Tag: White Cake

  • ಹೊಸ ವರ್ಷಕ್ಕೆ ಮನೆಯಲ್ಲಿಯೇ ಮಾಡಿ ವೈಟ್ ಕೇಕ್

    ಹೊಸ ವರ್ಷಕ್ಕೆ ಮನೆಯಲ್ಲಿಯೇ ಮಾಡಿ ವೈಟ್ ಕೇಕ್

    ಹೊಸ ವರ್ಷದ ಆಚರಣೆಗೆ ಇನ್ನೇನು ಕೌಂಟ್‍ಡೌನ್ ಶುರುವಾಗಿದೆ. ಕೇಕ್ ಕಟ್ ಮಾಡದೇ ಎಷ್ಟೋ ಜನರಿಗೆ ನ್ಯೂ ಇಯರ್ ಕಂಪ್ಲೀಟ್ ಆಗುವುದೇ ಇಲ್ಲ. ಇನ್ನೂ ಮಕ್ಕಳಿಗಂತೂ ನ್ಯೂ ಇಯರ್ ಎಂದ ತಕ್ಷಣ ನೆನಪಾಗುವುದೇ ಕೇಕ್. ಆದ್ರೆ ಈ ಬಾರಿ ಕೊರೊನಾ ರೂಪಾಂತರಿ ಹೊಸ ವರ್ಷದ ಸಂಭ್ರಮಾಚರಣೆಗೆ ಅಡ್ಡಿಯಾಗಿದೆ.

    ಈ ಬಾರಿ ಮನೆಯಲ್ಲಿಯೇ ಕೇಕ್ ತಯಾರಿಸಿ ಮಕ್ಕಳೊಂದಿಗೆ ರುಚಿಯಾದ ಕೇಕ್ ತಿಂದು ಕಾಲ ಕಳೆಯಿರಿ. ಸುಲಭವಾಗಿ ತಯಾರಿಸುವ ಕೇಕ್ ಯಾವುದು ಅಂತೀರಾ? ವೈಟ್ ಕೇಕ್. ಇದು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿವ ಕೇಕ್ ರೆಸಿಪಿಯಾಗಿದೆ. ವೈಟ್ ಮಾಡುವ ವಿಧಾನ ಈ ಕೆಳಗೆ ನೀಡಲಾಗಿದೆ.

    ಬೇಕಾಗುವ ಸಾಮಾಗ್ರಿಗಳು
    * ವೈಟ್ ಶುಗರ್ – 1 ಕಪ್
    * ಬೆಣ್ಣೆ – 1/2 ಕಪ್
    * ಮೊಟ್ಟೆ – 2
    * ವೆನಿಲ್ಲಾ ಎಕ್ಸಟ್ರ್ಯಾಕ್ಟ್ – 2 ಟೀ ಸ್ಪೂನ್
    * ಮೈದಾ ಹಿಟ್ಟು- ಒಂದೂವರೆ ಕಪ್
    * ಬೇಕಿಂಗ್ ಪೌಡರ್ – ಒಂದು ಮುಕ್ಕಾಲು ಟೀ ಸ್ಪೂನ್
    * ಹಾಲು – ಅರ್ಧ ಕಪ್

    ಮಾಡುವ ವಿಧಾನ
    * ಸ್ಟವ್ ಮೇಲೆ ಪ್ಯಾನ್ ಅಥವಾ ಮಫಿನ್ ಪ್ಯಾನ್ ಇಟ್ಟು. ಪ್ಯಾನ್ ಸುತ್ತಲು ಗ್ರೀಸ್ ಮಾಡಿ.
    * ಒಂದು ಬಟ್ಟಲಿನಲ್ಲಿ ಸಕ್ಕರೆ ಮತ್ತು ಬೆಣ್ಣೆಯೊಂದಿಗೆ ಮೊಟ್ಟೆಯನ್ನು ಬೆರಸಿ, ನಂತರ ವೆನಿಲ್ಲಾ ಸಾರವನ್ನು ಹಾಕಿ. ಹಿಟ್ಟು ಮತ್ತು ಬೇಕಿಂಗ್ ಪೌಡರ್‍ನನ್ನು ಮಿಶ್ರಣ ಮಾಡಿ. ತಯಾರಿಸಿಕೊಂಡ ಕ್ರೀಮ್‍ನನ್ನು ಹಿಟ್ಟಿನ ಮಿಶ್ರಣದೊಂದಿಗೆ ಸೇರಿಸಿ. ಹಾಲಿನಲ್ಲಿ ಮೃದುವಾಗುವವರೆಗೂ ಬೆರಸಿ, ಒಲೆ ಮೇಲಿರುವ ಪ್ಯಾನ್‍ಗೆ ಹಾಕಿ.
    * ಒವನ್‍ನಲ್ಲಿ 30 ರಿಂದ 40 ನಿಮಿಷಗಳ ಕಾಲ ಬೇಯಿಸಿ. ಕಪ್‍ನಲ್ಲಿ ಆದ್ರೆ 20 ರಿಂದ 25 ನಿಮಿಷ ಬೇಯಿಸಿದರೆ ವೈಟ್ ಕೇಕ್ ರೆಡಿ