Tag: white flour dosa

  • ಫಟ್​ ಅಂತ ಮಾಡಬಹುದು ಮೈದಾ ದೋಸೆ

    ಫಟ್​ ಅಂತ ಮಾಡಬಹುದು ಮೈದಾ ದೋಸೆ

    ನಾವು ಬೆಳಗಿನ ತಿಂಡಿ  ಏನು ಅಂತ ಯೋಚನೆ ಮಾಡುವುದು ಸಹಜ. ಆದರೆ ಅದಕ್ಕೆ ಉತ್ತರ ನಮ್ಮ ಪಾಕವಿಧಾನದಲ್ಲಿದೆ. ಉದಾಹರಣೆಗೆ ದೋಸೆಯಲ್ಲಿ ಎಷ್ಟೆಲ್ಲಾ ವಿಧದ ದೋಸೆ ಮಾಡಬಹುದು ಎಂಬುದು ಏಣಿಸಲು ಸಾಧ್ಯವಿಲ್ಲ. ಹೌದು, ನೀವು ಹೆಚ್ಚು ಮಸಾಲೆ ದೋಸೆ, ಸೆಟ್​ ದೋಸೆ ಈರುಳ್ಳಿ ದೋಸೆ ಮಾಡುತ್ತೇವೆ. ದೋಸೆಗಳನ್ನು ಮಾಡಲು ಹಿಂದಿನ ದಿನ ಅಕ್ಕಿಯನ್ನು ನೆನಸಿ ಮಾಡಬೇಕಾಗುತ್ತದೆ. ಆದರೆ ಈ ದೋಸೆ ಮಾಡಲು ಕೇವಲ 10 ನಿಮಿಷ ಸಾಕು. ಫಟ್​ ಅಂತ ತಯಾರಾಗುವ ಈ ಸರಳ ದೋಸೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ಮೈದಾ ಹಿಟ್ಟು- 2ಕಪ್
    * ಹಸಿಮೆಣಸಿನಕಾಯಿ- 4
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಜೀರಿಗೆ- 1ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1 ಕಪ್

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ಕಲಸುತ್ತಾ ಬನ್ನಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಈಗ ಹೆಚ್ಚಿಕೊಂಡ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಜೀರಿಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಣ ಮಾಡಬೇಕು. ಈಗ ಹಿಟ್ಟು ಸಿದ್ಧವಾಗಿದೆ.

    * ದೋಸೆ ಮಾಡುವವನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ, ಅದಕ್ಕೆ ಅಡುಗೆ ಎಣ್ಣೆ ಹಾಕಿ ಕಾಯಿಸಬಹುದು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ


    * ದೋಸೆ ಹಿಟ್ಟನ್ನು ಹಾಕಿ, ಅಗತ್ಯಕ್ಕೆ ಅನುಸಾರವಾಗಿ ಎಣ್ಣೆಯನ್ನು ಹಾಕಿ ಬೇಯಿಸಿದರೆ ರುಚಿಯಾದ ದೋಸೆ ಸವಿಯಲು ಸಿದ್ಧವಾಗುತ್ತದೆ.