Tag: wicket

  • ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ – ದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ

    ವಿಶ್ವಕಪ್‍ನಲ್ಲಿ ಅತೀ ಹೆಚ್ಚು ವಿಕೆಟ್ – ದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ

    ನವದೆಹಲಿ: ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಐಸಿಸಿ ಮಹಿಳಾ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಹ್ಯಾಮಿಲ್ಟನ್‍ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದರು. ನ್ಯೂಜಿಲೆಂಡ್‍ನ ವಿರುದ್ಧ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ತಂಡದ ಕೇಟಿ ಮಾರ್ಟಿನ್ ಅವರ ವಿಕೆಟ್ ಪಡೆಯುವುದರ ಮೂಲಕ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ 39 ವಿಕೆಟ್ ಪಡೆದ ಸಾಧನೆ ನಿರ್ಮಿಸಿದರು. ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಶ್ರೀಶಾಂತ್‌ ವಿದಾಯ

    ಈ ಸಾಧನೆಯೊಂದಿಗೆ ಅವರು 1982 ರಿಂದ 1988 ರವರೆಗೆ ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಜೊತೆ ಅಗ್ರಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್‍ನ ಸಿಕ್ಸರ್ ಕಿಂಗ್ಸ್

    ಪಾಕಿಸ್ತಾನದ ವಿರುದ್ಧ 26 ರನ್‍ಗಳನ್ನು ನೀಡಿ ಜೂಲನ್ 2 ವಿಕೆಟ್‍ಗಳನ್ನು ಪಡೆದಿದ್ದರು. ಎರಡು ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ ಅವರು 2005 ರಿಂದ ಐದು ಮಹಿಳಾ ಕ್ರಿಕೆಟ್ ವಿಶ್ವಕಪ್‍ಗಳಲ್ಲಿ ಆಡಿ 39 ವಿಕೆಟ್ ಪಡೆದಿದ್ದಾರೆ.

  • ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌ – ಭಾರತದ ಗೆಲುವಿಗೆ ಬೇಕಿದೆ 5 ವಿಕೆಟ್‌

    ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌ – ಭಾರತದ ಗೆಲುವಿಗೆ ಬೇಕಿದೆ 5 ವಿಕೆಟ್‌

    ಮುಂಬೈ: ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸ್ಪಿನ್ನರ್‌ ಅಶ್ವಿನ್‌ ಮಾಜಿ ನಾಯಕ ಅನಿಲ್‌ ಕುಂಬ್ಳೆ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಈ ವರ್ಷ ಅಶ್ವಿನ್‌ 50 ವಿಕೆಟ್‌ ಕಿತ್ತಿದ್ದಾರೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ಒಂದೇ ವರ್ಷದ 4ನೇ ಬಾರಿ 50 ವಿಕೆಟ್‌ ಪಡೆದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.

    ಈ ಹಿಂದೆ ಅನಿಲ್‌ ಕುಂಬ್ಳೆ ಮತ್ತು ಹರ್ಭಜನ್‌ ಸಿಂಗ್‌ ಮೂರು ಬಾರಿ ಒಂದೇ ವರ್ಷದಲ್ಲಿ 50 ವಿಕೆಟ್‌ ಕಿತ್ತಿದ್ದರು. ನ್ಯೂಜಿಲೆಂಡ್‌ ನಾಯಕ, ಆರಂಭಿಕ ಬ್ಯಾಟ್ಸ್‌ಮನ್‌ ಟಾಮ್‌ ಲಾಥಮ್‌ ಅವರನ್ನು ಎಲ್‌ಬಿಗೆ ಕೆಡವುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಚಿನ್ನದ ಹುಡುಗನಿಗೆ ಮೋದಿ ಚಪ್ಪಾಳೆ

    50ಕ್ಕೂ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ಗಳು
    ಅಶ್ವಿನ್‌ : 2015, 2016, 2017, 2021
    ಅನಿಲ್‌ ಕುಂಬ್ಳೆ : 1999, 2004, 2006
    ಹರ್ಭಜನ್‌ ಸಿಂಗ್‌ : 2001, 2002, 2008
    ಕಪಿಲ್‌ ದೇವ್‌ :  1979, 1983

    ಮೂರನೇ ದಿನದಾಟದಲ್ಲಿ 17 ಓವರ್‌ಗಳನ್ನು ಎಸೆದ ಆಫ್‌ ಸ್ಪಿನ್ನರ್‌ ಆರ್‌. ಅಶ್ವಿನ್‌ 3 ವಿಕೆಟ್‌ ಪಡೆದಿದ್ದಾರೆ.  ಭಾರತ ಪಂದ್ಯ ಗೆಲ್ಲಲು ಇನ್ನೂ 5 ವಿಕೆಟ್‌ಗಳ ಅಗತ್ಯವಿದೆ. ಇದನ್ನೂ ಓದಿ: ಬೌಲ್ಡಾದರೂ DRS ಮೊರೆ ಹೋಗಿ ಲೆಜೆಂಡ್ ಎನಿಸಿಕೊಂಡ ಅಶ್ವಿನ್

    ಶನಿವಾರ ವಿಕೆಟ್‌ ನಷ್ಟವಿಲ್ಲದೇ 69 ರನ್‌ಗಳಿಸಿದ್ದ ಟೀಂ ಇಂಡಿಯಾ ಇಂದು 70 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 276 ರನ್‌ ಗಳಿಸಿದ್ದಾಗ ಎರಡನೇ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

    ಮಯಾಂಕ್‌ ಅಗರ್‌ವಾಲ್‌ 62 ರನ್‌(108 ಎಸೆತ, 9 ಬೌಂಡರಿ, 1 ಸಿಕ್ಸರ್‌), ಚೇತೇಶ್ವರ ಪೂಜಾರ 47 ರನ್‌(97 ಎಸೆತ, 6 ಬೌಂಡರಿ, 1 ಸಿಕ್ಸರ್‌), ಶುಭಮನ್‌ ಗಿಲ್‌ 47 ರನ್‌(75 ಎಸೆತ, 4 ಬೌಂಡರಿ, 1 ಸಿಕ್ಸರ್‌), ವಿರಾಟ್‌ ಕೊಹ್ಲಿ 36 ರನ್‌(84 ಎಸೆತ, 1 ಬೌಂಡರಿ, 1 ಸಿಕ್ಸರ್‌), ಅಕ್ಷರ್‌ ಪಟೇಲ್‌ ಔಟಾಗದೇ 41 ರನ್‌(26 ಎಸೆತ, 3 ಬೌಂಡರಿ, 4 ಸಿಕ್ಸರ್‌) ಸಿಡಿಸಿದರು.

    ಗೆಲ್ಲಲು 540 ರನ್‌ಗಳ ಬೃಹತ್‌ ಗುರಿಯನ್ನು ಪಡೆದ ನ್ಯೂಜಿಲೆಂಡ್‌ 45 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿದೆ.

    ಡ್ಯಾರಿಲ್‌ ಮಿಚೆಲ್‌ 60 ರನ್‌(92 ಎಸೆತ, 7 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರೆ ಹೆನ್ರಿ ನಿಕೊಲಸ್‌ ಔಟಾಗದೇ 36 ರನ್‌(86 ಎಸೆತ, 7 ಬೌಂಡರಿ) ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಅಶ್ವಿನ್ ಮೂರು ವಿಕೆಟ್‌ ಪಡೆದರೆ ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದಿದ್ದಾರೆ.

  • ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ ದುಬೆ – ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

    ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ ದುಬೆ – ಚೆನ್ನೈ ವಿರುದ್ಧ ರಾಜಸ್ಥಾನಕ್ಕೆ 7 ವಿಕೆಟ್ ಭರ್ಜರಿ ಜಯ

    ದುಬೈ: ಚೆನ್ನೈ ಬೌಲರ್‌ಗಳ ವಿರುದ್ಧ ಮನಸೋ ಇಚ್ಛೆ ಬ್ಯಾಟ್ ಬೀಸಿದ ರಾಜಸ್ಥಾನದ ಆಲ್‍ರೌಂಡರ್ ಶಿವಂ ದುಬೆ ರಾಜಸ್ಥಾನಕ್ಕೆ 7 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ರಾಜಸ್ಥಾನ ತಂಡ ಫ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

    ಚೆನ್ನೈ ನೀಡಿದ 190ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡಲು ಮುಂದಾಯಿತು. ಎವಿನ್ ಲೂಯಿಸ್ 27ರನ್(12 ಎಸೆತ, 2 ಬೌಂಡರಿ, 2 ಸಿಕ್ಸ್) ಮತ್ತು ಯಶಸ್ವಿ ಜೈಸ್ವಾಲ್ 50ರನ್(21 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ಘರ್ಜಿಸಿದರು. ಇವರ ನಿರ್ಗಮನದ ಬಳಿಕ ಬಂದ ಶಿವಂ ದುಬೆ ಚೆನ್ನೈ ಬೌಲರ್‌ಗಳಿಗೆ ಅಷ್ಟ ದಿಕ್ಕಿನ ಪರಿಚಯ ಮಾಡಿಸಿದರು. ಸಿಕ್ಸರ್, ಬೌಂಡರಿಗಳನ್ನು ಸಾಲು ಸಾಲು ಹೊಡೆದು ರಾಜಸ್ಥಾನ ತಂಡಕ್ಕೆ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರು. ದುಬೆ 64ರನ್(42 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಐಪಿಎಲ್‍ನಲ್ಲಿ ಮಿಂಚುತ್ತಿರುವ ಅನ್ ಕ್ಯಾಪ್ಡ್ ಪ್ಲೇಯರ್ಸ್

    ಬೃಹತ್ ಮೊತ್ತ ಪೇರಿಸಿದ ಚೆನ್ನೈ

    ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡಕ್ಕೆ ಆರಂಭಿಕ ಆಟಗಾರರಾದ ಫಾಫ್ ಡು ಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಎಂದಿನಂತೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‍ಗೆ ಈ ಜೋಡಿ 47ರನ್(41 ಎಸೆತ) ಜೊತೆಯಾಟವಾಡಿತು. ಈ ವೇಳೆ ದಾಳಿಗಿಳಿದ ರಾಹುಲ್ ತೇವಾಟಿಯ ಪ್ಲೆಸಿಸ್ 25ರನ್(19 ಎಸೆತ, 2 ಬೌಂಡರಿ, 1 ಸಿಕ್ಸ್) ವಿಕೆಟ್ ಪಡೆಯಲು ಯಶಸ್ವಿಯಾದರು. ನಂತರ ಬಂದ ಸುರೇಶ್ ರೈನಾ 3ರನ್, ಮೊಯಿನ್ ಅಲಿ 21ರನ್(17 ಎಸೆತ, 1 ಬೌಂಡರಿ, 1ಸಿಕ್ಸ್) ಮತ್ತು ಅಂಬಾಟಿ ರಾಯುಡು 2ರನ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಗಾಯಕ್ವಾಡ್, ಜಡೇಜಾ ಅಬ್ಬರ
    ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಸೈಲೆಂಟ್ ಆಗಿ ಬ್ಯಾಟ್ ಬೀಸುತ್ತಿದ್ದ ಗಾಯಕ್ವಾಡ್ ಜಡೇಜಾ ಜೊತೆ ಸೇರಿ ಅಬ್ಬರಿಸಲು ಪ್ರಾರಂಭಿಸಿದರು. ಈ ಜೋಡಿ ರಾಜಸ್ಥಾನ ಬೌಲರ್‍ಗಳನ್ನು ಮನಬಂದಂತೆ ಚಚ್ಚಿ ಬೌಂಡರಿ, ಸಿಕ್ಸರ್‍ ಗಳ ಸುರಿಮಳೆಗೈದರು. ಸಾಧಾರಣ ಮೊತ್ತ ಪೇರಿಸುವಂತ ಸ್ಥಿತಿಯಲ್ಲಿದ್ದ ಚೆನ್ನೈ ತಂಡವನ್ನು ಈ ಜೋಡಿ 180ರ ಗಡಿ ದಾಟಿಸಿತು. ಗಾಯಕ್ವಾಡ್ ಅಂತಿಮ ಎಸೆತದಲ್ಲಿ ಸಿಕ್ಸ್ ಸಿಡಿಸಿ 101ರನ್(60 ಎಸೆತ 9 ಬೌಂಡರಿ, 5 ಸಿಕ್ಸ್) ಶತಕ ಸಿಡಿಸಿ ಸಂಭ್ರಮಮಿಸಿದರು. ಜಡೇಜಾ ಕೇವಲ 15 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸ್ ಚಚ್ಚಿ 32ರನ್ ಸಿಡಿಸಿದರು. ಅಂತಿಮವಾಗಿ ತಂಡ 4 ವಿಕೆಟ್ ನಷ್ಟಕ್ಕೆ 189ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರಾಜಸ್ಥಾನ ಪರ ರಾಹುಲ್ ತೆವಾಟಿಯಾ 3 ವಿಕೆಟ್ ಕಿತ್ತು ಮಿಂಚಿದರು. ಇನ್ನುಳಿದ 1 ವಿಕೆಟ್ ಚೇತನ್ ಸಕಾರಿಯಾ ಪಡೆದರು. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ರನ್ ಏರಿದ್ದು ಹೇಗೆ?
    50ರನ್ -45 ಎಸೆತ
    100 ರನ್ -82 ಎಸೆತ
    150ರನ್ -106 ಎಸೆತ
    189ರನ್ – 120 ಎಸೆತ

  • ತನ್ನ ದಾಖಲೆ ಮುರಿದ ಆಂಗ್ಲ ವೇಗಿಗೆ ಶುಭ ಹಾರೈಸಿದ ಕುಂಬ್ಳೆ

    ತನ್ನ ದಾಖಲೆ ಮುರಿದ ಆಂಗ್ಲ ವೇಗಿಗೆ ಶುಭ ಹಾರೈಸಿದ ಕುಂಬ್ಳೆ

    ಬೆಂಗಳೂರು: ಭಾರತ ತಂಡದ ಮಾಜಿ ದಿಗ್ಗಜ ಆಟಗಾರ ಕನ್ನಡಿಗ ಅನಿಲ್ ಕುಂಬ್ಳೆ ಅವರ ದೀರ್ಘ ಕಾಲದ ದಾಖಲೆಯೊಂದನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಮುರಿದಿದ್ದಾರೆ. ತನ್ನ ದಾಖಲೆ ಮುರಿದ ಜೇಮಿಗೆ ಕುಂಬ್ಳೆ ಶುಭಾಶಯವನ್ನು ಕೋರಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಕಬಳಿಸುವುದರೊಂದಿಗೆ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್‍ನಲ್ಲಿ 620 ವಿಕೆಟ್ ಕಿತ್ತರು. ಈ ವೇಳೆ ಕುಂಬ್ಳೆ ಅವರ 619 ವಿಕೆಟ್‍ಗಳ ಈ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಕುಂಬ್ಳೆ ತನ್ನ ದಾಖಲೆಯನ್ನು ಮುರಿದ ಆ್ಯಂಡರ್ಸನ್ ಅವರಿಗೆ ಧನ್ಯವಾದಗಳು ಒಬ್ಬ ವೇಗದ ಬೌಲರ್ ಈ ಸಾಧನೆ ಮಾಡಿರುವುದಕ್ಕೆ ಅಭಿನಂದನೆಗಳು ಎಂದು ಟ್ಟಿಟ್ಟರ್‍ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.  ಇದನ್ನೂ ಓದಿ: ಕುಂಬ್ಳೆ 10 ವಿಕೆಟ್ ವಿಶ್ವದಾಖಲೆ ನೆನಪಿಸಿದ ಬಿಸಿಸಿಐ

    ಆ್ಯಂಡರ್ಸನ್ 163 ಪಂದ್ಯಗಳಿಂದ 620 ವಿಕೆಟ್ ಕಬಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ 132 ಪಂದ್ಯಗಳಿಂದ 619 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದರು ಇದೀಗ ಒಂದು ಸ್ಥಾನ ಕೆಳಗಿಳಿದು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ 133 ಪಂದ್ಯಗಳಿಂದ 800 ವಿಕೆಟ್ ಪಡೆದು ಮೊದಲನೇ ಸ್ಥಾನವನ್ನು ಅಲಂಕರಿಸಿದ್ರೆ, ಆಸ್ಟ್ರೇಲಿಯಾದ ಶೇನ್ ವಾರ್ನ್ 145 ಪಂದ್ಯಗಳಿಂದ 708 ವಿಕೆಟ್ ಕಿತ್ತು ಎರಡನೇ ಸ್ಥಾನದಲ್ಲಿದ್ದಾರೆ.

  • 7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    7 ವರ್ಷದ ಬಳಿಕ ವಿಕೆಟ್‌- ಕೈ ಮುಗಿದು ನಮಸ್ಕರಿಸಿದ ಶ್ರೀಶಾಂತ್‌

    ಮುಂಬೈ: 7 ವರ್ಷದ ಬಳಿಕ ಕ್ರಿಕೆಟ್‌ಗೆ ಮರಳಿದ ಬೌಲರ್‌ ಶ್ರೀಶಾಂತ್‌ ತಾನು ಆಡಿದ ಮೊದಲ ಪಂದ್ಯದಲ್ಲಿ ವಿಕೆಟ್‌ ಕಿತ್ತಿದ್ದಾರೆ. ಎದುರಾಳಿ ತಂಡದ ಆಟಗಾರನನ್ನು ಶ್ರೀಶಾಂತ್‌ ಬೌಲ್ಡ್‌ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಸೈಯ್ಯದ್‌ ಮುಷ್ತಾಕ್‌ ಅಲಿ ಕ್ರಿಕೆಟ್‌ ಟೂರ್ನಿಯಲ್ಲಿ ಪುದುಚೇರಿ ವಿರುದ್ಧದ ಪಂದ್ಯದಲ್ಲಿ ಕೇರಳ ಪರ ಆಡಿದ ಶ್ರೀಶಾಂತ್‌ 4 ಓವರ್‌ ಎಸೆದು 29 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ. ವಿಕೆಟ್‌ ಪಡೆದ ಶ್ರೀಶಾಂತ್‌ ಪಿಚ್‌ಗೆ ಕೈ ಮುಗಿದು ನಮಸ್ಕಾರ ಸಲ್ಲಿಸಿದ್ದಾರೆ.

    ಮೊದಲು ಬ್ಯಾಟಿಂಗ್‌ ಮಾಡಿದ್ದ ಪುದುಚೇರಿ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು. ಕೇರಳ 18.2 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು.

    2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ವಿಧಿಸಿದ್ದ ನಿಷೇಧ ಸೆಪ್ಟೆಂಬರ್‌ಗೆ ಅಂತ್ಯವಾಗಿತ್ತು. ನಿಷೇಧ ಮುಗಿದ ಬಳಿಕ ಕೇರಳ ಪರ ಈಗ ಶ್ರೀಶಾಂತ್‌ ಆಡುತ್ತಿದ್ದಾರೆ.

    ರಣಜಿ ಕ್ರಿಕೆಟ್ ಆವೃತ್ತಿಯಲ್ಲಿ ಶ್ರೀಶಾಂತ್ ಸ್ಥಿರ ಪ್ರದರ್ಶನ ನೀಡಿದರೆ ಟೀಂ ಇಂಡಿಯಾ ‘ಎ’ ತಂಡಕ್ಕೆ, ಆ ಬಳಿಕ ಭಾರತ ತಂಡಕ್ಕೆ ಆಡುವ ಅವಕಾಶ ಲಭಿಸಲಿದೆ. ಶ್ರೀಶಾಂತ್ ಕಳೆದ 7 ವರ್ಷಗಳಿಂದ ಕ್ರಿಕೆಟ್‍ನಿಂದಲೇ ದೂರ ಉಳಿದಿದ್ದು, 37 ವರ್ಷದ ಆಟಗಾರ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.

    ಈಗಾಗಲೇ ಟೀಂ ಇಂಡಿಯಾಗೆ ಆಯ್ಕೆಯಾಗಲು ತಂಡದಲ್ಲಿ ಆಟಗಾರರ ನಡುವೆ ಭಾರೀ ಪೈಪೋಟಿ ಇದೆ. ಆದರೆ ಶ್ರೀಶಾಂತ್ ಮಾತ್ರ 2023ರ ವಿಶ್ವಕಪ್ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಪರ 27 ಟೆಸ್ಟ್, 53 ಏಕದಿನ ಪಂದ್ಯ ಆಡಿರುವ ಶ್ರೀಶಾಂತ್ ಕ್ರಮವಾಗಿ 87, 75 ವಿಕೆಟ್ ಪಡೆದಿದ್ದು, 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಉರುಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿ ಶ್ರೀಶಾಂತ್ ಸದಸ್ಯರಾಗಿದ್ದರು.

  • ಅಂತರಾಷ್ಟ್ರೀಯ ಟಿ-20ಯಲ್ಲಿ ಬುಮ್ರಾನನ್ನು ಹಿಂದಿಕ್ಕುವ ತವಕದಲ್ಲಿ ಚಹಲ್

    ಅಂತರಾಷ್ಟ್ರೀಯ ಟಿ-20ಯಲ್ಲಿ ಬುಮ್ರಾನನ್ನು ಹಿಂದಿಕ್ಕುವ ತವಕದಲ್ಲಿ ಚಹಲ್

    ಮುಂಬೈ: ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಜಸ್ಪ್ರಿತ್ ಬುಮ್ರಾ ಅವರನ್ನು ಹಿಂದಿಕ್ಕುವ ಸನಿಹದಲ್ಲಿ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿದ್ದು, ಈ ಸಾಧನೆ ಮಾಡಲು ಅವರಿಗೆ ಎರಡು ವಿಕೆಟ್ ಬೇಕಿದೆ.

    ಭಾರತದ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‍ನಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ಅವರು ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯದಲ್ಲಿ ಸೂಪರ್ ಆಗಿ ಸ್ಪಿನ್ ಮಾಡಿದ ಚಹಲ್ ಅವರು ಬುಮ್ರಾ ಅವರನ್ನು ಹಿಂದಿಕ್ಕಲು ಕೇವಲ ಎರಡು ವಿಕೆಟ್‍ಗಳ ಅಂತರವನ್ನು ಹೊಂದಿದ್ದಾರೆ.

    ಭಾರತದ ಪರ ಒಟ್ಟು 50 ಟಿ-20 ಪಂದ್ಯಗಳನ್ನು ಆಡಿರುವ ಜಸ್ಪ್ರಿತ್ ಬುಮ್ರಾ 59 ವಿಕೆಟ್ ಪಡೆದು ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಬದಲಿ ಆಟಗಾರನಾಗಿ ಬಂದು ಮೂರು ವಿಕೆಟ್ ಪಡೆದು ಮಿಂಚಿದ ಚಹಲ್, 43 ಪಂದ್ಯಗಳನ್ನಾಡಿ 58 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿ ಇದ್ದಾರೆ. ಇನ್ನೆರೆಡು ವಿಕೆಟ್ ಪಡೆದರೆ ಚಹಲ್ ಬುಮ್ರಾ ಅವರನ್ನು ಹಿಂದಿಕ್ಕಲಿದ್ದಾರೆ.

    ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಬುಮ್ರಾ ಮತ್ತು ಚಹಲ್ ಇದ್ದರೆ, 46 ಪಂದ್ಯಗಳಲ್ಲಿ 52 ವಿಕೆಟ್ ಪಡೆದಿರುವ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನದಲ್ಲಿ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ 43 ಪಂದ್ಯಗಳಿಗೆ 41 ವಿಕೆಟ್ ಪಡೆದಿರುವ ಅನುಭವಿ ವೇಗಿ ಭುವನೇಶ್ವರ್ ಕುಮಾರ್, 43 ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಲೆಗ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಅವರು ಐದನೇ ಸ್ಥಾನದಲ್ಲಿ ಇದ್ದಾರೆ.

    ಶುಕ್ರವಾರ ಕ್ಯಾನ್ಬೆರಾದಲ್ಲಿ ನಡೆದ ಮೊದಲನೇ ಟಿ-20 ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬ್ಯಾಟಿಂಗ್ ವೇಳೆ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೆ ತುತ್ತಾದ ಕಾರಣ ಆಡುವ 11ರ ಬಳಗಕ್ಕೆ ಬಂದ ಚಹಲ್, ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದ ಕೇವಲ 25 ರನ್ ನೀಡಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

  • ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

    ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

    ಲಂಡನ್: ಇಂಗ್ಲೆಂಡ್‍ನ ಎಡಗೈ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ನೆಚ್ಚಿನ ವಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲ್ವಂತೆ. ‘ಮಿಸ್ಟರ್ 360’ ಖ್ಯಾತಿಯ ಕೆ.ಎಲ್.ರಾಹುಲ್ ಅವರು ರಶೀದ್ ನೆಚ್ಚಿನ ವಿಕೆಟ್ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರಿವೀಲ್ ಮಾಡಿದೆ.

    2018ರಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಪಿನ್ನರ್ ಆದಿಲ್ ರಶೀದ್ ನೀಡಿದ ಅದ್ಭುತ ಎಸೆತ ಹಾಗೂ ವಿಕೆಟ್ ಕಿತ್ತ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿತ್ತು. ಅದೊಂದು ಅದ್ಭುತ ಎಸೆತವಾಗಿತ್ತು. ಆದಾಗ್ಯೂ ಇಂಗ್ಲಿಷ್ ಸ್ಪಿನ್ನರ್ ರಶೀದ್ ಅವರ ನೆಚ್ಚಿನ ಎಸೆತ ಹಾಗೂ ವಿಕೆಟ್ ಭಾರತೀಯ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎಂದು ಹೇಳಿದೆ.

    ಭಾರತವು 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ವೇಳೆ ನಡೆದ ಟೆಸ್ಟ್ ಪಂದ್ಯದಲ್ಲಿ ಆದಿಲ್ ರಶೀದ್ ಅವರು ಅದ್ಭುತವಾಗಿ ಕೆ.ಎಲ್.ರಾಹುಲ್ ಅವರ ವಿಕೆಟ್ ಪಡೆದಿದ್ದರು. ಈ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶನಿವಾರ ಟ್ವೀಟ್ ಮಾಡಿದೆ.

    ಆದಿಲ್ ರಶೀದ್ ಎಸೆದ ಬಾಲ್ ಪ್ಯಾಚ್ ರೀತಿಯಲ್ಲಿ ಲೆಗ್ ಸೈಡ್‍ಗೆ ಬಿದ್ದು ಸ್ಪಿನ್ ಆಗಿ ವಿಕೆಟ್‍ಗೆ ಬಿದ್ದಿತ್ತು. ಪರಿಣಾಮ 150 ರನ್ ಪೂರೈಸಲು ಜಸ್ಟ್ 1 ರನ್ ಬೇಕಿದ್ದಾಗಲೇ ರಾಹುಲ್ ವಿಕೆಟ್ ಕಳೆದುಕೊಂಡಿದ್ದರು.

    ಈ ಪಂದ್ಯವು ಟೆಸ್ಟ್ ಸರಣಿಯ 5ನೇ ಪಂದ್ಯವಾಗಿತ್ತು. 223 ಎಸೆತಗಳಲ್ಲಿ 149 ರನ್ ಗಳಿಸಿದ್ದ ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಜೊತೆಗೆ ಅಂದಿನ ಅಂತಿಮ ಓವರ್ ವರೆಗೂ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ರಶೀದ್ ಅವರ ಮಾಂತ್ರಿಕ ಎಸೆತದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೈಚೆಲ್ಲಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತದ ಇಂಗ್ಲೆಂಡ್ ವಿರುದ್ಧ 118 ರನ್‍ಗಳಿಂದ ಸೋಲು ಕಂಡಿತ್ತು. ಅಷ್ಟೇ ಅಲ್ಲದೆ ಟೀಂ ಇಂಡಿಯಾ ಸರಣಿಯನ್ನು 4-1 ಅಂತರದಿಂದ ಸೋತಿತ್ತು.

  • ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

    ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

    ಮುಂಬೈ: ಕೊರೊನಾ ವೈರಸ್ ಕಾರಣದಿಂದ ಮುಂದಿನ ದಿನಗಳಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಾಮಾಜಿಕ ಅಂತರ ಪಾಲಿಸಲು ಈಗಾಗಲೇ ದೇಶೀಯ ಕ್ರಿಕೆಟ್ ಸಂಸ್ಥೆಗಳು ಸೂಚನೆ ನೀಡಿವೆ. ಅಲ್ಲದೇ ಚೆಂಡಿನ ಹೊಳಪು ಕಾಪಾಡಲು ಕ್ರಿಕೆಟಿಗರು ಎಂಜಲು ಬಳಸಬಾರದು ಎಂದು ಐಸಿಸಿ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಬಂಧನೆಗಳು ಜಾರಿಯಾಗಿರುವ ಅವಕಾಶಗಳು ಕಾಣಿಸುತ್ತಿದ್ದು, ಸದ್ಯ ಬೌಲರ್ ಗಳು ವಿಕೆಟ್ ಪಡೆದ ವೇಳೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ ಎಂದು ಟೀಂ ಇಂಡಿಯಾ ಆಟಗಾರ ರಹಾನೆ ಹೊಸ ಸಲಹೆಯನ್ನು ನೀಡಿದ್ದಾರೆ.

    ಕ್ರಿಕೆಟ್ ಮತ್ತೆ ಆರಂಭವಾದ ಬಳಿಕ ಬೌಲರ್ ವಿಕೆಟ್ ಪಡೆದರೆ ನಮಸ್ಕಾರ ಅಥವಾ ಬೇರೆ ವಿಧಾನದ ಮೂಲಕ ಸಂಭ್ರಮ ಮಾಡಬೇಕು. ಅಲ್ಲದೇ ಎಲ್ಲ ಆಟಗಾರರು ಪಿಚ್ ಬಳಿ ಬಂದು ಅಭಿನಂದನೆ ಹೇಳುವ ಅವಕಾಶವೂ ಇರುವುದಿಲ್ಲ. ಬೌಂಡರಿ ಲೈನ್‍ನಿಂದಲೇ ಫೀಲ್ಡರ್ ನಮಸ್ಕರಿಸಿ ಅಭಿನಂದನೆ ಸಲ್ಲಿಸಬೇಕಿದೆ. ಇದು ಬರಿ ಕ್ರಿಕೆಟ್‍ನಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಆಚರಣೆ ಮಾಡಬೇಕಿದೆ ಎಂದು ರಹಾನೆ ತಿಳಿಸಿದ್ದಾರೆ.

    ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್‍ನಿಂದ ದೂರವಾಗಿರುವ ರಹಾನೆ, ಟೆಸ್ಟ್ ಕ್ರಿಕೆಟ್‍ನಲ್ಲಿ ತಂಡದ ಉಪನಾಯಕರಾಗಿದ್ದಾರೆ. 2019ರ ಐಪಿಎಲ್ ಟೂರ್ನಿವರೆಗೂ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರಹಾನೆಯನ್ನು 2020ರ ಆವೃತ್ತಿಯಲ್ಲಿ ಡೆಲ್ಲಿ ತಂಡ ಖರೀದಿ ಮಾಡಿದೆ. ಸದ್ಯ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಅನುಮಾನಗಳು ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ.

  • ವಿರಾಟ್ ವಿಕೆಟ್ ಕಬಳಿಸುವ ‘ಸುಲಭ ಸೂತ್ರ’ ಬಿಚ್ಚಿಟ್ಟ ಅಖ್ತರ್

    ವಿರಾಟ್ ವಿಕೆಟ್ ಕಬಳಿಸುವ ‘ಸುಲಭ ಸೂತ್ರ’ ಬಿಚ್ಚಿಟ್ಟ ಅಖ್ತರ್

    ಇಸ್ಲಾಮಾಬಾದ್: ಪ್ರಸಕ್ತ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಇದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ವಿವಿಧ ಅಂತರರಾಷ್ಟ್ರೀಯ ತಂಡಗಳ ಅನೇಕ ಬೌಲರ್‌ಗಳಿಗೆ ವಿರಾಟ್ ಹೆಚ್ಚು ಮೌಲ್ಯಯುತ ವಿಕೆಟ್ ಆಗಿ ಉಳಿದಿದ್ದಾರೆ. ಆದರೆ ಹಿಂದಿನ ಪೀಳಿಗೆಯ ಅಪ್ರತಿಮ ವೇಗಿ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ಅವರು ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಸುಲಭ ಸೂತ್ರವನ್ನು ಬಿಚ್ಚಿಟ್ಟಿದ್ದಾರೆ.

    ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಖ್ತರ್ ಅತ್ಯುತ್ತಮ ಬೌಲರ್‍ಗಳಲ್ಲಿ ಒಬ್ಬರಾಗಿದ್ದಾರೆ. ಅವರು ತಮ್ಮ ಆಕ್ರಮಣಕಾರಿ ಬೌಲಿಂಗ್‍ನಿಂದ ಸಮಕಾಲಿನ ಅನೇಕ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಿತ್ತಿದ್ದರು. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ ಮತ್ತು ಇತರ ಅನೇಕ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳು ಅಖ್ತರ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಪರೇಡ್ ನಡೆಸಿದ್ದರು. ಆದರೆ ಪ್ರಸ್ತುತ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವ ಅವಕಾಶ ಅವರಿಗೆ ಸಿಗಲಿಲ್ಲ.

    ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಮಾತನಾಡಿರುವ ಶೋಯೆಬ್ ಅಖ್ತರ್, ವಿರಾಟ್ ಕೊಹ್ಲಿ ಅವರನ್ನು ಹೇಗೆ ಔಟ್ ಮಾಡಬಹುದು ಎಂದು ವಿವರಿಸಿದ್ದಾರೆ. ಜೊತೆಗೆ ಸುಲಭ ಸೂತ್ರವನ್ನು ರಿವೀಲ್ ಮಾಡಿದ್ದಾರೆ. ಈ ಸೂತ್ರದ ಮೂಲಕ ಸುಲಭವಾಗಿ ಟೀಂ ಇಂಡಿಯಾ ನಾಯಕನ ವಿಕೆಟ್ ಪಡೆಯಬಹುದು ಎಂಬ ನಂಬಿಕೆ ನನ್ನಲ್ಲಿದೆ ಎಂದು ತಿಳಿಸಿದ್ದಾರೆ.

    ನಾನು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದಾದರೆ ಕ್ರೀಸ್‍ನಿಂದ ಅಗಲಕ್ಕೆ ಪಿಚ್ ಬೀಳುವಂತೆ ಮಾಡುತ್ತೇನೆ. ಈ ಮೂಕ ಡ್ರೈವ್ ಹೊಡೆಯುವ ಪ್ರಯತ್ನ ಮಾಡಿ ವಿಕೆಟ್ ಪಡೆಯುತ್ತೇನೆ. ಒಂದು ವೇಳೆ ನನ್ನ ಸೂತ್ರ ಕೆಲಸ ಮಾಡದಿದ್ದರೆ ನಾನು ಕೊಹ್ಲಿ ಅವರಿಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತೇನೆ. ಆಗ ಕೊಹ್ಲಿ ಔಟ್ ಆಗೇ ಆಗುತ್ತಾರೆ ಎಂದು ಅಖ್ತರ್ ವಿವರಿಸಿದ್ದಾರೆ.

    ಶೋಯೆಬ್ ಅಖ್ತರ್ ಪಾಕಿಸ್ತಾನದ ಪರ 46 ಟೆಸ್ಟ್ ಪಂದ್ಯಗಳನ್ನು ಆಡಿ 25.69 ಸರಾಸರಿಯಲ್ಲಿ 178 ವಿಕೆಟ್ ಪಡೆದಿದ್ದಾರೆ. 163 ಏಕದಿನ ಪಂದ್ಯಗಳನ್ನು ಆಡಿ 24.97 ಸರಾಸರಿಯಲ್ಲಿ 247 ವಿಕೆಟ್ ಕಿತ್ತಿದ್ದಾರೆ.

    ಅಖ್ತರ್ ಕ್ರಿಕೆಟ್ ಜಗತ್ತಿನಲ್ಲಿಯೇ ಅತ್ಯಂತ ಅಪಾಯಕಾರಿ ಬೌಲರ್‍ಗಳಲ್ಲಿ ಒಬ್ಬರಾಗಿದ್ದಾರೆ. ಅವರ ವೇಗ ಮತ್ತು ಆಕ್ರಮಣಕಾರಿ ತೀವ್ರತೆ ಹೇಗಿತ್ತೆಂದರೆ, ಯಾವುದೇ ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಹೊಡೆಯಲು ಕಷ್ಟಪಡುತ್ತಿದ್ದರು. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಎದುರಿಸಲು ಹೆದರುತ್ತಿದ್ದರು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಈ ಹಿಂದೆ ಒಪ್ಪಿಕೊಂಡಿದ್ದರು.

  • ಒಂದೇ ದಿನಕ್ಕೆ 16 ವಿಕೆಟ್ ಪತನ- ಸೋಲಿನ ಭೀತಿಯಲ್ಲಿ ಭಾರತ

    ಒಂದೇ ದಿನಕ್ಕೆ 16 ವಿಕೆಟ್ ಪತನ- ಸೋಲಿನ ಭೀತಿಯಲ್ಲಿ ಭಾರತ

    – ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 97 ರನ್ ಮುನ್ನಡೆ
    – 4 ಇನ್ನಿಂಗ್ಸ್ ಗಳಲ್ಲಿ ಕೇವಲ 38 ರನ್ ಗಳಿಸಿದ ಕೊಹ್ಲಿ

    ಕ್ರೈಸ್ಟ್ ಚರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದೇ ದಿನಕ್ಕೆ 16 ವಿಕೆಟ್ ಪತನಗೊಂಡಿವೆ.

    ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 73.1 ಓವರ್ ಗಳಲ್ಲಿ 235 ರನ್‍ಗೆ ಸರ್ವಪತನ ಕಂಡಿತು. 7 ರನ್ ಮುನ್ನಡೆ ಪಡೆದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 36 ಓವರ್ ನಲ್ಲಿ 90 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿದೆ. ಇದನ್ನೂ ಓದಿ: ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್

    ಹನುಮಾ ವಿಹಾರಿ 5 ರನ್ ಮತ್ತು ರಿಷಭ್ ಪಂತ್ 1 ರನ್ ಗಳಿಸಿ ಅಜೇಯರಾಗಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ ಸರಣಿಯ ಸತತ ನಾಲ್ಕನೇ ಇನ್ನಿಂಗ್ಸ್ ನಲ್ಲೂ ತಮ್ಮ ವೈಫಲ್ಯವನ್ನು ಮುಂದುವರಿಸಿದ್ದಾರೆ. ವೆಲ್ಲಿಂಗ್ಟನ್ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್ ನಲ್ಲಿ 2 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 19 ರನ್ ಗಳಿಸಿದ್ದರು. ಕ್ರೈಸ್ಟ್ ಚರ್ಚ್ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇವಲ 3 ರನ್ ಹಾಗೂ 14 ರನ್ ಗಳಿಸಿದ್ದಾರೆ.

    ನ್ಯೂಜಿಲೆಂಡ್‍ನ ಟ್ರೆಂಟ್ ಬೌಲ್ಟ್ ಟೀಂ ಇಂಡಿಯಾದ ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ ಹಾಗೂ ಉಮೇಶ್ ಯಾದವ್ ಅವರನ್ನು ಔಟ್ ಮಾಡಿದರು. ಮಾಯಂಕ್ 3 ರನ್ ಗಳಿಸಿದರೆ, ಪೂಜಾರ 24 ರನ್ ಹಾಗೂ ಉಮೇಶ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    9 ರನ್ ಗಳಿಸಿದ್ದ ಅಜಿಂಕ್ಯ ರಹಾನೆ ನೀಲ್ ವ್ಯಾಗ್ನರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ವಿರಾಟ್ ಕೊಹ್ಲಿ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಓವರಿನಲ್ಲಿ ಎಲ್‍ಬಿಡಬ್ಲ್ಯೂಗೆ ತುತ್ತಾದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲಿ 14 ರನ್ ಗಳಿಸಿ ಪೆವಿಲಿಯನ್‍ಗೆ ಮರಳಿದರು.

    ಎರಡಂಕಿ ದಾಟದ 5 ಬ್ಯಾಟ್ಸ್‌ಮನ್‌ಗಳು:
    ಶನಿವಾರ ಟಾಸ್ ಸೋತ ನಂತರ ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 242 ರನ್‍ಗಳಿಗೆ ಇಳಿಸಿತ್ತು. ಭಾರತದ 5 ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ 3 ರನ್, ಮಾಯಾಂಕ್ ಅಗರ್ವಾಲ್ 7 ರನ್, ಅಜಿಂಕ್ಯ ರಹಾನೆ 7 ರನ್, ರವೀಂದ್ರ ಜಡೇಜಾ 9 ರನ್ ಮತ್ತು ಉಮೇಶ್ ಯಾದವ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

    69 ದಿನಗಳಿಂದ ಶತಕ ಬಾರಿಸದ ಕೊಹ್ಲಿ:
    ವಿರಾಟ್ ಕೊಹ್ಲಿ ಕಳೆದ 69 ದಿನಗಳಿಂದ ಎಲ್ಲಾ ಮೂರು ಸ್ವರೂಪಗಳಲ್ಲಿ (ಏಕದಿನ, ಟೆಸ್ಟ್ ಮತ್ತು ಟಿ20) ಒಂದೇ ಶತಕ ಗಳಿಸಲು ಸಾಧ್ಯವಾಗಿಲ್ಲ. ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಇಂತಹ ವೈಫಲ್ಯ ತೋರಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ 22 ಇನ್ನಿಂಗ್ಸ್ ಆಡಿದ್ದಾರೆ. ಅವರು ಕೊನೆಯದಾಗಿ ಡಿಸೆಂಬರ್ 22 ರಂದು ಬಾಂಗ್ಲಾದೇಶದ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಇದಕ್ಕೂ ಮೊದಲು ಫೆಬ್ರವರಿ 25ರಿಂದ ಅಕ್ಟೋಬರ್ 2014 ರವರೆಗೆ ಸುಮಾರು 210 ದಿನಗಳಲ್ಲಿ ಹಾಗೂ ಫೆಬ್ರವರಿ 24ರಿಂದ 2011ರ ಸೆಪ್ಟೆಂಬರ್ ವರೆಗೆ ಸುಮಾರು 180 ದಿನಗಳಲ್ಲಿ ಕೊಹ್ಲಿ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿರಲಿಲ್ಲ.

    ನ್ಯೂಜಿಲೆಂಡ್ ಇನ್ನಿಂಗ್ಸ್:
    ಇದಕ್ಕೂ ಮುನ್ನ ನ್ಯೂಜಿಲೆಂಡ್‍ನ ಮೊದಲ ಇನ್ನಿಂಗ್ಸ್ ನಲ್ಲಿ ಟಾಮ್ ಲಾಥಮ್ 52 ರನ್ ಹಾಗೂ ಕೈಲ್ ಜಾಮಿಸನ್ 49 ರನ್ ಹಾಗೂ ಟಾಮ್ ಬ್ಲೆಂಡಾಲ್ 30 ರನ್ ಗಳಿಸಿದ್ದರು. ಜಾಮಿಸನ್ 9ನೇ ವಿಕೆಟ್‍ಗೆ 51 ರನ್‍ಗಳ ನಿರ್ಣಾಯಕ ಪಾಲುದಾರಿಕೆಯನ್ನು ನೀಲ್ ವ್ಯಾಗ್ನರ್ ಜೊತೆಗೆ ಹಂಚಿಕೊಂಡರು. ಆದಾಗ್ಯೂ ಅವರು ತಮ್ಮ ವೃತ್ತಿಜೀವನದ ಮೊದಲ ಅರ್ಧಶತಕವನ್ನು ತಪ್ಪಿಸಿಕೊಂಡರು.

    ಮಿಂಚಿದ ಶಮಿ, ಬುಮ್ರಾ:
    ಭಾರತದ ವೇಗದ ಬೌಲರ್ ಗಳಾದ ಮೊಹಮ್ಮದ್ ಶಮಿ 4 ವಿಕೆಟ್ ಹಾಗೂ ಜಸ್‍ಪ್ರೀತ್ ಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದರು. ಸ್ಪಿನ್ನರ್ ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ 1 ವಿಕೆಟ್ ಕಿತ್ತರು.