅತ್ತ ಪತಿ

    ಮಡಿಕೇರಿ: ಒಂಭತ್ತು ವರ್ಷದ ಹಿಂದೆ ಪತ್ನಿ (Wife) ಮೃತಪಟ್ಟಿದ್ದಾಳೆ ಎಂದುಕೊಂಡಿದ್ದ ಪತಿಗೆ ಆಕೆ ಬದುಕಿದ್ದಾಳೆ ಎಂದು ತಿಳಿದು ಆಕೆಗಾಗಿ ಸಾವಿರಾರು ಕಿ.ಮೀ ದೂರದಿಂದ ಹುಡುಕಿಕೊಂಡು ಬಂದು ಪತ್ನಿಯನ್ನು ಬಿಗಿದಪ್ಪಿಕೊಂಡ ಅಪೂರ್ವವಾದ ಸಂಗಮಕ್ಕೆ ಮಂಜಿನ ನಗರಿ ಮಡಿಕೇರಿ ಸಾಕ್ಷಿಯಾಗಿದೆ.

    ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತನಲ್ ಎಂಬ ಸಂಸ್ಥೆ ಇವರಿಬ್ಬರ ಅಪೂರ್ವ ಸಂಗಮಕ್ಕೆ ಕಾರಣವಾಗಿದೆ. ತನ್ನವರನ್ನ ಕಂಡು ಸಂತಸ ಪಡುತ್ತಿರುವವಳ ಹೆಸರು ದರ್ಶಿನಿ. ಈಕೆಯದ್ದು ಒಂದು ಸುಂದರ ಕುಟುಂಬ ಪತಿ ಹಾಗೂ 5 ಮಕ್ಕಳು. ಆದರೆ ದರ್ಶಿನಿ ಮಾತ್ರ ಕೊಂಚ ಮಾನಸಿಕ ಅಸ್ವಸ್ಥರಾಗಿದ್ದರು. ಹೀಗಾಗಿ ಈಕೆ 2013ರಲ್ಲಿ ದೆಹಲಿಯಿಂದ ನಾಪತ್ತೆ ಆಗಿದ್ದಳು. ದರ್ಶಿನಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಪತಿ ಕೆಹರ್ ಸಿಂಗ್ ಆಕೆಗಾಗಿ ಹುಡುಕಾಡಿದ ಊರುಗಳಿಲ್ಲ, ವಿಚಾರಿಸದ ಸಂಬಂಧಿಕರಿಲ್ಲ. ಆದರೂ ಕೂಡ ಎಲ್ಲೂ ಪತ್ನಿಯ ಸುಳಿವೇ ಇರಲಿಲ್ಲ. ಸಾಕಷ್ಟು ವರ್ಷ ಹುಡುಕಿದ ಕೆಹರ್‌ ಸಿಂಗ್‌ ಕೊನೆಗೆ ಆಕೆ ಪತ್ತೆ ಆಗದಿದ್ದರಿಂದ ಕೋವಿಡ್‌ಗೆ ಬಲಿಯಾಗಿದ್ದಾಳೆಂದುಕೊಂಡು ಹುಡುಕುವುದನ್ನು ಬಿಟ್ಟಿದ್ದರು.

    ಆದರೆ 9 ವರ್ಷಗಳ ನಂತರ ದರ್ಶನಿ ಬದುಕಿರುವ ವಿಷಯವನ್ನು ಪತಿ ಕೆಹರ್ ಸಿಂಗ್‌ಗೆ ತಿಳಿಸಿದ್ದಾರೆ. ಈ ಸುದ್ದಿಯನ್ನು ಕೇಳಿದ ಕೆಹರ್ ಸಿಂಗ್ 3,000 ಕಿ.ಮೀ ದೂರದ ದೆಹಲಿಯಿಂದ ಕೊಡಗಿನತ್ತ ಬಂದಿದ್ದಾರೆ. ಈ ವೇಳೆ ಬಂದವರೇ ಕೆಹರ್‌ ಸಿಂಗ್‌ ತನ್ನ ಪತ್ನಿಯನ್ನು ಬಿಗಿದಪ್ಪಿ ಮುದ್ದಾಡಿದರು. 9 ವರ್ಷಗಳ ಬಳಿಕ ಭೇಟಿಯಾದ ಇಬ್ಬರು ಒಂದು ಕ್ಷಣ ಭಾವುಕರಾದರು. 9 ವರ್ಷಗಳ ಬಳಿಕ ಕಂಡ ಪತ್ನಿಗೆ ಸಿಹಿ ಕೊಟ್ಟು ಸಂಭ್ರಮಿಸಿದರು. ದೇವರು ಎಲ್ಲಿದ್ದಾನೆಂದು ಹುಡುಕುತ್ತಿದ್ದೆ ಆದ್ರೆ ಇಂದು ಕೊಡಗಿನಲ್ಲಿ ತನಲ್ ಸಂಸ್ಥೆಯಲ್ಲಿ ನನ್ನ ದೇವರನ್ನ ಕಂಡೆ ಅಂತ ಕೆಹರ್‌ ಸಿಂಗ್‌ ಹರ್ಷ ವ್ಯಕ್ತಪಡಿಸಿದರು.

    ಘಟನೆಯೇನು?: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದರ್ಶಿನಿ ಎಂಬ ಮಹಿಳೆ ಕಳೆದ 9 ವರ್ಷಗಳ ಹಿಂದೆ ದೂರದ ದೆಹಲಿಯಿಂದ (New Delhi) ನಾಪತ್ತೆಯಾಗಿದ್ದರು. 5 ವರ್ಷಗಳ ಕಾಲ ದೆಹಲಿಯಿಂದ ಸುದೀರ್ಘವಾಗಿ ಎಲ್ಲೆಲ್ಲೋ ಓಡಾಟ ಮಾಡಿಕೊಂಡು ಕಳೆದ 2018ರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಈ ಮಹಿಳೆ ಆಗಮಿಸಿದ್ದಾಳೆ.

    ಕುಶಾಲನಗರದಲ್ಲಿ ಹಲವು ದಿನಗಳಿಂದ ಅಲ್ಲಲ್ಲಿ ಹರಿದ ರವಿಕೆ ಸೀರೆ ಕೆದರಿದ ಕೂದಲು ಮಾನಸಿಕ ಅಸ್ವಸ್ಥೆಯಂತೆ ಏನನ್ನೋ ಬಡಬಡಿಸುತ್ತಾ ರಸ್ತೆ ಬದಿಗಳಲ್ಲಿ ತಿರುಗಾಡುತ್ತಿದ್ದ ಆಕೆಯನ್ನು ಅಲ್ಲಿನ ಪೋಲಿಸರು ವಿಚಾರಿಸಿದಾಗ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ಆದರೆ ಸರಿಯಾದ ಮಾಹಿತಿ ಸಿಗದೇ ಮಡಿಕೇರಿಯ ತನಲ್ ವ್ಯವಸ್ಥಾಪಕರಾದ ಮುಹಮ್ಮದ್ ಮುಸ್ತಾಫ ಅವರನ್ನು ಸಂಪರ್ಕಿಸಿ ಆಶ್ರಮಕ್ಕೆ ಸೇರಿಸಲಾಗಿತ್ತು.

    ಮುಂದೆ ಅವರಿಗೆ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದ್ದು ಈ ತನಲ್ ಆಶ್ರಮ. ನಂತರ ತನಲ್ ಆಶ್ರಮದಿಂದ ಮತ್ತೆ ಆ ಮಹಿಳೆಯ ಕುಟುಂಬದೊಂದಿಗೆ ಮರು ಸೇರಿಸುವ ಕುರಿತು ಚಿಂತನೆ ನಡೆದಿತ್ತು. ಕಳೆದ 6 ತಿಂಗಳಿನಿಂದ ಅವರ ವಿಳಾಸವನ್ನು ಹುಡುಕುತ್ತಾ ದೆಹಲಿ ಮತ್ತು ಹರಿಯಾಣ ಪೊಲೀಸರನ್ನು ಸಂಪರ್ಕಿಸಿ ಈಗ ಅವರ ಪತಿ (Husband) ಕೆ.ಆರ್ ಸಿಂಗ್‌ರೊಂದಿಗೆ ದರ್ಶಿನಿಯನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

    ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ತನ್ನಿಂದ ದೂರವಿದ್ದ ಹೆಂಡತಿಯನ್ನು 9 ವರ್ಷಗಳ ಬಳಿಕ ಕಂಡ ಪತಿ ಕೆಹರ್‌ ಸಿಂಗ್‌ ಕಣ್ಣಿನಲ್ಲಿ ನೀರು ತುಂಬಿ ಕೊರಳು ಬಿಗಿದು ಹೋಗಿತ್ತು. ತಾನೇನು ಮಾತನಾಡಲಾರದೆ ಕೇವಲ ತನ್ನ ಪತ್ನಿಯ ತಲೆಯನ್ನು ಸವರಿ ಅಪ್ಪಿಕೊಂಡು ಮುದ್ದು ಮಾಡಿದರು. ತನ್ನ ಪತಿಯನ್ನು ಕಂಡ ದರ್ಶಿನಿ ಕೂಡ ಖುಷಿಯಿಂದಲೇ ತನ್ನ ಊರಿಗೆ ಹೊರಟಿದ್ದರು. ಅನಾಥಾಶ್ರಮದಲ್ಲಿದ್ದ ಇತರ ವೃದ್ಧೆಯರು, ಮಹಿಳೆಯರು ದರ್ಶಿನಿಗೆ ಕೈಬೀಸಿ ಹೋಗಿ ಬಾ ಚೆನ್ನಾಗಿರು ಎಂದು ಹಾರೈಸುತ್ತಿದ್ದ ದೃಶ್ಯವೂ ಹೃದಯಸ್ಪರ್ಶಿಯಾಗಿತ್ತು. ಇದನ್ನೂ ಓದಿ: ಪಾದಯಾತ್ರೆಯನ್ನು ಬುಲೆಟ್ ಪ್ರೂಫ್ ವಾಹನದಲ್ಲಿ ಮಾಡೋಕ್ಕಾಗಲ್ಲ: ನಿಯಮ ಉಲ್ಲಂಘನೆ ಆರೋಪಕ್ಕೆ ರಾಗಾ ತಿರುಗೇಟು

    Live Tv
    [brid partner=56869869 player=32851 video=960834 autoplay=true]