Tag: Wife

  • ಚಿಕ್ಕಮಗಳೂರು | ಮಗುವಿನ ಎದುರೇ ಪತ್ನಿಯನ್ನು ಥಳಿಸಿ ಕೊಂದ ಪತಿ

    ಚಿಕ್ಕಮಗಳೂರು | ಮಗುವಿನ ಎದುರೇ ಪತ್ನಿಯನ್ನು ಥಳಿಸಿ ಕೊಂದ ಪತಿ

    ಚಿಕ್ಕಮಗಳೂರು: ಕೌಟುಂಬಿಕ ಕಲಹದದಿಂದ ಬೇಸತ್ತು ಪತಿಯೇ ಪತ್ನಿಯನ್ನು ಕಬ್ಬಿಣದ ಪೈಪಿನಿಂದ ಥಳಿಸಿ ಕೊಂದ ಅಮಾನವೀಯ ಘಟನೆ ಕಳಸದ ಮರಸಣಿಗೆ ಗ್ರಾಮದಲ್ಲಿ ನಡೆದಿದೆ.

    ಮಂಜುಳಾ (32) ಹತ್ಯೆಯಾದ ದುರ್ದೈವಿ. ದಂಪತಿ ಕಳಸ ತಾಲೂಕಿನ ಯಮಗೊಂಡ ಕಾಫಿ ತೋಟದ ಲೈನ್‌ ಮನೆಯಲ್ಲಿ ವಾಸವಾಗಿದ್ದರು. ಮೂಲಗಳ ಪ್ರಕಾರ, ಪತಿ-ಪತ್ನಿಯರ ನಡುವೆ ನಿತ್ಯವೂ ಜಗಳ ನಡೆಯುತ್ತಿತ್ತು. ಜಗಳ ಹೆಚ್ಚಾಗಿದ್ದರಿಂದ ಇವರನ್ನು ನೋಡಿ ಬೇಸತ್ತ ತೋಟದ ರೈಟರ್, ಇನ್ನು ಮುಂದೆ ಕೆಲಸಕ್ಕೆ ಬರಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ.

    ಹತ್ಯೆ ನಡೆದ ದಿನವೂ ದಂಪತಿ ನಡುವೆ ತೀವ್ರ ಜಗಳ ನಡೆದಿತ್ತು. ಇದರಿಂದ ಕೋಪಗೊಂಡ ಪತಿ ಮಗುವಿನ ಎದುರೇ ಕಬ್ಬಿಣದ ಪೈಪ್‌ನಿಂದ ಮಂಜುಳಾ ಅವರ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪಿಡಿಓ ಕಿರುಕುಳಕ್ಕೆ ಪಂಚಾಯತ್‌ ಲೈಬ್ರೆರಿಯನ್ ವಿಷ ಸೇವಿಸಿ ಆತ್ಮಹತ್ಯೆ?

    ಕೃತ್ಯವೆಸಗಿದ ಪತಿಯ ವಿರುದ್ಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾರಿನ ಮಿರರ್‌ಗೆ ಟಚ್‌ ಆಯ್ತು ಅಂತ ಚೇಸ್‌ ಮಾಡಿ ಬೈಕ್‌ಗೆ ಗುದ್ದಿಸಿ ಯುವಕನ ಕೊಲೆ; ದಂಪತಿ ಬಂಧನ

  • ಬೆಂಗಳೂರು | ಪತಿಯ ಚಿತ್ರಹಿಂಸೆ ತಾಳಲಾರದೇ 3ನೇ ಮಹಡಿಯಿಂದ ಜಿಗಿದ ಮಹಿಳೆ

    ಬೆಂಗಳೂರು | ಪತಿಯ ಚಿತ್ರಹಿಂಸೆ ತಾಳಲಾರದೇ 3ನೇ ಮಹಡಿಯಿಂದ ಜಿಗಿದ ಮಹಿಳೆ

    ಬೆಂಗಳೂರು: ಪತಿಯ (Husband) ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಪತಿಯ ಹಿಂಸೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಆಕೆಯ ಬೆನ್ನುಮೂಳೆ ಹಾಗೂ ಎರಡು ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ನೆಲಮಂಗಲ | ತಣ್ಣಗಾಗಿದ್ದ ಏರಿಯಾದಲ್ಲಿ ಮತ್ತೆ ರೌಡಿಸಂ – ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ

    ಪ್ರಿಯಾ ಹಾಗೂ ನಿಕ್ಸನ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ 7 ವರ್ಷ ಆದರೂ ಮಕ್ಕಳಾಗಿಲ್ಲ ಎಂದು ಪ್ರತಿ ನಿತ್ಯ ಪತ್ನಿಗೆ (Wife) ನಿಕ್ಸನ್‌ ಕಿರುಕುಳ ನೀಡುತಿದ್ದ. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ದಂಪತಿಗೆ ಹೆಣ್ಣು ಮಗು ಅಗಿತ್ತು.

    ಮಗುವಾದ ಬಳಿಕ ಸಹ ಪ್ರತಿ ದಿನ ಕುಡಿದು ಬಂದು ಎಲ್ಲಿಯಾದರೂ ಹೋಗಿ ಸಾಯಿ ಎಂದು ಪತ್ನಿ ಮೇಲೆ ಹಲ್ಲೆ ಮಾಡುತಿದ್ದ. ಇದಕ್ಕೆ ಬೇಸತ್ತು ತಾನು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತಿಯ ವಿರುದ್ಧ ಬಾಣವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈಸೂರು| ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಿಸಿ ತಾವೇ ಜಲಸಮಾಧಿಯಾದ ಇಬ್ಬರು ಸಹೋದರರು

  • ಹೆಂಡ್ತಿ ಟಾರ್ಚರ್‌ ಕೊಡ್ತಾಳೆ ಅಂತ ವೀಡಿಯೋ ಮಾಡಿ ರೈಲಿಗೆ ತಲೆಕೊಟ್ಟ ನವವಿವಾಹಿತ

    ಹೆಂಡ್ತಿ ಟಾರ್ಚರ್‌ ಕೊಡ್ತಾಳೆ ಅಂತ ವೀಡಿಯೋ ಮಾಡಿ ರೈಲಿಗೆ ತಲೆಕೊಟ್ಟ ನವವಿವಾಹಿತ

    ರಾಮನಗರ: ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿ (Bidadi) ರೈಲು ನಿಲ್ದಾಣದ ಸಮೀಪ ನಡೆದಿದೆ.

    ಆತ್ಮಹತ್ಯೆಗೆ ಶರಣಾದವನನ್ನು ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡ್ತಿದ್ದ ರೇವಂತ್, ಕಳೆದ ಐದು ತಿಂಗಳ ಹಿಂದಷ್ಟೇ ಮಲ್ಲಿಕಾ ಎಂಬವಳನ್ನು ಮದುವೆಯಾಗಿದ್ದ. ಇನ್ನೂ ಆತ್ಮಹತ್ಯೆಗೂ ಮುನ್ನ ರೇವಂತ್ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾನೆ. ಇದನ್ನೂ ಓದಿ: ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ – ಮೃತಪಟ್ಟಿರೋದು ಕಂಡು ತಾನೂ ನೇಣಿಗೆ ಶರಣಾದ ಲಿವಿನ್ ಗೆಳತಿ

    ವೀಡಿಯೋದಲ್ಲಿ ನನಗೆ ಬದುಕಲು ಆಗ್ತಿಲ್ಲ. ಹೆಂಡತಿಯಿಂದ (Wife) ತುಂಬಾ ಟಾರ್ಚರ್ ಆಗ್ತಿದೆ. ಸಿಕ್ಕಾಪಟ್ಟೆ ಕಿರುಕುಳ ಕೊಡ್ತಿದ್ದಾಳೆ. ನನ್ನ ಸಾವಿಗೆ ಅವಳೇ ಕಾರಣ ಎಂದು ಆರೋಪಿಸಿದ್ದಾನೆ.

    ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಸೈಟ್‌ ಕೊಟ್ರೆ ಮಾತ್ರ ಸಂಸಾರ, ಮಗು ಬೇಕಿದ್ರೆ ಮೈದುನನ ಜೊತೆ ಮಲಗು – ಗಂಡ, ಅತ್ತೆಯ ಟಾರ್ಚರ್‌ಗೆ ಉಪನ್ಯಾಸಕಿ ಆತ್ಮಹತ್ಯೆ

  • ಪತ್ನಿಯನ್ನು ಕೊಂದು ಬೋರ್‌ವೆಲ್‌ಗೆ ಹಾಕಿದ್ದ ಪತಿ – 12 ಅಡಿ ಆಳದಲ್ಲಿ ಮೃತದೇಹ ಪತ್ತೆ

    ಪತ್ನಿಯನ್ನು ಕೊಂದು ಬೋರ್‌ವೆಲ್‌ಗೆ ಹಾಕಿದ್ದ ಪತಿ – 12 ಅಡಿ ಆಳದಲ್ಲಿ ಮೃತದೇಹ ಪತ್ತೆ

    ಚಿಕ್ಕಮಗಳೂರು: ಕಡೂರು (Kaduru) ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ಹೆಂಡತಿಯನ್ನು (Wife) ಕೊಂದು ಕೊಳವೆ ಬಾವಿಗೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ತಹಶೀಲ್ದಾರ್‌ ನೇತೃತ್ವದಲ್ಲಿ ಪೊಲೀಸರು ಮಹಿಳೆಯ ಮೃತದೇಹವನ್ನು ಹೊರತೆಗೆದಿದ್ದಾರೆ.

    ಆರೋಪಿ ವಿಜಯ್ ಕಳೆದ ಒಂದೂವರೆ ತಿಂಗಳ ಹಿಂದೆ ತನ್ನ ಪತ್ನಿ ಭಾರತಿಯನ್ನು (28) ಕೊಂದು ಯಾರಿಗೂ ತಿಳಿಯಂತೆ ತಮ್ಮದೇ ತೋಟದಲ್ಲಿ ನೀರು ಬಂದಿದ್ದ ಕೊಳವೆ ಬಾವಿಯಲ್ಲಿ ಹೂತಿದ್ದ. ಬಳಿಕ ಬಾವಿಯೊಳಗೆ ಗೋಣಿಚೀಲ, ಮರಳು ಹಾಕಿ ಮುಚ್ಚಿದ್ದ. ಯಾರಿಗೂ ಅನುಮಾನ ಬಾರದಿರಲಿ ಎಂದು ಆತನೇ ಹೋಗಿ ನನ್ನ ಪತ್ನಿ ಮಾನಸಿಕ ಅಸ್ವಸ್ಥೆ, ಎಲ್ಲೋ ಹೋಗಿದ್ದಾಳೆ ಹುಡುಕಿಕೊಡಿ ಎಂದು ಕಡೂರು ಠಾಣೆಯಲ್ಲಿ ದೂರು ಕೂಡ ನೀಡಿದ್ದ. ಒಂದೂವರೆ ತಿಂಗಳಿಂದ ಪೊಲೀಸರು ಪ್ರಕರಣದ ಹಿಂದೆ ಬಿದ್ದಿದ್ದರು. ಪೊಲೀಸರ ಸೂಕ್ಷ್ಮ ತನಿಖೆಯಿಂದ ಹಂತಕ ಆಕೆಯ ಗಂಡನೇ ಎಂದು ತಿಳಿದು ಬಂದಿತ್ತು. ಬಳಿಕ ಪೊಲೀಸರು ಮೃತಳ ಅತ್ತೆ-ಮಾವ ಗಂಡನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದನ್ನೂ ಓದಿ: ಹೆಂಡ್ತಿ ಕೊಂದು ಕೊಳವೆ ಬಾವಿಯಲ್ಲಿ ಹಾಕಿ, ದೇವರಿಗೆ ಮೂರು ಪ್ರಾಣಿ ಬಲಿ ಅರ್ಪಿಸಿದ್ದ ಕೇಡಿ ಗಂಡ!

    ವಿಚಾರಣೆ ವೇಳೆ ಆರೋಪಿ, ಹೆಂಡತಿ ಹೆಸರು ಬರೆದು ಆಕೆ ದೆವ್ವ-ಪೀಡೆ-ಪಿಶಾಚಿ ಆಗಬಾರದು, ಈ ಕೇಸ್ ಗೊತ್ತಾಗಬಾರದು, ಕೇಸ್ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲವಾಗಬೇಕು. ಕೋರ್ಟಿನಲ್ಲಿ ಕೇಸ್ ನಿಲ್ಲಬಾರದು ಎಂದು ದೇವರಿಗೆ ಮೂರು ಪ್ರಾಣಿ ಬಲಿ ನೀಡಿ, ಕಬ್ಬಿಣದ ತಗಡಿನಲ್ಲಿ ಬರೆದು ಹೆಂಡತಿ ಫೋಟೋ ಇರಿಸಿ ದೇವಾಲಯದ ಮರಕ್ಕೆ ಮೊಳೆ ಹೊಡೆದಿದ್ದ ಎಂದು ತಿಳಿದು ಬಂದಿದೆ.

    ತಹಶಿಲ್ದಾರ್, ಡಿವೈಎಸ್ಪಿ, ಪಿಎಸ್‌ಐ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯಲಾಗಿದೆ. ಕೊಳವೆ ಬಾವಿಯ 12 ಅಡಿ ಆಳದಲ್ಲಿ ಭಾರತೀಯ ಮೃತದೇಹ ಪತ್ತೆಯಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೃತದೇಹದಲ್ಲಿ ತನಿಖೆಗೆ ಬೇಕಾದ ಅಂಗಾಂಗಳನ್ನ ತೆಗೆದುಕೊಂಡು ಮೃತದೇಹವನ್ನು ಪೋಷಕರಿಗೆ ನೀಡಿದ್ದಾರೆ.

    ವಿಜಯ್ ಹಾಗೂ ಭಾರತೀಗೆ 7 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗೆ 6 ವರ್ಷರ ಒಂದು ಮಗು ಕೂಡ ಇದೆ. ಹೊಲ-ಗದ್ದೆ-ತೋಟ ಎಲ್ಲಾ ಇದ್ದು ಆರ್ಥಿಕವಾಗಿ ಚೆನ್ನಾಗಿದ್ದ ವಿಜಯ್‌ಗೆ ಭಾರತಿ ಕುಟುಂಬಸ್ಥರು ಮದುವೆ ವೇಳೆ ಕಾರು, ಬೈಕ್, ಉಂಗುರ, ಬ್ರಾಸ್ಲೈಟ್, ಚೈನ್ ಎಲ್ಲವನ್ನೂ ನೀಡಿ 15-20 ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು. ವರದಕ್ಷಿಣೆ (Dowry) ವಿಚಾರವಾಗಿ ಹಲವು ಬಾರಿ ಪತ್ನಿ ಮೇಲೆ ಹಲ್ಲೆ ಮಾಡಿ ಆರೋಪಿ ತವರಿಗೆ ಕಳಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಸಂಸಾರದಲ್ಲಿ ಕಲಹ – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

  • ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

    ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

    – 6 ತಿಂಗಳ ಬಳಿಕ ಬಯಲಾಯ್ತು ವೈದ್ಯನ ಸಂಚು!

    ಬೆಂಗಳೂರು: ಅನಸ್ತೇಶಿಯಾ ನೀಡಿ ಪತ್ನಿಯನ್ನು (Wife) ಹತ್ಯೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ವೈದ್ಯನನ್ನು (Doctor) ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಡಾ.ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಡಾ.ಕೃತಿಕಾ ರೆಡ್ಡಿಯವರಿಗೆ ಅನಸ್ತೇಶಿಯಾ ನೀಡಿ ಆಕೆಯ ತವರು ಮನೆಯಲ್ಲೇ ಕೊಲೆ ಮಾಡಿದ್ದ. ಇದು ಸಹಜ ಸಾವು ಎಂಬಂತೆಯೇ ಆರೋಪಿ ಬಿಂಬಿಸಿದ್ದ. ಕೊಲೆ ಮಾಡಿದ ಆರು ತಿಂಗಳ ಬಳಿಕ ಹಂತಕನ ಸಂಚು ಬಯಲಾಗಿದೆ. ಡರ್ಮೆಟಾಲಜಿಸ್ಟ್ ಆಗಿದ್ದ ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಕೆಲಸ ಮಾಡ್ತಿದ್ದರು. ಆರೋಪಿ ಮಹೇಂದ್ರ ರೆಡ್ಡಿ ಸಹ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ. ಇದನ್ನೂ ಓದಿ: ಚಿಕ್ಕಮಗಳೂರು | 5 ತಿಂಗಳ ಹಿಂದಷ್ಟೇ ಮದುವೆ – ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ

    2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್‌ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ.

    ತಂದೆ ಮನೆಯಲ್ಲಿ ಹುಷಾರಿಲ್ಲದೇ ಮಲಗಿದ್ದ ಕೃತಿಕಾಗೆ ಆರೋಪಿ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದ. ಎರಡು ದಿನ ನಿರಂತರ ಮೆಡಿಸಿನ್ ನೀಡಲಾಗಿತ್ತು. ಬಳಿಕ ಈ ವರ್ಷ ಏ.23ರಂದು ಅವರು ಜ್ಞಾನ ತಪ್ಪಿದ್ದರು. ಕೂಡಲೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.

    ಘಟನೆ ಬಳಿಕ ಅಸ್ಪತ್ರೆಯಿಂದ ಡೆತ್ ಮೆಮೊ ಬಂದಿದ್ದ ಹಿನ್ನೆಲೆ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಕುಟುಂಬದಿಂದ ದೂರು ಪಡೆದು ಯುಡಿಆರ್ ದಾಖಲು ಮಾಡಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹದ ಸ್ಯಾಂಪಲ್‌ನ್ನು ಎಫ್ಎಸ್ಎಲ್‌ಗೆ ಕಳಿಸಲಾಗಿತ್ತು. ಎಫ್‌ಎಸ್‌ಎಲ್‌ ವರದಿಯಲ್ಲಿ ಅನಸ್ತೇಶಿಯಾ ಅಂಶಗಳು ಪತ್ತೆಯಾಗಿದ್ದು, ಸಾವಿಗೆ ಇದೇ ಕಾರಣ ಎಂದು ತಿಳಿದು ಬಂದಿತ್ತು.


    ಇನ್ನೂ ಕೇಸ್‌ ದಾಖಲಾದ ಬಳಿಕ ಆರೋಪಿ ಮಣಿಪಾಲಿಗೆ ತೆರಳಿದ್ದ. ಅಲ್ಲಿಯೇ ಆತನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ: ಫೇಸ್‌ಬುಕ್‌ನಲ್ಲಿ ಡೆತ್‌ ನೋಟ್‌ ಬರೆದು, ಬೆಂಕಿ ಹಚ್ಚಿಕೊಂಡು ನವವಿವಾಹಿತೆ ಆತ್ಮಹತ್ಯೆ!

  • ಚಿಕ್ಕಮಗಳೂರು | 5 ತಿಂಗಳ ಹಿಂದಷ್ಟೇ ಮದುವೆ – ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ

    ಚಿಕ್ಕಮಗಳೂರು | 5 ತಿಂಗಳ ಹಿಂದಷ್ಟೇ ಮದುವೆ – ಜಗಳವಾಡಿ ತವರು ಸೇರಿದ್ದ ಪತ್ನಿಯನ್ನು ಇರಿದು ಕೊಂದ ಪತಿ

    ಚಿಕ್ಕಮಗಳೂರು: ಪತಿಯೇ (Husband) ಪತ್ನಿಯನ್ನು  (Wife) ಚಾಕು ಇರಿದು ಹತ್ಯೆಗೈದಿರುವುದು ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

    ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದೆ. ಪತಿ ನವೀನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಐದು ತಿಂಗಳ ಹಿಂದಷ್ಟೇ ಇವರಿಬ್ಬರ ಮದುವೆಯಾಗಿತ್ತು. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಚಾಕು – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

    ಮೂರು ತಿಂಗಳ ಹಿಂದೆ ಪತಿ ಜೊತೆ ಜಗಳವಾಡಿ ನೇತ್ರಾ ತವರು ಸೇರಿದ್ದಳು. ಆಕೆಯ ತವರು ಮನೆಗೆ ಹೋಗಿ ಪತಿ ಚಾಕು ಇರಿದಿದ್ದಾನೆ ಎಂದು ನೇತ್ರಾ ಪೋಷಕರು ಆರೋಪಿಸಿದ್ದಾರೆ.

    ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

  • ಪತ್ನಿಗೆ ಮೆಸೇಜ್‌ ಮಾಡಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ – ಜಾರ್ಖಂಡ್‌ಗೆ ಹೊರಟಿದ್ದ ಆರೋಪಿ ಅರೆಸ್ಟ್‌

    ಪತ್ನಿಗೆ ಮೆಸೇಜ್‌ ಮಾಡಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ – ಜಾರ್ಖಂಡ್‌ಗೆ ಹೊರಟಿದ್ದ ಆರೋಪಿ ಅರೆಸ್ಟ್‌

    ಬೆಂಗಳೂರು: ಪತ್ನಿಗೆ (Wife) ಮೆಸೇಜ್‌ ಮಾಡುತ್ತಿದ್ದ ಸ್ನೇಹಿತನ ಕತ್ತು‌ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ (Bengaluru) ಕೊಡುಗೇಹಳ್ಳಿ ಮರಿಯಪ್ಪನ ಪಾಳ್ಯದಲ್ಲಿ ನಡೆದಿದೆ.

    ಜಾರ್ಖಂಡ್ (Jharkhand) ಮೂಲದ ರಾಘು ಕೊಲೆಯಾದ ದುರ್ದೈವಿ. ರಾಜು ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ಜಾರ್ಖಂಡ್‌ ಮೂಲದವರು. ಎರಡು ವರ್ಷಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ಇತ್ತೀಚೆಗೆ ರಾಘು ತನ್ನ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿ, ಮೆಸೇಜ್‌ ಮಾಡುತ್ತಿದ್ದನಂತೆ. ಈ ವಿಚಾರ ತಿಳಿದ ರಾಜು ಸ್ನೇಹಿತ ರಾಘುವಿಗೆ ತಿಳುವಳಿಕೆ ಹೇಳಿದ್ದನಂತೆ.

    ಇಷ್ಟಾದರೂ ರಾಘು ಮಾತ್ರ ತನ್ನ ಹಳೆ ಚಾಳಿ ಬಿಡದೇ ಮತ್ತೆ ಸ್ನೇಹಿತನ ಪತ್ನಿಗೆ ಮೆಸೇಜ್‌ ಮಾಡುವುದನ್ನು ಮುಂದುವರಿಸಿದ್ದನಂತೆ. ಇದರಿಂದ ಕೋಪಗೊಂಡ ರಾಜು ಸೋಮವಾರ (ಅ.6) ರಾತ್ರಿ ರಾಘು ಜೊತೆ ಗಲಾಟೆ ಮಾಡಿ, ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಬಳಿಕ ಆರೋಪಿ ಜಾರ್ಖಂಡ್‌ಗೆ ತೆರಳಲು ಬೈಯ್ಯಪನಹಳ್ಳಿ ರೈಲು ನಿಲ್ದಾಣಕ್ಕೆ ಹೋಗಿದ್ದಾನೆ. ಇದನ್ನೂ ಓದಿ: ಯಾದಗಿರಿ | ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಪತ್ನಿಯ ಭೀಕರ ಕೊಲೆ – ಕೊಡಲಿಯೊಂದಿಗೆ ಪೊಲೀಸರಿಗೆ ಶರಣಾದ ಹಂತಕ

    ಕೊಲೆ ವಿಚಾರ ತಿಳಿದ ಪೊಲೀಸರು, ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ರಾಜುವಿನ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ತಕ್ಷಣ ಆತನ ಬಗ್ಗೆ ಮಾಹಿತಿ ಪಡೆದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ ಜಾರ್ಖಂಡ್‌ಗೆ ರೈಲು ಇರುವ ಮಾಹಿತಿ ತಿಳಿದು, ರೈಲು ನಿಲ್ದಾಣಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: Bengaluru | ಪತಿಯೊಂದಿಗೆ ಗಲಾಟೆ – ಗೃಹಿಣಿ ನೇಣಿಗೆ ಶರಣು

  • ಕುಡಿಯಲು ನೀರು ನೀಡದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ- ಪತ್ನಿ ಸಾವು, ಪತಿ ಅರೆಸ್ಟ್

    ಕುಡಿಯಲು ನೀರು ನೀಡದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ- ಪತ್ನಿ ಸಾವು, ಪತಿ ಅರೆಸ್ಟ್

    ಬೆಂಗಳೂರು: ಕುಡಿಯಲು ನೀರು ಕೊಡಲಿಲ್ಲ ಎಂದಿದ್ದಕ್ಕೆ ಪತ್ನಿ (Wife) ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದೀಗ ಪತ್ನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಪೀಣ್ಯದ (Peenya) ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.

    ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್(26) ಮೃತ ಪತ್ನಿ. ಛೋಟೆಲಾಲ್ ಸಿಂಗ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆ.24 ರಂದು ಕುಡಿದು ಮನೆಗೆ ಬಂದ ಛೋಟೆಲಾಲ್ ಹೆಂಡತಿ ಬಳಿ ನೀರು ಕೇಳಿದ್ದ. ನಾನು ಕೆಲಸಕ್ಕೆ ಹೋಗ್ಬೇಕು, ನೀನೇ ನೀರು ತಗೊಂಡು ಕುಡಿ ಎಂದು ಪತ್ನಿ ಹೇಳಿದ್ದಳು ಎನ್ನಲಾಗಿದೆ.

    ಇದರಿಂದ ಕೋಪಗೊಂಡ ಛೋಟೆಲಾಲ್ ಲಟ್ಟಣಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದ. ಈ ವೇಳೆ ಗಂಭೀರ ಗಾಯಗೊಂಡ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು, ಆರೋಪಿ ಛೋಟೆಸಿಂಗ್‌ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

  • 21 ಮದುವೆಯಾಗಿಲ್ಲ, ನನ್ನಿಂದ್ಲೇ 17 ಲಕ್ಷ ಹಣ ವಸೂಲಿ ಮಾಡಿದ್ದಾರೆ: ಪತ್ನಿ ಆರೋಪ ಸುಳ್ಳೆಂದ ಪತಿ

    21 ಮದುವೆಯಾಗಿಲ್ಲ, ನನ್ನಿಂದ್ಲೇ 17 ಲಕ್ಷ ಹಣ ವಸೂಲಿ ಮಾಡಿದ್ದಾರೆ: ಪತ್ನಿ ಆರೋಪ ಸುಳ್ಳೆಂದ ಪತಿ

    – ಬೆಡ್‌ರೂಂನಲ್ಲಿ ಪ್ರೈವೆಟ್ ವೀಡಿಯೋ ಶೂಟ್ ಮಾಡಿದ್ದ ಎಂದು ಆರೋಪಿಸಿದ್ದ ಪತ್ನಿ

    ಬೆಂಗಳೂರು: ಬೆಡ್‌ರೂಂನಲ್ಲಿ (Bedroom) ಖಾಸಗಿ ವೀಡಿಯೋ ಶೂಟ್ ಮಾಡಿದ್ದ ಎಂದು ಆರೋಪಿಸಿದ್ದ ಪತ್ನಿಯ (Wife) ಆರೋಪವನ್ನು ಪತಿ (Husband) ಹೀನಾಮುಲ ಹಕ್ ತಳ್ಳಿಹಾಕಿದ್ದಾರೆ.

    ನನ್ನ ಗಂಡ 21 ಮದುವೆಯಾಗಿದ್ದಾನೆ, ನನ್ನ ಪ್ರೈವೆಟ್ ವೀಡಿಯೋ ಶೂಟ್ ಮಾಡಿದ್ದಾನೆ ಎಂದೆಲ್ಲಾ ಆರೋಪಿಸಿ ಪತ್ನಿ ಪತಿ ಹೀನಾಮುಲ ಹಕ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಈ ಬೆನ್ನಲ್ಲೇ ವೀಡಿಯೋ ಮೂಲಕ ಪತಿ ಹೀನಾಮುಲ ಹಕ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪತಿಯಿಂದ್ಲೇ ಬೆಡ್‌ರೂಂನಲ್ಲಿನ ಖಾಸಗಿ ಕ್ಷಣಗಳ ವಿಡಿಯೋ ಸೆರೆ – ವಿದೇಶಿ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಾಯಿಸಿ ಪತ್ನಿಗೆ ಬ್ಲ್ಯಾಕ್‌ಮೇಲ್

    ಮದುವೆಗೆ ಮುಂಚೆ ಆಕೆಯ ಜೊತೆ ಸಂಬಂಧ ಹೊಂದಿದ್ದು ನಿಜ. ಆದರೆ ಆಕೆಯೇ ನನ್ನನ್ನು ಒತ್ತಾಯ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಸೈಕೋ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಳು ಎಂದು ಆರೋಪಿಸಿದ್ದಾರೆ. ನನಗೆ ಸಾಕಷ್ಟು ಟಾರ್ಚರ್ ಕೊಡುತ್ತಿದ್ದಳು. ನಾನು 21 ಮದುವೆಯಾಗಿಲ್ಲ, ನನಗೆ ಆಗಿರುವುದು ಒಂದೇ ಮದುವೆ. ನನ್ನ ಬಳಿಯೇ ಅವರು 17 ಲಕ್ಷ ಹಣ ವಸೂಲಿ ಮಾಡಿದ್ದಾರೆ. ನನ್ನ ಪತ್ನಿಗೆ 13 ಲಕ್ಷದ ಒಡವೆ ನಾನೇ ಕೊಡಿಸಿದ್ದೇನೆ. ನಾನು 21 ಮದುವೆ ಆಗಿದ್ದೆ ಆದರೆ ಆಕೆ ಯಾಕೆ ನನ್ನನ್ನು ಮದುವೆಯಾದಳು? ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.‌ ಇದನ್ನೂ ಓದಿ: ಕೇಂದ್ರ ಸಚಿವ ಸೋಮಣ್ಣ ಮನೆಯಲ್ಲಿ ಜಾತಿಗಣತಿಗೆ 9 ಸಿಬ್ಬಂದಿ – ಸರ್ವೇಗೆ ಇಷ್ಟು ಜನ ಯಾಕೆ ಬಂದ್ರಿ ಅಂತ ಕ್ಲಾಸ್

  • ಮಕ್ಕಳನ್ನು ನೋಡಲು ಹೋದ ನನ್ಮೇಲೆ ಸಂತು, ಲೀಲಾ ಹಲ್ಲೆ ನಡೆಸಿದ್ರು: ಪತ್ನಿ ಆರೋಪ ಸುಳ್ಳು ಎಂದ ಮಂಜ

    ಮಕ್ಕಳನ್ನು ನೋಡಲು ಹೋದ ನನ್ಮೇಲೆ ಸಂತು, ಲೀಲಾ ಹಲ್ಲೆ ನಡೆಸಿದ್ರು: ಪತ್ನಿ ಆರೋಪ ಸುಳ್ಳು ಎಂದ ಮಂಜ

    – ನನ್ನ & ಸಂತುನ ಮುಗಿಸೋಕೆ ಬಂದಿದ್ದ ಅಂತ ಗಂಡನ ಮೇಲೆ ಆರೋಪಿಸಿದ್ದ ಲೀಲಾ ಕೇಸ್‌ಗೆ ಟ್ವಿಸ್ಟ್‌

    ಬೆಂಗಳೂರು ಗ್ರಾಮಾಂತರ: ಮೂರು ಮಕ್ಕಳ ತಾಯಿ ಲೀಲಾ ಮತ್ತು ಸಂತು ಲವ್‌ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿದೆ. ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಎಂದು ಲೀಲಾ ಮಾಡಿದ್ದ ಆರೋಪವನ್ನು ಪತಿ ಮಂಜ ಅಲ್ಲಗಳೆದಿದ್ದಾರೆ. ಪತ್ನಿ ಮತ್ತು ಲವ್ವರ್‌ ಇಬ್ಬರೂ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಮಂಜುನಾಥ್‌ (ಮಂಜ) ಆರೋಪಿಸಿದ್ದಾರೆ.

    ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಪುರದ ಸಂತು ಮನೆಯಲ್ಲಿರುವ ಪತ್ನಿ ಲೀಲಾ ಮತ್ತು ಆಕೆಯ ಪ್ರಿಯಕರ ಸಂತು ಮೇಲೆ ಮಂಜ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಕುರಿತು ಆರೋಪ ಮಾಡಿದ್ದ ಮಂಜನ ಪತ್ನಿ ಲೀಲಾ, ‘ನಿನ್ನೆ ರಾತ್ರಿ 8:15 ರ ಸುಮಾರಿಗೆ ಮನೆಯ ಬಳಿ ಮಂಜು ಬರುತ್ತಿರೋದನ್ನ ನೋಡಿ ಸಂತು ಫ್ರೆಂಡ್ ಫೋನ್‌ ಮಾಡಿ ಹೇಳಿದ್ರು. ಆಗ ಸಂತು ನನಗೆ ಫೋನ್ ಮಾಡಿ ಬಾಗಿಲು ತೆಗೆಯಬೇಡ ಅಂದಿದ್ರು. ನಾನು ಬಾಗಿಲು ತೆಗೆಯದೆ ಇದ್ದೆ. ಈ ವೇಳೆ ಸಂತು ಬರುತ್ತಿದ್ದಂತೆ ಬಾಗಿಲು ತೆರೆದ ನನ್ನ ಮೇಲೆ ಖಾರದಪುಡಿ ಎರಚಿ ಬಿಯರ್ ಬಾಟಲಿಯಿಂದ ಮಂಜ ದಾಳಿ ನಡೆಸಿದ. ಅಲ್ಲಿಯೇ ಇದ್ದ ಸಂತು ಅಡ್ಡ ಬರುತ್ತಿದ್ದಂತೆ ತಲೆಗೆ ಏಟು ಬಿತ್ತು. ಹೊಡೆದ ಬಿಯರ್ ಬಾಟಲಿಯಿಂದ ಹೊಟ್ಟೆಗೆ ಚುಚ್ಚಲು ಬಂದಾಗ ಸಂತು ಕೈ ಮತ್ತು ಹೊಟ್ಟೆ ಭಾಗದಲ್ಲಿ ಗಾಯ ಆಯ್ತು. ಜನ ಎಲ್ಲ ಹೊರಗೆ ಬರುತ್ತಿದ್ದಂತೆ ಮಂಜ ಅಲ್ಲಿಂದ ಓಡಿ ಹೋಗಿದ್ದಾನೆ’ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೂರು ಮಕ್ಕಳ ತಾಯಿ ಲೀಲಾಳ ಲವ್ವರ್‌ಗೆ ಬಿಯರ್‌ ಬಾಟಲ್‌ನಿಂದ ಹೊಡೆದ ಪತಿ ಮಂಜುನಾಥ್‌

    ಕೊಲೆ ಮಾಡೋದಕ್ಕೆ ಹೊಂಚು ಹಾಕಿ ಬಂದಿದ್ದು, ಹನ್ನೊಂದು ವರ್ಷದಿಂದ ಅವನ ಜೊತೆ ಇದೇ ಟಾರ್ಚರ್ ಅನುಭವಿಸಿದ್ದೇನೆ. ನನಗೆ ಮತ್ತು ಸಂತುಗೆ ಜೀವ ಭಯ ಇದೆ. ಕೊಲೆ ಮಾಡೋದಾಗಿ ಹೇಳಿದ್ದಾನೆ. ಪೊಲೀಸರು ಅವನನ್ನ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲೀಲಾ ಒತ್ತಾಯಿಸಿದ್ದಾರೆ. ಈ ಆರೋಪವನ್ನು ಮಂಜ ಅಲ್ಲಗಳೆದಿದ್ದಾರೆ. ಸಂತು ಮತ್ತು ಲೀಲಾ ಆರೋಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಸ್ಪಷ್ಟನೆ ನೀಡಿದ್ದಾರೆ.

    ರಾತ್ರಿ ಮಕ್ಕಳನ್ನ ನೋಡೋಕೆ ಸಂತು ಮನೆ ಹತ್ತಿರ ಹೋಗಿದ್ದೆ. ಮನೆಯ ಬಾಗಿಲನ್ನ ತೆಗೆಯಲಿಲ್ಲ. ಮೂರು ದಿನದಿಂದ ಮಕ್ಕಳನ್ನ ನೋಡಿರಲಿಲ್ಲ. ಈ ವೇಳೆ ಐದಾರು ಜನರಿಂದ ನನ್ನ ಮೇಲೆ ಅಟ್ಯಾಕ್ ಆಯ್ತು. ನನಗೂ ಕೈ, ಹಣೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಆಸ್ಪತ್ರೆ ಬಳಿ ಇದ್ದೇನೆ. ನನ್ನ ಹೆಂಡತಿ ತಳ್ಳಿದಾಗ ತಲೆಗೆ ಗಾಯ ಆಗಿದೆ. ಅಲ್ಲಿಂದ ನಾನು ಬಚಾವ್ ಆಗಿ ಬಂದಿರೋದೆ ಹೆಚ್ಚು. ನಿನ್ನೆ ರಾತ್ರಿಯೇ ನನ್ನ ಸಾಯಿಸೋಕೆ ನೋಡಿದ್ರು. ನನ್ನ ಸಂಸಾರವನ್ನೇ ಸಂತು ಹಾಳು ಮಾಡಿಬಿಟ್ಟ. ನನ್ನ ಹೆಂಡತಿಗಾಗಿ ನಾನು ಹೋಗಿಲ್ಲ. ನನ್ನ ಮಕ್ಕಳಿಗಾಗಿ ಹೋಗಿದ್ದು, ಅವರು ಹೇಳ್ತಾ ಇರೋದೆಲ್ಲ ಸುಳ್ಳು. ನನ್ನ ಸಾಯಿಸೋಕೆ ಹೆಂಡ್ತಿ ಮತ್ತು ಸಂತು ಪ್ಲಾನ್ ಮಾಡ್ತಿದ್ದಾರೆ ಎಂದು ಮಂಜ ಪ್ರತಿ ಆರೋಪ ಮಾಡಿದ್ದಾರೆ.