Tag: Wife

  • ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಪತ್ನಿ ವಿಯೋಗ

    ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಪತ್ನಿ ವಿಯೋಗ

    ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅವರ ಪತ್ನಿ ನಿಧನರಾಗಿದ್ದಾರೆ.

    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಾಲಿ ಶಾಸಕ ಕೆ. ಆರ್ ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ(69) ಇಂದು (ಶುಕ್ರವಾರ) ಮಧ್ಯಾಹ್ನ ಮೃತಪಟ್ಟಿದ್ದಾರೆ.

    ವಿಜಯಮ್ಮ (Vijayamma) ಅವರು ಕಳೆದ 2 ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಎರಡು ದಿನಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

    ಮೃತರು ಪತಿ, ಓರ್ವ ಮಗಳು, ಮಗ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಇದನ್ನೂ ಓದಿ: ಗುಂಡಿಟ್ಟು ಕೊಲ್ತೀನಿ, ಕಸ ಗುಡಿಸ್ತೀನಿ ಎಂದವನು ಎಲ್ಲಿ ಹೋದ?- ಅಶ್ವಥ್ ವಿರುದ್ಧ ಡಿಕೆಶಿ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಂದ ಶಾಲೆ ಶಿಕ್ಷಕ

    ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಂದ ಶಾಲೆ ಶಿಕ್ಷಕ

    ಕಲಬುರಗಿ: ಶೀಲವನ್ನು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ (Kalaburagi) ನಗರದ ಅಂಬಿಕಾ ಕಾಲೋನಿಯಲ್ಲಿ ನಡೆದಿದೆ.

    ನಗರದ ಅಂಬಿಕಾ ಕಾಲೋನಿಯ ಫರೀದಾ ಬೇಗಂ (39) ಪತಿ ಎಜಾಜ್ ಅಹ್ಮದ್‌ನಿಂದ ಕೊಲೆಯಾದ ದುರ್ದೈವಿ. ಕಳೆದ 13 ವರ್ಷದ ಹಿಂದೆ ಈಕೆಯ ಜೊತೆಗೆ ವಿವಾಹ ಆಗಿದ್ದ ಅಹ್ಮದ್‌, ರಾತ್ರಿ ವೇಳೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ – ನಾಲ್ವರು ಸ್ಥಳದಲ್ಲೇ ಸಾವು

    ಅನೈತಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

    ಪತಿ-ಪತ್ನಿ ಇಬ್ಬರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಿತ್ಯ ಶಾಲೆಗೆ ಹೋಗದಂತೆ ಪತಿ ಪೀಡಿಸುತ್ತಿದ್ದ ಎಂದು ಮಾಹಿತಿ ಬಂದಿದ್ದು, ಸ್ಟೇಶನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲವ್ವರ್ ಹತ್ಯೆಗೂ ಮುನ್ನ ಗೆಳೆಯರ ಜೊತೆ ಎಂಗೇಜ್ಮೆಂಟ್ ಪಾರ್ಟಿ ಮಾಡಿದ್ದ ಕೊಲೆಗಡುಕ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅನೈತಿಕ ಸಂಬಂಧಕ್ಕೆ ಅಡ್ಡಿ – ಪತಿಯನ್ನೇ ಕೊಲೆಗೈದ ಪತ್ನಿ

    ಅನೈತಿಕ ಸಂಬಂಧಕ್ಕೆ ಅಡ್ಡಿ – ಪತಿಯನ್ನೇ ಕೊಲೆಗೈದ ಪತ್ನಿ

    ಮೈಸೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ (Husband) ಪತ್ನಿ (Wife) ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆ ಮಾಡಿದ ಘಟನೆ ಮೈಸೂರು (Mysuru) ಜಿಲ್ಲೆಯಲ್ಲಿ ನಡೆದಿದೆ.

    ಮಂಜು ಮೃತ ವ್ಯಕ್ತಿ. ಮಂಜುಗೆ 12 ವರ್ಷದ ಹಿಂದೆ ಲಿಖಿತಾ ಎನ್ನುವವಳ ಜೊತೆ ಮದುವೆ ಆಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಳ ಮಧ್ಯಮ ಕುಟುಂಬವಾದರೂ ಮಂಜು, ತನ್ನ ಕುಟುಂಬವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ, ಐದಾರು ವರ್ಷಗಳ ಹಿಂದೆ ಮಂಜು ಪತ್ನಿ ಲಿಖಿತಾಗೆ ಅನೈತಿಕ ಸಂಬಂಧ ಶುರುವಾಯಿತು. ಲಿಖಿತಾಳ ಊರಾದ ಬೋಗಾದಿಯಲ್ಲಿನ ಯುವಕನ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡು ಅವನ ಜೊತೆ ಮನೆ ಬಿಟ್ಟು ಹೋಗಿದ್ದಳು.

    ಪ್ರಿಯಕರನ ಜೊತೆ ಓಡಿ ಹೋಗಿದ್ದ ಪತ್ನಿಯನ್ನು ದೊಡ್ಡ ಮನಸ್ಸು ಮಾಡಿ ಮಂಜು ಕ್ಷಮಿಸಿದ್ದ. ಆಗ ಊರಿನವರು ಹಾಗೂ ಸಂಬಂಧಿಗಳು ಲಿಖಿತಾಗೆ ಬುದ್ಧಿ ಹೇಳಿ ಸಂಸಾರ ಸರಿ ಮಾಡಿದ್ದರು. ಆದರೂ ಈ ಬಗ್ಗೆ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಲೇ ಇತ್ತು. ಇದನ್ನೂ ಓದಿ: ನನ್ನ ಹತ್ಯೆಗೆ ನೀವೇ ಕೋವಿ ಹಿಡಿದುಕೊಂಡು ಬನ್ನಿ – ಅಶ್ವಥ್‌ ನಾರಾಯಣ್‌ಗೆ ಸಿದ್ದು ತಿರುಗೇಟು

    ತನ್ನ ಪತ್ನಿಯ ನಡವಳಿಕೆ ಬಗ್ಗೆ ಮಂಜು ಆಗಾಗ ಪ್ರಶ್ನೆ ಮಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ಲಿಖಿತಾ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದಿದ್ದಾಳೆ. ರಾತ್ರೋರಾತ್ರಿ ಪ್ರಿಯಕರನ ಜೊತೆ ಸೇರಿ ಲಿಖಿತಾ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಸದ್ಯ ವಿಜಯನಗರ ಪೊಲೀಸರು ಆರೋಪಿ ಲಿಖಿತಾಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕ್ಬೇಕು: ಅಶ್ವಥ್ ನಾರಾಯಣ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಹಿಳಾ ಸಂಘಟನೆ ಮೊರೆ ಹೋದ ಮಹಿಳೆಗೆ ಶಾಕ್- ನೆರವಿಗೆ ಬಂದವಳೇ ಸಂತ್ರಸ್ತೆ ಪತಿ ಜೊತೆ ಮದ್ವೆ!

    ಮಹಿಳಾ ಸಂಘಟನೆ ಮೊರೆ ಹೋದ ಮಹಿಳೆಗೆ ಶಾಕ್- ನೆರವಿಗೆ ಬಂದವಳೇ ಸಂತ್ರಸ್ತೆ ಪತಿ ಜೊತೆ ಮದ್ವೆ!

    ಬೆಳಗಾವಿ: ಆತ ಸರ್ಕಾರಿ ನೌಕರಿಯಲ್ಲಿದ್ರೂ ಕೆಲವೇ ವರ್ಷಗಳಲ್ಲಿ ನಿವೃತ್ತಿ ಹಂತಕ್ಕೂ ಬಂದಿದ್ದ. ಹಾಗೆ 23 ವರ್ಷಗಳ ಹಿಂದೆ ಮದುವೆಯಾಗಿರುವ ಆತನಿಗೆ ಮದುವೆಗೆ ಬಂದ ಮೂವರು ಮಕ್ಕಳಿದ್ದಾರೆ. ಆದರೆ ಮದುವೆಯಾದ ದಿನದಿಂದಲೂ ಈತನ ಕಿರುಕುಳ (Husband Torture) ಸಹಿಸಿಕೊಂಡಿದ್ದ ಪತ್ನಿ ಕೊನೆಗೂ ಕಾಟ ತಾಳಲಾರದೇ ಮಹಿಳಾ ಸಂಘಟನೆಗೆ ಹೋಗಿ ನ್ಯಾಯ ಕೇಳಿದ್ದಳು. ಗಂಡನಿಗೆ ವಾರ್ನ್ ಮಾಡುವಂತೆ ಮನವಿ ಮಾಡಿಕೊಂಡಿದ್ದಳು. ನ್ಯಾಯ ಬಗೆಹರಿಸುವುದಾಗಿ ಹೇಳಿದ್ದ ಮಹಿಳೆಯೇ ಇದೀಗ ದೊಡ್ಡ ಶಾಕ್ ನೀಡಿ ದೋಖಾ ಮಾಡಿದ್ದಾಳೆ.

    ಬೆಳಗಾವಿ (Belagavi) ಯ ಹನುಮಾನ್ ನಗರದ ನಿವಾಸಿ ತಬ್ಸುಮ್, ಕಳೆದ 23 ವರ್ಷದ ಹಿಂದೆ ಕೇಂದ್ರಿಯ ಅಬಕಾರಿ ಮತ್ತು ಕಸ್ಟಮ್ಸ್ ಆಯುಕ್ತರ ಕಚೇರಿಯಲ್ಲಿ ಇನ್ಸ್‌ ಪೆಕ್ಟರ್ ಆಗಿರುವ ಬೆಳಗಾವಿಯ ಮೊಹಮ್ಮದ್ ಆಸೀಫ್ ಇನಾಮದಾರ ಎಂಬಾತನನ್ನ ಮದುವೆ ಆಗಿದ್ದರು. ಈ ದಂಪತಿಗೆ 21, 19, 17 ವರ್ಷದ ಮೂವರು ಗಂಡು ಮಕ್ಕಳಿದ್ದಾರೆ. ಆದರೆ ಮಕ್ಕಳು ಮದುವೆ ವಯಸ್ಸಿಗೆ ಬಂದ್ರೂ ಹೆಂಡತಿ ಜೊತೆಗೆ ಜಗಳ ಮಾಡುವುದನ್ನ ಆಸೀಫ್ ಬಿಟ್ಟಿರಲಿಲ್ಲ. ಪತ್ನಿಗೆ ನಿರಂತರವಾಗಿ ಕಿರುಕುಳ ಕೊಡ್ತಾನೆ ಇದ್ದ.‌ ಇದನ್ನೂ ಓದಿ: ಗೆಳತಿ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ – ಕೆಲವೇ ಗಂಟೆಯಲ್ಲೇ ಬೇರೊಬ್ಬಳನ್ನು ಮದುವೆಯಾದ

    ಪತಿ ಕಿರುಕುಳ ತಾಳಲಾರದೇ ತಬ್ಸುಮ್ ಮಹಿಳಾ ಸಂಘಟನೆಯ ನಾಯಕಿ ಸೀಮಾ ಇನಾಮದಾರ್ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಹೀಗಾಗಿ ಆಸೀಫ್ ನಂಬರ್ ಪಡೆದ ಸೀಮಾ ಮೊದಲು ಆತನಿಗೆ ಬೆದರಿಕೆ ಹಾಕಿದ್ದು, ಬಳಿಕ ಆತನೊಂದಿಗೆ ಸಲುಗೆಯಿಂದ ಮಾತಾಡಿ ತನ್ನ ಬುಟ್ಟಿಗೆ ಬೀಳಿಸಿಕೊಂಡಿದ್ದಾಳೆ. ಸಾಲದ್ದು ಅಂತ ಒಂದು ವಾರದ ಹಿಂದಷ್ಟೇ ಹೆಂಡತಿ ತಬ್ಸುಮ್‍ಗೆ ಗೊತ್ತಿಲ್ಲದಂತೆ ಆಸೀಫ್‍ನನ್ನ ಮದುವೆಯಾಗುವ ಮೂಲಕ ನಂಬಿದವರ ಕುತ್ತಿಗೆ ಕುಯ್ದಿದ್ದಾಳೆ. ಇದಾದ ನಾಲ್ಕು ದಿನದ ನಂತರ ಆಸೀಫ್ ತನ್ನ ಮಗನಿಗೆ ನಾನು ಮದುವೆಯಾಗಿದ್ದೇನೆ ಅಂತಾ ಫೋಟೋ ಕಳಿಸಿದ್ದಾನೆ. ಈ ವಿಚಾರ ತಬ್ಸುಮ್‍ಗೆ ಗೊತ್ತಾಗಿ ಗಂಡನಿಗೆ ಫೋನ್ ಮಾಡಿ ಬೈಯ್ದಿದ್ದಾಳೆ. ಬಳಿಕ ಮನೆಗೆ ಬಂದ ಆಸೀಫ್ ಹೆಂಡತಿ ತಬ್ಸುಮ್ ಮೇಲೆ ಹಲ್ಲೆ ಮಾಡಿ ಬ್ಲೇಡ್‍ನಿಂದ ಗಾಯ ಮಾಡಿ ಹೋಗಿದ್ದಾನೆ.

    ಸದ್ಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಬ್ಸುಮ್ ತನ್ನ ಪರಿಸ್ಥಿತಿ ನೆನೆದು ಕಣ್ಣೀರಿಡುತ್ತಿದ್ದಾಳೆ. ನ್ಯಾಯಕೊಡಿಸ್ತೀನಿ ಅಂತ ಹೇಳಿ ಅನ್ಯಾಯ ಮಾಡಿದ ಸೀಮಾ ವಿರುದ್ಧ ಆಕ್ರೋಶ ಹೊರ ಹಾಕ್ತಾ ಇಬ್ಬರಿಗೂ ತಕ್ಕ ಶಾಸ್ತಿ ಆಗಬೇಕು ಅಂತಾ ಒತ್ತಾಯಿಸಿದ್ದಾಳೆ. ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‍ನಲ್ಲಿದ್ದ ಆಸೀಫ್ ಹಾಗೂ ಸೀಮಾರನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಗಂಡನನ್ನು ಸರಿ ದಾರಿಗೆ ತರಲು ಮಹಿಳಾ ಸಂಘಟನೆ ಬಳಿ ಹೋದ ಮಹಿಳೆಗೆ ದಾರಿಯೇ ಸಂಪೂರ್ಣ ಕತ್ತಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿ ಮೇಲೆ ಡೌಟ್- ತನ್ನ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ತಂದೆ

    ಪತ್ನಿ ಮೇಲೆ ಡೌಟ್- ತನ್ನ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ತಂದೆ

    ರಾಯಚೂರು: ಪತ್ನಿಯ ಅನೈತಿಕ ಸಂಬಂಧ (Illicit Relationship) ಆರೋಪ ಹಿನ್ನೆಲೆ ತಂದೆಯೇ ತನ್ನ ಎರಡು ಮಕ್ಕಳನ್ನ ಕೊಂದಿರುವ ಘಟನೆ ರಾಯಚೂರಿನ ದೇವದುರ್ಗದ ಜಕ್ಲೇರದೊಡ್ಡಿಯಲ್ಲಿ ನಡೆದಿದೆ.

    5 ವರ್ಷದ ಶಿವರಾಜ್ ಮತ್ತು 3 ವರ್ಷದ ರಾಘವೇಂದ್ರ ತಂದೆಯಿಂದಲೇ ಕೊಲೆಯಾದ ಮಕ್ಕಳು. ಆರೋಪಿ ತಂದೆ ಲಿಂಗಣ್ಣನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    ಪತ್ನಿಯೊಂದಿಗೆ ಜಗಳವಾಡಿ ಪತ್ನಿ ತವರು ಮನೆಯಿಂದ ಮಕ್ಕಳನ್ನ ಕರೆದುಕೊಂಡು ಬಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ನಿತ್ಯ ಜಗಳವಾಡುತ್ತಿದ್ದ ಹಿನ್ನೆಲೆ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಶನಿವಾರ ಸಹ ಪತ್ನಿಯೊಂದಿಗೆ ಜಗಳವಾಡಿ ಮಕ್ಕಳನ್ನ ಮನೆಗೆ ಕರೆತಂದು ಕೊಲೆ ಮಾಡಿದ್ದಾನೆ.

    ಅಕ್ಕಪಕ್ಕದ ಮನೆಯವರು ಅನುಮಾನದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನ ಹಿಡಿದುಕೊಟ್ಟಿದ್ದಾರೆ. ದೇವದುರ್ಗ ಪೊಲೀಸ್ ಠಾಣೆ (Devadurga Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಿಯಾರಾ ಅಡ್ವಾಣಿಗೆ ಹೋಲಿಸಿದ ಪತಿಗೆ ಊಟ ನೀಡಲು ನಿರಾಕರಿಸಿದ ಪತ್ನಿ

    ಕಿಯಾರಾ ಅಡ್ವಾಣಿಗೆ ಹೋಲಿಸಿದ ಪತಿಗೆ ಊಟ ನೀಡಲು ನಿರಾಕರಿಸಿದ ಪತ್ನಿ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಖುಷಿ ಪಡಿಸಲು ಹೋಗಿ ಪಜೀತಿಗೆ ಒಳಗಾದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿರುವ ವೀಡಿಯೋದಲ್ಲಿ ಪ್ರೀತಿಯಿಂದ ವ್ಯಕ್ತಿಯು ತನ್ನ ಪತ್ನಿಯನ್ನು ಕಿಯಾರಾ ಅಡ್ವಾನಿಗೆ (Kiara Advani) ಹೋಲಿಸುತ್ತಾರೆ. ಇದಕ್ಕೆ ಪತ್ನಿ ಕೋಪಗೊಂಡು ಊಟ ನಿರಾಕರಿಸಿದ್ದಾಳೆ.

    ಈ ಸಂಪೂರ್ಣ ವೀಡಿಯೋವನ್ನು ಪ್ರವೀಣ್ ಎಂಬ ಟ್ವಿಟ್ಟರ್ ಬಳಕೆದಾರ ಹಂಚಿಕೊಂಡಿದ್ದಾನೆ. 52 ಸೆಕೆಂಡುಗಳ ವೀಡಿಯೋ ಇದಾಗಿದ್ದು, ಕೋಪಗೊಂಡ ಪತ್ನಿ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುತ್ತಾಳೆ.

    ಕೋಪಬೇಡ, ನನ್ನನ್ನು ಕ್ಷಮಿಸು, ಅವಳು ನಟಿ. ನಾನು ಅವಳನ್ನು ಮದುವೆ ಆಗುತ್ತೇನೆ ಎಂದು ನೀನು ಕೋಪಗೊಳ್ಳುತ್ತೀದ್ದೀಯಾ ಎಂದು ಆತ ಕೇಳುತ್ತಾನೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಸಿಎಂ- ಹೆಚ್‍ಡಿಕೆ ಹೊಸ ಬಾಂಬ್

    ಅದಕ್ಕೆ ಆತನ ಪತ್ನಿ ಪ್ರತಿಕ್ರಿಯಿಸಿ, ಹೋಗಿ ಅವಳನ್ನೇ ಮದುವೆಯಾಗು, ನೀನು ಇಲ್ಲಿ ಉಳಿಯಬೇಕಾಗಿಲ್ಲ ಎಂದು ಉತ್ತರಿಸುತ್ತಾಳೆ. ಅದಕ್ಕೆ ಪತಿ, ಹೌದು, ಅವಳು ನನ್ನನ್ನು ಮದುವೆಯಾಗಲು ಸಾಯುತ್ತಿದ್ದಾಳೆ ಎಂದು ವ್ಯಂಗ್ಯವಾಡುತ್ತಾನೆ. ಅದಕ್ಕೆ ಪತ್ನಿ, ಇಲ್ಲ, ಇಲ್ಲ, ಅವಳು ನಿನ್ನನ್ನು ಮದುವೆಯಾಗುತ್ತಾಳೆ. ಎಲ್ಲಾ ಹುಡುಗಿಯರು ನಿನ್ನನ್ನು ಮದುವೆಯಾಗಲು ಸಾಯುತ್ತಿದ್ದಾರೆ ಎಂದು ಉತ್ತರಿಸುತ್ತಾಳೆ.

    ಆಗ ಆತ, ನಟಿಯಾಗಿ ಆಕೆಯನ್ನು ಇಷ್ಟಪಡುತ್ತೇನೆ. ನಾನು ಯಾವುದೇ ನಟಿಯನ್ನು ಇಷ್ಟಪಡಬಾರದೇ ಎಂದು ಕೇಳುತ್ತಾನೆ. ಅದಕ್ಕೆ ಪತ್ನಿಯು, ಹಾಗಾದರೆ ನನ್ನನ್ನು ಕಿಯಾರಾ ಅಡ್ವಾಣಿ ಜೊತೆಗೆ ಯಾಕೆ ಹೋಲಿಸಿದ್ದೀರಿ, ನಾನು ನಟಿಯೇ ಎಂದು ಎಂದು ವ್ಯಂಗ್ಯವಾಡುತ್ತಾಳೆ.

    ಅವಳು ಚೆನ್ನಾಗಿ ನಟಿಸುತ್ತಾಳೆ ಎಂದು ತನ್ನ ಹೇಳಿಕೆಗೆ ಸಮರ್ಥನೆಯನ್ನು ನೀಡಲು ಬಂದ ಪತಿಗೆ ಪತ್ನಿಯು ಇಲ್ಲಿಂದ ಹೊರಡಿ, ಇಂದು ನಿಮಗೆ ಊಟ ಸಿಗುವುದಿಲ್ಲ ಎಂದು ಹೇಳುತ್ತಾಳೆ. ಇದನ್ನೂ ಓದಿ: ಚೀನಾದೊಂದಿಗೆ ಲಿಂಕ್ – 200ಕ್ಕೂ ಅಧಿಕ ಸಾಲ, ಬೆಟ್ಟಿಂಗ್ ಆ್ಯಪ್‌ಗಳನ್ನು ಬ್ಯಾನ್ ಮಾಡಲಿದೆ ಭಾರತ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಅನುಮಾನ ಬರದಂತೆ ತರಕಾರಿ ಬೆಳೆದ!

    ಪತ್ನಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಅನುಮಾನ ಬರದಂತೆ ತರಕಾರಿ ಬೆಳೆದ!

    ಲಕ್ನೋ: ವ್ಯಕ್ತಿಯೊಬ್ಬ ಹೊಲವೊಂದರಲ್ಲಿ ಪತ್ನಿಯನ್ನು (Wife) ಕೊಂದು ಆಕೆಯ ಶವವನ್ನು ಹೂತಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ನಡೆದಿದೆ.

    ದಿನೇಶ್ ಬಂಧಿತ ಆರೋಪಿ. ದಿನೇಶ್ ತರಕಾರಿ ಬೆಳೆಗಾರನಾಗಿದ್ದ. ದಿನೇಶ್ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ದಿನೇಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಒಂದು ದಿನ ಮನೆಯಲ್ಲಿಟ್ಟು ಹೊಲದಲ್ಲಿ ಹೂತಿದ್ದಾನೆ.

    ಅಷ್ಟೇ ಅಲ್ಲದೇ ಶವ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನು (Salt) ದೇಹದ ಮೇಲೆ ಹಾಕಿದ್ದ. ಅದಾದ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು, ಶವವನ್ನು ಹೂತು ಹಾಕಿರುವುದು ಯಾರಿಗೂ ಅನುಮಾನ ಬರಬಾರದೆಂದು ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿ ತರಕಾರಿಗಳನ್ನು (Vegetable) ಬೆಳೆದಿದ್ದ.

    ಅದಾದ ಕೆಲ ದಿನಗಳ ನಂತರ ದಿನೇಶ್ ತನ್ನ ಪತ್ನಿ ಕಾಣೆ ಆಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ದಿನೇಶ್ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೇವರ ದರ್ಶನ ಪಡೆದುಕೊಂಡ ಮರಳುವಾಗ ಕಂಟೇನರ್, ಕ್ರೂಸರ್ ವಾಹನ ಅಪಘಾತ- ಮಹಿಳೆ ಸಾವು

    ಘಟನೆಗೆ ಸಂಬಂಧಿಸಿ ಪೊಲೀಸರು ದಿನೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಹಿಟ್ & ರನ್ ಕೇಸ್ – ಕಾರು ಡಿಕ್ಕಿ, ಮೇಲಿಂದ ಹಾರಿದ ಯುವತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವರ ಮಾತು ಕೇಳಿ ಹೆಂಡತಿ ಬಿಟ್ಟ ಗಂಡ – ನ್ಯಾಯಾಲಯದಲ್ಲಿ ಮತ್ತೆ ಒಂದಾದರು

    ದೇವರ ಮಾತು ಕೇಳಿ ಹೆಂಡತಿ ಬಿಟ್ಟ ಗಂಡ – ನ್ಯಾಯಾಲಯದಲ್ಲಿ ಮತ್ತೆ ಒಂದಾದರು

    ತುಮಕೂರು: ಮೂಢನಂಬಿಕೆಗೆ ಒಳಗಾಗಿ ಬೇರೆಯಾಗಿದ್ದ ಜೋಡಿಯನ್ನು (Couple) ನ್ಯಾಯಾಧೀಶರು ಒಂದು ಮಾಡಿದ ಘಟನೆ ತುಮಕೂರು (Tumakuru) ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

    ದಸೂಡಿ ಸಮೀಪದ ಮರೆನಾಡು ಗ್ರಾಮದ ಪಾರ್ವತಮ್ಮ, ಹಂದನಕೆರೆ ಹೋಬಳಿಯ ಮಂಜುನಾಥ್ ದಂಪತಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪನವರ ಮುಂದೆ ತಮ್ಮ ವಿಚ್ಛೇದನಾ (Divorce) ಅರ್ಜಿಯ ವಿಚಾರಣೆಗೆ ಹಾಜರಾಗಿದ್ದರು. ಮೂಢನಂಬಿಕೆಗೆ ಒಳಗಾಗಿ ಹೆಂಡತಿಯನ್ನು ಬಿಡುವಂತೆ ದೇವರು ಹೇಳಿದ್ದಾರೆ ಎಂದು ಮಂಜುನಾಥ್ ಪತ್ನಿ ಪಾರ್ವತಮ್ಮಗೆ ವಿಚ್ಛೇದನ ನೀಡಲು ಮುಂದಾದ ಬಗ್ಗೆ ನ್ಯಾಯಾಧೀಶರ ಬಳಿ ಹೇಳಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ದಂಪತಿಗೆ ಚಿಕ್ಕನಾಯಕನಹಳ್ಳಿ ನ್ಯಾಯಾಲಯದ ನ್ಯಾಯಾಧೀಶರು ತಿಳುವಳಿಕೆ ಹೇಳಿದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆಂಡತಿ, ಮಕ್ಕಳ ಮೇಲೆ ರಾಕ್ಷಸ ಕೃತ್ಯ – 6ರ ಬಾಲಕ ಬಲಿ

    ಈ ವೇಳೆ ದಂಪತಿ ನ್ಯಾಯಾಧೀಶರು ಹೇಳಿದ ಬುದ್ಧಿ ಮಾತು ಕೇಳಿ ಒಂದಾಗಿದ್ದಾರೆ. ಮನಸ್ತಾಪವನ್ನು ಮರೆತು ನ್ಯಾಯಾಧೀಶರ ಮಾತಿಗೆ ಬೆಲೆಕೊಟ್ಟು ಮತ್ತೆ ಒಂದಾದ ಜೋಡಿಗೆ ನ್ಯಾಯಾಲಯದಲ್ಲಿ ಹಾರ ಬದಲಾಯಿಸಿ ಶುಭ ಹಾರೈಸಲಾಯಿತು. ಇದನ್ನೂ ಓದಿ: ಬೆಂಗಳೂರಿನ ಗೋವಿಂದರಾಜು ಮೃತದೇಹ ಚಾರ್ಮಾಡಿ ಘಾಟಿಯಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿ ಮುಖಕ್ಕೆ ಆ್ಯಸಿಡ್ ಎರಚಿದ ಪತ್ನಿ!

    ತಡವಾಗಿ ಮನೆಗೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿ ಮುಖಕ್ಕೆ ಆ್ಯಸಿಡ್ ಎರಚಿದ ಪತ್ನಿ!

    ಲಕ್ನೋ: ಮನೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ಪತ್ನಿಯೊಬ್ಬಳು ಪತಿ ಮುಖದ ಮೇಲೆ ಆ್ಯಸಿಡ್ ಎರಚಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದ ಕೂಪರ್ ಗಂಜ್ ಪ್ರದೇಶದಲ್ಲಿ ನಡೆದಿದೆ.

    ಆ್ಯಸಿಡ್ ದಾಳಿ (Acid Attack) ಗೆ ಒಳಗಾದ ವ್ಯಕ್ತಿಯನ್ನು ಡಬ್ಬು ಎಂದು ಗುರುತಿಸಲಾಗಿದ್ದು, ಉರ್ಸಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಒಡಿಶಾ ಆರೋಗ್ಯ ಸಚಿವರ ಹತ್ಯೆ ಕೇಸ್ – ASIಗೆ ಇತ್ತು Bipolar Disorder ಮಾನಸಿಕ ಕಾಯಿಲೆ

    ಡಬ್ಬು ತನ್ನ ಪತ್ನಿ (Wife) ಜೊತೆ ಮನೆಗೆ ಬರಲು ತಡವಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅಲ್ಲದೆ ಪತಿಯ ಮಾತಿನಿಂದ ಸಿಟ್ಟಿಗೆದ್ದ ಪತ್ನಿ ಆ್ಯಸಿಡ್ ಬಾಟ್ಲಿ ತೆಗೆದುಕೊಂಡು ಮುಚ್ಚಳ ತೆಗೆದು ಪತಿಯ ಮುಖಕ್ಕೆ ಎರಚಿದ್ದಾಳೆ ಎಂದು ಆತ ನಡೆದ ಘಟನೆಯನ್ನು ವಿವರಿಸಿದ್ದಾನೆ.

    ಪ್ರಕರಣ ಸಂಬಂಧ ಪೊಲೀಸರು ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗಳ ಎದುರೇ ಪತ್ನಿಯನ್ನು ಕೊಂದ ಪತಿ

    ಮಗಳ ಎದುರೇ ಪತ್ನಿಯನ್ನು ಕೊಂದ ಪತಿ

    ಮಂಡ್ಯ: ಕುಡಿದ ಮತ್ತಿನಲ್ಲಿ ಮಗಳ (Daughter) ಕಣ್ಣೆದುರೇ ತಾಯಿಯನ್ನು (Mother) ತಂದೆ (Father) ಕೊಲೆ ಮಾಡಿರುವ ದಾರುಣ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಜರುಗಿದೆ.

    ಮೃತ ಮಹಿಳೆಯನ್ನು ಅರಳಕುಪ್ಪೆ ಗ್ರಾಮದ ಶೋಭಾ (43) ಗುರುತಿಸಲಾಗಿದೆ. ಮನೋಹರ್ (48) ಪತ್ನಿಯನ್ನೇ (Wife) ಕೊಂದ ಪಾಪಿ ಪತಿಯಾಗಿದ್ದಾನೆ(Husband). 23 ವರ್ಷಗಳ ಹಿಂದೆ ಒಂದೇ ಗ್ರಾಮದ ಶೋಭಾ ಹಾಗೂ ಮನೋಹರ್ ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದರು. ಮನೋಹರ್ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನ ರೀತಿ ಓಡಾಡಿಕೊಂಡಿದ್ದ. ಇಬ್ಬರು ಮಕ್ಕಳಿದ್ದರೂ, ಬೇಜವಾಬ್ದಾರಿಯಿಂದ ಕಂಠಪೂರ್ತಿ ಕುಡಿದು ಪ್ರತಿನಿತ್ಯ ಪತ್ನಿ ಜೊತೆ ಮನೋಹರ್ ಗಲಾಟೆ‌ ಮಾಡುತ್ತಿದ್ದ.

    ಹೀಗೆ ಮಂಗಳವಾರವೂ ಬೈಕ್ ಸಾಲದ ವಿಚಾರಕ್ಕೆ ಮನೆಯಲ್ಲಿ ಕಿರಿಕ್ ಆಗಿದೆ. ಮಗನಿಗೆ ಸಾಲದ ಕಂತಿನಲ್ಲಿ ಶೋಭಾ ಬೈಕ್ ಕೊಡಿಸಿದ್ದರು. ಕಳೆದ 3 ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಮನೋಹರ್‌ಗೆ ಕರೆ ಮಾಡಿ ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿಯವರು ಕೇಳಿದ್ದರು. ಅಷ್ಟೇ ಅಲ್ಲದೆ ಮನೆ ಬಳಿಗೆ ಬಂದು ಹಣ ಕಟ್ಟುವಂತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಒತ್ತಡ ಹಾಕಿದ್ದರು. ಈ ವಿಚಾರಕ್ಕೆ ಕುಪಿತಗೊಂಡ ಮನೋಹರ್‌ನಿಂದ ಜಗಳ ಪ್ರಾರಂಭವಾಗಿದ್ದು, ಕುಡಿದ ಮತ್ತಿನಲ್ಲಿ ಪತ್ನಿಗೆ ಮನಬಂದಂತೆ ಬೈದು ಗಲಾಟೆ ಮಾಡಿದ್ದ. ಪರಸ್ಪರ ಬೈದಾಟದಿಂದ ಪತಿ, ಪತ್ನಿಯರ ಜಗಳ ತಾರಕಕ್ಕೆ ಏರಿದೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಮನೋಹರ್ ಪತ್ನಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಕುಡುಗೋಲಿನಿಂದ ಮಗಳ ಕಣ್ಣೆದುರೇ ಶೋಭಾಳ ಮೇಲೆ ಮನೋಹರ್ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ರವಿ ಶಂಕರ್ ಗುರೂಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ತುರ್ತು ಭೂಸ್ಪರ್ಶ

    ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಶೋಭಾ ಸಹಾಯಕ್ಕೆ ಸ್ಥಳೀಯರು ಬಂದಿಲ್ಲ, ಮಗಳು ಅನುಷಾ ಕೇಳಿಕೊಂಡರೂ ಯಾರ ಸಹಾಯವೂ ಸಿಗಲಿಲ್ಲ. ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಕೂಡ ಬಾರದ ಕಾರಣ ಶೋಭಾ ಸಾವನ್ನಪ್ಪಿದ್ದಾಳೆ. ಪತ್ನಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಮನೋಹರ್‌ನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ತಂದೆಗೆ ಕಠಿಣ ಶಿಕ್ಷೆ ನೀಡಿ, ಸಾಯೋವರೆಗೂ ಜೈಲಲ್ಲೇ ಕೊಳೆಯುವ ರೀತಿ ಮಾಡಬೇಕು ಎಂದು ಪುತ್ರಿ ಅನುಷಾ ಮನವಿ ಮಾಡಿದ್ದಾಳೆ. ಸದ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋಮುವಾದಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮಿಸ್ಟರ್ ಕುಮಾರಸ್ವಾಮಿ ಕಾರಣ – ಸಿದ್ದು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k