Tag: white house

  • ಮಾಸ್ಕೋದಲ್ಲಿ ಉಗ್ರರ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ರಷ್ಯಾಗೂ ಎಚ್ಚರಿಕೆ ನೀಡಿತ್ತು – ಅಮೆರಿಕ

    ಮಾಸ್ಕೋದಲ್ಲಿ ಉಗ್ರರ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು, ರಷ್ಯಾಗೂ ಎಚ್ಚರಿಕೆ ನೀಡಿತ್ತು – ಅಮೆರಿಕ

    ವಾಷಿಂಗ್ಟನ್‌: ಮಾಸ್ಕೋದಲ್ಲಿ ನಡೆದ ಉಗ್ರರ ದಾಳಿಯ (Moscow Attack) ಬಗ್ಗೆ ಅಮೆರಿಕ ಮೊದಲೇ ರಷ್ಯಾಗೆ ಎಚ್ಚರಿಸಿತ್ತು. ಮಾರ್ಚ್‌ ತಿಂಗಳ ಆರಂಭದಲ್ಲಿಯೇ ರಷ್ಯಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು ಎಂದು ಶ್ವೇತಭವನದ (White House) ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ತಿಳಿಸಿದ್ದಾರೆ.

    ಮಾಸ್ಕೋದಲ್ಲಿ ಶುಕ್ರವಾರ ತಡರಾತ್ರಿ ನಡೆದ ಉಗ್ರರ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 115ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವಕ್ತಾರ, ಯುಎಸ್‌ ಸರ್ಕಾರಕ್ಕೆ ಮಾಸ್ಕೋದಲ್ಲಿ ನಡೆದ ಯೋಜಿತ ಉಗ್ರರ ದಾಳಿಯ ಬಗ್ಗೆ ಒಂದು ತಿಂಗಳ ಮೊದಲೇ ಗೊತ್ತಿತ್ತು. ಈ ಮಾಹಿತಿಯನ್ನು ರಷ್ಯಾದ ಸರ್ಕಾರದೊಂದಿಗೆ (Russia Government) ಹಂಚಿಕೊಳ್ಳಲಾಗಿತ್ತು. ದೇಶದ ಅನೇಕ ಜನರನ್ನು ಕೊಲ್ಲುವ ಅಥವಾ ಅಪಹರಿಸುವ ಬಗ್ಗೆ ಗುಪ್ತಚರ ಮಾಹಿತಿಯನ್ನು ರವಾನಿಸಿತ್ತು ಎಂದು ವ್ಯಾಟ್ಸನ್ ತಿಳಿಸಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ಇಸ್ಲಾಮಿಕ್‌ ಸ್ಟೇಟ್ಸ್‌ಗಳ (Islamic State) ಕೈವಾಡವಿದೆ ಎಂದು ಹೇಳಿದ್ದಾರೆ.

    ಕನ್ಸರ್ಟ್ ಹಾಲ್‌ನಲ್ಲಿ ಏನಾಯಿತು?
    4 ಮಂದಿ ಭಯೋತ್ಪಾದಕರ ಗುಂಪು ಮಾಸ್ಕೋದ ಕ್ರೋಕಸ್ ಸಿಟಿ ಕನ್ಸರ್ಟ್ ಹಾಲ್‌ಗೆ ನುಗ್ಗಿತು ಮತ್ತು ಅಲ್ಲಿ ನೆರೆದಿದ್ದ ಸಭಿಕರ ಮೇಲೆ ಗುಂಡಿನ ದಾಳಿ ನಡೆಸಿತು. ಇದರಿಂದ ಜನ ಗಾಬರಿಯಾಗಿ ದಿಕ್ಕಾಪಾಲಾಗಿ ಓಡಲು ಶುರುಮಾಡಿದಾಗ ಕಾಲ್ತುಳಿತ ಕೂಡ ಉಂಟಾಯಿತು, ಇದೇ ಸಂದರ್ಭದಲ್ಲಿ ಉಗ್ರರು ಗ್ರೆನೇಡ್‌ಗಳನ್ನು ಸ್ಫೋಟಿಸಿದರು. ದಾಳಿಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದರು. ಗ್ರೆನೇಡ್‌ಗಳನ್ನು ಎಸೆದಿದ್ದರಿಂದ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು. ಈ ವೇಳೆ ದಾಳಿಕೋರರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ನಡೆದ ಭೀಕರ ದಾಳಿ ಖಂಡಿಸಿದ ಪ್ರಧಾನಿ ಮೋದಿ

    ಭಾರತ ತೀವ್ರ ಖಂಡನೆ:
    ಮಾಸ್ಕೋದ ಮೇಲಿನ ಈ ದಾಳಿಯನ್ನು ಭಾರತ, ಐರೋಪ್ಯ ರಾಷ್ಟ್ರಗಳ ಒಕ್ಕೂಟ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ ಮತ್ತಿತರ ದೇಶಗಳು ದಾಳಿಯನ್ನು ಖಂಡಿಸಿವೆ. ಅಮೆರಿಕ ಈ ದಾಳಿಯನ್ನು ಭಯಾನಕ ಎಂದು ಕರೆದಿದೆ. ಅಲ್ಲದೇ ಉಕ್ರೇನ್‌ ಮೇಲಿನ ರಷ್ಯಾ ದಾಳಿಗೂ ಇದಕ್ಕೂ ಯಾವುದೇ ಸಂಬಂಧ ಕಂಡುಬರುತ್ತಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

  • ಜಿ20ಗೂ ಮುನ್ನ ಮೋದಿ – ಬೈಡೆನ್ ನಡುವೆ ದ್ವಿಪಕ್ಷೀಯ ಮಾತುಕತೆ

    ಜಿ20ಗೂ ಮುನ್ನ ಮೋದಿ – ಬೈಡೆನ್ ನಡುವೆ ದ್ವಿಪಕ್ಷೀಯ ಮಾತುಕತೆ

    ನವದೆಹಲಿ: ಜಿ20 ಶೃಂಗಸಭೆ (G20 Summit) ಹಿನ್ನೆಲೆ ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಸೆಪ್ಟೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತ ಭವನದ (White House) ಪ್ರಕಟಣೆ ತಿಳಿಸಿದೆ.

    ಶೃಂಗಸಭೆಯ ಸಮಯದಲ್ಲಿ ಬೈಡೆನ್ ಜಿ20 ನಾಯಕತ್ವಕ್ಕಾಗಿ ಪ್ರಧಾನಿ ಮೋದಿಯನ್ನು ಶ್ಲಾಘಿಸುತ್ತಾರೆ ಎಂದು ಅದು ತಿಳಿಸಿದೆ. ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಸಲಿದ್ದು, ಅಮೆರಿಕದ ಅಧ್ಯಕ್ಷರು ಸೆ.7ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಸೆ.8ರಂದು ಅವರು ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಾರೆ ಎಂದು ಪ್ರಕಟಣೆಯಲ್ಲಿ ಶ್ವೇತ ಭವನ ಉಲ್ಲೇಖಿಸಿದೆ. ಇದನ್ನೂ ಓದಿ: ರಾಮನಗರದಲ್ಲೇ ಮೆಡಿಕಲ್ ಕಾಲೇಜು ಉಳಿಯುತ್ತೆ, ವಿಪಕ್ಷಗಳು ರಾಜಕೀಯಕ್ಕೆ ಗೊಂದಲ ಮಾಡ್ತಿವೆ: ಇಕ್ಬಾಲ್ ಹುಸೇನ್

    ರಷ್ಯಾ (Russia) ಮತ್ತು ಉಕ್ರೇನ್ (Ukrain) ನಡುವಿನ ಯುದ್ಧದ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಇಬ್ಬರೂ ನಾಯಕರು ಬೇಸರ ವ್ಯಕ್ತಪಡಿಸಲಿದ್ದು, ಜಾಗತಿಕ ಸವಾಲುಗಳನ್ನು ಎದುರಿಸುವುದು, ಬಡತನದ ವಿರುದ್ಧ ಉತ್ತಮವಾಗಿ ಹೋರಾಡಲು ವಿಶ್ವ ಬ್ಯಾಂಕ್ ಸೇರಿದಂತೆ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಶ್ವೇತಭವನ ತಿಳಿಸಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಘಾಟಿ ಸುಬ್ರಮಣ್ಯ ಸ್ವಾಮಿ ದರ್ಶನ ಪಡೆದ ಟೀಂ ಇಂಡಿಯಾ ಸ್ಟಾರ್‌ ಕೆ.ಎಲ್‌ ರಾಹುಲ್

    ಇದೇ ವೇಳೆ ಅಮೆರಿಕದ ಅಧ್ಯಕ್ಷರು ಜಿ20 ಸಭೆಯನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಲಿದ್ದು, ಜಿ20 ಆರ್ಥಿಕ ಸಹಕಾರದ ಪ್ರಧಾನ ವೇದಿಕೆಯಾಗಲಿದೆ ಎಂದು ಪುನರುಚ್ಚರಿಸಲಿದ್ದು, ಅಮೆರಿಕದ ಬದ್ಧತೆಯನ್ನು ವಿವರಿಸಲಿದ್ದಾರೆ. ಇದನ್ನೂ ಓದಿ: ಆದಿತ್ಯ L1 ಮಿಷನ್‍ನ ಯಶಸ್ವಿ ಉಡಾವಣೆಗೆ ರಾಜ್ಯಪಾಲ ಅಭಿನಂದನೆ

    ಜಿ20 ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರ ಸರ್ಕಾರಿ ವೇದಿಕೆಯಾಗಿದೆ. ಭಾರತವು ಪ್ರಸ್ತುತ ಬಹುರಾಷ್ಟ್ರೀಯ ಗುಂಪಿನ ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಜಿ20ಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ ಮತ್ತು ಯುಎಸ್, ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ. ಈ ಬಾರಿ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ್, ಸ್ಪೇನ್ ಮತ್ತು ಯುಎಇ ಅತಿಥಿ ರಾಷ್ಟ್ರಗಳಾಗಿವೆ. ಇದನ್ನೂ ಓದಿ: ಇಸ್ರೋಗೆ ಜಾಗ ಕೊಟ್ಟಿದ್ದು ಕಾಂಗ್ರೆಸ್: ಬಿ.ಕೆ ಹರಿಪ್ರಸಾದ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ಸೇನೆ ಹಿಮ್ಮೆಟ್ಟಿಸಲು USನ ಕ್ಲಸ್ಟರ್ ಬಾಂಬ್‌ ಬಳಸಿ ಉಕ್ರೇನ್‌ ದಾಳಿ – ವೈಟ್‌ಹೌಸ್‌ ರಿಯಾಕ್ಷನ್‌

    ರಷ್ಯಾ ಸೇನೆ ಹಿಮ್ಮೆಟ್ಟಿಸಲು USನ ಕ್ಲಸ್ಟರ್ ಬಾಂಬ್‌ ಬಳಸಿ ಉಕ್ರೇನ್‌ ದಾಳಿ – ವೈಟ್‌ಹೌಸ್‌ ರಿಯಾಕ್ಷನ್‌

    ವಾಷಿಂಗ್ಟನ್‌/ಕೀವ್‌: ಅಮೆರಿಕ (USA) ಪೂರೈಸಿದ ಕ್ಲಸ್ಟರ್‌ ಯುದ್ಧ ಸಾಮಗ್ರಿಗಳು ಉಕ್ರೇನ್‌ ಸೇನೆಯ ಬಳಿಯಿದೆ. ಕೀವ್‌ನ ಯುದ್ಧದ ಭಾಗವಾಗಿ ಮೈದಾನದಲ್ಲಿ ನಿಯೋಜಿಸಲಾಗಿದೆ. ರಷ್ಯಾ ಸೇನೆಯನ್ನ ಹಿಮ್ಮೆಟ್ಟಿಸಲು ಉಕ್ರೇನ್‌ ಕ್ಲಸ್ಟರ್‌ ಬಾಂಬ್‌ಗಳನ್ನ (Cluster Bombs) ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂದು ಅಮೆರಿಕ ಶ್ವೇತಭವನದ (White House) ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ನೀಡಿದ್ದಾರೆ.

    ನಾವು ಉಕ್ರೇನ್‌ನಿಂದ (Ukraine) ಆರಂಭಿಕ ಹಂತದ ಪ್ರತಿಕ್ರಿಯೆಗಳನ್ನ ಪಡೆದುಕೊಂಡಿದ್ದೇವೆ. ನಾವು ಪೂರೈಸಿದ ಯುದ್ಧ ಸಾಮಗ್ರಿಗಳನ್ನ ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿದ್ದಾರೆ. ಕ್ಲಸ್ಟರ್‌ ಯುದ್ಧ ಸಾಮಗ್ರಿಗಳು ರಷ್ಯಾದ ರಕ್ಷಣಾ ಪಡೆಗಳ ಮೇಲೆ ಪ್ರಭಾವ ಬೀರುತ್ತಿದೆ. ಶತ್ರು ಸೇನೆ ರಷ್ಯಾದ (Russia) ಸಾಂದ್ರತೆಯನ್ನು ಹೊರಹಾಕಲು ಮಾತ್ರ ಕ್ಲಸ್ಟರ್ ಬಾಂಬ್‌ಗಳನ್ನು ಬಳಸುವುದಾಗಿ ಉಕ್ರೇನ್ ಪ್ರತಿಜ್ಞೆ ಮಾಡಿದೆ ಎಂದು ಹೇಳಿದ್ದಾರೆ.

    ದೊಡ್ಡ ಸಂಖ್ಯೆಯಲ್ಲಿ ಏಕಕಾಲಕ್ಕೆ ಸಣ್ಣ ಬಾಂಬ್‌ಗಳನ್ನು ಬಿಡುಗಡೆ ಮಾಡುವ ಕ್ಲಸ್ಟರ್ ಬಾಂಬ್​ಗಳನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದೆ. ಇವು ವಿಶಾಲ ಪ್ರದೇಶದಲ್ಲಿ ಭಾರೀ ಹಾನಿಯುಂಟು ಮಾಡಲಿವೆ. ಇದರಲ್ಲಿ ಕೆಲ ಬಾಂಬ್​ಗಳು ಸ್ಫೋಟಗೊಳ್ಳದೇ ದಶಕಗಳವರೆಗೆ ಭೂಮಿಯ ಮೇಲೆ ಉಳಿಯಬಹುದು. ನಂತರದಲ್ಲಿ ಇದು ಮಕ್ಕಳಿಗೆ ಅಪಾಯವನ್ನುಂಟು ಮಾಡಬಹುದು. ಇದನ್ನೂ ಓದಿ: ಯುದ್ಧದ ನಡುವೆಯೂ ತೆರೆಯುತ್ತಿದ್ದ ಉಕ್ರೇನ್‌ ಹೈಪರ್‌ಮಾರ್ಕೆಟ್‌ ರಷ್ಯಾ ಕ್ಷಿಪಣಿ ದಾಳಿಗೆ ಉಡೀಸ್‌!

    ಫೆಬ್ರವರಿ 2022 ರಲ್ಲಿ ರಷ್ಯಾದ ಆಕ್ರಮಣದಿಂದ ಪ್ರಾರಂಭವಾದ ಸಂಘರ್ಷದಲ್ಲಿ ಕ್ಲಸ್ಟರ್ ಬಾಂಬ್‌ಗಳನ್ನು ಬಳಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಹ ಅಗತ್ಯಬಿದ್ದರೆ ರಷ್ಯಾ ವಿರುದ್ಧ ಕ್ಲಸ್ಟರ್‌ ಬಾಂಬ್‌ಗಳನ್ನ ಬಳಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್‍ಗೆ ಹೋಗಿದ್ದ ಇಬ್ಬರು US ಪ್ರಜೆಗಳು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ವೇತಭವನದಲ್ಲಿ ಕೊಕೇನ್ ಪತ್ತೆ – ತೀವ್ರ ತನಿಖೆ

    ಶ್ವೇತಭವನದಲ್ಲಿ ಕೊಕೇನ್ ಪತ್ತೆ – ತೀವ್ರ ತನಿಖೆ

    ವಾಷಿಂಗ್ಟನ್: ಅಮೆರಿಕದ ಶ್ವೇತಭವನದಲ್ಲಿ (White House) ಅನುಮಾನಾಸ್ಪದ ಬಿಳಿ ಬಣ್ಣದ ವಸ್ತು ಪತ್ತೆಯಾಗಿದ್ದು, ಆ ವಸ್ತುವನ್ನು ಕೊಕೇನ್ (Cocaine) ಎಂದು ಗುರುತಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.

    ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ವಾರಾಂತ್ಯದ ಹಿನ್ನೆಲೆ ಕ್ಯಾಂಪ್ ಡೇವಿನ್‌ಗೆ ತೆರಳಿದ್ದು, ಈ ವೇಳೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ವೆಸ್ಟ್ ವಿಂಗ್‌ನ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಪ್ರದೇಶದಲ್ಲಿ ರಹಸ್ಯ ಸೇವಾ ಏಜೆಂಟ್‌ಗಳು ಬಿಳಿ ಬಣ್ಣದ ಪುಡಿಯನ್ನು ಗಮನಿಸಿದ್ದಾರೆ. ಬಳಿಕ ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ವಸ್ತುವನ್ನು ಪರೀಕ್ಷಿಸಿದ್ದು, ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಕೊಕೇನ್ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆತ – ಮಕ್ಕಳಿಬ್ಬರು ಪೊಲೀಸರ ವಶಕ್ಕೆ

    ಅಜ್ಞಾತ ವಸ್ತು ಪತ್ತೆಯಾದ ಹಿನ್ನೆಲೆ ಶ್ವೇತಭವನದ ಸಂಕೀರ್ಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಿಳಿ ಬಣ್ಣದ ವಸ್ತುವನ್ನು ಕೊಕೇನ್ ಎಂದು ಗುರುತಿಸಿದ್ದರೂ ರಹಸ್ಯ ಸೇವೆ ಈ ವಸ್ತು ಯಾವುದು ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಅದನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಶ್ವೇತಭವನಕ್ಕೆ ಹೇಗೆ ಬಂತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನಿಜವಾಗ್ಲೂ ಪಠಾಣ್‌ ಸ್ಟಾರ್‌ಗೆ ಆಕ್ಸಿಡೆಂಟ್‌ ಆಗಿತ್ತಾ- ಶಾರುಖ್ ಹೆಲ್ತ್ ಅಪ್‌ಡೇಟ್‌ನಲ್ಲೇನಿದೆ?

    ವೆಸ್ಟ್ ವಿಂಗ್ ಶ್ವೇತಭವನದ ಒಂದು ಭಾಗವಾಗಿದ್ದು, ಅದು ಅಧ್ಯಕ್ಷರ ಸಿಬ್ಬಂದಿಗಾಗಿ ಓವಲ್ ಆಫೀಸ್, ಕ್ಯಾಬಿನ್ ರೂಮ್, ಪ್ರೆಸ್ ರೂಮ್, ಎಲ್ಲವೂ ಇವೆ. ಈ ಪ್ರದೇಶದಲ್ಲಿ ಕೆಲಸ ಮಾಡುವವರು ಹಾಗೂ ಆಗಾಗ ಭೇಟಿ ನೀಡುವವರು ನೂರಾರು ಜನರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋದಿ ಪ್ರಶ್ನಿಸಿದ್ದ ಅಮೆರಿಕ ಪತ್ರಕರ್ತೆಗೆ ಕಿರುಕುಳ – ವೈಟ್‍ಹೌಸ್ ಪ್ರತಿಕ್ರಿಯೆ

    ಮೋದಿ ಪ್ರಶ್ನಿಸಿದ್ದ ಅಮೆರಿಕ ಪತ್ರಕರ್ತೆಗೆ ಕಿರುಕುಳ – ವೈಟ್‍ಹೌಸ್ ಪ್ರತಿಕ್ರಿಯೆ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಅಮೆರಿಕ (America) ಪ್ರವಾಸದ ವೇಳೆ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರಶ್ನಿಸಿದ್ದ ಪತ್ರಕರ್ತೆಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ವೈಟ್‍ಹೌಸ್ (White House) ಪ್ರತಿಕ್ರಿಯೆ ನೀಡಿದೆ.

    ಪತ್ರಕರ್ತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಕಿರುಕುಳ ನೀಡುತ್ತಿದ್ದಾರೆ. ಇದನ್ನು ಶ್ವೇತಭವನ ಬಲವಾಗಿ ಖಂಡಿಸುತ್ತದೆ. ಇದು ಪ್ರಜಾಪ್ರಭುತ್ವ ನೀತಿಗಳಿಗೆ ವಿರುದ್ಧವಾಗಿದೆ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ. ಇದನ್ನೂ ಓದಿ: ಗಡಿ ನುಸುಳಲು ಉಗ್ರರ ಸಂಚು – ಸೇನೆಯಿಂದ ಓರ್ವನ ಎನ್‍ಕೌಂಟರ್

    ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ (Sabrina Siddiqui) ಪ್ರಶ್ನಿಸಿದ್ದರು. ಇದಕ್ಕೆ ಮೋದಿ ಭಾರತದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಬಲವಾಗಿವೆ. ಇದರಿಂದ ಜಾತಿ, ಧರ್ಮ, ವಯಸ್ಸು ಅಥವಾ ಯಾವುದೇ ರೀತಿಯ ಭೌಗೋಳಿಕ ಸ್ಥಳದ ಆಧಾರದಲ್ಲಿ ತಾರತಮ್ಯ ನಡೆಯುತ್ತಿಲ್ಲ. ನಮ್ಮ ರಕ್ತದಲ್ಲೇ ಪ್ರಜಾಪ್ರಭುತ್ವ ಸೇರಿಕೊಂಡಿದೆ ಎಂದಿದ್ದರು.

    ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ, ಪತ್ರಕರ್ತೆಯನ್ನು ಹಲವರು ನಿಂದಿಸಿದ್ದಾರೆ. ಅಲ್ಲದೇ ಮಾನಸಿಕವಾಗಿ ಹಿಂಸೆಯಾಗುವಂತಹ ಪದಗಳ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಅಮೆರಿಕ ಪ್ರತಿಕ್ರಿಯಿಸಿದ್ದು, ನಾವು ಪತ್ರಿಕಾ ಸ್ವಾತಂತ್ರ್ಯಕ್ಕೆ ಬದ್ಧರಾಗಿದ್ದೇವೆ. ಪತ್ರಕರ್ತರಿಗೆ ಕಿರುಕುಳ ನೀಡುವ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಎಂದಿದೆ. ಇದನ್ನೂ ಓದಿ: ಹಾಸನದಲ್ಲಿ ಭೂಮಿ ಕಂಪಿಸಿದ ಅನುಭವ – ಮನೆ ಸೇರಲು ಹೆದರುತ್ತಿರುವ ಜನ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ

    30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ

    – 1993 ರ ಅಮೆರಿಕ ಭೇಟಿ ನೆನೆದ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 3 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಪ್ರಸ್ತುತ ಭಾರತದ ಪ್ರಧಾನಿಯಾಗಿ ಮೋದಿ ಅಮೆರಿಕ (America) ಪ್ರವಾಸ ಕೈಗೊಂಡು ಅಮೆರಿಕ ಅಧ್ಯಕ್ಷರಿಂದ ಭವಿಷ್ಯ ಸ್ವಾಗತ ಸ್ವೀಕರಿಸಿದ್ದಾರೆ. ಆದರೆ ಇದಕ್ಕೂ 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕನಂತೆ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಆ ಕ್ಷಣಗಳನ್ನು ಶ್ವೇತ ಭವನದಲ್ಲಿ ಪ್ರಧಾನಿ ನೆನಪಿಸಿಕೊಂಡಿದ್ದಾರೆ.

    1993 ರಲ್ಲಿ ನರೇಂದ್ರ ಮೋದಿ ಅವರು ಸಾಮಾನ್ಯ ನಾಗಕರಿಕನಾಗಿ ಅಮೆರಿಕಗೆ ಪ್ರವಾಸ ಕೈಗೊಂಡಿದ್ದರು. ಅಮೆರಿಕದ ಶ್ವೇತ ಭವನದ ಮುಂದೆ ಸಹಪಾಠಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದರು. ಆದರೆ ಈ ಸಲ ಭಾರತದ ಪ್ರಧಾನಿಯಾಗಿ ಅಮೆರಿಕಗೆ ಭೇಟಿ ನೀಡಿದ್ದಾರೆ. ಅದೇ ಶ್ವೇತ ಭವನದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಕೂಡ ನೀಡಲಾಯಿತು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ದಂಪತಿ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಮೋದಿ ಅವರಿಗೆ ಭವ್ಯ ಸ್ವಾಗತ ಕೋರಿದರು. ಇದನ್ನೂ ಓದಿ: ಬೆಂಗಳೂರಲ್ಲೇ ಸಿಗುತ್ತಾ ಅಮೆರಿಕ ವೀಸಾ? – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ಚಿಂತನೆ

    ಅಮೆರಿಕದ ವಿಶೇಷ ಸ್ವಾಗತಕ್ಕೆ ಮರುಗಾದ ಪ್ರಧಾನಿ ಮೋದಿ ಉತ್ತಮ ಬಾಂಧವ್ಯಕ್ಕೆ ಧನ್ಯವಾದ ಹೇಳಿದರು. ಈ ಸ್ವಾಗತ ಭಾರತದ 140 ಕೋಟಿ ಜನರಿಗೆ ಸಲ್ಲಿಸಿದ ಗೌರವ. ಅಮೆರಿಕಾದಲ್ಲಿರುವ ಭಾರತೀಯರಿಗೆ ಸಲ್ಲಿಸಿದ ಗೌರವ. ಈ ಗೌರವ ಸಲ್ಲಿಸಿದ ಜೋ ಬೈಡನ್ ದಂಪತಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದರು.

    ಮೂರು ದಶಕದ ಹಿಂದೆ ನಾನು ಸಾಮಾನ್ಯ ವ್ಯಕ್ತಿಯಾಗಿ ಅಮೆರಿಕ ಪ್ರವಾಸಕ್ಕೆ ಬಂದಿದ್ದೆ. ಆಗ ವೈಟ್‌ಹೌಸ್‌ನ್ನು ಹೊರಗಡೆಯಿಂದ ನೋಡಿದೆ. ಈಗ ಪ್ರಧಾನಿಯಾಗಿ ಇಲ್ಲಿಗೆ ಬಂದಿದ್ದೇನೆ. ಮೊದಲ ಬಾರಿಗೆ ಇಷ್ಟು ಪ್ರಮಾಣದ ಭಾರತೀಯರನ್ನು ನೋಡುತ್ತಿದ್ದೇನೆ ಎಂದು ಮಧುರ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ಭಾರತೀಯ ಸಮುದಾಯದ ಜನರು ತಮ್ಮ ಜ್ಞಾನ, ಶಕ್ತಿ, ಸಾಮರ್ಥ್ಯ, ನಿಷ್ಠೆಯಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದೇಶಗಳ ನಡುವೆ ಸಂಬಂಧ ಹೆಚ್ಚಿಸುತ್ತಿದ್ದಾರೆ. ಎರಡು ದೇಶಗಳು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಆಧಾರಿತವಾಗಿದೆ. ಎರಡು ದೇಶಗಳ ವಿವಿಧತೆಯನ್ನು ನಾವು ಗೌರವಿಸುತ್ತೇವೆ. ಕೊರೊನಾ ನಂತರದ ಕಾಲದಲ್ಲಿ ಭಾರತ-ಅಮೆರಿಕ ಶಕ್ತಿ ಹೆಚ್ಚುತ್ತಿದೆ. ಜಾಗತಿಕ ಒಳಿತಗಾಗಿ ಒಂದಾಗಿ ಕೆಲಸ ಮಾಡಲು ಬದ್ಧವಾಗಿದ್ದೇವೆ. ಎರಡು ದೇಶಗಳ ಒಗ್ಗಟ್ಟು ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ಎಂದಿನಂತೆ ಇಂದಿನ ಮಾತುಕತೆಯೂ ಸಕಾರಾತ್ಮಕವಾಗಿರಲಿದೆ ಎಂದು ಆಶಯ ವ್ಯಕ್ತಪಡಿಸಿದರು.

    ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್ ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಇದಕ್ಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಅಮೆರಿಕ ಮತ್ತು ಭಾರತದ ಧ್ವಜ ಹೊಸ ಅವಕಾಶಗಳೊಂದಿಗೆ ಆಕಾಶದತ್ತ ಮತ್ತಷ್ಟು ಏರಲಿದೆ. ವಿಶೇಷ ಆತಿಥ್ಯ ನೀಡಿದ್ದಕ್ಕಾಗಿ 140 ಕೋಟಿ ಭಾರತೀಯರ ಪರವಾಗಿ ಮತ್ತೊಮ್ಮೆ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

  • ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅಮರಿಕ ಅಧ್ಯಕ್ಷ ಜೋ ಬೈಡನ್ (Joe Biden) ದಂಪತಿಗೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ವಿದೇಶದ ಅತಿಥಿಗಳು ಭಾರತಕ್ಕೆ ಆಗಮಿಸಿದಾಗ ಅಥವಾ ತಾವೇ ವಿದೇಶಕ್ಕೆ ಹೋದಾಗ ಮೋದಿ ಪ್ರತಿ ಬಾರಿ ಭಾರತೀಯ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅದೇ ರೀತಿಯಾಗಿ ಈ ಬಾರಿಯೂ ಬೈಡನ್ ದಂಪತಿಗೆ ಹಲವು ಉಡುಗೊರೆಯನ್ನು ನೀಡಿದ್ದಾರೆ. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನಕ್ಕೆ (White House) ಭೇಟಿ ನೀಡಿದ ಮೋದಿ ಅವರು ಜೋ ಬೈಡನ್ ದಂಪತಿಗೆ ಮೈಸೂರಿನಲ್ಲಿ (Mysuru) ಪ್ರಖ್ಯಾತಿ ಹೊಂದಿರುವ ಶ್ರೀಗಂಧದಿಂದ (Sandal) ತಯಾರಿಸಲಾದ ಪೆಟ್ಟಿಗೆಯಲ್ಲಿ ನಾನಾರೀತಿಯ ಉಡುಗೊರೆಗಳನ್ನು ನೀಡಿದ್ದಾರೆ. ಈ ಉಡುಗೊರೆ ಪೆಟ್ಟಿಗೆಯನ್ನು ರಾಜಸ್ಥಾನದಲ್ಲಿರುವ (Rajasthan) ಜೈಪುರದ ಖ್ಯಾತ ಕುಶಲಕರ್ಮಿಯೊಬ್ಬರು ತಯಾರಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ‘ಯೋಗ’ – ಗಿನ್ನಿಸ್‌ ದಾಖಲೆ ಬರೆದ ವಿಶ್ವಸಂಸ್ಥೆ ಕೇಂದ್ರ ಕಚೇರಿ

    ಈ ಪೆಟ್ಟಿಗೆಯಲ್ಲಿ ಪೇಪಿಯರ್ ಮಾಚೆ (Papier Mache) ಎಂಬ ಸಣ್ಣ ಪೆಟ್ಟಿಗೆಯನ್ನು ಇರಿಸಲಾಗಿದೆ. ಈ ಸಣ್ಣ ಪೆಟ್ಟಿಗೆಯಲ್ಲಿ ಒಂದು ಹಸಿರು ಡೈಮಂಡ್ (Diamond) ಅನ್ನು ಇರಿಸಲಾಗಿದೆ. ಈ ಪೆಟ್ಟಿಗೆ ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಶ್ಮೀರದ ಪೇಪಿಯರ್ ಮಾಚೆ ಎಂಬ ಕಾಗದದ ತಿರುಳಿನಿಂದ ತಯಾರಿಸಲಾಗಿದೆ. ಈ ಹಸಿರು ಬಣ್ಣದ ಡೈಮಂಡ್ ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಮತ್ತು ಸುಸ್ಥಿರ ಅಂತರಾಷ್ಟ್ರೀಯ ಸಂಬಂಧಗಳನ್ನು ಸಂಕೇತಿಸುತ್ತದೆ. ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

    ಅಲ್ಲದೇ ಈ ಗಂಧದ ಪೆಟ್ಟಿಗೆಯಲ್ಲಿ ಹಿಂದೂಗಳು ಪೂಜಿಸುವ ವಿಘ್ನನಿವಾರಕ ಎಂದೇ ಖ್ಯಾತಿಯಾಗಿರುವ ಗಣೇಶನ ಮೂರ್ತಿಯನ್ನು (Ganesha Idol) ಇರಿಸಲಾಗಿದೆ. ಈ ಮೂರ್ತಿಯನ್ನು ಕೋಲ್ಕತ್ತಾದ ಐದನೇ ತಲೆಮಾರಿನ ಬೆಳ್ಳಿ ತಯಾರಿಸುವ ಅಕ್ಕಸಾಲಿಗರು ಕರಕುಶಲತೆಯಿಂದ ತಯಾರಿಸಿದ್ದಾರೆ. ಈ ಪೆಟ್ಟಿಗೆಯಲ್ಲಿ ಮನೆಯನ್ನು ಬೆಳಗುವ ಬೆಳ್ಳಿಯ ದೀಪಗಳನ್ನು (Silver Diyas) ಒಳಗೊಂಡಿದೆ. ಇದನ್ನೂ ಸಹ ಇದೇ ಅಕ್ಕಸಾಲಿಗರು ತಯಾರಿಸಿರುತ್ತಾರೆ. ಇದನ್ನೂ ಓದಿ: ನಾನೂ ಸಹ ಮೋದಿಯ ಅಭಿಮಾನಿಯಾಗಿದ್ದೇನೆ: ಎಲಾನ್ ಮಸ್ಕ್

    ಮೋದಿ ಅಮೇರಿಕ ಅಧ್ಯಕ್ಷರಿಗೆ ನೀಡಿದ ಪೆಟ್ಟಿಗೆ 10 ದಾನಗಳನ್ನು (Danas) ಒಳಗೊಂಡಿದೆ. ಈ ದಾನಗಳಲ್ಲಿ ಮೊದಲನೆಯದು ಗೋದಾನ. ಗೋದಾನದ ಬದಲಿಗೆ ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ (West Bengal) ನುರಿತ ಕುಶಲಕರ್ಮಿಗಳು ತಯಾರಿಸಿದ ಬೆಳ್ಳಿಯ ತೆಂಗಿನಕಾಯಿಯನ್ನು ದಾನವನ್ನಾಗಿ ನೀಡಿದ್ದಾರೆ. ಭೂದಾನದ ಬದಲಿಗೆ ಕರ್ನಾಟಕದ ಮೈಸೂರಿನಿಂದ ತಂದ ಪರಿಮಳಯುಕ್ತ ಶ್ರೀಗಂಧದ ತುಂಡನ್ನು ನೀಡಿದ್ದಾರೆ. ತಿಲದಾನವಾಗಿ (ಎಳ್ಳು ದಾನ) ತಮಿಳುನಾಡಿನಿಂದ (Tamil Nadu) ಪಡೆದ ಬಿಳಿ ಎಳ್ಳನ್ನು ಬೈಡನ್ ದಂಪತಿಗೆ ನೀಡಿದ್ದಾರೆ. ಇನ್ನು ಹಿರಣ್ಯದಾನವಾಗಿ (ಚಿನ್ನದಾನ) ರಾಜಸ್ಥಾನದಲ್ಲಿ ತಯಾರಿಸಲ್ಪಟ್ಟ 24 ಕ್ಯಾರೆಟ್ ಹಾಲ್‌ಮಾರ್ಕ್ ಹೊಂದಿರುವ ಪರಿಶುದ್ಧ ಚಿನ್ನದ ನಾಣ್ಯವನ್ನು ನೀಡಿದ್ದಾರೆ. ರುಪಾಯಿದಾನವಾಗಿ 99.5% ಹಾಲ್‌ಮಾರ್ಕ್ ಹೊಂದಿರುವ ಬೆಳ್ಳಿಯ ನಾಣ್ಯವನ್ನು ನೀಡಲಾಗಿದೆ. ಲವಣದಾನವಾಗಿ ಗುಜರಾತ್‌ನಿಂದ (Gujarat) ತಂದ ಉಪ್ಪನ್ನು ಸಮರ್ಪಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ನಾವು ತಟಸ್ಥವಾಗಿಲ್ಲ: ಮೋದಿ

    ಮುಂದುವರೆದಂತೆ ಈ ಪೆಟ್ಟಿಗೆಯು ಪಂಜಾಬ್‌ನಲ್ಲಿ (Punjab) ತಯಾರಿಸಿದ ತುಪ್ಪ ಮತ್ತು ಬೆಣ್ಣೆಯನ್ನು ಒಳಗೊಂಡಿದೆ. ಅಲ್ಲದೇ ಜಾರ್ಖಂಡ್‌ನಲ್ಲಿ (Jharkhand) ಕೈಯಿಂದ ತಯಾರಿಸಿದ ರೇಷ್ಮೆ ಬಟ್ಟೆ, ಉತ್ತರಾಖಂಡದ ಉದ್ದ ಅಕ್ಕಿ ಮತ್ತು ಮಹಾರಾಷ್ಟ್ರದ ಬೆಲ್ಲವನ್ನು ಒಳಗೊಂಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಎಲೋನ್‌ ಮಸ್ಕ್‌ ಭೇಟಿಯಾಗ್ತಾರೆ ಪ್ರಧಾನಿ ಮೋದಿ

    1973ರಲ್ಲಿ ಡಬ್ಲ್ಯುಬಿ ಯೀಟ್ಸ್ ಭಾರತೀಯ ಉಪನಿಷತ್ (Upanishads) ಇಂಗ್ಲಿಷ್‌ನಲ್ಲಿ ಅನುವಾದ ಮಾಡಿದ್ದರು ಈ ಅನುವಾದಕ್ಕೆ ಲೇಖಕರಾಗಿ ಪುರೋಹಿತ ಸ್ವಾಮಿ ಸಹ ಸಹಕಾರ ನೀಡಿದ್ದರು. ಇದು ಯೀಟ್ಸ್ ಅವರ ಅಂತಿಮ ಕೃತಿಗಳಲ್ಲಿ ಒಂದಾಗಿದ್ದು, ಈ ಪುಸ್ತಕದ ಮೊದಲ ಆವೃತ್ತಿಯಾದ ‘ದಿ ಟೆನ್ ಪ್ರಿನ್ಸಿಪಾಲ್ ಉಪನಿಷತ್’ನ ಪ್ರತಿಯನ್ನು ಪ್ರಧಾನಿ ಮೋದಿಯವರು ಜೋ ಬೈಡನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಲ್ಲದೇ ಅಮೆರಿಕದ ಪ್ರಥಮ ಮಹಿಳೆ ಡಾ.ಜಿಲ್ ಬೈಡನ್ ಅವರಿಗೆ 7.5 ಕ್ಯಾರೆಟ್‌ನ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

  • ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ವಾಷಿಂಗ್ಟನ್‌: ಎರಡನೇ ದಿನದ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈಗ ವಾಷಿಂಗ್ಟನ್‌ ತಲುಪಿದ್ದಾರೆ.

    ಅಂತಾರಾಷ್ಟ್ರೀಯ ಯೋಗ ದಿನದಂದು (International Yoga Day) ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಿದ ಬಳಿಕ ವಾಷಿಂಗ್ಟನ್‌ಗೆ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.   ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

    ಆಂಡ್ರ್ಯೂಸ್ ಏರ್ ಬೇಸ್‌ನಲ್ಲಿ ಇಳಿದ ಮೋದಿ ಅವರಿಗೆ ಗೌರವ ವಂದನೆಯನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು.

    ನಂತರ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನಕ್ಕೆ  (White House) ಆಗಮಿಸಿದ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡನ್‌ (Joe Biden) ಮತ್ತು ಪತ್ನಿ ಜಿಲ್ ಬಿಡೆನ್ (Jill Biden) ಸ್ವಾಗತಿಸಿದರು. ವಿಶೇಷವಾಗಿ ವೈಟ್‍ಹೌಸ್‍ನಲ್ಲಿ ಪ್ರಧಾನಿ ಮೋದಿಗೆ ಬೈಡೆನ್ ದಂಪತಿ ಔತಣಕೂಟ ಏರ್ಪಡಿಸಿದ್ದಾರೆ.

    ಮೋದಿಗೆ ಸಸ್ಯಾಹಾರಿ ಭೋಜನವನ್ನು ಆಯೋಜಿಸಲಾಗಿದ್ದು ವಿಶೇಷವಾಗಿ ಸಿರಿಧಾನ್ಯಗಳ ಖಾದ್ಯ ಮಾಡಲಾಗಿದೆ. ಮೋದಿ ಔತಣಕೂಟಕ್ಕೆ ಬೈಡೆನ್ ಪತ್ನಿ ಉತ್ಸುಕರಾಗಿದ್ದಾರೆ. ಖುದ್ದು ಜಿಲ್ ಬೈಡೆನ್ ಅವರೇ ಖಾದ್ಯ ತಯಾರಿಸಿದ್ದಾರೆ ಎಂದು ವೈಟ್‍ಹೌಸ್ ಶೆಫ್ ಹೇಳಿದ್ದಾರೆ.

    ಇಂದು ಮೋದಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಎರಡನೇ ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ.

  • ಶ್ವೇತಭವನದಲ್ಲಿ ಮದುವೆಯಾಗಲಿದ್ದಾರೆ ಜೋ ಬೈಡನ್ ಮೊಮ್ಮಗಳು

    ಶ್ವೇತಭವನದಲ್ಲಿ ಮದುವೆಯಾಗಲಿದ್ದಾರೆ ಜೋ ಬೈಡನ್ ಮೊಮ್ಮಗಳು

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಮೊಮ್ಮಗಳು (Grand Daughter) ನವೋಮೆ ಬೈಡನ್ ಹಾಗೂ ಪೀಟರ್ ನೀಲ್ ಅವರು ವೈಟ್ ಹೌಸ್‍ನ (White House) ಸೌತ್ ಲಾನ್‍ನಲ್ಲಿ ಶನಿವಾರ ವಿವಾಹವಾಗಲಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆಯಲಿದ್ದಾರೆ.

    ಜೋ ಬೈಡನ್ ಅವರ ಮೊಮ್ಮಗಳು ನೋಮಿ(28) ಮತ್ತು ನೀಲ್ (25) ಅವರು 4 ವರ್ಷಗಳ ಹಿಂದೆ ನ್ಯೂಯಾರ್ಕ್‍ನಲ್ಲಿ ಸ್ನೇಹಿತರ ಮೂಲಕ ಭೇಟಿಯಾಗಿದ್ದರು. ಅಂದಿನಿಂದ ಅವರಿಬ್ಬರು ಒಟ್ಟಿಗೆ ನೆಲೆಸಿದ್ದರು. ನೋಮಿ ವಕೀಲರಾಗಿದ್ದರೆ, ನೀಲ್ ಇತ್ತೀಚೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ವಾಷಿಂಗ್ಟನ್‍ನಲ್ಲಿ ವಾಸಿಸುತ್ತಿದ್ದಾರೆ.

    ಇದು ವೈಟ್ ಹೌಸ್‍ನ ಇತಿಹಾಸದಲ್ಲಿ 19ನೇ ವಿವಾಹವಾಗಿದೆ (Wedding). ಈವರೆಗೆ ಶ್ವೇತಭವನದಲ್ಲಿ ನಡೆದ 18 ಮದುವೆಯಲ್ಲಿ 9 ಹಿಂದಿನ ಅಮೆರಿಕದ ಅಧ್ಯಕ್ಷರ ಮಕ್ಕಳ ಮದುವೆ ಆಗಿದೆ. ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರ ಮೊಮ್ಮಗಳು ವೈಟ್‍ಹೌಸ್‍ನಲ್ಲಿ ಮದುವೆ ಆಗಲಿದ್ದಾರೆ ಎಂದು ವೈಟ್‍ಹೌಸ್ ಹಿಸ್ಟಾರಿಕಲ್ ಅಸೋಸಿಯೇಷನ್ ತಿಳಿಸಿದೆ. ಇದನ್ನೂ ಓದಿ: ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ

    ಬೈಡನ್ ಪತ್ನಿ ಜಿಲ್ ಬೈಡನ್ ಮಾತನಾಡಿ, ತಮ್ಮ ಮೊಮ್ಮಗಳ ಮದುವೆಯನ್ನು ನೋಡಲು ಉತ್ಸುಕರಾಗಿದ್ದೇನೆ. ಇದು ಅವಳ ಆಯ್ಕೆ ಆಗಿದೆ ಎಂದರು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧ

    Live Tv
    [brid partner=56869869 player=32851 video=960834 autoplay=true]

  • ಕೊರೊನಾದಿಂದ US ಅಧ್ಯಕ್ಷ ಜೋ ಬೈಡನ್ ಗುಣಮುಖ – ಪತ್ನಿಗೆ ಸೋಂಕು

    ಕೊರೊನಾದಿಂದ US ಅಧ್ಯಕ್ಷ ಜೋ ಬೈಡನ್ ಗುಣಮುಖ – ಪತ್ನಿಗೆ ಸೋಂಕು

    ವಾಷಿಂಗ್ಟನ್: ಯುಎಸ್ ಅಧ್ಯಕ್ಷ ಜೋ ಬೈಡನ್ ಇಂದು ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ ಜೋ ಬೈಡನ್ ಪತ್ನಿ ಹಾಗೂ ಯುಎಸ್ ಪ್ರಥಮ ಮಹಿಳೆಯೂ ಆಗಿರುವ ಜಿಲ್ ಬೈಡನ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

    ಸೌಮ್ಯ ಲಕ್ಷಣಗಳು ಕಂಡುಬಂದಿದ್ದು, ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವುದಾಗಿ ಇಂದು ಶ್ವೇತಭವನ ತಿಳಿಸಿದೆ. ಇದನ್ನೂ ಓದಿ: ಹಣ ಕೊಡದಿದ್ರೆ ಗನ್‍ನಲ್ಲಿ ಶೂಟ್ ಮಾಡೋ ಬೆದರಿಕೆ- 100 ರೂ. ಕೊಡುವಂತೆ ಲಾರಿ ಚಾಲಕನಿಗೆ ಡಿಮ್ಯಾಂಡ್

    ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಜೋ ಬೈಡನ್ ಅವರೊಂದಿಗೆ ನಿನ್ನೆ ರಜೆಯಲ್ಲಿದ್ದಾಗ ಸೌಮ್ಯ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ. ಸದ್ಯ ಅವರಿಗೆ ಆಂಟಿವೈರಲ್ ಪಾಕ್ಸ್ಲೋವಿಡ್ ಔಷಧವನ್ನು ಶಿಫಾರಸು ಮಾಡಲಾಗಿದೆ. ಕನಿಷ್ಠ 5 ದಿನಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೈಕೋರ್ಟ್‌ನ ಐವರು ಹೆಚ್ಚುವರಿ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದ ರಾಜ್ಯಪಾಲರು

    ಜೋ ಬೈಡನ್‌ಗೆ ಇಂದು ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೂ ರೋಗ ನಿಯಂತ್ರಣದ ಸಲುವಾಗಿ 10 ದಿನಗಳ ಕಾಲ ಮನೆಯಲ್ಲೇ ಇರಲಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಿದ್ದಾರೆ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]