ಕೋಲಾರ: ಕುಡಿದ ಅಮಲಿನಲ್ಲಿ ಪತಿ ಮಹಾಶಯನೋರ್ವ ಪತ್ನಿಯನ್ನೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ದುಡ್ಡಿಗಾನಹಳ್ಳಿಯಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಲಕ್ಷ್ಮಮ್ಮ (55) ಕೊಲೆಯಾದ ದುರ್ದೈವಿಯಾಗಿದ್ದು, ಈಕೆಯನ್ನು ಪತಿ ರಾಮಪ್ಪ (60) ಕೊಲೆ ಮಾಡಿದ್ದಾನೆ.
ರಾಮಪ್ಪ ಕುಡಿದು ಬಂದು ಪತ್ನಿಯೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದ. ಅಲ್ಲದೆ ಇಬ್ಬರು ಸಹ ಆಗಾಗ ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ರಾತ್ರಿ ಗಲಾಟೆ ತಾರಕಕ್ಕೇರಿ ಪತ್ನಿಯ ಎದೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.
ರಾಯ್ಪುರ: ಮೂಢನಂಬಿಕೆಗೆ ಮಾರು ಹೋದ 33 ವರ್ಷದ ಯುವಕನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿದ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಛತ್ತೀಸ್‌ಗಢದ ದುರ್ಗ್ (Chhattisgarh’s Durg) ಜಿಲ್ಲೆಯಲ್ಲಿ ನಡೆದಿದೆ.
ಮಾಹಿತಿಗಳ ಪ್ರಕಾರ, ರಾಜೇಶ್ವರ್ ನಿಶಾದ್ ಗ್ರಾಮದ ಕೆರೆಗೆ ತೆರಳಿ ಕೆಲ ಮಂತ್ರಗಳನ್ನು ಪಠಿಸಿ ಬಳಿಕ ಚಾಕುವಿನಿಂದ ನಾಲಿಗೆಯನ್ನು ಕೊಯ್ದು ದಡದಲ್ಲಿರುವ ಕಲ್ಲಿನ ಮೇಲೆ ಇಟ್ಟಿದ್ದಾನೆ. ಇತ್ತ ದೇವಸ್ಥಾನದಲ್ಲಿ ರಕ್ತಸ್ರಾವವಾಗುತ್ತಿದ್ದುದನ್ನು ಕಂಡ ಗ್ರಾಮಸ್ಥರು ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ.
ಗ್ರಾಮಸ್ಥರ ಪ್ರಕಾರ, ನಿಶಾದ್ ಅವರ ಪತ್ನಿ ಮೂಕಿಯಾಗಿದ್ದಾರೆ. ಹೀಗಾಗಿ ನನ್ನ ಕೆಲವೊಂದು ಆಸೆಗಳನ್ನು ಪೂರೈಸಲು ಶಿವನಿಗೆ ತನ್ನ ನಾಲಿಗೆಯನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಶಾದ್ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಘಟನೆಯು ಮೂಢನಂಬಿಕೆಯ ಪ್ರಕರಣವೆಂದು ತೋರುತ್ತದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
– ಟೀಗೆ ಮತ್ತಿನ ಔಷಧಿ ಬೆರಸಿ ಪತ್ನಿಯ ಪ್ರಜ್ಞೆ ತಪ್ಪಿಸುತ್ತಿದ್ದ ಪತಿರಾಯ
– 4 ಮಕ್ಕಳ ತಾಯಿಗೆ ನಿರಂತರ ಲೈಂಗಿಕ ಕಿರಕುಳ
ಜೈಪುರ: ತನ್ನ ಪತಿ ಕುಟುಂಬದಲ್ಲಿರುವ ಇತರ ಪುರುಷರೊಂದಿಗೂ (Family Members) ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪ ಮೇಲೆ ಮಹಿಳೆಯೊಬ್ಬರು ಪತಿ, ಮಾವ ಮತ್ತು ಸೋದರ ಮಾವನ ವಿರುದ್ಧ ದೂರು ದಾಖಲಿರುವ ಘಟನೆ ರಾಜಸ್ಥಾನದಲ್ಲಿ (Rajasthan) ನಡೆದಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಸಂತ್ರಸ್ತ ಮಹಿಳೆಯ ಮಾವ, ಸೋದರ ಮಾವ ಸೇರಿದಂತೆ 8 ಜನರ ವಿರುದ್ಧ ಕೇಸ್ ದಾಖಲಾಗಿದೆ. ಸಂದ್ವಾ ಪೊಲೀಸ್ ಠಾಣಾ (Sandwa Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಮಹಿಳೆಗೆ ಮೂವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಇದ್ದಾಳೆ ಎಂದು ತಿಳಿದುಬಂದಿದೆ.
ಏನಿದು ಕೇಸ್?
ಸಂದ್ವಾ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಮಹಿಳೆಯೊಬ್ಬರು ಕಳೆದ 15-20 ವರ್ಷಗಳಿಂದ ಪತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದಾರೆ, ತನಗೆ ನಿರಂತರವಾಗಿ ಅಮಲಿನ ಪದಾರ್ಥ ನೀಡಿ ಕುಟುಂಬದ ಇತರ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆಯೂ ಪತಿ ಒತ್ತಾಯಿಸುತ್ತಿದ್ದಾನೆ. ಆಕೆ ನಿರಾಕರಿಸಿದಾಗಲೆಲ್ಲ ತನಗೆ ಮನಸೋ ಇಚ್ಛೆ ಥಳಿಸುತ್ತಿದ್ದ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಪಾಪಿ ಪತಿ ಮಾಡಿದ್ದಾರೂ ಏನು?
ಪ್ರತಿದಿನ ತನ್ನ ಪತ್ನಿ ಕುಡಿಯುತ್ತಿದ್ದ ಟೀಗೆ (Tea) ಅಮಲಿನ ಪದಾರ್ಥವನ್ನು ಬೆರಸಿ ಕುಡಿಯುವಂತೆ ಮಾಡುತ್ತಿದ್ದನು. ಟೀ ಕುಡಿದು ಪತ್ನಿ ಪ್ರಜ್ಞೆ ತಪ್ಪಿದ ಬಳಿಕ ಕುಟುಂಬದ ಇತರರಿಂದ ಅತ್ಯಾಚಾರ ಮಾಡಿಸುತ್ತಿದ್ದ. ಒಂದು ದಿನ ಆಕೆಯ ಇದರ ವಿರುದ್ಧ ದನಿ ಎತ್ತಿದ್ದಕ್ಕೆ ಹರಿತವಾದ ಆಯುಧ ಹಿಡಿದು ನಿನ್ನ ಕತ್ತು ಸೀಳುತ್ತೇನೆ ಎಂದು ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆಕೆ ತಪ್ಪಿಸಿಕೊಂಡು ಹೋಗಿ ಪ್ರಾಣ ಉಳಿಸಿಕೊಂಡಿದ್ದಳು. ಈಗ ಮತ್ತೆ ಕೊಲ್ಲುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಲಕ್ನೋ: ಅಚ್ಚರಿಯ ಪ್ರಕರಣವೊಂದರಂತೆ ಪತ್ನಿಯೊಬ್ಬಳು ತನ್ನ ಪತಿಗೆ ಚಿತ್ರಹಿಂಸೆ ಕೊಟ್ಟ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ (Uttar Pradesh) ಸಿಯೋಹರಾ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಪತ್ನಿ ಮೆಹರ್ (30) ಹಾಗೂ ಪತಿಯನ್ನು ಮನ್ನನ್ ಜೈದಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ಸದ್ಯ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.
ಮೆಹರ್ ಹಾಗೂ ಮುನ್ನನ್ ಜೈದಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇವರಿಬ್ಬರ ದಾಂಪತ್ಯದ ನಡುವೆ ಬಿರುಕು ಮೂಡಿದ ಬಳಿಕ ಮೆಹರ್ ಮದ್ಯಪಾನ ಹಾಗೂ ಸಿಗರೇಟ್ ಸೇದಲು ಆರಂಭಿಸಿದ್ದಾಳೆ. ಅಲ್ಲದೇ ಮೆಹರ್ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟಿನಿಂದ ಸುಡುವ ಮುನ್ನ ಪತ್ನಿ ತನ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್
ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯ ಕ್ತಪಡಿಸಿದ ಮನ್ನನ್ ತಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ ಈ ಕ್ಯಾಮೆರಾದಲ್ಲಿ ಮೆಹರ್ ಕ್ರೂರ ಕೃತ್ಯ ಸೆರೆಯಾಗಿದ್ದು, ಮುನ್ನನ್ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ. ಪತಿ ದೂರು ಮತ್ತು ಸಿಸಿಟಿವಿ ದೃಶ್ಯಾ ವಳಿಗಳನ್ನು ಸಲ್ಲಿಸಿದ ನಂತರ ಸಿಯೋಹರಾ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದು, ಭಾನುವಾರ ಮಹಿಳೆಯನ್ನು ಬಂಧಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ಎಸ್‌ಪಿ ಪೂರ್ವ ಧರಂಪಾಲ್ ಸಿಂಗ್ ತಿಳಿಸಿದ್ದಾರೆ.
ಇಂದೋರ್: ಪಾಪಿ ಪತಿ ಮಹಾಶಯನೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ (Madhyapradesh) ಇಂದೋರ್‌ನಲ್ಲಿ ನಡೆದಿದೆ.
ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶ್ ನಗರದಲ್ಲಿ ಈ ಪ್ರಕರಣ ನಡೆದಿದೆ. ಮೃತಳನ್ನು ಶಾರದಾ (35) ಎಂದೂ ಆರೋಪಿ ಪತಿಯನ್ನು ಉಮೇಶ್ ರಾಥೋಡ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಮೃತರು 5 ತಿಂಗಳ ಗರ್ಭಿಣಿ. ಆರೋಪಿ ಪತಿ ತನ್ನ 6 ವರ್ಷದ ಅಪ್ರಾಪ್ತ ಮಗಳ ಎದುರೇ ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ. ಇದನ್ನೂ ಓದಿ: ಸಲ್ಮಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ- ಸೂರತ್‌ನ ತಾಪಿ ನದಿಯಲ್ಲಿ ಗನ್ ಪತ್ತೆ
ಘಟನೆ ವಿವರ: ಆರೋಪಿ ಪತಿ ಉಮೇಶ್ ರಾಥೋಡ್ ತನ್ನ ಪತ್ನಿ ಶಾರದಾ ಜೊತೆ ಮದುವೆಗೆಂದು ತಡರಾತ್ರಿ ಮನೆಗೆ ಬಂದಿದ್ದ. ಈ ವೇಳೆ ಹಣದ ವಿಚಾರವಾಗಿ ಪತಿ-ಪತ್ನಿಯ ನಡುವೆ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಪತಿ, ಪತ್ನಿ ಶಾರದಾ ಹೊಟ್ಟೆಗೆ ಮನೆಯಲ್ಲಿಟ್ಟಿದ್ದ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಪೊಲೀಸರ ಪ್ರಕಾರ, ಪತ್ನಿಗೆ ಚಾಕುವಿನಿಂದ ಇರಿಯುತ್ತಿರುವಾಗ ತನ್ನ 6 ವರ್ಷದ ಮಗಳು ಅಲ್ಲಿಯೇ ಇರುವುದನ್ನು ಕೂಡ ಆತ ನೋಡಿದ್ದಾನೆ. ಆಕೆಯ ಎದುರೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಚಂದನ್ ನಗರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿದ್ದಾರೆ. ಇದಾದ ಬಳಿಕ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಉಮೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಯಚೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿದ್ದಾಳೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿರುವ ಘಟನೆ ಸಿಂಗನೋಡಿ ತಾಂಡಾದಲ್ಲಿ ಕೇಳಿಬಂದಿದೆ.
ಮೃತನನ್ನು ರಾಯಚೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯ ರಾಜು ನಾಯ್ಕ್ (38) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕುಡಿಸಿ, ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ದೇವಸ್ಥಾನದ ಗೋಪುರ ಕಟ್ಟಲು ಬಂದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯೊಂದಿಗೆ ಮೃತನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದನ್ನೂ ಓದಿ: ಡಬಲ್ ಮರ್ಡರ್ ಕೇಸ್ – ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ!
ಈ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಪತ್ನಿ ಸ್ನೇಹಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮೋದಿ ಹೆಸರಲ್ಲಿ 5,000 ರೂ. – ಮೆಸೇಜ್ ಕ್ಲಿಕ್ ಮಾಡೋ ಮುನ್ನ ಎಚ್ಚರ
ಪುಣೆ: ಪತಿ (Husband) ಸಲಿಂಗಿಯಾಗಿದ್ದು, ಆ ವಿಚಾರವನ್ನು ಮರೆಮಾಚಿ ಮದುವೆಯಾಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸ್ (Police) ಠಾಣೆಯ ಮೆಟ್ಟಿಲೇರಿರುವ ಘಟನೆ ಪುಣೆಯ (Pune) ವಡ್ಗಾಂಶೇರಿ ಎಂಬಲ್ಲಿ ನಡೆದಿದೆ.
ಜುಲೈ 2022ರಲ್ಲಿ ಮಹಿಳೆಯ ವಿವಾಹವಾಗಿತ್ತು. ಮದುವೆಯ ಬಳಿಕ ಪತಿಯ ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಆತ ಸಲಿಂಗಿ ಎಂಬುದು ಪತ್ನಿಗೆ ತಿಳಿದಿದೆ. ಇದರಿಂದ ಮಹಿಳೆ ಪತಿ ಹಾಗೂ ಅವಳ ಅತ್ತೆಯನ್ನು ಪ್ರಶ್ನಿಸಿದ್ದಾಳೆ. ಇದಾದ ಮೇಲೆ ಅತ್ತೆ ಹಾಗೂ ಪತಿ ಸೇರಿ ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಕಾರು ಮತ್ತು ಹಣಕ್ಕೆ ಬೇಡಿಕೆ ಇಟ್ಟು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ನಿಮ್ಮ ರಾಮಮಂದಿರ ಸ್ಫೋಟಿಸುತ್ತೇವೆ – ಅಲ್ಲಾಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ
ಈ ಸಂಬಂಧ ಪುಣೆಯ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 498 (ಎ) (ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 504 (ಉದ್ದೇಶಪೂರ್ವಕವಾಗಿ ಅವಮಾನ)ರ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ
ಹಾಸನ: ವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan Woman Death) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸುರಭಿ (24) ಮೃತ ಮಹಿಳೆ. ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಗಂಭೀರ ಆರೋಪ ಮಾಡುತ್ತಿದ್ದಾರೆ. ಜೊತೆಗೆ ಸುರಭಿ ಸಾವಿಗೆ ಪತಿ ದರ್ಶನ್ ಕಾರಣವಾಗಿದ್ದು, ಆತನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣದ ವಿವರ: ಮೂರು ವರ್ಷದ ಹಿಂದೆ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ಹುಣಸೂರಿನ ಸುರಭಿಯನ್ನು ಅದ್ಧೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷದ ಹೆಣ್ಣುಮಗುವಿದ್ದು, ಪತಿ ದರ್ಶನ್‌ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದನ್ನೂ ಓದಿ: 6 ವರ್ಷ ಪ್ರೀತಿಸಿ ಕೈಕೊಟ್ಟ, ಸಪ್ತಪದಿ ತುಳಿದವನೂ ಬೇಡವೆಂದ- ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಯುವತಿ ಕಂಗಾಲು
ನಿಮ್ಮ ಮಗಳು ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆ ಎಂದು ದರ್ಶನ್ ಗುರುವಾರ ಸುರಭಿ ಪೋಷಕರಿಗೆ ಕರೆ ಮಾಡಿದ್ದಾನೆ. ನಂತರ ನಾಗಯ್ಯನಕೊಪ್ಪಲಿಗೆ ಬಂದ ಪೋಷಕರು, ಸುರಭಿ ಲೋಬಿಪಿಯಿಂದ ಸತ್ತಿಲ್ಲ. ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸುರಭಿಯನ್ನು ನೇಣುಬಿಗಿದು ಕೊಲೆ ಮಾಡಿ ನಾಟವಾಡುತ್ತಿದ್ದಾರೆ. ಸುರಭಿ ಕುತ್ತಿಗೆಯ ಮೇಲೆ ಗಾಯದ ಗುರುತುಗಳಿವೆ ಎಂದು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಹೆಂಡತಿ (Wife) ಮೇಲೆ ಕಣ್ಣಾಕಿದ್ದ ಬಾವನನ್ನು ಮುಗಿಸುವ ಸಲುವಾಗಿ ಆತನ ಕಾರ್‌ನಲ್ಲೇ ಅಪಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹೊಸಕೋಟೆ (Hosakote) ವ್ಯಾಪ್ತಿಯಲ್ಲಿ ನಡೆದಿದೆ.
ಮೊಹಮದ್ ಅಖ್ತರ್ ಅಲಿ (44) ಕೊಲೆಯಾದ ದುರ್ದೈವಿ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಮೊಹಮದ್ ಅಖ್ತರ್ ಅಲಿಯನ್ನು ಅಪಹರಿಸಲಾಗಿದ್ದು, ಬಳಿಕ ಆತನ ಕತ್ತು ಬಿಗಿದು ಹತ್ಯೆಗೈದು ಹೊಸಕೋಟೆ ಸಮೀಪದ ಕಾಲುವೆಯಲ್ಲಿ ಶವ ಎಸೆದಿದ್ದಾರೆ. ಬಳಿಕ ಕೃತ್ಯಕ್ಕೆ ಬಳಸಿದ್ದ ಕಾರನ್ನು ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲೇ ತಂದು ನಿಲ್ಲಿಸಿದ್ದಾರೆ. ಅಕ್ತರ್ ಅಲಿ ಹೆಂಡತಿ ನೀಡಿದ ಮಿಸ್ಸಿಂಗ್ ಕಂಪ್ಲೆಂಟ್‌ನಿಂದ ಕೊಲೆ ರಹಸ್ಯ ರಿವೀಲ್ ಆಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವ್ಳು ಪರಪುರುಷನ ಜೊತೆ ಡೇಟಿಂಗ್- ರೊಚ್ಚಿಗೆದ್ದ ಪತಿ ಮಚ್ಚಿನಿಂದ ಅಟ್ಯಾಕ್
ಹತ್ಯೆಯಾದ ಮೊಹಮ್ಮದ್ ಅಖ್ತರ್ ಅಲಿಗೆ ಆತನ ನಾದಿನಿಯೊಂದಿಗೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗಿದೆ. ನಾದಿನಿಯ ಪತಿ ಷಹನವಾಜ್‌ನಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಷಹನವಾಜ್ ಸೂಚನೆಯ ಮೇರೆಗೆ ಸೋಮವಾರ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಮೊಹಮದ್ ಅಖ್ತರ್ ಅಲಿಯನ್ನು ಅಪಹರಿಸಿರುವ ಆರೋಪಿಗಳು, ಬಳಿಕ ಚಲಿಸುತ್ತಿದ್ದ ಕಾರಿನಲ್ಲೇ ಆತನ ಕತ್ತು ಬಿಗಿದು ಹತ್ಯೆಗೈದಿದ್ದಾರೆ. ಬಳಿಕ ಹೊಸಕೋಟೆಯ ಬಳಿ ಕಾಲುವೆಯಲ್ಲಿ ಶವವನ್ನು ಎಸೆದು ವಾಪಸ್ಸಾಗಿದ್ದಾರೆ. ಇತ್ತ ಪತಿ ನಾಪತ್ತೆಯಾಗಿರುವುದಾಗಿ ಅಖ್ತರ್ ಅಲಿ ಪತ್ನಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಚಂದಗಾಣಲೆಂದು ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ಮದುಮಗ ದುರ್ಮರಣ!
ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಮೃತನ ಮೊಬೈಲ್ ಫೋನ್ ಪತ್ತೆಯಾಗಿದ್ದು, ಕೊಲೆ ಆರೋಪಿಗಳು ಯಾರು ಎಂಬುದು ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ಸುಪಾರಿ ನೀಡಿದ ನಾದಿನಿಯ ಗಂಡ ಷಹನವಾಜ್ ಸೇರಿದಂತೆ ಎಲ್ಲರಿಗೂ ಡ್ರಿಲ್ ನಡೆಸಲಾಗುತ್ತಿದೆ. ಇದನ್ನೂ ಓದಿ: 84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ
ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಹೊಂಚು ಹಾಕಿ ಕುಳಿತಿದ್ದ ಪತಿರಾಯ, ನಡು ರೋಡಲ್ಲಿ ಬಾಯ್ ಫ್ರೆಂಡ್ ಎದುರೇ ಮೀನು ಕತ್ತರಿಸುವ ಮಚ್ಚಲ್ಲಿ ಮನಸ್ಸೋ ಇಚ್ಛೆ ಪತ್ನಿಯನ್ನು ಕತ್ತರಿಸಿ ಹಾಕಿದ್ದಾನೆ. ಭಂಡಧೈರ್ಯ ಮಾಡಿದ್ದ ಸ್ಥಳೀಯರು, ಅಟ್ಯಾಕ್ ಮಾಡ್ತಿದ್ದ ಪತಿಯನ್ನ ಹಿಡಿದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರಿನ ಮುರುಗೇಶ್ ಪಾಳ್ಯದ ವಿಂಡ್ ಟನೆಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನೈಗರ್ ಮೇಲೆ ಆಕೆಯ ಪತಿ ಶೇಖ್ ಮುಜೀಬ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇವರಿಬ್ಬರೂ ಕಳೆದ ಮೂರು ವರ್ಷಗಳಿಂದ ಲವ್ ಮಾಡಿ ಮದುವೆಯಾಗಿದ್ರು. ಹೊಸಕೋಟೆ ಮೂಲದ ಮುಜೀಬ್, ಕ್ಯಾಬ್ ಡ್ರೈವರ್ ಕೆಲಸ ಮಾಡಿಕೊಂಡು ಆರ್ ಟಿ ನಗರದಲ್ಲಿ ವಾಸವಿದ್ದ. ನೈಗರ್ ಪ್ರೈವೆಟ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.
ಇತ್ತೀಚೆಗೆ ಹೆಂಡ್ತಿ ನಡತೆ ಮೇಲೆ ಸಂಶಯ ಹೊಂದಿದ್ದ ಶೇಖ್ ಮುಜೀಬ್, ಹೆಂಡ್ತಿಯಿಂದ ದೂರಾಗಿದ್ದನು. ಇತ್ತ ಪತ್ನಿಯು ಸಲೀಂ ಅನ್ನೋನ ಜೊತೆ ಸುತ್ತಾಡ್ತಿದ್ದಾಳೆ ಅನ್ನೋ ವಿಚಾರ ಮುಜೀಬ್ ಗಮನಕ್ಕೆ ಬಂದಿದೆ. ಹೀಗಾಗಿ ಸೋಮವಾರ ಶಿವಾಜಿನಗರಕ್ಕೆ ಹೋಗಿ ಮೀನು ಕತ್ತರಿಸುವ ಮಚ್ಚು ಖರೀದಿ ಮಾಡಿ ಪತ್ನಿ ಪಿಜಿಗೆ ವಾಪಸ್ಸಾಗುವ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ. ಅಂತೆಯೇ ಸಂಜೆ 7 ಗಂಟೆಗೆ ಬಾಯ್ ಫ್ರೆಂಡ್ ಸಲೀಂ ಜೊತೆ ಬಂದ ಹೆಂಡ್ತಿ ನೋಡಿ ಆಕೆಯ ಕೈ ಬೆರಳುಗಳನ್ನ ಟಾರ್ಗೆಟ್ ಮಾಡಿ ಮಚ್ಚಿಂದ ಹಲ್ಲೆ ಮಾಡಿದ್ದ. ಈ ವೇಳೆ ಪತ್ನಿ ತಲೆ ಮೇಲೆ ಕೈ ಇಟ್ಕೊಂಡಿದ್ದರಿಂದ ಕೈ ಜೊತೆಗೆ ತಲೆಗೂ ಗಂಭೀರ ಗಾಯವಾಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಕೂಡಲೇ ಸ್ಥಳೀಯರು ಮುಜೀಬ್ ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗ್ತಿದೆ. ಇದನ್ನೂ ಓದಿ: ಚಂದಗಾಣಲೆಂದು ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ಮದುಮಗ ದುರ್ಮರಣ!