Tag: Wife

  • ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪತ್ನಿ

    ಪತಿಯನ್ನು ಕೊಂದು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ಪತ್ನಿ

    ಚೆನ್ನೈ: ಚೆನ್ನೈನ ಗ್ರೌಂಡ್ ಏರ್‌ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ (wife) ಕೊಲೆ ಮಾಡಿದ ಘಟನೆ ತಮಿಳುನಾಡಿನ ( Tamil Nadu) ಪುದುಕೊಟ್ಟೈನಲ್ಲಿ ನಡೆದಿದೆ.

    ಆರೋಪಿ ಮಹಿಳೆಯನ್ನು ಭಾಗ್ಯಲಕ್ಷ್ಮಿ (39) ಎಂದು ಗುರುತಿಸಲಾಗಿದೆ. ವಿಲ್ಲುಪುರಂ ನಿವಾಸಿ ಜಯನಂದನ್ ಮೃತ ವ್ಯಕ್ತಿ. ಜಯನಂದನ್ ತನ್ನ ಸಹೋದರಿಯೊಂದಿಗೆ ನಂಗನಲ್ಲೂರಿನಲ್ಲಿ ವಾಸವಾಗಿದ್ದ. ಆದರೆ ಮಾ. 18ರಂದು ಆತ ತನ್ನ ಮನೆಗೆ ಹೋಗುವುದಾಗಿ ಸಹೋದರಿಗೆ ಹೇಳಿ ಮನೆಯಿಂದ ಹೋಗಿದ್ದಾನೆ.

    crime

    ಅದಾದ ಬಳಿಕ ಜಯನಂದನ್‍ನ ಫೋನ್ ಸ್ವಿಚ್ ಆಫ್ ಆಗಿದ್ದು, ಆತನನ್ನು ಸಂಪರ್ಕಿಸಲು ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಯನಂದನ್ ಸಹೋದರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ.

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಜಯನಂದನ್ ಸೆಮ್ಮಲಂಪಟ್ಟಿಯಲ್ಲಿರುವ ಭಾಗ್ಯಲಕ್ಷ್ಮಿಗೆ ಕೊನೆಯ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತನಿಖೆ ನಡೆಸಿದ್ದಾರೆ. ಈ ವೇಳೆ ಸ್ನೇಹಿತನ ಸಹಾಯದಿಂದ ಕೊಲೆ ಮಾಡಿ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವುದಾಗಿ ಭಾಗ್ಯಲಕ್ಷ್ಮಿ ಒಪ್ಪಿಕೊಂಡಿದ್ದಾಳೆ.

    ಘಟನೆಯೇನು?: ಜಯಂಧನ್ ಮತ್ತು ಭಾಗ್ಯಲಕ್ಷ್ಮಿ ಹಲವಾರು ವರ್ಷಗಳ ಹಿಂದೆ ತಾಂಬರಂನ ಹೋಟೆಲ್‍ನಲ್ಲಿ ಭೇಟಿಯಾಗಿದ್ದರು. ಅದಾದ ನಂತರ 2020ರಲ್ಲಿ ದೇವಸ್ಥಾನದಲ್ಲಿ ವಿವಾಹವಾದರು. ಆದರೆ ದಂಪತಿ 2021ರಲ್ಲಿ ಬೇರೆಯಾಗಿದ್ದರು. ಮಾ.19ರಂದು ಜಯಂಧನ್ ಭಾಗ್ಯಲಕ್ಷ್ಮಿ ಭೇಟಿ ಮಾಡಲು ಬಂದಿದ್ದ. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

    ಜಯಂಧನನ್ನು ಭಾಗ್ಯಲಕ್ಷ್ಮಿ ಕೊಲೆಗೈದಿದ್ದಾಳೆ. ನಂತರ ಆತನ ದೇಹದ ಭಾಗಗಳನ್ನು ಕತ್ತರಿಸಿ ಸೂಟ್‍ಕೇಸ್ ಹಾಗೂ ಗೋಣಿಚೀಲದಲ್ಲಿ ಸಾಗಿಸಿದ್ದಾಳೆ. ಅದಾದ ಬಳಿಕ ಸ್ನೇಹಿತನ ಸಹಾಯ ಪಡೆದು ಕೋವಲಂ ಬಳಿಯ ನಗರದ ಹೊರವಲಯದಲ್ಲಿ ಜಯಂಧನನ್ನು ಹೂಳಿರುವುದಾಗಿ ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿ ಕಳ್ಳತನ- ಅರ್ಚಕರಿಂದಲೇ ಕೃತ್ಯ ಆರೋಪ

  • ಗಂಡ-ಹೆಂಡ್ತಿ ಒಟ್ಟಿಗೆ ಕೂತು ಎಣ್ಣೆ ಹೊಡೆದ್ರು- ಜಗಳವಾಡಿ 12ನೇ ಪತ್ನಿಯನ್ನೇ ಮುಗಿಸಿದ!

    ಗಂಡ-ಹೆಂಡ್ತಿ ಒಟ್ಟಿಗೆ ಕೂತು ಎಣ್ಣೆ ಹೊಡೆದ್ರು- ಜಗಳವಾಡಿ 12ನೇ ಪತ್ನಿಯನ್ನೇ ಮುಗಿಸಿದ!

    ರಾಂಚಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ 12ನೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಅಚ್ಚರಿಯ ಘಟನೆಯೊಂದು ಜಾರ್ಖಂಡ್‍ (Jharkhand) ನಲ್ಲಿ ನಡೆದಿದೆ.

    ಮೃತಳನ್ನು ಸಾವಿತ್ರಿ ದೇವಿ (40) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ರಾಮಚಂದ್ರ ತುರಿ ಕೊಲೆ ಮಾಡಿದ್ದಾನೆ. ಪತಿ ಹಾಗೂ ಪತ್ನಿ ಇಬ್ಬರೂ ಕೋಣೆಯೊಳಗೆ ಕುಳಿತುಕೊಂಡು ಮದ್ಯಪಾನ (Alcohol) ಮಾಡಿದ್ದಾರೆ. ಹೀಗೆ ಮಾತನಾಡುತ್ತಾ ಇಬ್ಬರ ಮಧ್ಯೆ ವಿಚಾರವೊಂದಕ್ಕೆ ವಾಗ್ವಾದ ನಡೆದಿದೆ. ಪತ್ನಿಯ ಮಾತಿನಿಂದ ರೊಚ್ಚಿಗೆದ್ದ ಪತಿ, ಅಲ್ಲೇ ಇದ್ದ ಕೋಲು ತೆಗೆದುಕೊಂಡು ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಸಾವಿತ್ರಿ ದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.

    ಇತ್ತ ಘಟನೆಯ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿ ಪತಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತಳು ಆರೋಪಿಯ 12ನೇ ಪತ್ನಿಯಾಗಿದ್ದಾಳೆ. ಇದಕ್ಕೂ ಮೊದಲು ಮದುವೆಯಾಗಿರುವ 11 ಮಂದಿ ಪತ್ನಿಯರು ಕೂಡ ಈತ ನೀಡುತ್ತಿದ್ದ ಮಾನಸಿಕ ಹಿಂಸೆಯಿಂದ ಬಿಟ್ಟು ಹೋಗಿದ್ದಾರೆ. ಆರೋಪಿಗೆ ಮೂವರು ಪುತ್ರರು ಹಾಗೂ ಓರ್ವ ಮಗಳಿದ್ದು, ಎಲ್ಲರೂ ಸಾವಿತ್ರಿ ದೇವಿ ಜೊತೆ ವಾಸವಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

    ಸಾವಿತ್ರಿ ದೇವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯ ತನಿಖೆ ನಡೆಯುತ್ತಿದೆ ಎಮದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಜೆ ಸೌಂಡ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆ ಗುಂಡು ಹಾರಿಸಿದ ನೆರೆಮನೆಯಾತ

  • ಪತ್ನಿ ಕಾಟದಿಂದ ಬೇಸತ್ತು 26 ಲಕ್ಷ ಕ್ಯಾಶ್‍ನೊಂದಿಗೆ ಗೋವಾಗೆ ಹೊರಟಿದ್ದವ ಬೆಳಗಾವಿಯಲ್ಲಿ ಲಾಕ್!

    ಪತ್ನಿ ಕಾಟದಿಂದ ಬೇಸತ್ತು 26 ಲಕ್ಷ ಕ್ಯಾಶ್‍ನೊಂದಿಗೆ ಗೋವಾಗೆ ಹೊರಟಿದ್ದವ ಬೆಳಗಾವಿಯಲ್ಲಿ ಲಾಕ್!

    ಬೆಳಗಾವಿ: ಹೆಂಡತಿ ಕಾಟ ತಾಳಲಾರದೇ 26 ಲಕ್ಷ ಕ್ಯಾಶ್ ತೆಗೆದುಕೊಂಡು ಮುಂಬೈ (Mumbai) ನಿಂದ ಗೋವಾ (Goa) ಗೆ ಕಾರಲ್ಲಿ ಹೊರಟಿದ್ದ ಗುತ್ತಿಗೆದಾರ ಬೆಳಗಾವಿಯಲ್ಲಿ ಲಾಕ್ ಆಗಿರುವ ಘಟನೆ ನಡೆದಿದೆ.

    ಬೆಳಗಾವಿಯ ಕರ್ನಾಟಕ ಚೌಕ್ ಬಳಿಯ ಚೆಕ್‍ಪೋಸ್ಟ್ ನಲ್ಲಿ 26 ಲಕ್ಷ ಹಣ ಜಪ್ತಿ ಮಾಡಿಕೊಳ್ಳಲಾಗಿದೆ. ಗೂಗಲ್ ಮ್ಯಾಪ್ (Google Map) ನೋಡಿ ಗೋವಾಗೆ ಹೋಗಲು ಹೋಗಿ ಬೆಳಗಾವಿ ಚೆಕ್‍ಪೋಸ್ಟ್ ನಲ್ಲಿ ತಗ್ಲಾಕ್ಕೊಂಡ ಗುತ್ತಿಗೆದಾರನಿಂದ ಹಣ ಜಪ್ತಿ ಮಾಡಿದ್ದು, ಆದಾಯ ತೆರಿಗೆ (Income Tax) ಇಲಾಖೆಗೆ ಪ್ರಕರಣ ವರ್ಗಾಯಿಸಲಾಗಿದೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡುವ ಗುತ್ತಿಗೆದಾರ ತಾನು ಒಯ್ಯುತ್ತಿದ್ದ ಹಣಕ್ಕೆ ದಾಖಲೆ ಇದೆ. ತಾನು ಮುಂಬೈನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಆಗಿದ್ದೇನೆ ಎಂದು ತಿಳಿಸಿದ್ದಾನೆ.

    ಅಲ್ಲದೇ ಇಷ್ಟೊಂದು ಮೊತ್ತದ ನಗದು ಏಕೆ ಒಯ್ಯುತ್ತಿದ್ದೀಯಾ ಎಂದು ಪೊಲೀಸರ ಪ್ರಶ್ನೆಗೆ ಹೆಂಡತಿ ಕಾಟ ತಾಳಲಾರದೇ ನೆಮ್ಮದಿ ಅರಸಿ ಹೋಗುತ್ತಿದ್ದೇನೆ. ಆನ್‍ಲೈನ್ ಪೇಮೆಂಟ್ ಮಾಡಿದ್ರೆ ಬ್ಯಾಂಕ್ ಟ್ರ್ಯಾನ್ಸ್ಯಾಕ್ಷನ್ ಮೂಲಕ ಗೊತ್ತಾಗುತ್ತದೆ. ಹೀಗಾಗಿ ಹೆಂಡತಿ ಕಾಟ ತಾಳಲಾರದೇ ಗೋವಾ (Goa) ಗೆ ಹೊರಟಿದ್ದೆ. ಗೂಗಲ್ ಮ್ಯಾಪ್ ಮೂಲಕ ಮಾರ್ಗ ನೋಡುತ್ತಿದ್ದಾಗ ತಪ್ಪಾಗಿ ಸಿಟಿಯೊಳಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ.

    ಇತ್ತ ಹಣದ ಮೂಲದ ಬಗ್ಗೆ ಪೊಲೀಸರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಹೆಚ್ಚಳ ನಿರ್ಧಾರ ಕೈಬಿಟ್ಟ ಹೆದ್ದಾರಿ ಪ್ರಾಧಿಕಾರ

  • ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪತಿ!

    ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪತಿ!

    ಚಾಮರಾಜನಗರ: ಪತಿಯ ಅಕ್ರಮ ಸಂಬಂಧ (Illicit Relationship) ಪ್ರಶ್ನಿಸಿದ್ದಕ್ಕೆ ಪತ್ನಿ ಕೊಲೆಯಾದ ಘಟನೆ ಚಾಮರಾಜನಗರ (Chamarajanagar) ತಾಲೋಕು ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.

    ಎಂ.ಸಿ.ಸೌಮ್ಯ (27) ಕೊಲೆಯಾದ ಮಹಿಳೆ. ಏಳು ವರ್ಷಗಳ ಹಿಂದೆ ಸೌಮ್ಯಳನ್ನು ವಿವಾಹವಾಗಿದ್ದ ಮಹೇಶ್ ಚಂದ್ರಗುರು ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಸೌಮ್ಯಾ, ಪತಿಯನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನೇಣು ಬಿಗಿದುಕೊಂಡು ವಿಲೇಜ್ ಅಕೌಂಟೆಂಟ್ ಆತ್ಮಹತ್ಯೆ

    ಪತ್ನಿ ಪ್ರಶ್ನಿಸಿದ್ದಕ್ಕೆ ಸಿಟ್ಟುಗೊಂಡ ಮಹೇಶ್ ಚಂದ್ರಗುರು, ಸೌಮ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಪತಿ ಮಹೇಶ್ ಚಂದ್ರಗುರುವನ್ನು ಪೊಲೀಸರು ಬಂಧಿಸಿದ್ದಾರೆ.

    ದಂಪತಿಗೆ 5 ವರ್ಷದ ಹೆಣ್ಣು ಮಗುವಿದೆ. ಇದೀಗ ಪ್ರಕರಣ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

    ಲಕ್ನೋ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಪತ್ನಿ ಬರ್ಬರ ಕೊಲೆ (Husband Murdered Wife) ಯಲ್ಲಿ ಅಂತ್ಯವಾದ ಘಟನೆ ಉತ್ತಪ್ರದೇಶದ ಆಲಿಘರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಪತ್ನಿಯನ್ನು ಗುಡ್ಡೋ(30) ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ಸಾಗಿರ್ ಕೊಲೆಗೈದಿದ್ದಾನೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

    ಇಂದು (ಸೋಮವಾರ) ಮಾಂಸ (Meat) ತರದಿದ್ದಕ್ಕೆ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ಸಾಗಿರ್, ಅಲ್ಲೇ ಇದ್ದ ಚಾಕು ತೆಗೆದುಕೊಂಡು ಮಕ್ಕಳ ಮುಂದೆಯೇ ಪತ್ನಿಯ ಕತ್ತು ಸೀಳಿದ್ದಾನೆ. ಇದನ್ನೂ ಓದಿ: ಗಂಡು ಮಗುವಾಗಿಲ್ಲವೆಂದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

    ಇತ್ತ ಅಮ್ಮನನ್ನು ಕೊಲೆ ಮಾಡಿದ್ದರಿಂದ ಭಯಗೊಂಡ ಮಕ್ಕಳು ಜೋರಾಗಿ ಕಿರುಚಾಡಿವೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಓಡಿಬಂದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

    ಅಲ್ಲದೆ ಆರೋಪಿ ಸಾಗಿರ್ ನ ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಮೂವರು ಮಕ್ಕಳಲ್ಲಿ ಓರ್ವ ಮಗಳು, ಪೊಲೀಸರಿಗೆ ನಡೆದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾಳೆ.

    ಈ ಸಂಬಂಧ ಎಸ್‍ಪಿ ಕುಲ್ದೀಪ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಆತ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದರು.

  • ಗಂಡು ಮಗುವಾಗಿಲ್ಲವೆಂದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

    ಗಂಡು ಮಗುವಾಗಿಲ್ಲವೆಂದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

    ಮೈಸೂರು: ಗಂಡು ಮಗುವಾಗಿಲ್ಲ ಎಂದು ಪಾಪಿ ಪತಿಮಹಾಶಯನೊಬ್ಬ ಪತ್ನಿ (Assault On Wife) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕು ಸೋನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ಚಂದ್ರು, ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೆ ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಸಹಕಾರ ನೀಡಿರುವ ಆರೋಪ ಕೂಡ ಕೇಳಿ ಬಂದಿದೆ. ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಪ್ರತಿಭಟನೆ – ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ

    ಶಿವಮ್ಮ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇದೇ ಕಾರಣವಾಗಿ ಶಿವಮ್ಮಗೆ ಪತಿ ಹಾಗೂ ಮನೆಯವರು ಮಾನಸಿಕ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಹಲವು ಬಾರಿ ನ್ಯಾಯ ಪಂಚಾಯ್ತಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇತ್ತ ಕಿರುಕುಳ ತಾಳಲಾರದೆ ಶಿವಮ್ಮ ಕಳೆದ ವರ್ಷ ಎಚ್.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ್ದರು.

    ಸದ್ಯ ಪತಿ ಚಂದ್ರುವನ್ನು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಮಾವ ರಾಮೇಗೌಡ ಅತ್ತೆ ಕೆಂಪಮ್ಮಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆ (HD Kote Police Station) ಯಲ್ಲಿ ಪ್ರಕರಣ ದಾಖಲಾಗಿದೆ.

  • ಇಬ್ಬರು ಹೆಂಡಿರನ್ನು ಮ್ಯಾನೇಜ್ ಮಾಡಲು ಹೋದ ಪೇದೆ – ಪತ್ನಿಯಿಂದಲೇ ಬರ್ಬರ ಹತ್ಯೆ

    ಇಬ್ಬರು ಹೆಂಡಿರನ್ನು ಮ್ಯಾನೇಜ್ ಮಾಡಲು ಹೋದ ಪೇದೆ – ಪತ್ನಿಯಿಂದಲೇ ಬರ್ಬರ ಹತ್ಯೆ

    ಬಳ್ಳಾರಿ: ಇಬ್ಬರು ಪತ್ನಿಯರನ್ನು (Wife) ಮ್ಯಾನೇಜ್ ಮಾಡಲು ಹೋಗಿ ಪೇದೆಯೊಬ್ಬ (Police) ಬರ್ಬರವಾಗಿ ಹತ್ಯೆಯಾಗಿರುವ (Murder) ಘಟನೆ ಬಳ್ಳಾರಿ (Ballary) ಜಿಲ್ಲೆಯ ಚಿನ್ನಾಪುರ ಗ್ರಾಮದಲ್ಲಿ ನಡೆದಿದೆ.

    ಡಿಆರ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ಜಾಫರ್ ಹತ್ಯೆಯಾದಾತ. ಬುಧವಾರ ರಾತ್ರಿ 10 ಗಂಟೆ ಹೊತ್ತಲ್ಲಿ ಡಿಎಆರ್ ಪೊಲೀಸ್ ಗ್ರೌಂಡ್ ಪಕ್ಕ ಇರುವ ಕ್ವಾಟ್ರಸ್‌ನ ತನ್ನ ಮನೆಯಲ್ಲೇ ಜಾಫರ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಆತನ ಪತ್ನಿ ಹನುಮಕ್ಕ ಯಾರೊ ಬಂದು ಪತಿಯನ್ನು ಕೊಲೆ ಮಾಡಿದ್ದಾರೆ ಎಂದು ಅಕ್ಕಪಕ್ಕದವರನ್ನು ಕರೆಸಿ ಅಳುತ್ತಾ ಚೀರಾಡಿದ್ದಾಳೆ. ತಕ್ಷಣ ಅಕ್ಕಪಕ್ಕದ ಪೊಲೀಸ್ ಸಿಬ್ಬಂದಿ ಜಾಫರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಜಾಫರ್ ಉಸಿರು ನಿಂತು ಹೋಗಿತ್ತು.

    ಆದರೆ ಈಗ ಜಾಫರ್‌ನ ಸಂಬಂಧಿಕರು ಆತನ ಪತ್ನಿ ಹನುಮಕ್ಕಳೇ ಕೊಲೆ ಮಾಡಿಸಿದ್ದಾಳೆ ಎಂದು ದೂರು ನೀಡಿದ್ದಾರೆ. ಅಲ್ಲದೇ ಪೊಲೀಸ್ ಕ್ವಾಟ್ರಸ್‌ನಲ್ಲಿ ಹೊರಗಿನವರು ಬಂದು ಹೊಡೆಯಲು ಸಾಧ್ಯವಿಲ್ಲ. ಇದೊಂದು ಪ್ರೀ ಪ್ಲಾನ್ ಮರ್ಡರ್. ಪ್ರೈಮರಿ ಸಸ್ಪೀಷಿಯಸ್ ಎಂದರೆ ಜಾಫರ್ ಪತ್ನಿ ಹನುಮಕ್ಕ ಎಂದು ಅನುಮಾನಿಸಿ ಪೊಲೀಸರು ಹನುಮಕ್ಕಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.

    ಮುಸ್ಲಿಂ ಧರ್ಮದ ಜಾಫರ್ ಸಹೀಬ್ ಹಿಂದೂ ಯುವತಿ ಹನುಮಕ್ಕಳನ್ನು ಮದುವೆ ಆಗುವುದಕ್ಕೂ ಮೊದಲು ಇನ್ನೊಬ್ಬ ಮುಸ್ಲಿಂ ಮಹಿಳೆ ನವೀನ್ ತಾಜ್ ಜೊತೆ ಮದುವೆಯಾಗಿದ್ದ. ನವೀನ್ ತಾಜ್ ಈ ಹಿಂದೆ ಗರ್ಭಿಣಿಯಾಗಿದ್ದಾಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಓಡಾಡುತ್ತಿದ್ದ ವೇಳೆ ಅಲ್ಲಿದ್ದ ನರ್ಸ್ ಹನುಮಕ್ಕನ ಜೊತೆ ಪ್ರೇಮವಾಗಿತ್ತು. ಈ ವಿಚಾರ ಮೊದಲ ಪತ್ನಿ ನವೀನ್ ತಾಜ್‌ಗೆ ಗೊತ್ತಾಗಿ ಆಕೆ ಜಾಫರ್‌ನ ಬಿಟ್ಟು ತವರು ಸೇರಿದ್ದಳು. ಇದನ್ನೂ ಓದಿ: ಬೆಂಗಳೂರಲ್ಲಿ ಸಿಗರೇಟ್‌ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

    ಅದೇ ವೇಳೆ ಹನುಮಕ್ಕನ ಜೊತೆ ಜಾಫರ್ ಮದುವೆಯಾಗಿದ್ದು, ಇಲ್ಲಿಗೆ 4 ವರ್ಷ ಕಳೆದಿದೆ. ಆದರೆ ಈ ನಡುವೆ ಜಾಫರ್ ಮತ್ತೆ ತನ್ನ ಮೊದಲ ಪತ್ನಿ ಮನೆಗೆ ಓಡಾಟ ಶುರು ಮಾಡಿದ್ದಕ್ಕೆ ಹನುಮಕ್ಕ ಕೋಪಗೊಂಡು ಆತನ ಹತ್ಯೆಗೆ ಯೋಜನೆ ಮಾಡಿದ್ದಾಳೆ.

    ಜಾಫರ್‌ಗೆ ಮತ್ತು ಬರುವ ಚುಚ್ಚು ಮದ್ದು ನೀಡಿ, ಆತನಿಗೆ ಪ್ರಜ್ಞೆ ತಪ್ಪಿಸಿ ಬಳಿಕ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಈಗ ಹನುಮಕ್ಕ ಪೊಲೀಸರ ವಶದಲ್ಲಿದ್ದಾಳೆ. ಇಬ್ಬರು ಹೆಂಡತಿಯರನ್ನು ಮ್ಯಾನೇಜ್ ಮಾಡಲು ಹೋದ ಜಾಫರ್ ಮಸಣ ಸೇರಿದ್ದಾನೆ. ತಂದೆ ಹತ್ಯೆಯಾಗಿ, ತಾಯಿ ಪೊಲೀಸರ ವಶದಲ್ಲಿರುವಾಗ ಈಗ ಮೂವರು ಮಕ್ಕಳು ಅನಾಥರಾಗಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಮಾಲೀಕನಿಂದ ಶಸ್ತ್ರ ಚಿಕಿತ್ಸೆ – ರೋಗಿ ಸಾವು

  • ಎಣ್ಣೆ ಕುಡಿಯೋಕೆ ಹಣ ನೀಡಿಲ್ಲ ಅಂತ ಪತ್ನಿಯ ಶೀಲ ಶಂಕಿಸಿ ಕೊಂದ ಪತಿ

    ಎಣ್ಣೆ ಕುಡಿಯೋಕೆ ಹಣ ನೀಡಿಲ್ಲ ಅಂತ ಪತ್ನಿಯ ಶೀಲ ಶಂಕಿಸಿ ಕೊಂದ ಪತಿ

    ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ಕುಡಿಯಲು ಹಣ ನೀಡಲಿಲ್ಲವೆಂದು ಪತ್ನಿಗೆ (Wife) ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಆಕೆಯನ್ನು ಮನಸ್ಸೋ ಇಚ್ಛೆ ಹೊಡೆದು ಕೊಂಡು ಹಾಕಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಿಬ್ಬೂರ ಹಳ್ಳಿಯಲ್ಲಿ ನಡೆದಿದೆ.

    ಗಾಯತ್ರಿ (39) ಮೃತ ಮಹಿಳೆಯಾಗಿದ್ದು, ಅಶ್ವತ್ಥಪ್ಪ ಕೊಲೆ ಮಾಡಿದ ಆರೋಪಿ. ಗಾಯತ್ರಿ ಹಾಗೂ ಅಶ್ವತ್ಥಪ್ಪನಿಗೆ ಮದುವೆಯಾಗಿ 20 ವರ್ಷ ಕಳೆದಿದ್ದು, ಅವರಿಗೆ 18 ವಷದ ಮಗಳು ಹಾಗೂ 14 ವರ್ಷದ ಮಗನಿದ್ದಾನೆ. ಆದರೆ ಅಶ್ವತ್ಥಪ್ಪ ಪ್ರತಿದಿನ ಕುಡಿದು ಬಂದು ಹೆಂಡತಿ ಹಾಗೂ ಮಕ್ಕಳಿಗೆ ಹೊಡೆಯುವುದನ್ನು ಮಾಡುತ್ತಿದ್ದ. ಇದರಿಂದಾಗಿ ಬೇಸತ್ತ ಪತ್ನಿ ಗಾಯತ್ರಿ ಹಾಗೂ ಮಕ್ಕಳು ಪ್ರತಿನಿತ್ಯ ಅಶ್ವತ್ಥಪ್ಪನಿಂದ ತಪ್ಪಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ಮಕ್ಕಳನ್ನು ರಾತ್ರಿಯಾದ ಮೇಲೆ ಸಂಬಂಧಿಗಳ ಮನೆಗೆ ಕಳುಹಿಸುತ್ತಿದ್ದಳು. ಜೊತೆಗೆ ಹಣವಿಲ್ಲ ಮಗ ಶಾಲೆ ಬಿಟ್ಟು ಗ್ಯಾರೆಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ.

    ಆದರೆ ಗುರುವಾರ ಮನೆಗೆ ಬಂದ ಅಶ್ವತ್ಥಪ್ಪ ಕುಡಿಯಲು ಪತ್ನಿ ಬಳಿ ಹಣ (Money) ಕೇಳಿದ್ದಾನೆ. ಆದರೆ ಈ ವೇಳೆ ಗಾಯತ್ರಿ ಹಣವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾಳೆ. ಇದರಿಂದಾಗಿ ಆಕೆ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆ ಎಂದು ಶಂಕಿಸಿದ ಅಶ್ವತ್ಥಪ್ಪ ಆಕೆಗೆ ದೊಣ್ಣೆ ಹಾಗೂ ಮಾರಕಾಸ್ತ್ರಗಳಿಂದ ಹೊಡೆದಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಗಾಯತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬಾಬುರಾವ್ ಚಿಂಚನಸೂರ್ ಅಲ್ಲ, ಚಂಚಲ ಸೂರ: ರವಿಕುಮಾರ್

    ಘಟನೆಗೆ ಸಂಬಂಧಿಸಿ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಶ್ವತ್ಥಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮೃತಳ ಸಂಬಂಧಿಕರು ಮಾತನಾಡಿ , ಕುಡಿಯುವುದಕ್ಕೆ ಹಣ ಇಲ್ಲವೆಂದರೆ ಅಶ್ವತ್ಥಪ್ಪ ತವರು ಮನೆಯಿಂದ ಒಡವೆ ಹಣ ಗಾಯತ್ರಿಗೆ ಹಿಂಸೆ ನೀಡುತ್ತಿದ್ದ. ಈಗ ಸ್ವತಃ ಪತ್ನಿಯನ್ನು ಹೊಡೆದು ಸಾಯಿಸಿದ್ದಾನೆ, ಅವನನ್ನು ಸುಮ್ಮನೆ ಬೀಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಲಿದೆ: ಬಾಬುರಾವ್ ಚಿಂಚನಸೂರ್

  • ಪತಿ ವಿರುದ್ಧ ದೂರು- ಪತ್ನಿಗೆ ಕೋರ್ಟ್ ಆವರಣದಲ್ಲೇ ಆ್ಯಸಿಡ್ ಎರಚಿದ

    ಚೆನ್ನೈ: ನ್ಯಾಯಾಲಯದ (Court) ಆವರಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ (Wife) ಆ್ಯಸಿಡ್ (Acid) ಎರಚಿದ ಘಟನೆ ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ (Coimbatore) ನಡೆದಿದೆ.

    ಶಿವಕುಮಾರ್ ಬಂಧಿತ ಆರೋಪಿ. ಶಿವಕುಮಾರ್ ವಿರುದ್ಧ ಆತನ ಪತ್ನಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನ್ಯಾಯಾಲಯಕ್ಕೆ ಆಗಮಿಸಿದ್ದಳು. ಈ ವೇಳೆ ಶಿವಕುಮಾರ್ ಸಹ ಕೋರ್ಟ್‍ಗೆ ಹಾಜರಾಗಿದ್ದ. ಅಷ್ಟೇ ಅಲ್ಲದೇ ನೀರಿನ ಬಾಟಲಿಯಲ್ಲಿ ಆ್ಯಸಿಡ್ ತೆಗೆದುಕೊಂಡಿದ್ದ. ಅದಾದ ಬಳಿಕ ಪತ್ನಿ ಕಾಣುತ್ತಿದ್ದಂತೆ ಏಕಾಏಕಿ ಶಿವಕುಮಾರ್ ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದಾರೆ.

    ಘಟನೆ ನಡೆಯುತ್ತಿದ್ದಂತೆ ಅಲ್ಲಿದ್ದ ವಕೀಲರು ಶಿವಕುಮಾರ್‌ನನ್ನು ಹಿಡಿದು ಥಳಿಸಿದ್ದಾರೆ. ಅದಾದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ವೇಳೆ ಆರೋಪಿಯ ಪತ್ನಿ ಹಾಗೂ ಇಬ್ಬರು ವಕೀಲರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನೆಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: RBI ಹೆಸರಲ್ಲಿ ಲಕ್ಷ ಲಕ್ಷ ಹಣ ವಂಚನೆ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

    ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

  • ಆಸ್ಪತ್ರೆಯಲ್ಲಿ ಪತ್ನಿಗೆ ಸೊಳ್ಳೆ ಕಚ್ಚಿದ್ದಕ್ಕೆ ಪೊಲೀಸರ ಸಹಾಯ ಕೇಳಿದ ವ್ಯಕ್ತಿ

    ಆಸ್ಪತ್ರೆಯಲ್ಲಿ ಪತ್ನಿಗೆ ಸೊಳ್ಳೆ ಕಚ್ಚಿದ್ದಕ್ಕೆ ಪೊಲೀಸರ ಸಹಾಯ ಕೇಳಿದ ವ್ಯಕ್ತಿ

    ಲಕ್ನೋ: ಆಸ್ಪತ್ರೆಯಲ್ಲಿ (Hospital) ಪತ್ನಿಗೆ ಸೊಳ್ಳೆ (Mosquitoes) ಕಚ್ಚುತ್ತಿದೆ ಎಂದು ವ್ಯಕ್ತಿಯೊಬ್ಬ ಪೊಲೀಸರ ಬಳಿ ಸಹಾಯ ಕೇಳಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಚಂದೌಸಿಯ ರಾಜ್ ಮೊಹಲ್ಲಾದ ನಿವಾಸಿ ಅಸದ್ ಖಾನ್ ಪೊಲೀಸರ ಬಳಿ ಸಹಾಯ ಕೇಳಿದ ವ್ಯಕ್ತಿ. ಈತ ಪತ್ನಿಗೆ (Wife) ಹೆಣ್ಣು ಮಗು ಜನಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಚಂದೌಸಿಯ ಹರಿ ಪ್ರಕಾಶ್ ನರ್ಸಿಂಗ್ ಹೋಮ್‍ಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆಗೆ ಹೆಚ್ಚು ಸೊಳ್ಳೆ ಕಡಿದಿತ್ತು. ಇದನ್ನು ಗಮನಿಸಿದ ಅಸದ್ ಖಾನ್ ಟ್ವೀಟ್ ಮಾಡಿದ್ದು, ಸಹಾಯಕ್ಕಾಗಿ ಉತ್ತರಪ್ರದೇಶದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾನೆ.

    ಟ್ವೀಟ್‍ನಲ್ಲಿ ಏನಿದೆ?: ನನ್ನ ಹೆಂಡತಿ ಚಂದೌಸಿಯಲ್ಲಿರುವ ಹರಿ ಪ್ರಕಾಶ್ ನಸಿರ್ಂಗ್ ಹೋಮ್‍ನಲ್ಲಿ ಪುಟ್ಟ ದೇವತೆಗೆ ಜನ್ಮ ನೀಡಿದ್ದಾಳೆ. ನನ್ನ ಹೆಂಡತಿ ನೋವಿನಿಂದ ಬಳಲುತ್ತಿದ್ದಾಳೆ. ಜೊತೆಗೆ ಆಕೆಗೆ ಹಲವಾರು ಸೊಳ್ಳೆಗಳು ಕಚ್ಚುತ್ತಿವೆ. ದಯವಿಟ್ಟು ನನಗೆ ತಕ್ಷಣ ಮಾರ್ಟೀನ್ ಕಾಯಿಲ್ ಅನ್ನು ಒದಗಿಸಿ ಎಂದು ಟ್ವೀಟ್ ಮಾಡಿದ್ದಾನೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನ ಮನೆಗೆ ಬೆಳಕಾದ ಗುರು ಬೆಳದಿಂಗಳು ಟ್ರಸ್ಟ್

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಿಂದ ಸೂಚನೆ ಪಡೆದ ಪೊಲೀಸರು ಸೊಳ್ಳೆ ನಿವಾರಕ ಕಾಯಿಲ್‍ನೊಂದಿಗೆ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆಗೆ ತಲುಪಿಸಿದರು. ವಿಷಯವನ್ನು ಅರಿತು ಸಹಾಯ ಮಾಡಿದ ಪೊಲೀಸರಿಗೆ ಅಸಾದ್ ಧನ್ಯವಾದ ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಸದ್, ನನ್ನ ಹೆಂಡತಿ ನಮ್ಮ ಮಗುವಿಗೆ ಜನ್ಮ ನೀಡಲು ಆಸ್ಪತ್ರೆಯಲ್ಲಿದ್ದಳು. ಆಕೆ ಅನುಭವಿಸುತ್ತಿದ್ದ ನೋವಿನ ಜೊತೆಗೆ ಸೊಳ್ಳೆಗಳು ಕಚ್ಚುತ್ತಿದ್ದವು. ಸಮಯ ಬೆಳಗ್ಗೆ 2: 45 ಆಗಿದ್ದರಿಂದ ಯುಪಿ ಪೊಲೀಸರನ್ನು ಹೊರತುಪಡಿಸಿ ಬೇರೆಯವರ ಸಹಾಯವನ್ನು ಪಡೆಯಲು ನಾನು ಯೋಚಿಸಲಿಲ್ಲ. ಆದರೆ ನಾನು ಟ್ವೀಟ್ ಮಾಡಿದ ಕೂಡಲೇ ನನಗೆ ಇನ್ನೊಂದು ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿತು. ಅದರ ನಂತರ, ಅವರು ಸೊಳ್ಳೆ ನಿವಾರಕ ಕಾಯಿಲ್ ಅನ್ನು 10 ರಿಂದ 15 ನಿಮಿಷಗಳಲ್ಲಿ ತಲುಪಿಸಿದರು. ಈ ಹಿನ್ನೆಲೆಯಲ್ಲಿ ಯುಪಿ ಪೊಲೀಸರಿಗೆ ಸಹಾಯಕ್ಕೆ ಧನ್ಯವಾದ ಹೇಳುತ್ತೇನೆ ಎಂದರು. ಇದನ್ನೂ ಓದಿ: ಪಕ್ಷದಲ್ಲೇ ಉಳಿದುಕೊಳ್ಳುವಂತೆ ನಾರಾಯಣಗೌಡರಿಗೆ ಯಡಿಯೂರಪ್ಪ ಬುದ್ಧಿವಾದ