Tag: Whip

  • ಶಾಸಕರನ್ನು ಹಿಡಿದಿಡಲು ಮತ್ತೊಂದು ವಿಪ್ ಜಾರಿ ಮಾಡಿದ ಸಿದ್ದರಾಮಯ್ಯ

    ಶಾಸಕರನ್ನು ಹಿಡಿದಿಡಲು ಮತ್ತೊಂದು ವಿಪ್ ಜಾರಿ ಮಾಡಿದ ಸಿದ್ದರಾಮಯ್ಯ

    ಬೆಂಗಳೂರು: ಪಕ್ಷದ ಶಾಸಕರನ್ನು ಹಿಡಿದಿಡಲು ಕಾಂಗ್ರೆಸ್ ನಾಯಕರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಲಾಪಕ್ಕೆ ಗೈರಾಗಿರುವ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

    ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಆದೇಶ ಹೊರಡಿಸಿ, ಪಕ್ಷದ ಎಲ್ಲ ಶಾಸಕರ ರೂಮ್‍ಗಳಿಗೆ ನಿನ್ನೆ ಸಿದ್ದರಾಮಯ್ಯ ಆದೇಶದಂತೆ ನೋಟಿಸ್ ಅಂಟಿಸಲಾಗಿತ್ತು. ಅಷ್ಟೇ ಅಲ್ಲದೇ ಪಕ್ಷದ ಸಚೇತಕ ಗಣೇಶ್ ಹುಕ್ಕೇರಿ ಅವರು ಕಲಾಪಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿದ್ದರು.

    ಅತೃಪ್ತರು ಈ ವಿಪ್‍ಗೆ ಕ್ಯಾರೇ ಅನ್ನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಈಗ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಫೆ.6 ರಿಂದ ಫೆ.15ರ ವರೆಗೆ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ಕಡ್ಡಾಯವಾಗಿ ಎಲ್ಲ ಶಾಸಕರು ಹಾಜರಿರಬೇಕೆಂದು ಕಟ್ಟು ನಿಟ್ಟಿನ ಸೂಚನೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಚೇರಿಯಿಂದ ಖುದ್ದಾಗಿ ಶಾಸಕರ ಕೈಗೆ ವಿಪ್ ನೀಡಿ ಸಿಬ್ಬಂದಿ ಸಹಿಯನ್ನು ಪಡೆದುಕೊಳ್ಳುತ್ತಿದ್ದಾರೆ.

    ಅಧಿವೇಶನದ ಮೊದಲ ದಿನವೇ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದು, ಸದನದಲ್ಲಿ ಚರ್ಚೆಗೆ ಕಾರಣವಾಯಿತು. ಈಗಲ್ ಟನ್ ರೆಸಾರ್ಟಿನಲ್ಲಿ ಹಲ್ಲೆಗೆ ಒಳಗಾಗಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್ ಕಪ್ಪು ಬಣ್ಣದ ಗ್ಲಾಸ್ ಹಾಕಿ ಕಲಾಪಕ್ಕೆ ಹಾಜರಾಗಿದ್ದಾರೆ.

    ಗೈರಾದ ಶಾಸಕರು ಯಾರು?:
    ಕಾಂಗ್ರೆಸ್‍ನ ಒಟ್ಟು 9 ಜನ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ರಮೇಶ್ ಜಾರಕಿಹೊಳಿ (ಗೋಕಾಕ್), ಉಮೇಶ್ ಜಾಧವ್ (ಚಿಂಚೋಳಿ), ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಬಿ.ಸಿ.ಪಾಟೀಲ್ (ಹಿರೇಕೆರೂರು), ಗಣೇಶ್ (ಕಂಪ್ಲಿ), ಮಹೇಶ್ ಕುಮಟಳ್ಳಿ (ಅಥಣಿ), ಸುಧಾಕರ್ (ಚಿಕ್ಕಬಳ್ಳಾಪುರ), ಎಸ್.ರಾಮಪ್ಪ (ಹರಿಹರ) ಹಾಗೂ ಸೌಮ್ಯಾ ರೆಡ್ಡಿ (ಜಯನಗರ) ಅವರು ಸದನಕ್ಕೆ ಗೈರಾಗಿದ್ದಾರೆ.

    ಜೆಡಿಎಸ್‍ನ ನಾರಾಯಣಗೌಡ (ಕೆ.ಆರ್.ಪೇಟೆ) ಪಕ್ಷೇತರ ಶಾಸಕರಾದ ಶಂಕರ್ (ರಾಣೇಬೆನ್ನೂರು) ಹಾಗೂ ನಾಗೇಶ್ (ಮುಳಬಾಗಿಲು) ಮೊದಲ ದಿನದ ಸದನಕ್ಕೆ ಹಾಜರಾಗಿಲ್ಲ. ಇತ್ತ ಬಿಜೆಪಿ 104 ಶಾಸಕರಲ್ಲಿ ನಾಲ್ವರು ಗೈರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಶಾಸಕ ಲಿಂಗಣ್ಣ (ಮಾಯಕೊಂಡ), ಅತೃಪ್ತ ಕಾಂಗ್ರೆಸ್ ಶಾಸಕರ ಕಾವಲಿಗೆ ನಿಂತಿರುವ ಅಶ್ವತ್ಥ್ ನಾರಾಯಣ (ಮಲ್ಲೇಶ್ವರಂ), ಅರವಿಂದ ಲಿಂಬಾವಳಿ (ಮಹಾದೇವಪುರ), ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಕೂಡ ಸದನಕ್ಕೆ ಹಾಜರಾಗಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಧಿವೇಶನದ ಮೊದಲ ದಿನವೇ 12 ಶಾಸಕರು ಗೈರು

    ಅಧಿವೇಶನದ ಮೊದಲ ದಿನವೇ 12 ಶಾಸಕರು ಗೈರು

    ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನವೇ ಅತೃಪ್ತ ಶಾಸಕರು ಸದನಕ್ಕೆ ಬರುವುದು ಅನುಮಾನ ಎನ್ನುವ ಸುದ್ದಿಗೆ ಪೂರಕ ಎಂಬಂತೆ 12 ಮಂದಿ ಶಾಸಕರು ಗೈರು ಹಾಜರಿ ಹಾಕಿದ್ದಾರೆ.

    ಶಾಸಕರಾದ ರಮೇಶ್ ಜಾರಕಿಹೊಳಿ(ಗೋಕಾಕ್), ಗಣೇಶ್(ಕಂಪ್ಲಿ), ನಾಗೇಂದ್ರ(ಬಳ್ಳಾರಿ), ಉಮೇಶ್ ಜಾಧವ್(ಚಿಂಚೋಳಿ), ಮಹೇಶ್ ಕುಮಟಳ್ಳಿ(ಅಥಣಿ), ಬಿ.ಸಿ. ಪಾಟೀಲ್(ಹಿರೇಕೆರೂರು), ಡಾ. ಸುಧಾಕರ್(ಚಿಕ್ಕಬಳ್ಳಾಪುರ), ನಾರಾಯಣಗೌಡ(ಕೆ.ಆರ್. ಪೇಟೆ), ರಾಮಲಿಂಗಾ ರೆಡ್ಡಿ(ಬಿಟಿಎಂ ಲೇಔಟ್), ಸೌಮ್ಯಾ ರೆಡ್ಡಿ(ಜಯನಗರ) ಶಂಕರ್(ರಾಣೇಬೆನ್ನೂರು) ನಾಗೇಶ್(ಮುಳಬಾಗಿಲು) ಸದನಕ್ಕೆ ಗೈರು ಹಾಜರಿ ಹಾಕಿದ್ದಾರೆ.

    ಬಿಜೆಪಿ 104 ಶಾಸಕರಲ್ಲಿ ಐವರು ಗೈರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಮಾಯಕೊಂಡ ಶಾಸಕ ಲಿಂಗಣ್ಣ ಗೈರಾಗಿದ್ದಾರೆ. ಕರುಣಾಕರ ರೆಡ್ಡಿ, ಅಶ್ವತ್ಥ್ ನಾರಾಯಣ, ಅರವಿಂದ ಲಿಂಬಾವಳಿ ಸಹ ಸದನಕ್ಕೆ ಗೈರು ಹಾಜರಿ ಹಾಕಿದ್ದಾರೆ.

    ರಾಜ್ಯಪಾಲರ ಭಾಷಣಕ್ಕೆ ಮುನ್ನ ವಿಧಾನಸೌಧದಲ್ಲಿ ಆರ್ ಅಶೋಕ್ ಮಾತನಾಡಿ, ನಾನು ಈಗಲೂ ಸಿಎಂ ಬಜೆಟ್ ಮಂಡಿಸೋದು ಅನುಮಾನ ಎಂದೇ ಹೇಳುತ್ತೇನೆ. ಇಂದೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

    ಇವತ್ತು ರಾಜ್ಯಪಾಲರ ಬಜೆಟ್ ವೇಳೆ ತುಂಬಾ ಶಾಸಕರು ಗೈರಾಗುತ್ತಾರೆ. ಎಷ್ಟು ಶಾಸಕರು ಗೈರಾಗುತ್ತಾರೆ ಎನ್ನುವುದರ ಮೇಲೆ ನಾವು ಏನು ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇವೆ. ನಮ್ಮ ಪ್ರತಿಭಟನೆ ಇದ್ದೆ ಇರುತ್ತದೆ ಎಂದು ಶ್ರೀರಾಮುಲು ಹೇಳಿದರು.

  • ಮಾಯಾ ಬಜಾರ್..!!

    ಮಾಯಾ ಬಜಾರ್..!!

    https://www.youtube.com/watch?v=-GRjVkmjEIw

  • ಬಿಜೆಪಿಯಿಂದ ಗದ್ದಲ – ರಾಜ್ಯಪಾಲರ ಭಾಷಣ ಅರ್ಧಕ್ಕೆ ಮೊಟಕು

    ಬಿಜೆಪಿಯಿಂದ ಗದ್ದಲ – ರಾಜ್ಯಪಾಲರ ಭಾಷಣ ಅರ್ಧಕ್ಕೆ ಮೊಟಕು

    ಬೆಂಗಳೂರು: ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ನಿರೀಕ್ಷೆಯಂತೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ್ದ ಪರಿಣಾಮ ರಾಜ್ಯಪಾಲರ ಭಾಷಣ ಅರ್ಧದಲ್ಲೇ ಮುಕ್ತಾಯಗೊಂಡಿದೆ.

    ರಾಜ್ಯಪಾಲ ವಿ.ಆರ್.ವಾಲಾ ಅವರು ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಭಾವಿಗೆ ಇಳಿದು ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿ ಪ್ರತಿಭಟನೆಗೆ ಇಳಿದರು. ಪ್ರತಿಭಟನೆ ಜೋರಾಗುತ್ತಿದ್ದಂತೆ ರಾಜ್ಯಪಾಲರು ಅರ್ಧದಲ್ಲೇ ಭಾಷಣವನ್ನು ಮೊಟಕುಗೊಳಿಸಿದರು.

    ಒಟ್ಟು 22 ಪುಟಗಳ ಭಾಷಣ ಸಿದ್ಧಗೊಂಡಿತ್ತು. ಬಿಜೆಪಿ ಪ್ರತಿಭಟನೆ ಹಿನ್ನಲೆ ಅರ್ಧಕ್ಕೆ ಭಾಷಣ ಮೊಟಕುಗೊಳಿಸಿ ರಾಜ್ಯಪಾಲ ವಿ.ಆರ್.ವಾಲಾ ತೆರಳಿದರು.

    ಈ ಸರ್ಕಾರಕ್ಕೆ ಶಾಸಕರ ಬೆಂಬಲ ಇಲ್ಲ. ಹೇಗೆ ಬಜೆಟ್ ಮಂಡನೆ ಮಾಡುತ್ತಾರೆ ನೋಡೋಣ ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಹೇಳಿದರೆ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದ್ದು ವಿಧಾನಸಭೆಗೆ ಕಪ್ಪು ಚುಕ್ಕೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಉರುಳುತ್ತಾ? ಉಳಿಯುತ್ತಾ? – ಇಂದು ವಿಧಾನಸಭೆಯಲ್ಲಿ ಏನಾಗಬಹುದು?

    ಸರ್ಕಾರ ಉರುಳುತ್ತಾ? ಉಳಿಯುತ್ತಾ? – ಇಂದು ವಿಧಾನಸಭೆಯಲ್ಲಿ ಏನಾಗಬಹುದು?

    ಬೆಂಗಳೂರು: ಕುಮಾರಣ್ಣನ ಸರ್ಜಿಕಲ್ ಸ್ಟ್ರೈಕೋ? ಯಡಿಯೂರಪ್ಪ ಅವರ ಲೋಟಸ್ ರಾಕೆಟ್ಟೋ? ಸಿದ್ದರಾಮಯ್ಯ ಅವರ ಕೈ ಕಾದಾಟವೋ? ಈ ಕುತೂಹಲ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

    ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ರಾಜ್ಯಪಾಲರ ಭಾಷಣ ನಡೆಯುವ ಸಾಧ್ಯತೆ ಹೆಚ್ಚಿದೆ.

    ಈ ವೇಳೆ ಕಾಂಗ್ರೆಸ್‍ನ ಕೆಲವು ಅತೃಪ್ತ ಶಾಸಕರು ಗೈರಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆದರೆ ಗೈರಾಗುವ ಶಾಸಕರ ಸಂಖ್ಯೆ 4, 6, 8 ಅದಕ್ಕಿಂತ ಹೆಚ್ಚೋ ಎನ್ನುವುದಕ್ಕೆ ಉತ್ತರ ಇವತ್ತು ಸಿಗಲಿದೆ. ಇನ್ನೊಂದೆಡೆ ಈ ಗೈರು ಹಾಜರಾತಿ ಮೇಲೆ ಆಟವಾಡಲು ಬಿಜೆಪಿ ಕೂಡ ಹೊಂಚು ಹಾಕಿ ಕುಳಿತ್ತಿದ್ದು, ಗುರಿ ಒಂದೇ ದಾರಿ ಬೇರೆ ಬೇರೆ ಎನ್ನುವ ತಂತ್ರಗಾರಿಕೆಗಳನ್ನು ಮಾಡಿಕೊಂಡಿದೆ.

    ಈ ಕಾರಣಕ್ಕಾಗಿಯೇ ಇವತ್ತಿನ ಜಂಟಿ ಅಧಿವೇಶನ, ಬಜೆಟ್ ಅಧಿವೇಶನ ಕುತೂಹಲ ಮೂಡಿಸಿದ್ದು, ಬಿಜೆಪಿ ನಾಯಕರ ನಡೆ ನಿಗೂಢತೆ ಉಳಿಸಿದೆ. ಅಷ್ಟೇ ಅಲ್ಲದೇ ದೋಸ್ತಿ ಸರ್ಕಾರದ ಘಟಾನುಘಟಿ ನಾಯಕರ ಪಾನ್ ಮೂವ್ ಮಾಡುವ ಬಗ್ಗೆಯೂ ಕುತೂಹಲ ಮೂಡಿಸಿದ್ದು, ಇವತ್ತು ಏನಾಗುತ್ತೆ ಕಾದುನೋಡಬೇಕಿದೆ.

    ಇವತ್ತು ವಿಧಾನಸಭೆಯಲ್ಲಿ ಏನಾಗಬಹುದು?
    ರಾಜ್ಯಪಾಲರ ಭಾಷಣಕ್ಕೆ ಮೊದಲು ಬಿಜೆಪಿ ಅನುವು ಮಾಡಿಕೊಡಬಹುದು. ಒಂದು ವೇಳೆ ಕೈ ಅತೃಪ್ತರು ಗೈರಾದ್ರೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಬಹುದು. ರಾಜ್ಯಪಾಲರ ಭಾಷಣದ ಕೆಲವು ಅಂಶಗಳಿಗೆ ವಿರೋಧ ವ್ಯಕ್ತಪಡಿಸಬಹುದು. ಮೇಲಿನ ಎರಡು ಅಂಶಗಳನ್ನ ಮುಂದಿಟ್ಟುಕೊಂಡು ಗಲಾಟೆ ಎಬ್ಬಿಸಬಹುದು. ರಾಜ್ಯಪಾಲರ ಭಾಷಣಕ್ಕೆ ತಡೆಯೊಡ್ಡದೆ, ಮುಗಿದ ಬಳಿಕ ಅತೃಪ್ತರಿಂದ ರಾಜೀನಾಮೆ ಕೊಡಿಸಬಹುದು. ಇವತ್ತು ಸುಮ್ಮನಿದ್ದು, ಫೆ.7 ರಿಂದ ಅಸಲಿ ಆಟ ಶುರು ಮಾಡುವುದು.

    ಇವತ್ತು ರಾಜ್ಯಪಾಲರು ಏನು ಮಾಡಬಹುದು..?
    ರಾಜ್ಯಪಾಲರ ಷೆಡ್ಯೂಲ್‍ನಂತೆ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ವೇಳೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಅಡ್ಡಿಪಡಿಸಿದರೆ ಮೊಟಕುಗೊಳಿಸಿ ಹೊರಡುವುದು. ಭಾಷಣವನ್ನು ಮಂಡಿಸಿ ಜಂಟಿ ಅಧಿವೇಶನದಿಂದ ತೆರಳಬಹುದು. ಬಳಿಕ ಗಲಾಟೆ ಬಗ್ಗೆ ಸಿಎಂ ಕುಮಾಸ್ವಾಮಿ ಅವರಿಂದ ವಿವರಣೆ ಪಡೆಯಬಹುದು. ಅತೃಪ್ತರು ರಾಜೀನಾಮೆ ನೀಡಿದರೆ ಆ ಬಗ್ಗೆಯೂ ವಿವರಣೆ ಪಡೆಯಬಹುದು. ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಅವರಿಂದ ವಿವರಣೆ ಪಡೆಯಬಹುದು.

    ಫೆ. 15ರವರೆಗೆ ವಿಪ್ ಜಾರಿ:
    ಕಾಂಗ್ರೆಸ್‍ನ ಎಲ್ಲಾ ಶಾಸಕರಿಗೆ ಸಿದ್ದರಾಮಯ್ಯ ವಿಪ್ ಜಾರಿ ಮಾಡಿದ್ದಾರೆ. ಇಂದಿನಿಂದ ಫೆ.15ರವರೆಗೂ ಕಡ್ಡಾಯವಾಗಿ ಅಧಿವೇಶನಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿದ್ದು, ಒಂದೇ ಒಂದು ದಿನ ಶಾಸಕರು ಗೈರಾದ್ರೆ ಅನರ್ಹತೆಗೆ ಶಿಫಾರಸು ಮಾಡಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾನೂನು ಅಸ್ತ್ರ: ಕಾನೂನು ಏನು ಹೇಳುತ್ತೆ? ಸಿಎಲ್‍ಪಿಗೆ ವಿಪ್ ಜಾರಿಗೊಳಿಸಬಹುದೇ?

    ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾನೂನು ಅಸ್ತ್ರ: ಕಾನೂನು ಏನು ಹೇಳುತ್ತೆ? ಸಿಎಲ್‍ಪಿಗೆ ವಿಪ್ ಜಾರಿಗೊಳಿಸಬಹುದೇ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಎಲ್ಲ ಹೈಡ್ರಾಮಗಳಿಗೆ ತೆರೆ ಎಳೆಯಲು ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಇಂದು ಕರೆದಿದೆ.

    ಈ ಸಭೆಯಲ್ಲಿ ಎಲ್ಲ ಶಾಸಕರು ಭಾಗವಹಿಸುವುದು ಅವಶ್ಯವಿದ್ದು, ಗೈರು ಹಾಜರಿ ಹಾಕಿದವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಶುಕ್ರವಾರ ಸಂಜೆ 3.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಲ್‍ಪಿ ಸಭೆ ನಡೆಯಲಿದ್ದು, ಕುತೂಹಲ ಹೆಚ್ಚಾಗಿದೆ.

    ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
    ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

    ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

    ವಿಪ್ ಎಂದು ಪರಿಗಣಿಸಬಹುದೆ?
    ಅಧಿವೇಶನ ನಡೆಯುವ ವೇಳೆ ಮಸೂದೆಯ ಪರ, ವಿರೋಧ ಮತ ಹಾಕಲು ಪಕ್ಷಗಳು ಶಾಸಕರಿಗೆ/ ಸಂಸದರಿಗೆ ವಿಪ್ ಜಾರಿಗೊಳಿಸುತ್ತದೆ. ಆದರೆ ಶಾಸಕಾಂಗ ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿದರೆ ಅದನ್ನು ವಿಪ್ ಎಂದು ಪ್ರಶ್ನಿಸಬಹುದೇ ಎನ್ನುವ ಪ್ರಶ್ನೆ ಎದ್ದಿದೆ.

    1994ರ ರವಿನಾಯಕ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪಕ್ಷಾಂತರ, ವಿಪ್ ಉಲ್ಲಂಘನೆ ಮಾತ್ರವಲ್ಲದೇ ಶಾಸಕರ ನಡವಳಿಕೆಯನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಂತಹ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಕ್ರಮ ಕೈಗೊಂಡ ಬಳಿಕ ಶಾಸಕರ ನಡೆ ಪಕ್ಷ ವಿರೋಧಿಯಾಗಿತ್ತು ಎಂದು ಹೇಳಲು ಪಕ್ಷ ಸಾಕ್ಷಾಧಾರವನ್ನು ನೀಡಿ ಆರೋಪವನ್ನು ಸಾಬೀತುಪಡಿಸಬೇಕಾಗುತ್ತದೆ.

    ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಶಾಸಕರು ಹಾಜರಾಗಲಿಲ್ಲ. ಈ ಕಾರಣಕ್ಕೆ ಇದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ ಎನ್ನುವ ಅಂಶವನ್ನು ಮುಂದಿಟ್ಟು ಅತೃಪ್ತರ ವಿರುದ್ಧ ಕ್ರಮ ಜರುಗಿಸಬಹುದು ವಿಶ್ವಾಸದಲ್ಲಿ  ಕಾಂಗ್ರೆಸ್ ನಾಯಕರು ಇದ್ದಾರೆ ಎನ್ನಲಾಗಿದೆ.