ಬೆಳಗಾವಿ: ಪತ್ನಿ ಕೊಲೆಗೈದ ಪತಿಯೊಬ್ಬ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸಾಲಾಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ರಾಮದುರ್ಗ (Ramadurga) ತಾಲೂಕಿನ ಸಾಲಾಪೂರ ಗ್ರಾಮದ ಜಾನವ್ವ ದ್ಯಾಮನ್ನವರ (50) ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ. ಮಾರಕಾಸ್ತ್ರದಿಂದ ಹೊಡೆದು ಪತ್ನಿ ಜಾನವ್ವರನ್ನ ಪತಿ ಬಸವಗೌಡ ಶಾಸಪ್ಪನವರ (55) ಕೊಲೆ ಮಾಡಿದ್ದಾನೆ.
ಪತ್ನಿ ಕೊಲೆಗೈದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಆಕೆಗೆ ಗಂಡನಿದ್ದರೂ ಮತ್ತೊಬ್ಬನ ಸಹವಾಸ ಮಾಡಿದ್ದಳು. ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಇದ್ದ ಮಹಿಳೆ (woman) ಒಂದು ಮಗುವನ್ನೂ ಮಾಡಿಕೊಂಡು ಸಂಸಾರ ಮಾಡಿಕೊಂಡಿದ್ದಳು. ಆದರೆ ಈ ವಿಚಾರ ತಿಳಿಯುತ್ತಲೇ ಮಹಿಳೆಯ ಪತಿ (Husband) ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಪತಿಯೇ ತನ್ನ ಪತ್ನಿಯ (Wife) ಕತ್ತು ಕುಯ್ದು ಕೊಲೆ (Murder) ಮಾಡಿರುವ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸರೈಪಾಳ್ಯದಲ್ಲಿ ನಡೆದಿದೆ. 32 ವರ್ಷದ ತಬ್ಸಂಬಿಯ ಕತ್ತು ಕೊಯ್ದು ಆರೋಪಿ ಶೇಕ್ ಸುಹೇಲ್ ಕೊಲೆ ಮಾಡಿದ್ದಾನೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಪ್ರಿಯಕರನ ಮನೆಯಲ್ಲಿದ್ದ ಪತ್ನಿಯ ಜೊತೆ ಜಗಳ ತೆಗೆದಿದ್ದ ಆರೋಪಿ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಆರೋಪಿ ಶೇಕ್ ಸುಹೇಲ್ ಮತ್ತು ತಬ್ಸಂಬಿ ಇಬ್ಬರೂ ಕೂಡ ಕೋಲ್ಕತ್ತಾ ಮೂಲದವರು. 14 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ 2013ರಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಎಂದು ಬಂದಿದ್ದರು. ಈ ವೇಳೆ ಬೆಂಗಳೂರಿನಲ್ಲಿದ್ದ ನದೀಮ್ ಜೊತೆ ತಬ್ಸಂಬಿಗೆ ಪರಿಚಯ ಆಗಿದ್ದು, ಇಬ್ಬರೂ ಸಂಬಂಧವನ್ನು ಶುರು ಮಾಡಿದ್ದರು. ಈ ವಿಚಾರ ತಿಳಿದಿದ್ದ ಸುಹೇಲ್ ಪತ್ನಿಯನ್ನು ಮತ್ತೆ ಕೋಲ್ಕತ್ತಾಗೆ ಕರೆದೊಯ್ದಿದ್ದ. ಇದನ್ನೂ ಓದಿ: ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ರೌಡಿ ಗ್ಯಾಂಗ್ ಅರೆಸ್ಟ್
ಆದರೆ ಗಂಡನ ಜೊತೆ ಇರಲಾರದೇ ಪ್ರಿಯಕರ ನದೀಮ್ ಮೇಲೆಯೇ ಮನಸ್ಸಿಟ್ಟಿದ್ದ ತಬ್ಸಂಬಿ 6 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪ್ರಿಯಕರನೊಂದಿಗೆ ವಾಸವಿದ್ದಳು. ಇಬ್ಬರಿಗೂ ಬಳಿಕ ಮಗುವಾಗಿದ್ದು, ಸರೈಪಾಳ್ಯದಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಮಗುವಿನ ವಿಚಾರ ಗೊತ್ತಾಗಿದ್ದೇ ತಡ ಬೆಂಗಳೂರಿಗೆ ಬಂದಿದ್ದ ಸುಹೇಲ್ ನದೀಮ್ ಇಲ್ಲದ ವೇಳೆ ಮನೆಗೆ ಬಂದು ತನ್ನ ಪತ್ನಿಯನ್ನು ಕೊಲೆಗೈದಿದ್ದಾನೆ.
ಸುಹೇಲ್ ಮನೆಯ ಕೋಣೆಯೊಳಗೆ ತಬ್ಸಂಬಿಯನ್ನು ಕೂಡಿ ಹಾಕಿ, ಜಗಳ ಶುರು ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಚಾಕುವಿನಿಂದ ಸುಹೇಲ್ ತಬ್ಸಂಬಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಅಲ್ಲೇ ಇದ್ದ 2 ವರ್ಷದ ಮಗುವಿಗೂ ಚಾಕುವಿನಿಂದ ಇರಿದು ಗಾಯ ಮಾಡಿದ್ದಾನೆ. ಇದನ್ನೂ ಓದಿ: ನಿಧಿಗಾಗಿ ಬಾಣಂತಿ ಸುಟ್ಟು ಕೊಲೆ?
ಈ ಬಗ್ಗೆ ಮಾಹಿತಿ ಬಂದಿದ್ದೇ ತಡ ಘಟನಾ ಸ್ಥಳಕ್ಕೆ ಹೋಗಿದ್ದ ಹೆಣ್ಣೂರು ಪೊಲೀಸರು ಆರೋಪಿ ಸುಹೇಲ್‌ನನ್ನು ಬಂಧಿಸಿದ್ದಾರೆ. ಸದ್ಯ ಗಾಯಗೊಂಡಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಲಕ್ನೋ: ಸಾರ್ವಜನಿಕ ಸ್ಥಳದಲ್ಲಿ (Public Place) ಮೈತುಂಬಾ ಬಟ್ಟೆ (Dress) ಧರಿಸಿಲ್ಲ ಎಂದು ಪತ್ನಿಯನ್ನೇ (Wife) ವ್ಯಕ್ತಿಯೊಬ್ಬ ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಸ್ವಪ್ನಾ ಮೃತ ಮಹಿಳೆ ಹಾಗೂ ಮೋಹಿತ್ ಕುಮಾರ್ ಬಂಧಿತ ವ್ಯಕ್ತಿ. ಬರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗಾಜಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸ್ವಪ್ನಾ ಸಾರ್ವಜನಿಕ ಸ್ಥಳದಲ್ಲಿ ಮೈತುಂಬಾ ಬಟ್ಟೆ ಧರಿಸದೇ ಬಂದಿದ್ದಕ್ಕೆ ಮೋಹಿತ್ ಕುಮಾರ್ ಸಿಟ್ಟಾಗಿದ್ದಾನೆ. ಅಷ್ಟೇ ಅಲ್ಲದೇ ಇದೇ ವಿಚಾರವಾಗಿ ಸ್ವಪ್ನಾ ಹಾಗೂ ಮೋಹಿತ್ ಕುಮಾರ್ ಮಧ್ಯೆ ಜಗಳ ನಡೆದಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಪತ್ನಿ ಕಿವಿಗೊಡುತ್ತಿಲ್ಲ ಎಂದು ಕೋಪಿಸಿಕೊಂಡಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಮೋಹಿತ್ ಕುಮಾರ್, ಸ್ವಪ್ನಾಳ ಕುತ್ತಿಗೆಯ ಮೇಲೆ ಚಾಕುವಿನಿಂದ ಸೀಳಿ ಹತ್ಯೆ ಮಾಡಿದ್ದಾನೆ.
ಘಟನೆ ಬಗ್ಗೆ ನೆರೆಹೊರೆಯವರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಸ್ವಪ್ನಾಳ ಮೃತದೇಹದ ಪಕ್ಕದಲ್ಲಿ ಮೋಹಿತ್ ಕುಮಾರ್ ಕುಳಿತಿರುವುದು ಕಂಡು ಬಂದಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ:ಭಗವಾನ್ ಶ್ರೀಕೃಷ್ಣನನ್ನೇ ವರಿಸಿದ ಎಲ್‍ಎಲ್‍ಬಿ ಪದವೀಧರೆ!
ಬೆಂಗಳೂರು: ಪತ್ನಿ ಬೆಳಗ್ಗೆ ತಡವಾಗಿ ಏಳುತ್ತಾಳೆ ಎಂದು ಪತಿಯೊಬ್ಬ (Husband) ತನ್ನ ಪತ್ನಿ (Wife) ವಿರುದ್ಧ ವಿಚಿತ್ರ ದೂರನ್ನು (Complaint) ನಿಡಿದ ಪ್ರಕರಣ ಬಸವನಗುಡಿ (Basavanagudi) ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿ ಆಯೇಷಾ ಕಳೆದ ಐದು ವರ್ಷಗಳಿಂದಲೂ ನನಗೆ ಹಿಂಸೆ ನೀಡುತಿದ್ದಾಳೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.
ರಾತ್ರಿ ಮಲಗಿದರೆ ಮಧ್ಯಾಹ್ನ 12:30ಕ್ಕೆ ಏಳುತ್ತಾಳೆ. ಮತ್ತೆ ಸಂಜೆ 5:30ಕ್ಕೆ ಮಲಗಿ ರಾತ್ರಿ 9:30ರ ತನಕ ನಿದ್ರೆ ಮಾಡುತ್ತಾಳೆ. ಅಡುಗೆ ಕೂಡ ಮಾಡುವುದಿಲ್ಲ. ನನ್ನ ತಾಯಿಗೆ ಅನಾರೋಗ್ಯವಿದೆ, ಆದರೂ ತಾಯಿಯೇ ಮನೆಯಲ್ಲಿ ಅಡುಗೆ ಮಾಡಬೇಕು. ಪ್ರಶ್ನೆ ಮಾಡಿದರೆ ಬೆದರಿಕೆ ಹಾಕುತ್ತಾಳೆ. ತವರು ಮನೆಯವರನ್ನು ಕರೆಸಿ ಗಲಾಟೆ ಮಾಡುತ್ತಾಳೆ ಎಂದು ಎಂದು ಪತಿ ಆರೋಪಿಸಿದ್ದಾನೆ. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನ- ಗ್ಯಾಂಗ್ ಲೀಡರ್ ಮೇಲೆ ಫೈರಿಂಗ್
ಹುಟ್ಟು ಹಬ್ಬಕ್ಕೆ 25 ಜನರನ್ನ ಮನೆಗೆ ಆಹ್ವಾನಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ. ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ. ತನ್ನ ಆಸ್ತಿ ಲಪಟಾಯಿಸಲು ಹಾಗೂ ರಾಯಲ್ ಲೈಫ್ ಅನುಭವಿಸಲು ನನ್ನನ್ನು ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಬೆಂಗಳೂರು: ತಂದೆ ಮನೆಯಿಂದ ಕಾಸ್ಟ್ಲಿ ವಾಚ್ ತರದಿದ್ದಕ್ಕೆ ಪತ್ನಿ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪವೊಂದು ಕೇಳಿಬಂದಿದೆ.
ಆರ್.ಟಿ.ನಗರದ ವಜೀರ್ ಅಹಮದ್ ಮೇಲೆ ಈ ಆರೋಪ ಕೇಳಿಬಂದಿದೆ. ರ್ಯಾಡೋ ವಾಚ್ (Rado Watch) ತಂದಿಲ್ಲ ಅಂತ ವಜೀರ್ ತನ್ನ ಪತ್ನಿ ಮುಖಕ್ಕೆ ಡೆಡ್ಲಿ ಪಂಚ್ ಕೊಟ್ಟಿದ್ದಾನೆ. ಪತ್ನಿ ಮುಖಕ್ಕೆ ಕೈಯ್ಯಿಂದ ಗುದ್ದಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ. ಇದನ್ನೂ ಓದಿ: ಅತ್ಯಾಚಾರ ಆರೋಪಿ ಮನೆಗೆ ಬುಲ್ಡೋಜರ್ ನುಗ್ಗಿಸಿದ ಲೇಡಿ ಪೊಲೀಸ್
ಕಳೆದ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯನ್ನು ವಜೀರ್ ಮದುವೆಯಾಗಿದ್ದನು. ದುಬೈನಲ್ಲಿ ಕೆಲಸಕ್ಕೆ ಸೇರುತ್ತೇನೆ ಎಂದು ವಂಚಿಸಿ ಮದುವೆಯಾಗಿದ್ದ. ಆದರೆ ಮದುವೆ ನಂತರ ಯಾವುದೇ ಕೆಲಸಕ್ಕೆ ಸೇರಿಕೊಂಡಿಲ್ಲ. ಈ ಮಧ್ಯೆ ಪತ್ನಿಗೆ ತಂದೆ ಮನೆಯಿಂದ ರ್ಯಾಡೋ ವಾಚ್, ಹಣ ಸೇರಿ ಪ್ರತಿ ಹಬ್ಬಕ್ಕೆ ವರದಕ್ಷಿಣೆ (Dowry) ಗೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ಪತಿ ನನಗೆ ತಿಳಿಯದೇ ನಾಲ್ಕೈದು ಮದುವೆ ಆಗಿದ್ದಾನೆ. ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸದ್ಯ ಸಂತ್ರಸ್ತೆಯಿಂದ ಪತಿ ವಜೀರ್ ಹಾಗೂ ಕುಟುಂಬಸ್ಥರ ವಿರುದ್ಧ ಆರ್.ಟಿ.ನಗರ ಠಾಣೆ (R T Nagar Police Station) ಯಲ್ಲಿ ದೂರು ದಾಖಲಾಗಿದೆ. ದೂರಿನನ್ವಯ ಐಪಿಸಿ 498ಎ (ವರದಕ್ಷಿಣೆ ಕಿರುಕುಳ) 506 (ಜೀವ ಬೆದರಿಕೆ) 323 (ಮಾರಣಾಂತಿಕ ಹಲ್ಲೆ)ಯಡಿ ಪ್ರಕರಣ ದಾಖಲಿಸಲಾಗಿದೆ.
ರಾಯ್‍ಪುರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ದೇಹವನ್ನು ಪೀಸ್ ಪೀಸ್ ಮಾಡಿ ಬಳಿಕ ಯಾರಿಗೂ ತಿಳಿಯದಂತೆ ನೀರಿನ ಟ್ಯಾಂಕ್‌ನಲ್ಲಿ ತುಂಬಿಸಿಟ್ಟ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.
ಪ್ರಕರಣ ಸಂಬಂಧಿಸಿದಂತೆ ಆರೋಪಿ ಪತಿ ಪವನ್ ಸಿಂಗ್ ಠಾಕೂರ್ ನನ್ನು ಬಿಲಾಸ್ಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸತಿ ಸಾಹು ಮೃತ ಪತ್ನಿ.
ಪವನ್ ಹಾಗೂ ಸತಿ ಸಾಹು ಅವರದ್ದು ಲವ್ ಮ್ಯಾರೇಜ್ (Pavan Sati Sahu Love Marriage). ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿದ್ದರೂ ಇಬ್ಬರೂ ಮದುವೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸತಿ ಸಾಹು ಮನೆಯವರು ಈಕೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ಇತ್ತ ನೆರೆಹೊರೆಯವರ ಜೊತೆನೂ ಸತಿ ಅಷ್ಟೊಂದು ಕ್ಲೋಸ್ ಇರಲಿಲ್ಲ. ಹೀಗಾಗಿ 2 ತಿಂಗಳ ಹಿಂದೆಯೇ ಸತಿ ಕೊಲೆಯಾದ್ರೂ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲ. ಆದರೆ ನಕಲಿ ಕರೆನ್ಸಿ ದಂಧೆ (Fake Currency Racket) ಸಂಬಂಧ ತನಿಖೆ ನಡೆಸಲು ಪೊಲೀಸರು ಪವನ್ ಮನೆಗೆ ಬಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಹಾಸಿಗೆ ಕೆಳಗೆ, ನೀರು ತುಂಬಿಸುವ ಪ್ಲಾಸ್ಟಿಕ್ ಚೀಲ (Polythin Bags) ಗಳಲ್ಲಿ ತುಂಬಿಸಿಟ್ಟಿರುವುದು ಬಯಲಾಗಿದೆ. ಈ ಸಂಬಂಧ ಪೊಲೀಸರು ಪವನ್ ನನ್ನು ವಿಚಾರಣೆ ನಡೆಸಿದಾಗ, ದಾಂಪತ್ಯ ದ್ರೋಹ ಮಾಡುವ ಶಂಕೆಯಿಂದ ನಮ್ಮಿಬ್ಬರ ಮಧ್ಯೆ ಜಗಳವಾಯಿತು. ಮಾತಿಗೆ ಮಾತು ಬೆಳೆದಿದ್ದರಿಂದ ಸಿಟ್ಟಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
10 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, ಬಿಲಾಸ್ಪುರದ ಉಸ್ಲಾ ಪ್ರದೇಶದಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಾರೆ. ನಕಲಿ ಕರೆನ್ಸಿ ದಂಧೆ ಸಂಬಂಧ ಮನೆ ಹುಡುಕಾಟ ನಡೆಸಿದಾಗ ಕೋಣೆಯಲ್ಲಿ ನೀರಿನ ಕ್ಯಾನ್ ಪೊಲೀಸರ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ಕ್ಯಾನ್ ಮುಚ್ಚಳ ತೆರೆದು ನೋಡಿದಾಗ ಅದರಿಂದ ಗಬ್ಬು ವಾಸನೆ ಹೊರಬಂದಿದೆ. ಮತ್ತೆ ಮನೆ ಪರಿಶೀಲನೆ ನಡೆಸಿದಾಗ ದೇಹದ ಭಾಗಗಳು ಅಲ್ಲಲ್ಲಿ ಬಿದ್ದಿದ್ದವು. ಜೊತೆಗೆ ಸ್ಕ್ಯಾನರ್, ಪ್ರಿಂಟರ್ ಹಾಗೂ ನಕಲಿ ಕರೆನ್ಸಿ ಕೂಡ ಪತ್ತೆಯಾದವು.
ಪೊಲೀಸರ ಪ್ರಕಾರ, ಜನವರಿ 6 ರಂದು ದಂಪತಿಗಳು ಜಗಳವಾಡಿದರು. ನಂತರ ಅವರು ಕೋಪದ ಭರದಲ್ಲಿ ಆಕೆಯ ಕತ್ತು ಹಿಸುಕಿ ಕೊಂದನು. ಬಳಿಕ ಗ್ರೈಂಡರ್-ಕಟರ್‍ನಿಂದ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದನು. ನಂತರ ಹೊರಗೆ ಹೋಗಿ ಟೇಪ್, ಪ್ಲಾಸ್ಟಿಕ್ ಚೀಲಗಳು ಮತ್ತು ನೀರಿನ ಕ್ಯಾನ್ ಖರೀದಿಸಿದ್ದಾನೆ. ದೇಹದ ಭಾಗಗಳನ್ನು ಅದರೊಳಗೆ ತುಂಬಿಸಿ ಟೇಪ್ ಹಾಕಿದ್ದಾನೆ. ಪತ್ನಿಯನ್ನು ಯಾರೂ ಹುಡುಕಲು ಬರಲ್ಲ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಆದರೆ ಕರೆನ್ಸಿ ಜಾಡು ಪೊಲೀಸರನ್ನು ಅವನ ಬಳಿಗೆ ಕರೆದೊಯ್ಯಿತು.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ.
ಕಲಬುರಗಿ: ಎಷ್ಟೆ ಪೌಡರ್ ಹಾಕಿದ್ರು ಕೂಡ ನೀನು ವೈಟ್ ಆಗುವುದಿಲ್ಲ ಎಂದು ಪತ್ನಿಯನ್ನೇ (Wife) ಪತಿಯೊಬ್ಬ (Husband) ಕತ್ತು ಹಿಸುಕಿ ಹತ್ಯೆಗೈದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದಲ್ಲಿ ನಡೆದಿದೆ.
ಫರ್ಜಾನ ಬೇಗಂ(28) ಕೊಲೆಯಾದ ಮಹಿಳೆ. ಖಾಜಾ ಪಟೇಲ್ ಹಾಗೂ ಫರ್ಜಾನ ಬೇಗಂ 7 ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಮದುವೆಯಾದ (Wedding) ದಿನದಿಂದ ಖಾಜಾ ಪಟೇಲ್ ಹಾಗೂ ಆತನ ಕುಟುಂಬಸ್ಥರು ಫರ್ಜಾನ ಬೇಗಂಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆಯ (Dowry) ಜೊತೆಗೆ ಆಕೆಗೆ ಕಪ್ಪಗಿದ್ದೀಯಾ ಎಂದು ಪತಿ ಖಾಜಾ ಪಟೇಲ್ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಬೊಮ್ಮಾಯಿಯಿಂದ ಶಿವಾಜಿ ಪುತ್ಥಳಿ ಲೋಕಾರ್ಪಣೆ – ಲಕ್ಷ್ಮಿ ಹೆಬ್ಬಾಳ್ಕರ್ ಗೈರು
ಈ ಹಿನ್ನೆಲೆಯಲ್ಲಿ ಫರ್ಜಾನ ಬೇಗಂ ಗಂಡ ಖಾಜಾ ಪಟೇಲ್ ಕತ್ತು ಹಿಸುಕಿ ಕೊಲೆ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಗಾಳ- ಡಿ.ಕೆ.ಶಿವಕುಮಾರ್ ಸ್ಪಷ್ಟನೆ
ಮುಂಬೈ: ತ್ವರಿತ ಬಡ್ತಿ ಹಾಗೂ ಇತರೆ ಆರ್ಥಿಕ ಪ್ರಯೋಜನಗಳು ಸಿಗಲು ವ್ಯಕ್ತಿಯೊಬ್ಬ ಪತ್ನಿ (Wife) ಬಳಿ ಬಾಸ್ ಜೊತೆ ಮಲಗಲು ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದಿದೆ.
ಪುಣೆಯ ಅಮಿತ್ ಛಾಬ್ರಾ ಎಂಬ ವ್ಯಕ್ತಿಯನ್ನು ಮಹಿಳೆ ಮದುವೆ ಆಗಿದ್ದಳು. ಮದುವೆಯ ನಂತರ ಅಮಿತ್ ಛಾಬ್ರಾ ಕೆಟ್ಟ ಸಹವಾಸಗಳಿಗೆ ಸಿಲುಕಿ ಪತ್ನಿಯನ್ನು ಅನೈತಿಕ ಹಾಗೂ ಕಾನೂನುಬಾಹಿರ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿದೆ.
ಅಷ್ಟೇ ಅಲ್ಲದೇ ಅಮಿತ್ ಸಹೋದರನು ಕೂಡ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ. ಜೊತೆಗೆ ಆಕೆಯ ಮಾವ ಕೂಡ 12 ವರ್ಷದ ಮಗಳ ಎದುರೇ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದ. ಇದನ್ನು ವಿರೋಧಿಸಿದಾಗ ಆಕೆಗೆ ಥಳಿಸುತ್ತಿದ್ದ.
ಚಿಕ್ಕಬಳ್ಳಾಪುರ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಅವರಿಬ್ಬರ ಮಧ್ಯೆ ಉಂಡು ಮಲಗಿದ ಮೇಲೂ ಜಗಳ ಮುಂದುವರಿದಿತ್ತು. ಮಧ್ಯರಾತ್ರಿ ಹೆಂಡತಿ ಹಾಗೂ ಗಂಡನ ನಡುವೆ ನಡೆದ ಜಗಳದಲ್ಲಿ ಗಂಡನೋರ್ವ ಹೆಂಡತಿ ಸೇರಿ ಇಬ್ಬರು ಮಕ್ಕಳನ್ನ ಮಚ್ಚಿನಿಂದ ಕೊಚ್ಚಿ ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಯಣ್ಣೂರು ಗ್ರಾಮದಲ್ಲಿ ನಡೆದಿದೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಅನ್ನೋ ಹಾಗೆ ಏನೂ ಅರಿಯದ ಇಬ್ಬರು ಹೆಣ್ಣುಮಕ್ಕಳು ತಾಯಿಯ ಜೊತೆಯಲ್ಲಿ ಸಾವಿನ ಮನೆ ಸೇರಿದ್ದು, ಗಂಡ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾನೆ.
ಅಂದಹಾಗೆ ಗ್ರಾಮದ ಸೊಣ್ಣಪ್ಪ ಹಾಗೂ ಕೋಲಾರ ತಾಲೂಕು ನಾಚಹಳ್ಳಿಯ ನೇತ್ರಾವತಿಗೆ ವಿವಾಹವಾಗಿ 12 ವರ್ಷಗಳೇ ಕಳೆದಿದ್ದು ವರ್ಷಿತಾ ಹಾಗೂ ಸ್ನೇಹ ಇಬ್ಬರು ಹೆಣ್ಣು ಮಕ್ಕಳಿದ್ರು. ಆದರೆ ಮೊದ ಮೊದಲು ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ 5-6 ವರ್ಷಗಳಿಂದ ಬಿರುಕು ಮೂಡಿದೆ. ನೇತ್ರಾವತಿ ಅದ್ಯಾರೋ ಅದೇ ಊರಿನವನೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿದ ಆರೋಪ ಕೇಳಿಬಂದಿದ್ದು, ಈ ವಿಚಾರದಲ್ಲಿ ಗಂಡ-ಹೆಂಡತಿ ದಾಂಪತ್ಯ ಜೀವನ ಹಳಿತಪ್ಪಿದೆ. ಈ ವಿಚಾರವಾಗಿ ಹೆಂಡತಿ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದಳಂತೆ.
ಇಷ್ಟೆಲ್ಲಾ ಮನಸ್ತಾಪ ಇದ್ರೂ ಗಂಡ-ಹೆಂಡತಿ ಒಂದೇ ಮನೆಯಲ್ಲಿ ವಾಸವಾಗಿದ್ರೂ ಗಂಡ-ಹೆಂಡತಿ ಸಂಬಂಧ ಅಷ್ಟಕ್ಕಷ್ಟೇ ಇತ್ತಂತೆ. ಇದೇ ವಿಚಾರದಲ್ಲಿ ಹಲವು ಬಾರಿ ಹಿರಿಕರ ಸಮ್ಮುಖದಲ್ಲಿ ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯ್ತಿಗಳನ್ನ ಸಹ ನಡೆಸಲಾಗಿತ್ತು. ಆದರೂ ಇದೇ ರೀತಿ ಕಳೆದ ರಾತ್ರಿ ಸಹ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿರಬಹುದು ಅಂತ ಅಂದಾಜಿಸಲಾಗಿದೆ.
ಕಳೆದ ರಾತ್ರಿ ನಡೆದ ಜಗಳದಲ್ಲಿ ಗಂಡ ಸೊಣ್ಣಪ್ಪ ಹೆಂಡತಿ ನೇತ್ರಾವತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಮೃತ ನೇತ್ರಾವತಿ ತಲೆ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿವೆ. ಹಿರಿಯ ಮಗಳು ವರ್ಷಿತಾ ತಲೆಗೆ ಗಂಭೀರ ಗಾಯವಾಗಿದ್ದು, ಆಕೆಗೂ ಮಚ್ಚಿನಿಂದ ಹಲ್ಲೆ ಮಾಡಿರುವ ಸಾಧ್ಯತೆ ಇದೆ. ಪಾಪ ಕಿರಿಯ ಮಗಳು ವರ್ಷಿತಾ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲವಾದರೂ ಆಕೆಯನ್ನ ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದೆಹಲಿ ಪಾಲಿಕೆ ಚುಕ್ಕಾಣಿ ಹಿಡಿದ ಆಮ್ ಆದ್ಮಿ – ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆ
ಮೇಲ್ನೋಟಕ್ಕೆ ಮೂವರನ್ನ ಕೊಲೆ ಮಾಡಿ ತದನಂತರ ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಘಟನೆ ನಂತರ ಸೊಣ್ಣಪ್ಪ ಸಹ ತಾನು ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬೆಳಗ್ಗೆ ಮನೆಯಿಂದ ಹೊಗೆ ಬರೋದನ್ನ ನೋಡಿದ ಅಕ್ಕಪಕ್ಕದ ಮನೆಯವರು ಮನೆ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಧ್ಯರಾತ್ರಿಯಲ್ಲಿ ಘಟನೆ ನಡೆದಿದ್ದು, ನಾಲ್ವರು ಸಹ ಮನೆಯ ಮುಂಭಾಗ ಒಬ್ಬರ ಪಕ್ಕ ಒಬ್ಬರು ಮಲಗಿದ ಹಾಗೆ ಕಂಡು ಬಂದಿದ್ದಾರೆ. ಕೂಡಲೇ ಉಸಿರಾಡುತ್ತಿದ್ದ ಸೊಣ್ಣಪ್ಪ ನನ್ನ ಶಿಡ್ಲಘಟ್ಟ ಆಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸೊಣ್ಣಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಇನ್ನೂ ಶಿಡ್ಲಘಟ್ಟ ಗ್ರಾಮಾಂತರ ಮೃತಳ ಸಂಬಂಧಿಕರ ಬಳಿ ಪ್ರಕರಣ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದಾರೆ. ಆದರೆ ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತ ಗಂಡ ಮಾಡಬಾರದ ಕೆಲಸ ಮಾಡಿಯಾಗಿದೆ. ಗಂಡ -ಹೆಂಡತಿ ಜಗಳದಲ್ಲಿ ಪಾಪ ಏನೂ ಅರಿಯದ ಅಮಾಯಕ ಇಬ್ಬರು ಹೆಣ್ಣು ಮಕ್ಕಳು ಬಲಿಯಾಗಿಬಿಟ್ರಲ್ಲಾ ಅನ್ನೋದೇ ನೋವಿನ ಸಂಗತಿ.
LIVE TV
[brid partner=56869869 player=32851 video=960834 autoplay=true]