Tag: Whitefield Police

  • ವೈಟ್ ಫೀಲ್ಡ್ ಟೆಕ್ಕಿ ಕೇಸ್‌ಗೆ ಟ್ವಿಸ್ಟ್ – ಭಾರತ ಪರ ಕೂಗಿದ್ದಾಗ ಯಾರು ಹೊರ ಬರದಿದ್ದಕ್ಕೆ ಬೇಸತ್ತು ಪಾಕ್ ಪರ ಘೋಷಣೆ

    ವೈಟ್ ಫೀಲ್ಡ್ ಟೆಕ್ಕಿ ಕೇಸ್‌ಗೆ ಟ್ವಿಸ್ಟ್ – ಭಾರತ ಪರ ಕೂಗಿದ್ದಾಗ ಯಾರು ಹೊರ ಬರದಿದ್ದಕ್ಕೆ ಬೇಸತ್ತು ಪಾಕ್ ಪರ ಘೋಷಣೆ

    ಬೆಂಗಳೂರು: `ಆಪರೇಷನ್ ಸಿಂಧೂರ’ (Operation Sindoor) ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಕ್ಕೆ ಟೆಕ್ಕಿಯೊಬ್ಬನನ್ನ ಬಂಧಿಸಿದ್ದ ಕೇಸ್‌ಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಭಾರತ (India) ಪರ ಕೂಗಿದ್ದಾಗ ಯಾರು ಹೊರ ಬರದಿದ್ದಕ್ಕೆ ಬೇಸತ್ತು ಪಾಕ್ ಪರ ಘೋಷಣೆ ಕೂಗಿರುವುದಾಗಿ ತನಿಖೆ ವೇಳೆ ಬಯಲಾಗಿದೆ.

    ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ. ಛತ್ತಿಸ್‌ಗಢ (Chhattisgarh) ಮೂಲದ ಶುಕ್ಲಾ ಬೆಂಗಳೂರಿನಲ್ಲಿ (Bengaluru) ಟೆಕ್ಕಿ ಆಗಿ ಕೆಲಸ ಮಾಡಿಕೊಂಡಿದ್ದು, ವೈಟ್‌ಫೀಲ್ಡ್ನ ಪ್ರಶಾಂತ್ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ `ಆಪರೇಷನ್ ಸಿಂಧೂರ’ ವಿಜಯೋತ್ಸವ ಆಚರಿಸಲಾಗುತ್ತಿತ್ತು.ಇದನ್ನೂ ಓದಿ: ಏ.22ರಿಂದ ಮೇ 12 ರವರೆಗೆ ಮೋದಿ ಎಲ್ಲಿಗೆ ಹೋಗಿದ್ರು – ಬಹಿರಂಗ ಪಡಿಸುವಂತೆ ಪ್ರಿಯಾಂಕ್ ಆಗ್ರಹ

    ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದಿದ್ದ. ಈ ವೇಳೆ ವಿಜಯೋತ್ಸವವನ್ನು ಕಂಡು ಖುಷಿಯಲ್ಲಿ ಭಾರತದ ಪರ ಘೋಷಣೆ ಕೂಗಿದ್ದ. ಆದರೆ ಯಾರೂ ಬಾಲ್ಕನಿಗೆ ಬರದಿದ್ದನ್ನು ನೋಡಿ ಬೇಸತ್ತ ಟೆಕ್ಕಿ, ಪಾಕಿಸ್ತಾನ ಪರ ಘೋಷಣೆ ಕೂಗಿ ನೋಡೋಣ ಎಂದುಕೊಂಡು, ಜೋರಾಗಿ ಕೂಗಿದ್ದಾನೆ. ಆತನ ಪಿಜಿಯಲ್ಲಿರುವವರು ಕಿಟಕಿಯಿಂದ ಘೋಷಣೆ ಕೂಗುವುದನ್ನು ವಿಡಿಯೋ ಮಾಡಿಕೊಂಡು ಬಳಿಕ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

    ನಂತರ ಸ್ಥಳಕ್ಕೆ ಬಂದ ವೈಟ್‌ಫೀಲ್ಡ್ ಪೊಲೀಸರು ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ವಿಚಾರಣೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರೋದು ದೃಢಪಟ್ಟಿದ್ದು, ಭಾರತ ಪರ ಘೋಷಣೆ ಕೂಗಿದಾಗ ಯಾರೂ ಹೊರ ಬರದಿದ್ದಕ್ಕೆ ಪಾಕ್ ಪರ ಕೂಗಿರುವುದಾಗಿ ಬೆಳಕಿಗೆ ಬಂದಿದೆ.ಇದನ್ನೂ ಓದಿ: ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

  • ಬೆಂಗಳೂರು | ʻಆಪರೇಷನ್‌ ಸಿಂಧೂರʼ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ – ಟೆಕ್ಕಿ ಅರೆಸ್ಟ್‌

    ಬೆಂಗಳೂರು | ʻಆಪರೇಷನ್‌ ಸಿಂಧೂರʼ ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ – ಟೆಕ್ಕಿ ಅರೆಸ್ಟ್‌

    ಬೆಂಗಳೂರು: ʻಆಪರೇಷನ್‌ ಸಿಂಧೂರʼ (Operation Sindoor) ವಿಜಯೋತ್ಸವ ಆಚರಣೆ ವೇಳೆ ಪಾಕ್‌ ಪರ ಘೋಷಣೆ ಕೂಗಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನ ಬಂಧಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‌ನ (Bengaluru Whitefield) ಪ್ರಶಾಂತ್ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ. ಛತ್ತಿಸ್‌ಗಢ (Chhattisgarh) ಮೂಲದ ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿ ಕೆಲಸ ಮಾಡಿಕೊಂಡಿದ್ದ, ವೈಟ್‌ಫೀಲ್ಡ್‌ನ ಪ್ರಶಾಂತ್‌ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಶುಭಾಂಶು ಶುಕ್ಲಾ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾನೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರದ ಹಿಂದಿರುವ ಏರ್‌ ಮಾರ್ಷಲ್‌ ಎಕೆ ಭಾರ್ತಿ ಯಾರು? ಹಿನ್ನೆಲೆ ಏನು?

    ಬಡಾವಣೆ ನಿವಾಸಿಗಳು ಸಂಭ್ರಮಾಚರಣೆ ನಡೆಸುವ ವೇಳೆ ಪಿಜಿಯಲ್ಲೇ ಇದ್ದ ಶುಭಾಂಶು ಬಾಲ್ಕನಿಗೆ ಬಂದು ಪಾಕಿಸ್ತಾನ ಪರ ಜೋರಾಗಿ ಘೋಷಣೆ ಕೂಗಿದ್ದಾನೆ. ಈ ವೇಳೆ ಆತಂಕಗೊಂಡ ಕೆಲ ಪಿಜಿ ಯುವಕರು ಹೊರಬಂದು ನೋಡಿದಾಗ ಶುಭಾಂಶು ಬಾಲ್ಕನಿಯಲ್ಲಿ ನಿಂತು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಬಳಿಕ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ವೈಟ್‌ಫೀಲ್ಡ್‌ ಪೊಲೀಸರು (Whitefield Police) ಆತನನ್ನ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಪಾಕ್‌ ನ್ಯೂಕ್‌ ವೆಪನ್‌ ಫೆಸಿಲಿಟಿ ಮೇಲೆ ದಾಳಿಯಾಗಿದೆ, ಭಾರತಕ್ಕೆ ಜಯ ಸಿಕ್ಕಿದೆ: ಟಾಮ್‌ ಕೂಪರ್‌

    ವಿಚಾರಣೆ ವೇಳೆ ಶುಭಾಂಶು ಪಾಕ್ ಪರ ಘೋಷಣೆ ಕೂಗಿರೋದು ದೃಢಪಟ್ಟಿದೆ, ನಂತರ ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: Tumakuru | ಗಣಿ ಬಾಧಿತ ಪ್ರದೇಶಕ್ಕೆ 1,200 ಕೋಟಿ ರೂ. ಹಂಚಿಕೆ: ಪರಮೇಶ್ವರ್

  • Bengaluru | ಪಿಜಿಯ 5ನೇ ಮಹಡಿಯಿಂದ ಜಿಗಿದು ಟೆಕ್ಕಿ ಯುವತಿ ಆತ್ಮಹತ್ಯೆ

    Bengaluru | ಪಿಜಿಯ 5ನೇ ಮಹಡಿಯಿಂದ ಜಿಗಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಬೆಂಗಳೂರು: ಸಾಫ್ಟ್‌ವೇರ್‌ ಇಂಜಿನಿಯರ್ ಯುವತಿಯೊಬ್ಬಳು ತಾನು ವಾಸವಾಗಿದ್ದ ಪಿಜಿಯ (PG) 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ (Bengaluru Whitefield) ನಡೆದಿದೆ.

    ಆಂಧ್ರಪ್ರದೇಶದ ಕಡಪ ಮೂಲದ ಗೌತಮಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ನಗರದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಗೌತಮಿ, ಗುರುವಾರ ಸಂಜೆ 7 ಗಂಟೆ ವೇಳೆಗೆ ವೈಟ್‌ಫೀಲ್ಡ್ನ ಪ್ರಶಾಂತ ಲೇಔಟ್‌ನ ಪಿಜಿಯ ಐದನೇ ಹಂತದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: Chhattisgarh | ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – 14 ನಕ್ಸಲರು ಬಲಿ‌

    ವಿಚಾರ ತಿಳಿದ ಪೊಲೀಸರು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾಳೆ. ಈ ವೇಳೆ ಗೌತಮಿ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸತ್ತಮೇಲೆ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಬೇಡಿ, ನಮ್ಮ ತಂದೆ ತಾಯಿಗೆ ಮೃತದೇಹವನ್ನು ಹಸ್ತಾಂತರ ಮಾಡಿ ಅಂತ ಬರೆದು ಕೊನೆಯಲ್ಲಿ ಪೋಷಕರಿಗೆ ಸಾರಿ ಅಂತಾ ಬರೆದಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

  • ಬ್ರೇಕಪ್ ಮಾಡಿಕೊಳ್ಳಲು ಖತರ್ನಾಕ್ ಪ್ಲ್ಯಾನ್‌ ಮಾಡಿದ್ದ ಸುಂದ್ರಿ – ಯಾವ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ!

    ಬ್ರೇಕಪ್ ಮಾಡಿಕೊಳ್ಳಲು ಖತರ್ನಾಕ್ ಪ್ಲ್ಯಾನ್‌ ಮಾಡಿದ್ದ ಸುಂದ್ರಿ – ಯಾವ ಥ್ರಿಲ್ಲರ್ ಸಿನಿಮಾಗೂ ಕಮ್ಮಿಯಿಲ್ಲ!

    ಬೆಂಗಳೂರು: ಈಗಿನ ಕಾಲದ ಕೆಲವು ಲವ್ ಸ್ಟೋರಿಗಳು (Love Story) ಹೇಗಿರ್ತಾವೆ ಅಂದ್ರೆ ಬೆಳಗ್ಗೆ ವಾಟ್ಸಪ್‌ನಲ್ಲಿ ಪ್ರಪೋಸ್ ಮಾಡಿದ್ರೆ, ಮಧ್ಯಾಹ್ನ ಕೈಕೈ ಹಿಡಿದು ಸುತ್ತಾಡಿಕೊಂಡಿರ್ತಾರೆ, ಸಂಜೆ ಬ್ರೇಕಪ್ ಮಾಡಿಕೊಳ್ಳಾರೆ. ಅದಕ್ಕಾಗಿ ಖತರ್ನಾಕ್ ಪ್ಲ್ಯಾನ್‌ಗಳನ್ನೂ ಮಾಡಿರುತ್ತಾರೆ, ಅಂತಹದ್ದೇ ಒಂದು ಸ್ಟೋರಿ ಇಲ್ಲಿದೆ.. ಮುಂದೆ ಓದಿ…

    ಹೌದು. ಲವ್ ಮಾಡೋಕೆ ಒಂದು ಕಾರಣವಿದ್ರೆ, ಬ್ರೇಕಪ್ ಮಾಡ್ಕೊಳ್ಳೋಕೆ ನೂರು ಕಾರಣ ಇರ್ತಾವೆ. ಹಾಗೇ ಬ್ರೇಕಪ್ ಮಾಡ್ಕೊಳ್ಳೋಕೆ ಪ್ಲ್ಯಾನ್‌ ಮಾಡಿದ ಚಾಲಾಕಿಯೊಬ್ಬಳು ಹೇಗೆ ಕ್ರಿಮಿನಲ್ (Criminal Plan) ರೀತಿ ಯೋಚನೆ ಮಾಡ್ತಾಳೆ? ಹೇಗೆ ಸಿಕ್ಕಿಬೀಳ್ತಾಳೆ? ಅನ್ನೋದು ಈ ಸ್ಟೋರಿಯಲ್ಲಿದೆ. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲಿಸ್ತೀನ್‌ ಧ್ವಜ ಪ್ರದರ್ಶನ – 8 ಜನರ ವಿರುದ್ಧ ಕೇಸ್‌

    ಅಂದಹಾಗೇ ಟೆಕ್ಕಿಯಾಗಿ ಕೆಲಸ ಮಾಡುವ ಯುವತಿ ಮತ್ತು ಯುವಕ ವಂಶಿಕೃಷ್ಣ ಅನ್ನೋರು ಕಳೆದ ಕೆಲ ವರ್ಷಗಳಿಂದ ಲವ್ ಮಾಡ್ತಿದ್ರು. ಎಲ್ಲವೂ ಚೆನ್ನಾಗಿಯೇ ಇತ್ತು, ಹೋದಕಡೆಯೆಲ್ಲಾ ಇಬ್ಬರೂ ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ಸೆಲ್ಫಿಗೆ ಪೋಸ್ ಕೊಟ್ಟಿದ್ರು. ಹೀಗಿದ್ದ ಲವ್‌ಸ್ಟೋರಿಯಲ್ಲಿ ಯುವತಿ ಆ ಯುವಕನ ಹತ್ರ ಬ್ರೇಕಪ್ ಮಾಡಿಕೊಳ್ಳುವ ಪ್ಲ್ಯಾನ್‌ ಮಾಡಿದ್ಲು. ಈ ವಿಚಾರ ಯುವಕನಿಗೆ ತಿಳಿಸೋಕು ಮುನ್ನ ಮೊಬೈಲ್‌ನಲ್ಲಿರುವ (Mobile) ಫೋಟೋಗಳನ್ನ ಡಿಲೀಟ್ ಮಾಡಿಸೋದು ಹೇಗೆ ಅನ್ನೋ ಬಗ್ಗೆ ತಲೆಕೆಡಿಸಿಕೊಂಡಿದ್ದಳು. ಇದೇ ವೇಳೆ ಆಕೆಗೊಂದು ಖತಾರ್ನಾಕ್ ಪ್ಲ್ಯಾನ್‌ ಹೊಳೆದಿತ್ತು.

    ಯಾವ್ ಸಿನಿಮಾಗೂ ಕಮ್ಮಿಯಿಲ್ಲ ಈಕೆ ಪ್ಲ್ಯಾನ್‌:
    ಯುವತಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮೊಬೈಲ್ ಕಸಿಯೋದು ಹೇಗೆ ಅನ್ನೋದು ಪ್ಲಾನ್ ಮಾಡಿದ್ಲು. ಅದರಂತೆ ಕಳೆದ ಇಪ್ಪತ್ತನೇ ತಾರೀಖಿನಂದು ಯುವತಿ ಮತ್ತು ಯುವಕ ವಂಶಿಕೃಷ್ಣ ಒಟ್ಟಿಗೆ ಇಲ್ಲಿನ ಬೋಗನಹಳ್ಳಿ ಕಡೆಗೆ ಬೈಕ್‌ನಲ್ಲಿ ಹೊರಟಿದ್ರು. ಇದೇ ವೇಳೆ ಎದುರಿಗೆ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿತ್ತು. ಈ ವೇಳೆ ಕಾರಿನಿಂದ ಇಳಿದ ನಾಲ್ವರು ಯುವಕರು ಏಕಾಏಕಿ ಯುವಕ ವಂಶಿಕೃಷ್ಣ ಮೇಲೆ ಹಲ್ಲೆ ಮಾಡಿ ಕೈಯಲ್ಲಿದ್ದ 90 ಸಾವಿರ ಬೆಲೆಯ ಮೊಬೈಲ್ ಕಸಿದು ಎಸ್ಕೇಪ್ ಆಗಿದ್ರು.

    ಈ ವೇಳೆ ಜೊತೆಗಿದ್ದ ಯುವತಿ ಮೊಬೈಲ್ ತಾನೇ ಹೋದ್ರೆ ಹೋಗಲಿ ಸುಮ್ನೆ ಬಾ ಅಂತಾ ಯುವಕನನ್ನು ಸಮಾಧಾನ ಮಾಡಿ ಅಲ್ಲಿಂದ ರ‍್ಕೊಂಡು ಹೋಗಿದ್ಲು. ಅಷ್ಟಕ್ಕೆ ಸುಮ್ಮನಾಗದ ಯುವಕ ವಂಶಿಕೃಷ್ಣ, ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರಿನ ನಂಬರ್ ಆಧರಿಸಿ ಸುರೇಶ್, ಮನೋಜ್, ವೆಂಕಟೇಶ್, ಹೊನ್ನಪ್ಪ ಎಂಬುವವರನ್ನು ಬಂಧಿಸಿ ವಿಚಾರಣೆ ಮಾಡಿದ ವೇಳೆ ಯುವತಿಯ ಕೈವಾಡ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಕೆಶಿ

    ಯುವಕನ ಮೊಬೈಲ್‌ನಲ್ಲಿದ್ದ ಕೆಲ ಫೋಟೋಗಳನ್ನು ಡಿಲೀಟ್ ಮಾಡಬೇಕಿತ್ತು, ಅದಕ್ಕೆ ಈ ಪ್ಲ್ಯಾನ್‌ ಮಾಡಿದ್ವಿ ಅಂತಾ ಯುವತಿ ಸೇರಿ ಐವರು ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ದೂರು ನೀಡಿದ್ದ ಯುವಕ ವಂಶಿಕೃಷ್ಣ, ಪ್ರಿಯತಮೆಯ ಈ ಪ್ರಕರಣದ ಕಿಂಗ್ ಪಿನ್ ಅನ್ನೋದು ತಿಳಿದು ಶಾಕ್ ಆಗಿದ್ದಾನೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವ್ರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಪ್ರದೀಪ್ ಈಶ್ವರ್

  • ಪಕ್ಕಾ ಪ್ಲಾನ್ ಮರ್ಡರ್ – ಪತ್ನಿ, ಮಗ ಸೇರಿ ಆ್ಯಕ್ಸಿಡೆಂಟ್ ರೀತಿ ರೈತನ ಹತ್ಯೆ

    ಪಕ್ಕಾ ಪ್ಲಾನ್ ಮರ್ಡರ್ – ಪತ್ನಿ, ಮಗ ಸೇರಿ ಆ್ಯಕ್ಸಿಡೆಂಟ್ ರೀತಿ ರೈತನ ಹತ್ಯೆ

    – ಮರ್ಡರ್ ಮಿಸ್ಟರಿಯನ್ನು ಬೇಧಿಸಿದ ಪೊಲೀಸರು

    ಬೆಂಗಳೂರು: ಪತ್ನಿ ಹಾಗೂ ಮಗ ಸೇರಿ ಸುಪಾರಿ ಕೊಟ್ಟು ರೈತನನ್ನು ಕೊಲೆ ಮಾಡಿಸಿದ್ದಾರೆ. ಅಚ್ಚರಿ ವಿಚಾರ ಎಂಬಂತೆ ಕೊಲೆ ಬಗ್ಗೆ ಯಾರಿಗೂ ಸುಳಿವು ಸಿಗಬಾರದು, ಅಪಘಾತದ ರೀತಿ ಕೊಲೆಯಾಗಬೇಕು. ಇದಕ್ಕೆ ಆಯ್ಕೆ ಮಾಡಿಕೊಂಡಿದ್ದು ಸಿಸಿಟಿವಿ ಕ್ಯಾಮೆರಾಗಳಿಲ್ಲದ ರಸ್ತೆ. ಭಯಾನಕ ಕೊಲೆ ಪ್ರಕರಣವನ್ನು ವೈಟ್ ಫೀಲ್ಡ್ ಪೊಲೀಸರು ಬೇಧಿಸಿದ್ದಾರೆ.

    ಜನವರಿ 21ರಂದು 58 ವರ್ಷದ ರೈತ ಸುಬ್ಬರಾಯಪ್ಪ ಕೊಲೆಯಾಗಿದ್ದು, ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ತೆರಳುವಾಗ ಕಾರ್ ಗುದ್ದಿಸಿ ಕೊಲೆ ಮಾಡಲಾಗಿದೆ. ಆದರೆ ಸುಬ್ಬರಾಯಪ್ಪ ಅವರ ಮಗ ದೇವರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಸಹ ಬೈಕ್‍ನಿಂದ ಬಿದ್ದು ಗಾಯಗೊಂಡು ಸುಬ್ಬರಾಯಪ್ಪ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಳಿಕ ಪೊಲೀಸರು ಅಪಘಾತ ನಡೆದ ಸ್ಥಳ ಪರೀಕ್ಷೆಗೆ ತೆರಳಿದ್ದು, ಈ ವೇಳೆ ಅವರಿಗೆ ಅನುಮಾನ ಬಂದಿದೆ. ರಸ್ತೆಯಲ್ಲಿ ತುಂಬಾ ಪ್ಯಾಚ್‍ಗಳಿವೆ, ಅಲ್ಲದೆ ರೋಡ್ ಹಂಪ್ಸ್ ಗಳಿವೆ. ಅಲ್ಲದೆ ಈ ರಸ್ತೆಯಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾಗಳಿಲ್ಲ ಎಂಬುದನ್ನು ಪೊಲೀಸರು ಅರಿತಿದ್ದಾರೆ. ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಳವಾದ ತನಿಖೆ ನಡೆಸಿದ್ದು, ಪ್ರಕರಣದ ಸತ್ಯವನ್ನು ಪತ್ತೆಹಚ್ಚಿದ್ದಾರೆ.

    ಅದೇ ರಸ್ತೆಯ ಇನ್ನೊಂದು ಬದಿಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಗಮನಿಸಿದ್ದು, ಈ ವೇಳೆ ಅಪಘಾತ ನಡೆದ ಸ್ಥಳಕ್ಕೆ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಎಸ್‍ಯುವಿ ಕಾರ್ ಹೋಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರು ಕಾರ್ ಮಾಲೀಕನನ್ನು ಟ್ರೇಸ್ ಮಾಡಿದ್ದು, ಬಾಡಿಗೆ ಕಂಪನಿಯ ಸ್ಟಿಕ್ಕರ್ ಆಧಾರದ ಮೇಲೆ ಅನಿಲ್ ಕುಮಾರ್ ಹಾಗೂ ಕಾರನ್ನು ಪತ್ತೆ ಹಚ್ಚಿದ್ದಾರೆ.

    ಬಳಿಕ ಕಾಲ್ ರೆಕಾರ್ಡ್ ದಾಖಲೆಗಳನ್ನು ಪರಿಶೀಲಿಸಿದ್ದು, ಅನಿಲ್ ಕುಮಾರ್ ಸಂತ್ರಸ್ತ ಸುಬ್ಬರಾಯಪ್ಪ ಅವರಿಗೆ ಕರೆ ಮಾಡಿ, ಕೃಷಿ ಪರಿಕರಗಳನ್ನು ಖರೀದಿಸುವ ನೆಪದಲ್ಲಿ ಆ ರಸ್ತೆಗೆ ಕರೆಸಿರುವುದು ಬೆಳಕಿಗೆ ಬಂದಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅನಿಲ್ ಕುಮಾರ್ ಕರೆ ಮಾಡಿದ ಫೋನ್‍ನ್ನು ಸುಬ್ಬರಾಯಪ್ಪ ಪತ್ನಿ ಯಶೋಧಮ್ಮ ಅವರಿಂದ ಪಡೆದಿದ್ದ. ಬಳಿಕ ಅನಿಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಯಶೋಧಮ್ಮ ಹಾಗೂ ಮಗ ದೇವರಾಜ್ 6 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು ಎಂದು ಅನಿಲ್ ತಪ್ಪೊಪ್ಪಿಕೊಂಡಿದ್ದಾನೆ.

    ಸುಬ್ಬರಾಯಪ್ಪ ಅನೈತಿಕ ಸಂಬಂಧ ಹೊಂದಿದ್ದು, ಇದರಿಂದಾಗಿ ಆಸ್ತಿ ಕಡಿಮೆ ಸಿಗುತ್ತದೆ ಎಂಬ ಉದ್ದೇಶದಿಂದ ಯಶೋಧಮ್ಮ ಹಾಗೂ ಮಗ ದೇವರಾಜ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಅನಿಲ್‍ಗೆ 6 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.