Tag: wife died

  • ಎರಡು ಮಕ್ಕಳೊಂದಿಗೆ ತಾಯಿ ಸಾವು – ಗಂಡ, ಕುಟುಂಬಸ್ಥರ ಬಂಧನ ಆಗೋವರೆಗೂ ಶವಸಂಸ್ಕಾರ ಮಾಡೋಲ್ಲ

    ಎರಡು ಮಕ್ಕಳೊಂದಿಗೆ ತಾಯಿ ಸಾವು – ಗಂಡ, ಕುಟುಂಬಸ್ಥರ ಬಂಧನ ಆಗೋವರೆಗೂ ಶವಸಂಸ್ಕಾರ ಮಾಡೋಲ್ಲ

    ಬೆಳಗಾವಿ: ಎರಡು ಮಕ್ಕಳೊಂದಿಗೆ ತಾಯಿ ಸಾವು ಪ್ರಕರಣ ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಮಹಿಳೆಯ ಕುಟುಂಬಸ್ಥರು ಪಟ್ಟು ಹಿಡಿದು ಕುಳಿತಿದ್ದಾರೆ.

    ನಗರದ ಬೀಮ್ಸ್ ಆಸ್ಪತ್ರೆಯ ಶವಗಾರದ ಬಳಿ ಬಂದ ಮೃತ ಕೃಷಾ ಕುಟುಂಬಸ್ಥರು ಆಕೆಯ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಅಲ್ಲದೇ ಗಂಡ ಮತ್ತು ಕುಟುಂಬಸ್ಥರ ಬಂಧನ ಆಗುವವರೆಗೂ ಶವ ಪಡೆಯುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಹೀಗಾಗಿ ಮೂರು ದಿನಗಳಿಂದ ಬಿಮ್ಸ್ ಶವಗಾರದಲ್ಲೇ ತಾಯಿ ಮತ್ತು ಕಂದಮ್ಮಗಳ ಮೃತ ದೇಹ ಇದ್ದು ನಿನ್ನೆ ದಿನ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದಾರೆ. ಇದಲ್ಲದೇ ದೂರು ನೀಡದಂತೆ, ಶವಗಳನ್ನು ತೆಗೆದುಕೊಂಡು ಹೋಗುವಂತೆ ಕೆಲವರಿಂದ ನಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ನ್ಯಾಯ ಕೊಡಿಸುವಂತೆ ಮೃತ ಕೃಷಾ ಕುಟುಂಬಸ್ಥರು ಇಂದು ಬಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಕೊಲೆ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ ಅಂತ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

    ಪ್ರಕರಣದ ಹಿನ್ನೆಲೆ
    ಫೆಬ್ರವರಿ 11ರಂದು ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಾನ ಕೆರೆಯಲ್ಲಿ ಎರಡು ಮಕ್ಕಳೊಂದಿಗೆ ತಾಯಿಯ ಮೃತದೇಹ ಕೆರೆಯಲ್ಲಿ ಪತ್ತೆ ಆಗಿತ್ತು. ತಾಯಿ ಕೃಷಾ(36), ಮಕ್ಕಳಾದ ವಿರೇನ್(7), ಭಾವೀರ್(4) ಕೆರೆಯಲ್ಲಿ ಶವ ಪತ್ತೆಯಾಗಿದ್ದವು. ಈ ವೇಳೆ ಹೆಂಡತಿ ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಂಡ ಮತ್ತು ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ – ಶವವಾಗಿ ಪತ್ತೆ!