Tag: white field

  • ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

    ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

    ಬೆಂಗಳೂರು: ಖಾಸಗಿ ಕಂಪನಿಯೊಂದರ ಸರ್ವರ್ ಹ್ಯಾಕ್ ಮಾಡಿ 3.78 ಕೋಟಿ ರೂ. ಹೆಚ್ಚಿನ ಹಣವನ್ನ ಸೈಬರ್ ಕಳ್ಳತನ ಮಾಡಿರುವ ಘಟನೆ ವೈಟ್‌ಫೀಲ್ಡ್‌ನಲ್ಲಿ (Whitw Field) ನಡೆದಿದೆ.

    ಅದೇ ಕಂಪನಿಯ ನೌಕರ ರಾಹುಲ್ ಬಂಧಿತ ಆರೋಪಿ. ಈ ಕಂಪನಿ ಕ್ರಿಪ್ಟೋ ಕರೆನ್ಸಿಯನ್ನು ಎಕ್ಸ್ಚೇಂಜ್ ಮಾಡುವ ಫ್ಲಾಟ್‌ಫಾರಂ ಆಗಿದೆ.ಇದನ್ನೂ ಓದಿ: Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಪೊಲೀಸರ ಮಾಹಿತಿ ಪ್ರಕಾರ, ಇಂದು (ಜು.30) ಬೆಳಗಿನ ಜಾವ 2:37ರ ಸುಮಾರಿಗೆ ಕಂಪನಿಯ ವ್ಯಾಲೆಟ್‌ನಿಂದ ಇನ್ನೊಂದು ವ್ಯಾಲೆಟ್‌ಗೆ 1 USDT  ವರ್ಗಾವಣೆಯಾಗಿದೆ. ನಂತರ 9:40ರ ಸುಮಾರಿಗೆ ಮತ್ತೆ ಸರ್ವರ್‌ಗೆ ಎಂಟ್ರಿಯಾಗಿ 44 ಮಿಲಿಯನ್ USDT (ಅಂದರೆ ಬರೋಬ್ಬರಿ 378 ಕೋಟಿ ರೂ.) ವರ್ಗಾವಣೆಯಾಗಿದೆ.

    ಬಳಿಕ ಪೊಲೀಸರು ಆಂತರಿಕ ತನಿಖೆ ನಡೆಸಿದಾಗ, ಬಂಧಿತ ಆರೋಪಿಯು ತನ್ನ ಕಂಪನಿ ನೀಡಿದ ಲ್ಯಾಪ್‌ಟಾಪ್‌ನಲ್ಲಿ ಪಾರ್ಟ್ಟೈಮ್ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆದಿರುವುದಾಗಿ ಬೆಳಕಿಗೆ ಬಂದಿದೆ. ಆತ ಕಂಪನಿಯ ಲ್ಯಾಪ್‌ಟಾಪ್ ಬಳಸಿ ಕೆಲಸ ಮಾಡುವ ವೇಳೆ ಹ್ಯಾಕ್ ಮಾಡಲಾಗಿದೆ. ಜೊತೆಗೆ ಆತನ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸರ್ವರ್‌ಗೆ ಎಂಟ್ರಿಯಾಗಿದ್ದಾರೆ. ಬಳಿಕ ಒಟ್ಟು 44 ಮಿಲಿಯನ್ ಡಾಲರ್ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಭಾರತದಲ್ಲೇ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾಗಿರುವ ನೆಬಿಲೊ ಟೆಕ್ನಾಲಜೀಸ್ ಸದ್ಯ ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕರ್ನಾಟಕದಲ್ಲಿ ನಡೆದಿರುವ ಅತಿದೊಡ್ಡ ಸೈಬರ್ ವಂಚನೆಯಾಗಿದ್ದು, ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ.ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ 1.45 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ

  • ಈಜುಕೊಳದಲ್ಲಿ ಬಿದ್ದು ಬಾಲಕಿ ಅನುಮಾನಾಸ್ಪದ ಸಾವು ಕೇಸ್‌ – 7 ಮಂದಿ ಅರೆಸ್ಟ್‌

    ಈಜುಕೊಳದಲ್ಲಿ ಬಿದ್ದು ಬಾಲಕಿ ಅನುಮಾನಾಸ್ಪದ ಸಾವು ಕೇಸ್‌ – 7 ಮಂದಿ ಅರೆಸ್ಟ್‌

    ಬೆಂಗಳೂರು: ಅಪಾರ್ಟ್ಮೆಂಟ್‌ವೊಂದರ ಈಜುಕೊಳದಲ್ಲಿ (Swimming Pool) ಬಿದ್ದು 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ 7 ಮಂದಿಯನ್ನು ವರ್ತೂರು ಪೊಲೀಸರು (Varthur Police) ಬಂಧಿಸಿದ್ದಾರೆ.

    ಸರಿಸುಮಾರು ಒಂದೂವರೆ ತಿಂಗಳ ಬಳಿಕ ಆರೋಪಿಗಳನ್ನ (Accused) ಬಂಧಿಸಿದ್ದಾರೆ. ದೇಬಾಶೀಸ್ ಸಿನ್ಹಾ, ಜಾವೀದ್, ಸಂತೋಷ್ ಮಾಹಾರಾಣ, ಬಿಕಾಶ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಬಂಧಿತ ಆರೋಪಿಗಳು.

    ಏನಿದು ಪ್ರಕರಣ?
    ಕಳದೆ ಡಿಸೆಂಬರ್‌ 28ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ (White Field) ವರ್ತೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್‌ನಲ್ಲಿ 10 ವರ್ಷದ ಬಾಲಕಿ ಈಜುಕೊಳದಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಈಜುಕೊಳದಲ್ಲಿ ಬಿದ್ದ ವೇಳೆ ವಿದ್ಯುತ್‌ ಶಾಕ್‌ ಸಂಭವಿಸಿ ಮೃತಪಟ್ಟಿದ್ದಳು ಎಂದು ಹೇಳಲಾಗಿತ್ತು. ಘಟನೆ ಸಂಬಂಧ ಮೃತ ಬಾಲಕಿ ಮಾನ್ಯಾಳ ತಂದೆ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ ಸಿಎಎ ಜಾರಿ – ಗೃಹ ಸಚಿವ ಅಮಿತ್ ಶಾ ಭರವಸೆ

    ಆರೋಪಿಗಳು ಸಿಕ್ಕಿಬಿದ್ದದ್ದು ಹೇಗೆ?
    ಬಾಲಕಿ ತಂದೆ ದೂರಿನ ಅನ್ವಯ ಕೇಸ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿಯೂ ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಆ ನಂತರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವರದಿ ಹಸ್ತಾಂತರಿಸಲಾಗಿತ್ತು. ಎಫ್‌ಎಸ್‌ಎಲ್‌ ವರದಿಯಲ್ಲಿ ಬಾಲಕಿಗೆ ಕರೆಂಟ್ ಶಾಕ್‌ ತಗುಲಿರುವುದು ದೃಢಪಟ್ಟಿತ್ತು. ಇದನ್ನೂ ಓದಿ: ಮಾನವನ ದೇಹಕ್ಕೆ ಕೃತಕ ಉಸಿರಾಟ ಒದಗಿಸುವ ಕಬ್ಬಿಣದ ಶ್ವಾಸಕೋಶ – ಹೇಗೆ ಕೆಲಸ ಮಾಡುತ್ತೆ?

    ಈ ಸಂಬಂಧ ಅಪಾರ್ಟ್ಮೆಂಟ್‌ ನಿರ್ವಹಣೆ ಮಾಡುತ್ತಿದ್ದವರನ್ನ ವಿಚಾರಣೆ ಮಾಡಿದಾಗ, ಸರಿಯಾಗಿ ನಿರ್ವಹಣೆ ಮಾಡದಿರುವುದೇ ಬಾಲಕಿ ಸಾವಿಗೆ ಕಾರಣ ಎಂಬುದು ಗೊತ್ತಾಯಿತು. ಹಾಗಾಗಿ ನಿರ್ವಹಣಾ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಲಕಿ ಮೃತಪಟ್ಟಿರುವ ಆರೋಪದ ಮೇಲೆ ವರ್ತೂರು ಪೊಲೀಸರು ಒಟ್ಟು 7 ಮಂದಿಯನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ

  • ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು

    ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು

    ಬೆಂಗಳೂರು: ವಿದ್ಯುತ್ ತಂತಿ (Electric Wire) ತುಳಿದು ತಾಯಿ-ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಪತ್ತೆಯಾದ ಹಿನ್ನೆಲೆ ಐವರು ಬೆಸ್ಕಾಂ (BESCOM) ಅಧಿಕಾರಿಗಳನ್ನು ಅಮಾನತು (Suspend) ಮಾಡಲಾಗಿದೆ.

    ಇಬ್ಬರು ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇಂಧನ ಇಲಾಖೆಯ ನಿರ್ದೇಶನ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ನಾಲ್ಕನೇ ಪೂರ್ವ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸುಬ್ರಮಣ್ಯ.ಟಿ, ಸಹಾಯಕ ಎಂಜಿನಿಯರ್ ಚೇತನ್ ಎಸ್, ಹಿರಿಯ ಎಂಜಿನಿಯರ್ ರಾಜಣ್ಣ, ಕಿರಿಯ ಪವರ್ ಮ್ಯಾನ್ ಮಂಜುನಾಥ್ ರೇವಣ್ಣ, ಲೈನ್‌ಮ್ಯಾನ್ ಬಸವರಾಜು ಎಂಬವರನ್ನು ಅಮಾನತು ಮಾಡಲಾಗಿದೆ. ಪೂರ್ವ ವಿಭಾಗದ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಬಾಬು ಮತ್ತು ಬೆಸ್ಕಾಂ ವೈಟ್ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀರಾಮು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

    ಭಾನುವಾರ ಬೆಂಗಳೂರಿನ (Bengaluru) ವೈಟ್ ಫೀಲ್ಡ್‌ನ (Whitefield) ಕಾಡುಗೋಡಿಯಲ್ಲಿ (Kadugodi) ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಯಿ ಸೌಂದರ್ಯ ಹಾಗೂ ಮಗಳು ಲಿಯಾ ಸಾವನ್ನಪ್ಪಿದ ದುರ್ದೈವಿಗಳು. ತಮಿಳುನಾಡು  (Tamil Nadu) ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಟಿಕೆ ವಸ್ತುಗಳಿದ್ದ ಗೋದಾಮು ಧಗಧಗ – ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆ ರೆಸ್ಕ್ಯೂ

    ದೀಪಾವಳಿ ಹಬ್ಬಕ್ಕೆ ಚೆನ್ನೈಗೆ ಹೋಗಿದ್ದ ಸೌಂದರ್ಯ, ಪತಿ ಸಂತೋಷ್ ಹಾಗೂ 9 ತಿಂಗಳ ಕಂದಮ್ಮ ಲಿಯಾ ಭಾನುವಾರ ಮುಂಜಾನೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ದಾರಿಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಸೌಂದರ್ಯ ಅದನ್ನು ತುಳಿದಿದ್ದರು. ಈ ವೇಳೆ ಪತಿ ಸಂತೋಷ್ ಕೈಗೆ ವಿದ್ಯುತ್ ಶಾಕ್ ಹೊಡೆದು ಅದೃಷ್ಟವಶಾತ್ ಅವರು ಪಕ್ಕಕ್ಕೆ ಬಿದ್ದಿದ್ದರು. ಆದರೆ ಪತಿ ಎದುರೇ ಪತ್ನಿ ಹಾಗೂ ಕಂದಮ್ಮ ವಿದ್ಯುತ್ ಶಾಕ್‌ಗೆ ಸುಟ್ಟು ಕರಕಲಾಗಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೂಕಂಪ – ಭಯಭೀತರಾದ ಜನ

  • ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದಲೇ ನೈತಿಕ ಪೊಲೀಸ್ ಗಿರಿ (Moral Policing) ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಕೂರಲು ಅನುಮತಿ ಬೇಕಾ ಎಂಬ ಪ್ರಶ್ನೆಯೊಂದು ಎದ್ದಿದೆ.

    https://twitter.com/ArshaLatif/status/1619927669898100736

    ಹೌದು. ಶನಿವಾರ ಮಧ್ಯಾಹ್ನದ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ವೈಟ್‍ಫೀಲ್ಡ್ (Whitefield) ಕುಂದಲಹಳ್ಳಿ ಪಾರ್ಕ್ (Kundalahalli Park) ನಲ್ಲಿ ಕುಳಿತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಪೇದೆ, ಇಲ್ಲಿ ಹಾಗೇ ಕುಳಿತುಕೊಳ್ಳುವ ಹಾಗಿಲ್ಲ ಅಂತಾ ಫೊಟೋ ತೆಗೆದುಕೊಂಡಿದ್ದಾರೆ. ಅಲ್ಲದೆ 1 ಸಾವಿರ ದಂಡ ಹಾಕಿದ್ದಾರಂತೆ. ಇದೀಗ ಹಣ ಪಡೆದ ಪೇದೆ ವಿರುದ್ಧ ಹಾಗೂ ಪೇದೆ ಬಂದಿದ್ದ ಬೈಕ್ ಫೋಟೋ ಸಮೇತ ಟ್ಯಾಗ್ ಮಾಡಿ ಯುವತಿ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದಾರೆ.

    https://twitter.com/ArshaLatif/status/1619927872139055105

    ಯುವತಿ ಟ್ವಿಟ್ಟರ್ (Twitter) ನಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದೇನು..?: ನಾನು ಬೆಂಗಳೂರಿಗೆ ಭೇಟಿ ನೀಡಿದಾಗ ಆಘಾತಕಾರಿ ಅನುಭವ ಆಯ್ತು. ಜನವರಿ 29 ರಂದು ಮಧ್ಯಾಹ್ನ, ನಾನು, ನನ್ನ ಸ್ನೇಹಿತ ವೈಟ್ ಫೀಲ್ಡ್ ಬಳಿಯ ಕುಂದಲಗಳ್ಳಿ ಕೆರೆಗೆ ಭೇಟಿ ನೀಡಿದ್ದವು. ಅಲ್ಲಿ ನೆರಳಿನಲ್ಲಿ ಕುಳಿತು, ಪ್ರಕೃತಿ ವಿಕ್ಷಣೆ ಮಾಡುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಒಬ್ಬರು ನಮ್ಮ ಫೋಟೋಗಳನ್ನು ತೆಗೆಯೋದಕ್ಕೆ ಶುರುಮಾಡಿದರು. ಇಲ್ಲಿ ಕುಳಿತುಕೊಳ್ಳಲು ಅನುಮತಿ ಇಲ್ಲ, ಹೇಗೆ ಒಳಗೆ ಬಂದಿದ್ದೀರಿ, ನಡೀರಿ ಪೊಲೀಸ್ ಠಾಣೆಗೆ ಅಂತಾ ಕಿರುಕುಳ ನೀಡಲು ಪ್ರಾರಂಭಿಸಿದರು. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಬಂದು ಮಹಿಳೆಗೆ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    https://twitter.com/ArshaLatif/status/1619928241099386884

    ಕೊನೆಗೆ ನಮ್ಮ ಬಳಿ ಒಂದು ಸಾವಿರ ಹಣ ತೆಗೆದುಕೊಂಡು ಅಲ್ಲಿಂದ ಕಳುಹಿಸಿದರು. ಈ ಘಟನೆಯಿಂದ ನಮಗೆ ದಿಗ್ಭ್ರಮೆಯಾಗಿದೆ. ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‍ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕು..? ಸಾರ್ವಜನಿಕ ಕೆರೆಯೊಂದರಲ್ಲಿ `ಅನುಮತಿ ಇಲ್ಲದೆ ಕುಳಿತಿದ್ದಕ್ಕಾಗಿ’ ಇಬ್ಬರಿಗೆ ಕಿರುಕುಳ ನೀಡುವ ಹಕ್ಕು ಮತ್ತು ಅವರು ಒಂದೇ ಲಿಂಗದವರಲ್ಲ ಎಂಬ ಕಾರಣಕ್ಕಾಗಿ ಹಣವನ್ನು ಪಡೆದುಕೊಳ್ಳುವ ಹಕ್ಕು ತನಗೆ ಇದೆ ಎಂದು ಈ ಪೊಲೀಸರು ಏಕೆ ಭಾವಿಸಿದರು..? ಅವರ ನಂಬರ್ ಪ್ಲೇಟ್‍ನ ಚಿತ್ರವನ್ನು ಲಗತ್ತಿಸಲಾಗಿದೆ. @BIrCityPolice ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k