Tag: Wife

  • ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!

    ಪರಪುರುಷರು ನೋಡದೇ ಇರಲು ಸುಂದರಿ ಪತ್ನಿಯ ತಲೆಯನ್ನೇ ಬೋಳಿಸಿದ ಪತಿರಾಯ!

    ಬೆಂಗಳೂರು: ಪರಪುರುಷರು ಪತ್ನಿಯನ್ನು ನೋಡಬಾರದು ಎನ್ನುವ ಕಾರಣಕ್ಕೆ ಪತ್ನಿಯ ಕೇಶಮುಂಡನ ಮಾಡಿ ಮುಖಕ್ಕೆ ಗುದ್ದಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಗೆ ನಾಲ್ಕು ವರ್ಷದ ಮಗನಿದ್ದಾನೆ. ಆದ್ರೆ ಪತಿರಾಯನಿಗೆ ಹೆಂಡತಿ ಸೌಂದರ್ಯದ ಚಿಂತೆ. ಸೌಂದರ್ಯವತಿಯಾದ ನನ್ನ ಹೆಂಡತಿಯನ್ನು ಬೇರೆಯವರು ನೋಡ್ತಾರೆ ಎನ್ನುವ ಕೊರಗು ಕಾಡುತಿತ್ತು. ಹೀಗಾಗಿ ಪತ್ನಿಯೊಂದಿಗೆ ಪತಿರಾಯ ಈ ವಿಚಾರದ ಬಗ್ಗೆ ಆಗಾಗ ಜಗಳ ಮಾಡುತ್ತಿದ್ದ.

    ಮದುವೆಗೂ ಮುಂಚಿನಿಂದ ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಡು ನಿನ್ನನ್ನ ಎಲ್ಲರೂ ನೋಡ್ತಾರೆ ಅಂತಾ ಪತ್ನಿಗೆ ಹಿಂಸೆ ಕೊಡುತ್ತಿದ್ದ. ಜಗಳ ಜಾಸ್ತಿಯಾಗಿ ಏಪ್ರಿಲ್ 17 ರಂದು ಹೆಂಡತಿಯ ಮುಖ ವಿರೂಪಗೊಳಿಸಿ ತಲೆ ಬೋಳಿಸಿದ್ದಾನೆ. ನೊಂದ ಮಹಿಳೆ ಈ ಬಗ್ಗೆ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ.

    ನನಗೆ ಯಾವುದೇ ಕೌನ್ಸಿಲಿಂಗ್ ಬೇಡ. ನನ್ನ ಗಂಡನಿಂದ ಮುಕ್ತಿ ಕೊಡಿ ಅಂತಾ ನೊಂದ ಮಹಿಳೆ ಕೇಳಿದ್ದಾರೆ. ಮಹಿಳೆಯ ಸ್ಥಿತಿಯನ್ನು ನೋಡಿದ ಮಹಿಳಾ ಸಹಾಯವಾಣಿ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಈ ಬಗ್ಗೆ ಮಹಿಳೆ ಕಡೆಯಿಂದ ದೂರು ದಾಖಲಾಗಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಜಿ ಹಳ್ಳಿ ಪೊಲೀಸರು ಹೇಳಿದ್ದಾರೆ.

    ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ನೊಂದ ಮಹಿಳೆ ನಮ್ಮ ಬಳಿ ಬಂದಿದ್ದಳು. ವಾರಗಳ ಕಾಲ ಮನೆಯಲ್ಲಿ ಕೂಡಿ ಹಾಕಿ ಪತಿ ಹಿಂಸೆ ನೀಡಿದ್ದಾನೆ ಎಂದು ಹೇಳಿಕೆ ನೀಡಿದ್ದಳು. ಈ ವೇಳೆ ನನಗೆ ವಿಚ್ಚೇದನ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಳು. ನಾವು ಕೌನ್ಸಿಲಿಂಗ್ ಮಾಡುತ್ತೇವೆ ಎಂದು ಹೇಳಿದ್ದಕ್ಕೆ, ಆಕೆ, ನನಗೆ ಆತನ ಜೊತೆ ಬದುಕಲು ಇಷ್ಟವಿಲ್ಲ. ನೀವು ಆತನಿಗೆ ಕೌನ್ಸಿಲಿಂಗ್ ಮಾಡಿದ್ರೆ ಅವನು ನನ್ನ ಹೊಡೆಯುತ್ತಾನೆ, ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ ಅವರು ತಿಳಿಸಿದ್ದಾರೆ.

  • ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

    ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

    ವಿಜಯಪುರ: ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

    ಖಾಜಾ ಎಂಬವನೇ ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ. ಖಾಜಾ ಮತ್ತು ಪತ್ನಿ ಮಹಾದೇವಿ ನಡುವೆ ಕಳೆದ 12 ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಮಹಾದೇವಿ ನನಗೆ ಜೀವಾನಂಶ ನೀಡಬೇಕೆಂದು ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ವಾದ ಹೂಡಿದ್ದರು. ಈ ಸಂಬಂಧ ಪತಿ-ಪತ್ನಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.

    ಇಂದು ಇದೇ ವಿಷಯವಾಗಿ ಜಗಳ ನಡೆದಿದೆ. ಜಗಳದಲ್ಲಿ ಕೋಪಗೊಂಡ ಖಾಜಾ ರಿವಾಲ್ವಾರನಿಂದ ಫೈರ್ ಮಾಡಿದ್ದಾರೆ. ಗುಂಡು ನೇರವಾಗಿ ಮಹಾದೇವಿ ಅವರ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಮಹಾದೇವಿ ಅವರನ್ನು ಮಹಾರಾಷ್ಟ್ರದ ಸೋಲಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಜಾ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

     

  • ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

    ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

    ಬೀದರ್: ಪತ್ನಿಯ ಸಂಬಂಧಿಕರು ವರದಕ್ಷಿಣೆಯಾಗಿ ನೀಡಿದ ಹಣವನ್ನು ಮರಳಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡ ಪತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಔರಾದ್ ತಾಲೂಕಿನ ಬೆಡಕುಂದಾ ಗ್ರಾಮದಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಅರವಿಂದ್ ಶಂಕರ್ ಆತ್ಮಹತ್ಯೆಗೆ ಶರಣಾದ ಪತಿರಾಯ. ಒಂದು ವರ್ಷದ ಹಿಂದೆ ಭಾಲ್ಕಿ ತಾಲೂಕಿನ ಜಯಶ್ರೀ ಎಂಬವರನ್ನು ಮದುವೆಯಾಗಿದ್ದರು. ಸಂಸಾರದ ಗಲಾಟೆಯಿಂದಾಗಿ ಜಯಶ್ರೀ ಅವರು ತವರು ಮನೆ ಸೇರಿದ್ದರು.

    ತವರು ಮನೆಗೆ ಸೇರಿದ ಬಳಿಕ ಜಯಶ್ರೀ ಮತ್ತು ಅವರ ಕುಟುಂಬಸ್ಥರು ಮದುವೆ ವೇಳೆ ನೀಡಿದ್ದ ವರದಕ್ಷಿಣೆ 5 ಲಕ್ಷ ರೂ.ಗಳನ್ನು ಮರಳಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಈ ಹಣವನ್ನು ನೀಡದೇ ಇದ್ದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಅರವಿಂದ್ 4.5 ಲಕ್ಷ ರೂ. ಹಣವನ್ನು ಹಿಂದುರುಗಿಸಿದ್ದರು. ಆದರೆ ಪತ್ನಿ ಮತ್ತು ಕುಟುಂಬಸ್ಥರ ಕಿರುಕುಳಕ್ಕೆ ಅರವಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಹೇಳಲಾಗುತ್ತಿದೆ.

    ಸ್ಥಳಕ್ಕೆ ಠಾಣಾಕುಶನೂರು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಹಣಕ್ಕಾಗಿ ಪತಿಯ ಹೆಣ ಬಿಟ್ಟು ಪರಾರಿಯಾದ ಪತ್ನಿ!

    ಹಣಕ್ಕಾಗಿ ಪತಿಯ ಹೆಣ ಬಿಟ್ಟು ಪರಾರಿಯಾದ ಪತ್ನಿ!

    ಬಾಗಲಕೋಟೆ: ಹಣದ ಮುಂದೆ ಮಾನವೀಯತೆಯ ಮೌಲ್ಯಗಳು ಹಾಗೂ ಸಂಬಂಧಗಳೂ ಉಳಿಯೋದಿಲ್ಲ ಅನ್ನೋದಕ್ಕೆ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹಣಕ್ಕಾಗಿ ಪತಿಯ ಶವವನ್ನೇ ರಾತ್ರೋ ರಾತ್ರಿ ಬಿಟ್ಟು ಪತ್ನಿ ಪರಾರಿಯಾಗಿದ್ದಾಳೆ.

    ಇದನ್ನೂ ಓದಿ: ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

    ರೇಣುಕಾ ಎಂಬ ಮಹಿಳೆ ಹಣಕ್ಕಾಗಿ ಪತಿಯ ಶವವನ್ನು ಬಿಟ್ಟು ಹೋದ ಪತ್ನಿ. ಸೋಮವಾರ ರಾತ್ರಿ ರೇಣುಕಾ ಪತಿ ಶಿವಲಿಂಗಪ್ಪ ಬೇವಿನಮಟ್ಟಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಶಿವಲಿಂಗಪ್ಪ ಅವರು ನಾಲ್ಕು ವರ್ಷದ ಹಿಂದೆ ತಮ್ಮ 13 ಎಕರೆ ಜಮೀನನ್ನು ಸುಮಾರು 80 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಸೋಮವಾರ ಶಿವಲಿಂಗಪ್ಪ ಮರಣ ಹೊಂದಿದ ನಂತರ ಮನೆಯಲ್ಲಿನ ಹಣ ಲಪಟಾಯಿಸಿ ರೇಣುಕಾ ರಾತ್ರೋ ರಾತ್ರಿ ಮಗನೊಂದಿಗೆ ಗ್ರಾಮದಿಂದ ಕಾಲ್ಕಿತ್ತಿದ್ದಾಳೆ.

    ರೇಣುಕಾಳಿಗೆ ಗ್ರಾಮಸ್ಥರು ಬುದ್ಧಿ ಹೇಳಲು ಹೋದ್ರೆ ಅವರ ಮೇಲೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಬೆದರಿಕೆ ಹಾಕಿ ಪರಾರಿಯಾಗಿದ್ದಾಳೆ. ಹೀಗಾಗಿ ಗ್ರಾಮದ ಜನತೆಯೇ ದುಡ್ಡು ಸೇರಿಸಿ ಶಿವಲಿಂಗಪ್ಪರ ಅಂತ್ಯಕ್ರಿಯೆ ಮಾಡಿ, ನಂತರ ಪತ್ನಿ ರೇಣುಕಾಳ ಮೇಲೆ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಶಿವಲಿಂಗಪ್ಪರ ತಾಯಿ

     

  • ಬಿಜೆಪಿಯ ಪುರಸಭೆ ಸದಸ್ಯನ ಮಗನ ಲವ್ ಸೆಕ್ಸ್ ದೋಖಾ

    ಬಿಜೆಪಿಯ ಪುರಸಭೆ ಸದಸ್ಯನ ಮಗನ ಲವ್ ಸೆಕ್ಸ್ ದೋಖಾ

    – ಸರಸದ ವಿಡಿಯೋ ಮಾಡಿ ಲಕ್ಷಾಂತರ ಹಣ ಕೇಳ್ತಿದ್ದ

    – ದೂರು ದಾಖಲಾದರೂ ಆರೋಪಿಯ ಬಂಧನವಾಗಿಲ್ಲ

    ಚಿಕ್ಕೋಡಿ: ಬಿಜೆಪಿ ಪಕ್ಷದ ಪುರಸಭೆ ಸದಸ್ಯರ ಮಗನೊಬ್ಬ ಐದು ಮಂದಿ ಮಹಿಳೆಯರಿಗೆ ಲವ್ ಸೆಕ್ಸ್ ಧೋಕಾ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಚಿಕ್ಕೋಡಿ ಪುರಸಭೆ 18 ನೇ ವಾರ್ಡಿನ ಸದಸ್ಯ ಸುರೇಶ ಕಟ್ಟಿಕರ ಪುತ್ರ ಸಂಜೀವ ಕಟ್ಟೀಕರ ಮಹಿಳೆಯರಿಗೆ ಮೋಸ ಮಾಡಿರುವ ಚಪಲ ಚನ್ನಿಗರಾಯ.

    5 ಮಹಿಳೆಯರಿಗೆ ಮೋಸ ಮಾಡಿರುವ ಈಗ ಚಿಕ್ಕೋಡಿ ತಾಲೂಕಿನ ಕಬ್ಬೂರು ಗ್ರಾಮದ ಯುವತಿಯೊಂದಿಗೆ ವಿವಾಹವಾಗಲು ಹೊರಟಿದ್ದಾನಂತೆ. ಈ ಬಗ್ಗೆ ಮಾಹಿತಿ ತಿಳಿದ ನೊಂದ ಮಹಿಳೆಯೊಬ್ಬರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಈ ಕಾಮುಕ ಸಂಜೀವ ರಸ್ತೆಯಲ್ಲಿಯೇ ಅರಿಶಿಣ ಬೇರು ಕಟ್ಟಿ ಇನ್ನು ಮುಂದೆ ನೀನೇ ನನ್ನ ಹೆಂಡತಿ ಎಂದು ನಂಬಿಸಿ ಯುವತಿಯರಿಗೆ ಮೋಸ ಮಾಡುತ್ತಿದ್ದ. ಅಲ್ಲದೇ ಎಂದೆಂದಿಗೂ ನೀನೆ ನನ್ನ ಹೆಂಡತಿ ಅಂತಾ ಮಹಿಳೆಯರೊಂದಿಗೆ ಸರಸವಾಡಿ ಅದನ್ನೇ ವೀಡಿಯೋ ಮಾಡಿಟ್ಟುಕೊಂಡು ಲಕ್ಷಾಂತರ ರೂ. ಹಣ ಪೀಕುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.

    ಬಿಜೆಪಿ ಮುಖಂಡ ಈಶ್ವರಪ್ಪನವರ ಹೆಸರು ಹೇಳಿ ಮಹಿಳೆಯರನ್ನು ಬೆದರಿಸುತ್ತಿದ್ದ ಎಂಬ ಮಾಹಿತಿಯನ್ನು ನೊಂದ ಮಹಿಳೆಯರು ತಿಳಿಸಿದ್ದಾರೆ. ಈತನ ಈ ಮಹಾನ್ ಕಾರ್ಯಗಳನ್ನು ನೊಂದ ಇಬ್ಬರು ಮಹಿಳೆಯರು ಬಯಲಿಗೆಳೆದಿದ್ದು ಅದರಲ್ಲಿ ಒಬ್ಬರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಸಂಜೀವ ಹಾಗೂ ಆತನ ಕುಟುಂಬ 4 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಇದುವರೆಗೂ ಯಾರನ್ನು ಬಂಧಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಪ್ರಕರಣ ದಾಖಲಿಸಿದ್ದ ಮತ್ತೋರ್ವ ಮಹಿಳೆ ಮಾಧ್ಯಮಗಳ ಜೊತೆ ಮಾತನಾಡಿ, ಜೀವ ಬೆದರಿಕೆ ಇರುವದರಿಂದ ನಾನು ಪ್ರಕರಣ ದಾಖಲಿಸುತ್ತಿಲ್ಲ. ನನಗೆ ನ್ಯಾಯ ಒದಗಿಸಿಕೊಡಿ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಈತನ ಕಾಮಚೇಷ್ಠೆಗೆ ಇನ್ನೂ ಹುಡಗಿಯರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈತನ ಕಾಟ ತಾಳಲಾರದೇ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದಳು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

  • ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ಪತಿ ಬೇಕೆಂದು ಮನೆಯ ಮುಂದೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಸ ಬ್ರಹ್ಮಪುರದಲ್ಲಿ ಮಹಿಳೆಯೊಬ್ರು ಇಂದು ಬೆಳ್ಳಂಬೆಳಗ್ಗೆ ನ್ಯಾಯಕ್ಕಾಗಿ ಪತಿ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಧರಣಿ ಯಾಕೆ?: ಹುಬ್ಬಳ್ಳಿ ಮೂಲದ ಗೀತಾ, ಹರಿಹರದ ಗೋವಿಂದ ಎಂಬವರನ್ನ 8 ವರ್ಷದ ಹಿಂದೆ ವಿವಾಹ ಆಗಿದ್ದರು. ಬಳಿಕ ಮನೆಯವರ ಕಿರುಕುಳ ತಾಳಲಾರದೇ ತವರು ಮನೆಗೆ ಹೋಗಿದ್ರು. ಅಲ್ಲದೆ ಗಂಡನ ಮೇಲೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಆದ್ರೆ ಇದೀಗ ತಮ್ಮ ಮಗುವಿನ ಭವಿಷ್ಯದ ದೃಷ್ಠಿಯಿಂದ ತನಗೆ ಪತಿ ಬೇಕು ಅಂತಾ ಪಟ್ಟುಹಿಡಿದಿದ್ದಾರೆ. ಹೀಗಾಗಿ ಇಂದು ಬೆಳಗ್ಗೆಯಿಂದ ಗಂಡನ ಮನೆಯ ಮುಂದೆ ಮಗಳ ಜೊತೆ ಧರಣಿ ಕುಳಿತುಕೊಂಡಿದ್ದಾರೆ. ಆದರೆ ಗಂಡನ ಮನೆಯವರು ಮಾತ್ರ ಯಾವುದಕ್ಕೂ ಲೆಕ್ಕ ಹಾಕುತ್ತಿಲ್ಲ. ಗೀತಾ ಪತಿ ಮಾತ್ರ ಬೆಳಗ್ಗೆಯಿಂದ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದು, ಯಾವುದಕ್ಕೂ ಸ್ಪಷ್ಟನೆ ನೀಡುತ್ತಿಲ್ಲ.

    ಗಂಡನ ಜೊತೆ ಜೀವನ ಮಾಡದೇ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿದು ಮನೆ ಮುಂದೆಯೇ ಮಗುವಿನ ಜೊತೆ ಕುಳಿತು ಗೀತಾ ಅವರು ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.

     

  • ಮಗುವಿಗೆ ನನ್ನ ಹೋಲಿಕೆಯೇ ಇಲ್ಲವೆಂದು ಹೆಂಡತಿಯನ್ನ ಕತ್ತು ಹಿಸುಕಿ ಕೊಂದ ಪತಿ

    ಮಗುವಿಗೆ ನನ್ನ ಹೋಲಿಕೆಯೇ ಇಲ್ಲವೆಂದು ಹೆಂಡತಿಯನ್ನ ಕತ್ತು ಹಿಸುಕಿ ಕೊಂದ ಪತಿ

    ಬೆಳಗಾವಿ: ಮಗುವಿಗೆ ತನ್ನಂತೆ ಹೋಲಿಕೆ ಇಲ್ಲ ಅಂತ ಅನುಮಾನಗೊಂಡ ಪತಿಯೊಬ್ಬ ಹೆಂಡತಿಯನ್ನ ಹಾಡಹಗಲೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಮಹಾವೀರ ನಗರದಲ್ಲಿ ಬುಧವಾರ ಮಧ್ಯಾಹ್ನ ಕೊಲೆ ನಡೆದಿದೆ. ಮೃತ ಮಹಿಳೆಯನ್ನ 25 ವರ್ಷದ ಶಿಲ್ಪಾ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆ ಮಾಡಿದ 28 ವರ್ಷದ ಪತಿ ಪ್ರವೀಣ್ ಬಡಿಗೇರ ತಾನೇ ಸ್ವತಃ ಟಿಳಕವಾಡಿ ಪೊಲೀಸರಿಗೆ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಜಿ. ರಾಧಿಕಾ ಪರಿಶೀಲನೆ ನಡೆಸಿದ್ದಾರೆ.

     ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ

    ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ

    ಚಿಕ್ಕಮಗಳೂರು: ಡೈವೋರ್ಸ್ ಕೊಟ್ಟರೆ ಜೀವನಾಂಶ ಕೊಡಬೇಕಾಗುತ್ತದೆ. ಆದರೆ ಹೆಂಡತಿಯೇ ತನಗೆ ಗಂಡ ಬೇಡವೆಂದು ಬಿಟ್ಟು ಹೋದ್ರೆ ಜೀವನಾಂಶ ಕೊಡೋ ದುಡ್ಡು ಉಳಿಯುತ್ತದೆ ಎಂದು ಎಂಜಿನಿಯರ್ ಗಂಡನೊಬ್ಬ ತನ್ನ ಹೆಂಡತಿಗೆ ತಲಾಖ್ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ನಿವಾಸಿಯಾಗಿರುವ ಖಾಸಿಮ್ ಒಂದು ವರ್ಷದ ಹಿಂದೆ ಸುಮಯ್ಯ ಎಂಬವರನ್ನು ಮದುವೆಯಾಗಿದ್ದ. ಆದರೆ ತನ್ನ ಅತ್ತಿಗೆಯ ಮೇಲಿನ ಆಸೆಗಾಗಿ ಹೆಂಡ್ತಿಗೆ ಡೈವೋರ್ಸ್ ನೀಡುವಂತೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಬಿಬಿಎಂ ಓದಿರುವ ಸುಮಯ್ಯ ಅವರನ್ನು ಹೆತ್ತವರು ಎಂಜಿನಿಯರ್ ಅಳಿಯ ಎಂದು ಖಾಸಿಮ್ ಜೊತೆ ಮದುವೆ ಮಾಡಿಕೊಟ್ಟಿದ್ರು. ಆದ್ರೀಗ ಖಾಸಿಮ್ ಮಾನಸಿಕ ಹಿಂಸೆ ನೀಡ್ತಿದ್ದಾನೆ. ಅತ್ತಿಗೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಕಿರುಕುಳ ನೀಡ್ತಿದ್ದು, ತಲಾಖ್‍ಗೆ ಪೀಡಿಸ್ತಿದ್ದಾನೆ ಎಂದು ಸುಮಯ್ಯ ಆರೋಪಿಸಿದ್ದಾರೆ.

    ಮದುವೆಯಾದ ಬಳಿಕ ಭದ್ರಾವತಿಯಲ್ಲೇ ಇದ್ದ ಸುಮಯ್ಯಗೆ ಖಾಸಿಮ್ ತಾಯಿ ಸಹ ಹಿಂಸೆ ಕೊಡ್ತಿದ್ದರು. ವರದಕ್ಷಿಣ ಕಿರುಕುಳ ನೀಡ್ತಿದ್ದರು ಎಂದು ಆರೋಪಿಸಿದ್ದಾರೆ. 8 ಲಕ್ಷ ಸಾಲ ಮಾಡಿ ಮದುವೆ ಮಾಡಿದ ಸುಮಯ್ಯ ತಂದೆ ಈಗ ಒಂದೇ ವರ್ಷಕ್ಕೆ ಮಗಳ ಸ್ಥಿತಿ ಕಂಡು ಚಿಂತೆಗೀಡಾಗಿದ್ದಾರೆ.

     

  • ನಾಲ್ಕನೆಯ ಮಗು ಹೆಣ್ಣಾಗುತ್ತೆ ಅನ್ನೋ ಭಯಕ್ಕೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿ ಸಾವು

    ನಾಲ್ಕನೆಯ ಮಗು ಹೆಣ್ಣಾಗುತ್ತೆ ಅನ್ನೋ ಭಯಕ್ಕೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿ ಸಾವು

    ತುಮಕೂರು: ಹೆಣ್ಣು ಮಗು ಜನಿಸುತ್ತದೆ ಎಂಬ ಭಯದಿಂದ ಪತಿಯ ಸಲಹೆಯ ಮೇರೆಗೆ ಗರ್ಭಪಾತದ ಮಾತ್ರೆ ಸೇವಿಸಿ ಗರ್ಭಿಣಿಯೊಬ್ಬರು ಕೊರಟಗೆರೆ ತಾಲೂಕಿನ ಕಾಮರಾಜನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.

    ರಾಧಾಮಣಿ(25) ಮೃತಪಟ್ಟ ಗರ್ಭಿಣಿ. ರಾಮಯ್ಯ ಮತ್ತು ರಾಧಾಮಣಿ ದಂಪತಿಗೆ ಈಗಾಗಲೇ 3 ಹೆಣ್ಣು ಮಕ್ಕಳಿದ್ದು, ನಾಲ್ಕನೆಯ ಮಗುವಿಗಾಗಿ 6 ತಿಂಗಳ ಗರ್ಭವತಿಯಾಗಿದ್ದಳು.

    ಜನಿಸಲಿರುವ ನಾಲ್ಕನೇಯ ಮಗುವು ಹೆಣ್ಣಾಗಲಿದೆ ಎನ್ನುವ ಭಯಕ್ಕೆ ಬಿದ್ದು ಗರ್ಭಪಾತದ ಮಾತ್ರೆ ಸೇವಿಸಿದ್ದಳು. ಅತಿಯಾದ ಮಾತ್ರೆಗಳ ಸೇವಿಸಿ ಅನಾರೋಗ್ಯಕ್ಕೀಡಾದ ಪರಿಣಾಮ ಶುಕ್ರವಾರ ರಾಧಾಮಣಿಯನ್ನು ಕೊರಟಗೆರೆಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಮೃತ ಮಗುವನ್ನು ಹೊರ ತೆಗೆಯುವಾಗ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಂದೇ ರಾಧಾಮಣಿ ಸಾವನ್ನಪ್ಪಿದ್ದಳು.

    ಸಂಬಂಧಿಕರ ಆರೋಪ ಏನು?
    ನಗರದ ಖಾಸಗಿ ಆಸ್ಪತ್ರೆಯ ನರ್ಸ್ ಮಂಜುಳಾ ರಾಧಾಮಣಿಗೆ ಗರ್ಭಪಾತದ ಮಾತ್ರೆಗಳನ್ನು ತೆಗದುಕೊಳ್ಳುವಂತೆ ಹೇಳಿದ್ದರು. ಬಳಿಕ ಆಸ್ಪತ್ರೆಯ ನರ್ಸ್ ಗಳು ಗರ್ಭಪಾತ ಮಾಡಿಸಿದ್ದಾರೆ. ರಾಧಾಮಣಿಯ ಹೊಟ್ಟೆಗೆ ಕೈ ಹಾಕಿ ಮೃತಪಟ್ಟ ಮಗುವನ್ನು ನರ್ಸ್ ಮಂಜುಳಾ ಹೊರಗಡೆ ತೆಗೆದಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಈ ಸಾವಿಗೆ ಪತಿ ರಾಮಯ್ಯ ಕಾರಣ ಎಂದು ಆರೋಪಿಸಿ ರಾಧಾಮಣಿ ಸಂಬಂಧಿಕರು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಆಕ್ರೋಶಗೊಂಡ ರಾಧಾಮಣಿ ಸಂಬಂಧಿಕರು ಭಾನುವಾರ ನರ್ಸ್ ಮಂಜುಳಾ ಮನೆ ಮುಂದೆ ಪ್ರತಿಭಟನೆ ನಡೆಸಿ ಬಂಧಿಸುವಂತೆ ಆಗ್ರಹಿಸಿದರು.

  • ಪತಿ ಮಲಗಿದ್ದ ಹಾಸಿಗೆಗೆ ಬೆಂಕಿಯಿಟ್ಟು ಕೊಲ್ಲಲೆತ್ನಿಸಿದ್ಳಾ ಪತ್ನಿ?

    ಪತಿ ಮಲಗಿದ್ದ ಹಾಸಿಗೆಗೆ ಬೆಂಕಿಯಿಟ್ಟು ಕೊಲ್ಲಲೆತ್ನಿಸಿದ್ಳಾ ಪತ್ನಿ?

    – ಕೆಎಲ್‍ಇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೈನಿಕ

    ಬೆಳಗಾವಿ: ಹಾಸಿಗೆಯಲ್ಲಿ ಹಾಯಾಗಿ ಮಲಗಿದ್ದ ಪತಿಗೆ ಬೆಂಕಿ ಹಚ್ಚಿ ಪತ್ನಿಯೇ ಕೊಲ್ಲಲೆತ್ನಿಸಿದ ಭೀಕರ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ನಗರದ ಲಕ್ಷ್ಮೀ ಟೆಕಡಿಯ ಸೈನಿಕ್ ನಗರದ ನಿವಾಸಿ ಸೈನಿಕ ದೀಪಕ್ ಪವಾರ್ ಅವರನ್ನು ಪತ್ನಿಯೇ ಹತ್ಯೆ ಮಾಡಲು ಯತ್ನಿಸಿದ್ದಾಳೆ. ಘಟನೆಯಲ್ಲಿ ದೀಪಕ್ ಕುಮಾರ್‍ಗೆ ಶೇಕಡಾ 85ರಷ್ಟು ಸುಟ್ಟ ಗಾಯಗಳಾಗಿದ್ದು, ಕೆಎಲ್‍ಇ ಆಸ್ಪತ್ರೆಯಲ್ಲಿ ತುರ್ತು ನಿಘಾ ಘಟಕದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾರೆ.

    ಮಿಲಿಟರಿಯಲ್ಲಿರುವ ದೀಪಕ್ 9 ವರ್ಷದ ಹಿಂದೆ ಸವಿತಾ ಎಂಬಾಕೆಯನ್ನು ಮದುವೆಯಾಗಿದ್ದರು. ಆದ್ರೆ ಇತ್ತೀಚಿನ ನಡವಳಿಕೆಗಳ ಕಾರಣ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದರು. ಕಳೆದ ರಾತ್ರಿ ಸುಮಾರು ಒಂದು ಗಂಟೆಗೆ ಮಲಗಿದ್ದ ಹಾಸಿಗೆಗೆ ಬೆಂಕಿ ಬಿದ್ದಿತ್ತು. ನನ್ನ ಪತ್ನಿಯೇ ಈ ಕೃತ್ಯ ಎಸಗಿದ್ದಾಳೆ ಎಂದು ದೀಪಕ್ ಕ್ಯಾಂಪ್ ಠಾಣೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ.