Tag: Wife

  • ಹೆಂಡತಿಯ ಹತ್ಯೆಗೈದು ಮನೆಯ ಬಾತ್‌ರೂಂನಲ್ಲಿ ಪೆಟ್ರೋಲ್ ಸುರಿದು ಸುಟ್ಟ ಪತಿ

    ಹೆಂಡತಿಯ ಹತ್ಯೆಗೈದು ಮನೆಯ ಬಾತ್‌ರೂಂನಲ್ಲಿ ಪೆಟ್ರೋಲ್ ಸುರಿದು ಸುಟ್ಟ ಪತಿ

    ನೆಲಮಂಗಲ: ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಪತಿ (Husband) ಕ್ಷುಲ್ಲಕ ವಿಚಾರದಲ್ಲಿ ಪತ್ನಿಯನ್ನ (Wife) ಕೊಲೆ ಮಾಡಿ ಮನೆಯಲ್ಲೇ ಪೆಟ್ರೋಲ್ ಸುರಿದು ಸುಟ್ಟಿರುವ ಘಟನೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲ (Nelamangala) ತಾಲೂಕಿನ ದಾಬಸ್ ಪೇಟೆಯಲ್ಲಿ (Dabaspet) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಎರಡು ಮೂರು ದಿನಗಳ ಹಿಂದೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವ್ಯ (27) ಮೃತ ಗೃಹಿಣಿ. ಈಕೆಯ ಶವ ಮನೆಯ ಬಾತ್‌ರೂಂನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಮೊಘಲ್‌ ದೊರೆ ಹುಮಾಯೂನ್-ರಾಣಿ ಕರ್ಣಾವತಿಯಿಂದ ಬಂತಾ ‘ರಾಖಿ ಹಬ್ಬ’; ಚರ್ಚೆ ಹುಟ್ಟುಹಾಕಿದ ಸಂಸದೆ ಸುಧಾಮೂರ್ತಿ ಪೋಸ್ಟ್‌

    ಪತಿ ಶಿವಾನಂದ್ ಅಲಿಯಾಸ್ ದಿಲೀಪ್ ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಣಿಪುರ ಗ್ರಾಮದವನಾಗಿದ್ದು, ಕೊಲೆಯಾದ ಕಾವ್ಯ ಹೊಳೆನರಸೀಪುರ ತಾಲೂಕು ಮಾವಿನಕೆರೆ ಗ್ರಾಮದವರಾಗಿದ್ದಳು. ಇವರಿಬ್ಬರು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಮನೆಯಲ್ಲಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಇದನ್ನೂ ಓದಿ: ಹೆತ್ತ ಮಗನ ಮುಂದೆಯೇ ತಾಯಿಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ದುರುಳರು!

    ಪತಿ ವಿಪರೀತವಾಗಿ ಮದ್ಯಪಾನ ಮಾಡುತ್ತಿದ್ದ. ಇದರಿಂದ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದೆ. ಕುಡಿದ ಅಮಲಿನಲ್ಲಿ ಮನೆಯ ಬಾತ್ ರೂಮ್‌ನಲ್ಲಿ ಪತ್ನಿಯನ್ನು ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಸುಟ್ಟಿರುವ ಆರೋಪಿ ಪತಿಯನ್ನು ದಾಬಸ್ ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಕಾವ್ಯ ಫೋನ್ ತೆಗೆಯದ ಹಿನ್ನೆಲೆ ಮನೆಯವರು ಬಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಂದೆ ಮಾಡದ ತಪ್ಪಿಗೆ ಈ ರೀತಿ ಆರೋಪಕ್ಕೆ ಗುರಿಯಾಗಿದ್ದು ಬೇಸರ ತರಿಸಿದೆ: ಯತೀಂದ್ರ ಭಾವುಕ

  • ಪ್ರೀತಿಸಿ ಮದುವೆಯಾದವನನ್ನು ಹತ್ಯೆಗೈದು ಅಪಘಾತದ ಕತೆ ಕಟ್ಟಿದ್ದ ಖತರ್‌ನಾಕ್ ಲೇಡಿ ಅರೆಸ್ಟ್

    ಪ್ರೀತಿಸಿ ಮದುವೆಯಾದವನನ್ನು ಹತ್ಯೆಗೈದು ಅಪಘಾತದ ಕತೆ ಕಟ್ಟಿದ್ದ ಖತರ್‌ನಾಕ್ ಲೇಡಿ ಅರೆಸ್ಟ್

    ತುಮಕೂರು: ಪ್ರೀತಿಸಿ ಮದುವೆಯಾದ ಪತಿಯನ್ನು (Husband) ಹತ್ಯೆಗೈದು (Murder) ಅಪಘಾತದ ಕತೆ ಕಟ್ಟಿದ್ದ ಪತ್ನಿಯನ್ನು (Wife) ಪೊಲೀಸರು ಬಂಧಿಸಿದ್ದಾರೆ.

    ಕೊಲೆಯಾದ ವ್ಯಕ್ತಿಯನ್ನು ಕಲಬುರಗಿ ಮೂಲದ ಪ್ರಕಾಶ್ (30) ಎಂದು ಗುರುತಿಸಲಾಗಿದೆ. ಕೊಲೆಯಾದವನ ಪತ್ನಿ ಹರ್ಷಿತಾ ಹಾಗೂ ಸಂಬಂಧಿಗಳು ಪ್ರಕಾಶ್‌ನನ್ನು ಮಲ್ಲೆಕಾವು ಗ್ರಾಮದಲ್ಲಿ ಡ್ರ್ಯಾಗರ್‌ನಿಂದ ಇರಿದು ಹತ್ಯೆಗೈದು, ಬಳಿಕ ಅಪಘಾತ ಎಂಬಂತೆ ಬಿಂಬಿಸಿದ್ದರು. ಎದೆ ಭಾಗಕ್ಕೆ ಚುಚ್ಚಿದ ಗುರುತು ಪತ್ತೆಯಾದ ಬಳಿಕ ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸಿದಾಗ ಪ್ರಕರಣದ ಸತ್ಯಾಸತ್ಯತೆ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಕೊಲೆಯಾದವನ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

    ಗುತ್ತಿಗೆ ಆಧಾರದ ಮೇಲೆ ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಹಾಗೂ ಹರ್ಷಿತಾ 3 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಕೂಡ ಇದೆ.

    ಈ ಸಂಬಂಧ ಕೊರಟಗೆರೆ ಪೊಲೀಸರು ಹರ್ಷಿತಾಳನ್ನ ಬಂಧಿಸಿದ್ದಾರೆ. ಆಕೆಯ ಸಹೋದರ ಹಾಗೂ ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಬಂಧಿತ ಆರೋಪಿ ಹರ್ಷಿತಾ ಸಂಬಂಧಿಯೋರ್ವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯ ಹತ್ಯೆಗೆ ಸ್ಕೆಚ್ ಹಾಕಿ, ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

  • ನನ್ನ ಹೆಂಡತಿಗೆ ಹಂಚಿಕೆ ಆಗಿರೋ ಮುಡಾ ನಿವೇಶನ ಕಾನೂನು ಬದ್ದ:  ಸಿದ್ದರಾಮಯ್ಯ

    ನನ್ನ ಹೆಂಡತಿಗೆ ಹಂಚಿಕೆ ಆಗಿರೋ ಮುಡಾ ನಿವೇಶನ ಕಾನೂನು ಬದ್ದ: ಸಿದ್ದರಾಮಯ್ಯ

    ಬೆಂಗಳೂರು:  ತಮ್ಮ ಪತ್ನಿಗೆ ಮೂಡಾದಲ್ಲಿ ನೀಡಿರುವ ನಿವೇಶನ ಕಾನೂನು ಪ್ರಕಾರವೇ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ಈ ನಿವೇಶನ ಹಂಚಿಕೆ ಆಗಿದೆ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.

    ತಮ್ಮ ಪತ್ನಿ ಹೆಸರಿಗೆ ಮೂಡಾ ನಿವೇಶನ ಹಂಚಿಕೆ ಆಗಿರೋ ವಿಚಾರ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ. ಬಿಜೆಪಿ ಅವಧಿಯಲ್ಲಿ ಕೊಟ್ಟಿರೋ ನಿವೇಶನ ಇದು. ನನ್ನ ಬಾಮೈದ ತನ್ನ ಜಾಗವನ್ನ ನನ್ನ ಹೆಂಡತಿಗೆ ಅರಿಶಿನ-ಕುಂಕುಮಕ್ಕೆ ಅಂತ ಗಿಫ್ಟ್ ಡೀಡ್ ಮಾಡಿದ್ರು. ಈ ಜಾಗವನ್ನ ಮುಡಾದವರು ಯಾವುದೇ ಮಾಹಿತಿ ಇಲ್ಲದೆ ಅಕ್ವೈರ್ ಮಾಡಿಕೊಂಡು ಸೈಟ್ ಮಾಡಿದ್ರು.ಆಗ ನಮ್ಮ ಜಮೀನಿಗೆ ಪರಿಹಾರ ಕೊಡಿ ಅಂತ ನಾವು ಕೇಳಿದಾಗ ಬದಲಿ ನಿವೇಶನ ಕೊಡೋದಾಗಿ ಹೇಳಿದ್ರು.ಅದರಂತೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಆಗಿದೆ. ಇದು ತಪ್ಪಾ?ಅಂತ ಪ್ರಶ್ನೆ ಮಾಡಿದ್ರು.

    ನಿವೇಶನ ಹಂಚಿಕೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ.ಕಾನೂನು ‌ಪ್ರಕಾರವೇ ಇದು ಹಂಚಿಕೆ ಆಗಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ಆಗಿಲ್ಲ ಅಂತ ತಮ್ಮ ಪತ್ನಿಗೆ ಹಂಚಿಕೆ ಆಗಿರೋ ನಿವೇಶನದ ವಿಷಯವನ್ನು ಸಮರ್ಥನೆಯನ್ನ ಸಿದ್ದರಾಮಯ್ಯ ಮಾಡಿಕೊಂಡ್ರು.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿಗೂ ಮುಡಾದಲ್ಲಿ ಬದಲಿ ನಿವೇಶನ!

  • ಗಂಡ ಬೇಕೆಂದು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!

    ಗಂಡ ಬೇಕೆಂದು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!

    ದಾವಣಗೆರೆ: ಗಂಡ ಬೇಕು ಎಂದು ಮಕ್ಕಳೊಂದಿಗೆ ಪತ್ನಿ ಧರಣಿ ಕುಳಿತ ಘಟನೆ ದಾವಣಗೆರೆ (Davanagere) ಜಿಲ್ಲೆಯಲ್ಲಿ ನಡೆದಿದೆ.

    ನಗರದ ರಾಮನಗರದ ಎಸ್‍ಓಜಿ ಕಾಲೋನಿ ಮನೆ ಮುಂದೆ ಪತ್ನಿ ಸೌಮ್ಯಾ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ರಾತ್ರಿಯಿಂದ ಗಂಡನಿಗಾಗಿ ಕಾಯುತ್ತಿದ್ದಾರೆ. ಕಾನ್ಸ್ ಟೇಬಲ್ ಆಗಿರುವ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತ ಸೌಮ್ಯಾ ಗಂಭೀರ ಆರೋಪ ಮಾಡಿದ್ದಾರೆ.

    ಗಂಡ ಗೋಣಿ ಬಸಪ್ಪ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನಮ್ಮ ಮನೆಗೆ ಬರುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಪತ್ನಿ ಸೌಮ್ಯ ಒಡವೆ ಅಡ ಇಟ್ಟಿದ್ದಾರೆ. ಸದ್ಯ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಮನೆ ಮುಂದೆ ರಾತ್ರಿ ಇಡೀ ಇಬ್ಬರು ಮಕ್ಕಳೊಂದಿಗೆ ಗಂಡನಿಗಾಗಿ ಹೆಂಡತಿ ಕಾದು ಕುಳಿತಿದ್ದಾರೆ.

    ಸೌಮ್ಯ ಗೋಣಿ ಬಸಪ್ಪ 2013 ರಲ್ಲಿ ವಿವಾಹವಾಗಿದ್ದರು. ಗಂಡ ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ಮನೆ ಖರೀದಿಸಿ ಕೊಟ್ಟಿದ್ದಾನೆ. ನಮ್ಮ ಮನೆಗೆ ಬರುತ್ತಿಲ್ಲ, ಎರಡು ಮಕ್ಕಳ ನಿರ್ವಹಣೆ ಕಷ್ಟ ಆಗಿದೆ. ಈ ಹಿಂದೆ ಕಂಪ್ಲೆಂಟ್ ಕೊಟ್ಟಿದ್ದೆ ಮನವೊಲಿಸಿ ಕೇಸ್ ವಾಪಸ್ ತೆಗೆಸಲಾಗಿತ್ತು. ಇದೀಗ ನನಗೆ ನನ್ನ ಗಂಡ ಬೇಕು ಎಂದು ಪತ್ನಿ ಸೌಮ್ಯ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಡಿಕೆಶಿ ಮುಖ್ಯಮಂತ್ರಿ ಆಗ್ಲೇಬೇಕು, ಆಗಿಯೇ ಆಗ್ತಾರೆ: ಶಾಸಕ ಶಿವಗಂಗಾ ಬಸವರಾಜ್ ವಿಶ್ವಾಸ

  • ಹಾಸನ ಎಸ್‌ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಹತ್ಯೆಗೈದ ಪತಿ

    ಹಾಸನ ಎಸ್‌ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಹತ್ಯೆಗೈದ ಪತಿ

    ಹಾಸನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಾನ್‌ಸ್ಟೇಬಲ್‌ (Constable) ಪತಿಯೊಬ್ಬ ಹಾಸನದ (Hassana) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಪತ್ನಿಗೆ (Wife) ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

    ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಕನಾಥ್ ಮತ್ತು ಮಮತಾ ಮಧ್ಯೆ 4-5 ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಪತ್ನಿ ಬಂದಿದ್ದಾರೆ.

    ಪತ್ನಿಯನ್ನು ಹತೈಗೈದ ಪೊಲೀಸ್‌ ಕಾನ್‌ಸ್ಟೇಬಲ್‌ ಲೋಕನಾಥ್‌
    ಪತ್ನಿಯನ್ನು ಹತೈಗೈದ ಪೊಲೀಸ್‌ ಕಾನ್‌ಸ್ಟೇಬಲ್‌ ಲೋಕನಾಥ್‌

    ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗಮನಿಸಿದ ಲೋಕನಾಥ್‌ ಆವರಣದಲ್ಲೇ ಮಮತಾ ಎದೆಗೆ ಚೂರಿ ಇರಿದಿದ್ದಾನೆ. ಕೂಡಲೇ ಅಲ್ಲಿದ್ದ ಮಂದಿ ಮಮತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಮತಾ ಮೃತಪಟ್ಟಿದ್ದಾರೆ.

    ಪತ್ನಿಯನ್ನು ಹತ್ಯೆ ಮಾಡಿದ ನಂತರ ಪರಾರಿಯಾಗಿದ್ದ ಲೋಕನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ.

  • ಆನೇಕಲ್‌ನಲ್ಲಿ ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

    ಆನೇಕಲ್‌ನಲ್ಲಿ ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

    ಬೆಂಗಳೂರು: ವಿಷ ಸೇವಿಸಿ ಗಂಡ-ಹೆಂಡತಿ (Husband-Wife) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ನಡೆದಿದೆ.

    ಪ್ರಭು (38), ಲಕ್ಕಮ್ಮ (30) ಮೃತ ದುರ್ದೈವಿಗಳು. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಗಂಡ ಪ್ರಭು ಡ್ರೈವರ್ ಕೆಲಸ ಮಾಡುತ್ತಿದ್ದು, ಲಕ್ಕಮ್ಮ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಗಂಡ-ಹೆಂಡತಿ ವಾಸವಿದ್ದ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜೂನ್‌ 8 ರಂದು ಸಂಜೆ ನರೇಂದ್ರ ಮೋದಿ ಪ್ರಮಾಣವಚನ

    ದಂಪತಿ ಮೃತಪಟ್ಟು ಮೂರರಿಂದ ನಾಲ್ಕು ದಿನ ಕಳೆದಿರಬಹುದು ಎಂದು ಊಹಿಸಲಾಗಿದೆ. ವಿಶ್ವನಾಥ್ ಎಂಬವರ ಮನೆಯಲ್ಲಿ ದಂಪತಿ ಬಾಡಿಗೆಗಿದ್ದರು. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: 24 ವರ್ಷಗಳ ನಂತ್ರ ಅಧಿಕಾರ ಕಳೆದುಕೊಂಡ ಬಿಜೆಡಿ- ನವೀನ್ ಪಟ್ನಾಯಕ್ ರಾಜೀನಾಮೆ

  • ಅತ್ತಿಗೆಯಿಂದ ದೂರ ಇರಿ ಅಂದಿದ್ದಕ್ಕೆ ಮೈದುನನ ಕಲ್ಲಿನಿಂದ ಜಜ್ಜಿ ಕೊಲೆಗೈದ್ರು!

    ಅತ್ತಿಗೆಯಿಂದ ದೂರ ಇರಿ ಅಂದಿದ್ದಕ್ಕೆ ಮೈದುನನ ಕಲ್ಲಿನಿಂದ ಜಜ್ಜಿ ಕೊಲೆಗೈದ್ರು!

    ಕಲಬುರಗಿ: ಅತ್ತಿಗೆಯಿಂದ ದೂರ ಇರುವುದಕ್ಕೆ ಹೇಳಿದಕ್ಕೆ ಮೈದುನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೀರಾಲಾಲ್ ಲದಾಫ್ (35) ಕೊಲೆಯಾದವ. ಕೊಲೆಯಾದ ಹೀರಾಲಾಲ್ ಅತ್ತಿಗೆ ಜೊತೆ ರವಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರವನ್ನು ಹೀರಾಲಾಲ್ ತನ್ನ ಅಣ್ಣ ಬಾಬು ಲದಾಫ್ಗೆ ತಿಳಿಸಿದ್ದನು. ಇತ್ತ ಅನೈತಿಕ ಸಂಬಂಧ ತಿಳಿದ ಕೂಡಲೇ ರವಿಯಿಂದ ದೂರ ಇರುವಂತೆ ಬಾಬು ತನ್ನ ಪತ್ನಿಗೆ ಹೇಳಿದ್ದರು. ಆದರೆ ಆಕೆ ತನ್ನ ಪ್ರಿಯಕರನ ಜೊತೆ ಸೇರಿ ಪತಿ ಬಾಬು ಲದಾಫ್ ಮೇಲೆಯೇ ಹಲ್ಲೆ ಮಾಡಿದ್ದಾಳೆ.

    ಪತ್ನಿಯ ಅನೈತಿಕ ಸಂಬಂಧದಿಂದ ಮಾನಸಿಕವಾಗಿ ನೊಂದು ಬಾಬು ಲದಾಫ್ ಊರನ್ನೇ ಬಿಟ್ಟಿದ್ದರು. ಅಣ್ಣನ ಸಂಸಾರ ಸರಿದಾರಿಗೆ ತರಲು ಯತ್ನಿಸಿ ಅನೈತಿಕ ಸಂಬಂಧ ಬಿಟ್ಟು ಬಿಡುವಂತೆ ರವಿಗೆ ಹಿರಾಲಾಲ್ ಹೇಳಿದ್ದರು. ಇದೇ ವಿಚಾರವಾಗಿ ಹೀರಾಲಾಲ್ ರವಿ ಮಧ್ಯೆ ಆಗಾಗ ಗಲಾಟೆ ಕೂಡ ಆಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಅಪಘಾತಕ್ಕೆ ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ

    ಮೊನ್ನೆ ಕುಡಿದ ನಶೆಯಲ್ಲಿ ಗಲಾಟೆ ಮಾಡಿಕೊಂಡ ಬಳಿಕ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ರು. ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಹೀರಾಲಾಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ಗುಪ್ತಾಂಗದಲ್ಲಿ ರಂಧ್ರ ಮಾಡಿ ಬೀಗ ಜಡಿದು ವಿಕೃತಿ ಮೆರೆದ ಪತಿ!

    ಪತ್ನಿಯ ಗುಪ್ತಾಂಗದಲ್ಲಿ ರಂಧ್ರ ಮಾಡಿ ಬೀಗ ಜಡಿದು ವಿಕೃತಿ ಮೆರೆದ ಪತಿ!

    ಪುಣೆ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಗುಪ್ತಾಂಗವನ್ನು ಡ್ರಿಲ್‌ ಮಾಡಿ ಬಳಿಕ ಬೀಗ ಹಾಕಿದ ವಿಚಿತ್ರ ಪ್ರಸಂಗವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಅಚ್ಚರಿ ಎನಿಸಿದರೂ ಸತ್ಯವಾಗಿರುವ ಈ ಘಟನೆ ಮಹಾರಾಷ್ಟ್ರದ (Maharastra) ಪಿಂಪ್ರಿ ಚಿಂಚ್ವಾಡದಲ್ಲಿ ನಡೆದಿದೆ. ವ್ಯಕ್ತಿಯನ್ನು ಉಪೇಂದ್ರ ಹುಡಕೆ ಎಂದು ಗುರುತಿಸಲಾಗಿದೆ. ನೇಪಾಳ ಮೂಲದ ಈತ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲಿಯೇ ಇರುತ್ತಿದ್ದಳು. ಸದ್ಯ ಪ್ರಕರಣ ಸಂಬಂಧ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

    ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಉಪೇಂದ್ರ ಅನುಮಾನಗೊಂಡಿದ್ದನು. ಹೀಗಾಗಿ ಮೇ 11 ರಂದು ಕಂಠಪೂರ್ತಿ ಕುಡಿದು ಬಂದಿದ್ದ ಉಪೇಂದ್ರ, ಪತ್ನಿಗೆ ಮನಬಂದಂತೆ ಥಳಿಸಿ, ಒದ್ದಿದ್ದಾನೆ. ಬಳಿಕ ಆಕೆಯನ್ನು ಚೂಡಿದಾರದ ಶಾಲಿನಿಂದ ಕಟ್ಟಿಹಾಕಿ ಹೇಯ ಕೃತ್ಯ ಎಸಗಿದ್ದಾನೆ.

    ಹರಿತವಾದ ಬ್ಲೇಡ್‌ನಿಂದ ಗುಪ್ತಾಂಗದ ಎರಡೂ ಕಡೆ ರಂಧ್ರಗಳನ್ನು ಮಾಡಿದ್ದಾನೆ. ಕಬ್ಬಿಣದ ಸ್ಕ್ರೂಗಳನ್ನು ಹಾಕಿ ನಂತರ ಆಕೆಯ ಜನನಾಂಗದ ಪ್ರದೇಶಕ್ಕೆ ಬೀಗ ಹಾಕಿದ್ದಾನೆ. ಇತ್ತ ಪತಿಯ ನೀಚ ಕೃತ್ಯದಿಂದ ನೋವು ತಾಳಲಾರದೆ 28 ವರ್ಷದ ಪತ್ನಿ ಜೋರಾಗಿ ಕಿರುಚಾಡಿದ್ದಾಳೆ. ಆದರೂ ಪತಿ ಆಕೆಯ ಮೇಲೆ ಕಿಂಚಿತ್ತೂ ಅನುಕಂಪ ತೋರಿಸಲಿಲ್ಲ. ಇದನ್ನೂ ಓದಿ: ಅಕ್ರಮ ಮರಳು ಅಡ್ಡಾದ ಮೇಲೆ ಅಧಿಕಾರಿಗಳ ದಾಳಿ – 1.58 ಕೋಟಿ ರೂ. ಮೌಲ್ಯದ ಮರಳು ಜಪ್ತಿ

    ಮಹಿಳೆಯ ಕಿರುಚಾಟ ಕೇಳಿಸಿಕೊಂಡ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದ ಒದ್ದಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಅಲ್ಲದೇ ಕೂಡಲೇ ಆಕೆಯನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ವೈದ್ಯರು ತುರ್ತು ಸರ್ಜರಿ ಮೂಲಕ ಸ್ಕ್ರೂ ಹಾಗೂ ಲಾಕ್‌ ಅನ್ನು ತೆಗೆಯುವಲ್ಲಿ ಯಶಸ್ವಿಯಾದರು.

    ಪ್ರಕರಣ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

    ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

    ತಿರುವನಂತಪುರಂ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ಗಂಭೀರವಾಗಿ ಗಾಯಗೊಳಿಸಿ ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್‌ ಆಗಿರುವ ಅಮಾನುಷ ಘಟನೆಯೊಂದು ಕೆರಳದಲ್ಲಿ (Kerala) ನಡೆದಿದೆ.

    ತಿರುವನಂತಪುರಂನ ಪಲೋಡ್ ಬಳಿ ಪತಿ ತನ್ನ ಪತ್ನಿಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೈಲಮೂಡಿನ ಗಿರಿಜಾ ಶಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪತಿ ಪಾಳೋಡ್ ಪಾಚ ಮೂಲದ ಸೋಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣದ ವಿವರ: ಕಳೆದ ಒಂದೂವರೆ ವರ್ಷದಿಂದ ಗಿರಿಜಾ ಹಾಗೂ ಸೋಜಿ ಪ್ರತ್ಯೇಕವಾಗಿದ್ದರು. ಇದೀಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆರೋಪಿ ಸೋಜಿ ತನ್ನ ಪತ್ನಿಯನ್ನು ಸಂಪರ್ಕಿಸಿದ್ದಾನೆ. ಅಲ್ಲದೇ ಈ ಬಗ್ಗೆ ಇಬ್ಬರು ಕುಳಿತು ಮಾತಾಡೋಣ ಎಂದು ಪತ್ನಿಯನ್ನು ಕರೆದಿದ್ದಾನೆ. ಪತಿಯ ಮಾತು ನಂಬಿದ್ದ ಗಿರಿಜಾ ಪತಿ ಹೇಳಿದ ಸ್ಥಳಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಈ ವೇಳೆ ಸೋಜಿ ನಿನ್ನ ಜೊತೆ ಮಾತಾಡೋಕೆ ತುಂಬಾ ಇದೆ ಎಂದು ಆಕೆಯನ್ನು ಪಕ್ಕದ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಕರೆದೊಯ್ದವನೇ ಬಚ್ಚಿಟ್ಟಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಬಂದು ಮೊದಲು ಪತ್ನಿಯ ಎರಡೂ ಮೊಣಕಾಲುಗಳಿಗೆ ಹಲ್ಲೆ ಮಾಡಿದ್ದಾನೆ. ಬಳಿಕ ಹರಿತವಾದ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಆಕೆಯನ್ನು ಕಾಡಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

    ಇತ್ತ ಕಾಡಿಗೆ ಕಟ್ಟಿಗೆ ಸಂಗ್ರಹಿಸಲು ಬಂದ ಸ್ಥಳಿಯರಿಗೆ ಗಿರಿಜಾ ಚೀರಾಟ- ಕಿರುಚಾಟ ಕೇಳಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಿರಿಜಾಳನ್ನು ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಿರಿಜಾ ಕಾಲುಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.

    ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಸೋಜಿಯನ್ನು ಪಾಂಗೋಡು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಪತ್ನಿಯ ಮೇಲಿನ ಈ ಕ್ರೂರ ದಾಳಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ವಿಚಾರಣೆ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ತಂದೆ!

    ಸಾಲ ತೀರಿಸಲು ಗಂಡು ಮಗುವನ್ನೇ ಮಾರಿದ ತಂದೆ!

    ಕೋಲಾರ: ಸಾಲ ತೀರಿಸುವ ಸಲುವಾಗಿ ತಂದೆಯೊಬ್ಬ ತನ್ನ ಗಂಡು ಮಗುವನ್ನೇ ಮಾರಿದ ಅಮಾನವೀಯ ಘಟನೆಯೊಂದು ಕೋಲಾರದಲ್ಲಿ (Kolar) ನಡೆದಿದೆ.

    ಬಂಗಾರಪೇಟೆ ನಗರ ನಿವಾಸಿಗಳಾದ ಮುನಿರಾಜು ಹಾಗೂ ಪವಿತ್ರ ದಂಪತಿಯ ಮೂರು ತಿಂಗಳ ಮಗು ಇದಾಗಿದೆ. ಬಂಗಾರಪೇಟೆಯ ಕೆರೆಕೋಡಿ ನಿವಾಸಿಯಾದ ವಲ್ಲಿ ಎನ್ನುವ ಮಹಿಳೆ ಮೂಲಕ ಮುನಿರಾಜು, ಮಗು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.

    ಹಣದಾಸೆಗೆ ಬಿದ್ದ ಪತಿ ಮುನಿರಾಜು 3 ತಿಂಗಳ ಗಂಡು ಮಗು ಮಾರಾಟ ಮಾಡಿದ್ದಾನೆ. ತನಗೆ ಮಗು ಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಗೆ ಪತ್ನಿ ಪವಿತ್ರ ದೂರು ನೀಡಿದ್ದಾರೆ. ಮಗು ಅಪಹರಣ ಮಾಡಿದ್ದಾರೆಂದು ಪತಿ ಮುನಿರಾಜು ಹಾಗೂ ವಲ್ಲಿ ವಿರುದ್ದ ದೂರು ನೀಡಿರುವ ಪವಿತ್ರಾ, ಮಗುವನ್ನ ವಾಪಾಸ್ ಕೊಡಿಸುವಂತೆ  ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.