Tag: white tapping

  • ಸಿಎಂ ಓಲೈಕೆಗೆ 29 ಕೋಟಿ ಹೊಳೆ – ಏರ್‌ಪೋರ್ಟ್ ರೋಡ್ ಟೆಂಡರ್‌ಗೆ ಆಕ್ರೋಶ

    ಸಿಎಂ ಓಲೈಕೆಗೆ 29 ಕೋಟಿ ಹೊಳೆ – ಏರ್‌ಪೋರ್ಟ್ ರೋಡ್ ಟೆಂಡರ್‌ಗೆ ಆಕ್ರೋಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳಿಗೇನು ಬರವಿಲ್ಲ. ರಸ್ತೆ ಗುಂಡಿ ಮುಚ್ಚಲು ಪಾಲಿಕೆ ಬೆಟ್ಟ ಕಿತ್ತು ಗುಂಡಿ ಕಂಡಂತೆ ಕಥೆ ಹೇಳುತ್ತಲೇ ಇರುತ್ತದೆ. ಜನರಂತೂ ನಮ್ಮ ರೋಡ್ ರೆಡಿ ಮಾಡಿ, ನಮ್ ರೋಡ್ ರೆಡಿ ಮಾಡಿ ಅಂತಲೇ ಇರ್ತಾರೆ. ಹೀಗಿರುವಾಗ ನಮ್ ಏರಿಯಾ ಬೇಡ – ನಮ್ ಏರಿಯಾಗೆ ವೈಟ್ ಟಾಪಿಂಗ್ ಬೇಡ ಎನ್ನುತ್ತಿದ್ದರೂ, ಪಾಲಿಕೆ ಮಾತ್ರ ಬಿಡ್ತಿಲ್ಲ. ರಸ್ತೆ ಹೈಟೆಕ್ ಮಾಡಿಯೇ ಮಾಡ್ತೀವಿ ಎನ್ನುತ್ತಿದೆ.

    ತರಳಬಾಳು ರಸ್ತೆ ಆರ್.ಟಿ ನಗರ ಮೂಲಕ ಬಳ್ಳಾರಿ ರಸ್ತೆಗೆ ಸಂಪರ್ಕ ನೀಡುವ ರಸ್ತೆಯಾಗಿದೆ. ವಾಹನಗಳ ಸಂಚಾರ ಯಥೇಚ್ಛವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ದಿಗಾಗಿ 29 ಕೋಟಿ ಖರ್ಚು ಮಾಡಲು ಪಾಲಿಕೆ ಸಜ್ಜಾಗಿ ಟೆಂಡರ್ ಕರೆದಿದೆ. ಇದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.‌ ಇದನ್ನೂ ಓದಿ: 3 ಸಾವಿರ ಕೆಜಿ ಪ್ಲಾಸ್ಟಿಕ್‌ನಿಂದ ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣವಾಯ್ತು ರಸ್ತೆ – ಏನಿದರ ವಿಶೇಷ?

    ಸುಮಾರು 4.6 ಕಿಮೀ ರಸ್ತೆಗೆ ಕಳೆದ ಒಂದು ವರ್ಷ ಮೂರು ತಿಂಗಳಲ್ಲಿ ಎರಡೆರಡು ಬಾರಿ ಕಾಮಗಾರಿಗಳು ನಡೆದಿದೆ. ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ಮೇಲೆ ರಾತ್ರೋರಾತ್ರಿ ರಸ್ತೆ ಸರ್ಕಲ್ ಬ್ಯೂಟಿಫಿಕೇಶನ್ ಮಾಡಲಾಯ್ತು. ರಸ್ತೆ ಟ್ರಾಫಿಕ್ ಮಾರ್ಕಿಂಗ್, ಫುಟ್ ಪಾತ್ ಅಭಿವೃದ್ಧಿ ಶರವೇಗದಲ್ಲಿ ನಡೆಯಿತು. ಕಳೆದ ಮೂರು ತಿಂಗಳ ಹಿಂದೆ ಯೂಟಿಲಿಟಿ ಶಿಫ್ಟ್ ಎಂದು 600 ಮೀಟರ್ ಗೆ ಡಾಂಬರೀಕರಣ ಕಾಮಗಾರಿ 6 ತಿಂಗಳ ಒಳಗೆ ಮುಗಿದಿದೆ. ಆದರೂ ಈಗ ಮತ್ತೆ ವೈಟ್ ಟಾಪಿಂಗ್ ರಸ್ತೆ ಬೇಕಾ ಎಂದು ಹಲವು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಂದು ಗಂಟೆಯ ಹಗ್‌ಗೆ 7 ಸಾವಿರ ಸಂಭಾವನೆ ಪಡೀತಾನೆ ಈ ವ್ಯಕ್ತಿ!

    ವೈಟ್ ಟಾಪಿಂಗ್ ರಸ್ತೆ ಮಾಡಲು ಮಾನದಂಡಗಳು ಹೀಗಿದೆ:
    * ಮೇಜರ್, ಸಬ್ ಆರ್ಡಿಯಲ್ ರೋಡ್ ಗಳ ಆಯ್ಕೆ
    * ಸರ್ಕಾರ,ಸ್ಥಳೀಯ ಶಾಸಕರ ಶಿಫಾರಸು ಮೇಲೆ ಆಯ್ಕೆ

    ನಗರದಲ್ಲಿ ಪ್ರತಿ ವಾರ ಫಿಕ್ಸ್ ಮೈ ಸ್ಟ್ರೀಟ್ ಆಪ್ ಮೂಲಕ ಗುಂಡಿಗಳ ಲೆಕ್ಕ ನೋಡಿದ್ರೆ ಪ್ರತಿ ವಾರ ಒಂದೂ ಸಾವಿರ ಗುಂಡಿಗಳು ಹೆಚ್ಚುತ್ತಲೇ ಇದೆ. ಹೀಗಿರುವಾಗ ಒಂದೂ ಗುಂಡಿ ಇಲ್ಲದ ರಸ್ತೆಗೆ ವೈಟ್ ಟಾಪಿಂಗ್ ಬೇಕಾ ಎಂದರೆ ಸದ್ಯ ವಾಹನ ಸವಾರರ ದೃಷ್ಟಿಯಿಂದ ದೀರ್ಘಕಾಲಿಕ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಚೀಫ್ ಇಂಜಿನಿಯರ್ ಲೋಕೇಶ್ ಸಮರ್ಥಿಸಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ನೀಡಲು ಬಿಎಸ್‍ವೈ ಸಿದ್ಧತೆ!

    ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ನೀಡಲು ಬಿಎಸ್‍ವೈ ಸಿದ್ಧತೆ!

    ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಬೆನ್ನಲ್ಲೇ ಕಾಂಗ್ರೆಸ್‍ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.

    ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ವೈಟ್ ಟ್ಯಾಪಿಂಗ್ ಅಕ್ರಮದ ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಖಡಕ್ ಆದೇಶ ಕೊಟ್ಟಿದ್ದಾರೆ.

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಟೆಂಡರ್ ಶ್ಯೂರ್ ಹಾಗೂ ವೈಟ್ ಟ್ಯಾಪಿಂಗ್‍ನಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.  1 ಕಿ.ಮೀಗೆ 11 ಕೋಟಿ ರೂ.ಯೋಜನೆಯಲ್ಲಿ ರಸ್ತೆ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್‍ನ 1 ಮತ್ತು 2 ನೇ ಹಂತದ ಕಾಮಗಾರಿ ತನಿಖೆ ಆಗಲಿದೆ. ಜೊತೆಗೆ ಮೂರನೇ ಹಂತದ ಕಾಮಗಾರಿಯನ್ನು ತಕ್ಷಣವೇ ತಡೆ ಹಿಡಿಯಲು ಸಿಎಂ ಸೂಚಿಸಿದ್ದಾರೆ.

    2016-17ನೇ ಸಾಲಿನ ಮೊಲದ ಹಂತದ ಕಾಮಗಾರಿಯ ಸುಮಾರು 29 ರಸ್ತೆಗಳ, 93.47 ಕಿಲೋಮೀಟರ್ ಉದ್ದದ ರಸ್ತೆಯ 800 ಕೋಟಿ ಮೊತ್ತದ ಕಾಮಗಾರಿ,  2017-18ನೇ ಸಾಲಿನ ಎರಡನೇ ಹಂತದ ಕಾಮಗಾರಿಯ 41 ರಸ್ತೆಗಳು. 63.26 ಕಿಲೋಮೀಟರ್ ರಸ್ತೆ, 690 ಕೋಟಿ ವೆಚ್ಚದ ಕಾಮಗಾರಿಯ ತನಿಖೆ ನಡೆಯಲಿದೆ. ಅದೇ ರೀತಿ ಟೆಂಡರ್ ಶ್ಯೂರ್ 25 ರಸ್ತೆಗಳ, 36 ಕಿಲೋಮೀಟರ್ ಉದ್ದದ ರಸ್ತೆಯ 643 ಕೋಟಿ ಕಾಮಗಾರಿಯ ತನಿಖೆಗೆ ಸಿಎಂ ಆದೇಶಿಸಿದ್ದಾರೆ.

    ಒಟ್ಟು ಮೂರು ಕಾಮಗಾರಿಗಳ ತನಿಖೆಗೆ ಆದೇಶಿದ್ದು, ಮೂರನೇ ಹಂತದ ವೈಟ್ ಟ್ಯಾಪಿಂಗ್ ಕಾಮಗಾರಿ ಸ್ಥಗಿತ ಮಾಡುವಂತೆ ಸಿಎಂ ಸೂಚಿದ್ದಾರೆ. ಒಂದು ವೇಳೆ ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಅಂದಿನ ಸಚಿವರಾದ ಕೆ.ಜೆ.ಜಾರ್ಜ್, ಪರಮೇಶ್ವರ್ ಸೇರಿದಂತೆ ಅನೇಕ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿಜೆಪಿ ನಾಯಕರ ಫೋನ್ ಕರೆಯನ್ನು ಕದ್ದಾಲಿಸಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ ಸರ್ಕಾರ ಈಗ ಎಚ್‍ಡಿಕೆಯನ್ನು ಕಟ್ಟಿ ಹಾಕಲು ಮುಂದಾಗಿದೆ. ಮೊದಲನೆಯದಾಗಿ ಜಂತಕಲ್ ಮೈನಿಂಗ್ ಪ್ರಕರಣದ ತನಿಖೆಯನ್ನು ಕಳೆದ 4 ವರ್ಷಗಳಿಂದ ವಿಶೇಷ ತನಿಖಾ ತಂಡ ನಡೆಸಿಕೊಂಡು ಬರುತ್ತಿದೆ. ತನಿಖೆ ನಡೆದು 1.5 ವರ್ಷವಾದರೂ ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಈಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಎಸ್‍ಐಟಿ ಸಿದ್ಧತೆ ನಡೆಸುತ್ತಿದೆ.

    ಐಎಂಎ ವಂಚಕ ಮನ್ಸೂರ್ ಜೊತೆ ಎಚ್‍ಡಿ ಕುಮಾರಸ್ವಾಮಿ ಗುರುತಿಸಿಕೊಂಡಿದ್ದರು. ಮನ್ಸೂರ್ ಜೊತೆ ಕುಮಾರಸ್ವಾಮಿ ಹಣವನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಈಗಾಗಲೇ ಕೇಳಿ ಬಂದಿದೆ. ಒಂದು ವೇಳೆ ಕೋರ್ಟ್ ವಿಚಾರಣೆಯ ವೇಳೆ ಮನ್ಸೂರ್ ಖಾನ್ ಕುಮಾರಸ್ವಾಮಿ ಅವರಿಗೂ ನಾನು ಹಣವನ್ನು ನೀಡಿದ್ದೇನೆ ಎಂದು ಬಾಯಿಬಿಟ್ಟರೆ ಈ ಪ್ರಕರಣವನ್ನೂ ಸಿಬಿಐಗೆ ನೀಡುವ ಸಾಧ್ಯತೆಯಿದೆ.

  • ವೈಟ್ ಟ್ಯಾಪಿಂಗ್‍ನಿಂದ ಭಾರೀ ಟ್ರಾಫಿಕ್ ಜಾಮ್!

    ವೈಟ್ ಟ್ಯಾಪಿಂಗ್‍ನಿಂದ ಭಾರೀ ಟ್ರಾಫಿಕ್ ಜಾಮ್!

    -ಒಂದು ಕಿ.ಮೀ. ದಾಟೋದಕ್ಕೆ ಗಂಟೆಗಟ್ಟಲೇ ಕಾಯಲೇಬೇಕು

    ಬೆಂಗಳೂರು: ನಮ್ಮ ಸಿಲಿಕಾನ್ ಸಿಟಿಯಲ್ಲಿ ಒಂದು ರಸ್ತೆ ದಾಟಬೇಕಾದ್ರೆ ಯುದ್ಧ ಗೆದ್ದಂತೆ ಆಗತ್ತದೆ. ಸಿಗ್ನಲ್ ಒಂದು ಕಡೆಯಾದ್ರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಮತ್ತೊಂದು ಕಡೆ ಇರುತ್ತಾರೆ. ಐಟಿ-ಬಿಟಿ ಇರೋ ಕಡೆ ಹೋದ್ರೆ ಕಥೆ ಕೇಳೋದೇ ಬೇಡ. ಹದ್ದಿನ ಕಣ್ಣಿಟ್ಟುಕೊಂಡೇ ರಸ್ತೆ ದಾಟಬೇಕು.

    ಇದೆಲ್ಲದರ ನಡುವೆ ಬಿಬಿಎಂಪಿ ಬೆಂಗಳೂರಿನ ರಸ್ತೆಗಳನ್ನ ಹೈಟೆಕ್ ಮಾಡೋಕೆ ಹೊರಟಿರೋದು ಗೊತ್ತೆ ಇದೆ. ಕಳೆದ ಎರಡು ತಿಂಗಳಿಂದ ಹೆಬ್ಬಾಳದಿಂದ ಬಾಣಸವಾಡಿವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ನಾಗವಾರದಲ್ಲಿರೋ ಮಾನ್ಯತಾ ಟೆಕ್ ಪಾರ್ಕ್‍ಗೆ ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ವಾಹನಗಳು ಬರುತ್ತವೆ. ಆದ್ರೆ ಇಲ್ಲಿ ಇದೀಗ ವೈಟ್ ಟಾಪಿಂಗ್ ಮಾಡುತ್ತಿರೋದ್ರಿಂದ ದಾಟೋದಕ್ಕೇ ಸರ್ಕಸ್ಸೇ ಮಾಡಬೇಕಾಗಿದೆ.

    ಹೀಗಾಗಿ ಇದೀಗ ಇಲ್ಲಿ ವೈಟ್ ಟಾಪಿಂಗ್ ಬೇಕಿತ್ತಾ ಅಂತಾ ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ಆರಂಭವಾಗುವ ಮೊದಲೇ ಬೇರೆ ಮಾರ್ಗವನ್ನ ಮಾಡಿದ್ರೆ ಚೆನ್ನಾಗಿ ಇರುತ್ತಿತ್ತು. ಪ್ರತ್ಯೇಕ ಲೈನ್ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡುವ ಹಲವು ಅವಕಾಶಗಳಿತ್ತು. ಒಂದು ವೇಳೆ ಅರ್ಜೆಂಟ್ ಅಂತಾ ಏನಾದರೂ ಬಂದ್ರೇ ಅಷ್ಟೇ ಮುಗೀತು ನಮ್ಮ ಕತೆ ಅಂತ ವಾಹನ ಸವಾರರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೆಂಗಳೂರಲ್ಲಿ ಹೆಚ್ಚಾಗಲಿದೆ ಟ್ರಾಫಿಕ್ ಸಮಸ್ಯೆ

    ಬೆಂಗಳೂರಲ್ಲಿ ಹೆಚ್ಚಾಗಲಿದೆ ಟ್ರಾಫಿಕ್ ಸಮಸ್ಯೆ

    – ಯಾವ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಲಿದೆ?

    ಬೆಂಗಳೂರು: ಸಿಲಿಕಾನ್ ಸಿಟಿ ಜನರು ಈಗಾಗಲೇ ಟ್ರಾಫಿಕ್ ಕಿರಿಕಿರಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈಗ ಬೆಂಗಳೂರಿನ ಜನರು ಇನ್ನಷ್ಟು ಟ್ರಾಫಿಕ್ ಸಮಸ್ಯೆ ಎದುರಿಸಲು ಸಿದ್ಧರಾಗಬೇಕಿದೆ. ಇಷ್ಟು ದಿನ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಕಾಮಗಾರಿ ಮತ್ತೆ ಆರಂಭವಾಗುತ್ತಿದೆ.

    ಸಿಲಿಕಾನ್ ಸಿಟಿಯಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಯಿಂದ ಟ್ರಾಫಿಕ್ ಕಿರಿಕಿರಿಗೆ ಒಳಗಾಗಿದ್ದ ಜನ ಕೆಲಕಾಲ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಈಗ ಮತ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಆರಂಭವಾಗುತ್ತಿದ್ದು ಟ್ರಾಫಿಕ್‍ನಿಂದ ನರಕ ಸದೃಶ್ಯ ಎದುರಾಗಲಿದೆ. ಹೌದು ಸಂಚಾರಿ ಪೊಲೀಸರಿಂದ ಅನುಮತಿ ದೊರೆಯದ ಹಿನ್ನೆಲೆ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭವಾಗುತ್ತಿದೆ. ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಸಂಚಾರಿ ಪೊಲೀಸರಿಂದ ಕಾಮಗಾರಿಗೆ ಅನುಮತಿ ದೊರಕಿಸಿದ್ದು, ಇದೇ ತಿಂಗಳ 27 ರಿಂದ ಕಾಮಗಾರಿ ಆರಂಭವಾಗಲಿದೆ.

    ಯಾವ ರಸ್ತೆಯಲ್ಲಿ ವೈಟ್ ಟ್ಯಾಪಿಂಗ್?
    ಹೆಬ್ಬಾಳ – ಹೆಣ್ಣೂರು ರಸ್ತೆ
    ನಾಯಂಡಳ್ಳಿ – ಸುಮ್ಮನಹಳ್ಳಿ
    ವೆಸ್ಟ್ ಆಫ್ ಕಾರ್ಡ್ ರೋಡ್ – ಟೋಲ್ ಗೇಟ್

    95 ಕಿ.ಮೀಗೆ ಟೆಂಡರ್ ಆಗಿದ್ದ ವೈಟ್ ಟ್ಯಾಪಿಂಗ್ ಕಾಮಗಾರಿ ಇಲ್ಲಿಯವರಗೂ 15 ಕಿ.ಮೀ ವರೆಗೂ ಕಾಮಗಾರಿ ಪೂರ್ಣವಾಗಿದೆ. ಮತ್ತೆ ವೈಟ್ ಟ್ಯಾಪಿಂಗ್ ಕಾಮಗಾರಿ ಶುರುವಾಗಿದ್ದರಿಂದ ವಾಹನ ಸವಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚೆನ್ನಾಗಿ ಇರೋ ರಸ್ತೆನಾ ಹಾಳು ಮಾಡಿ ವೈಟ್ ಟ್ಯಾಪಿಂಗ್ ಮಾಡಲು ಹೊರಟಿದ್ದಾರೆ. ಯಾರಿಗೆ ಬೇಕು ಈ ವೈಟ್ ಟ್ಯಾಪಿಂಗ್? ಎಂದು ಪ್ರಶ್ನಿಸುತ್ತಿದ್ದಾರೆ.ಪಡಿಸ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿದ್ದರಾಮಯ್ಯ ಅಲ್ಲ, ಇಡೀ ಬೆಂಗ್ಳೂರನ್ನು ಡಾನ್ ಗಳು ಆಳುತ್ತಿದ್ದಾರೆ- ಆರ್ ಅಶೋಕ್ ಗಂಭೀರ ಆರೋಪ

    ಸಿದ್ದರಾಮಯ್ಯ ಅಲ್ಲ, ಇಡೀ ಬೆಂಗ್ಳೂರನ್ನು ಡಾನ್ ಗಳು ಆಳುತ್ತಿದ್ದಾರೆ- ಆರ್ ಅಶೋಕ್ ಗಂಭೀರ ಆರೋಪ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನೇ ಇಲ್ಲ. ಅವರು ಗೂಂಡಾಗಳ ಕೈಗೆ ಕಾನೂನು ಕೊಟ್ಟುಬಿಟ್ಟಿದ್ದಾರೆ. ಪೊಲೀಸರ ಕೈಯಲ್ಲಿ ಲಾಠಿಯಿಲ್ಲ. ಈ ಲಾಠಿಯನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ. ಹೀಗಾಗಿ ಇಡೀ ಬೆಂಗಳೂರನ್ನು ಡಾನ್ ಗಳು ಆಳುತ್ತಿದ್ದಾರೆ ಅಂತ ಮಾಜಿ ಡಿಸಿಎಂ ಆರ್ ಅಶೋಕ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ನಗರದ ದಾಸರಹಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಪಾದಯಾತ್ರೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಜಾ ಮಾಫಿಯಾಗಳು, ಅಂತರಾಷ್ಟ್ರೀಯ ಮಟ್ಟದ ಡಾನ್ ಗಳು ನಗರವನ್ನು ತಮ್ಮ ಹತೋಟಿಗೆ ತರುತ್ತಿದ್ದಾರೆ. ಹೀಗಾಗಿ ಸಿಎಂ ಹಾಗೂ ಪೊಲೀಸರ ಕೈಯಲ್ಲಿ ಅಧಿಕಾರವಿಲ್ಲ ಸರ್ಕಾರದ ವಿರುದ್ದ ಐಪಿಎಸ್ ಅಧಿಕಾರಿಗಳೇ ತಿರುಗಿ ಬಿದ್ದಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರದ ಕೆಲಸ ತೋರಿಸುತ್ತದೆ ಅಂತ ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಲ್ಲ. 65% ಕಮೀಷನ್ ಸರ್ಕಾರ. ವೈಟ್ ಟ್ಯಾಪಿಂಗ್ ಕಾಮಗಾರಿಯಲ್ಲಿ 65%ರಷ್ಟು ಕಮಿಷನ್ ಹೊಡೆಯುತ್ತಿದ್ದಾರೆ. ಜನರ ಹಣವನ್ನು ಸಿಎಂ ಸಿದ್ದರಾಮಯ್ಯ ಲೂಟಿ ಹೊಡೆತಿದ್ದಾರೆ ಎಂದು ಆರೋಪಿಸಿದ್ದಾರೆ.