Tag: Wife

  • ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ

    ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ

    ವಿಜಯಪುರ: ವ್ಯಕ್ತಿಯೊಬ್ಬ ಪತ್ನಿಯ (Wife) ಶೀಲ ಶಂಕಿಸಿ ಬರ್ಬರ ಹತ್ಯೆಗೈದ ಘಟನೆ ತಿಕೋಟ ತಾಲೂಕಿನ ಹುಬನೂರು ತಾಂಡಾ -2 ರಲ್ಲಿ ಘಟನೆ ನಡೆದಿದೆ.

    ರೇಶ್ಮಾ ರಾಠೋಡ್ (25) ಹತ್ಯೆಯಾದ ಮಹಿಳೆ ಎಂದು ತಿಳಿದು ಬಂದಿದೆ. ಅಶೋಕ್ ರಾಠೋಡ್ (33) ಪತ್ನಿಯನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಪತ್ನಿಯ ಶೀಲ ಶಂಕಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮನೆ ಮೇಲೆ ವಿದ್ಯುತ್ ಕಂಬ ಉರುಳಿಸಿ ಪುಂಡಾಟ ಮೆರೆದ ಕಾಡಾನೆ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

    ಆರೋಪಿ ಕುಡಿದು ಬಂದು ಮನೆಯಲ್ಲಿ ಪತ್ನಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ. ಇದರಿಂದ ಬೇಸತ್ತು ಮಹಿಳೆ ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ ಮಹಿಳೆಯ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. 11 ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು. ದಂಪತಿಗೆ ಮೂವರು ಮಕ್ಕಳು ಸಹ ಇದ್ದಾರೆ.

    ಈ ಸಂಬಂಧ ವಿಜಯಪುರ (Vijapur) ಗ್ರಾಮೀಣ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯುಪಿ ಟೈಂ ಬಾಂಬ್ ಪ್ರಕರಣ – ಮುಂಗಡವಾಗಿ 10 ಸಾವಿರ ನೀಡಿದ್ದ ಮಹಿಳೆ ಅರೆಸ್ಟ್

  • ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

    ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ವ್ಯಕ್ತಿಯೊಬ್ಬ ಆತನ ಪತ್ನಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಚಾಕು ಇರಿದ ಪತಿ. ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಘಟನೆ ವಿವರ: ಜಯಪ್ರಕಾಶ್ ಹಾಗೂ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹೀಗಾಗಿ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಮೊದಲು ಮೂಡಲಪಾಳ್ಯದಲ್ಲಿ ಮನೆಮಾಡಿಕೊಂಡು ದಂಪತಿ ವಾಸವಿದ್ದರು.

    ಈ ಸಂದರ್ಭದಲ್ಲಿ ನಿನಗೆ ಅಕ್ರಮ ಸಂಬಂಧ ಇದೆ ಎಂದು ಪ್ರತಿದಿನ ಪತಿ ಗಲಾಟೆ ಮಾಡುತ್ತಿದ್ದನು. ಫೋನಿನಲ್ಲಿ ಯಾರದ್ದೊ ಜೊತೆಗೆ ಮಾತನಾಡುತ್ತೀಯಾ ಎಂದು ಹಲ್ಲೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ಎಂಗೆಜ್ಮೆಂಟ್‍ಗೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.

    ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (Kamakshipalya Police Station) ಎಫ್‍ಐಆರ್ ದಾಖಲಾಗಿದೆ. ಆರೋಪಿ ಜಯಪ್ರಕಾಶ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

  • ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

    ಚಾಮರಾಜನಗರ: ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ರೀಲ್ಸ್ (Trending Reels) ಅಂದ್ರೆ ಅದು ಕರಿಮಣಿ ಮಾಲೀಕ ನೀನಲ್ಲ (Karimani Malika Neenalla). ಈ ರೀಲ್ಸ್ (Wife Reels) ಇದೀಗ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿಜಿ ಪಾಳ್ಯ ಗ್ರಾಮದ ಕುಮಾರ್ (33) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕುಮಾರ್ ಪತ್ನಿ ರೂಪಾ ಗುಂಡಾಲ್ ಜಲಾಶಯಕ್ಕೆ ಹೋಗಿದ್ದ ವೇಳೆ ಸೋದರ ಮಾವ ಗೋವಿಂದ ಹಾಗೂ ಸಹೋದರಿ ದೀಪಾ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದರು. ಇದನ್ನೂ ಓದಿ: ಫ್ಲಾಟ್‌ಗೆ ಕರೆಸಿಕೊಂಡು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌; ನಾಲ್ವರ ಬಂಧನ

    ಈ ರೀಲ್ಸ್ ಗೂ ಮುನ್ನಾ ಪತಿ ಕುಮಾರ್ ಹಾಗೂ ಪತ್ನಿ ರೂಪಾ ನಡುವೆ ಹಲವು ಬಾರಿ ಕೌಟುಂಬಿಕ ಕಲಹ ನಡೆದಿತ್ತು. ರೀಲ್ಸ್ ಮಾಡದಂತೆ ಹಲವು ಸಲ ಎಚ್ಚರಿಕೆ ಕೂಡ ನೀಡಿದ್ದರು. ಆದರೆ ಇದನ್ನೂ ಲೆಕ್ಕಿಸದೆ ರೂಪಾ ರೀಲ್ಸ್ ಮಾಡಿದ್ದರು. ರೂಪಾ ರೀಲ್ಸ್ ನೋಡಿದ್ದ ಕುಮಾರ್ ಸ್ನೇಹಿತರು ರೇಗಿಸಿದ್ದರು. ಇದರಿಂದ ಮನಸ್ಸಿಗೆ ಕುಮಾರ್ ಬೇಸರಗೊಂಡಿದ್ದರು. ಪತ್ನಿಯ ಬಳಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಕೂಡ ಮಾಡಿಕೊಂಡಿದ್ದರಂತೆ. ಪತ್ನಿ ರೂಪಾ ಕುಮಾರ್ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಕುಮಾರ್ ಕುಟುಂಬಸ್ಥರು ರೂಪಾ, ಯಶೋದಾ, ಗೋವಿಂದ ಮೂವರ ಮೇಲೂ ದೂರು ಕೊಟ್ಟಿದ್ದಾರೆ. ಮೂವರು ನಮ್ಮ ಅಣ್ಣನ ಸಾವಿಗೆ ಕಾರಣರಾಗಿದ್ದು, ಪ್ರಕರಣ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹಿಂದೆಯೂ ಕೂಡ ರೂಪಾ ಹಾಗೂ ಕುಮಾರ್ ನಡುವೆ ಕಲಹ ನಡೆದಿತ್ತು. ಆ ವೇಳೆಯೂ ಆತ್ಮಹತ್ಯೆಗೆ ಯತ್ನಿಸಿದ್ದನು. ನಂತರ ಎಲ್ಲಾ ಸೇರಿ ಬಿಡಿಸಿದ್ದೇವು. ಈಗ ಮತ್ತೆ ರೀಲ್ಸ್ ಹಾಗೂ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಮನನೊಂದು ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರು ಕೊಟ್ಟಿದ್ದಾರೆ.

    ಒಟ್ಟಿನಲ್ಲಿ ರೀಲ್ಸ್ ಹುಚ್ಚಿನಿಂದ ಪತಿಯ ಪ್ರಾಣ ಪಕ್ಷಿ ಹಾರಿಹೋಗಿದೆ.

  • ಪತ್ನಿಯನ್ನು ಕೊಂದ ಕೇಸ್‌ನಲ್ಲಿ ಜಾಮೀನು ಪಡೆದು ಕೇರಳಕ್ಕೆ ಪರಾರಿಯಾಗಿದ್ದ ಆರೋಪಿ ಬಂಧನ

    ಪತ್ನಿಯನ್ನು ಕೊಂದ ಕೇಸ್‌ನಲ್ಲಿ ಜಾಮೀನು ಪಡೆದು ಕೇರಳಕ್ಕೆ ಪರಾರಿಯಾಗಿದ್ದ ಆರೋಪಿ ಬಂಧನ

    ಬೆಂಗಳೂರು: ಪತ್ನಿಯನ್ನು ಕೊಂದ ಕೇಸ್‌ನಲ್ಲಿ ಜಾಮೀನು (Bail) ಪಡೆದು ಕೇರಳಕ್ಕೆ (Kerala) ಎಸ್ಕೇಪ್ ಆಗಿ 31 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹೆಬ್ಬಾಳ ಪೊಲೀಸರು (Hebbala Police) ಕೊನೆಗೂ ಬಂಧಿಸಿದ್ದಾರೆ.

    ಸುಬ್ರಮಣಿ ಬಂಧಿತ ಆರೋಪಿ. ಈತ 1993ರಲ್ಲಿ ಪತ್ನಿ ಸುಧಾಳ ಶೀಲ ಶಂಕಿಸಿ ಕೊಲೆ ಮಾಡಿದ್ದ. ಈ ಹಿನ್ನೆಲೆ ಹೆಬ್ಬಾಳ ಪೊಲೀಸರು ಕೊಲೆ ಆರೋಪದಡಿ ಈತನನ್ನು ಬಂಧಿಸಿದ್ದರು. ಇದಾದ ಬಳಿಕ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ಆರೋಪಿ ಪರಾರಿಯಾಗಿದ್ದ. ಪರಾರಿಯಾದ ಸಂದರ್ಭ ಈತ ಹಿಂದೂ ಆಗಿದ್ದು ಬಳಿಕ ಮುಸ್ಲಿಂ ಹೆಸರು ಇಟ್ಟುಕೊಂಡು ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ರೈತರನ್ನು ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ ಪ್ರಯೋಗ – ಇದು ಹೇಗೆ ಕೆಲಸ ಮಾಡುತ್ತೇ?

    ಬೆಂಗಳೂರಿನಿಂದ ಎಸ್ಕೇಪ್ ಆಗಿ ಕೇರಳ ಸೇರಿದ್ದ ಆರೋಪಿ ಸುಬ್ರಮಣಿ ಅಲ್ಲಿ ಅನ್ಯಧರ್ಮದ ಆಚರಣೆ ಮತ್ತು ಪದ್ಧತಿ ಕಲಿತಿದ್ದ. ತನ್ನ ಹೆಸರನ್ನು ಹುಸೇನ್ ಸಿಕಂದರ್ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೇ ಸ್ಥಳೀಯರ ಸ್ನೇಹ ಸಂಪಾದಿಸಿ ಕೆಲಕಾಲ ಅಲ್ಲೇ ಉಳಿದು ಕೊಂಡಿದ್ದ. ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದು, ಮಸೀದಿಯಲ್ಲಿ ಮೌಲ್ವಿಯಾಗಿದ್ದ ಎನ್ನಲಾಗುತ್ತಿದೆ. ಸದ್ಯ ಆರೋಪಿಯನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಸಚಿವರ ಸ್ಪರ್ಧೆ ಅನಿವಾರ್ಯ: ಸಿಎಲ್‌ಪಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?

  • ಕೆಲಸದಿಂದ ವಾಪಸ್ಸಾಗ್ತಿದ್ದ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ!

    ಕೆಲಸದಿಂದ ವಾಪಸ್ಸಾಗ್ತಿದ್ದ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ!

    ಕೋಲಾರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನ (Wife) ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಕೆಜಿಎಫ್‍ನ (KGF) ಸಂಜಯ್ ಗಾಂಧಿ ನಗರದಲ್ಲಿ ನಡೆದಿದೆ.

    ಹತ್ಯೆಯಾದ ಮಹಿಳೆಯನ್ನು ಪವಿತ್ರ (36) ಎಂದು ಗುರುತಿಸಲಾಗಿದೆ. ಮೃತಳ ಪತಿ ಲೋಕೇಶ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಮಹಿಳೆ ಇಂದು (ಬುಧವಾರ) ಸಂಜೆ ಗಾರ್ಮೆಂಟ್ಸ್ ಕೆಲಸ ಮುಗಿಸಿಕೊಂಡು ಬರುತ್ತಿರುವ ವೇಳೆ ಆರೋಪಿ ಪತಿ ಮಹಿಳೆಯ ದೇಹದ ಹಲವೆಡೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾಳೆ. ಕೊಲೆಯ ಬಳಿಕ ಆತ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಗ್ಯಾಂಗ್ – 10 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು

    ಲೊಕೇಶ್ ಹಾಗೂ ಪವಿತ್ರ ನಡುವಿನ ಸಂಬಂಧ ಇತ್ತೀಚೆಗೆ ಕೆಟ್ಟಿತ್ತು. ಈ ವಿಚಾರವಾಗಿ ಗಲಾಟೆಯಾಗಿ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವರದಕ್ಷಿಣೆ ಕಿರುಕುಳದ ಪ್ರಕರಣ ಸಹ ದಾಖಲಾಗಿತ್ತು. ಇದೇ ಗಲಾಟೆ ಇದೀಗ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.

    ಈ ಸಂಬಂಧ ಊರಿಗಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಶಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪತ್ನಿಯ ಶಿರಚ್ಛೇದಗೈದು ತಲೆಯೊಂದಿಗೆ ರಕ್ತಸಿಕ್ತ ಬಟ್ಟೆಯಲ್ಲೇ ತಿರುಗಾಡಿದ!

  • ಪತ್ನಿಯ ಶಿರಚ್ಛೇದಗೈದು ತಲೆಯೊಂದಿಗೆ ರಕ್ತಸಿಕ್ತ ಬಟ್ಟೆಯಲ್ಲೇ ತಿರುಗಾಡಿದ!

    ಪತ್ನಿಯ ಶಿರಚ್ಛೇದಗೈದು ತಲೆಯೊಂದಿಗೆ ರಕ್ತಸಿಕ್ತ ಬಟ್ಟೆಯಲ್ಲೇ ತಿರುಗಾಡಿದ!

    ಕೋಲ್ಕತ್ತಾ: ವ್ಯಕ್ತಿಯೊಬ್ಬ ಪತ್ನಿಯ ಶಿರಚ್ಛೇದ ಮಾಡಿ ತಲೆಯೊಂದಿಗೆ ಊರು ತುಂಬಾ ಓಡಾಡಿದ ಘಟನೆಯೊಂದು ಪಶ್ಚಿಮ ಬಂಗಾಳದ (West Bengal) ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ.

    ವ್ಯಕ್ತಿಯನ್ನು ಗೌತಮ್ ಗುಚ್ಚೈತ್ (40) ಎಂದು ಗುರುತಿಸಲಾಗಿದೆ. ಗೌತಮ್‌ ತನ್ನ ಪತ್ನಿಯನ್ನು ಕೊಲೆ ಮಾಡಿದ ಬಳಿಕ ರಸ್ತಸಿಕ್ತ ಧಿರಿಸಿನಲ್ಲೇ ಚಿಸ್ತಿಪುರ ಬಸ್ ನಿಲ್ದಾಣದ ಬಳಿ ತಿರುಗಾಡಿದ್ದಾನೆ. ಜೊತೆಗೆ ಆತನ ಕೈಯಲ್ಲಿ ಪತ್ನಿ ತಲೆ ಇರುವುದನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ನಂತರ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಪತ್ನಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಗ್ಯಾಂಗ್ – 10 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು

    ಪೊಲೀಸರ ಪ್ರಕಾರ, ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಚೂಪಾದ ಆಯುಧದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

  • ಸೆಕ್ಸ್‌ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದಳು!

    ಸೆಕ್ಸ್‌ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದಳು!

    ಲಕ್ನೋ: ಸೆಕ್ಸ್‌ಗೆ ಸಹಕರಿಸುವಂತೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಪತ್ನಿ (Husband- Wife Fight) ಕಚ್ಚಿ ಗಾಯಗೊಳಿಸಿದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಹಮೀರ್‌ಪುರ ಜಿಲ್ಲೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮು ನಿಶಾದ್ (34) ಗಾಯಗೊಂಡ ಪತಿ. ಪತ್ನಿಯ ಕೃತ್ಯದಿಂದ ನಿಶಾದ್‌ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

    ನಡೆದಿದ್ದೇನು..?: ಜನವರಿ 28ರಂದು ಸೆಕ್ಸ್‌ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತ್ನಿ, ಪತಿಯ ಖಾಸಗಿ ಅಂಗವನ್ನೇ ಕಚ್ಚಿದ್ದಾಳೆ. ಬಳಿಕ ತಪ್ಪಿನ ಅರಿವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಪತ್ನಿಯ ಕೃತ್ಯದಿಂದ ನಿಶಾದ್‌ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

    ಸೆಕ್ಸ್‌ ಮಾಡುವಂತೆ ಒತ್ತಾಯಿಸಿದ್ದರಿಂದ ಬೇಸರಗೊಂಡಿರುವುದಾಗಿ ಪತ್ನಿ ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ತಿಳಿಸಿದ್ದಾರೆ.

  • ನಾಪತ್ತೆಯಾಗಿರೋ ಗರ್ಭಿಣಿ ಪತ್ನಿಗಾಗಿ ಕಣ್ಣೀರಾಕುತ್ತಾ ಹುಡುಕಾಡ್ತಿದ್ದಾರೆ ಪತಿ!

    ನಾಪತ್ತೆಯಾಗಿರೋ ಗರ್ಭಿಣಿ ಪತ್ನಿಗಾಗಿ ಕಣ್ಣೀರಾಕುತ್ತಾ ಹುಡುಕಾಡ್ತಿದ್ದಾರೆ ಪತಿ!

    ಆನೇಕಲ್/ಬೆಂಗಳೂರು: ಗರ್ಭಿಣಿಯೊಬ್ಬರು ತನ್ನ 5 ವರ್ಷದ ಪುಟ್ಟ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದು, ಇದೀಗ ಆಕೆಗಾಗಿ ಪತಿ (Husband Searching his Wife) ಹುಡುಕಾಡುತ್ತಿರುವ ಪ್ರರಣವೊಂದು ಬೆಳಕಿಗೆ ಬಂದಿದೆ.

    ಶಾಲಿನಿ ನಾಪತ್ತೆಯಾಗಿರುವ 4 ತಿಂಗಳ ಗರ್ಭಿಣಿ. ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮತ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ. ಸದ್ಯ ಈಕೆಗಾಗಿ ಪತಿ ಮೆಜೆಸ್ಟಿಕ್ ಹಾಗೂ ಬಿಎಂಟಿಸಿ (BMTC) ಬಸ್ ಸ್ಟಾಂಡ್‍ನಲ್ಲಿ ಕಣ್ಣೀರಾಕುತ್ತಾ ಹುಡುಕಾಡುತ್ತಿದ್ದಾರೆ.

    ಶಾಲಿನಿ ಎಂದಿನಂತೆ ಬೆಳಗ್ಗೆ 6 ಗಂಟೆಗೆ ಹಾಲು ತರಲು 30 ರೂ. ಹಣ ತೆಗೆದುಕೊಂಡು ಹೋಗಿದ್ದರು. ಆದರೆ 8 ಗಂಟೆಯಾದ್ರೂ ಕೂಡ ಪತ್ನಿ ಶಾಲಿನಿ ಮನೆಗೆ ಬಾರದೇ ಇದ್ದಾಗ ಪತಿ ಗಾಬರಿಯಾದರು. ಬಳಿಕ ಯಾಕೆ ಪತ್ನಿ ಇನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಾಟ ನಡೆಸಲು ಆರಂಭಿಸಿದರು. ಈ ವೇಳೆ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ – ಎಂಇಎಸ್‌ಗೆ ಬೆಳಗಾವಿ ಪಾಲಿಕೆ ಆಯುಕ್ತರ ಶಾಕ್!

    ಬೆಳಗ್ಗೆಯಿಂದ ಮಧ್ಯರಾತ್ರಿಯಾದ್ರೂ ಪತಿ ಹುಡುಕಾಟ ನಡೆಸಿದ್ದಾರೆ. ಕೆಆರ್ ಮಾರ್ಕೆಟ್, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕುಟುಂಬಸ್ಥರು ಕೂಡ ಹುಡುಕಾಡಿದ್ದಾರೆ. ಅಲ್ಲದೆ ಬಸ್ ಸ್ಟಾಂಡ್ ನಲ್ಲಿ ಮಲಗಿರುವವರ ಬಳಿಯೂ ಹೋಗಿ ವಿಚಾರಿಸಿದ್ದಾರೆ. ಆದರೆ ಆಕೆ ಎಲ್ಲಿಯೂ ಕಾಣಿಸುತ್ತಿಲ್ಲ. ಹೀಗಾಗಿ 5 ವರ್ಷದ ಮಗನನ್ನ ಬಿಟ್ಟು ಶಾಲಿನಿ ತೆರಳಿರುವುದಾದ್ರೂ ಎಲ್ಲಿಗೆ ಎನ್ನುವ ಪ್ರಶ್ನೆ ಎದ್ದಿದೆ.

    ಪತ್ನಿಯ ನಾಪತ್ತೆ ಸಂಬಂಧ ಪತಿ ಸ್ವಾಮಿ ತಾವರೆಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ರೀಲ್ಸ್ ಮಾಡುವುದನ್ನು ವಿರೋಧಿಸಿದ ಗಂಡನನ್ನೇ ಮುಗಿಸಿದ ಹೆಂಡತಿ

    ರೀಲ್ಸ್ ಮಾಡುವುದನ್ನು ವಿರೋಧಿಸಿದ ಗಂಡನನ್ನೇ ಮುಗಿಸಿದ ಹೆಂಡತಿ

    ಪಾಟ್ನಾ: ಇನ್ಸ್ಟಾಗ್ರಾಂನಲ್ಲಿ (Instagram) ರೀಲ್ಸ್ (Reels) ಮಾಡುವುದನ್ನು ವಿರೋಧಿಸಿದ ಗಂಡನನ್ನು (Husband) ಪತ್ನಿ (Wife) ತನ್ನ ಅಪ್ಪ-ಅಮ್ಮನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಬಿಹಾರದ (Bihar) ಬೇಗುಸರಾಯ್‌ನಲ್ಲಿ (Begusarai) ನಡೆದಿದೆ.

    ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಮಹೇಶ್ವರ್ ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೋಲ್ಕತ್ತಾದಲ್ಲಿ (Kolkata) ಕೂಲಿ ಕೆಲಸ ಮಾಡುತ್ತಿದ್ದು, ಸಮಸ್ತಿಪುರ ಜಿಲ್ಲೆಯ ನರ್ಹಾನ್ ಗ್ರಾಮದ ನಿವಾಸಿಯಾಗಿದ್ದರು. ಪತ್ನಿ ರಾಣಿ ಕುಮಾರಿಗೆ ಇನ್ಸ್ಟಾದಲ್ಲಿ ರೀಲ್ಸ್ ಮಾಡುವ ಗೀಳಿತ್ತು. ಆದರೆ ಪತಿಗೆ ಅದು ಇಷ್ಟವಿಲ್ಲದಿದ್ದರಿಂದ ಅದನ್ನು ವಿರೋಧಿಸಿದ್ದರು. ಇದರಿಂದ ಗಂಡನ ಮೇಲೆ ಕೋಪಗೊಂಡ ಹೆಂಡತಿ ತನ್ನ ಅಪ್ಪ-ಅಮ್ಮನ ಜೊತೆಗೂಡಿ ಆತನನ್ನು ಹತ್ಯೆ ಮಾಡಿದ್ದಾಳೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸ್ಥಳದಲ್ಲೇ ಇಬ್ಬರು ಸಾವು

    ಮಹೇಶ್ವರ್ ಕೆಲ ದಿನಗಳ ಹಿಂದೆ ಕೋಲ್ಕತ್ತಾದಿಂದ ತನ್ನ ಗ್ರಾಮಕ್ಕೆ ತೆರಳಿದ್ದರು. ಫಫೌತ್ ಗ್ರಾಮದವರಾದ ರಾಣಿ ಕುಮಾರಿ ಸುಮಾರು 7 ವರ್ಷಗಳ ಹಿಂದೆ ಮಹೇಶ್ವರ್ ಅವರನ್ನು ವಿವಾಹವಾಗಿದ್ದರು. ಮಹೇಶ್ವರ್ ಕೆಲಸಕ್ಕೆ ತೆರಳುವ ಮೊದಲು ಫಫೌತ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿದ್ದರು ಎಂದು ತಿಳಿದುಬಂದಿದೆ. ಇನ್ಸ್ಟಾಗ್ರಾಂ ರೀಲ್ಸ್ ವಿಚಾರವಾಗಿ ಮಹೇಶ್ವರ್ ಮತ್ತು ರಾಣಿ ಕುಮಾರಿ ನಡುವೆ ವಾಗ್ವಾದ ನಡೆದಿದ್ದು, ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ತನ್ನ ಅಪ್ಪ-ಅಮ್ಮನ ಸಹಾಯದಿಂದ ಗಂಡನ ಕತ್ತು ಹಿಸುಕಿ ಸಾಯಿಸಿದ್ದಾಳೆ. ರಾತ್ರಿಯ ವೇಳೆ ಮೃತನ ಸಹೋದರ ಕೋಲ್ಕತ್ತಾದಿಂದ ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಕರೆ ಮಾಡಿದ ವೇಳೆ ಬೇರೊಬ್ಬರು ಫೋನ್ ಸ್ವೀಕರಿಸಿದ್ದರಿಂದ ಅನುಮಾನಗೊಂಡ ಸಹೋದರ ತನ್ನ ತಂದೆಗೆ ಕರೆ ಮಾಡಿ ಅಲ್ಲಿ ಹೋಗಿ ನೋಡುವಂತೆ ಕೇಳಿಕೊಂಡಿದ್ದಾನೆ. ಇದನ್ನೂ ಓದಿ:ಐವರ ಅಸ್ಥಿಪಂಜರ ಪತ್ತೆ ಕೇಸ್‌ – ಮರಣೋತ್ತರ ಪರೀಕ್ಷಾ ವರದಿಯಲ್ಲೂ ಪತ್ತೆಯಾಗದ ಸತ್ಯಾಂಶ

    ತಂದೆ ಹೋಗಿ ನೋಡಿದಾಗ ಮಗ ಸತ್ತು ಬಿದ್ದಿರುವುದು ಕಂಡುಬಂದಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹೇಶ್ವರ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಮೃತರ ಪತ್ನಿಯನ್ನು ಬಂಧಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಶ್ ಬರ್ತ್‍ಡೇಗೆ ಬೃಹತ್ ಕಟೌಟ್ ನಿಲ್ಲಿಸುವಾಗ ವಿದ್ಯುತ್ ಸ್ಪರ್ಶ – ಮೂವರ ದುರ್ಮರಣ


  • ಹೆಲ್ಮೆಟ್‌ನಿಂದ ಹೊಡೆದು 3 ತಿಂಗಳ ಗರ್ಭಿಣಿಯನ್ನು ಕೊಂದು ಅಪಘಾತವೆಂದ ಪತಿ!

    ಹೆಲ್ಮೆಟ್‌ನಿಂದ ಹೊಡೆದು 3 ತಿಂಗಳ ಗರ್ಭಿಣಿಯನ್ನು ಕೊಂದು ಅಪಘಾತವೆಂದ ಪತಿ!

    ದಾವಣಗೆರೆ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹೆಲ್ಮೆಟ್‌ನಿಂದ ಹೊಡೆದು ಕೊಂದು ಬಳಿಕ ಅಪಘಾತದ ನಾಟಕವಾಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಮೃತಳನ್ನು ಯಶೋದಾ ಎಂದು ಗುರುತಿಸಲಾಗಿದ್ದು, ಈಕೆ 3 ತಿಂಗಳ ಗರ್ಭಿಯಾಗಿದ್ದರು. ಇದೇ ತಿಂಗಳ 4 ರಂದು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲೂಕಿಗ ನುಗ್ಗಿಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಗೋಯಲ್‌

    ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ ಯಶೋದಾ, ನರಗನಹಳ್ಳಿ ಗ್ರಾಮದ ತಿಪ್ಪೇಶ್ (28) ಎಂಬಾತನನ್ನ ಪ್ರೀತಿಸಿ ಆರು ತಿಂಗಳ ಹಿಂದೆ ಮದುವೆ ಆಗಿದ್ದರು. ಅಂತೆಯೇ ಜನವರಿ 4 ರಂದು ಪತಿ ಜೊತೆ ಯಶೋದಾ ತವರಿಗೆ ಬಂದಿದ್ದರು. ತವರು ಮನೆಯಿಂದ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿ ಯಶೋದಾ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಿಗೆ ಪತಿ ತಿಪ್ಪೇಶ್ ಮಾಹಿತಿ‌ ನೀಡಿದ್ದ.

    ಇತ್ತ ಯಶೋದಾಳ ಶವ ನೋಡಿದ ತಂದೆ ಚಂದ್ರಪ್ಪಗೆ ಕೊಲೆ ಶಂಕೆ ವ್ಯಕ್ತವಾಗಿದೆ. ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಹಿರಂಗವಾಗಿದೆ. ತಾನೇ ಹೊಡೆದು ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.