Tag: Wife

  • ಮೊದಲರಾತ್ರಿಯೇ ಪತಿ ನಪುಂಸಕನೆಂದು ಬಯಲು- ವಿಚ್ಚೇದನ ಕೇಸ್ ಹಿಂಪಡೆಯುವಂತೆ ಪತ್ನಿಗೆ ಬೆದರಿಕೆ

    ಮೊದಲರಾತ್ರಿಯೇ ಪತಿ ನಪುಂಸಕನೆಂದು ಬಯಲು- ವಿಚ್ಚೇದನ ಕೇಸ್ ಹಿಂಪಡೆಯುವಂತೆ ಪತ್ನಿಗೆ ಬೆದರಿಕೆ

    ಬೆಂಗಳೂರು: ವಿಚ್ಛೇದನ ಪ್ರಕರಣ ವಾಪಸ್ ಪಡೆಯುವಂತೆ ಗಂಡನ ಕಡೆಯವರು ಬೆದರಿಕೆ ಹಾಕಿದ್ದಾರೆಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬೆಂಗಳೂರಿನ ನಿವಾಸಿ ಇಂದ್ರಜಿತ್ ನರ ದೌರ್ಬಲ್ಯವಿದ್ದರೂ ಮಧುರಾ ಎಂಬಾಕೆಯನ್ನು ಮದುವೆಯಾಗಿದ್ದ. ಮೊದಲ ರಾತ್ರಿಯಲ್ಲಿ ಇಂದ್ರಜಿತ್ ನಪುಂಸಕ ಎಂಬುದು ಮಧುರಾಗೆ ಗೊತ್ತಾಗಿತ್ತು. ಮದುವೆಯಾದ ಗಂಡ ನಪುಂಸಕ ಅಂತಾ ಗೊತ್ತಿದ್ದರು ಮಧುರಾ ಇಂದ್ರಜಿತ್‍ನೊಂದಿಗೆ ಸಂಸಾರ ಮಾಡಿದ್ದರು. ಗಂಡನ ದೌರ್ಬಲ್ಯ ಹೊರ ಜಗತ್ತಿಗೆ ಗೊತ್ತಾದರೆ ಮಾನ ಮರ್ಯಾದೆ ಹೊಗುತ್ತದೆ ಎಂದು ಮಧುರಾ ಭಯದಲ್ಲಿದ್ದರು. ಈ ನಡುವೆ ಇಂದ್ರಜಿತ್, ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಇಂದ್ರಜಿತ್ ಮತ್ತು ಕುಟುಂಬದವರು ಸೇರಿ ಮಧುರಾ ನಡತೆ ಸರಿ ಇಲ್ಲ ಅಂತಾ ಹಣೆಪಟ್ಟೆ ಕಟ್ಟಿದ್ದಾರೆ ಅಂತ ಆರೋಪಿಸಲಾಗಿದೆ.

    ಗಂಡ ಇಂದ್ರಜಿತ್ ಹಾಗೂ ಕುಟುಂಬದವರ ಕಾಟ ತಾಳಲಾರದೆ ಮಧುರಾ ವಿಚ್ಛೇದನದ ಮೊರೆ ಹೊಗಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಇಂದ್ರಜಿತ್‍ನಿಂದ ವಿಚ್ಛೇದನಕ್ಕಾಗಿ ಮನವಿ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ವಿಚ್ಛೇದನ ಪ್ರಕರಣ ವಾಪಸ್ ಪಡೆಯುವಂತೆ ಇಂದ್ರಜಿತ್ ಕಡೆಯವರಿಂದ ಬೆದರಿಕೆ ಬಂದಿದೆ ಎಂದು ಮಧುರಾ ಆರೋಪಿಸಿದ್ದಾರೆ. ರಾಜಕೀಯ ಬೆಂಬಲ ಹೊಂದಿರೋ ಇಂದ್ರಜಿತ್ ಅಪರಿಚಿತ ವ್ಯಕ್ತಿಗಳನ್ನು ಮನೆ ಬಳಿ ಕಳುಹಿಸಿ ಕೇಸ್ ವಾಪಸ್ ಪಡೆಯುವಂತೆ ಬೆದರಿಸಿದ್ದಾರೆ. ಕೇಸ್ ವಾಪಸ್ ಪಡೆಯದೆ ಹೋದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರೋ ಮಧುರಾ ಈ ಸಂಬಂಧ ಗಂಡ ಇಂದ್ರಜಿತ್, ವಿಶ್ವನಾಥ್, ಪರಶುರಾಮ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ

    ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • 10 ವರ್ಷಗಳಿಂದ ಸೆಕ್ಸ್ ನಿರಾಕರಿಸಿದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

    10 ವರ್ಷಗಳಿಂದ ಸೆಕ್ಸ್ ನಿರಾಕರಿಸಿದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

    ಲಕ್ನೋ: 10 ವರ್ಷಗಳಿಂದ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸಿದ್ದಕ್ಕೆ 30 ವರ್ಷದ ಮಹಿಳೆಯೊಬ್ಬರು ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿರೋ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್‍ನಲ್ಲಿ ನಡೆದಿದೆ.

    ಗುರುವಾರ ಸುಮಾರು 9.30ರ ಸುಮಾರಿಗೆ ಈ ಘಟನೆ ನಡೆದಿದೆ. ದಂಪತಿ ಬುಲಂದ್‍ಶಹರ್‍ನಿಂದ ಬಂದು 8 ವರ್ಷಗಳಿಂದ ಘಾಜಿಯಾಬಾದ್‍ನಲ್ಲಿ ವಾಸವಿದ್ದರು. ಇವರಿಗೆ ಮಕ್ಕಳಾಗಿರಲಿಲ್ಲ. ಆಗಾಗ ಇದೇ ವಿಷಯವಾಗಿ ಜಗಳವಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಮಹಿಳೆಯ ಗಂಡ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದದೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಆಕೆಯೊಂದಿಗೆ ಮಕ್ಕಳಾಗದಂತೆ ತಡೆದಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಗಂಡನ ವರ್ತನೆಯಿಂದ ಬೇಸತ್ತು ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಬಾತ್‍ರೂಮಿನಿಂದ ಹೊರಬಂದ ಪತಿಯ ಮೇಲೆ ಮಹಿಳೆ ದಾಳಿ ಮಾಡಿದ್ದಾರೆ ಅಂತ ಪೊಲೀಸ್ ಅಧಿಕರಿ ಅನಿಲ್ ಕುಮಾರ್ ಯಾದವ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಘಟನೆ ಬಗ್ಗೆ ಖೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ನನ್ನ ಗಂಡನಿಗೆ ಈ ರೀತಿ ಮಾಡದೆ ಬೇರೆ ದಾರಿ ಇರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಹಲ್ಲೆಗೊಳಗಾದ ಪತಿ ಕ್ಯಾಬ್ ಆಪರೇಟರ್ ಆಗಿದ್ದು, ಎರಡು ಇನ್ನೋವಾ ಕಾರ್‍ಗಳನ್ನ ಹೊಂದಿದ್ದಾರೆಂದು ವರದಿಯಾಗಿದೆ.

    ಮಕ್ಕಳಾಗಿರಲಿಲ್ಲ: ನನ್ನ ಗಂಡ ತನ್ನ ಪುರುಷತ್ವದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಬೇರೆ ಮಹಿಳೆಯರೊಂದಿಗೆ ನನಗೆ ಮಕ್ಕಳಾಗುತ್ತವೆ. ಆದ್ರೆ ನಿನ್ನೊಂದಿಗೆ ಆಗಲ್ಲ ಎಂದು ಹೇಳುತ್ತಿದ್ದರು. ಆದರೂ ನಾನು ಅವರನ್ನು ಸಹಿಸಿಕೊಂಡಿದ್ದೆ. ಅವರು ನನ್ನನ್ನು ಯಾಕೆ ದ್ವೇಷಿಸುತ್ತಾರೆಂದು ಗೊತ್ತಿಲ್ಲ. ಅವರು ಆಗಾಗ ನನ್ನನ್ನು ದೂರ ಹೋಗುವಂತೆ ಹೇಳುತ್ತಿದ್ದರು. ನಮಗೆ 2006ರಲ್ಲಿ ಮದುವೆಯಾಯಿತು. ನನ್ನನ್ನು ಮತ್ತು ನನ್ನ ತಂಗಿಯರನ್ನು ಅವರು ಆಗಾಗ ನಿಂದಿಸುತ್ತಿದ್ದರು. ನನ್ನ ಮೇಲೆ ಹಲ್ಲೆ ಮಾಡುತ್ತಿದ್ದರು. ನಮಗೆ ಮಕ್ಕಳಾಗಬೇಕೆಂದು ನಾನು ಸಾಕಷ್ಟು ಬಾರಿ ಅವರನ್ನು ಒತ್ತಾಯಿಸಿದ್ದೆ. ಆದರೆ ಅವರು ನನ್ನೊಂದಿಗೆ ಸಂಭೋಗ ಮಾಡುತ್ತಿರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾರೆ.

    ಪಶ್ಚಾತ್ತಾಪವಿಲ್ಲ: ಇದೇ ಕಾರಣಕ್ಕೆ ನಮ್ಮ ಮಧ್ಯೆ ಬುಧವಾರದಂದು ಜಗಳ ನಡೆದಿತ್ತು. ನಾನು ಸಾಕಷ್ಟು ಮಾನಸಿಕ ಹಿಂಸೆ ಮತ್ತು ಅವಮಾನ ಅನುಭವಿಸಿದ್ದೇನೆ. ಆದ್ದರಿಂದ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನ ಸಂಬಂಧಿಕರು ಮಕ್ಕಳಾಗದಿರುವ ಬಗ್ಗೆ ನನ್ನನ್ನು ಪ್ರಶ್ನಿಸಿದಾಗ ನನ್ನ ಬಳಿ ಯಾವುದೇ ಉತ್ತರವಿರಲಿಲ್ಲ ಎಂದು ಆಕೆ ಹೇಳಿದ್ದಾರೆ.

    ಘಟನೆ ಬಳಿಕ ಹಲ್ಲೆಗೊಳಗಾದ ಪತಿಯನ್ನು ನೋಯ್ಡಾದ ಜೇಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಈ ಬಗ್ಗೆ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಹೇಳಿಕೆ ನೀಡಿದ್ದು, ವೈದ್ಯರು ನನ್ನ ಸಹೋದರನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆತ ಆಗ ತಾನೇ ಬಾತ್‍ರೂಮಿನಿಂದ ಹೊರಗೆ ಬಂದಿದ್ದ. ನನ್ನ ಸಹೋದರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ ಆಕೆ ಹೊರಗಿನಿಂದ ಬಾಗಿಲನ್ನು ಲಾಕ್ ಮಾಡಿ ಹೋಗಿದ್ದಳು. ನಂತರ ನನ್ನ ಸಹೋದರ ಪೊಲೀಸರಿಗೆ ಕರೆ ಮಾಡಿದ ಎಂದು ಹೇಳಿದ್ದಾರೆ.

    ಪತಿಯ ಸ್ಥಿತಿ ಗಂಭೀರ: ಹಲ್ಲೆಗೊಳಗಾದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ನಾವು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಅವರ ಸ್ಥಿತಿ ಗಂಭಿರವಾಗಿದೆ. ಅವರು ಬದುಕುಳಿತಯುತ್ತಾರೆ ಅಂತ ಅಂದುಕೊಂಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಂತರವೂ ಮಕ್ಕಳಾಗುತ್ತವೆ ಎಂದು ಆಸ್ಪತ್ರೆಯ ವೈದ್ಯರಾದ ಡಾ. ಸೌರಭ್ ಗುಪ್ತಾ ಹೇಳಿದ್ದಾರೆ.

  • ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆಗೈದ ಪತಿ!

    ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆಗೈದ ಪತಿ!

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

    25 ವರ್ಷದ ಸುಶೀಲ ಕೊಲೆಯಾದ ದುರ್ದೈವಿ. ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕೋಟೆಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಶೀಲಾ ಗಂಡನಾದ 35 ವರ್ಷದ ಸತೀಶ್, ಹೆಂಡತಿಯ ಮೇಲಿನ ಅನುಮಾನದಿಂದ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಆರೋಪಿ ಸತೀಶ್‍ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಮೃತ ಸುಶೀಲ ಮನೆ ಕೆಲಸ ಮಾಡುತ್ತಿದ್ದು, ಸತೀಶ್ ಗಾರೆ ಕೆಲಸಕ್ಕೆ ಹೋಗುತ್ತಿದ್ದ. ಈ ದಂಪತಿಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಘಟನೆ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾವಿನಲ್ಲೂ ಒಂದಾದ ದಂಪತಿ- ಪತ್ನಿ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟ ಪತಿ!

    ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಮಾರನಹಳ್ಳಿ ತಾಂಡಾದ ದಂಪತಿ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ.

    65 ವರ್ಷದ ಚಂದ್ರನಾಯ್ಕ ಹಾಗೂ 60 ವರ್ಷದ ರುಕ್ಮಿಣಿಬಾಯಿ ಸಾವಿನಲ್ಲೂ ಒಂದಾದ ದಂಪತಿ. ಚಂದ್ರನಾಯ್ಕ ಇಂದು ಸಂಜೆ ಪತ್ನಿಯ ತೊಡೆಯ ಮೇಲೆ ಮಲಗಿದ್ದಾಗಲೇ ಪ್ರಾಣ ಬಿಟ್ಟಿದ್ದಾರೆ. ನಂತರ ಕೆಲವೇ ಕ್ಷಣಗಳಲ್ಲಿ ಪತ್ನಿ ರುಕ್ಮಿಣಿಬಾಯಿಯೂ ಸಾವನ್ನಪ್ಪಿದ್ದಾರೆ.

    ದಂಪತಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಒಂದೆಡೆ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ರೆ, ಊರಿನ ಜನರು ಮೃತ ದಂಪತಿ ನೋಡಿ ಎಂತಾ ಸಾವೂ. ಜೊತೆ ಜೊತೆ ಬಾಳಿ ಸಾವಿನಲ್ಲೂ ಕೂಡಾ ಒಂದಾದ್ರೂ ಅಂತಿದ್ದಾರೆ.

  • ಪತ್ನಿಯ ಮೇಲೆ ಅನುಮಾನಗೊಂಡ ಪತಿ ಮಧ್ಯರಾತ್ರಿ ಏನ್ ಮಾಡ್ದ ಗೊತ್ತಾ?

    ಕಾಬೂಲ್: ಪ್ರತೀ ಬಾರಿಯೂ ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ಅನುಮಾನದಿಂದಲೇ ವರ್ತಿಸುತ್ತಿದ್ದ ಪತಿ ಈ ಬಾರಿಯೂ ಅನುಮಾನಗೊಂಡು ಮಧ್ಯರಾತ್ರಿಯೇ ಆಕೆಯ ಎರಡೂ ಕಿವಿಗಳನ್ನು ಕತ್ತರಿಸಿದ ಅಮಾನವೀಯ ಘಟನೆಯೊಂದು ಅಫ್ಘಾನಿಸ್ತಾನದಲ್ಲಿ ನಡೆದಿದೆ.

    ಉತ್ತರ ಪ್ರಾಂತ್ಯದ ಬಾಲ್ಕ್ ನಿವಾಸಿ ಝರೀನಾ ಇದೀಗ ಎರಡೂ ಕಿವಿಗಳನ್ನು ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತನ್ನ ಪತಿಯ ಕೃತ್ಯದ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಝರೀನಾ, `ನನ್ನ ಪತಿ ಅನುಮಾನ ಪಿಶಾಚಿಯಾಗಿದ್ದಾನೆ. ಪ್ರತೀ ಬಾರಿಯೂ ನಾನು ಹೆತ್ತವರ ಮನೆಗೆ ಹೋಗಿ ಬಂದ ಬಳಿಕ ನನ್ನನ್ನು ಅನುಮಾನದಿಂದಲೇ ನೋಡುತ್ತಿದ್ದ. ಈ ಬಾರಿಯೂ ನಾನು ಹೆತ್ತವರ ಮನೆಗೆ ಹೋಗಿ ಬಂದಿದ್ದೆ. ಅಂತೆಯೇ ಬಂದ ಬಳಿಕ ಮಧ್ಯರಾತ್ರಿ ನನ್ನನ್ನು ನಿದ್ದೆಯಿಂದ ಎಬ್ಬಿಸಿ ಕಾರಣವಿಲ್ಲದೇ ಎರಡೂ ಕಿವಿಗಳನ್ನು ಕತ್ತರಿಸಿದ್ದಾನೆ ಅಂತಾ ತನ್ನ ಅಳಲು ತೋಡಿಕೊಂಡಿದ್ದಾರೆ.

    ಝರೀನಾಗೆ 13ನೇ ವಯಸ್ಸನಲ್ಲೇ ಮದುವೆಯಾಗಿತ್ತು. ಸದ್ಯ ಝರೀನಾ ಆರೋಗ್ಯ ಸ್ಥಿತಿ ಸುಧಾರಣೆಯಾಗುತ್ತಿದ್ದು, ಪತಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ ಅಂತಾ ಪೊಲಿಸರ ಜೊತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಆರೋಪಿ ತಲೆಮರೆಸಿಕೊಂಡಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.