Tag: Wife

  • ತಗೋ ನಿನ್ನ ಲವ್ವರ್ ತಲೆ ತಂದಿದ್ದೇನೆ- ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ!

    ತಗೋ ನಿನ್ನ ಲವ್ವರ್ ತಲೆ ತಂದಿದ್ದೇನೆ- ಪತ್ನಿ ಮನೆ ಮುಂದೆ ರುಂಡ ಎಸೆದ ಪತಿ!

    ಚೆನ್ನೈ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧದಿಂದ ಬೇತಸ್ತು ಆಕೆಯ ಲವ್ವರ್ ನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಆರೋಪಿಯನ್ನು ಎಸ್ ವೇಲುಸಾಮಿ ಎಂದು ಗುರುತಿಸಲಾಗಿದೆ. ಡಿ ಮುರುಗನ್ ಕೊಲೆಯಾದಾತ. ಇವರಿಬ್ಬರು ತೆಂಕಾಸಿ ಜಿಲ್ಲೆಯ ಕನ್ನಡಿಕುಲಂ ಗ್ರಾಮದ ನಿವಾಸಿಗಳು. ಇದನ್ನೂ ಓದಿ: 2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    ವೇಲುಸಾಮಿ ಪತ್ನಿಗೆ ಮುರುಗನ್ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಚಾರ ವೆಲುಸಾಮಿ ಗಮನಕ್ಕೆ ಬಂದಿದ್ದು, ಪತ್ನಿಗೆ ಎಚ್ಚರಿಕೆ ನೀಡಿದ್ದನು. ಆದರೆ ಪತಿಯ ಮಾತನ್ನು ಪತ್ನಿ ಕೇಳದೇ ಮುರುಗನ್ ಜೊತೆ ತನ್ನ ಸಂಬಂಧ ಮುಂದುವರಿಸಿದ್ದಳು. ಹೀಗಾಗಿ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.

    ಪದೇ ಪದೇ ಜಗಳವಾಗುತ್ತಿದ್ದರಿಂದ ಪತಿ ಮೇಲೆ ಸಿಟ್ಟುಮಾಡಿಕೊಂಡು ಪತ್ನಿ ತವರು ಮನೆ ಸೇರಿದ್ದಳು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ವೆಲುಸಾಮಿ, ಮುರುಗನ್ ಜೊತೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಮುರುಗನ್‍ನನ್ನು ವೆಲುಸಾಮಿ ರುಂಡ-ಮುಂಡ ಬೇರೆ ಬೇರೆ ಮಾಡಿದ್ದಾನೆ. ನಂತರ ಮುರುಗನ್ ರುಂಡದೊಂದಿಗೆ ಪತ್ನಿ ಮನೆಗೆ ತೆರಳಿದ್ದಾನೆ.

    ಪತ್ನಿ ಮನೆಗೆ ಹೋಗಿ, ತಗೋ ನಿನ್ನ ಲವ್ವರ್ ತಲೆ ಕಡಿದು ತಂದಿದ್ದೇನೆ ಎಂದು ಸಿಟ್ಟಿನಿಂದ ಕಿರುಚಾಡಿದ್ದಾನೆ. ಇತ್ತ ತನ್ನ ಲವ್ವರ್ ತಲೆ ಕಂಡು ಆಕೆ ಗಾಬರಿಂದ ತಲೆ ಸುತ್ತು ಬಂದು ಬಿದ್ದಿದ್ದಾಳೆ. ಕೂಡಲೇ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವೆಲುಸಾಮಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಇತ್ತ ಮುರುಗನ್ ತಲೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನು ವೆಲುಸಾಮಿಯನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಿದಾಗ ಆತ ಪತ್ನಿಯ ಅಕ್ರಮ ಸಂಬಂಧದ ಕುರಿತು ವಿವರಿಸಿದ್ದಾನೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!

    ಕುದಿಯೋ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು!

    ಉಡುಪಿ: ಪತ್ನಿಯೊಬ್ಬಳು ಕುದಿಯುತ್ತಿರುವ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿದ ಪ್ರಸಂಗವೊಂದು ಉಡುಪಿಯಲ್ಲಿ (Udupi) ನಡೆದಿದೆ.

    ಈ ಘಟನೆ ಕಟಪಾಡಿಯ ಶಂಕರಪುರ (Shankarapura Katapadi) ಎಂಬಲ್ಲಿ ನಡೆದಿದೆ. ಪತಿ ಮೊಹಮ್ಮದ್ ಅಶ್ರಫ್ ಹಾಗೂ ಪತ್ನಿ ಅಫ್ರೀನ್ ನಡುವೆ ಹಲವು ಸಮಯದಿಂದ ವೈಮನಸ್ಸು ಎದ್ದಿತ್ತು. ಗಂಡನ ಅಕ್ರಮ ಸಂಬಂಧದ ಬಗ್ಗೆ ಹೆಂಡತಿಗೆ ಅನುಮಾನ ಇತ್ತು.

    ಅಕ್ಟೋಬರ್ ತಿಂಗಳಲ್ಲಿ ಅಫ್ರೀನ್ ಹಾಗೂ ಮೊಹಮ್ಮದ್ ಮದುವೆಯಾಗಿತ್ತು. ಮದುವೆಯಾದ ಬಳಿಕ ಅಫ್ರೀನ್ ಮನೆಯಲ್ಲೇ ಗಂಡ-ಹೆಂಡತಿ ಇದ್ದರು. ಅಫ್ರೀನ್‍ಳಿಗೆ ಮೊಹಮ್ಮದ್ ಆಸೀಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಮಾತುಬಾರದ ತಾಯಿ ನಾಪತ್ತೆ – ಸುಳಿವುಕೊಟ್ಟವರಿಗೆ 50 ಸಾವಿರ ರೂ. ಘೋಷಿಸಿದ ಮಗಳು

    ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಜಗಳ ನಡೆದು ಪತಿ ಬಾತ್ ರೂಮ್‍ನಿಂದ ಹೊರ ಬರುವಾಗ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರನ್ನು ಪತ್ನಿ ಎರಚಿದ್ದಾಳೆ. ಬಳಿಕ ಗಾಯಗೊಂಡ ಪತಿಯನ್ನು ರೂಮಿನಲ್ಲಿಯೇ ಕೂಡಿ ಹಾಕಿದಾಳೆ. ಅಲ್ಲದೆ ಬೇರೆಯವರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ.

    ಈ ಬಗ್ಗೆ ಪತಿ ಮೊಹಮ್ಮದ್ ಆಸೀಫ್ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಾಗಲಿಲ್ಲ ಅಂತ ಪತ್ನಿಯಿಂದ ಪತಿಯನ್ನ ದೂರ ಮಾಡಿದ ಅತ್ತೆ?

    ಮಕ್ಕಳಾಗಲಿಲ್ಲ ಅಂತ ಪತ್ನಿಯಿಂದ ಪತಿಯನ್ನ ದೂರ ಮಾಡಿದ ಅತ್ತೆ?

    – ಮನೆ ಮುಂದೆಯೇ ಆಹೋರಾತ್ರಿ ಧರಣಿ ಕೂತ ಪತ್ನಿ

    ಚಿಕ್ಕಬಳ್ಳಾಪುರ: ಅವರದ್ದು ಶ್ರೀಮಂತ ಕುಟುಂಬ ಪ್ರತಿಷ್ಠಿತ ಶಾಲೆಯೂ ಸಹ ಇದೆ. ಆದರೆ ಆ ಕುಟುಂಬದಲ್ಲಿ ಮಕ್ಕಳಾಗಲಿಲ್ಲ ಅನ್ನೋ ಕಾರಣಕ್ಕೆ ಸೊಸೆಯನ್ನೇ ಅತ್ತೆ ಮನೆಯಿಂದ ಹೊರಹಾಕಿದ್ದಾರಂತೆ. ಇದರಿಂದ ನೊಂದ ಪತ್ನಿ ತನಗೆ ಗಂಡ ಬೇಕು ಅತ್ತೆ ಮನೆಯಲ್ಲೇ ಸಂಸಾರ ಮಾಡಬೇಕು ಅಂತ ಆಹೋರಾತ್ರಿ ಮನೆ ಮುಂದೆ ಧರಣಿ ಕೂತು ಪ್ರತಿಭಟನೆ ನಡೆಸಿದ್ದಾಳೆ.

    ಅಂದಹಾಗೆ ಜಬೀನ್ ತಾಜ್ ಹಾಗೂ ಚಿಕ್ಕಬಳ್ಳಾಪುರ (Chikkaballapur) ನಗರದ ಮುನಿಸಿಪಾಲ್ ಬಡಾವಣೆ ನಿವಾಸಿ ಮುಕ್ತಿಯಾರ್ ಅಹಮದ್‍ಗೆ ಮದುವೆಯಾಗಿ ಸರಿಸುಮಾರು 09 ವರ್ಷಗಳೇ ಕಳೆದಿವೆ. ಆದರೆ ಈ ದಂಪತಿಗೆ ಇದುವರೆಗೂ ಮಕ್ಕಳಾಗಿಲ್ಲ. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದ ಸಂಸಾರದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಪದೇ ಪದೇ ಕೌಟುಂಬಿಕ ಕಲಹ ಸಮಸ್ಯೆಗಳು ಕಾಡತೊಡಗಿವೆ. ಇದನ್ನೂ ಓದಿ: ಹಿಂದೆ ಏನಾಯ್ತು ಅನ್ನೋದು ಮುಖ್ಯವಲ್ಲ, ಇಂದು ಏನಾಯ್ತು ಎಂಬುದು ಮುಖ್ಯ: ದಿನೇಶ್ ಗುಂಡೂರಾವ್

    ಇಬ್ಬರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಅಂತ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಮೂಲ ಕಾರಣ ಮಕ್ಕಳಾಗಿಲ್ಲ ಅನ್ನೋದು ಆರೋಪ. ಹೀಗಾಗಿ ಮುಕ್ತಿಯಾರ್ ಅಹಮದ್ ತಾಯಿ ಜಬೀನ್ ತಾಜ್ ರ ಅತ್ತೆ ನ್ಯಾಮತಿ ಬೇಗಂ ಮಕ್ಕಳಾಗಲಿಲ್ಲ ಅಂತ ಸೊಸೆಯನ್ನ ತನ್ನ ಮನೆಯಲ್ಲಿ ಇಟ್ಟುಕೊಳ್ಳದೆ ಹೊರಗೆ ಹಾಕಿದ್ದಾಳಂತೆ. ಇದರಿಂದ ನೊಂದ ಜಬೀನ್ ತಾಜ್ ಅತ್ತೆಯ ಮನೆಯ ಎದುರೇ ಕೂತು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ.

    ಅಂದಹಾಗೆ ಕಳೆದ 1 ವರ್ಷದಿಂದ ಅತ್ತೆ-ಸೊಸೆ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿ ಗಂಡ ಮುಕ್ತಿಯಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಬೇರೊಂದು ಮನೆ ಮಾಡಿ ಹೆಂಡತಿಯನ್ನ ಅಲ್ಲಿ ಬಿಟ್ಟಿದ್ದ. ಆದರೆ ಆರಂಭದಲ್ಲಿ ವಿಜಯಪುರಕ್ಕೆ ಹೋಗಿ ಬರುತ್ತಿದ್ದ ಗಂಡ ಮುಕ್ತಿಯಾರ್ ಅಹಮದ್ ಬರ ಬರುತ್ತಾ ಹೆಂಡತಿ ಮನೆಗೆ ಹೋಗೋದನ್ನೆ ನಿಲ್ಲಿಸಿದ್ದಾನಂತೆ. ಹೆಂಡತಿ ಕರೆ ಮಾಡಿದ್ರೂ ಬ್ಲಾಕ್ ಲಿಸ್ಟ್‍ಗೆ ಹಾಕಿ ಹೆಂಡತಿ ಜೊತೆ ಮಾತಾಡೋದನ್ನ ಸಹ ಬಿಟ್ಟಿದ್ದನಂತೆ. ಇದ್ರಿಂದ ರೋಸಿ ಹೋದ ಜಬೀನಾತಾಜ್ ಈಗ ಅತ್ತೆಯ ಮನೆಯ ಎದುರೇ ಧರಣಿ ಕೂತು ನಾನು ಗಂಡನ ಜೊತೆ ಇದೇ ಮನೆಯಲ್ಲಿ ಸಂಸಾರ ಮಾಡ್ತೇನೆ ಅಂತ ಪಟ್ಟು ಹಿಡಿದಿದ್ದಾಳೆ.

    ಇತ್ತ ಗಂಡ ನನ್ನ ಹೆಂಡತಿ ಸುಖಾಸುಮ್ಮನೆ ಟಾರ್ಚರ್ ಕೊಡ್ತಾಳೆ, ಕಾಟ ತಡೆಯೋಕೆ ಆಗ್ತಿಲ್ಲ. ನನ್ನ ಬಾಯಿಗೆ ಬಂದ ಹಾಗೆ ಬೈತಾಳೆ. ಹಾಗಾಗಿ ನಾನು ಆಕೆಗೆ ಡಿವೋರ್ಸ್ ಕೊಡೋಕೆ ಮುಂದಾಗಿದ್ದೇನೆ ಅಂತಾನೆ. ಆದರೆ ಇತ್ತ ಪಟ್ಟು ಬಿಡದ ಜಬೀನಾತಾಜ್ ವಿಜಯಪುರದಿಂದ ಬಂದು ಅತ್ತೆ ಮನೆಯ ಎದುರು ಧರಣಿ ಕೂರುತ್ತಿದ್ದಂತೆ. ಇನ್ನು ಅತ್ತೆ ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ. ಆದರೂ ಪಟ್ಟು ಬಿಡದ ಜಬೀನಾ ತಾಜ್ ಮೂರು ದಿನಗಳಿಂದ ಏಕಾಂಗಿಯಾಗಿ ಆಹೋರಾತ್ರಿ ಧರಣಿ ಮುಂದುವರಿಸಿದ್ದು ನಾನು ಎಷ್ಟೇ ದಿನ ಆದ್ರೂ ಇಲ್ಲೇ ಇರ್ತೇನೆ ಅಂತ ಕೂತಿದ್ದಾಳೆ. ಗಂಡ ಬಂದು ವಿಜಯಪುರದ ಮನೆಗೆ ಹೋಗೋಣ ಬಾ ಅಂದ್ರೂ ಹೋಗದೆ ಅತ್ತೆ ಮನೆ ಎದುರೇ ಆಹೋರಾತ್ರಿ ಧರಣಿ ಮುಂದುವರಿಸಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ವೆಯಾಗಿ ಮೂರೇ ತಿಂಗಳಲ್ಲಿ ಬೆಲೆಬಾಳೋ ವಸ್ತು ಜೊತೆ ಪತ್ನಿ ಪರಾರಿ!

    ಮದ್ವೆಯಾಗಿ ಮೂರೇ ತಿಂಗಳಲ್ಲಿ ಬೆಲೆಬಾಳೋ ವಸ್ತು ಜೊತೆ ಪತ್ನಿ ಪರಾರಿ!

    ಬೆಂಗಳೂರು: ಮದುವೆ ಆಗಿ ಮೂರು ತಿಂಗಳಲ್ಲಿ ಪತ್ನಿ ಮೂರು ನಾಮ ಹಾಕಿ ಎಸ್ಕೇಪ್ ಆಗಿರುವ ಪ್ರಕರಣವೊಂದು ಸಿಲಿಕಾನ್ ಸಿಟಿಯಲ್ಲಿ (Bengaluru) ಬೆಳಕಿಗೆ ಬಂದಿದೆ.

    ಹೌದು. ಫೇಸ್‍ಬುಕ್‍ನಲ್ಲಿ ಯುವಕನಿಗೆ ಯುವತಿ ಪರಿಚಯವಾಗಿದ್ದಾಳೆ. ಪರಿಚಯ ಪ್ರೀತಿಗೆ ತಿರುಗಿ ಪ್ರೀತಿ, ಪ್ರೇಮ, ಮದುವೆ ಅನ್ನೋ ಹೆಸರಿನಲ್ಲಿ ಗಂಡನಿಗೆ ಪಂಗನಾಮ ಹಾಕಿದ್ದಾಳೆ. ಮದುವೆ ಬಳಿಕ ದುಬಾರಿ ಮೌಲ್ಯದ 2 ಮೊಬೈಲ್ ಹಾಗೂ 15 ರಿಂದ 20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್‍ನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪ್ರಿಯತಮೆಗಾಗಿ ಪ್ರಾಣಕೊಡಲು ಸಿದ್ಧನಿದ್ದ ಗಂಡ ಪತ್ನಿಯ ಮೋಸದ ಬಲೆಗೆ ಬಿದ್ದು ಇಂಗು ತಿಂದ ಮಂಗನಂತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಕದತಟ್ಟಿದ್ದಾನೆ.

    ಏನಿದು ಪ್ರಕರಣ..?: ಸಂತೋಷ್‍ಗೆ ಕೊರೊನಾ (Corona Virus) ಸಮಯದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಈಕೆ ಪರಿಚಯವಾಗುತ್ತಾಳೆ. ಸಂತೋಷ್ ಪರಿಚಯವಾಗುತ್ತಿದ್ದಂತೆ ಕೆಲಸ ಕೊಡಿಸುವಂತೆ ಕೇಳುತ್ತಾಳೆ. ಸಂತೋಷ್ ಅಖಿಲಾಗೆ ತಾನು ಕೆಲಸ ಮಾಡುತ್ತಿದ್ದ ನೋಬ್ರೋಕರ್ ಡಾಟ್‍ಕಾಂನಲ್ಲಿ ಕೆಲಸ ಕೊಡಿಸಿದ್ದ. ಆಗ ಇಬ್ಬರು ಒಂದೇ ಬೈಕ್‍ನಲ್ಲಿ ಹೋಗೋದು ಬರುವುದು ಮಾಡುತ್ತಿದ್ದರು. ಹಾಗೆಯೇ ಇಬ್ಬರಿಗೆ ಲವ್ ಆಗುತ್ತೆ. ಈ ವೇಳೆ ದುಬಾರಿ ಬೆಲೆಯ ಐಫೋನ್‍ಗೆ ಡಿಮಾಂಡ್ ಮಾಡುತ್ತಾಳೆ. ಪ್ರಿಯತಮೆ ಅಖಿಲಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ ಕಾರಣ ಸಂತೋಷ್ ಒಂದು ಲಕ್ಷದ 30 ಸಾವಿರದ ಐಫೋನ್ ಕೊಡಿಸುತ್ತಾನೆ. ಐಫೋನ್ ಕೈಗೆ ಸಿಗುತ್ತಿದ್ದಂತೆಯೇ ಬ್ಯಾಂಕಾಕ್‍ಗೆ ಹೋಗಬೇಕು ಅಂತ 6 ಲಕ್ಷ ಪೀಕಿದ್ದಾಳೆ. ವಿದೇಶಿ ಪ್ರವಾಸದಿಂದ ಬಂದ ಕೂಡಲೇ ಮತ್ತೊಂದು ದುಬಾರಿ ಬೆಲೆಯ ಐಫೋನ್ ಅನ್ನು ಸಂತೋಷ್ ಗಿಫ್ಟ್ ಮಾಡುತ್ತಾನೆ.

    ಇಷ್ಟೆಲ್ಲ ಅಖಿಲಾ ಪೀಕಿದ್ಮೇಲೆ ಪ್ರಿಯತಮೆಯ ಬಾವ ಅರುಣ್ ಹಾಗೂ ಅಶ್ವಿನಿ ಎಂಟ್ರಿಯಾಗಿದ್ದಾರೆ. ಪ್ರಿಯತಮೆ ಅಕ್ಕ ಅಶ್ವಿನಿ 15 ಲಕ್ಷದ ಒಡವೆ ಕೊಡಿಸಿದರೆ ಇಬ್ಬರದ್ದು ಮದುವೆ ಮಾಡಿಸೋದಾಗಿ ಡಿಮಾಂಡ್ ಮಾಡುತ್ತಾಳೆ. ನಾದಿನಿಯ ಡಿಮಾಂಡ್‍ನಂತೆ 15 ಲಕ್ಷದ ಒಡವೆ ಕೂಡ ಕೊಡಿಸಿದ್ದಾನೆ. ನಾದಿನಿ ಗಂಡ ಅರುಣ್ ಮದುವೆ ಹೆಸರಲ್ಲಿ ಐದು ಲಕ್ಷ ಸಂತೋಷ್ ಬಳಿ ವಸೂಲಿ ಮಾಡಿದ್ದಾನೆ. ಬಳಿಕ ಚಂದ್ರಲೇಔಟ್‍ನಲ್ಲಿರೋ ಮದ್ದೂರಮ್ಮ ದೇವಸ್ಥಾನದಲ್ಲಿ ಯುವಕನ ಸಂಬಂಧಿಕರ ಅನುಪಸ್ಥಿತಿಯಲ್ಲಿ ಅಕ್ಕ-ಬಾವ ನಿಂತು ಇಬ್ಬರ ಮದುವೆ ಮಾಡಿಸಿ ಮುಗಿಸುತ್ತಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ

    ಮದುವೆ ಆಗಿ ಮೂರು ತಿಂಗಳಲ್ಲಿ ಗಂಡ ಸಂತೋಷ್ ಜೊತೆಗಿದ್ದ ಅಖಿಲಾ ಮೂರು ತಿಂಗಳ ಸಮಯವೂ ಜೊತೆಗೆ ಬಾಳಿಲ್ಲ. ಮದುವೆ ಆದ ಬಳಿಕ ಅಖಿಲಾಗೆ ಮದುವೆ ಆಗಿ ವಿಚ್ಛೇದನವಾಗಿರೊದು ಬೆಳಕಿಗೆ ಬರುತ್ತೆ. ಅಷ್ಟೆಲ್ಲಾ ಆದರೂ ಪತ್ನಿಯನ್ನೇ ದೇವರು ಎಂದುಕೊಂಡು ಹೋಗುತ್ತಿದ್ದ ಯುವಕನಿಗೆ ಮೋಸ ಮಾಡಿ ಗಂಡನ ಸಂಪರ್ಕ ಸಿಗದೇ ಅಖಿಲಾ ನಾಪತ್ತೆ ಆಗಿದ್ದಾಳೆ. ಇತ್ತ ಪತ್ನಿಯ ನೌಟಂಕಿ ನಾಟಕಕ್ಕೆ ಮಾರುಹೋಗಿ ಮೋಸಹೋದ ಪತ್ನಿ ಹಾಗೂ ಆಕೆಯ ಅಕ್ಕ ಬಾವನ ವಿರುದ್ಧ ಕೇಸ್ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀನು ನನ್ನ ಪತ್ನಿಯಲ್ಲ, ಅಮ್ಮ- ಮಾವನಿಂದ ರೇಪ್‍ಗೊಳಗಾದ ಪತ್ನಿಯನ್ನು ಹೊರಗಾಕಿದ ಪತಿ!

    ನೀನು ನನ್ನ ಪತ್ನಿಯಲ್ಲ, ಅಮ್ಮ- ಮಾವನಿಂದ ರೇಪ್‍ಗೊಳಗಾದ ಪತ್ನಿಯನ್ನು ಹೊರಗಾಕಿದ ಪತಿ!

    ಲಕ್ನೋ: ಸೊಸೆಯ ಮೇಲೆ ಮಾವನೇ (Father In  Law) ಅತ್ಯಾಚಾರ ಎಸಗುತ್ತಾನೆ. ಈ ವಿಚಾರ ತಿಳಿದ ಪತಿ, ನೀನು ನನಗೆ ಪತ್ನಿ ಅಲ್ಲ, ಅಮ್ಮ ಎಂದು ಹೇಳಿ ಆಕೆಯನ್ನು ಮನೆಯಿಂದ ಹೊರಗಡೆ ಹಾಕಿದ ಪ್ರಸಂಗವೊಂದು ಉತ್ತರಪ್ರದೇಶದಲ್ಲಿ (UttarPradesh) ನಡೆದಿದೆ.

    ಈ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. 26 ವರ್ಷದ ತನ್ನ ಪತ್ನಿಯನ್ನು ಹೊರಗೆ ಹಾಕುವ ವೇಳೆ, ನನ್ನ ತಂದೆ ನಿನ್ನೊಂದಿಗೆ ಬಲವಂತವಾಗಿ ಸಂಬಂಧವನ್ನು ಹೊಂದಿದ್ದರಿಂದ ನೀನು ನನ್ನ ತಂದೆಯ ಪತ್ನಿಯಾಗಿರುತ್ತಿ ಮತ್ತು ನನ್ನ ‘ಅಮ್ಮಿ’ (ತಾಯಿ) ಆಗಿರುವುದರಿಂದ ನಿನ್ನನ್ನು ನನ್ನೊಂದಿಗೆ ಇರಲು ಬಿಡುವುದಿಲ್ಲ ಎಂದು ಹೇಳಿದ್ದಾನೆ.

    ಈ ಸಂಬಂಧ ಮಹಿಳೆ ಸೆಪ್ಟೆಂಬರ್ 7 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತನಗೆ ಕಳೆದ ವರ್ಷ ಮದುವೆಯಾಗಿದೆ. ಆದರೆ ಆಗಸ್ಟ್ 5ರಂದು ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮಾವ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಕಾಟ- ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿ Metro ಎಂಜಿನಿಯರ್ ಸೂಸೈಡ್

    ಅತ್ತೆಯನ್ನು ನನ್ನ ಪತಿ ಔಷಧಿಗೆಂದು ಹೊರಗಡೆ ಕರೆದುಕೊಂಡು ಹೋಗಿದ್ದರು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಮಾವ ನನ್ನ ಮೇಲೆ ರೇಪ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿ, ನನಗೆ ಥಳಿಸಿದ್ದಾರೆ. ಇನ್ನು ಈ ವಿಚಾರವನ್ನು ಪತಿ ಬಳಿ ವಿವರಿಸಿದೆ. ಆದರೆ ಅವರು ಸಿಟ್ಟಿಗೆದ್ದು, ನೀನು ನನಗೆ ಅಮ್ಮನಾಗುತ್ತೀಯಾ.. ಪತ್ನಿ ಅಲ್ಲ ಎಂದು ಹೇಳಿ ಮನೆಯಿಂದ ಹೊರಗಡೆ ಹಾಕಿದ್ದಾರೆ. ಸದ್ಯ ಪೋಷಕರ ಜೊತೆ ವಾಸವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

    ಮಹಿಳೆ ಈಗಾಗಲೇ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದರೆ ಈ ವಿಚಾರವನ್ನು ಆಕೆ ದೂರಿನಲ್ಲಿ ತಿಳಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಮಹಿಳೆಯ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 376 (ಲೈಂಗಿಕ ದೌರ್ಜನ್ಯ), 323 (ಉದ್ದೇಶಪೂರ್ವಕವಾಗಿ ಘಾಸಿ) ಮತ್ತು 506 (ಬೆದರಿಕೆ) ಅಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

    ಇತ್ತ ಸೊಸೆ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿರುವ ಮಾವ, ಹಣದ ಲಾಭಕ್ಕಾಗಿ ಅವರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಂಡ್ತಿ ಕಾಟ- ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿ Metro ಎಂಜಿನಿಯರ್ ಸೂಸೈಡ್

    ಹೆಂಡ್ತಿ ಕಾಟ- ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿ Metro ಎಂಜಿನಿಯರ್ ಸೂಸೈಡ್

    ತುಮಕೂರು: ಹೆಂಡತಿ ಕಾಟದಿಂದ ಬೇಸತ್ತು ಎಂಜಿನಿಯರ್ ಒಬ್ಬರು ಅಣ್ಣನಿಗೆ ಆಡಿಯೋ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ.

    ಮೃತನನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು ಮೆಟ್ರೊದಲ್ಲಿ ಎಂಜಿನಿಯರ್ (Metro Engineer) ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ 9 ವರ್ಷಗಳ ಹಿಂದೆ ಮಂಜುನಾಥ್ ತುರುವೆಕೆರೆ ಮೂಲದ ಪ್ರಿಯಾಂಕಾ ಯಾನೆ ಪವಿತ್ರಾಳನ್ನ ಮದುವೆಯಾಗಿದ್ದರು. ಮದುವೆ ನಂತರ ಮಂಜುನಾಥ್‍ಗೆ ಪತ್ನಿ ಪವಿತ್ರಾ ಮಾನಸಿಕ ಕಿರುಕುಳ ನೀಡಿದ್ದಳು. ಇದರಿಂದ ಮನನೊಂದು ಮಂಜುನಾಥ್ ಕೆಬಿ ಕ್ರಾಸ್ ನ ಕುದ್ರುಪಾಳ್ಯದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸಾಯೋ ಮುನ್ನ ಮುಂಜುನಾಥ್ ತನ್ನ ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ನನಗೆ ಅವಳ ಜೊತೆ ಜಿವನ ಮಾಡೋಕೆ ಆಗ್ತಾ ಇಲ್ಲ. ಆ ಮನೆಹಾಳಿಯಿಂದ ನಾನು ಸಾಯ್ತಾ ಇದ್ದೀನಿ. ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ಳೋಕೆ ಹೇಳು. ಯಾರು ಬೇಜಾರ್ ಮಾಡ್ಕೊಬೇಡಿ ಕಣ್ರೋ ಪ್ಲೀಸ್. ನಾವು ಕೂಲಿ ಮಾಡ್ಕೊಂಡ್ ಜೀವನ ಮಾಡುವವರಂತೆ. ಹಳ್ಳಿಗೆ ಬರಲ್ಲ ಅಂದೊಳನ್ನ ಯಾಕಪ್ಪ ನನಗೆ ಮದುವೆ ಮಾಡಿದ್ರು. ಮೈಸೂರಲ್ಲಿ ಯಾರನ್ನೋ ನೋಡಿದ್ಲಂತೆ, ಅವ್ರನ್ನೇ ಆಗ್ಬೆಕಿತ್ತಂತೆ. ಪೊಲೀಸ್ ಗೆ ಹೇಳ್ಬೇಡಿ,ಪೋಸ್ಟ್ ಮಾರ್ಟಮ್ ಮಾಡ್ಬಿಡ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ಸದ್ಯ ಪತ್ನಿ ಮತ್ತು ತಮ್ಮ ರಾಕೇಶ್ ಸೇರಿ ಇಡೀ ಕುಟುಂಬದ ಮೇಲೆ ತಿಪಟೂರು ಕಿಬ್ಬಾನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಪತ್ನಿ!

    ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಪೇಚಿಗೆ ಸಿಲುಕಿದ ಪತ್ನಿ!

    ಬೆಂಗಳೂರು: ಪತಿಗೆ ಬುದ್ಧಿ ಕಲಿಸಲು ಹೋಗಿ ಪತ್ನಿ ಪೇಚಿಗೆ ಸಿಲುಕಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪತಿಗೆ ಬುದ್ಧಿ ಕಲಿಸಲೆಂದು ಪತ್ನಿಯು ತನ್ನ ಚಿನ್ನವನ್ನ ಸ್ನೇಹಿತನಿಂದ ಕಳವು ಮಾಡಿಸಿ ನಾಟಕ ಮಾಡಿದ್ದಾಳೆ. ಬಳಿಕ ತಾನೇ ಠಾಣೆಗೆ ತೆರಳಿ ಚಿನ್ನ ಕಳೆದು ಹೋಗಿರುವ ಬಗ್ಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಾಗ ಮಹಿಳೆಯ ಅಸಲಿ ಕಹಾನಿ ಬಯಲಾಗಿದೆ.

    ಏನಿದು ಘಟನೆ..?: ಪತ್ನಿಯು ಬ್ಯಾಂಕ್‍ನಿಂದ (Bank) ಚಿನ್ನವನ್ನ ಬಿಡಿಸಿಕೊಂಡು ಬಂದಿದ್ದಾಳೆ. ಈ ಚಿನ್ನವನ್ನು ಸ್ಕೂಟಿಯ ಫೂಟ್ ಮ್ಯಾಟ್‍ನಲ್ಲಿ ಇರಿಸಿದ್ದಾಳೆ. ಅಲ್ಲದೆ ಸ್ಕೂಟಿಯನ್ನು ಒಂದು ಕಡೆ ಇಟ್ಟು ತನ್ನ ಸ್ನೇಹಿತನಿಗೆ ಕರೆ ಮಾಡಿದ್ದಾಳೆ. ಅಂತೆಯೇ ಸ್ಥಳಕ್ಕೆ ಬಂದ ಸ್ನೇಹಿತ ಅಲ್ಲಿಂದ ಸ್ಕೂಟಿಯನ್ನ ತೆಗೆದುಕೊಂಡು ಹೋಗಿದ್ದಾನೆ.

    ಇತ್ತ ಇಷ್ಟೆಲ್ಲಾ ಆದ ಬಳಿಕ ಚಿನ್ನ (Gold) ಕಳ್ಳತನವಾಗಿರುವ ಬಗ್ಗೆ ಪತ್ನಿ ಠಾಣೆಗೆ ದೂರು ಕೊಟ್ಟಿದ್ದಾಳೆ. ಪೊಲೀಸರು ತನಿಖೆ ಮಾಡಿದಾಗ ಧನರಾಜ್ ಬೈಕ್ ತೆಗೆದುಕೊಂಡು ಹೋಗಿರೋದು ಬೆಳಕಿಗೆ ಬಂದಿದೆ. ಅತನ ನಂಬರ್ ಪರಿಶೀಲನೆ ಮಾಡಿದಾಗ ಈಕೆಯ ಜೊತೆ ಮೊಬೈಲ್ ನಲ್ಲಿ ಮಾತಾಡಿರೋದು ಕೂಡ ಬಯಲಾಗಿದೆ. ಇಬ್ಬರನ್ನ ಕರೆದು ವಿಚಾರಣೆ ಮಾಡಿದಾಗ ಗಂಡನಿಗೆ ಬುದ್ಧಿ ಕಲಿಸಲು ಮಾಡಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ಯಾರನ್ನು ಬೆಳೆಸಿದ್ದೇನೋ ಅವರೇ ಮೋಸ ಮಾಡಿದ್ರು: ಜನಾರ್ದನ ರೆಡ್ಡಿ ಗುಡುಗು

    ಸದ್ಯ ಅವಳದ್ದೇ ಚಿನ್ನವಾಗಿರೋದ್ರಿಂದ ಪೊಲೀಸರು ಕಾನೂನು ಸಲಹೆಗೆ ಮುಂದಾಗಿದ್ದಾರೆ. ಈ ಸಂಬಂಧ ಮಲ್ಲೆಶ್ವರಂ ಪೊಲೀಸ್ ಠಾಣೆಯಲ್ಲಿ (Malleshwaram Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೊಂದು ಪ್ರೇಮ ಕಥನ- ಪತಿ ಭೇಟಿಯಾಗಲು ಭಾರತಕ್ಕೆ ಬಂದ ಬಾಂಗ್ಲಾ ಮಹಿಳೆಗೆ ಶಾಕ್!

    ಮತ್ತೊಂದು ಪ್ರೇಮ ಕಥನ- ಪತಿ ಭೇಟಿಯಾಗಲು ಭಾರತಕ್ಕೆ ಬಂದ ಬಾಂಗ್ಲಾ ಮಹಿಳೆಗೆ ಶಾಕ್!

    ನೋಯ್ಡಾ: ಇತ್ತೀಚೆಗೆ ಗಡಿಯಾಚೆಯ ಪ್ರೇಮ ಕಥನಗಳು ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳ (Social Media) ಮೂಲಕ ಪರಿಚಯವಾಗಿ ನಂತರ ಗಡಿ ದಾಟಿ ಬಂದು ಪ್ರೀತಿಸಿದವನ ಕೈಹಿಡಯುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿದೆ. ಈ ಲಿಸ್ಟ್ ಗೆ ಇದೀಗ ಮತ್ತೊಂದು ಸ್ಟೋರಿ ಸೇರಿಕೊಂಡಿದೆ.

    ಹೌದು. ಬಾಂಗ್ಲಾದೇಶದ (Bangladesh) ಮಹಿಳೆಯೊಬ್ಬರು ತನ್ನ 1 ವರ್ಷದ ಪುಟ್ಟ ಕಂದಮ್ಮನೊಂದಿಗೆ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಬಂದು ನೋಡಿದಾಗ ಪತಿಯ ಸ್ಟೋರಿ ಕೇಳಿ ಆಕೆ ಕಂಗಾಲಾಗಿದ್ದಾರೆ. ಈ ಬಗ್ಗೆ ಮಹಿಳೆಯ 20 ಸೆಕೆಂಡ್ ಗಳ ವೀಡಿಯೋ ಮಾಡಿದ್ದು, ಇದರಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ.

    ಏನಿದು ಪ್ರಕರಣ..?: ಬಾಂಗ್ಲಾ ಮಹಿಳೆಯು ಭಾರತ ಮೂಲದ ಸೌರಭ್ ಕಾಂತ್ ತಿವಾರಿ ಎಂಬಾತನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಮದುವೆಯಾಗಿ ಜೊತೆಗಿದ್ದ ಕೆಲ ತಿಂಗಳ ನಂತರ ಪತಿ ಸೌರಭ ಭಾರತಕ್ಕೆ ಮರಳಿದ್ದು, ಬಳಿಕ ವಾಪಸ್ ಆಗಿಲ್ಲ. ಹೀಗಾಗಿ ನಾನು ಪತಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದೇನೆ ಎಂದು ಮಹಿಳೆ ವೀಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:‌ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    ಮಹಿಳೆಯ ದೂರಿನಲ್ಲೇನಿದೆ..?: ಮಹಿಳೆಯು ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸಿಪಿ ಮಹಿಳಾ ಭದ್ರತಾ ಸಿಬ್ಬಂದಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಬಾಂಗ್ಲಾದೇಶದ ಢಾಕಾದ ಮಹಿಳೆಯೊಬ್ಬರು ಸೌರಭ್ ಕಾಂತ್ ತಿವಾರಿ ಎಂಬ ಯುವಕ ತನ್ನನ್ನು 14 ಏಪ್ರಿಲ್ 2021ರಂದು ಬಾಂಗ್ಲಾದೇಶದಲ್ಲಿ ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಈಗ ಸೌರಭ್ ಕಾಂತ್ ಅವರನ್ನು ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ನಡುವೆ ಮಹಿಳೆ ಮತ್ತು ಸೌರಭ್ ಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆತ್ತಲೆಯಾಗಿದ್ದು ವೀಡಿಯೋ ಮಾಡುವಂತೆ ಒತ್ತಾಯ- ಪತಿಯ ವಿರುದ್ಧ ಪತ್ನಿ ದೂರು

    ಬೆತ್ತಲೆಯಾಗಿದ್ದು ವೀಡಿಯೋ ಮಾಡುವಂತೆ ಒತ್ತಾಯ- ಪತಿಯ ವಿರುದ್ಧ ಪತ್ನಿ ದೂರು

    ಕಾಸರಗೋಡು: ಪತಿಯ ವಿರುದ್ಧವೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಕೇರಳದ ಕಾಸರಗೋಡು (Kasaragodu) ಜಿಲ್ಲೆಯ ನೀಲೇಶ್ವರಂನಲ್ಲಿ ನಡೆದಿದೆ.

    ಪತಿ ವಿರುದ್ಧ ದೂರು ನೀಡಿದ ಪತ್ನಿಗೆ 20 ವರ್ಷ ವಯಸ್ಸು. ಈಕೆಯ ಪತಿ ಬಂಕಲಂ ಮೂಲದವನು. ಮದುವೆಯಾದ ಬಳಿಕ ದಂಪತಿ ಪಾಲಾದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಪತಿ ಹಾಗೂ ಪತ್ನಿಯ ನಡುವ ವೈಮನಸ್ಸು ಮೂಡಿದ್ದು, ಠಾಣೆವರೆಗೆ ತಲುಪಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ – ಬೀದರ್‌ನ ಸ್ನೇಹಿತರಿಬ್ಬರು ದುರ್ಮರಣ

    ಪತ್ನಿಯ ದೂರಿನಲ್ಲೇನಿದೆ..?: ಪತಿ ಕೆಲ ವ್ಯಕ್ತಿಗಳಿಂದ ಹಣ ಪಡೆದಿದ್ದಾನೆ. ಅಂತೆಯೇ ಹಣ ಕೊಟ್ಟವರು ಪತಿ ಬೆನ್ನು ಬಿದ್ದಿದ್ದಾರೆ. ಅಲ್ಲದೆ ಅದರಲ್ಲಿ ಓರ್ವ, ಪತ್ನಿಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಮತ್ತು ವೀಡಿಯೋ ಕರೆ ಮಾಡಲು ಒತ್ತಾಯಿಸಿದ್ದಾನೆ. ಅಂತೆಯೇ ಪತಿಯು ನಗ್ನವಾಗಿ ಇರುವಾಗ ವೀಡಿಯೋ ಕರೆ ಮಾಡುವಂತೆ ಪೀಡಿಸಿದ್ದಾನೆ. ಬೆದರಿಕೆ ಹಾಕಿ ಹಲ್ಲೆ ಮಾಡಿರುವ ಆರೋಪವನ್ನೂ ಪತ್ನಿ ಮಾಡಿದ್ದಾರೆ.

    ಸದ್ಯ ನೀಲೇಶ್ವರಂ ಪೊಲೀಸರು ಮಹಿಳೆಯ ದೂರು ಸ್ವೀಕರಿಸಿದ್ದಾರೆ. ಅಲ್ಲದೆ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಭಾವಿ ಪತ್ನಿ ಬಗ್ಗೆ ಕಾಮೆಂಟ್ ಮಾಡಿದ ಸಮಂತಾ

    ವಿಜಯ್ ದೇವರಕೊಂಡ ಭಾವಿ ಪತ್ನಿ ಬಗ್ಗೆ ಕಾಮೆಂಟ್ ಮಾಡಿದ ಸಮಂತಾ

    ದ್ಯ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದು ವಿಜಯ್ ದೇವರಕೊಂಡ ಮತ್ತು ಸಮಂತಾ (Samantha). ಈ ಜೋಡಿಯ ಖುಷಿ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಇದೀಗ ಇಬ್ಬರೂ ಆ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿಯ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಮಾಧ್ಯಮದೊಂದಿಗೆ ಮಾತನಾಡಿರುವ ಸಮಂತಾ, ನಟ ವಿಜಯ್ ದೇವರಕೊಂಡ (Vijay Devarakonda) ಅವರ ಭಾವಿ ಪತ್ನಿ ಹೇಗಿರಬೇಕು ಎನ್ನುವುದನ್ನು ವಿವರಿಸಿದ್ದಾರೆ. ‘ವಿಜಯ್ ಅವರಿಗೆ ಪತ್ನಿಯಾಗಿ ಬರುವವರು ಸಾಮಾನ್ಯರಲ್ಲಿ ಸಾಮಾನ್ಯವಾಗಿರಬೇಕು, ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಅತೀ ಹೆಚ್ಚು ಪ್ರೀತಿಸಬೇಕು’ ಎಂದೆಲ್ಲ ಹೇಳುತ್ತಾ ಹೋಗುತ್ತಾರೆ. ಸಮಂತಾ ಮತ್ತೆ ವಿಜಯ್ ಮತ್ತಷ್ಟು ವಿಷಯಗಳನ್ನು ಜೋಡಿಸುತ್ತಾರೆ.

    ‘ಖುಷಿ’ (Khushi) ಸಿನಿಮಾದ ಟ್ರೈಲರ್ (Trailer) ರಿಲೀಸ್ ಕಾರ್ಯಕ್ರಮ ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಂಡರ ವಿಜಯ್ ದೇವರಕೊಂಡ. ಸಮಂತಾ ಈ ಸಿನಿಮಾದಲ್ಲಿ ಆರಾಧ್ಯ ಹೆಸರಿನ ಪಾತ್ರ ಮಾಡಿದ್ದು, ಸಿನಿಮಾ ಕಥೆ ಕೇಳಿದಾಗ ಮೊದಲು ನೆನಪಾಗಿದ್ದ ನಟಿ ಸಮಂತಾ ಎಂದಿದ್ದರು ವಿಜಯ್. ಇದನ್ನೂ ಓದಿ:ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

    ‘ಖುಷಿ’ ಸಿನಿಮಾದ ಟ್ರೈಲರ್ ಮೆಚ್ಚುಗೆಗೆ ಪಾತ್ರವಾಗಿದ್ದು ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ.

     

    ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ. ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ  ಜಗಳ ಶುರುವಾಗುತ್ತದೆ. ಆಗಿದ್ದರೆ ಮುಂದೇನಾಗುತ್ತದೆ ಅನ್ನೋವುದನ್ನು ನೀವು ಸಿನಿಮಾದಲ್ಲಿ ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]