Tag: whisky

  • ಮಾರ್ಕೆಟ್‍ಗೆ ಎಂಟ್ರಿ ಕೊಟ್ಟ ಹೊಸ ಎಣ್ಣೆ ಬ್ರಾಂಡ್‍ಗೆ ಪೂಜೆ

    ಮಾರ್ಕೆಟ್‍ಗೆ ಎಂಟ್ರಿ ಕೊಟ್ಟ ಹೊಸ ಎಣ್ಣೆ ಬ್ರಾಂಡ್‍ಗೆ ಪೂಜೆ

    ಕೊಪ್ಪಳ: ಮಾರ್ಕೆಟ್‍ಗೆ ಎಂಟ್ರಿ ಕೊಟ್ಟಿರುವ ಹೊಸ ಎಣ್ಣೆ ಬ್ರಾಂಡ್‍ಗೆ ಪೂಜೆ ಮಾಡಿ ಬರಮಾಡಿಕೊಂಡಿರುವ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಕೊಪ್ಪಳದ ಸರ್ಕಾರಿ ಪಾನೀಯ ನಿಗಮದಲ್ಲಿ ಮ್ಯಾಕ್ಡೊನ್ ಒನ್ ಪ್ಲಾಟಿನಮ್ ನ್ಯೂ ವಿಸ್ಕಿ ಬ್ರಾಂಡ್‍ಗೆ ಈ ರೀತಿ ಪೂಜೆ ಮಾಡಲಾಗಿದೆ. ಮಾರುಕಟ್ಟೆಗೂ ಲಗ್ಗೆ ಇಡುವ ಮುನ್ನ ಕರ್ನಾಟಕ ರಾಜ್ಯ ಪಾನೀಯ ನಿಗಮ ಲಿಮಿಟೆಡ್ ಕೊಪ್ಪಳದಲ್ಲಿ ವಿಸ್ಕಿ ಬಾಕ್ಸ್ ಗಳಿಗೆ ಹೂವಿನ ಹಾರ ಹಾಕಿ ಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿದೆ.

    ಸದ್ಯ ವಿಸ್ಕಿ ಬಾಕ್ಸ್ ಗೆ ಪೂಜೆ ಮಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೇಳೆ ಸಿಕ್ಕಾಪಟ್ಟೆ ವೈರಲ್ ಆಗಿರುವ ‘ಹೌದು ಹುಲಿಯಾ’ ಸೌಂಡ್ ಇಲ್ಲಿಯೂ ಕೇಳಿಸಿತು. ಒಟ್ಟಾರೆ ಸರ್ಕಾರಿ ನಿಗಮಗಳಲ್ಲಿಯೂ ಹೊಸ ಬ್ರಾಂಡ್ ಎಣ್ಣೆಗೆ ಪೂಜೆ ಮಾಡಿರುವುದು ಇದೀಗ ಜಿಲ್ಲೆಯಲ್ಲಿ ಸಖತ್ ಹವಾ ಮಾಡುತ್ತಿದೆ.

    ಮಾಜಿ ಸಿಎಂ ಸಿದ್ದರಾಮಯ್ಯ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಅವರು ತಮ್ಮ ಭಾಷಣದ ವೇಳೆ ‘ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ ‘ಹೌದು ಹುಲಿಯಾ’ ಎಂದಿದ್ದರು. ಆಗಿನಿಂದ ಕುಡುಕನ ‘ಹೌದು ಹುಲಿಯಾ’ ಡೈಲಾಗ್ ಸಖತ್ ಟ್ರೆಂಡ್ ಆಗಿದೆ.

  • ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡ್ಕೋ ಎಂದು ರೇಗಿಸಿದ ಸ್ನೇಹಿತನನ್ನ ಕೊಂದೇಬಿಟ್ಟ

    ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡ್ಕೋ ಎಂದು ರೇಗಿಸಿದ ಸ್ನೇಹಿತನನ್ನ ಕೊಂದೇಬಿಟ್ಟ

    ಮುಂಬೈ: ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡಿಕೋ ಎಂದು ಹೇಳಿದ 25 ವರ್ಷದ ವ್ಯಕ್ತಿಯನ್ನ ಆತನ ಸ್ನೇಹಿತ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಾಯಂದರ್ ನಲ್ಲಿ ನಡೆದಿದೆ.

    ಶನಿವಾರ ರಾತ್ರಿ ಸಂದೀಪ್ ಗವಾಸ್(27) ಹಾಗೂ ಅಚ್ಯುತ್ ಚೌಬೆ(25) ಇತರೆ ಮೂವರು ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದರು. ಭಾನುವಾರ ನಸುಕಿನ ಜಾವದವರೆಗೂ ಇವರ ಮದ್ಯಪಾನ ಮುಂದುವರೆದಿತ್ತು. ಸುಮಾರು 2 ಗಂಟೆ ವೇಳೆಯಲ್ಲಿ ಗವಾಸ್ ಮತ್ತೊಂದು ಬಾರಿ ಮದ್ಯ ಕುಡಿಯಲು ಮುಂದಾಗಿದ್ದ. ಆದ್ರೆ ಮದ್ಯದ ಜೊತೆ ಮಿಕ್ಸ್ ಮಾಡಿಕೊಳ್ಳಲು ನೀರು ಖಾಲಿಯಾಗಿತ್ತು. ಗವಾಸ್ ನೀರಿಗಾಗಿ ಹುಡುಕುತ್ತಿದ್ದ ವೇಳೆ ಸ್ನೇಹಿತ ಚೌಬೆ, ಮದ್ಯದೊಂದಿಗೆ ಆತನ ಮೂತ್ರ ಮಿಕ್ಸ್ ಮಾಡಿಕೊಳ್ಳುವಂತೆ ಛೇಡಿಸಿದ್ದ. ಗುಂಪಿನಲ್ಲಿದ್ದ ಇತರರು ಕೂಡ ಚೌಬೆಯ ಜೊತೆಗೂಡಿ ಗವಾಸ್ ನನ್ನು ರೇಗಿಸಿದ್ದರು.

    ಇದರಿಂದ ಕೋಪಗೊಂಡ ಗವಾಸ್ ಮರದ ತುಂಡು ತೆಗೆದುಕೊಂಡು ಚೌಬೆ ತಲೆ ಮೇಲೆ ಹೊಡೆದಿದ್ದಾನೆ. ಪರಿಣಾಮ ಚೌಬೆಗೆ ರಕ್ತಸ್ರಾವವಾಗಲು ಶುರುವಾಗಿದೆ. ಈ ವೇಳೆ ಸ್ನೇಹಿತ ವಿವೇಕ್ ಮಧ್ಯಪ್ರವೇಶಿಸಲು ಯತ್ನಿಸಿದ್ದು, ಆತನ ಮೇಲೂ ಹಲ್ಲೆ ನಡೆದಿದೆ. ಚೌಬೆಗೆ ರಕ್ತಸ್ರಾವವಾಗೋದನ್ನ ನೋಡಿ ಗವಾಸ್ ಹಾಗೂ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾದ ಕಾರಣ ಚೌಬೆ ಸಾವನ್ನಪ್ಪಿದ್ದಾನೆ. ಮರುದಿನ ಬೆಳಗ್ಗೆ ಸ್ಥಳೀಯರು ಮೃತದೇಹವನ್ನ ನೋಡಿದ್ದಾರೆ.

    ನವ್‍ಘರ್ ಪೊಲೀಸರು ಸೋಮವಾರದಂದು ಆರೋಪಿ ಗವಾಸ್ ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.